Home ಪ್ರಮುಖ ಸುದ್ದಿ ಉಳ್ಳಾಲ ಠಾಣೆಯಲ್ಲಿ ಕೊರೊನಾ ಆರ್ಭಟ: 10 ಆರಕ್ಷಕರು, ಇಬ್ಬರು ಆರೋಪಿಗಳ ಸಹಿತ 12 ಮಂದಿಗೆ ಪಾಸಿಟಿವ್...

ಉಳ್ಳಾಲ ಠಾಣೆಯಲ್ಲಿ ಕೊರೊನಾ ಆರ್ಭಟ: 10 ಆರಕ್ಷಕರು, ಇಬ್ಬರು ಆರೋಪಿಗಳ ಸಹಿತ 12 ಮಂದಿಗೆ ಪಾಸಿಟಿವ್ ..!!

ಉಳ್ಳಾಲ ಠಾಣೆಯಲ್ಲಿ ಕೊರೊನಾ ಆರ್ಭಟ: 10 ಆರಕ್ಷಕರು, ಇಬ್ಬರು ಆರೋಪಿಗಳ ಸಹಿತ 12 ಮಂದಿಗೆ ಪಾಸಿಟಿವ್ ..!!

ಉಳ್ಳಾಲ: ಮಂಗಳೂರಿನ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕೋವಿಡ್-19 ಸೋಂಕಿನ ಆರ್ಭಟ ಮತ್ತೆ ಮುಂದುವರಿದಿದೆ.

ಈ ಮೊದಲು ಆರು ಮಂದಿಗೆ ಸೋಂಕು ದೃಢವಾಗಿದ್ದರೆ, ಇಂದು ಮತ್ತೆ ಆರು ಜನರ ದೇಹಕ್ಕೆ ಕೋವಿಡ್ -19 ಸೋಂಕು ಲಗ್ಗೆಯಿಟ್ಟಿದೆ.

ಇಂದು (ಜೂನ್ 29) ಠಾಣೆಯ ಓರ್ವ ಹೋಂ ಗಾರ್ಡ್ ಮತ್ತು ಐವರು ಪೊಲೀಸ್ ಸಿಬ್ಬಂದಿಗೆ ಕೋವಿಡ್-19 ಸೋಂಕು ದೃಢವಾಗಿದೆ.

ಇದರಿಂದ ಠಾಣೆಯ ಹತ್ತು ಆರಕ್ಷಕರು ಮತ್ತು ಇಬ್ಬರು ಆರೋಪಿಗಳ ಸಹಿತ ಹನ್ನೆರಡು ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಈ ಹಿಂದೆ ಠಾಣೆಯ ಎಸ್ ಐ, ಎಎಸ್ ಐ, ಇಬ್ಬರು ಡ್ರೈವರ್ ಗಳು ಮತ್ತು ಠಾಣೆಯಲ್ಲಿದ್ದ ಇಬ್ಬರು ಆರೋಪಿಗಳಿಗೆ ಕೋವಿಡ್-19 ಸೋಂಕು ತಾಗಿತ್ತು.

ಸದ್ಯ ಠಾಣೆಯನ್ನು ಭಾಗಶಃ ಸೀಲ್ ಡೌನ್ ಮಾಡಲಾಗಿದೆ. ಸಿಬ್ಬಂದಿಗಳ ಜೊತೆಗೆ ತಲವಾರು ದಾಳಿ ನಡೆಸಿದ್ದ ಇಬ್ಬರು ಆರೋಪಿಗಳಿಗೆ ಕೊರೊನಾ ಪಾಸಿಟಿವ್ ಬಂದಿದೆ.

ಒಬ್ಬರು ಜೂ.20ರಂದು ವ್ಯಾಪಾರಿ ಮೇಲೆ ತಲವಾರು ದಾಳಿ ಮಾಡಿದ್ದ. ತೊಕ್ಕೊಟ್ಟು ಒಳಪೇಟೆ ಬಳಿ ದಾಳಿ ನಡೆಸಿ ಬಂಧನಕ್ಕೆ ಒಳಗಾಗಿದ್ದರು. ಇವರಿಬ್ಬರು ಉಳ್ಳಾಲ ಪೊಲೀಸ್ ಠಾಣೆಯ ಸೆಲ್‌ನಲ್ಲಿದ್ದ ಇಬ್ಬರು

ಇನ್ನು ಉಳ್ಳಾಲ ಕ್ಷೇತ್ರ ವ್ಯಾಪ್ತಿಯಲ್ಲಿ ಡೆಡ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ.

ಇದುವರೆಗೆ ಕ್ಷೇತ್ರದಲ್ಲಿ 47 ಜನರಿಗೆ ಕೋವಿಡ್ -19 ಸೋಂಕು ದೃಢವಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಇಂದು ಮುಂಜಾನೆ 60 ವರ್ಷದ ಮಹಿಳೆ ಸೋಂಕಿಗೆ ಬಲಿಯಾಗಿದ್ದಾರೆ.

RECENT NEWS

ನಾಳೆ ಮಂಗಳವಾರ 11:30ಕ್ಕೆ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ..!

ನಾಳೆ ಮಂಗಳವಾರ 11:30ಕ್ಕೆ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ..! ಬೆಂಗಳೂರು : ರಾಜ್ಯ ದ್ವಿತೀಯ ಪಿಯುಸಿ ಪರೀಕ್ಷೆಗಳ ಫಲಿತಾಂಶ  ನಾಳೆ ಮಂಗಳವಾರ  ಪ್ರಕಟವಾಗಲಿದೆ. ಈ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್...

ಉಡುಪಿ ಜಿಲ್ಲೆಗೆ ಸದ್ಯಕ್ಕೆ ಲಾಕ್ಡೌನ್ ಅಗತ್ಯವಿಲ್ಲ – ರಘುಪತಿ ಭಟ್

ಉಡುಪಿ : ಉಡುಪಿ ಜಿಲ್ಲೆ ಸದ್ಯಕ್ಕೆ ಲಾಕ್ಡೌನ್ ಅಗತ್ಯವಿಲ್ಲ ಅಂತ ಶಾಸಕ ರಘುಪತಿ ಭಟ್ ಹೇಳಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಅವರು ಜನಜೀವನ ಈಗಷ್ಟೇ ಚೇತರಿಸಿಕೊಳ್ಳುತ್ತಿದೆ. ಮತ್ತೆ ಲಾಕ್ಡೌನ್ ಮಾಡಿದರೆ ಆರ್ಥಿಕತೆಯ ಮೇಲೆ ಭಾರಿ ಹೊಡೆತ ಬೀಳಲಿದೆ....

ಗುರುವಾರದಿಂದ ಒಂದು ವಾರ ದಕ್ಷಿಣಕನ್ನಡ ಜಿಲ್ಲೆ ಲಾಕ್ ಡೌನ್

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿರುವ ಕೊರೊನಾ ಸೋಂಕು ಆತಂಕಕ್ಕೆ ಕಾರಣವಾಗಿರುವ ಹಿನ್ನಲೆಯಲ್ಲಿ ಜುಲೈ 16 ರಿಂದ ಜಿಲ್ಲೆಯಲ್ಲಿ ಒಂದು ವಾರಗಳ ಕಾಲ ಲಾಕ್ ಡೌನ್ ಜಾರಿಗೆ ತರಲಾಗುವುದು...

ಪಾಣೆಮಂಗಳೂರು ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಮಹಿಳೆ ಶವ ಪತ್ತೆ

ಬಂಟ್ವಾಳ: ಪಾಣೆ ಮಂಗಳೂರು ನೂತನ ಸೇತುವೆಯಿಂದ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಮಹಿಳೆಯ ಮೃತ ದೇಹ ಇಂದು ಪತ್ತೆಯಾಗಿದೆ. ಮೃತ ಮಹಿಳೆಯನ್ನು ಮೂಡ ಗ್ರಾಮದ ನಿವಾಸಿ ಗೋಪಿ ಪೂಜಾರಿ(49) ಎಂದು ಗುರುತಿಸಲಾಗಿದೆ. ಇವರು...
error: Content is protected !!