Connect with us

  LATEST NEWS

  ಪಾರ್ಲಿಮೆಂಟ್‌ನಲ್ಲಿ ಸ್ಮೋಕ್‌ ಬಾಂ*ಬ್ ಪ್ರಕರಣ: ಆರೋಪಿಗಳಿಗೆ ಖಲಿಸ್ಥಾನ್ ನಂಟು..!?

  Published

  on

  ನವದೆಹಲಿ : 2023 ರ ಡಿಸೆಂಬರ್ 13 ರಂದು ಪಾರ್ಲಿಮೆಂಟ್‌ ಅಧಿವೇಶನಕ್ಕೆ ನುಗ್ಗಿ ಆತಂಕ ಸೃಷ್ಟಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್‌ ಶೀಟ್ ಸಲ್ಲಿಸಿದ್ದಾರೆ. ಪಾರ್ಲಿಮೆಂಟ್ ಒಳಕ್ಕೆ ನುಗ್ಗಿದ್ದ ಇಬ್ಬರು ಯುವಕರು ಘೋಷಣೆ ಕೂಗಿ ಕೈನಲ್ಲಿ ಸ್ಮೋಕ್‌ ಬಾಂ*ಬ್‌ ಹಿಡಿದು ಆತಂಕ ಸೃಷ್ಟಿ ಮಾಡಿದ್ದರು.


  ಇದೇ ವೇಳೆ ಪಾರ್ಲಿಮೆಂಟ್ ಹೊರಗೆ ಕೂಡ ಒಂದು ಯುವತಿ ಹಾಗೂ ಮೂವರು ಯುವಕರು ಇದೇ ರೀತಿ ಪ್ರತಿಭಟನೆ ನಡೆಸಿದ್ದರು. ಇದರಲ್ಲಿ ಮೈಸೂರು ಮೂಲದ ಮನೋರಂಜನ್ ಎಂಬ ಯುವಕನೂ ಭಾಗಿಯಾಗಿದ್ದು, ಸಂಸದ ಪ್ರತಾಪ್ ಸಿಂಹ ಅವರ ಪಿಎ ಅವರಿಂದ ಪಾಸ್ ಪಡೆದುಕೊಂಡಿದ್ದ.

  ಪನ್ನುನ್ ನೀಡಿದ್ದ ಹೇಳಿಕ ಹಂಚಿಕೊಂಡಿದ್ದ ಆರೋಪಿಗಳು :

  ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನರ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್‌ ಶೀಟ್ ಸಲ್ಲಿಸಲಾಗಿದೆ. ಚಾರ್ಜ್‌ ಶೀಟ್‌ನಲ್ಲಿ ಈ ಆರೋಪಿಗಳಿಗೆ ಖಲಿಸ್ಥಾನ ಹೋರಾಟಗಾರರ ಜೊತೆ ಸಂಪರ್ಕ ಇರುವುದಾಗಿ ಅನುಮಾನ ವ್ಯಕ್ತಪಡಿಸಲಾಗಿದೆ. ಖಾಲಿಸ್ತಾನ ಹೋರಾಟದ ನಾಯಕ ಗುರುಪತ್‌ವಂತ್ ಸಿಂಗ್ ಪನ್ನುನ್ ನೀಡಿದ್ದ ಹೇಳಿಕೆಯೊಂದನ್ನು ಆರೋಪಿಗಳು ಹಂಚಿಕೊಂಡಿದ್ದೇ ಈ ಅನುಮಾನಕ್ಕೆ ಕಾರಣವಾಗಿದೆ.

  “ಭಾರತದ ಪಾರ್ಲಿಮೆಂಟ್‌ ಅಲ್ಲಾಡಿಸಲಾಗುವುದು” ಎಂದು ಹೇಳಿಕೆ ನೀಡಿದ್ದ ಗುರುಪತ್‌ವಂತ್ ಸಿಂಗ್ ಪನ್ನುನ್ ಹೇಳಿಕೆಯನ್ನು ಆರೋಪಿಗಳು ಹಂಚಿಕೊಂಡಿರುವುದು ತನಿಖೆಯಿಂದ ಗೊತ್ತಾಗಿದೆ.

  ಪ್ರಮುಖ ಆರೋಪಿಯಾಗಿರುವ ಮೈಸೂರಿನ ಮನೋರಂಜನ್ ಮೊಬೈಲ್‌ನಲ್ಲಿ ಗುರುಪತ್‌ವಂತ್ ಸಿಂಗ್ ಪನ್ನುನ್ ಹೇಳಿಕೆಯ ವಿಡಿಯೋ ಲಿಂಕ್ ಪೊಲೀಸರಿಗೆ ಸಿಕ್ಕಿದೆ. ಈ ಬಗ್ಗೆ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿರುವ ದೆಹಲಿ ಪೊಲೀಸರು, ಈ ಪ್ರಕರಣದಲ್ಲಿ ಆರೋಪಿಯ ಮೊಬೈಲ್‌ನಲ್ಲಿ ಗುರುಪತ್‌ವಂತ್ ಸಿಂಗ್ ಪನ್ನುನ್ ಹೇಳಿಕೆಯ ವಿಡಿಯೋ ಲಿಂಕ್ ಸಿಕ್ಕಿರುವುದನ್ನು ಚಾರ್ಜ್‌ ಶೀಟ್‌ನಲ್ಲಿ ನಮೂದಿಸಲಾಗಿದೆ.
  ಈ ವೀಡಿಯೋವನ್ನು ಸಾಕಷ್ಟು ಜನರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಆರೋಪಿಗಳಿಗೂ ಈ ಹೇಳಿಕೆಗೂ ಸಂಬಂಧ ಇರುವ ಬಗ್ಗೆ ಇನ್ನೂ ಖಚಿತವಾಗಿಲ್ಲ. ಈ ಬಗ್ಗೆ ಇನ್ನಷ್ಟು ವಿಚಾರಣೆ ನಡೆಸಿ ಸಪ್ಲಿಮೆಂಟರಿ ಚಾರ್ಜ್‌ ಶೀಟ್‌ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.

  ಚಾರ್ಜ್‌ ಶೀಟ್‌ನಲ್ಲಿ ಉಲ್ಲೇಖ ಇರುವ ಪ್ರಮುಖ ವಿಚಾರ :

  ಚಾರ್ಜ್‌ ಶೀಟ್‌ನಲ್ಲಿ ಮೈಸೂರಿನ ಮಾಜಿ ಸಂಸದ ಪ್ರತಾಪ್ ಸಿಂಹ ಹೆಸರೂ ಕೂಡಾ ಉಲ್ಲೇಖಿಸಲಾಗಿದ್ದು, ಪಾಸ್ ಅವರ ಹೆಸರಿನಲ್ಲಿ ಪಡೆದುಕೊಂಡಿರುವುದನ್ನು ದೆಹಲಿ ಪೊಲೀಸರು ಖಚಿತ ಪಡಿಸಿದ್ದಾರೆ.

  ಪಾರ್ಲಿಮೆಂಟ್ ಒಳಗೆ ನುಸುಳಿದ್ದ ಸಾಗರ್ ಶರ್ಮಾ ಹಾಗೂ ಮನೋರಂಜನ್ ಅವರು ಧರಿಸಿದ್ದ ಶೂ ಎರಡು ಲೇಯರ್‌ನ ಸೋಲ್ ಹೊಂದಿದ್ದು, ಅದರ ನಡುವೆ ಸ್ಮೋಕ್ ಬಾಂಬ್ ಇರಿಸಿದ್ದರು. ಹೀಗಾಗಿ ಭದ್ರತಾ ಸಿಬ್ಬಂದಿಯ ಗಮನಕ್ಕೆ ಬಾರದೆ ಅವರ ಅಮಾನತು ಆಗಿತ್ತು.

  ಇದನ್ನೂ ಓದಿ : ಬಿಳಿ ಅಕ್ಕಿ vs ಕೆಂಪಕ್ಕಿ: ನಿಮ್ಮ ಆರೋಗ್ಯಕ್ಕೆ ಯಾವುದು ಒಳ್ಳೆಯದು

  ಸಾಗರ್ ಶರ್ಮಾ ಹಾಗೂ ಮನೋರಂಜನ್‌ ಇಬ್ಬರೂ ಕಳೆದ ಐದು ವರ್ಷಗಳಿಂದ ಒಬ್ಬರಿಗೊಬ್ಬರು ಪರಿಚಿತರಾಗಿದ್ದಾರೆ. ಉಳಿದವರು ಕೇವಲ ಒಂದು ವರ್ಷದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪರಿಚಿತರಾಗಿದ್ದಾರೆ. ಆರೋಪಿಗಳ ಲ್ಯಾಪ್‌ಟಾಪ್ ಮೊಬೈಲ್‌ ನ ಎಫ್‌ಎಸ್‌ಎಲ್‌ ವರದಿ ಬಂದಿದ್ದು, ಅದನ್ನೂ ಸಪ್ಲಿಮೆಂಟರಿ ಚಾರ್ಜ್‌ ಶೀಟ್‌ನಲ್ಲಿ ನಮೂದಿಸಲಾಗುವುದು ಎಂದು ಹೇಳಲಾಗಿದೆ.

  ಅರೋಪಿಗಳಾದ ಮನೋರಂಜನ್ ಹಾಗೂ ಯುವತಿ ನೀಲಂ ಪದವೀಧರರಾಗಿದ್ದು ಮಿಡ್ಲ್ ಕ್ಲಾಸ್ ಕುಟುಂಬದಿಂದ ಬಂದವರಾಗಿದ್ದಾರೆ. ಉಳಿದ ನಾಲ್ವರು ಆರೋಪಿಗಳು ಹತ್ತನೆ ತರಗತಿ ಪಾಸ್ ಆದವರಾಗಿದ್ದು, ಬಿಪಿಎಲ್ ಕುಟುಂಬದವರು ಎಂದು ಚಾರ್ಜ್‌ ಶೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

  LATEST NEWS

  ಮುಲ್ಕಿ ಸೀಮೆಯ ಪುಣ್ಯ ಕ್ಷೇತ್ರಕ್ಕೆ ಕೆ.ಎಲ್‌.ರಾಹುಲ್ ಭೇಟಿ..!

  Published

  on

  ಮಂಗಳೂರು : ಕೆಲ ದಿನಗಳ ಹಿಂದೆ ಟಿ20 ವಿಶ್ವಕಪ್‌ ವಿಜೇತ ತಂಡ ಸ್ಟಾರ್ ಆಟಗಾರ ಸೂರ್ಯಕುಮಾರ್ ಯಾದವ್ ಕಾಪು ಮಾರಿಯಮ್ಮ ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಇದೀಗ ಭಾರತೀಯ ಕ್ರಿಕೇಟ್ ತಂಡದ ಮತ್ತೊರ್ವ ಸ್ಟಾರ್ ಆಟಗಾರ ಕೆ.ಎಲ್‌.ರಾಹುಲ್ ಮುಲ್ಕಿಯ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ.

  ಮೂಲತಃ ಮಂಗಳೂರಿನವರೇ ಆಗಿರುವ ಕೆ.ಎಲ್‌.ರಾಹುಲ್ ಭಾರತ ಕ್ರಿಕೇಟ್ ತಂಡದ ಹೆಮ್ಮೆಯ ಆಟಗಾರ. ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರ ಪುತ್ರಿ ಅತಿಯಾ ಶೆಟ್ಟಿಯನ್ನು ವಿವಾಹವಾದ ಬಳಿಕದ ಮುಲ್ಕಿಗೆ ರಾಹುಲ್‌ ಅವರ ಮೊದಲ ಭೇಟಿಯಾಗಿದೆ. ಮುಲ್ಕಿ ಸೀಮೆಯ ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಆಗಮಿಸಿದ ರಾಹುಲ್ ದೇವರ ಆಶೀರ್ವಾದ ಪಡೆದುಕೊಂಡಿದ್ದಾರೆ. ಕ್ಷೇತ್ರದ ಅರ್ಚಕ ಗೋಪಾಲಕೃಷ್ಣ ಉಪಾಧ್ಯಾಯ ಅವರು ದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ರಾಹುಲ್‌ಗೆ ಪ್ರಸಾದ ನೀಡಿದ್ದಾರೆ.


  ಬಪ್ಪನಾಡು ಕ್ಷೇತ್ರದ ಬಳಿಕ ಮುಲ್ಕಿ ಸೀಮೆಯಲ್ಲೇ ಇರುವ ಮತ್ತೊಂದು ಪುಣ್ಯ ಕ್ಷೇತ್ರ ಶಿಮಂತೂರು ಶ್ರೀ ಆದಿ ಜನಾರ್ಧನ ಕ್ಷೇತ್ರ ಹಾಘೂ ಕಕ್ವಗುತ್ತು ಮೂಲ ನಾಗನ ಕ್ಷೇತ್ರಕ್ಕೆ ಕೆ.ಎಲ್‌ . ರಾಹುಲ್ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.
  ಕೆ.ಎಲ್.ರಾಹುಲ್‌ ಆಗಮಿಸಿರುವ ವಿಚಾರ ತಿಳಿದು ನೂರಾರು ಜನ ಅಭಿಮಾನಿಗಳು ಕ್ಷೇತ್ರಕ್ಕೆ ಆಗಮಿಸಿದ್ದಾರೆ. ಕ್ಷೇತ್ರದಲ್ಲಿ ಅವರ ಜೊತೆ ಸೆಲ್ಫಿಗಾಗಿ ಮುಗಿಬಿದ್ದು, ಅಟೋಗ್ರಾಫ್‌ ಪಡೆದುಕೊಂಡಿದ್ದಾರೆ. ಅಭಿಮಾನಿಗಳ ಜೊತೆ ತುಳುಭಾಷೆಯಲ್ಲೇ ಮಾತನಾಡಿದ ಕೆ.ಎಲ್‌. ರಾಹುಲ್‌ ಅಭಿಮಾನಿಗಳ ಮನಗೆದ್ದಿದ್ದಾರೆ.

  Continue Reading

  DAKSHINA KANNADA

  ಗಾಳಿಗೆ ಹಾರಿದ ಶಾಲೆಯ ಹೆಂಚು..! ರಜಾ ದಿನವಾದ ಕಾರಣ ತಪ್ಪಿದ ಅನಾಹುತ..!

  Published

  on

  ಮಂಗಳೂರು ( ಕಡಬ ) : ಕಡಬ ತಾಲೂಕಿನಲ್ಲಿ ಭಾನುವಾರ ಮದ್ಯಾಹ್ನ ಜೋರಾಗಿ ಬೀಸಿದ ಗಾಳಿಗೆ ಶಾಲೆಯೊಂದರ ಹೆಂಚುಗಳು ಹಾರಿ ಹೋದ ಘಟನೆ ನಡೆದಿದೆ. ಕಡಬ ತಾಲೂಕಿನ ಬಲ್ಯ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ರಜಾ ದಿನವಾದ ಕಾರಣ ಸಂಭವನೀಯ ಅನಾಹುತ ತಪ್ಪಿದಂತಾಗಿದೆ.


  ಭಾನುವಾರ ಜೋರಾದ ಗಾಳಿಯ ಜೊತೆ ಮಳೆ ಬರುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಅದರಂತೆ ಮದ್ಯಾಹ್ನದ ವೇಳೆಗೆ ಕಡಬ ತಾಲೂಕಿನ ಬಲ್ಯ ಗ್ರಾಮದಲ್ಲಿ ಜೋರಾದ ಗಾಳಿ ಬೀಸಿದೆ. ಇದರ ಪರಿಣಾಮವಾಗಿ ಬಲ್ಯ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹೆಂಚುಗಳು ಹಾರಿ ಹೋಗಿದೆ. ಒಂದಷ್ಟು ಹೆಂಚುಗಳು ಶಾಲೆಯ ಹೊರಾಂಗಣದಲ್ಲಿ ಬಿದ್ದಿದ್ದರೆ, ಇನ್ನೂ ಕೆಲವು ಹೆಂಚುಗಳು ಶಾಲೆಯ ಕೊಠಡಿಯ ಒಳಗೆ ಬಿದ್ದಿದೆ. ಶಾಲೆಗೆ ಬಹುತೇಕ ಎಲ್ಲಾ ಕೊಠಡಿಯ ಹೆಂಚುಗಳು ಗಾಳಿಗೆ ಹಾರಿ ಹೋಗಿದೆ. ಅದೃಷ್ಟವಶಾತ್ ಭಾನುವಾರವಾದ ಕಾರಣ ಶಾಲೆಯಲ್ಲಿ ಮಕ್ಕಳು ಇರದ ಕಾರಣ ಯಾವುದೇ ಅನಾಹುತ ನಡೆದಿಲ್ಲ.


  ಬೀಸಿದ ಗಾಳಿಗೆ ಶಾಲೆಯ ಹೆಂಚಿನ ಜೊತೆಗೆ ಗ್ರಾಮದ ಕೃಷಿಕರ ಅಡಿಕೆ ತೋಟಕ್ಕೂ ಹಾನಿಯಾಗಿದೆ. ಹಲವು ಅಡಿಕೆ ಮರಗಳು ತುಂಡಾಗಿ ಬಿದ್ದಿದ್ದು, ಕೆಲವೆಡೆ ವಿದ್ಯುತ್ ತಂತಿಯ ಮೇಲೆ ಬಿದ್ದ ಕಾರಣ ವಿದ್ಯುತ್ ಕಂಬಕ್ಕೂ ಕೂಡಾ ಹಾನಿ ಸಂಭವಿಸಿದೆ.
  ಜುಲೈ 15 ಮತ್ತು 16 ರಂದು ಕೂಡಾ ಜೋರಾದ ಗಾಳಿಯ ಜೊತೆ ಮಳೆ ಸುರಿಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

  Continue Reading

  DAKSHINA KANNADA

  ನಾಳೆ, ನಾಡಿದ್ದು ದ.ಕ, ಉಡುಪಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ

  Published

  on

  ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಭಾರತೀಯ ಹವಾಮಾನ ಇಲಾಖೆಯು ಇಂದು, ನಾಳೆ ಮತ್ತು ನಾಡಿದ್ದು(ಜು.15,16,17) ಈ ಮೂರು ಜಿಲ್ಲೆಗಳಿಗೆ ರೆಡ್‌ ಅಲರ್ಟ್ ಘೋಷಿಸಿದೆ.

  ಬಂಟ್ವಾಳದ ನೇತ್ರಾವತಿ ನದಿಯಲ್ಲಿ ನೀರಿನ‌ ಮಟ್ಟ ಹೆಚ್ಚಳ

  ಜುಲೈ 17 ರಿಂದ 19 ರ ವರೆಗೆ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾದ್ಯಂತ ಇಂದು ದಿನವಿಡೀ ಉತ್ತಮ ಮಳೆ ಬಂದಿದೆ. ಮಳೆಯ ಜತೆಗೆ ಬಲವಾದ ಗಾಳಿಯೂ ಬೀಸುತ್ತಿದೆ. ಸಮುದ್ರದಲ್ಲಿ ಅಬ್ಬರದ ಅಲೆಗಳು ಕಂಡು ಬರುತ್ತಿವೆ. ಗಾಳಿಯ ರಭಸಕ್ಕೆ ಅಲ್ಲಲ್ಲಿ ಮರ ಬಿದ್ದು ಸಂಚಾರ ಅಸ್ತವ್ಯಸ್ತ, ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಇಂದು ಬೆಳಗ್ಗೆ ಬೀಸಿದ ಬಲವಾದ ಗಾಳಿಗೆ ಉಳ್ಳಾಲ ತಾಲೂಕಿನ ಕೋಟೆಕಾರು ಬಳಿ ಬೀರಿ- ಪ್ರವಾಸಿ ಬಂಗ್ಲೆ ಕ್ರಾಸ್‌ ಸರ್ವೀಸ್‌ ರಸ್ತೆಯಲ್ಲಿ ಭಾರೀ ಗಾತ್ರದ ಮೇ ಫ್ಲವರ್‌ ಮರವೊಂದು ಉರುಳಿ ಬಿದ್ದ ಘಟನೆ ಸಂಭವಿಸಿದೆ. ಇದರಿಂದಾಗಿ ಈ ರಸ್ತೆಯಲ್ಲಿ ಕೆಲವು ಗಂಟೆಗಳ ಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ರಸ್ತೆ ಬದಿ ನಿಲ್ಲಿಸಿದ್ದ ಎರಡು ಲಾರಿಗಳ ಮಧ್ಯೆಮರ ಬಿದ್ದ ಕಾರಣ ಅಪಾಯ ತಪ್ಪಿದೆ. ಅಲ್ಲದೆ ಇಂದು ಭಾನುವಾರ ಆಗಿದ್ದ ಕಾರಣ ಈ ರಸ್ತೆಯಲ್ಲಿ ವಾಹನ ಮತ್ತು ಜನ ಸಂಚಾರ ಕಡಿಮೆ ಇತ್ತು.

  Continue Reading

  LATEST NEWS

  Trending