Home ಪ್ರಮುಖ ಸುದ್ದಿ ಉಡುಪಿಯ ಬಪ್ಪನಾಡು ಅಮ್ಮನಿಗೆ 12 ಕೆಜಿ ತೂಕದ ಸ್ವರ್ಣ ಪಲ್ಲಕ್ಕಿ

ಉಡುಪಿಯ ಬಪ್ಪನಾಡು ಅಮ್ಮನಿಗೆ 12 ಕೆಜಿ ತೂಕದ ಸ್ವರ್ಣ ಪಲ್ಲಕ್ಕಿ

ಉಡುಪಿಯ ಬಪ್ಪನಾಡು ಅಮ್ಮನಿಗೆ 12 ಕೆಜಿ ತೂಕದ ಸ್ವರ್ಣ ಪಲ್ಲಕ್ಕಿ

ಉಡುಪಿ: ಕರಾವಳಿಯ ಪ್ರಸಿದ್ಧ ದೇವಾಲಯವಾದ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಿಗೆ ಉಡುಪಿಯಲ್ಲಿ ಚಿನ್ನದ ಪಲ್ಲಕ್ಕಿ ಸಿದ್ದಗೊಂಡಿದೆ. ಬರೋಬ್ಬರಿ 12 ಕೆ.ಜಿ ತೂಕದ ಚಿನ್ನ ಬಳಸಿ ದೇವಿಯ ಪಲ್ಲಕ್ಕಿ ಸಿದ್ದಗೊಳಿಸಲಾಗಿದ್ದು, ಸುಮಾರು 5 ಕೋಟಿ ರುಪಾಯಿ ವೆಚ್ಚದಲ್ಲಿ ಈ ಕಲಾತ್ಮಕ ಪಲ್ಲಕಿಯನ್ನು ಸಿದ್ದಗೊಳಿಸಲಾಗಿದೆ.

ದೇವಾಲಯಗಳ ಆಭರಣ, ರಥ ಹಾಗೂ ಪಲ್ಲಕಿ ನಿರ್ಮಾಣಕ್ಕೆ ಹೆಸರುವಾಸಿಯಾದ ಉಡುಪಿಯ ಸ್ವರ್ಣ ಜುವೆಲ್ಲರ್ ಒಂದು ತಿಂಗಳ ಕಾಲಾವಧಿಯಲ್ಲಿ ಪಲ್ಲಕ್ಕಿಯನ್ನು ನಿರ್ಮಾಣ ಮಾಡಿದೆ. ಇಂದು ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಬಪ್ಪನಾಡು ದೇವಸ್ಥಾನ ವೈಭವದ ಮೆರವಣಿಗೆಯಲ್ಲಿ ಪಲ್ಲಕ್ಕಿಯನ್ನು ಕೊಂಡೊಯ್ದು ದೇವಿಗೆ ಅರ್ಪಿಸಲಾಯಿತು.

ಪರಿಶುದ್ಧ 22 ಕ್ಯಾರೆಟ್ ಚಿನ್ನವನ್ನೇ ದೇವಿಯ ಈ ಪಲ್ಲಕ್ಕಿಗೆ ಬಳಸಲಾಗಿದ್ದು, ಮುಂದಿನ ದಿನಗಳಲ್ಲಿ ಇದು ದೇವಿ ಭಕ್ತರ ಆಕರ್ಷಣೆಯ ಕೇಂದ್ರ ಬಿಂದುವಾಗಲಿದೆ ಎಂದೇ ಹೇಳಬಹುದು.

- Advertisment -

RECENT NEWS

ವಿಟ್ಲ ಪೆರುವಾಯಿಯಲ್ಲಿ ಲಾಕ್‌ ಡೌನ್ ಉಲ್ಲಂಘಿಸಿ ವ್ಯವಹಾರ : ಡಿಢೀರ್‌ ದಾಳಿ ನಡೆಸಿದ ಪಿಡಿಒ

ವಿಟ್ಲ ಪೆರುವಾಯಿಯಲ್ಲಿ ಲಾಕ್‌ ಡೌನ್ ಉಲ್ಲಂಘಿಸಿ ವ್ಯವಹಾರ : ಡಿಢೀರ್‌ ದಾಳಿ ನಡೆಸಿದ ಪಿಡಿಒ ಬಂಟ್ವಾಳ : ಲಾಕ್ ಡೌನ್ ಹೆಸರಿನಲ್ಲಿ ಪೆರುವಾಯಿ ವ್ಯವಸಾಯ ಸಹಕಾರಿ ಸಂಘದ ಕಟ್ಟಡದಲ್ಲಿ ಗ್ರಾಮ ಪಂಚಾಯಿತಿ ಅನುಮತಿ ಪಡೆಯದೇ...

ಕೇರಳ ಗಡಿ ದಾಟಿ ಬಂದ ಮಹಿಳೆಯಲ್ಲಿ ಕೊರೋನಾ ಸೋಂಕು : ಆತಂಂಕದಲ್ಲಿ ಮಂಗಳೂರು ಜನತೆ..!!?

ಕೇರಳ ಗಡಿ ದಾಟಿ ಬಂದ ಮಹಿಳೆಯಲ್ಲಿ ಕೊರೋನಾ ಸೋಂಕು : ಆತಂಂಕದಲ್ಲಿ ಮಂಗಳೂರು ಜನತೆ..!!? ಮಂಗಳೂರು : ಕೇರಳ ಗಡಿ ತೆರವಿನಿಂದ ಮಂಗಳೂರಿಗರಿಗೆ ಮತ್ತೆ ಆತಂಕ ಶುರುವಾಗಿದೆ. ಕಾಸರಗೋಡಿನಿಂದ ಚಿಕಿತ್ಸೆಗಾಗಿ ಬಂದಿದ್ದ ಮಹಿಳೆಯಲ್ಲಿ...

ಖಾಸಾಗಿ ಆಸ್ಪತ್ರೆ- ಲ್ಯಾಬ್‌ಗಳಲ್ಲಿ ಕೊರೊನಾ ವೈರಸ್‌ ಪರೀಕ್ಷೆಗಳಿಗೆ ಹಣ ಪಡೆಯುವಂತಿಲ್ಲ : ಸುಪ್ರೀಂ ಕೋರ್ಟ್

ಖಾಸಾಗಿ ಆಸ್ಪತ್ರೆ- ಲ್ಯಾಬ್‌ಗಳಲ್ಲಿ ಕೊರೊನಾ ವೈರಸ್‌ ಪರೀಕ್ಷೆಗಳಿಗೆ ಹಣ ಪಡೆಯುವಂತಿಲ್ಲ : ಸುಪ್ರೀಂ ಕೋರ್ಟ್ ನವದೆಹಲಿ : ಇನ್ನು ಮುಂದೆ ಕೊರೋನಾ ಸೋಂಕಿಗೆ ಸಂಬಂಧಿಸಿದ ಪರೀಕ್ಷೆಗಳು ಸಂಪೂರ್ಣ ಉಚಿತ. ಹೀಗೆಂತಾ ಸರ್ವೋಚ್ಚಾ ನ್ಯಾಯಾಲಯದ ಮಹತ್ವದ...

ಲಾಕ್ ಡೌನ್ ನಡುವೆ ಬಂಟ್ವಾಳ ಚರ್ಚಿನಲ್ಲಿ ಕಳ್ಳರ ಕೈಚಳಕ : ಮೂರು ಹುಂಡಿಗಳಿಗೆ ಕನ್ನ..!

ಲಾಕ್ ಡೌನ್ ನಡುವೆ ಬಂಟ್ವಾಳ ಚರ್ಚಿನಲ್ಲಿ ಕಳ್ಳರ ಕೈಚಳಕ : ಮೂರು ಹುಂಡಿಗಳಿಗೆ ಕನ್ನ..! ಬಂಟ್ವಾಳ : ಲಾಕ್ ಡೌನ್ ನಡುವೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳರ ಕೈಚಳ ಮುಂದುವರೆದಿದೆ.ಬಂಟ್ವಾಳದ ಚರ್ಚ್ ಒಂದಕ್ಕೆ ನುಗ್ಗಿದ...