Connect with us

    LATEST NEWS

    ರಾಧಿಕಾ ಮರ್ಚೆಂಟ್ ಗೌನ್ ನಲ್ಲಿತ್ತು ಅನಂತ್ ಅಂಬಾನಿ ಲವ್ ಲೆಟರ್; ಹುಬ್ಬೇರಿಸಿದ ನೆಟ್ಟಿಗರು!

    Published

    on

    ಮಂಗಳೂರು/ ಮುಂಬೈ : ಉದ್ಯಮಿ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮದುವೆ ಸುದ್ದಿ ಇಂದು ನಿನ್ನೆಯದಲ್ಲ…ಮದುವೆ ಫಿಕ್ಸ್ ಆದಾಗಿನಿಂದಲೂ ಒಂದಿಲ್ಲೊಂದು ಸುದ್ದಿ ಹರಿದಾಡುತ್ತಲೇ ಇದೆ. ಇತ್ತೀಚೆಗಷ್ಟೇ ಅವರ ಅವರ 2ನೇ ಪ್ರೀ ವೆಡ್ಡಿಂಗ್ ಸಂಭ್ರಮ ಅದ್ಧೂರಿಯಾಗಿ ನಡೆದಿತ್ತು. ಇದರಲ್ಲಿ ಆಪ್ತರು, ಗಣ್ಯರು, ಸೆಲೆಬ್ರಿಟಿಗಳು ಭಾಗಿಯಾಗಿದ್ದರು.


    ಈ ಸಮಾರಂಭದಲ್ಲಿ ರಾಧಿಕಾ ಮರ್ಚೆಂಟ್ ಒಂದು ವಿಶೇಷವಾದ ಗೌನ್​​ ತೊಟ್ಟಿದ್ದರು. ಸಾಮಾನ್ಯವಾಗಿ ಸೆಲೆಬ್ರಿಟಿ ತೊಡುವ ಉಡುಗೆ ಬಗ್ಗೆ ಚರ್ಚೆ ಆಗುತ್ತೆ ಬಿಡಿ. ಅದರ ಬೆಲೆ ಬಗ್ಗೆಯಂತೂ ಹೇಳೋದೇ ಬೇಡ. ಅಷ್ಟು ಬೆಲೆ, ಇಷ್ಟು ಬೆಲೆ ಎಂದು ಹುಬ್ಬೇರಿಸುವಂತೆ ಮಾಡುತ್ತೆ. ಇಲ್ಲೂ ರಾಧಿಕಾ ತೊಟ್ಟಿದ್ದ ಗೌನ್ ಗಮನ ಸೆಳೆದಿದೆ. ಹಾಗಂತ ಇಲ್ಲಿ ಕೋಟಿ ಬೆಲೆ ಬಗ್ಗೆ ಚರ್ಚೆ ಆಗ್ತಿಲ್ಲ. ಬದಲಿಗೆ ಇಲ್ಲಿ ಅದರಲ್ಲಿದ್ದ ಪ್ರಿಂಟ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.

    ಗೌನ್ ನಲ್ಲಿದ್ದ ಪ್ರಿಂಟ್ ಏನು?


    ಬಾಲ್ಯದ ಸ್ನೇಹಿತರಾಗಿದ್ದ ಅನಂತ್​ ಹಾಗೂ ರಾಧಿಕಾ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದಾರೆ. ಅನಂತ್ ಅಂಬಾನಿ ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸಿದ್ದರು, ಈ ಎಲ್ಲಾ ಸಂದರ್ಭದಲ್ಲೂ ರಾಧಿಕಾ ಜೊತೆಯಾಗಿದ್ದರು. ಇದೀಗ ರಾಧಿಕಾ ತಮ್ಮ 2ನೇ ಪ್ರೀ ವೆಡ್ಡಿಂಗ್ ಕಾರ್ಯಕ್ರಮದಲ್ಲಿ ಅವರಿಬ್ಬರ ನಡುವಿನ ಪ್ರೇಮದ ಸಾಕ್ಷಿಯನ್ನು ಬಿತ್ತರಿಸಿದ್ದಾರೆ. ಹೌದು, ಅವರು ಅನಂತ್ ಅಂಬಾನಿ ನೀಡಿದ್ದ ಲವ್‌ ಲೆಟರನ್ನೇ ಪ್ರಿಂಟ್​​ ಮಾಡಿಸಿದ ಗೌನ್‌ ತೊಟ್ಟು ಮಿಂಚಿದ್ದಾರೆ.


    ಸದ್ಯ ಇವರಿಬ್ಬರ ಜೋಡಿಯ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅನಂತ್ ಹಾಗೂ ರಾಧಿಕಾ ಬಾಲ್ಯದ ಸ್ನೇಹಿತರು. ಇವರಿಬ್ಬರ ಸಂಬಂಧದ ಬಗ್ಗೆ 2018 ರಲ್ಲಿ ಬೆಳಕಿಗೆ ಬಂದಿತ್ತು. ಅಂಬಾನಿ ಕುಟುಂಬದ ಕಾರ್ಯಕ್ರಮದಲ್ಲಿ ರಾಧಿಕಾ ಮರ್ಚೆಂಟ್ ಭಾಗಿಯಾಗುತ್ತಿದ್ದರು.

    ಇದನ್ನೂ ಓದಿ : ದರ್ಶನ್‌ ಕೊಲೆ ಪ್ರಕರಣ ಬೆನ್ನಲ್ಲೇ ‘ಯಶ್’ ವೀಡಿಯೋ ವೈರಲ್..! ಅಭಿಮಾನಿಗಳಿಗೆ ಯಶ್ ಹೇಳಿದ್ದೇನು?

    ಮದುವೆ ಯಾವಾಗ?

    2023ರ ಜನವರಿ 19 ರಂದು ಅನಂತ್​​ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್​​ ಮುಂಬೈನಲ್ಲಿ ನಿಶ್ಚಿತಾರ್ಥ . ಈ ಜೋಡಿಯ ಅದ್ಧೂರಿ ವಿವಾಹ ಕಾರ್ಯಕ್ರಮವು ಜುಲೈ 12 ರಂದು ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ (ಬಿಕೆಸಿ) ಜಿಯೋ ವರ್ಲ್ಡ್‌ ಕನ್ವೆನ್ಷನ್‌ ಸೆಂಟರ್‌ನಲ್ಲಿ ಹಿಂದೂ ಸಂಪ್ರದಾಯದಂತೆ ನಡೆಯಲಿದೆ ಎಂದು ತಿಳಿದು ಬಂದಿದೆ.

    LATEST NEWS

    ಮುಲ್ಕಿ ಸೀಮೆಯ ಪುಣ್ಯ ಕ್ಷೇತ್ರಕ್ಕೆ ಕೆ.ಎಲ್‌.ರಾಹುಲ್ ಭೇಟಿ..!

    Published

    on

    ಮಂಗಳೂರು : ಕೆಲ ದಿನಗಳ ಹಿಂದೆ ಟಿ20 ವಿಶ್ವಕಪ್‌ ವಿಜೇತ ತಂಡ ಸ್ಟಾರ್ ಆಟಗಾರ ಸೂರ್ಯಕುಮಾರ್ ಯಾದವ್ ಕಾಪು ಮಾರಿಯಮ್ಮ ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಇದೀಗ ಭಾರತೀಯ ಕ್ರಿಕೇಟ್ ತಂಡದ ಮತ್ತೊರ್ವ ಸ್ಟಾರ್ ಆಟಗಾರ ಕೆ.ಎಲ್‌.ರಾಹುಲ್ ಮುಲ್ಕಿಯ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ.

    ಮೂಲತಃ ಮಂಗಳೂರಿನವರೇ ಆಗಿರುವ ಕೆ.ಎಲ್‌.ರಾಹುಲ್ ಭಾರತ ಕ್ರಿಕೇಟ್ ತಂಡದ ಹೆಮ್ಮೆಯ ಆಟಗಾರ. ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರ ಪುತ್ರಿ ಅತಿಯಾ ಶೆಟ್ಟಿಯನ್ನು ವಿವಾಹವಾದ ಬಳಿಕದ ಮುಲ್ಕಿಗೆ ರಾಹುಲ್‌ ಅವರ ಮೊದಲ ಭೇಟಿಯಾಗಿದೆ. ಮುಲ್ಕಿ ಸೀಮೆಯ ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಆಗಮಿಸಿದ ರಾಹುಲ್ ದೇವರ ಆಶೀರ್ವಾದ ಪಡೆದುಕೊಂಡಿದ್ದಾರೆ. ಕ್ಷೇತ್ರದ ಅರ್ಚಕ ಗೋಪಾಲಕೃಷ್ಣ ಉಪಾಧ್ಯಾಯ ಅವರು ದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ರಾಹುಲ್‌ಗೆ ಪ್ರಸಾದ ನೀಡಿದ್ದಾರೆ.


    ಬಪ್ಪನಾಡು ಕ್ಷೇತ್ರದ ಬಳಿಕ ಮುಲ್ಕಿ ಸೀಮೆಯಲ್ಲೇ ಇರುವ ಮತ್ತೊಂದು ಪುಣ್ಯ ಕ್ಷೇತ್ರ ಶಿಮಂತೂರು ಶ್ರೀ ಆದಿ ಜನಾರ್ಧನ ಕ್ಷೇತ್ರ ಹಾಘೂ ಕಕ್ವಗುತ್ತು ಮೂಲ ನಾಗನ ಕ್ಷೇತ್ರಕ್ಕೆ ಕೆ.ಎಲ್‌ . ರಾಹುಲ್ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.
    ಕೆ.ಎಲ್.ರಾಹುಲ್‌ ಆಗಮಿಸಿರುವ ವಿಚಾರ ತಿಳಿದು ನೂರಾರು ಜನ ಅಭಿಮಾನಿಗಳು ಕ್ಷೇತ್ರಕ್ಕೆ ಆಗಮಿಸಿದ್ದಾರೆ. ಕ್ಷೇತ್ರದಲ್ಲಿ ಅವರ ಜೊತೆ ಸೆಲ್ಫಿಗಾಗಿ ಮುಗಿಬಿದ್ದು, ಅಟೋಗ್ರಾಫ್‌ ಪಡೆದುಕೊಂಡಿದ್ದಾರೆ. ಅಭಿಮಾನಿಗಳ ಜೊತೆ ತುಳುಭಾಷೆಯಲ್ಲೇ ಮಾತನಾಡಿದ ಕೆ.ಎಲ್‌. ರಾಹುಲ್‌ ಅಭಿಮಾನಿಗಳ ಮನಗೆದ್ದಿದ್ದಾರೆ.

    Continue Reading

    DAKSHINA KANNADA

    ಗಾಳಿಗೆ ಹಾರಿದ ಶಾಲೆಯ ಹೆಂಚು..! ರಜಾ ದಿನವಾದ ಕಾರಣ ತಪ್ಪಿದ ಅನಾಹುತ..!

    Published

    on

    ಮಂಗಳೂರು ( ಕಡಬ ) : ಕಡಬ ತಾಲೂಕಿನಲ್ಲಿ ಭಾನುವಾರ ಮದ್ಯಾಹ್ನ ಜೋರಾಗಿ ಬೀಸಿದ ಗಾಳಿಗೆ ಶಾಲೆಯೊಂದರ ಹೆಂಚುಗಳು ಹಾರಿ ಹೋದ ಘಟನೆ ನಡೆದಿದೆ. ಕಡಬ ತಾಲೂಕಿನ ಬಲ್ಯ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ರಜಾ ದಿನವಾದ ಕಾರಣ ಸಂಭವನೀಯ ಅನಾಹುತ ತಪ್ಪಿದಂತಾಗಿದೆ.


    ಭಾನುವಾರ ಜೋರಾದ ಗಾಳಿಯ ಜೊತೆ ಮಳೆ ಬರುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಅದರಂತೆ ಮದ್ಯಾಹ್ನದ ವೇಳೆಗೆ ಕಡಬ ತಾಲೂಕಿನ ಬಲ್ಯ ಗ್ರಾಮದಲ್ಲಿ ಜೋರಾದ ಗಾಳಿ ಬೀಸಿದೆ. ಇದರ ಪರಿಣಾಮವಾಗಿ ಬಲ್ಯ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹೆಂಚುಗಳು ಹಾರಿ ಹೋಗಿದೆ. ಒಂದಷ್ಟು ಹೆಂಚುಗಳು ಶಾಲೆಯ ಹೊರಾಂಗಣದಲ್ಲಿ ಬಿದ್ದಿದ್ದರೆ, ಇನ್ನೂ ಕೆಲವು ಹೆಂಚುಗಳು ಶಾಲೆಯ ಕೊಠಡಿಯ ಒಳಗೆ ಬಿದ್ದಿದೆ. ಶಾಲೆಗೆ ಬಹುತೇಕ ಎಲ್ಲಾ ಕೊಠಡಿಯ ಹೆಂಚುಗಳು ಗಾಳಿಗೆ ಹಾರಿ ಹೋಗಿದೆ. ಅದೃಷ್ಟವಶಾತ್ ಭಾನುವಾರವಾದ ಕಾರಣ ಶಾಲೆಯಲ್ಲಿ ಮಕ್ಕಳು ಇರದ ಕಾರಣ ಯಾವುದೇ ಅನಾಹುತ ನಡೆದಿಲ್ಲ.


    ಬೀಸಿದ ಗಾಳಿಗೆ ಶಾಲೆಯ ಹೆಂಚಿನ ಜೊತೆಗೆ ಗ್ರಾಮದ ಕೃಷಿಕರ ಅಡಿಕೆ ತೋಟಕ್ಕೂ ಹಾನಿಯಾಗಿದೆ. ಹಲವು ಅಡಿಕೆ ಮರಗಳು ತುಂಡಾಗಿ ಬಿದ್ದಿದ್ದು, ಕೆಲವೆಡೆ ವಿದ್ಯುತ್ ತಂತಿಯ ಮೇಲೆ ಬಿದ್ದ ಕಾರಣ ವಿದ್ಯುತ್ ಕಂಬಕ್ಕೂ ಕೂಡಾ ಹಾನಿ ಸಂಭವಿಸಿದೆ.
    ಜುಲೈ 15 ಮತ್ತು 16 ರಂದು ಕೂಡಾ ಜೋರಾದ ಗಾಳಿಯ ಜೊತೆ ಮಳೆ ಸುರಿಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

    Continue Reading

    DAKSHINA KANNADA

    ನಾಳೆ, ನಾಡಿದ್ದು ದ.ಕ, ಉಡುಪಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ

    Published

    on

    ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಭಾರತೀಯ ಹವಾಮಾನ ಇಲಾಖೆಯು ಇಂದು, ನಾಳೆ ಮತ್ತು ನಾಡಿದ್ದು(ಜು.15,16,17) ಈ ಮೂರು ಜಿಲ್ಲೆಗಳಿಗೆ ರೆಡ್‌ ಅಲರ್ಟ್ ಘೋಷಿಸಿದೆ.

    ಬಂಟ್ವಾಳದ ನೇತ್ರಾವತಿ ನದಿಯಲ್ಲಿ ನೀರಿನ‌ ಮಟ್ಟ ಹೆಚ್ಚಳ

    ಜುಲೈ 17 ರಿಂದ 19 ರ ವರೆಗೆ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾದ್ಯಂತ ಇಂದು ದಿನವಿಡೀ ಉತ್ತಮ ಮಳೆ ಬಂದಿದೆ. ಮಳೆಯ ಜತೆಗೆ ಬಲವಾದ ಗಾಳಿಯೂ ಬೀಸುತ್ತಿದೆ. ಸಮುದ್ರದಲ್ಲಿ ಅಬ್ಬರದ ಅಲೆಗಳು ಕಂಡು ಬರುತ್ತಿವೆ. ಗಾಳಿಯ ರಭಸಕ್ಕೆ ಅಲ್ಲಲ್ಲಿ ಮರ ಬಿದ್ದು ಸಂಚಾರ ಅಸ್ತವ್ಯಸ್ತ, ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಇಂದು ಬೆಳಗ್ಗೆ ಬೀಸಿದ ಬಲವಾದ ಗಾಳಿಗೆ ಉಳ್ಳಾಲ ತಾಲೂಕಿನ ಕೋಟೆಕಾರು ಬಳಿ ಬೀರಿ- ಪ್ರವಾಸಿ ಬಂಗ್ಲೆ ಕ್ರಾಸ್‌ ಸರ್ವೀಸ್‌ ರಸ್ತೆಯಲ್ಲಿ ಭಾರೀ ಗಾತ್ರದ ಮೇ ಫ್ಲವರ್‌ ಮರವೊಂದು ಉರುಳಿ ಬಿದ್ದ ಘಟನೆ ಸಂಭವಿಸಿದೆ. ಇದರಿಂದಾಗಿ ಈ ರಸ್ತೆಯಲ್ಲಿ ಕೆಲವು ಗಂಟೆಗಳ ಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ರಸ್ತೆ ಬದಿ ನಿಲ್ಲಿಸಿದ್ದ ಎರಡು ಲಾರಿಗಳ ಮಧ್ಯೆಮರ ಬಿದ್ದ ಕಾರಣ ಅಪಾಯ ತಪ್ಪಿದೆ. ಅಲ್ಲದೆ ಇಂದು ಭಾನುವಾರ ಆಗಿದ್ದ ಕಾರಣ ಈ ರಸ್ತೆಯಲ್ಲಿ ವಾಹನ ಮತ್ತು ಜನ ಸಂಚಾರ ಕಡಿಮೆ ಇತ್ತು.

    Continue Reading

    LATEST NEWS

    Trending