Thursday, September 29, 2022

ಮುಲ್ಕಿ ನಗರ ಪಂಚಾಯತ್ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ:ಗೆಲುವು ಪಡೆದ ಬಿಜೆಪಿಯ ಸತೀಶ್ ಅಂಚನ್ 

ಮುಲ್ಕಿ ನಗರ ಪಂಚಾಯತ್ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ:ಗೆಲುವು ಪಡೆದ ಬಿಜೆಪಿಯ ಸತೀಶ್ ಅಂಚನ್ 

ಮಂಗಳೂರು : ಮುಲ್ಕಿ ನಗರ ಪಂಚಾಯಿತಿಯ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಸುಭಾಶ್ ಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದು. ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು ಒಂದು ಮತದ ಅಂತರದಲ್ಲಿ ಬಿಜೆಪಿಯ ಸತೀಶ್ ಅಂಚನ್ ಅವರು ಗೆಲುವು ಪಡೆದಿದ್ದಾರೆ.


ಕಾಂಗ್ರೆಸ್ 9 ಸ್ಥಾನ, ಬಿಜೆಪಿ 8 ಹಾಗೂ ಜೆಡಿಎಸ್ 1 ಸ್ಥಾನ ಪಡೆದಿದ್ದು, ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ಬಿ ವರ್ಗಕ್ಕೆ ಮೀಸಲಿದ್ದು, ಬಿಜೆಪಿಯ ಸುಭಾಶ್ ಶೆಟ್ಟಿ ಹಾಗೂ ಹರ್ಷರಾಜ್ ಶೆಟ್ಟಿ ಅವರಿಗೆ ಅವಕಾಶ ಇತ್ತು ಇವರಲ್ಲಿ ಹರ್ಷರಾಜ್ ಶೆಟ್ಟಿ ಅವರಿಗೆ ತಾಂತ್ರಿಕ ಅಡಚಣೆಯಿಂದ ಸುಭಾಶ್ ಅವರು ನಾಮಪತ್ರ ಸಲ್ಲಿಸಿದ್ದರು. ಅವರು ಅವಿರೋಧವಾಗಿ ಆಯ್ಕೆಯಾದರು.

ಬಿಜೆಪಿಯಿಂದ ಸತೀಶ್ ಅಂಚನ್ ಹಾಗೂ ಕಾಂಗ್ರೆಸ್‌ನಿಂದ ಪುತ್ತುಬಾವ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು, ಚುನಾವಣಾ ಪ್ರಕ್ರಿಯೆಗೆ ಜೆಡಿಎಸ್‌ನ ಒರ್ವ ಸದಸ್ಯೆ ಲಕ್ಷ್ಮೀ ಅವರು ಗೈರು ಹಾಜಾರಾಗಿದ್ದು ಹಾಗೂ ಬಿಜೆಪಿಗೆ ಸಂಸದರ ಮತ್ತು ಶಾಸಕರ ಮತಗಳಿಂದಾಗಿ ಬಿಜೆಪಿ‌ಗೆ 10 ಮತ ಹಾಗೂ ಕಾಂಗ್ರೆಸ್‌ಗೆ 9 ಮತ ಬಂದ ಕಾರಣ ಸತೀಶ್ ಅಂಚನ್ ಉಪಾಧ್ಯಕ್ಷ ಸ್ಥಾನಕ್ಕೆ ಚುನಾಯಿತರಾದರು.

ದ.ಕ. ಸಂಸದ ನಳಿನ್‌ಕುಮಾರ್ ಕಟೀಲು, ಮೂಲ್ಕಿ ಮೂಡಬಿದಿರೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮತ್ತಿತರರು ವಿಜೇತರಿಗೆ ಅಭಿನಂದನೆ ಸಲ್ಲಿಸಿದರು. ಎಸಿಪಿ ಬೆಳ್ಳಿಯಪ್ಪ ಹಾಗೂ ಮೂಲ್ಕಿ ಇನ್ಸ್‌ಪೆಕ್ಟರ್ ಜಯರಾಂ ಗೌಡ ಬಂದೋ ಬಸ್ತನ್ನು ನೀಡಿದ್ದರು. ತಹಶೀಲ್ದಾರ್‌ಗಳಾದ ಗುರುಪ್ರಸಾದ್ ಮತ್ತು ಮಾಣಿಕ್ಯ ಅವರು ಚುನಾವಣೆ ಪ್ರಕ್ರಿಯೆ ನಡೆಸಿದರು.

LEAVE A REPLY

Please enter your comment!
Please enter your name here

Hot Topics

ಉಡುಪಿ: ಮೀನುಗಾರಿಕಾ ಜೆಟ್ಟಿ ಕುಸಿತ-ಅವೈಜ್ಞಾನಿಕ ಕಾಮಗಾರಿ ವಿರುದ್ಧ ಮೀನುಗಾರರ ಆರೋಪ

ಉಡುಪಿ: ಮೀನುಗಾರಿಕಾ ಬಂದರು ಪ್ರದೇಶದಲ್ಲಿ ನೂತನ ಜೆಟ್ಟಿ ನಿರ್ಮಾಣವಾಗುತ್ತಿರುವ ತಾಣದಲ್ಲಿ 150 ಮೀಟರಿಗೂ ಅಧಿಕ ಉದ್ಧದ ಮೀನುಗಾರಿಕಾ ಜೆಟ್ಟಿ ಕುಸಿತವಾದ ಘಟನೆ ಉಡುಪಿ ಜಿಲ್ಲೆಯ ಗಂಗೊಳ್ಳಿಯಲ್ಲಿ ಇಂದು ನಡೆದಿದೆ.ಇದರಿಂದ ಮೀನುಗಾರರು ಸಂಕಷ್ಟ ಎದುರಿಸುವಂತಾಗಿದೆ....

ಉಡುಪಿ: PFIಗೆ ಸೇರಿದ ಹಲವು ಕಚೇರಿಗಳು ಸೀಝ್-SDPI ಕಚೇರಿಗೆ ಬೀಗ ಜಡಿದ ಪೊಲೀಸರು

ಉಡುಪಿ: ಪಿಎಫ್‌ಐ ಹಾಗೂ ಅದರ ಸಹ ಸಂಘಟನೆಗಳಿಗೆ ದೇಶದಾದ್ಯಂತ ಕೇಂದ್ರದ ಗೃಹ ಸಚಿವಾಲಯವು ನಿರ್ಬಂಧ ವಿಧಿಸಿದ ಬೆನ್ನಲ್ಲೇ ಉಡುಪಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ಇರುವ ಪಿಎಫ್ಐ ಸಂಘಟನೆಗೆ ಸೇರಿದ ಹಲವು ಕಚೇರಿಗಳನ್ನು ಸೀಝ್‌...

ತುಳು ಭಾಷೆಗೆ ಸ್ಥಾನಮಾನ: ನವರಾತ್ರಿ ಮುಗಿದ ಕೂಡಲೇ ಮೀಟಿಂಗ್

ಮಂಗಳೂರು: ಮಂಗಳೂರಿನ ಸರಕಾರಿ ಕಛೇರಿ ಹಾಗೂ ಬಸ್ಸುಗಳಲ್ಲಿ ಕನ್ನಡ ಕಡ್ಡಾಯ ಮಾಡಿ ತುಳು ಭಾಷೆಯ ಮೇಲೆ ಸವಾರಿ ಮಾಡಿದ್ದಲ್ಲದೆ ದ.ಕ ಜಿಲ್ಲೆ ಸೇರಿ ರಾಜ್ಯದಲ್ಲಿ ಕನ್ನಡವೇ ಸಾರ್ವಭೌಮ ಎಂದು ಸಚಿವ ಸುನೀಲ್ ಕುಮಾರ್‌ರವರು...