Connect with us

    LATEST NEWS

    17 ವರ್ಷದ ಹುಡುಗಿ ಹಿಂದೆ ಬಿದ್ದ 20 ಪುರುಷರು; ಆಮೇಲೆ ಸಿಕ್ತು ಆಘಾತವಾಗೋ ಸುದ್ದಿ!

    Published

    on

    ಮಂಗಳೂರು/ಉತ್ತರಖಂಡ : ಹೆಚ್ ಐ ವಿ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ ಸಾಕಾಗುತ್ತಿಲ್ಲ. ದೈಹಿಕ ಸಂಪರ್ಕದ ಚಪಲಕ್ಕೆ ಬಿದ್ದು ಮಹಾಮಾರಿಗೆ ತುತ್ತಾಗುತ್ತಿದ್ದಾರೆ.  ಇದಕ್ಕೆ ಬಹುದೊಡ್ಡ ಸಾಕ್ಷಿಯಾಗಿ ಉತ್ತರಖಂಡದಲ್ಲಿ ನಡೆದ ಈ ಘಟನೆ ನಿಂತಿದೆ.  ಆದರೆ, ಈ ಘಟನೆಯ ವಿಚಾರದಲ್ಲಿ ಬೆಚ್ಚಿ ಬೀಳುವ ಸಂಗತಿಯೊಂದು ಹೊರಬಿದ್ದಿದೆ.

    ಸಾಂದರ್ಭಿಕ ಚಿತ್ರ

    17 ವರ್ಷದ ಹುಡುಗಿ ಕೈವಾಡ :
    ಉತ್ತರ ಖಂಡದ ನೈನಿತಾಲ್ ಜಿಲ್ಲೆಯ ರಾಮನಗರ ಪ್ರದೇಶದಲ್ಲಿ ಐದು ತಿಂಗಳಲ್ಲಿ 20 ಮಂದಿ ಹೆಚ್ ಐ ವಿ ಪಾಸಿಟಿವ್ ಆಗಿದ್ದಾರೆ. ಇದಕ್ಕೆ ಕಾರಣ 17 ವರ್ಷದ ಹುಡುಗಿ ಅನ್ನೋದೇ ಶಾಕಿಂಗ್ ವಿಚಾರ. ಹೌದು, ಈ ವಿಚಾರದ ಬಗ್ಗೆ ತನಿಖೆ ಶುರುವಾಗಿದ್ದೇ ರಹಸ್ಯ ಬಯಲಾಗಿದೆ.

    17ರ ಹುಡುಗಿ ಡ್ರಗ್ಸ್ ಚಟಕ್ಕೆ ಬಿದ್ದಿದ್ದಳಂತೆ. ಡ್ರಗ್ಸ್ ಕೊಳ್ಳಲು ಹಣವಿಲ್ಲದ್ದಕ್ಕೆ ಆಕೆ ಹಿಡಿದ ಕೆಲಸವೇ ಪುರುಷರಿಗೆ ಬಲೆ ಬೀಸೋದು. ಆಕೆಯ ಆಮಿಷಕ್ಕೊಳಗಾದ ಪುರುಷರು ದೈಹಿಕ ಸಂಪರ್ಕ ಬೆಳೆಸಿದ್ದಾರೆ. ಐದು ತಿಂಗಳಲ್ಲಿ ಅನೇಕರ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದಾರೆ. ಹಣಕ್ಕಾಗಿ ಈ ಕೆಲಸಕ್ಕಿಳಿದ ಹುಡುಗಿ ಈ ಬಗ್ಗೆ ಸಮಾಲೋಚಕರ ಬಳಿ ತಿಳಿಸಿದ್ದಾಳೆ. ಆಕೆಯ ಆರೋಗ್ಯ ಸರಿಯಿಲ್ಲ ಅನ್ನೋದು ಪಾಪ! ಬಡಪಾಯಿ ಪುರುಷರಿಗೆ ಇದರ ಅರಿವೇ ಇರಲಿಲ್ಲ.

    ಇದನ್ನೂ ಓದಿ : ರೈಲು ಹಳಿ ಮೇಲೆ ಕುಳಿತಿದ್ದ ವಿದ್ಯಾರ್ಥಿ ಪಾಲಿಗೆ ಮುಳುವಾದ ಹೆಡ್ ಫೋನ್.!

    ಯಾವಾಗ ಸತ್ಯ ಬಯಲಾಯ್ತೋ ಎಲ್ಲಾ ಆಘಾ*ತಕ್ಕೊಳಗಾಗಿದ್ದಾರೆ. ಪರೀಕ್ಷೆಗೆ ಒಳಪಡಿಸಿದಾಗ ಹೆಚ್ ಐ ವಿ ಸೋಂಕು ತಗುಲಿರೋದು ಗೊತ್ತಾಗಿದೆ. ಅವರಲ್ಲಿ ಕೆಲವರು ವಿವಾಹಿತರಾಗಿದ್ದು,  ಅವರ ಪತ್ನಿಯರಿಗೂ ಹೆಚ್ ಐ ವಿ ಸೋಂಕು ತಗುಲಿದೆ. ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

    Click to comment

    Leave a Reply

    Your email address will not be published. Required fields are marked *

    DAKSHINA KANNADA

    ತೊಕ್ಕೊಟ್ಟು : ಟೆಂಪೋ  ಡಿ*ಕ್ಕಿ; ವ್ಯಕ್ತಿ ಸಾ*ವು

    Published

    on

    ತೊಕ್ಕೊಟ್ಟು : ಟೆಂಪೋ  ಡಿ*ಕ್ಕಿ ಹೊಡೆದು ಪಾದಚಾರಿ ಮೃ*ತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ  ತೊಕ್ಕೊಟ್ಟು ಆಡಂಕುದ್ರು ಸಮೀಪ ಇಂದು ಮಧ್ಯಾಹ್ನ(ಅ.31) ಸಂಭವಿಸಿದೆ. ಫರಂಗಿಪೇಟೆ ತುಂಬೆ ರೊಟ್ಟಿಗುಡ್ಡೆ ಮನೆಯ ಆದಂ (64) ಸಾ*ವನ್ನಪ್ಪಿದವರು.

    ಮಂಗಳೂರಿನಿಂದ ತೊಕ್ಕೊಟ್ಟು ಕಡೆಗೆ ಬರುತ್ತಿದ್ದ ಲಾರಿ  ಆಡಂಕುದ್ರು ಸಮೀಪ ಪಾದಚಾರಿ ಆದಂ ಗೆ ಡಿ*ಕ್ಕಿ ಹೊಡೆದು, ನಿಯಂತ್ರಣ ತಪ್ಪಿದ ಪರಿಣಾಮ, ರಸ್ತೆಬದಿಯಲ್ಲಿ ನಿಲ್ಲಿಸಲಾಗಿದ್ದ ಇಲೆಕ್ಟ್ರಿಕ್  ಕಾರಿಗೆ ಡಿ*ಕ್ಕಿ ಹೊಡೆದಿದೆ. ಬಳಿಕ ಅಂಗಡಿಯೊಂದರ ನಾಮಫಲಕಕ್ಕೆ ಗುದ್ದಿ ಕಂದಕಕ್ಕೆ ಉರುಳಿದೆ.  ಕಾರಿನಲ್ಲಿ ಮಕ್ಕಳು ಕುಳಿತಿದ್ದು, ಅದೃಷ್ಟವಶಾತ್ ಮಕ್ಕಳು ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾರೆ.

    ಇದನ್ನೂ ಓದಿ : ಸಹಕರಿಸದಿದ್ದರೆ 24 ತುಂಡು ಮಾಡುವೆ ಎಂದಿದ್ದ ಶಾರಿಕ್ ಗೆ ಜಾಮೀನು ಮಂಜೂರು

    ಎದುರುಭಾಗದಲ್ಲಿ ಬಸ್ಸೊಂದು ಕೆಟ್ಟು ನಿಂತಿದ್ದು, ಅದರ ಪ್ರಯಾಣಿಕರನ್ನು ಇನ್ನೊಂದು ಬಸ್ಸಿಗೆ ಹತ್ತಿಸಲಾಗುತಿತ್ತು. ಆದಂ ಬಸ್ಸಲ್ಲಿದ್ದವರೋ ಅಥವಾ ಪಾದಚಾರಿಯೋ ಅನ್ನುವ ಕುರಿತು ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.  ಅಪಘಾ*ತದ ತಕ್ಷಣ ಟೆಂಪೋ ಚಾಲಕ ಸ್ಥಳದಿಂದ ತೆರಳಿ ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದ್ದಾರೆ. ಬಳಿಕ ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    Continue Reading

    LATEST NEWS

    ವಿಶ್ವ ಟೇಕ್ವಾಂಡೋ : ಸಂಹಿತಾಗೆ ಎರಡು ಕಂಚಿನ ಪದಕ

    Published

    on

    ಮಂಗಳೂರು : ಬ್ಯಾಂಕಾಕ್‌ನಲ್ಲಿ ನಡೆದ ಟೇಕ್ವಾಂಡೋ ವಿಶ್ವ ಚಾಂಪಿಯನ್‌ ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ಮಂಗಳೂರಿನ ಸಂಹಿತಾ ಅಲೆವೂರಾಯ ಕೆ.ವಿ. ಎರಡು ಕಂಚಿನ ಪದಕ ಗಳಿಸಿದ್ದಾರೆ. ಸೀನಿಯರ್‌ ವಿಭಾಗದಲ್ಲಿ ಸ್ಪರ್ಧಿಸಿ ಪೂಮ್ಸೆ ಮತ್ತು ಕ್ಯೂರೋಗಿ ವಿಭಾಗದಲ್ಲಿ ಪದಕ ಗಳಿಸಿದರು.’

    ೨೦೨೧ರಲ್ಲಿ ನೇಪಾಳದಲ್ಲಿ ನಡೆದ ಜೂನಿಯರ್‌ ಚಾಂಪಿಯನ್‌ಶಿಪ್‌ ನಲ್ಲಿ ಚಿನ್ನದ ಪದಕ, ೨೦೨೨ರಂದು ಮಲೇಷ್ಯಾದಲ್ಲಿ ಬೆಳ್ಳಿ ಪದಕ, ೨೦೨೩ರಲ್ಲಿ ಮಲೇಷ್ಯಾದಲ್ಲಿ ಚಿನ್ನದ ಮತ್ತು ಕಂಚಿನ ಪದಕ ಗಳಿಸಿದ್ದರು.

    ಇದನ್ನೂ ಓದಿ : ನಿಯಂತ್ರಣ ಕಳೆದುಕೊಂಡು ಪರ್ವತಕ್ಕೆ ಅಪ್ಪಳಿಸಿದ ಪ್ಯಾರಾಗ್ಲೈಡರ್- ಪ್ರವಾಸಿಗ ಮೃತ್ಯು

    ಈ ಬಾರಿ ಸೀನಿಯರ್‌ ವಿಭಾಗದಲ್ಲಿ ಸ್ಪರ್ಧಿಸಿ ಸಾಧನೆ ಮಾಡಿದ್ದಾರೆ. ನಿಟ್ಟೆ ಎನ್‌ಎಂಎಎಐಟಿ ಯಲ್ಲಿ ಎಂಜಿನಿಯರಿಂಗ್‌ ವ್ಯಾಸಂಗ ಮಾಡುತ್ತಿರುವ ಸಂಹಿತಾ, ಕದ್ರಿಯ ವಾಸುದೇವ ಭಟ್‌ ಮತ್ತು ದೀಪಾ ಕೆ.ಎಸ್.‌ ದಂಪತಿ ಪುತ್ರಿ. ಗುರುರಾಜ್‌ ಇಟಗಿ ಮತ್ತು ನಿಖಿಲ್‌ ಶೆಟ್ಟಿ ಅವರಲ್ಲಿ ತರಬೇತಿ ಪಡೆಯುತ್ತಿದ್ದಾರೆ.

    Continue Reading

    LATEST NEWS

    ನಿಯಂತ್ರಣ ಕಳೆದುಕೊಂಡು ಪರ್ವತಕ್ಕೆ ಅಪ್ಪಳಿಸಿದ ಪ್ಯಾರಾಗ್ಲೈಡರ್- ಪ್ರವಾಸಿಗ ಮೃತ್ಯು

    Published

    on

    ಶಿಮ್ಲಾ: ಪ್ಯಾರಾಗ್ಲೈಡರ್ ನಿಯಂತ್ರಣ ಕಳೆದುಕೊಂಡು ಪರ್ವತಕ್ಕೆ ಅಪ್ಪಳಿಸಿದ ಪರಿಣಾಮ ಜೆಕ್‌ನ ಪ್ರವಾಸಿಗರೊಬ್ಬರು ಸಾವನ್ನಪ್ಪಿದ ಘಟನೆ ಹಿಮಾಚಲ ಪ್ರದೇಶದ ಮನಾಲಿಯಲ್ಲಿ ಸಂಭವಿಸಿದೆ.

    ಡಿಟಾ ಮಿಸುರ್ಕೋವಾ (43) ಮೃತ ವ್ಯಕ್ತಿ.

    ಡಿಟಾ ಮಿಸುರ್ಕೋವಾ ಅವರು ಹಾರಾಡುತ್ತಿದ್ದ ಪ್ಯಾರಾಗ್ಲೈಡರ್ ಮನಾಲಿಯ ಮರ್ಹಿ ಬಳಿ ಪರ್ವತಕ್ಕೆ ಅಪ್ಪಳಿಸಿದೆ. ಬಲವಾದ ಗಾಳಿಯಿಂದಾಗಿ ಅವರು ಹಾರಾಡುತ್ತಿದ್ದ ಗ್ಲೈಡರ್ ನಿಯಂತ್ರಣ ಕಳೆದುಕೊಂಡಿದೆ ತಿಳಿದು ಬಂದಿದೆ.

    ಅವಘಡದ ಬಳಿಕ ಡಿಟಾ ಮಿಸುರ್ಕೋವಾ ಅವರನ್ನು ತಕ್ಷಣವೇ ಮನಾಲಿಯ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅದಾಗಲೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮಿಸುರ್ಕೋವಾ ಕಳೆದ ಆರು ವರ್ಷಗಳಿಂದ ಪ್ಯಾರಾಗ್ಲೈಡಿಂಗ್ ಮಾಡುತ್ತಿದ್ದರು.

    Continue Reading

    LATEST NEWS

    Trending