Connect with us

LATEST NEWS

ಚಾಲಕನ ನಿಯಂತ್ರಣ ತಪ್ಪಿ ಇನೋವಾ ಕಾರು ಪಲ್ಟಿ; ಯುವತಿ ಸಾವು!

Published

on

ಕುಂದಾಪುರ: ಇನೋವಾ ಕಾರೊಂದು ಮರಕ್ಕೆ ಡಿಕ್ಕಿಯಾಗಿ ಹೊಂಡಕ್ಕೆ ಬಿದ್ದ ಪರಿಣಾಮ ಯುವತಿಯೊಬ್ಬಳು ಸ್ಥಳದಲ್ಲೇ ಸಾವಿಗೀಡಾದ ಘಟನೆ ಕುಂದಾಪುರ ಸಮೀಪದ ಹುಣ್ಸೆಮಕ್ಕಿ ಬಳಿಯ ಗುಡ್ಡೆಯಂಗಡಿಯಲ್ಲಿ ನಡೆದಿದೆ. ಬೆಂಗಳೂರಿನ ಫೋನ್ ಪೇ ಖಾಸಗಿ ಕಂಪೆನಿಯ ಉದ್ಯೋಗಿ 25 ವರ್ಷದ ಕೀರ್ತಿ ಮೃತ ಯುವತಿ. ಘಟನೆಯಲ್ಲಿ ಬೆಂಗಳೂರು ಮೂಲದ ವಿಘ್ನೇಶ್ (28), ಚೇತನ್ (28), ಐಶ್ವರ್ಯಾ (27), ಲತಾ (26) ಗಂಭೀರವಾಗಿ ಗಾಯಗೊಂಡಿದ್ದಾರೆ.

ಮುಂದೆ ಓದಿ..; ಅಮೇರಿಕಾದಲ್ಲಿ ಕಾರು ಅಪಘಾತ…! ಮೂವರು ಭಾರತೀಯ ಮಹಿಳೆಯರ ಸಾ*ವು…!

ಧರ್ಮಸ್ಥಳದಿಂದ ಮುರುಡೇಶ್ವರಕ್ಕೆ ಹೊರಟಿದ್ದ ಇನೋವಾ ಕಾರು ಕುಂದಾಪುರ ಸಮೀಪದ ಹುಣ್ಸೆಮಕ್ಕಿ ಬಳಿಯ ಗುಡ್ಡೆಯಂಗಡಿಯಲ್ಲಿ ನಿಯಂತ್ರಣ ತಪ್ಪಿ ಮರದ ದಿಮ್ಮಿಗೆ ಡಿಕ್ಕಿ ಹೊಡೆದಿದೆ. ಬಳಿಕ ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಗಾಯಾಳುಗಳನ್ನು ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನ ಅತಿವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗಿದೆ. ಸ್ನೇಹಿತರು ಖಾಸಗಿ ಕಂಪೆನಿಯ ಉದ್ಯೋಗಿಗಳಾಗಿದ್ದು, ಎಲ್ಲರೂ ಒಟ್ಟಾಗಿ ಮುರ್ಡೇಶ್ವರ, ಗೋಕರ್ಣಕ್ಕೆ ವೀಕೆಂಡ್ ಪ್ರವಾಸಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ.

accident

FILM

ಬದುಕುಳಿವ ಛಾನ್ಸ್ ಇದ್ದಿದ್ದು ಕೇವಲ ಶೇ. 30 ರಷ್ಟು…ನಿತ್ಯ ಜಗಳ…ಗಾಬರಿ; ನಟಿ ಸೋನಾಲಿ ಬೇಂದ್ರೆ ಕ್ಯಾನ್ಸರ್ ಗೆದ್ದ ಕಥೆ ಇಲ್ಲಿದೆ

Published

on

ಮುಂಬೈ : ಕ್ಯಾನ್ಸರ್ ಎಂಬ ಮಾರಕ ಕಾಯಿಲೆಯಿಂದ ಅನೇಕ ಮಂದಿ ಬಳಲುತ್ತಿದ್ದಾರೆ. ಕೆಲವರು ಇಹಲೋಕ ತ್ಯಜಿಸಿದ್ದಾರೆ. ಇನ್ನು ಕೆಲವರು ಕ್ಯಾನ್ಸರ್ ಗೆ ಸೆಡ್ಡು ಹೊಡೆದು ಜಯಿಸಿದವರಿದ್ದಾರೆ. ಕ್ಯಾನ್ಸರ್ ಗೆ ಸಾಮಾನ್ಯ ವ್ಯಕ್ತಿ ಮಾತ್ರವಲ್ಲ ಸೆಲೆಬ್ರಿಟಿಗಳೂ ತುತ್ತಾಗಿದ್ದಾರೆ. ಅವರಲ್ಲಿ ಸೋನಾಲಿ ಬೇಂದ್ರೆಯೂ ಒಬ್ಬರು. ಸೋನಾಲಿ ಬೇಂದ್ರೆ ಕ್ಯಾನ್ಸರ್ ನ್ನು ಜಯಿಸಿದ್ದಾರೆ.

ಧೈರ್ಯ ತುಂಬಿದ ನಟಿ :

ನಟಿ ಸೋನಾಲಿ ಬೇಂದ್ರೆ ಕ್ಯಾನ್ಸರ್ ನ್ನು ಯಶಸ್ವಿಯಾಗಿ ಜಯಿಸಿದ್ದಾರೆ. ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ. ಆರು ವರ್ಷಗಳ ಹಿಂದೆ ಸೋನಾಲಿ ಬೇಂದ್ರೆ ಅವರನ್ನು ಕ್ಯಾನ್ಸರ್ ಖಾಯಿಲೆ ಅಪ್ಪಿಕೊಂಡಿತ್ತು. ಆಗ ಆಕೆಗೆ 49 ವರ್ಷ ವಯಸ್ಸು.

ಸಾಮಾನ್ಯವಾಗಿ ಕ್ಯಾನ್ಸರ್ ಎಂದಾಕ್ಷಣ ಭಯ ಆವರಿಸಿಕೊಳ್ಳುತ್ತೆ. ಆದರೆ, ಸೋನಾಲಿ ಧೃತಿಗೆಡಲಿಲ್ಲ. ಯಾವಾಗ ತನಗೆ ಕ್ಯಾನ್ಸರ್ ಇದೆ ಅಂತ ಗೊತ್ತಾಗಿತ್ತೋ ಅಂದೇ ಆಕೆ ತನ್ನ ಪರಿಸ್ಥಿತಿ ಮತ್ತು ಗುಣಮುಖವಾಗುವ ವಿಚಾರವಾಗಿ ಬಹಿರಂಗವಾಗಿ ಚರ್ಚೆ ಮಾಡಿದ್ದರು. ಆ ಮೂಲಕ ಕ್ಯಾನ್ಸರ್ ಪೀಡಿತರಿಗೂ ಧೈರ್ಯ ತುಂಬುವ ಕೆಲಸವನ್ನು ಮಾಡಿದ್ದರು.

ಇದೀಗ ಸೊನಾಲಿ ಬೇಂದ್ರೆ ಮೇ 3 ರಂದು ಆರಂಭವಾಗಿರುವ ಝೀ ಟಿವಿಯ ದಿ ಬ್ರೋಕನ್ ನ್ಯೂಸ್ 2 ನೊಂದಿಗೆ ಮತ್ತೆ ಕ್ಯಾಮೆರಾ ಮುಂದೆ ಕಾಣಿಸಿದ್ದಾರೆತಾನು ಕ್ಯಾನ್ಸರ್ ಜೊತೆ ಹೇಗೆ ಹೋರಾಡಿದೆ ಎಂಬುದರ ಕುರಿತು ಆಕೆ ಬಹಿರಂಗವಾಗಿ ಮಾತನಾಡಿದ್ದಾರೆ.

ನಿತ್ಯ ಜಗಳ…ಗಾಬರಿ…ಕ್ಯಾನ್ಸರ್ ಜಯಿಸಿದ್ದು ಹೇಗೆ?

ಕ್ಯಾನ್ಸರ್ ನಿಂದ ಬಳಲಿದ ನಟಿ ಗುಣಮುಖರಾಗಿದ್ದು ಹೇಗೆ ಅನ್ನೋದನ್ನು ಸಂದರ್ಶನವೊಂದರಲ್ಲಿ ಬಹಿರಂಗವಾಗಿಯೇ ಹೇಳಿದ್ದಾರೆ. ರಿಯಾಲಿಟಿ ಶೋ ಚಿತ್ರೀಕರಣದ ಸಮಯದಲ್ಲಿ ನನಗೆ ಕ್ಯಾನ್ಸರ್ ಇದೆ ಅನ್ನೋದು ಗೊತ್ತಾಗಿತ್ತು. ನನಗೆ ಇದು ಆಶ್ಚರ್ಯದ ವಿಚಾರವಾಗಿದ್ದು, ನನಗೆ ಕ್ಯಾನ್ಸರ್ ಹೇಗೆ ಬಂತು ಅನ್ನೋ ಗೊಂದಲಕ್ಕೆ ಬಿದ್ದಿದ್ದೆ. ಆರಂಭದಲ್ಲಿ ಇದೊಂದು ಆರಂಭ ಅಂತ ಗಾಬರಿಯಾಗಿಲ್ಲವಾದ್ರೂ ಪರೀಕ್ಷೆಗಳು ಮುಂದುವರೆದಾಗ ಇದು ಗಂಭೀರ ಅನ್ನೋದು ಗೊತ್ತಾಗಿತ್ತು. ನನ್ನ ಪತಿ ಮತ್ತು ವೈದ್ಯರ ಮುಖದಲ್ಲೂ ಆ ಗಾಬರಿಯನ್ನು ನಾನು ಗುರುತಿಸಿದ್ದೆ. ಕ್ಯಾನ್ಸರ್ ನನ್ನ ದೇಹವನ್ನು ವ್ಯಾಪಿಸಿಕೊಂಡಿದೆ ಅನ್ನೋದು ನನಗೆ ಆಗ ಸ್ಪಷ್ಟವಾಗಿ ಅರ್ಥವಾಗಿತ್ತು.

ಕ್ಯಾನ್ಸರ್ ಇದೆ ಅಂತ ಗೊತ್ತಾದಾಗಿನಿಂದ ಸೊನಾಲಿ ಬೇಂದ್ರೆ ಭಯವನ್ನು ದೂರಮಾಡಲು ಉಪಾಯ ಹೂಡಿದ್ದರು. ಅದೇ ನಿದ್ದೆ ಮಾಡುವುದು. ನಿದ್ರೆ ಮಾಡುವ ಮೂಲಕ ಅವರು ಕ್ಯಾನ್ಸರ್ ಭಯವನ್ನು ಮನಸ್ಸಿನಿಂದ ಕಿತ್ತು ಹಾಕಲು ಪ್ರಯತ್ನಪಟ್ಟಿದ್ದರಂತೆ. ಇನ್ನು ಮಾನಸಿಕವಾಗಿ ಕುಗ್ಗಿ ಹೋಗಿದ್ದ ಕಾರಣ ಮನೆಯಲ್ಲಿ ನಿತ್ಯ ಜಗಳ ನಡೆಯುತ್ತಿತ್ತು.

ಇದನ್ನೂ ಓದಿ : “ನಿವೇದಿತಾಜೈನ್”ಗೆ ಸಾ*ವಿನ ಸುಳಿವು ಮೊದಲೇ ಇತ್ತಾ.!? ಈಬಗ್ಗೆ ನಿವೇದಿತಾ ತಾಯಿ ಹೇಳಿದ್ದೇನು ಗೊತ್ತಾ?

ಮಗುವನ್ನು ಬಿಟ್ಟು ವಿದೇಶಕ್ಕೆ ಚಿಕಿತ್ಸೆಗೆ ಹೋಗಬೇಕಾಗಿ ಬಂದ ದಿನ ಬಹಳ ದುಃಖಕರವಾಗಿತ್ತು ಎಂದಿದ್ದಾರೆ. ನಾನು ಬದುಕುವುದು ಕೇವಲ 30 ಶೇಕಡಾ ಮಾತ್ರ ಇದೆ ಅಂತ ಗೊತ್ತಾದಾಗ ವೈದ್ಯರ ಜೊತೆ ತಾಳ್ಮೆ ಕಳೆದುಕೊಂಡಿದ್ದೆ ಎಂದು ಹೇಳಿದ್ದಾರೆ.
ನಾನು ವೈದ್ಯರಲ್ಲಿ ಪದೇ ಪದೇ ನನಗೆ ಕ್ಯಾನ್ಸರ್ ಬರಲು ಹೇಗೆ ಸಾಧ್ಯ ಎಂದು ಕೇಳುತ್ತಿದ್ದೆ. ಆದ್ರೆ ಅವರು ನನಗೆ ನಿಧಾನವಾಗಿ ಎಲ್ಲಾ ಸತ್ಯಗಳನ್ನು ಹೇಳುತ್ತಿದ್ದರು. ಆ ಕಾರಣದಿಂದ ನನ್ನನ್ನು ನಾನು ಬದಲಾಯಿಸಿಕೊಂಡೆ ಎಂದು ಹೇಳಿದ್ದಾರೆ.

ಬಳಿಕ ಚಿಕಿತ್ಸೆಯನ್ನು ಮುಂದುವರೆಸಿದ್ದ ಸೊನಾಲಿ ಬೇಂದ್ರೆ ದೇಹ ಸಾಕಷ್ಟು ಜರ್ಜರಿತವಾಗಿತ್ತು ಎಂದು ತಿಳಿಸಿದ್ದಾರೆ. ಇದೀಗ ಕ್ಯಾನ್ಸರ್ ನ್ನು ಗೆದ್ದು ಬಂದಿದ್ದಾರೆ. ಮತ್ತೆ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ತಮ್ಮ ಕ್ಯಾನ್ಸರ್ ಅನುಭವವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

Continue Reading

FILM

ಇಂಡೊನೇಷಿಯಾದಲ್ಲಿ ತುಳು ಮಾತನಾಡಿದ ಡಾ ಬ್ರೋ..! ಸಖತ್ ವೈರಲ್ ಆಯ್ತು ವೀಡಿಯೋ

Published

on

ಮಂಗಳೂರು: ಡಾ ಬ್ರೋ ಖ್ಯಾತಿಯ ಗಗನ್ ಶ್ರೀನಿವಾಸ್ ಯಾರಿಗೆ ಗೊತ್ತಿಲ್ಲ ಹೇಳಿ. ಪುಟ್ಟ ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೂ ಡಾ ಬ್ರೋ ಅಂದ್ರೆ ಎಲ್ಲರಿಗೂ ಚಿರಪರಿಚಿತ. ಹೌದು, ಪ್ರಪಂಚದ ನಾನಾ ದೇಶಗಳಿಗೆ ಪ್ರವಾಸವನ್ನು ಕೈಗೊಂಡು ಅಲ್ಲಿನ ಆಚಾರ ವಿಚಾರ ಹಾಗೂ ಸ್ಥಳಗಳನ್ನು ಎಲ್ಲರಿಗೂ ಪರಿಚಯ ಮಾಡಿಸ್ತಾರೆ. ಇನ್ನು ಕನ್ನಡದಲ್ಲಿ ಅವರ ಭಾಷಾ ಹಿಡಿತ ಎಲ್ಲರಿಗೂ ಅಚ್ಚುಮೆಚ್ಚು. ಅವರದ್ದೇ ಆದ ಶೈಲಿಯಲ್ಲಿ ಮನಮುಟ್ಟುವಂತೆ ಸ್ಪಷ್ಟ ವಿವರಣೆ ನೀಡ್ತಾರೆ.

ಇಂಡೋನೇಷ್ಯಾದಲ್ಲಿ ತುಳು ಮಾತಾನಾಡಿದ ಡಾ.ಬ್ರೋ:

ಡಾ ಬ್ರೋ ಇಂಡೋನೇಷಿಯಾ ಪ್ರವಾಸ ಕೈಗೊಂಡಿರುವ ಸಮಯದಲ್ಲಿ ತುಳು ಭಾಷೆಯಲ್ಲಿ ಮಾತನಾಡಿದ್ದಾರೆ. ಅಲ್ಲಿನ ಜನರಲ್ಲಿ ತುಳು ಭಾಷೆಯಲ್ಲಿ ‘ಹಾಯ್ ಎಂಚ ಉಲ್ಲರ್’ ಎಂದು ಕೇಳಿದ್ದು ಇದೀಗ  ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.   ಈ ಹಿಂದೆ ಡಾ. ಬ್ರೋ ಮಂಗಳೂರಿಗೆ ಭೇಟಿ ನೀಡಿದ್ದ ವೇಳೆ ‘ಎಂಚ ಉಲ್ಲರ್’ ಎಂಬ ಪದವನ್ನು ತುಳು ಕಂಟೆಂಟ್ ಕ್ರಿಯೇಟರ್ ಶರಣ್ ಚಿಲಿಂಬಿ ಕಲಿಸಿಕೊಟ್ಟಿದ್ದರು.

gagan

ಇದೀಗ ಗಗನ್ ಶ್ರೀನಿವಾಸ್‌ರವರು ಇಂಡೋನಿಷಿಯಾದ ಜನರಿಗೆ ತುಳುವಿನಲ್ಲಿ ‘ಎಂಚ ಉಲ್ಲರ್’ ಎಂದು ಕೇಳಿದ್ದು ಇವರ ತುಳು ಭಾಷಾ ಪ್ರೇಮಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಯ್ ಹೆಲೋ..ಎಂದು ಹೇಳದೆ ತುಳುವಿನಲ್ಲಿ ಎಂಚ ಉಲ್ಲರ್ ಎಂದು ಕೇಳಿದ್ದು ಜನರಲ್ಲಿ ಸಂತಸ ವ್ಯಕ್ತವಾಗಿದೆ. ಇದೀಗ ಈ ವೀಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ವರ್ತೂರು ಸಂತೋಷ್​​ ತೋಟದಲ್ಲಿ ಮತ್ತೆ ಸೇರಿದ ಬಿಗ್​​ಬಾಸ್​ ಸ್ಪರ್ಧಿಗಳು

ಗಗನ್ ಶ್ರೀನಿವಾಸ್ 2018 ರಲ್ಲಿ ಡಾ. ಬ್ರೋ ಎಂಬ ಹೆಸರಿನಲ್ಲಿ ಹೊಸ ಯೂಟ್ಯೂಬ್ ಚಾನೆಲ್ ಅನ್ನು
ಪ್ರಾರಂಭ ಮಾಡ್ತಾರೆ. ಆರಂಭದ ದಿನಗಳಲ್ಲಿ ಹಾಸ್ಯ ವೀಡಿಯೊಗಳು ಮತ್ತು ಸಂದರ್ಶನ ವೀಡಿಯೊಗಳನ್ನು ಮಾಡುತ್ತಿದ್ದರು, ನಂತರ ಅವರು ಕರ್ನಾಟಕದಲ್ಲಿ ಮಾತ್ರ ವ್ಲಾಗ್ ಮಾಡಲು ಪ್ರಾರಂಭಿಸಿದರು. ನಿಧಾನವಾಗಿ ಭಾರತದೆಲ್ಲೆಡೆ ವ್ಲಾಗ್ ಮಾಡಲು ಪ್ರಾರಂಭಿಸಿದರು. ಇದೀಗ ಭಾರತವೂ ಸೇರಿ ಪ್ರಪಂಚದ ಮೂಲೆ ಮೂಲೆಗಳಿಗೆ ಸಂಚರಿಸಿ ವ್ಲಾಗ್ ಮಾಡುತ್ತಿದ್ದಾರೆ.

Continue Reading

LATEST NEWS

ಮದುವೆಯಾದ ಕೆಲವೇ ಗಂಟೆಗಳಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ

Published

on

ಮದುವೆ ದಿನ ಎಂದರೆ ಪ್ರತಿಯೊಬ್ಬರಿಗೂ ತುಂಬಾ ವಿಶೇಷವಾದ ದಿನ. ಎರಡು ಜೀವಗಳು ಬೆಸೆಯುವ ಕ್ಷಣಗಳು. ಜೀವನದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸುವ ವಿಶೇಷ ದಿನದಂದು ಉತ್ಸಾಹ, ಖುಷಿ, ಕುತೂಹಲ ಸೇರಿದಂತೆ ಹಲವು ಭಾವನೆಗಳು ಒಟ್ಟೊಟ್ಟಿಗೆ ಸಂಭವಿಸುತ್ತಿರುತ್ತದೆ. ಜೀವವಿರುವವರೆಗೂ ಈ ದಿನ ದಂಪತಿಗಳಿಗೆ ತುಂಬಾ ವಿಶೇಷ ದಿನವಾಗಿರುತ್ತದೆ. ಇಂತಹ ಮದುವೆ ದಿನವೇ ಪ್ಲೊರಿಡಾದ ಮಹಿಳೆಯೊಬ್ಬರಿಗೆ ಡಬಲ್ ಖುಷಿ ಸಿಕ್ಕಿದೆ.

ಫ್ಲೋರಿಡಾದ ಬ್ರಿಯಾನಾ ಲುಕ್ಕಾ-ಸೆರೆಜೊ:

ಫ್ಲೊರಿಡಾದ ಮಹಿಳೆಯೊಬ್ಬರು ತಮ್ಮ ನೆಚ್ಚಿನ ವರನ ಜೊತೆ ಮದುವೆಯನ್ನು ಸಿಟಿ ಹಾಲ್ ನಲ್ಲಿ ತುಂಬಾ ವಿಶೇಷವಾಗಿ ಮಾಡಿಕೊಳ್ಳಲು ಪ್ಲ್ಯಾನ್ ಮಾಡಿದ್ದರು. ಫ್ಲೋರಿಡಾದ ಬ್ರಿಯಾನಾ ಲುಕ್ಕಾ-ಸೆರೆಜೊ ಎಂಟು ತಿಂಗಳ ಗರ್ಭಿಣಿಯಾಗಿದ್ದರು. ಮದುವೆ ದಿನದ ಮುಂಚಿನ ದಿನ ಈಕೆ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದ ವೈದ್ಯರು ಉಸಿರಾಟಕ್ಕೆ ಸಂಬಂಧಿಸಿದ ರೆಸ್ಪಿರೇಟರಿ ಸಿಂಕಿಟಿಯಲ್ ವೈರಸ್ ಸೋಂಕಿನಿಂದ ಅನಾರೋಗ್ಯಕ್ಕೀಡಾಗಿರುವುದಾಗಿ ತಿಳಿಸಿದ್ದಾರೆ. ಗರ್ಭಿಣಿ ಆರೋಗ್ಯ ತೀವ್ರವಾಗಿ ಹದಗೆಟ್ಟಿದ್ದ ಕಾರಣ ವೈದ್ಯರು ಚಿಕಿತ್ಸೆ ನೀಡಲು ಮುಂದಾಗಿದ್ದರು.

ಹೆರಿಗೆ ಟೈಂನಲ್ಲೂ ಬ್ರಿಯನ್ನಾ ಜೊತೆ ನಿಶ್ಚಿತ ವರ ಜೊತೆಯಲ್ಲೇ ಇದ್ದು ಲೇಬರ್ ವಾರ್ಡ್ ಗೆ ಕರೆದುಕೊಂಡು ಹೋಗಿದ್ದಾರೆ. ಈಗ ನರ್ಸ್ ಗಳು ಸಾಮಾನ್ಯವಾಗಿ ಕೇಳುವಂತೆ ಮದುವೆಯಾಗಿದ್ಯಾ ಎಂಬ ಪ್ರಶ್ನೆಗಳು ಕೇಳಿದ್ದಾರೆ. ಆಗ ನಾಳೆಯೇ ಮದುವೆ ದಿನ ಎಂದು ಆಸ್ಪತ್ರೆ ಸಿಬ್ಬಂದಿ ಬಳಿ ಬ್ರಿಯಾನ್ನಾ ಹೇಳಿಕೊಂಡಿದ್ದಾರೆ.

ಆಸ್ಪತ್ರೆಯಲ್ಲಿ ವಿವಾಹವಾದ ವಧು-ವರರು:

ವಿಷಯ ತಿಳಿದ ಕೂಡಲೇ ಆಸ್ಪತ್ರೆ ಸಿಬ್ಬಂದಿಯು ಈ ಜೋಡಿಗೆ ಸಹಾಯ ಮಾಡಿದ್ದಾರೆ. ಈ ಜೋಡಿಗೆ ಮದುವೆ ಮಾಡಿಸಲು ಆಸ್ಪತ್ರೆಯಲ್ಲಿ ತರಾತುರಿಯಾಗಿ ಆಸ್ಪತ್ರೆ ಸಿಬ್ಬಂದಿಯೇ ತಯಾರಿ ಮಾಡಿದ್ದಾರೆ. ಬ್ರಿಯಾನ್ನ ಅವರು ಆರೋಗ್ಯದ ಬಗ್ಗೆ ಗಮನಹರಿಸುವುದರ ಜೊತೆಗೆ ಆಸ್ಪತ್ರೆ ಸಿಬ್ಬಂದಿ ವಿವಾಹ ಸಮಾರಂಭವನ್ನು ಆಯೋಜಿಸುವುದಕ್ಕೆ ನಿರ್ಧರಿಸಿದ್ದಾರೆ.
ನರ್ಸ್ ಒಬ್ಬರು ವಧುವಿಗೆ ಬೇಕಾದಂತ ಮದುವೆ ಗೌನ್ ಅನ್ನು ಬರೀ ಪೇಪರ್ ಗಳನ್ನು ಬಳಸಿ ಕೇವಲ 30 ನಿಮಿಷಗಳಲ್ಲಿ ಅದ್ಭುತವಾಗಿ ವಿನ್ಯಾಸಗೊಳಿಸಿದ್ದಾರೆ. ಅದೃಷ್ಠವಶಾತ್ ಬ್ರಿಯಾನ್ನಾ ತಮ್ಮ ಮದುವೆಗೆ ಬೇಕಾಗಿದ್ದ ಪರವಾನಗಿ ಹಾಗೂ ವೆಡ್ಡಿಂಗ್ ರಿಂಗ್ ಸಹ ಆಸ್ಪತ್ರೆಗೆ ತಂದಿದ್ದ ಬ್ಯಾಗ್ ನಲ್ಲಿ ಇಟ್ಟುಕೊಂಡಿದ್ದರು.

ಬ್ರಿಯಾನ್ನ ಆಸೆಯಂತೆ, ಮೊದಲೇ ನಿಶ್ಚಿಯಿಸಿದ ದಿನಾಂಕದಲ್ಲೇ ಮದುವೆ ನೆರವೇರಿದೆ. ಇಬ್ಬರು ಪ್ರಮಾಣ ಮಾಡಿ, ಒಬ್ಬರಿಗೊಬ್ಬರು ರಿಂಗ್ ಬದಲಿಸಿಕೊಂಡಿದ್ದಾರೆ. ನಂತರ ಮದುವೆ ಸಂಭ್ರಮದಲ್ಲಿ ಕೇಕ್ ಕತ್ತರಿಸಿ ಒಬ್ಬರಿಗೊಬ್ಬರು ತಿನ್ನಿಸಿಕೊಂಡು ಖುಷಿಪಟ್ಟಿದ್ದಾರೆ.

ಗಂಡು ಮಗುವಿಗೆ ಜನನ:

ಸಂಭ್ರಮದ ಕೆಲ ಗಂಟೆಗಳ ನಂತರ ಬ್ರಿಯಾನ್ನ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಒಂದೇ ದಿನ ಡಬಲ್ ಸಂತೋಷ ಎಲ್ಲರಲ್ಲೂ ಮತ್ತಷ್ಟು ಖುಷಿ ತಂದಿತು. ಮಗುವಿಗೆ ಲ್ಯಾಂಡನ್ ಇರ್ವಿನ್ ಎಂದು ನಾಮಕರಣ ಮಾಡಿದ್ದಾರೆ.

Continue Reading

LATEST NEWS

Trending