Friday, July 1, 2022

ಜನರಿಗೆ ಟೋಪಿ ಹಾಕಿದ ಭಾಸ್ಕರ್ ಯಾನೆ ಬಶೀರ್: 18 ವರ್ಷದ ನಂತರ ಸುಳ್ಯ ಕೋರ್ಟಿಗೆ ಶರಣು

ಸುಳ್ಯ: 2004ರಲ್ಲಿ ಸುಳ್ಯ ಮರ್ಕಂಜ ಅಂಚೆ ಕಚೇರಿಯಲ್ಲಿ ಆರ್‌.ಡಿ ಮಾಡಿ ಅದನ್ನು ತೆಗೆದುಕೊಂಡು ವಂಚನೆ ಮಾಡಿದ ಆರೋಪಿ ಸುಳ್ಯ ನ್ಯಾಯಾಲಯಕ್ಕೆ 18 ವರ್ಷಗಳ ಬಳಿಕ ಹಾಜರಾಗಿದ್ದಾರೆ.


ಸುಳ್ಯ ಮರ್ಕಂಜ ಗ್ರಾಮದಲ್ಲಿ ಈ ಹಿಂದೆ ವಾಸವಾಗಿದ್ದ ಭಾಸ್ಕರ ಯಾನೆ ಬಶೀರ್ ಮರ್ಕಂಜ ಗ್ರಾಮದ ಅಂಚೆ ಕಚೇರಿಯಲ್ಲಿ ಆರ್‌ಡಿ ಮಾಡಿ ಅದನ್ನು ತಾನೆ ತೆಗೆದು ವಂಚನೆ ಮಾಡಿದ ಬಗ್ಗೆ ಅಂಚೆ ನಿರೀಕ್ಷಕರಾದ ಲಕ್ಷ್ಮೀ ನಾರಾಯಣ ಎಂಬವರು ಸುಳ್ಯ ಠಾಣೆಯಲ್ಲಿ ದೂರು ನೀಡಿದ್ದರು.

ಬಳಿಕ ಆರೋಪಿ ಭಾಸ್ಕರ ಯಾನೆ ಬಶೀರ್ ಈ ಹಿಂದೆ ಮರ್ಕಂಜದಲ್ಲಿ ನೆಲೆಸಿದ್ದ ಅಬೂಬಕ್ಕರ್ ಎಂಬವರ ಮಗಳ ಜತೆ ಮರ್ಕಂಜದಿಂದ ಪರಾರಿಯಾಗಿದ್ದರು.

ಆರೋಪಿ ಪತ್ತೆಗಾಗಿ ಸುಳ್ಯ ಎಸ್ಸೈ ದಿಲೀಪ್, ಎಸ್ಸೈ ಉದಯ ಭಟ್ ಮತ್ತು ಪಿಸಿ ಅನೀಲ್ ಕೇರಳದ ಕ್ಯಾಲಿಕಟ್ ತೆರಳಿದ್ದರು.
ಅಲ್ಲಿ ವಿಚಾರಿಸುವ ಸಂದರ್ಭದಲ್ಲಿ ಆರೋಪಿ ಮತಾಂತರಗೊಂಡು ಬಶೀರ್ ಎಂಬ ಹೆಸರಿನಲ್ಲಿ ಇರುವುದನ್ನು ಪೊಲೀಸರು ಖಚಿತಪಡಿಸಿಕೊಂಡಿದ್ದಾರೆ.

ಕ್ಯಾಲಿಕಟ್‌ಗೆ ತೆರಳಿದ ಸಂದರ್ಭದಲ್ಲಿ ಆರೋಪಿ ಕ್ಯಾಲಿಕಟ್‌ನಿಂದ ತಪ್ಪಿಸಿಕೊಂಡಿದ್ದ ಎನ್ನಲಾಗಿದೆ. ತನ್ನ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎಂಬುದನ್ನು ತಿಳಿದ ಆರೋಪಿ ಏ.29ರಂದು ಸುಳ್ಯ ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪಡೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಮುಲ್ಕಿ: ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿರುವ ಕೃಷಿ ಗ್ರಾಮಗಳಿಗೆ DYFI ನಿಯೋಗ ಭೇಟಿ

ಮಂಗಳೂರು: ಭೂಸ್ವಾಧೀನದ ಉದ್ದೇಶ, ಪುನರ್ವಸತಿಯ ಕುರಿತಾಗಿ ಸ್ಪಷ್ಟ ಮಾಹಿತಿ ಒದಗಿಸದೆ ಸಾವಿರ ಎಕರೆ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿರುವ ಮುಲ್ಕಿ ತಾಲೂಕಿನ ಕೃಷಿ ಪ್ರಧಾನ ಗ್ರಾಮಗಳಾದ ಬಳ್ಕುಂಜೆ, ಐಕಳ, ಕೊಲ್ಲೂರು, ಕರ್ನಿರೆ ಮೊದಲಾದ ಗ್ರಾಮಗಳಿಗೆ...

ಮಹಾರಾಷ್ಟ್ರದಲ್ಲಿ ಬಿಜೆಪಿ ಮೈತ್ರಿ ಸರಕಾರ: ಪುತ್ತೂರಿನಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ

ಪುತ್ತೂರು: ಮಹಾರಾಷ್ಟ್ರದಲ್ಲಿ ಬಿಜೆಪಿ ಹಾಗೂ ಶಿವಸೇನೆಯ ಬಂಡಾಯ ಶಾಸಕರೊಂದಿಗೆ ಮೈತ್ರಿ ಸರಕಾರ ರಚನೆ ಮಾಡಿದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಬಿಜೆಪಿ ಕಛೇರಿಯಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ...

ಬಂಟ್ವಾಳ: ರಸ್ತೆ ಬದಿ ಗುಡ್ಡ ಜರಿದು ವಿದ್ಯುತ್ ಕಂಬಕ್ಕೆ ಹಾನಿ-ರಸ್ತೆ ಸಂಚಾರ ಅಸ್ತವ್ಯಸ್ತ

ಬಂಟ್ವಾಳ : ಧಾರಾಕಾರವಾಗಿ ಸುರಿದ ಮಳೆಗೆ ರಸ್ತೆಯ ಬದಿಯಲ್ಲಿ ಗುಡ್ಡ ಜರಿದು ವಿದ್ಯುತ್ ಕಂಬಕ್ಕೆ ಹಾನಿಯಾಗಿದ್ದಲ್ಲದೆ ಅರ್ಧ ತಾಸಿಗಿಂತಲೂ ಹೆಚ್ಚು ಸಮಯ ರಸ್ತೆ ಸಂಚಾರಕ್ಕೆ ಅಡಚಣೆಯಾದ ಘಟನೆ ಬೆಳ್ತಂಗಡಿ ರಾಷ್ಟ್ರೀಯ ಹೆದ್ದಾರಿಯ ನಾವೂರ,...