Connect with us

LATEST NEWS

ಆಗಸ್ಟ್ 25ರಂದು ಉಡುಪಿ ಜಿಲ್ಲೆಗೆ ತುಂಬಲಿದೆ 25 ವರ್ಷ: ಇಲ್ಲಿದೆ ವಿಶೇಷ ಮಾಹಿತಿ

Published

on

ಉಡುಪಿ: ಆಗಸ್ಟ್ 25 ರಂದು ಉಡುಪಿ ಜಿಲ್ಲೆಗೆ ತುಂಬಲಿದೆ 25 ವರ್ಷ. ಈ ಜಿಲ್ಲೆಯ ಕುರಿತು ನಿಮಗೆಷ್ಟು ಗೊತ್ತು? ವಿಶೇಷ ಮಾಹಿತಿ ಇಲ್ಲಿದೆ ನೋಡಿ.

ಪಶ್ಚಿಮದಲ್ಲಿ ಅರಬಿ ಸಮುದ್ರ, ಪೂರ್ವದಲ್ಲಿ ಪಶ್ಚಿಮ ಘಟ್ಟಗಳ ಸಾಲುಗಳನ್ನು ಹೊಂದಿರುವ ಸುಂದರ ತಾಣ ಉಡುಪಿ ಜಿಲ್ಲೆ. ದಕ್ಷಿಣ ಕನ್ನಡ ಜಿಲ್ಲೆಯ ಭಾಗವಾಗಿದ್ದ ಉಡುಪಿ ಆಗಸ್ಟ್ 25, 1997 ರಂದು ಸ್ವತಂತ್ರ ಜಿಲ್ಲೆಯಾಗಿ ರೂಪುಗೊಂಡಿತು.

ಉಡುಪಿ ಜಿಲ್ಲೆಯ ಪ್ರಥಮ ಜಿಲ್ಲಾಧಿಕಾರಿಯಾಗಿ ಡಾ.ಕಲ್ಪನಾ ಗೋಪಾಲ್ ಸೇವೆ ಸಲ್ಲಿಸಿದ್ದರು. ಪ್ರತಾಪ್ ಚಂದ್ರ ಶೆಟ್ಟಿ,ಯು.ಆರ್ ಸಭಾಪತಿಯವರು ಆಗಿನ ಶಾಸಕರಾಗಿದ್ದರು.


ಜೆ.ಎಚ್ ಪಾಟೀಲ್ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಉಡುಪಿಯನ್ನು ಸ್ವತಂತ್ರ ಜಿಲ್ಲೆಯಾಗಿ ಘೋಷಿಸಲಾಗಿತ್ತು. ಆರಂಭದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿದ್ದರೂ ಇಂದಿಗೆ ಉಡುಪಿ ಕರ್ನಾಟಕದ ಹೆಸರಾಂತ ಜಿಲ್ಲೆಯಾಗಿ ರೂಪುಗೊಂಡಿದೆ.

ಉಡುಪಿ ಬಹಳಷ್ಟು ಬೆಳೆದಿದೆ. ಉಡುಪಿ ಜಿಲ್ಲೆ ಒಟ್ಟು ಏಳು ತಾಲೂಕುಗಳನ್ನು ಒಳಗೊಂಡಿದೆ. ಉಡುಪಿ, ಹೆಬ್ರಿ, ಕಾಪು, ಕಾರ್ಕಳ, ಕುಂದಾಪುರ, ಬ್ರಹ್ಮಾವರ, ಬೈಂದೂರು ಉಡುಪಿ ಜಿಲ್ಲೆಯ ತಾಲೂಕುಗಳಾಗಿವೆ. ಜಿಲ್ಲೆಯಲ್ಲಿ ಒಟ್ಟು 158 ಗ್ರಾಮ ಪಂಚಾಯತ್ ಗಳಿವೆ.

ಒಂದು ನಗರಸಭೆ ಸೇರಿದಂತೆ ಮೂರು ಪುರಸಭೆಗಳನ್ನು ಉಡುಪಿ ಜಿಲ್ಲೆ ಹೊಂದಿದೆ. ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿ ಮಣಿಪಾಲ್ಲಿದ್ದು ಇಲ್ಲಿಂದ ಉಡುಪಿ ಜಿಲ್ಲೆಯ ಆಡಳಿತ ವ್ಯವಹಾರಗಳು ನಡೆಯುತ್ತವೆ. ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ಕಚೇರಿ ಬನ್ನಂಜೆಯಲ್ಲಿದೆ.

ಸೌಹಾರ್ದ ನೆಲೆವೀಡು ಉಡುಪಿ ಜಿಲ್ಲೆ ಧಾರ್ಮಿಕ ಕ್ಷೇತ್ರಗಳಿಗೆ ಹೆಸರು ವಾಸಿ. ಕೃಷ್ಣ ಮಠ, ಕೊಲ್ಲುರು ಮೂಕಾಂಬಿಕಾ ದೇವಸ್ಥಾನ, ಕರ್ನಾಟಕದ ಪ್ರಥಮ ಮಸೀದಿ ಖ್ಯಾತಿಯ ಬಾರ್ಕೂರು ಮಸೀದಿ, ಉಡುಪಿಯ ಮೊಘಲ್ ಶೈಲಿಯಲ್ಲಿ ನಿರ್ಮಾಣಗೊಂಡಿರುವ ಜಾಮಿಯಾ ಮಸೀದಿ, ಶತಮಾನಗಳ ಇತಿಹಾಸ ಇರುವ ಕಲ್ಯಾಣಪುರದ ಮಿಲಾಗ್ರಿಸ್ ಚರ್ಚ್,

ಕಾರ್ಳದ ಇತಿಹಾಸ‌ ಪ್ರಸಿದ್ದ ಸೈಂಟ್ ಲಾರೆನ್ಸ್ ಚರ್ಚ್, ಕಾರ್ಕಳ ಗೋಮಟೇಶ್ವರ ಕ್ಷೇತ್ರ ಇಲ್ಲಿ ಸೌಹಾರ್ದ ಪರಂಪರೆಗೆ ಸಾಕ್ಷಿ.
ಉಡುಪಿಯಲ್ಲಿ ಲಭ್ಯ ಮಾಹಿತಿಯ ಪ್ರಕಾರ ಅಂದಾಜು ಹನ್ನೆರಡು ಲಕ್ಷ ಜನ ಇದ್ದು ಇದರಲ್ಲಿ ಪುರುಷರು 49% ಮತ್ತು ಮಹಿಳೆಯರು 51% ಸೇರಿದ್ದಾರೆ. ಮೋಗವೀರ ಸಮುದಾಯ, ಬಿಲ್ಲವ,ಬಂಟ ಸಮುದಾಯ, ಮುಸ್ಲಿಮ್,

ಕ್ರೈಸ್ತರು, ಖಾರ್ವಿ, ಬ್ರಾಹ್ಮಣರು, ಜಿ.ಎಸ್.ಬಿ, ದಲಿತ ಸಮುದಾಯ, ಕೊರಗ ಸಮುದಾಯ, ಕುಡುಬಿ ಸಮುದಾಯ, ಮಲೆ ಕುಡಿಯ ಸಮುದಾಯ ಸೇರಿದಂತೆ ಹಲವು ಸಣ್ಣ ಪುಟ್ಟ ಸಮುದಾಯಗಳು ಉಡುಪಿ ಜಿಲ್ಲೆಯ ಜನ ಸಂಖ್ಯೆಯ ಭಾಗವಾಗಿದ್ದಾರೆ.

ಇಲ್ಲಿನ ಜನ ಹೆಚ್ಚಾಗಿ ಮೀನುಗಾರಿಕೆಯನ್ನು ಅವಲಂಬಿಸಿಕೊಂಡಿದ್ದಾರೆ. ಇನ್ನುಳಿದಂತೆ ಕೃಷಿ, ವ್ಯಾಪಾರವನ್ನು ಅವಲಂಬಿಸಿಕೊಂಡು ಬದುಕುವ ಕುಟುಂಬಗಳಿವೆ.ದೊಡ್ಡ ಸಂಖ್ಯೆಯಲ್ಲಿ ಕೊಲ್ಲಿ ರಾಷ್ಟ್ರಗಳಿಗೆ ಉದ್ಯೋಗ ಅರಸಿಕೊಂಡು ಈ ಭಾಗದಿಂದ ಹೋಗುತ್ತಾರೆ.
ಅರ್ಥಿಕತೆ
ಜಿಲ್ಲೆಯ ಪ್ರಮುಖ ಉದ್ಯೋಗ ಮೀನುಗಾರಿಕೆಯಾಗಿರುವುದರಿಂದ ಮಲ್ಪೆಯಲ್ಲಿ ಪೂರ್ಣ ಪ್ರಮಾಣದ ಸುಸಜ್ಜಿತವಾದ ಬಂದರು ನಿರ್ಮಾಣ ಮಾಡಲಾಗಿದೆ. ಅದರೊಂದಿಗೆ ಗಂಗೊಳ್ಳಿ, ಕೋಡಿಬೆಂಗ್ರೆ, ಹಂಗಾರಕಟ್ಟೆ, ಬೈಂದೂರಿನಲ್ಲಿ ಸಣ್ಣ ಪ್ರಮಾಣದ ಬಂದರುಗಳನ್ನು ನಿರ್ಮಿಸಲಾಗಿದೆ.

ಈ ಬಂದರುಗಳ ಮುಖಾಂತರ ಸಾವಿರಾರು ಯಾಂತ್ರಿಕೃತ ಬೋಟ್ ಗಳ ಮೂಲಕ ಮೀನುಗಾರಿಕೆ ನಡೆಯುತ್ತದೆ. ಅದರೊಂದಿಗೆ ಸಾಂಪ್ರದಾಯಿಕ ಮೀನುಗಾರಿಕೆಗೂ ಪ್ರಮುಖ್ಯತೆ ನೀಡಲಾಗಿದೆ.

ಸಿಂಡಿಕೇಟ್ ಬ್ಯಾಂಕ್ ಮತ್ತು ಕಾರ್ಪೋರೇಷನ್ ಬ್ಯಾಂಕ್ ಜಿಲ್ಲೆಯಲ್ಲೇ ಸ್ಥಾಪನೆಯಾದ ಬ್ಯಾಂಕ್ ಗಳಾಗಿದ್ದು ಸಾವಿರಾರು ಮಂದಿ ಉದ್ಯೋಗ ಮಾಡಲು ಅವಕಾಶ ಕಲ್ಪಿಸಿದೆ.

ಕೋಟ್ಯಾಂತರ ರೂಪಾಯಿಗಳ ವ್ಯವಹಾರ ನಡೆಸಿದೆ.ಇದರೊಂದಿಗೆ ಜಿಲ್ಲೆಯಲ್ಲಿ ಸಾವಿರಾರು ಸಹಕಾರಿ ಸೊಸೈಟಿಗಳಿದ್ದು‌ ಜನರಿಗೆ ಅರ್ಥಿಕ ನೆರವು ಒದಗಿಸುತ್ತಿದೆ.
ಶಿಕ್ಷಣ
ಉಡುಪಿ ಬುದ್ದಿವಂತರ ಜಿಲ್ಲೆಯೆಂಬ ಖ್ಯಾತಿ ಹೊಂದಿದ್ದು ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ ಯಾವಾಗಲೂ ಅಗ್ರಸ್ಥಾನ ಕಾಯ್ದುಕೊಂಡು ಬಂದಿದೆ. ಲಭ್ಯ ಇರುವ ಮಾಹಿತಿಯ ಪ್ರಕಾರ ಸರಾಸರಿ ಸಾಕ್ಷರತೆಯ ಪ್ರಮಾಣವು 83% ಗಿಂತ ಹೆಚ್ಚಿದೆ.

ಇದು ರಾಷ್ಟ್ರೀಯ ಸರಾಸರಿ 59.5% ಗಿಂತ ಹೆಚ್ಚಿದೆ ಎಂಬುವುದು ಗಮನಾರ್ಹ. ಪುರುಷರ ಸಾಕ್ಷರತೆ 86% ಮತ್ತು ಮಹಿಳಾ ಸಾಕ್ಷರತೆ 81% ಆಗಿದೆ. ಇತ್ತೀಚಿಗೆ ಖಾಸಗಿ ಆಂಗ್ಲ ಮಾಧ್ಯಮ ಶಾಲೆಯತ್ತ ಜನರ ಒಲವು ಹೆಚ್ಚಾಗುತ್ತಿರುವುದನ್ನು ಗಮನಿಸಬಹುದಾಗಿದೆ.
ಭಾಷೆ
ಬಹು ಭಾಷೆಯ ಜಿಲ್ಲೆಯಾಗಿರುವ ಉಡುಪಿ ಪ್ರಮುಖವಾಗಿ ಕನ್ನಡ, ತುಳು, ನವಾಯತ್,ಖಾರ್ವಿ, ಕೊಂಕಣಿ,ಇಂಗ್ಲಿಷ್, ಹಿಂದಿ,ಉರ್ದು, ಕೊರಗ ಭಾಷೆ,ಕುಡುಬಿ, ಬ್ಯಾರಿ ಸೇರಿದಂತೆ ಹಲವು ಗ್ರಾಮೀಣ ಭಾಷೆಗಳನ್ನು ಮಾತನಾಡುವ ಜನರಿದ್ದಾರೆ. ಪ್ರಮುಖವಾಗಿ ತುಳು ಮತ್ತು ಕನ್ನಡವನ್ನು ಜಿಲ್ಲೆಯಾದ್ಯಂತ ವ್ಯವಹಾರಿಕ ಭಾ಼ಷೆಯಾಗಿ ಬಳಸಲಾಗುತ್ತದೆ.
ಹವಾಮಾನ
ಉಡುಪಿಯು ಸರಾಸರಿ ಸಮುದ್ರ ಮಟ್ಟಕ್ಕಿಂತ 27 ಮೀ (89 ಅಡಿ) ಎತ್ತರದಲ್ಲಿದೆ. ಉಡುಪಿಯ ಹವಾಮಾನವು ಬೇಸಿಗೆಯಲ್ಲಿ ಬಿಸಿಯಾಗಿರುತ್ತದೆ ಮತ್ತು ಚಳಿಗಾಲದಲ್ಲಿ ಆಹ್ಲಾದಕರವಾಗಿರುತ್ತದೆ. ಬೇಸಿಗೆಯಲ್ಲಿ (ಮಾರ್ಚ್‌ನಿಂದ ಮೇ ವರೆಗೆ) ತಾಪಮಾನವು 38 °C (100 °F) ವರೆಗೆ ತಲುಪುತ್ತದೆ. ಚಳಿಗಾಲದಲ್ಲಿ (ಡಿಸೆಂಬರ್‌ನಿಂದ ಫೆಬ್ರವರಿವರೆಗೆ) ಇದು ಸಾಮಾನ್ಯವಾಗಿ 32 ಮತ್ತು 20 °C (90 ಮತ್ತು 68 °F) ನಡುವೆ ಇರುತ್ತದೆ.
ಮಾನ್ಸೂನ್ ಅವಧಿಯು ಜೂನ್ ನಿಂದ ಸೆಪ್ಟೆಂಬರ್ ವರೆಗೆ ಇರುತ್ತದೆ, ಪ್ರತಿ ವರ್ಷ ಸರಾಸರಿ 4,000 ಮಿಮೀ (160 ಇಂಚು) ಗಿಂತ ಹೆಚ್ಚಿನ ಮಳೆ ಮತ್ತು ಭಾರೀ ಗಾಳಿ ಈ ಪ್ರದೇಶವನ್ನು ಆವರಿಸಿಕೊಂಡಿರುತ್ತದೆ.
ಉಡುಪಿ ಜಿಲ್ಲೆ ಪಶ್ಚಿಮದಲ್ಲಿ ಅರಬ್ಬೀ ಸಮುದ್ರ ಮತ್ತು ಪೂರ್ವದಲ್ಲಿ ಪಶ್ಚಿಮ ಘಟ್ಟಗಳು (ವಿಶ್ವ ಪರಂಪರೆಯ ತಾಣ) ದಿಂದ ಸುತ್ತುವರಿದಿದೆ. ಸಮುದ್ರಕ್ಕೆ ಸಮೀಪವಿರುವ ಭೂಮಿ ಸಣ್ಣ ಬೆಟ್ಟಗಳು ಮತ್ತು ಭತ್ತದ ಗದ್ದೆಗಳು, ತೆಂಗಿನ ತೋಟಗಳು ಇತ್ಯಾದಿಗಳೊಂದಿಗೆ ಆವರಿಸಿದೆ.

ಪೂರ್ವದಲ್ಲಿ ಪಶ್ಚಿಮ ಘಟ್ಟಗಳ ಗಡಿಯಲ್ಲಿರುವ ಭೂಮಿ ಕಾಡುಗಳು ಮತ್ತು ಗುಡ್ಡಗಾಡು ಪ್ರದೇಶಗಳಿಂದ ಆವೃತವಾಗಿದೆ; ಕೆಲವು ಭಾಗಗಳಲ್ಲಿ ಕಾಡುಗಳು ತುಂಬಾ ದಟ್ಟವಾಗಿವೆ ಮತ್ತು ಸೋಮೇಶ್ವರ ವನ್ಯಜೀವಿ ಅಭಯಾರಣ್ಯ ಹೆಬ್ರಿ ಮತ್ತು ಸೋಮೇಶ್ವರದ ಸಮೀಪದಲ್ಲಿದೆ ಮತ್ತು ಮುಕಾಂಬಿಕಾ ವನ್ಯಜೀವಿ ಅಭಯಾರಣ್ಯ ಕೊಲ್ಲೂರು ಬಳಿ ಸ್ಥಾಪಿತವಾಗಿದೆ.

ಕೊಲ್ಲೂರು ಸುತ್ತಮುತ್ತಲಿನ ಪ್ರದೇಶವು ದಟ್ಟವಾದ ಅರಣ್ಯದಿಂದ ಕೂಡಿದೆ ಮತ್ತು ಹಳ್ಳಿಗಳು ಅರಣ್ಯ ಪ್ರದೇಶದ ನಡುವೆ ಇವೆ. ಕುಂದಾಪುರ ತಾಲ್ಲೂಕು ಮತ್ತು ಕಾರ್ಕಳ ತಾಲ್ಲೂಕಿನ ಕೆಲವು ಭಾಗಗಳು ಕಾಡುಗಳಿಂದ ಆವರಿಸಿದೆ.

ಜಿಲ್ಲೆಯು ಅಪರೂಪದ ಜಾತಿಯ ಸಸ್ಯ ಮತ್ತು ಪ್ರಾಣಿಗಳಿಗೆ ಆಶ್ರಯ ನೀಡುತ್ತಿದೆ. ಹುಲಿ, ಕಿಂಗ್ ಕೋಬ್ರಾ, ಜಿಂಕೆ, ಕಾಡೆಮ್ಮೆಗಳು ಜಿಲ್ಲೆಯಲ್ಲಿ ಕಂಡುಬರುವ ಕೆಲವು ವನ್ಯಜೀವಿಗಳಾಗಿವೆ. ಸಸ್ಯವರ್ಗದಲ್ಲಿ ಗುಲಾಬಿ, ತೇಗದ ಮರ, ಕೆಲವು ಅಪರೂಪದ ಸಸ್ಯಗಳು, ಶಿಲೀಂಧ್ರಗಳು ಸೇರಿವೆ.
ನದಿಗಳು
ಉಡುಪಿ ಜಿಲ್ಲೆಯಲ್ಲಿ ಒಟ್ಟು ಏಳು ನದಿಗಳು ಹರಿಯುತ್ತದೆ. ಮುಖ್ಯವಾಗಿ ಉದ್ಯಾವರ ನದಿ, ಸೀತಾ ನದಿ, ಸವರ್ಣ ನದಿ,ಸೌಪರ್ಣಿಕ, ಪಂಚ ಗಂಗಾವಳಿ, ವರಾಹಿ ಮತ್ತು ಚಕ್ರ ನದಿಗಳು ಹರಿಯುತ್ತವೆ. ಈ ಎಲ್ಲ ನದಿಗಳು ಉಡುಪಿ ಜಿಲ್ಲೆಯ ಬೇರೆ ಬೇರೆ ಪ್ರದೇಶದಲ್ಲಿ ಸಮುದ್ರಕ್ಕೆ ಸೇರುತ್ತವೆ.
ಪ್ರವಾಸೋದ್ಯಮ
ಉಡುಪಿ ಜಿಲ್ಲೆ ಪ್ರವಾಸೋದ್ಯಮಕ್ಕೂ ಹೆಸರುವಾಸಿಯಾಗಿದೆ. ಸುಂದರ ಬೀಚ್ ಗಳನ್ನು ಹೊಂದಿರುವ ಉಡುಪಿ ದೇಶ-ವಿದೇಶಗಳಿಂದ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ. ಜಿಲ್ಲೆ ಪ್ರಮುಖ ಬೀಚ್ ಗಳಾದ ಮಲ್ಪೆ,ಒತ್ತಿನಾಣೆ, ಕಾಪುವಿನಲ್ಲಿರುವ ಬೀಚ್’ಗೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ.

ಅದರೊಂದಿಗೆ ಕೋಡಿಬೆಂಗ್ರೆ ಡೆಲ್ಟಾ ಬೀಚ್, ಪಡುಕೆರೆ ಬೀಚ್,ಹೂಡೆ ಬೀಚ್, ಕೋಡಿ ಕುಂದಾಪುರ ಬೀಚ್, ಆಸರೆ ಬೀಚ್ ಇವೆಲ್ಲವೂ ಇತ್ತೀಚಿಗೆ ಬೆಳವಣಿಗೆ ಕಂಡ ಬೀಚ್ ಗಳಾಗಿವೆ.
ನದಿಗಳ ಸಿಹಿ ನೀರಿನ ಪ್ರವಾಸೋದ್ಯಮಕ್ಕೂ ಉಡುಪಿ ಹೆಸರುವಾಸಿಯಾಗಿದ್ದು ಇಲ್ಲಿ ಕಂಡ್ಲ ವನಗಳ ನಡುವೆ ಬೋಟಿಂಗ್, ತಿಮ್ಮಣ್ಣಕುದ್ರು ತೂಗು ಸೇತುವೆ (Hanging Bridge Kemmannu), sea view, river view ರೆಸಾರ್ಟ್ ಗಳ ಆನಂದವನ್ನೂ ಪಡೆಯಬಹುದಾಗಿದೆ.

ಇನ್ನೂ ಉಡುಪಿ ಜಿಲ್ಲೆಯ ಪೂರ್ವ ಭಾಗವು ಪಶ್ಚಿಮ ಘಟಕ್ಕೆ ಹತ್ತಿರವಾಗಿದ್ದು ಹಲವು ಜಲಪಾತಗಳು ಕೂಡ ಇಲ್ಲಿವೆ. ಕುಡ್ಲು ಫಾಲ್ಸ್, ಜೋಮ್ಲು, ಅರ್ಬಿ ಫಾಲ್ಸ್, ಕೊಲ್ಲೂರು ಪ್ರದೇಶದಲ್ಲೂ ಕೆಲವೊಂದು ಜಲಪಾತಗಳು ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.
ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿ
ಉಡುಪಿ ಜಿಲ್ಲೆಯು ಆರೋಗ್ಯ ಕ್ಷೇತ್ರದಲ್ಲೂ ಕ್ರಾಂತಿ ಮಾಡಿದ್ದು ಕಸ್ತೂರಿ ಬಾ ಆಸ್ಪತ್ರೆ (KMC) ವಿಶ್ವ ಮನ್ನಣೆ ಪಡೆದುಕೊಂಡಿದೆ. ಈ ಸಂಸ್ಥೆಯಲ್ಲಿ ವೈದ್ಯಕೀಯ ಶಿಕ್ಷಣ ಪೂರೈಸಲು ದೇಶ ವಿದೇಶಗಳಿಂದ ವಿದ್ಯಾರ್ಥಿಗಳು ಬರುತ್ತಾರೆ.

ಉಡುಪಿಯಲ್ಲಿ ಹಲವು ಉತ್ತಮ ದರ್ಜೆಯ ಖಾಸಗಿ ಆಸ್ಪತ್ರೆಗಳು ಜನರಿಗೆ ಅತ್ಯುತ್ತಮ ಸೇವೆ ನೀಡುತ್ತ ಬಂದಿದೆ. ಅದರೊಂದಿಗೆ ಸುಸಜ್ಜಿತವಾದ ಹಾಜಿ ಅಬ್ದುಲ್ಲಾ ಮಹಿಳಾ ಮತ್ತು‌ ಮಕ್ಕಳಾ ಸರಕಾರಿ ಆಸ್ಪತ್ರೆ, ಅಜ್ಜರಕಾಡಿನ ಜಿಲ್ಲಾ ಸರಕಾರಿ ಆಸ್ಪತ್ರೆಗಳು ಉನ್ನತ ದರ್ಜೆಯ‌ ಆರೋಗ್ಯ ಸೇವೆಗಳನ್ನು ಒದಗಿಸುತ್ತ ಬಂದಿದೆ.
ರಾಜಕೀಯ
ಉಡುಪಿ ಜಿಲ್ಲೆಯ ರೂಪುಗೊಂಡ ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಪ್ರಾಬಲ್ಯ ಹೊಂದಿದೆ. ಪ್ರಸ್ತುತ ಉಡುಪಿಯ ಎಲ್ಲ ಕ್ಷೇತ್ರದಲ್ಲೂ ಬಿಜೆಪಿ ಪಕ್ಷದ ಶಾಸಕರು ಅಧಿಕಾರದಲ್ಲಿದ್ದಾರೆ. ಉಳಿದಂತೆ ಉಡುಪಿ ಜಿಲ್ಲೆಯಲ್ಲಿ ಜೆ.ಡಿ.ಎಸ್, ಸಿ.ಪಿ.ಐ.ಎಮ್, ಎಸ್.ಡಿ.ಪಿ.ಐ, ವೆಲ್ಫೇರ್ ಪಾರ್ಟಿ, ಆಮ್ ಆದ್ಮಿ ಪಕ್ಷ, ಕೆ.ಆರ್.ಎಸ್ ಪಕ್ಷ, ಹಿಂದು ಮಹಾ ಸಭಾ ಪಕ್ಷಗಳು ಅಸ್ತಿತ್ವದಲ್ಲಿದೆ.

ಉಡುಪಿ ಜಿಲ್ಲೆಯು ಜಾತ್ಯಾತೀತ ಮತ್ತು ಹಿಂದುತ್ವದ ರಾಜಕೀಯ ಸಿದ್ದಾಂತಕ್ಕೆ ಸಮಾನವಾಗಿ ಸಾಕ್ಷಿಯಾಗಿದೆ.
ಡಾ.ಟಿಎಮ್ ಎ ಪೈ,ಮಧ್ವರಾಜ್, ಮನೋರಾಮ ಮಧ್ವರಾಜ್, ಆಸ್ಕರ್ ಫೆರ್ನಾಂಡಿಸ್,ವೀರಪ್ಪ ಮೊಯಿಲಿ, ವಿ.ವಿಎಸ್ ಆಚಾರ್ಯ, ಟಿ.ಎ ಪೈ, ಜಯ ಪ್ರಕಾಶ್ ಹೆಗ್ಡೆ, ಪ್ರತಾಪ್ ಚಂದ್ರ ಶೆಟ್ಟಿ, ವಿನಯ ಕುಮಾರ್ ಸೊರಕೆ,

ಸಭಾಪತಿ, ಪ್ರಮೋದ್ ಮಧ್ವರಾಜ್ ಹಾಲಡಿ ಶ್ರೀನಿವಾಸ್ ಶೆಟ್ಟಿ, ಗೋಪಾಲ್ ಪೂಜಾರಿ, ಗೋಪಾಲ ಭಂಡಾರಿ ಸೇರಿದಂತೆ ಹಲವು ಪ್ರಮುಖ ರಾಜಕೀಯ ನಾಯಕರು ಉಡುಪಿ ಜಿಲ್ಲೆಯ ವಿವಿಧ ಕ್ಷೇತ್ರಗಳನ್ನು ಪ್ರತಿನಿಧಿಸಿದ್ದಾರೆ ಮತ್ತು ಕೆಲವರೂ ಈಗಾಲೂ ಅಧಿಕಾರದಲ್ಲಿದ್ದಾರೆ.
ಧಾರ್ಮಿಕ ಮತ್ತು ಸಾಮಾಜಿಕ ಸಂಘ ಸಂಸ್ಥೆಗಳು
ಈ ಭಾಗದಲ್ಲಿ ಆರ್.ಎಸ್.ಎಸ್ ಮತ್ತು ಅದರ ಸಹ ಸಂಘ ಸಂಸ್ಥೆಗಳು ಪ್ರಬಲವಾದ ಹಿಡಿತವನ್ನು ಪ್ರಸ್ತುತ ಸಾಧಿಸಿಕೊಂಡಿದೆ. ಮುಖ್ಯವಾಗಿ ಬಜರಂಗದಳ, ವಿ.ಎಚ್.ಪಿ, ಹಿಂದು ಜಾಗರಣ ವೇದಿಕೆ, ಎಬಿವಿಪಿ ಸೇರಿದಂತೆ ಸಂಘ ಪರಿವಾರ ಪ್ರಬಲವಾಗಿದೆ. ಕಾಂಗ್ರೆಸ್’ನ ಸೇವಾದಳ, ಎನ್.ಎಸ್.ಯು.ಐ ಕೂಡ ಅಸ್ತಿತ್ವದಲ್ಲಿದೆ.

ದಲಿತ ಸಂಘಟನೆಗಳು,ಎಡ ಪಂಥಿಯ ಸಂಘಟನೆಗಳು,ಬಿಲ್ಲವ, ಬಂಟ,ಮೊಗವೀರ,ಜಿಎಸ್ಬಿ,ಬ್ರಾಹ್ಮಣ ಸಮುದಾಯವಾರು ಸಂಘಟನೆಗಳು ಅತ್ಯಂತ ಪ್ರಬಲವಾಗಿ ಕಾರ್ಯಚರಿಸುತ್ತಿದೆ.
ಮುಸ್ಲಿಮ್ ಸಂಘಟನೆಗಳಾದ ಜಮಾಅತೆ ಇಸ್ಲಾಮಿ ಹಿಂದ್, ಪಿ.ಎಫ್.ಐ, ತಬ್ಲಿಗ್ ಜಮಾಅತ್,ಎಸ್.ಎಸ್.ಎಫ್, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ, ಎಸ್.ಕೆ.ಎಸ್.ಎಸ್.ಎಫ್, ಸುನ್ನಿ ಸಂಯುಕ್ತ ಜಮಾಅತ್ ಒಕ್ಕೂಟ ಸೇರಿದಂತೆ ಹಲವು ಸಂಘಟನೆಗಳು ಕಾರ್ಯ ನಿರ್ವಹಿಸುತ್ತಿದೆ.
ಕ್ರೈಸ್ತ ಸಮುದಾಯ ಐಸಿಎಮ್, ಕ್ಯಾಥೋಲಿಕ್ ಸಭಾ, ಅಂತರಾಷ್ಟ್ರೀಯ ಕ್ರೈಸ್ತ ಒಕ್ಕೂಟ ಸೇರಿದಂತೆ ಹಲವು ಸಂಘಟನೆಗಳು ಅಸ್ತಿತ್ವದಲ್ಲಿವೆ.
ವಿದ್ಯಾರ್ಥಿ ಸಂಘಟನೆಗಳಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ಎನ್.ಎಸ್.ಐ.ಯು ಉಡುಪಿ ಜಿಲ್ಲೆಯಲ್ಲಿ ಪ್ರಬಲವಾದ ಘಟಕಗಳನ್ನು ಹೊಂದಿದೆ.
ಸಾಮಾಜಿಕ ಸಂಘಟನೆಗಳಾದ ರೋಟರಿ ಕ್ಲಬ್,ಲಯನ್ಸ್ ಕ್ಲಬ್, ಎಚ್.ಆರ್.ಎಸ್,ನಮ್ಮ ಭೂಮಿ, ಸುಮನಸಾ ಸೇರಿದಂತೆ ಹಲವು ಸಂಘಟನೆಗಳು ಸಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.

ರಥ ಬೀದಿ ಗೆಳೆಯರು, ತಲ್ಲೂರು ಫ್ಯಾಮಿಲಿ ಟ್ರಸ್ಟ್ ನಂತಹ ಹಲವು ಸಂಘಟನೆಗಳು ಕಲಾ – ಸಾಹಿತ್ಯ ಕ್ಷೇತ್ರದಲ್ಲಿ ಕೊಡುಗೆ ನೀಡುತ್ತಿವೆ.
ಒಟ್ಟಿನಲ್ಲಿ ಉಡುಪಿ ಜಿಲ್ಲೆಯು ಸಮಗ್ರವಾಗಿ ಅಭಿವೃದ್ಧಿ ಹೊಂದುತ್ತಿರುವ ಜಿಲ್ಲೆಯಾಗಿದ್ದು ಕರ್ನಾಟಕ ರಾಜ್ಯಕ್ಕೆ ಮಾದರಿ ಜಿಲ್ಲೆಯಾಗಿ ಬೆಳೆಯುತ್ತಿದೆ.

ಕೆಲವೊಮ್ಮೆ ಸಣ್ಣ ಪುಟ್ಟ ವಿಚಾರಗಳಿಗೆ ಅಪಖ್ಯಾತಿ ಪಡೆದರೂ ಈ ಜಿಲ್ಲೆಯ ಜನ ಸೌಹಾರ್ದ ಪ್ರಿಯರಾಗಿರುವ ಕಾರಣ ಕೋಮು ಸಾಮರಸ್ಯ ಕೆಡಿಸುವ ಘಟನೆಗಳು ನಡೆದಂತಹ ಸಂದರ್ಭದಲ್ಲಿ ಎಲ್ಲ‌ ಸೌಹರ್ದತೆಯನ್ನು ಸ್ಥಾಪಿಸಲು ವಿವಿಧ ವೇದಿಕೆ ಹುಟ್ಟು ಹಾಕಿ ಶ್ರಮಿಸಿದ್ದಾರೆ.

ಕರ್ನಾಟಕ ಕೋಮು ಸೌಹಾರ್ದ ವೇದಿಕೆ, ಸಹಬಾಳ್ವೆ, ಸರ್ವ ಜನೋತ್ಸವದ ಹೆಸರಿನಲ್ಲಿ ಏಕತೆಯ ಸಂದೇಶವನ್ನು ನೀಡುತ್ತಿದ್ದಾರೆ. ಈ ಜಿಲ್ಲೆಯು ರಾಜ್ಯದ ಅತ್ಯುತ್ತಮ ಸಾಹಿತಿಗಳನ್ನು, ಬರಹಗಾರರನ್ನು ಕಂಡಿದೆ. ಕೋಟ ಶಿವರಾಮ ಕಾರಂತ, ಜಿ.ರಾಜ್ ಶೇಖರ್, ವೈದೇಹಿ ಸೇರಿದಂತೆ ದಿಗ್ಗಜರ ಬರಹಗಳಿಗೆ ಈ ನೆಲ ಸಾಕ್ಷಿಯಾಗಿದೆ.

DAKSHINA KANNADA

ದೊಡ್ಡವರ ಜಗಳದಲ್ಲಿ ಇಹಲೋಕ ತಜ್ಯಿಸಿದ 3 ರ ಕಂದಮ್ಮ…

Published

on

ಮಂಗಳೂರು (ಬೆಳಗಾವಿ): ಅದು ಎರಡು ಕುಟುಂಬಗಳ ನಡುವೆ ನಡೆದಿರೋ ಜಗಳ . ಆದ್ರೆ ಆ ಜಗಳಕ್ಕೆ ಏನೂ ಅರಿಯದ ಮೂರು ವರ್ಷದ ಪುಟ್ಟ ಮಗು ಬಲಿಯಾಗಿದೆ. ಪಾಪಿಯೊಬ್ಬ ಮಗುವಿನ ಎದೆಗೆ ಕಾಲಿಟ್ಟು ಮಗುವಿನ ಉಸಿರು ನಿಲ್ಲಿಸಿದ್ದಾನೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬುರ್ಲಟ್ಟಿ ಎಂಬ ಗ್ರಾಮದಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದೆ. ದೊಡ್ಡವರ ಜಗಳದಲ್ಲಿ ಶ್ರೀನಿಧಿ ಕಾಡಪ್ಪ ಕಾಳಾಪಾಟೀಲ್ ಎಂಬ ಮೂರು ವರ್ಷದ ಮಗು ಹತವಾಗಿದೆ. ಜೋತಿಭಾ ತುಕಾರಾಮ ಬಾಬಬರ ಎಂಬಾತ ಮಗುವಿನ ಜೀವಕ್ಕೆ ಕುತ್ತು ತಂದ ಆರೋಪಿಯಾಗಿದ್ದಾನೆ.
ಹಣಕಾಸಿನ ವಿಚಾರದಲ್ಲಿ ಎರಡು ಕುಟುಂಬಗಳ ನಡುವೆ ಜಗಳ ನಡೆದಿತ್ತು. ಈ ವೇಳೆ ಜಗಳ ತಾರಕ್ಕೇರಿದಾಗ ಸಿಟ್ಟಿನಲ್ಲಿ ಜೋತಿಬಾ ತುಕಾರಾಮ ಬಾಬಾಬರ ಮಗುವಿನ ಎದೆ ಮೇಲೆ ಕಾಲಿಟ್ಟು ನಿಂತಿದ್ದಾನೆ. ಈ ವೇಳೆ ಮಗುವನ್ನು ಆತನ ಕಾಲಿನ ಅಡಿಯಿಂದ ತೆಗೆಯಲು ಮಗುವಿನ ತಾಯಿ ಯತ್ನಿಸಿದ್ದಾಳೆ . ಆ ವೇಳಗೆ ಇನ್ನಷ್ಟು ಗಟ್ಟಿಯಾಗಿ ಕಾಲಿನಿಂದ ಮಗುವಿನ ಎದೆಗೆ ಕಾಲಿನಿಂದ ಒತ್ತಿದ ಕಾರಣ ಮಗು ಉಸಿರು ನಿಲ್ಲಿಸಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಐಗಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಗುವಿನ ದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನೆ ನಡೆಯುತ್ತಿದ್ದಂತೆ ಆರೋಪಿ ಸ್ಥಳದಿಂದ ಎಸ್ಕೇಪ್ ಆಗಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ.

Continue Reading

DAKSHINA KANNADA

ಅಮೇರಿಕಾದಲ್ಲಿ ಕಾರು ಅಪಘಾತ…! ಮೂವರು ಭಾರತೀಯ ಮಹಿಳೆಯರ ಸಾ*ವು…!

Published

on

ನ್ಯೂಯಾರ್ಕ್‌ : ಅಮೇರಿಕಾದಲ್ಲಿ ನಡೆದ ಕಾರು ಅಪಘಾತದಲ್ಲಿ ಭಾರತೀಯ ಮೂಲದ ಮೂವರು ಮಹಿಳೆಯರು ಇಹಲೋಕ ತ್ಯಜಿಸಿದ್ದಾರೆ. ಕೌಂಟಿಯ ಹೆದ್ದಾರಿಯ ಸೇತುವೆಯೊಂದರ ಮೇಲೆ ವೇಗವಾಗಿ ಕಾರು ಚಲಾಯಿಸಿದ ಕಾರಣ ಈ ಅಪಘಾತ ಸಂಭವಿಸಿದೆ. ಹೆದ್ದಾರಿಯಲ್ಲಿ ಉತ್ತರದ ಕಡೆಗೆ ಕಾರು ಪ್ರಯಾಣಿಸುತ್ತಿದ್ದು, ಎಲ್ಲಾ ಲೇನ್‌ಗಳನ್ನು ದಾಟಿ, ಹಂಪ್‌ ಮೇಲೆ ವೇಗವಾಗಿ ಏರಿತ್ತು. ಈ ಕಾರಣದಿಂದ ಕನಿಷ್ಟ 20 ಅಡಿಗಳಷ್ಟು ಮೇಲಕ್ಕೆ ಹಾರಿ ಸೇತುವೆಯ ಮುಂದೆ ಇದ್ದ ಮರಗಳಿಗೆ ಕಾರು ಅಪ್ಪಳಿಸಿದೆ. ಗುಜಾರಾತ್ ಮೂಲದ ಮೂವರು ಮಹಿಳೆಯರು ಈ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಗುಜರಾತ್‌ನ ಆನಂದ್ ಜಿಲ್ಲೆಯ ರೇಖಾಬೆನ್‌ ಪಟೇಲ್ , ಸಂಗೀತಾಬೆನ್ ಪಟೇಲ್ ಹಾಗೂ ಮನೀಶಾಬೆನ್ ಪಟೇಲ್‌ ಅವರು ಇಹಲೋಕ ತ್ಯಜಿಸಿದವರಾಗಿದ್ದಾರೆ.

 

ಕಾರು ನಿಗದಿಪಡಿಸಿದ ವೇಗದ ಮಿತಿಗಿಂತ ಹೆಚ್ಚು ವೇಗದಲ್ಲಿತ್ತು ಎಂದು ಅಲ್ಲಿನ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಅಪಘಾತದ ಪ್ರಮಾಣ ಎಷ್ಟಿತ್ತು ಮತ್ತು ಕಾರು ಎಷ್ಟು ಎತ್ತರಕ್ಕೆ ಹಾರಿತ್ತು ಅನ್ನೋದಿಕ್ಕೆ ಮರದ ಮೇಲಿರುವ ಕಾರಿನ ಅವಶೇಷಗಳು ಸಾಕ್ಷಿ ಎಂದು ಅವರು ಹೇಳಿದ್ದಾರೆ. ಮರದ ಮೇಲೆ ಬಿದ್ದ ಕಾರು ಛಿದ್ರಗೊಂಡು ಕಾರಿನ ಅವಶೇಷಗಳು ಚೆಲ್ಲಾಪಿಲ್ಲಿಯಾಗಿತ್ತು.


ದಕ್ಷಿಣ ಕೆರೊಲಿನಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ತಕ್ಷಣ ಸ್ಥಳಕ್ಕೆ ರಕ್ಷಣಾ ತಂಡಗಳು, ಪೊಲೀಸರು ಆಗಮಿಸಿದ್ದಾರೆ. ಅಪಘಾತದಲ್ಲಿ ಓರ್ವ ಬದುಕಿ ಉಳಿದಿದ್ದು, ಆತನ ಸ್ಥಿತಿ ಗಂಭೀರವಾಗಿದ್ದು ಈಗಲೇ ಏನೂ ಹೇಳಲು ಆಗದ ಪರಿಸ್ಥಿತಿಯಲ್ಲಿದ್ದಾನೆ. ವಾಹನ ಅಪಘಾತವಾದ ತಕ್ಷಣ ಅದರಲ್ಲಿದ್ದ ತಾಂತ್ರಿಕ ವ್ಯವಸ್ಥೆಯ ಕಾರಣ ತಕ್ಷಣ ಕುಟುಂಬ ಸದಸ್ಯರಿಗೆ ಅಲರ್ಟ್‌ ಮೆಸೆಜ್ ರವಾನೆಯಾಗಿತ್ತು. ಹೀಗಾಗಿ ತಕ್ಷಣ ಕುಟುಂಬಸ್ಥರು ಕೂಡಾ ತಕ್ಷಣ ಸ್ಥಳಕ್ಕೆ ಆಗಮಿಸಿದ್ದಾರೆ.

Continue Reading

FILM

PHOTOS : ಗೀತಾ ‘ವಿಜಯ್’ ಅದ್ದೂರಿ ಮದುವೆ; ಮೆಚ್ಚುಗೆ ಪಡೆದ ಧನುಷ್ ಮಾಡಿದ ಆ ಒಂದು ಕಾರ್ಯ!

Published

on

ಬೆಂಗಳೂರು : ಸಿಕ್ಕಾಪಟ್ಟೆ ಫೇಮಸ್ ಆಗಿದ್ದ ಧಾರಾವಾಹಿ ‘ಗೀತಾ’. ಈ ಧಾರಾವಾಹಿಯ ನಾಯಕ ‘ವಿಜಯ್’ ಅಂದ್ರೆ ಧನುಷ್ ಗೌಡ ದಾಂಪತ್ಯ ಜೀವನಕ್ಕೆ ಪದಾರ್ಪಣೆ ಮಾಡಿದ್ದಾರೆ. ಅವರ ವಿವಾಹ ಶುಕ್ರವಾರ ಅದ್ದೂರಿಯಾಗಿ ನೆರವೇರಿತು.


ಧನುಷ್ ಗೌಡ ಅವರು ಸಂಜನಾ ಎಂಬವರ ಜೊತೆಗೆ ಸಪ್ತಪದಿ ತುಳಿದಿದ್ದಾರೆ. ಸಂಜನಾ ಧನುಷ್ ಅತ್ತೆಯ ಮಗಳಾಗಿದ್ದು, ಇದು ಅರೆಂಜ್ಡ್ ಮ್ಯಾರೇಜ್ ಆಗಿದೆ.


ಇನ್ನು ಮದುವೆಯಲ್ಲಿ ಕುಟುಂಬದವರು, ಆಪ್ತರು, ಸ್ನೇಹಿತರು ಉಪಸ್ಥಿತರಿದ್ದರು.

ಧನುಷ್ ಅವರು ಆರತಕ್ಷತೆ ಕಾರ್ಯಕ್ರಮವೂ ಅದ್ದೂರಿಯಾಗಿ ನಡೆದಿದೆ.

ಧನುಷ್ ಅವರ ಮದುವೆ, ಆರತಕ್ಷತೆ ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಪಾಲ್ಗೊಂಡಿದ್ದರು. 

ಇದನ್ನೂ ಓದಿ : ಮೇಕಪ್ ರೂಂನಲ್ಲಿ ಕೂಡಿ ಹಾಕಿದ್ರು…ಆಮೇಲೆ…ನಿರ್ಮಾಪಕನಿಂದಾದ ಕರಾಳ ಅನುಭವ ಬಿಚ್ಚಿಟ್ಟ ಖ್ಯಾತ ಕಿರುತೆರೆ ನಟಿ!

ಭವ್ಯಾ ಗೌಡ, ಮೌನ ಗುಡ್ಡೇಮನೆ, ರಿತ್ವಿಕ್ ಕೃಪಾಕರ್, ಸೇರಿ ಅನೇಕ ಕಿರುತೆರೆ ಹಿರಿತೆರೆ ತಾರೆಯರು ಆಗಮಿಸಿದ್ದರು.

 

ಮದುವೆ ಸಂಭ್ರಮದ ನಡುವೆಯೂ ಧನುಷ್ ವೋಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಮಾದರಿಯಾಗಿದ್ದಾರೆ. ಧನುಷ್ ನಡೆಗೆ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.

 

 

Continue Reading

LATEST NEWS

Trending