ಮಂಜೇಶ್ವರ: ಎರಡು ಬೈಕ್ ಮಧ್ಯೆ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆ ದಾಖಲಾಗಿದ್ದ ನಿವೃತ್ತ ಅಧ್ಯಾಪಕರೋರ್ವರು ಇಂದು ಮೃತ ಪಟ್ಟಿದ್ದಾರೆ.
ವರ್ಕಾಡಿ ಗುಡ್ಡೊಡಿಯ ನಾಗಪ್ಪ (68) ಮೃತಪಟ್ಟ ವ್ಯಕ್ತಿ.
ಫೆ. 28ರಂದು ತಲಪಾಡಿ ಟೋಲ್ ಗೇಟ್ ಬಳಿ ಬೈಕ್ ಗಳ ನಡುವೆ ಅಪಘಾತ ನಡೆದು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ನಾಗಪ್ಪ ಅವರು ಕೊಡ್ಲ ಮೊಗರು ವಾಣಿ ವಿಜಯ ಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಮಂಜೇಶ್ವರದ ಮೆಡಿಕಲ್ ಶಾಪ್ ಮಾಲಕರಾಗಿದ್ದರು. ಪ್ರಸ್ತುತ ಎಕ್ಕೂರಿನಲ್ಲಿ ವಾಸವಾಗಿದ್ದರು.