Monday, January 24, 2022

ಮೂರು ಮದುವೆಯಾಗಿ ನಾಲ್ಕನೆಯವಳೊಂದಿಗೆ ಪರಾರಿಯಾದ ಮಂತ್ರವಾದಿ

ಚಿಕ್ಕಮಗಳೂರು: ಮಂತ್ರವಾದಿ ಎಂದು ನಂಬಿಸಿ ವ್ಯಕ್ತಿಯೊಬ್ಬ ಮೂರು ಮದುವೆಯಾಗಿ ನಾಲ್ಕನೇಯವಳೊಂದಿಗೆ ಪರಾರಿಯಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್ ಪುರ ತಾಲೂಕಿನಲ್ಲಿ ನಡೆದಿದೆ.


ಬಾಳೆಹೊನ್ನೂರು ನಿವಾಸಿ ಯೂಸುಫ್ ಹೈದರ್ ಎಂಬುವವನು ಕಳಸ ಪಟ್ಟಣದ ಮಹಿಳೆ ಜೊತೆ ಮದುವೆಗೆ ಸಿದ್ಧತೆ ನಡೆಸುತ್ತಿರುವ ವಿಚಾರ ಗೊತ್ತಾದಾಗ ಮತ್ತೊಂದು ಮಹಿಳೆ ಜೊತೆ ಎಸ್ಕೇಪ್ ಆಗಿದ್ದಾನೆ.

ಈ ಬಗ್ಗೆ ಕಳಸ ಪೊಲೀಸ್ ಠಾಣೆಯಲ್ಲಿ ಮಹಿಳೆಯ ತಂದೆಯಿಂದ ದೂರು ದಾಖಲಾಗಿದೆ.

ಮೊದಲು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬಾಳ್ಳುಪೇಟೆ ಮಹಿಳೆಯೊಬ್ಬರನ್ನ ವರಿಸಿದ ಈತ, ಆಕೆಗೆ ಎರಡು ಮಕ್ಕಳು ಜನಿಸಿದ ಬಳಿಕ ದೂರವಾದ.

ಬಳಿಕ ಜಿಲ್ಲೆಯ ಮೂಡಿಗೆರೆಯ ಮಹಿಳೆಯೊಬ್ಬರನ್ನ ಮದುವೆಯಾಗುತ್ತಾನೆ.

ಆಕೆಯೊಂದಿಗೂ ಜೀವನ ನಡೆಸಿದ್ದು ಕೇವಲ 6 ತಿಂಗಳು ಮಾತ್ರ. ಆ ಬಳಿಕ ಚಿಕ್ಕಮಗಳೂರು ತಾಲೂಕಿನ ಆಲ್ದೂರಿನ ಮಹಿಳೆ ಜೊತೆ ಮೂರನೇ ಮದುವೆಯಾಗಿ ನಾಲ್ಕು ವರ್ಷ ಸಂಸಾರ ಮಾಡುತ್ತಾನೆ.

ಆಕೆಗೆ ಒಂದು ಹೆಣ್ಣು ಮಗುವಿದೆ. ಆದರೆ ಇದೀಗ ನಾಲ್ಕನೆ ಮಹಿಳೆ ಜೊತೆ ಮದುವೆಗೆ ಮುಂದಾಗಿದ್ದಾನೆ.
ಈ ಮೊದಲು ಮಂಗಳೂರು ಮೂಲದ ಯುವತಿ ಈತನ ವಿರುದ್ಧ ದೂರು ದಾಖಲಿಸಿ, ವಾರೆಂಟ್ ಕೂಡ ಕಳಿಸಿದ್ದಾಳೆ.

Hot Topics

“ಬಿಜೆಪಿಗರಿಗೆ ವಿಶ್ವಗುರು ನರೇಂದ್ರ ಮೋದಿ ಒಬ್ಬರೇ”

ಮಂಗಳೂರು: ಬಿಜೆಪಿಗರಿಗೆ ಇಡೀ ಪ್ರಪಂಚದಲ್ಲಿ ಏಕೈಕ ಗುರು ವಿಶ್ವಗುರು ಎನ್ನುವ ನರೇಂದ್ರ ಮೋದಿ ಬಿಟ್ಟು ಬೇರೆ ಯಾವ ಗುರುಗಳಿಗೂ ಗೌರವ ಕೊಡದಿದ್ದುದನ್ನು ನೋಡಿದ್ದೇವೆ ಎಂದು ವಿಧಾನ ಪರಿಷತ್‌ ಸದಸ್ಯ ಬಿ ಕೆ ಹರಿಪ್ರಸಾದ್...

ಸುಳ್ಯ: ಅಂಗಡಿಗೆ ಬಂದ ಗ್ರಾಹಕನಿಗೆ ಮಾಲಕನಿಂದ ಹಲ್ಲೆ- ದೂರು ದಾಖಲು

ಸುಳ್ಯ: ಬೆಳ್ಳಿಯ ಚೈನಿಗೆ ಲೇಪನ ಮಾಡಲು ಬಂದ ಗ್ರಾಹಕನೊಬ್ಬನಿಗೆ ಅಂಗಡಿ ಮಾಲಕನೇ ಕಬ್ಬಿಣದ ಪೈಪಿನಿಂದ ಹೊಡೆದು ಗಾಯಗೊಳಿಸಿದ ಘಟನೆ ಸುಳ್ಯದಲ್ಲಿ ನಿನ್ನೆ ನಡೆದಿದೆ.ಗಾಯಗೊಂಡ ಗ್ರಾಹಕರನ್ನು ಗೋಪಾಲ ಶೇಟ್ ಕೆ (47) ಎಂದು ಗುರುತಿಸಲಾಗಿದೆ. ಗೋಪಾಲ...

ಕುಂಪಲ: ಪ್ರಯಾಣಿಕರನ್ನು ಇಳಿಸುವ ವೇಳೆ ಖಾಸಗಿ ಸಿಟಿ ಬಸ್‌ಗಳ ಢಿಕ್ಕಿ

ಮಂಗಳೂರು: ಬಸ್ಸು ತಂಗುದಾಣದಲ್ಲಿ ಪ್ರಯಾಣಿಕರನ್ನು ಇಳಿಸುವ ಸಂದರ್ಭ ಬಸ್‌ಗೆ ಮತ್ತೊಂದು ಬಸ್‌ ಢಿಕ್ಕಿ ಹೊಡೆದ ಘಟನೆ ಉಳ್ಳಾಲ ಕುಂಪಲದ ಬೈಪಾಸ್ ಬಸ್ಸು ತಂಗುದಾಣದಲ್ಲಿ ಇಂದು ನಡೆದಿದೆ.ಕುಂಪಲದಿಂದ ಮಂಗಳೂರು ಕಡೆಗೆ ಸಾಗುವ ಖಾಸಗಿ ಸಿಟಿ...