LATEST NEWS
ಮೂಲ ಉದ್ದೇಶ ಮರೆತ ಕರ್ನಾಟಕ ತುಳು ಸಾಹಿತ್ಯ ಅಕಾಡಮಿ..!
ಮಂಗಳೂರು: ಕಳೆದ ತಿಂಗಳು ತುಳು ಶಿಕ್ಷಕರಿಗೆ ಗೌರವ ಧನ ನೀಡದೇ ಸುದ್ದಿಯಾಗಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಇದೀಗ ಮತ್ತೊಂದು ವಿಷಯಕ್ಕೆ ಸುದ್ದಿಯಾಗಿದೆ. ಕಳೆದ ಎರಡೂವರೆ ವರ್ಷದಲ್ಲಿ ಪ್ರಕಟವಾಗಿದ್ದು ಕೇವಲ ಒಂದೇ ಕೃತಿ.
ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಮೂಲ ಉದ್ದೇಶ ತುಳು ಸಾಹಿತ್ಯ ಚಟುವಟಿಕೆಯನ್ನು ಬೆಳೆಸುವುದು ಮತ್ತು ಬೆಂಬಲಿಸುವುದು. ಆದರೆ ಅದನ್ನೇ ಮರೆತಂತೆ ಕಾಣುತ್ತಿದೆ.
2020ರಲ್ಲಿ ನೂತನ ತುಳು ಸಾಹಿತ್ಯ ಅಕಾಡಮಿ ರಚನೆಯಾದ ಬಳಿಕ ತುಳು ಸಾಹಿತ್ಯದ ಸಂಬಂಧಿತ ಕೆಲಸಗಳು ಬಹುತೇಕ ಸ್ತಬ್ಧವಾಗಿ, ಪ್ರಶಸ್ತಿ-ಸಮಾರಂಭ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸೀಮಿತವಾಗಿದೆ ಎಂಬ ಆರೋಪ ವ್ಯಕ್ತವಾಗಿದೆ.
ದಾಖಲೆಗಳ ಪ್ರಕಾರ 2013-16ರ ಜಾನಕಿ ಬ್ರಹ್ಮಾವರ ಅಧ್ಯಕ್ಷತೆಯಲ್ಲಿ ಅಕಾಡೆಮಿ ಮೂಲಕ 10 ಕೃತಿಗಳು ಹೊರಬಂದಿದ್ದವು.
2017-2020ರ ಎ.ಸಿ. ಭಂಡಾರಿ ಅಧ್ಯಕ್ಷತೆಯಲ್ಲಿ 22 ಕೃತಿ ಹೊರತರಲಾಗಿದೆ. ಆದರೆ 2020ರಲ್ಲಿ ರಚನೆಯಾದ ಅಕಾಡೆಮಿಯ ನೂತನ ಅಧ್ಯಕ್ಷರ ನೇತೃತ್ವದಲ್ಲಿ ಎರಡೂವರೆ ವರ್ಷದಲ್ಲಿ ಪ್ರಕಟವಾಗಿದ್ದು ಕೇವಲ ಒಂದೇ ಕೃತಿ.
ಅದೂ ಕೂಡ ಅಕಾಡೆಮಿ ಅನುದಾನ ಬಳಸದೆ ಪ್ರಾಯೋಜಕತ್ವದಿಂದ ಮುದ್ರಿಸಲಾಗಿದೆ. ಅಕಾಡೆಮಿಯಿಂದ ‘ಮದಿಪು’ ಎಂಬ ತ್ರೈಮಾಸಿಕ ಪತ್ರಿಕೆ ಪ್ರಕಟವಾಗುತ್ತಿತ್ತು.
ಈ ಹಿಂದೆ ಜಾನಕಿ ಬ್ರಹ್ಮಾವರ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ 11 ಸಂಚಿಕೆ ಪ್ರಕಟವಾಗಿತ್ತು. ಎ.ಸಿ ಭಂಡಾರಿ ಅವರ ಕಾಲದಲ್ಲಿ 9 ಸಂಚಿಕೆಗಳು ಬಿಡುಗಡೆಯಾಗಿದ್ದವು.
ಆದರೆ ಕಳೆದ 2 ವರ್ಷದಿಂದ ಕೇವಲ 2 ಸಂಚಿಕೆಗಳು ಮಾತ್ರ ಬಿಡುಗಡೆಯಾಗಿದೆ. ಮದಿಪು ಪತ್ರಿಕೆ ತುಳು ಸಾಹಿತ್ಯಾಸಕ್ತರಿಗೆ ಬೇಕಿದ್ದರೂ, ತುಳು ಅಕಾಡೆಮಿ ಸಾಂಸ್ಕೃತಿಕ ಹಾಗೂ ಪ್ರಶಸ್ತಿ ಕೊಡುವ ಸಮಾರಂಭಗಳಲ್ಲಿ ಬ್ಯುಸಿಯಾಗಿದೆ.
ಅಕಾಡೆಮಿ ಇತ್ತೀಚಿನ ವರ್ಷಗಳಲ್ಲಿ ಪ್ರಶಸ್ತಿಗಳಿಗೆ ಮಾತ್ರ ಪ್ರಾಮುಖ್ಯತೆ ನೀಡುತ್ತಿದೆ. ಅದರಲ್ಲೂ ಲಾಬಿಗಳು ಕೆಲಸ ಮಾಡುತ್ತಿವೆ ಎಂಬ ಆರೋಪವಿದೆ. ಅಕಾಡೆಮಿ ಕಾರ್ಯಕ್ರಮಗಳಿಗಾಗಿ ಡೊನೇಷನ್ ಸಂಗ್ರಹ ಮಾಡಲಾಗುತ್ತಿದ್ದು, ‘ಲೆಕ್ಕ-ಪಕ್ಕಾ ಇಲ್ಲ’ ಎಂಬ ಆರೋಪಗಳೂ ಕೇಳಿ ಬರುತ್ತಿವೆ.
ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ತುಳು ಭಾಷೆಯ ಸಾಹಿತ್ಯ ಕೃಷಿಯನ್ನು ಬೆಳೆಸುವ ಕಾರ್ಯ ಮಾಡಬೇಕು. ಅದನ್ನು ಬಿಟ್ಟು ಪ್ರಶಸ್ತಿ ಸಮಾರಂಭ, ಸಾಂಸ್ಕೃತಿಕ ಸಮಾರಂಭ ಮಾಡುವುದನ್ನು ಸ್ವಲ್ಪ ಕಡಿಮೆ ಮಾಡಿ, ಮತ್ತೆ ಸಾಹಿತ್ಯ ಕೃಷಿಯತ್ತ ಮುಖಮಾಡಬೇಕೆನ್ನುವುದು ತುಳು ಅಭಿಮಾನಿಗಳ ಬೇಡಿಕೆ
ಒಂದು ತಿಂಗಳ ಸಂಬಳ ಮಾತ್ರ
ಡಿ.2ರಂದು ‘ನಮ್ಮ ಕುಡ್ಲ ವೆಬ್’ ತುಳು ಶಿಕ್ಷಕರಿಗೆ ಸಂಬಳ ಸಿಕ್ಕಿಲ್ಲ ಎಂದು ವರದಿ ಪ್ರಸಾರ ಮಾಡಿದ ಬಳಿಕ ನಡೆದ ಚರ್ಚಾ ಕಾರ್ಯಕ್ರಮದಲ್ಲಿ 1 ತಿಂಗಳ ಗೌರವಧನ ನೀಡಲಾಗುವುದು ಎಂದು ಭರವಸೆ ನೀಡಿದ್ದರು. ಅದಾಗಿ ಈಗ ಕೇವಲ ಒಂದು ತಿಂಗಳ ಸಂಬಳ ಮಾತ್ರ ನೀಡಿ ಉಳಿದ ಸಂಬಳ ನೀಡದೇ ಮೂರು ನಾಮ ಎಳೆದುಬಿಟ್ಟಿದೆ.
LATEST NEWS
ಕನ್ಹಯ್ಯಾ ಕುಮಾರ್ಗೆ ಕಪಾಳಮೋಕ್ಷ..! ಬಿಜೆಪಿ ಅಭ್ಯರ್ಥಿಯ ಕೈವಾಡ..!
ನವದೆಹಲಿ : ದೇಶದಲ್ಲಿ ಲೋಕಸಭಾ ಚುನಾವಣೆಯ ಕಾವು ಜೋರಾಗಿದೆ. ಈ ನಡುವೆ ದೆಹಲಿಯಲ್ಲಿ ಚುನಾವಣಾ ಪ್ರಚಾರದ ವೇಳೆ ಗಲಭೆ ನಡೆದಿದೆ. ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ಮಾಜಿ ವಿದ್ಯಾರ್ಥಿ ನಾಯಕ ಮತ್ತು ಈಶಾನ್ಯ ದೆಹಲಿಯ ಕಾಂಗ್ರೆಸ್ ಅಭ್ಯರ್ಥಿ ಕನ್ಹಯ್ಯಾ ಕುಮಾರ್ಗೆ ಯುವಕನೊಬ್ಬ ಕಪಾಳಮೋಕ್ಷ ಮಾಡಿದ್ದಾನೆ. ಕನ್ಹಯ್ಯಾ ಕುಮಾರ್ ಶುಕ್ರವಾರ ಆಮ್ ಆದ್ಮಿ ಪಕ್ಷದ ಕಚೇರಿಯಿಂದ ಹೊರ ಬರುತ್ತಿದ್ದಾಗ ಈ ಹಲ್ಲೆ ನಡೆಸಲಾಗಿದೆ. ಈ ವೇಳೆ ಆಮ್ ಆದ್ಮಿ ಪಕ್ಷದ ಮಹಿಳಾ ಕಾರ್ಪೋರೇಟರ್ ಛಾಯಾ ಶರ್ಮಾ ಜೊತೆಯೂ ಅನುಚಿತವಾಗಿ ವರ್ತಿಸಿದ್ದಾರೆ.
ಈಶಾನ್ಯ ದೆಹಲಿಯ ಉಸ್ಮಾನ್ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕರ್ತಾರ್ ನಗರದಲ್ಲಿ ಈ ಘಟನೆ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಆರೋಪಿಗಳ ಬಂಧನ :
ಈ ಬಗ್ಗೆ ದೂರು ನೀಡಿರುವ ಛಾಯಾ ಶರ್ಮಾ “ಕೆಲವರು ಬಂದು ಕನ್ಹಯ್ಯಾ ಕುಮಾರ್ಗೆ ಹಾರ ಹಾಕಿದರು. ಅವರಿಗೆ ಮಾಲೆ ಹಾಕಿದ ನಂತರ, ಕನ್ಹಯ್ಯಾ ಕುಮಾರ್ ಮೇಲೆ ಶಾಯಿ ಎಸೆದು ಹಲ್ಲೆಗೆ ಯತ್ನಿಸಿದ್ದರು. ಈ ವೇಳೆ ಮಧ್ಯಪ್ರವೇಶಿಸಲು ಪ್ರಯತ್ನಿಸಿದಾಗ ಅವರು ನನ್ನ ಜೊತೆ ಅನುಚಿತವಾಗಿ ವರ್ತಿಸಿದರು” ಎಂದು ಹೇಳಿದ್ದಾರೆ.
ಕನ್ಹಯ್ಯಾ ಕುಮಾರ್ ಮೇಲೆ ಹಲ್ಲೆಯಾಗುತ್ತಿದ್ದಂತೆ ಅಭಿಮಾನಿಗಳು ಆರೋಪಿಗಳನ್ನು ಹಿಡಿದಿದ್ದಾರೆ. ಆರೋಪಿ ಯುವಕನನ್ನು ಹಿಗ್ಗಾಮುಗ್ಗ ಥಳಿಸಿ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.
ಬಿಜೆಪಿಯ ಮನೋಜ್ ತಿವಾರಿ ವಿರುದ್ಧ ಆರೋಪ :
ಈ ಹಲ್ಲೆಯ ಹಿಂದೆ ಬಿಜೆಪಿ ಅಭ್ಯರ್ಥಿ ಮನೋಜ್ ತಿವಾರಿ ಇದ್ದಾರೆ ಎಂದು ಕನ್ಹಯ್ಯಾ ಕುಮಾರ್ ಬೆಂಬಲಿಗರು ಆರೋಪಿಸಿದ್ದಾರೆ. ಕನ್ಹಯ್ಯಾ ಅವರಿಗೆ ಸಿಗುತ್ತಿರುವ ಭಾರೀ ಜನ ಬೆಂಬಲ ಹಾಗೂ ಸೋಲಿನ ಭೀತಿಯಿಂದ ಮನೋಜ್ ತಿವಾರಿ ಗೂಂಡಾಗಳನ್ನು ಬಿಟ್ಟು ಹಲ್ಲೆ ನಡೆಸಲು ಯತ್ನಿಸಿದ್ದಾರೆ. ಆದ್ರೆ ಮೇ 25 ರಂದು ಇದಕ್ಕೆ ಜನರು ಮತದಾನ ಮಾಡುವ ಮೂಲಕ ಉತ್ತರ ನೀಡಲಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಐದು ಮಕ್ಕಳಿದ್ದಾರೆಂದು ಚಿಂತೆಗೊಳಗಾದ ತಂದೆ..! ಅಕ್ಕನಿಂದಲೇ ಇಬ್ಬರು ಸಹೋದರಿಯರ ಕೊ*ಲೆ..!
ದೆಹಲಿಯಲ್ಲಿ ಮೇ 25 ರಂದು ಏಳು ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಜೂನ್ 4 ರಂದು ಫಲಿತಾಂಶ ಪ್ರಕಟವಾಗಲಿದೆ. 2019ರಲ್ಲಿ ಎಲ್ಲ ಏಳು ಸ್ಥಾನಗಳನ್ನು ಬಿಜೆಪಿ ಗೆದ್ದಿತ್ತು. 2024 ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು, ಬಿಜೆಪಿ ಈಶಾನ್ಯ ದೆಹಲಿ ಲೋಕಸಭಾ ಕ್ಷೇತ್ರದಿಂದ ಮನೋಜ್ ತಿವಾರಿ ಅವರನ್ನು ತನ್ನ ಅಭ್ಯರ್ಥಿಯನ್ನಾಗಿ ಮಾಡಿದೆ. ಮತ್ತೊಂದೆಡೆ, ಕನ್ಹಯ್ಯಾ ಕುಮಾರ್ ಅವರನ್ನು ಐಎನ್ಡಿಐಎ ಬ್ಲಾಕ್ ಅಭ್ಯರ್ಥಿ ಎಂದು ಕಾಂಗ್ರೆಸ್ ಘೋಷಿಸಿದೆ. ಈ ಕ್ಷೇತ್ರದಲ್ಲಿ ಇಬ್ಬರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಕನ್ಹಯ್ಯ ಜೆಎನ್ಯುನಿಂದ ರಾಜಕೀಯವನ್ನು ಪ್ರಾರಂಭಿಸಿದರು, ಮನೋಜ್ ತಿವಾರಿ ಪ್ರಸಿದ್ಧ ನಟ ಮತ್ತು ಗಾಯಕರಾಗಿದ್ದರು. ಬಳಿಕ ರಾಜಕೀಯಕ್ಕೆ ಪ್ರವೇಶಿಸಿದರು.
DAKSHINA KANNADA
”ನಮ್ಮ ಕಂಬಳ ಪ್ರಶಸ್ತಿ ಪ್ರದಾನ 2024”ರ ಸಂಭ್ರಮ; ಕಂಬಳ ಸಾಧಕರನ್ನು ಗುರುತಿಸಿ ಗೌರವಿಸಿದ “ನಮ್ಮ ಕುಡ್ಲ”
ಮಂಗಳೂರು : ತುಳುನಾಡಿನ ಜಾನಪದ ಕ್ರೀಡೆ ಕಂಬಳಕ್ಕೆ ಇನ್ನಷ್ಟು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ 2023/24 ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ನಡೆದ ಒಟ್ಟು 24 ಕಂಬಳಗಳ 6 ವಿಭಾಗಗಳಲ್ಲಿ ಪ್ರಶಸ್ತಿ ನೀಡುವ ವಿಶೇಷ ಕಾರ್ಯಕ್ರಮ ಶುಕ್ರವಾರ (ಮೇ 17) ಮಂಗಳೂರಿನ ಸೈoಟ್ ಅಲೋಶಿಯಸ್ ಡೀಮ್ಡ್ ಯೂನಿವರ್ಸಿಟಿಯ ಎಲ್.ಎಫ್. ರಸ್ಕಿನ್ಹಾ ಸಭಾಂಗಣದಲ್ಲಿ ಅದ್ದೂರಿಯಾಗಿ ನಡೆಯಿತು.
ನಮ್ಮಕುಡ್ಲ ಟಿವಿ ಚಾನೆಲ್, ನಮ್ಮ ಕಂಬಳ ಟೀಮ್ ದುಬಾಯಿ ಮತ್ತು ಸೈoಟ್ ಅಲೋಶಿಯಸ್ ಡೀಮ್ಡ್ ಯೂನಿವರ್ಸಿಟಿಯ ಸಂಯುಕ್ತ ಆಶ್ರಯದಲ್ಲಿ ನಡೆದ ಸಮಾರಂಭವನ್ನು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅವರ ಅಧ್ಯಕ್ಷತೆಯಲ್ಲಿ ಮೂಲ್ಕಿ ಸೀಮೆ ದುಗ್ಗಣ್ಣ ಸಾವಂತರಸರು ಮತ್ತು ಸೈoಟ್ ಅಲೋಶಿಯಸ್ ಡೀಮ್ಡ್ ಯೂನಿವರ್ಸಿಟಿಯ ರೆಕ್ಟರ್ ಫಾ. ಮೆಲ್ವಿನ್ ಜೋಸೆಫ್ ಪಿಂಟೋ ಅವರು ಉದ್ಘಾಟಿಸಿದರು. ನಮ್ಮಕುಡ್ಲ ಚಾನೆಲ್ ನ ಸಿಒಒ ಕದ್ರಿ ನವನೀತ ಶೆಟ್ಟಿ ಪ್ರಸ್ತಾವನೆಗೈದು ‘ನಮ್ಮಕಂಬಳ ಪ್ರಶಸ್ತಿ 2024’ ರ ಬಗ್ಗೆ ಮಾಹಿತಿ ನೀಡಿದರು.
‘ನಮ್ಮ ಕಂಬುಲ ನನ ದುಂಬುಲ’ ಕೈಪಿಡಿ ಬಿಡುಗಡೆ
ಕದ್ರಿ ನವನೀತ ಶೆಟ್ಟಿ ಮತ್ತು ಸನತ್ ಕುಮಾರ್ ಶೆಟ್ಟಿ ದುಬಾಯಿ ಸಂಪಾದಿತ ‘ನಮ್ಮ ಕಂಬುಲ ನನ ದುಂಬುಲ’ ಎಂಬ 2023/24 ನೇ ಸಾಲಿನ ಕಂಬಳದ ಮಾಹಿತಿ ಕೈಪಿಡಿಯನ್ನು ಮೂಲ್ಕಿ ಸೀಮೆ ದುಗ್ಗಣ್ಣ ಸಾವಂತರಸರು ಬಿಡುಗೆಡೆ ಮಾಡಿದರು. ರಿಯಲ್ಎಸ್ಟೇಟ್ಉದ್ಯಮಿ ಹಾಗೂ ಬಿಲ್ಡರ್ ಕ್ಷೇತ್ರದ ಹಿರಿಯ ಸಾಧಕ ರೋಹನ್ ಕಾರ್ಪೋರೇಷನಿನ ಆಡಳಿತ ನಿರ್ದೇಶಕ ರೋಹನ್ ಮೊಂತೆರೊ ಅವರಿಗೆ ಪೇಟ ಧರಿಸಿ, ಫಲಪುಷ್ಪ ಹಾಗೂ ಸ್ಮರಣಿಕೆ ನೀಡಿ ಗೌರವ ಸನ್ಮಾನ ನೀಡಲಾಯಿತು.
ಅಧ್ಯಕ್ಷತೆ ವಹಿಸಿದ್ದ ಡಾ.ಮೋಹನ್ ಆಳ್ವ ಮಾತನಾಡಿ, ಕಾಲದೊಂದಿಗೆ ಬದಲಾದ ಕಂಬಳ ಇಂದು ಜಗತ್ತಿನ ಗಮನ ಸೆಳೆದೆದಿದೆ. ಹಂತ ಹಂತವಾಗಿ ಕಂಬಳ ಬದಲಾಗಿ ಇಂದು ಲಕ್ಷಾಂತರ ಜನರನ್ನು ತಲುಪಿದೆ. ಇಂತಹ ಬದಲಾವಣೆಗಳ ಜತೆಗೆ ಕಂಬಳದಲ್ಲಿ ಕೋಣಗಳನ್ನು ಬಿಡುವ ವಿಚಾರದಲ್ಲೂ ಬದಲಾವಣೆ ಆಗ ಬೇಕು ಎಂದರು.
ರೋಹನ್ ಮೊಂತೆರೊ ಅವರು ಮಾತನಾಡಿ, ಈ ಸನ್ಮಾನದಿಂದ ನನ್ನ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದೆ. ಬಾಲ್ಯದಲ್ಲಿ ತಾನು ಕೂಡಾ 2 ವರ್ಷ ಗದ್ದೆಯಲ್ಲಿ ಉಳುಮೆ ಮಾಡಿದ್ದೇನೆ. ಕೋಣಗಳನ್ನು ಸಾಕುವ ಕಷ್ಟ ನನಗೂ ಗೊತ್ತು ಎಂದು ಹೇಳಿ ನಮ್ಮಕುಡ್ಲ ಚಾನೆಲ್ ಮತ್ತು ಸಂಘಟಕರನ್ನು ಅಭಿನಂದಿಸಿದರು.
ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್, ಪುತ್ತೂರು ಶಾಸಕ, ಬೆಂಗಳೂರು ಕಂಬಳದ ಸಾರಥಿ ಅಶೋಕ್ ಕುಮಾರ್ ರೈ, ಆಭರಣ ಟೈಮ್ ಲೆಸ್ ಜುವೆಲ್ಲರಿ ಬೆಂಗಳೂರು ಇದರ ಮಾಲಕ ಪ್ರತಾಪ್ ಮಧುಕರ ಕಾಮತ್, ಎಸ್.ಎಲ್. ಡೈಮಂಡ್ ಹೌಸ್ ನ ಮಾಲಕ ಪ್ರಶಾಂತ್ ಶೇಟ್, ಜನಪದ ವಿದ್ವಾoಸ ಹಾಗೂ ಕಂಬಳದ ಪ್ರಧಾನ ತೀರ್ಪುಗಾರ ಗುಣಪಾಲ ಕಡoಬ, ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿಯ ಶಿಸ್ತು ಸಮಿತಿಯ ಅಧ್ಯಕ್ಷ ಭಾಸ್ಕರ ಕೋಟ್ಯಾನ್, ಸೈoಟ್ ಅಲೋಶಿಯಸ್ ಡೀಮ್ಡ್ ಯೂನಿವರ್ಸಿಟಿಯ ಡೀನ್ ಡಾ. ಆದರ್ಶ ಗೌಡ, ಅದಾನಿ ಸಂಸ್ಥೆಯ ಸಿಇಒ ಕಿಶೋರ್ ಆಳ್ವ, ಪಟ್ಲ ಫೌಂಡೇಶನಿನ ಸ್ಥಾಪಕ ಅಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ನಮ್ಮ ಕುಡ್ಲ ಸಂಸ್ಥೆಯ ನಿರ್ದೇಶಕ ಲೀಲಾಕ್ಷ ಬಿ. ಕರ್ಕೇರ ಸ್ವಾಗತಿಸಿ, ವಂದಿಸಿದರು. ನಿರ್ದೇಶಕರಾದ ಹರೀಶ್ ಬಿ. ಕರ್ಕೇರ, ಸುರೇಶ್ ಬಿ. ಕರ್ಕೇರ, ಮೋಹನ್ ಬಿ. ಕರ್ಕೇರ, ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥ ಸುದರ್ಶನ್, ಅಮಿತಾ, ಸುರೇಖಾ ಶೆಟ್ಟಿ ಮತ್ತಿತರರು ಇದ್ದರು. ನಿತಿನ್ ಸಾಲ್ಯಾನ್ ಕಾರ್ಯಕ್ರಮ ನಿರ್ವಹಿಸಿದರು.
120 ಪ್ರಶಸ್ತಿ ಪ್ರದಾನ :
ಕಂಬಳದ ಚಾಂಪಿಯನ್ ಕೋಣ ಹಾಗೂ ಕೋಣದ ಯಜಮಾನರಿಂದ ಹಿಡಿದು ತಂಡದ ಎಲ್ಲಾ ಸದಸ್ಯರನ್ನು ಗುರುತಿಸಿ ವಿವಿಧ ವಿಭಾಗಗಳಲ್ಲಿ ಒಟ್ಟು ಸುಮಾರು 120 ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಕನೆ ಹಲಗೆ ಮತ್ತು ಅಡ್ಡ ಹಲಗೆ ವಿಭಾಗದಲ್ಲಿ ಬೋಳಾರ ತ್ರಿಶಾಲ್ ಕೆ. ಪೂಜಾರಿ, ಹಗ್ಗ ಹಿರಿಯ ವಿಭಾಗದಲ್ಲಿ ನಂದಳಿಕೆ ಶ್ರೀಕಾಂತ ಭಟ್, ಹಗ್ಗ ಕಿರಿಯ ಸುರತ್ಕಲ್ ಪಾಂಚಜನ್ಯ ಯೋಗೀಶ್ ಪೂಜಾರಿ, ನೇಗಿಲು ಹಿರಿಯ ಬೋಳದ ಗುತ್ತು ಸತೀಶ್ ಶೆಟ್ಟಿ, ನೇಗಿಲು ಕಿರಿಯ ಮುನಿಯಾಲ್ ಉದಯಕುಮಾರ್ ಶೆಟ್ಟಿ ಸೇರಿದಂತೆ ಕೋಣಗಳ ಯಜಮಾನರಿಗೆ ಪ್ರಶಸ್ತಿ ನೀಡಲಾಯಿತು.
ಇದನ್ನೂ ಓದಿ : ಕೊನೆಗೂ ಮೌನ ಮುರಿದ ಎಚ್ಡಿ ದೇವೇಗೌಡ..! ಪ್ರಜ್ವಲ್ ಬಗ್ಗೆ ಹೇಳಿದ್ದೇನು?
ಬೈಂದೂರು ಮಹೇಶ್ ಪೂಜಾರಿ, ಭಟ್ಕಳ ಹರೀಶ್, ಬಂಬ್ರಾಣ ಬೈಲ್ ವಂದಿತ್ ಶೆಟ್ಟಿ, ಭಟ್ಕಳ ಶಂಕರ ನಾಯ್ಕ್, ಕಕ್ಕೆ ಪದವು ಪೆರ್oಗಾಲ್ ಕೃತಿಕ್ ಗೌಡ ಮತ್ತು ಮಾಸ್ತಿಕಟ್ಟೆ ಸ್ವರೂಪ್ ಸಹಿತ 6 ವಿಭಾಗಗಳಲ್ಲಿ ಕೋಣ ಓಡಿಸುವವರನ್ನು ನಮ್ಮ ಕಂಬಳ ಪ್ರಶಸ್ತಿ ನೀಡಿ ಗೌರವಿಸಲಾಯಿತು. 6 ವಿಭಾಗಗಳ ಕೋಣಗಳಿಗೆ ಚಾoಪಿಯನ್ ಅವಾರ್ಡ್ ಪ್ರದಾನ ಮಾಡಲಾಯಿತು. ಕಂಬಳ ಸಂಯೋಜಕರು ಮತ್ತು ತೀರ್ಪುಗಾರರನ್ನು ಶಾಲು ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಯಿತು.
LATEST NEWS
ಐದು ಮಕ್ಕಳಿದ್ದಾರೆಂದು ಚಿಂತೆಗೊಳಗಾದ ತಂದೆ..! ಅಕ್ಕನಿಂದಲೇ ಇಬ್ಬರು ಸಹೋದರಿಯರ ಕೊ*ಲೆ..!
ಉತ್ತರ ಪ್ರದೇಶ: ಐದು ಮಕ್ಕಳು ಇರುವುದರಿಂದ ತಂದೆ ಚಿಂತೆಗೊಳಗಾಗಿದ್ದಾರೆ ಎಂದು ಸ್ವತಃ ಅಕ್ಕನೇ ಇಬ್ಬರು ಸಹೋದರಿಯರನ್ನು ಕೊಂ*ದ ಹೇಯ ಕೃತ್ಯ ಉತ್ತರಪ್ರದೇಶದಲ್ಲಿ ನಡೆದಿದೆ. ಮೇ.16ರಂದು ತಡರಾತ್ರಿ 12.30ರ ಸುಮಾರಿಗೆ ನೂರ್ಪುರ್ ಪೊಲೀಸ್ ಠಾಣೆಗೆ ಗೌಹಾವರ್ ಜೈತ್ ಗ್ರಾಮದ ಮನೆಯೊಂದರಲ್ಲಿ ಇಬ್ಬರು ಬಾಲಕಿಯರ ಶ*ವ ಪತ್ತೆಯಾಗಿರುವುದರ ಬಗ್ಗೆ ಪೊಲೀಸರು ತಿಳಿಸಿದ್ದಾರೆ.
ರಿತು(7 ವ), ಪವಿತ್ರ(5 ವ) ಮೃತಪಟ್ಟ ಬಾಲಕಿಯರು. ಪೊಲೀಸರು ಘಟನೆ ಬಗ್ಗೆ ತಿಳಿದ ಕೂಡಲೇ ಮನೆಗೆ ಧಾವಿಸಿದ್ದಾರೆ. ಈ ವೇಳೆ ಇಬ್ಬರು ಬಾಲಕಿಯರ ಮೃತದೇಹ ಮನೆಯ ನೆಲದ ಮೇಲೆ ಬಿದ್ದಿತ್ತು. ಸಹದೇವ್ ಹಾಗೂ ಸವಿತಾ ತಮ್ಮ ಐದು ಮಂದಿ ಮಕ್ಕಳ ಜೊತೆ ವಾಸ ಮಾಡ್ತಾಇದ್ದರು. ಸವಿತಾ ಅವರ 13 ವರ್ಷ ಮತ್ತು 9 ವರ್ಷದ ಇಬ್ಬರು ಹಿರಿಯ ಹೆಣ್ಣು ಮಕ್ಕಳು ಮೊದಲ ಪತಿಯ ಮಕ್ಕಳಾಗಿದ್ದಾರೆ. ಇನ್ನು ಮೃತ ಪಟ್ಟ ಬಾಲಕಿಯರು ಸೇರಿದಂತೆ 1.5 ವರ್ಷದ ಮಗು ಎರಡನೇ ಪತಿ ಸಹದೇವ್ರವರ ಮಕ್ಕಳು.
ನಟಿ ಪವಿತ್ರಾ ಜಯರಾಂ ಸಾ*ವಿನ ಬೆನ್ನಲ್ಲೇ ಆತ್ಮಹ*ತ್ಯೆಗೆ ಶರಣಾದ ಸಹನಟ ಚಂದು!
ಪೊಲೀಸರ ಪ್ರಾಥಮಿಕ ವಿಚಾರಣೆಯಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ಮನೆಗೆ ನುಗ್ಗಿ ಸಹೋದರಿಯರನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂದು ಬಾಲಕಿ ಹೇಳಿದ್ದಾಳೆ. ಬಳಿಕ ತಾನೇ ಈ ಕೃ*ತ್ಯ ಎಸಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಆಕೆಯ ತಂದೆ ಮನೆಯಲ್ಲಿ ಹೆಚ್ಚು ಸದಸ್ಯರು ಇರುವುದರಿಂದ ಚಿಂತೆಗೆ ಒಳಗಾಗಿದ್ದರು. ಹೀಗಾಗಿ ನಾನು ಇಬ್ಬರು ಸಹೋದರಿಯರನ್ನು ಸ್ಕಾರ್ಫ್ನಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದೇನೆ ಎಂದು ಹೇಳಿದ್ದಾಳೆ. ಮೃತರ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಬಾಲಕಿಯಯನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಎಸ್ಪಿ ಜದೌನ್ ತಿಳಿಸಿದ್ದಾರೆ.
- LATEST NEWS6 days ago
ಖಾಲಿ ಬಿಯರ್ ಬಾಟಲಿಗಳಿಂದ ಲಕ್ಷಾಧಿಪತಿಯಾದ ವ್ಯಕ್ತಿ..!
- LATEST NEWS6 days ago
ಪ್ರೇಯಸಿಯ ಜೊತೆ ಗೋವಾ ಟೂರ್..! ಕ್ಷೌರಿಕನಿಗೆ ದುಬಾರಿಯಾದ ಟೂರ್..!
- DAKSHINA KANNADA6 days ago
ದೇವರಿಗೆ ಇಟ್ಟ ಹೂವುಗಳನ್ನು ಒಣಗಿದ ನಂತರ ಹೀಗೆ ಮಾಡಿ..!
- LATEST NEWS7 days ago
Watch : ಇಬ್ಬರು ಪುರುಷರೊಂದಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಪತ್ನಿ; ಹಿಗ್ಗಾಮುಗ್ಗ ಥಳಿಸಿದ ಪತಿ