DAKSHINA KANNADA
ಬಸ್ಸಿನಲ್ಲಿ ಮಧ್ಯವಯಸ್ಕನ ಕಿರುಕುಳದಿಂದ ಮನನೊಂದ ಯುವತಿಯ ಇನ್ಸ್ಟಾಗ್ರಾಂ ಪೋಸ್ಟ್ ವೈರಲ್ ..!
ಬಸ್ಸಿನಲ್ಲಿ ಮಧ್ಯವಯಸ್ಕನ ಕಿರುಕುಳದಿಂದ ಮನನೊಂದ ಯುವತಿಯ ಇನ್ಸ್ಟಾಗ್ರಾಂ ಪೋಸ್ಟ್ ವೈರಲ್ ..!
ಮಂಗಳೂರು: ಮಂಗಳೂರಿನ ಸಿಟಿ ಬಸ್ಸೊಂದರಲ್ಲಿ ವ್ಯಕ್ತಿಯೋರ್ವ 24ರ ಹರೆಯದ ಯುವತಿಗೆ ಲೈಂಗಿಕ ಕಿರುಕುಳ ನೀಡಿ ಅಸಭ್ಯವಾಗಿ ವರ್ತಿಸಿದ್ದಾನೆ. ಈ ಕುರಿತು ಯುವತಿ ಸಾಮಾಜಿಕ ಜಾಲ ತಾಣ ಇನ್ ಸ್ಟಾ ಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.ಪೋಸ್ಟ್ ಮಾಡಿದ ಕೆಲವೇ ಸಮಯಗಳಲ್ಲಿ ಪೋಟೋ ವೈರಲ್ ಆಗಿದ್ದು ಪ್ರಕರಣದ ಕುರಿತಂತೆ ಮಹಿಳಾ ಆಯೋಗಕ್ಕೆ ಯುವತಿ ದೂರು ನೀಡಿದ್ದಾಳೆ.
ಜನವರಿ 14ರಂದು ಯುವತಿಯು ಕೊಣಾಜೆಯ ಮಂಗಳೂರಿನ ಪಂಪ್ ವೆಲ್ ಗೆ ಖಾಸಗಿ ಬಸ್ ಮುಖಾಂತರ ಪ್ರಯಾಣಿಸ್ತಿದ್ದ ವೇಳೆ ವ್ಯಕ್ತಿಯೋರ್ವ ಬಸ್ ಹತ್ತಿದ್ದು, ಸೀಟುಗಳು ಖಾಲಿಯಿದ್ರೂ ಆತ ಯುವತಿಯ ಬಳಿ ಬಂದು ಕುಳಿತಿದ್ದ.
ಯುವತಿಯ ಹೇಳಿಕೆ ಪ್ರಕಾರ” ಕೆ.ಎಸ್ ಹೆಗ್ಡೆ ಆಸ್ಪತ್ರೆಯ ಸಮೀಪ ಬಸ್ ನಿಲ್ಲಿಸಿದಾಗ ಆತ ತನ್ನೊಂದಿಗೆ ಅನುಚಿತವಾಗಿ ವರ್ತಿಸಲು ಪ್ರಾರಂಭಿಸಿದ್ದ.
ಈ ವೇಳೆ ನಾನು ಗದರಿದ ಕಾರಣ ಆತ ಬೇರೆ ಸೀಟಿನಲ್ಲಿ ಕುಳಿತು ಮುಂದಿನ ನಿಲ್ದಾಣದಲ್ಲಿ ಇಳಿದಿದ್ದ. ಮೂರು ನಿಲ್ದಾಣ ಕಳೆದ ಬಳಿಕ ಆತ ಮತ್ತೊಂದು ಬಸ್ ನಿಂದ ಇಳಿದು ಮತ್ತೊಮ್ಮೆ ಅದೇ ಬಸ್ ಹತ್ತಿ ನನ್ನ ಪಕ್ಕ ಕುಳಿತ.ಮೊದಲಿನಂತೆಯೇ ಅನುಚಿತವಾಗಿ ವರ್ತಿಸಲು ಆರಂಭಿಸಿದ. ಈ ವೇಳೆ ಕೋಪಗೊಂಡ ನಾನು ಬೇರೆ ಸೀಟಿನಲ್ಲಿ ಕುಳಿತುಕೊಳ್ಳುವಂತೆ ಹೇಳಿದೆ. ನಾನು ಜೋರಾಗಿ ಗದರಿದ್ರೂ ಕೂಡಾ ಬಸ್ ನಲ್ಲಿರುವ ಚಾಲಕನಾಗಲಿ, ನಿರ್ವಾಹಕನಾಗಲಿ, ಯಾವುದೇ ಕ್ರಮ ಕೈಗೊಂಡಿಲ್ಲ.
ಇದೇ ವೇಳೆ ನಾನು ಆತನ ಫೋಟೋ ತೆಗ್ದು ಸಮಾಜಿಕ ಜಾಲತಾಣದಲ್ಲಿ ಪೊಸ್ಟ್ ಮಾಡ್ತೇನೆ ಅಂದಾಗ ಆತ ಮಾಸ್ಕ್ ತೆಗದು ಫೊಟೋಗೆ ಫೋಸ್ ಕೊಟ್ಟಿದ್ದಾನೆ.
ತನಗಾದ ನೋವು ಇನ್ನಾರಿಗೂ ಆಗದಿರಲಿ ಎನ್ನುವ ಹಿನ್ನೆಲೆಯಿಂದ ಈ ಪೋಸ್ಟ್ ಇನ್ಸ್ಟಾಗ್ರಾಂಲ್ಲಿ ಹಾಕುತ್ತಿರುವುದಾಗಿ ಯುವತಿ ಹೇಳಿಕೊಂಡಿದ್ದಾಳೆ.
DAKSHINA KANNADA
ಜಿಲ್ಲೆಯಲ್ಲಿ ಹೆಚ್ಚುತ್ತಿವೆ ಕಳವು ಪ್ರಕರಣ; ಕೋಡಿಕಲ್ ನ ಮನೆಯೊಂದರಲ್ಲಿ ಕಳ್ಳತನಕ್ಕೆ ವಿಫಲ ಯತ್ನ
ಮಂಗಳೂರು : ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ನಿನ್ನೆ ಮಂಗಳೂರಿನ ಕೋಡಿಕಲ್ ನ ಮನೆಯೊಂದರಲ್ಲಿ ಕಳ್ಳರ ತಂಡವೊಂದು ಕಳ್ಳತನಕ್ಕೆ ಯತ್ನಿಸಿದೆ.
ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮನೆಯವರು ಮಲಗಿದ್ದ ಕೊಠಡಿಯ ಗ್ರಿಲ್ ಕಟ್ ಮಾಡಲಾಗಿದೆ. ಸುಮಾರು ಐದು ಜನರ ತಂಡ ಈ ಕೃತ್ಯ ನಡೆಸಿರುವುದು ಇಲ್ಲಿನ ಮನೆಯೊಂದರ ಸಿಸಿಟಿವಿಯಲ್ಲಿ ಅಸ್ಪಷ್ಟವಾಗಿ ಕಾಣಿಸಿದೆ.
ಕಳ್ಳರ ಮುಖಚಹರೆ ಗುರುತಿಸಲು ಅಸಾಧ್ಯವಾಗಿದ್ದು, ಕಳ್ಳರು ಅದೇ ಮನೆಯನ್ನು ಗುರಿಯಾಗಿಸಿ ಕಳ್ಳತನಕ್ಕೆ ಯತ್ನಿಸಿದ್ದಾರೆ ಎಂಬುವುದು ಗೊತ್ತಾಗುತ್ತದೆ. ಇದು ಈ ಪ್ರದೇಶದಲ್ಲಿ ಓಡಾಡಿ ಮನೆಯಲ್ಲಿ ಯಾರು ಇಲ್ಲ ಎಂದು ಖಚಿತಪಡಿಸಿಕೊಂಡು ನಡೆಸಿದ ಕೃತ್ಯವಾಗಿರುವ ಅನುಮಾನ ಕಾಡಿದೆ. ಆದ್ರೆ, ರಾತ್ರಿಯಲ್ಲಿ ಮನೆಯಲ್ಲಿ ಜನರು ಇರುವುದು ಗಮನಿಸಿ ಯಾವುದೇ ಕಳ್ಳತನ ಮಾಡದೆ ಕಳ್ಳರ ತಂಡ ವಾಪಾಸಾಗಿದೆ. ಈ ಘಟನೆಯ ಬೆನ್ನಲ್ಲೇ ಪೊಲೀಸರು ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ : ಭೂಮಿಗೆ ಕಾದಿದೆ ಅಪಾಯ..! ವಿಜ್ಞಾನಿಗಳಿಂದ ಅಧ್ಯಯನ
ಪರಿಸರದಲ್ಲಿ ಯಾರಾದ್ರೂ ಅನುಮಾನಾಸ್ಪದವಾಗಿ ಓಡಾಡುವವರು ಕಂಡು ಬಂದ್ರೆ 112 ಗೆ ಕರೆ ಮಾಡುವಂತೆ ಸೂಚಿಸಿದ್ದಾರೆ. ಅಲ್ಲದೆ ಮನೆ, ಅಂಗಡಿಗಳ ಮುಂದೆ ಸರಿಯಾದ ರೀತಿಯಲ್ಲಿ ರಸ್ತೆ ಹಾಗೂ ಪ್ರದೇಶ ಕಾಣುವ ರೀತಿಯಲ್ಲಿ ಹೈ ರೆಸೆಲ್ಯೂಷನ್ ಸಿಸಿ ಕ್ಯಾಮೆರಾ ಅಳವಡಿಸಲು ಸಲಹೆ ನೀಡಿದ್ದಾರೆ.
DAKSHINA KANNADA
ಏನಾಶ್ಚರ್ಯ!! ನಾಗರ ಹಾವು ಕಡಿದು ಮಹಿಳೆ ಸಾ*ವು; ಅಂತ್ಯಸಂಸ್ಕಾರದ ವಿಧಿಗೆ ಬಂದು ನೀರು ಕುಡಿದು ಹೋದ ನಾಗರಹಾವು
ಮಂಜೇಶ್ವರ : ಜಗತ್ತಿನಲ್ಲಿ ಆಶ್ಚರ್ಯಕರ ಘಟನೆಗಳು ಸಂಭವಿಸುತ್ತಲೇ ಇರುತ್ತವೆ. ಇದೀಗ ಮಂಜೇಶ್ವರದಲ್ಲಿ ವಿಚಿತ್ರ ಘಟನೆಯೊಂದು ಸಂಭವಿಸಿದೆ. ಮಂಜೇಶ್ವರ ತಾಲೂಕಿನ ಕುರುಡುಪದವಿನಲ್ಲಿ ನಾಗರ ಹಾವು ಕಡಿತಕ್ಕೊಳಗಾಗಿ ಮಹಿಳೆಯೋರ್ವರು ಮೃ*ತಪಟ್ಟಿದ್ದರು. ಚೋಮು ಎಂಬವರು ಮೃ*ತಪಟ್ಟ ಮಹಿಳೆ. ಆದ್ರೆ ಇಲ್ಲಿ ಅಚ್ಚರಿಯೊಂದು ನಡೆದಿದೆ.
ಹೌದು, ಅಂ*ತ್ಯಸಂಸ್ಕಾರದ ವಿಧಿಯ ಕೊನೆಯ ಭಾಗದಲ್ಲಿ ನೀರು ಇಡುವ ಸಂಪ್ರದಾಯ ನಡೆದಿತ್ತು. ವಿಸ್ಮಯವೆಂದರೆ, ಈ ಸಂಪ್ರದಾಯದ ಸಂದರ್ಭದಲ್ಲಿ ಆಗಮಿಸಿದ ನಾಗರ ಹಾವು ಚೊಂಬಿನಲ್ಲಿಟ್ಟಿದ್ದ ನೀರನ್ನು ಕುಡಿದು ತೆರಳಿದೆ. ಮಹಿಳೆಯ ಸಾವಿಗೆ ಕಾರಣವಾದ ನಾಗರ ಹಾವು ಆಕೆಯ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದೆ ಎಂದು ಜನರು ಮಾತಾಡಿಕೊಳ್ಳುತ್ತಿದ್ದಾರೆ.
ಅಂತ್ಯಸಂಸ್ಕಾರದ ವಿಧಿ ಕಳೆದ ಮೇಲೆ ಮನೆ ಚಾವಡಿಯಲ್ಲಿ ನೀರು ಇಡುವ ಸಂಪ್ರದಾಯ ಇದೆ. ಅದರಂತೆ ಮನೆ ಚಾವಡಿಯಲ್ಲಿ ಬೂದಿ ಹರಡಿ ಅದರ ನಡುವಿನಲ್ಲಿ ಚೊಂಬುವೊಂದರಲ್ಲಿ ನೀರು ಇಡಲಾಗಿತ್ತು. ಮನೆ ಹಿಂಬದಿ ಬಾಗಿಲು ಭದ್ರ ಪಡಿಸಲಾಗಿತ್ತು. ಮುಂಬಾಗಿಲಿನಲ್ಲಿ ನಾಲ್ಕು ಮಂದಿ ಜನ ಮಲಗಿದ್ದರು. ಆದರೂ ನಾಗರ ಹಾವು ಬಂದು ಚೊಂಬಿನಲ್ಲಿದ್ದ ನೀರನ್ನು ಕುಡಿದು ತೆರಳಿದೆಯಂತೆ. ಹಾವು ಬಂದಿರುವುದಕ್ಕೆ ಸಾಕ್ಷಿ ಎಂಬಂತೆ ಬೂದಿ ಮೇಲೆ ಹರಡಿರುವ ಹಾವಿನ ಗುರುತನ್ನು ತೋರಿಸುತ್ತಾರೆ ಮನೆಯವರು.
ಇದನ್ನೂ ಓದಿ : ಭೂಮಿಗೆ ಕಾದಿದೆ ಅಪಾಯ..! ವಿಜ್ಞಾನಿಗಳಿಂದ ಅಧ್ಯಯನ
ಇದಕ್ಕೂ ಮಿಗಿಲಾದ ವಿಷಯವೇನೆಂದರೆ, ಚೋಮು ಅವರ ಸಾವಿಗೆ ಕಾರಣವಾದ ನಾಗರ ಹಾವನ್ನು ಹಾವು ಹಿಡಿಯುವವರು ಬಂದು ಹಿಡಿದುಕೊಂಡು ಕೊಂಡೊಯ್ದಿದ್ದರು. ಹಾಗಾದರೆ ನೀರು ಕುಡಿಯಲು ಬಂದ ಹಾವು ಯಾವುದು ಎನ್ನುವುದೇ ದೊಡ್ಡ ಪ್ರಶ್ನೆ. ಅದೇನಿದ್ದರೂ, ಸರಳ ಸಜ್ಜನಿಕೆಯ ಚೋಮು ಅವರ ಸಾವಿಗೆ ಜನರು ಮರುಕ ವ್ಯಕ್ತಪಡಿಸುತ್ತಿದ್ದಾರೆ.
DAKSHINA KANNADA
ನಿರಂತರ ಮಳೆ, ಬಟ್ಟೆ ಒಣಗುತ್ತಿಲ್ಲವೇ? ಹಾಗಿದ್ರೆ ಈ ಸಿಂಪಲ್ ಟ್ರಿಕ್ಸ್ ಫಾಲೋ ಮಾಡಿ
ಕಳೆದ ಎರಡು ವಾರಗಳಿಂದ ರಾಜ್ಯದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಆಗೊಮ್ಮೆ ಈಗೊಮ್ಮೆ ಅಪರೂಪಕ್ಕೆ ಎನ್ನುವಂತೆ ಸೂರ್ಯ ದರ್ಶನ ಕೊಟ್ಟರೂ ಸಹ ಕ್ಷಣಮಾತ್ರದಲ್ಲಿ ಮೋಡ ಸೂರ್ಯನನ್ನು ಆವರಿಸಿಕೊಂಡು ಬಿಡುತ್ತದೆ. ಹೀಗಾಗಿ ಬಟ್ಟೆ ಒಣಗಿಸಬೇಕು ಎನ್ನುವ ಮಹಿಳೆಯರಿಗೆ ಇದು ದೊಡ್ಡ ಸವಾಲಾಗಿ ಪರಿಣಮಿಸಿದೆ.
ಬಟ್ಟೆ ಅರ್ಧಬರ್ಧ ಒಣಗಿದರೆ ದೇಹಕ್ಕೆ ಕಡಿತ ಆರಂಭ ಆಗುತ್ತದೆ. ಹಾಗಂತ ಬಟ್ಟೆ ತೊಳೆಯದೇ ಬಿಡೋದಕ್ಕೂ ಆಗುವುದಿಲ್ಲ. ಮಳೆ ಬಂತೆಂದರೆ ಸಾಕು ಬಟ್ಟೆಗಳನ್ನು ಒಣಗಿಸಲು ಮಹಿಳೆಯರು ನಾನಾ ಸರ್ಕಸ್ ಮಾಡುತ್ತಲೇ ಇರುತ್ತಾರೆ.ಇಂತಹ ಮಹಿಳೆಯರಿಗೆ ಹೇಗೆ ಮಳೆಗಾಲದಲ್ಲಿಯೂ ಸೂರ್ಯ ಬರದೆ ಇದ್ರು ಬಟ್ಟೆಯನ್ನು ಒಣಗಿಸಬಹುದು ಎನ್ನುವ ಸಿಂಪಲ್ ಟಿಪ್ಸ್ ಇಲ್ಲಿವೆ..
1) ವಾಷಿಂಗ್ ಮಷೀನ್ ನಲ್ಲಿ ಸ್ಪಿನ್ ಮಾಡುವುದು
ಸೂರ್ಯನ ಕಿರಣಗಳು ತಾಗದಿದ್ದರಂತೂ ಬಟ್ಟೆಯ ವಾಸನೆ ಕಿರಿಕಿರಿ ಉಂಟು ಮಾಡುತ್ತದೆ. ಮಳೆಗಾಲದಲ್ಲಿ ಮನೆಯೊಳಗೆ ಬಟ್ಟೆ ಒಣಗಿಸುವುದರಿಂದ ಕೂಡ ಕೆಲ ಅಲರ್ಜಿ ಮತ್ತು ರೋಗಗಳು ಉಂಟಾಗುತ್ತದೆ.ಹೀಗಾಗಿ ಶೀಘ್ರ ಬಟ್ಟೆ ಒಣಗಿಸಲು ವಾಷಿಂಗ್ ಮಷೀನ್ ಬಳಕೆ ಮಾಡಬಹುದು.. ವಾಷಿಂಗ್ ಮಷೀನ್ ಗೆ ಬಟ್ಟೆಹಾಕಿ ವೇಗದ ಸ್ಪಿನ್ ಆಪ್ಷನ್ ಸೆಲೆಕ್ಟ್ ಮಾಡಿ, ಬಟ್ಟೆಯನ್ನು ವಾಶ್ ಮಾಡಲು ಹಾಕಬೇಕು..ಹೀಗೆ ಸ್ಪಿನ್ ಮಾಡಲು ಬಟ್ಟೆನ ಹಾಕುವುದರಿಂದ ಆದಷ್ಟು ಬೇಗ ಬಟ್ಟೆ ಒಣಗುವ ಸಾಧ್ಯತೆ ಇದೆ.
2) ಟಿಶ್ಯು ಪೇಪರ್ ಬಳಕೆ ಹಾಗೂ ಬಟ್ಟೆ ಹಿಂಡುವುದು
ಡ್ರೈಯರ್ ಇಲ್ಲದೆಯೇ ಬಟ್ಟೆಗಳನ್ನು ಒಣಗಿಸಲು ವೇಗವಾದ ಮಾರ್ಗವೆಂದರೆ ಟವೆಲ್ ಮತ್ತು ಕೆಲವು ಟಿಶ್ಯೂ ಪೇಪರ್. ನಾವು ಯಾವ ಬಟ್ಟೆಯನ್ನು ಬೇಗ ಒಣಗಿಸಬೇಕು ಎಂದು ಬಯಸುತ್ತೇವೋ ಆ ಬಟ್ಟೆಯನ್ನು ಮೊದಲು ಟವಲ್ ಮೇಲೆ ಹರಡಿ ಬಳಿಕ ಅದರ ಮೇಲೆ ಟಿಶ್ಯೂ ಪೇಪರ್ ಗಳನ್ನು ಬಳಸಿದ್ರೆ ಟಿಶ್ಯೂ ಪೇಪರ್ ನೀರನ್ನು ಹಿಂಡಿ ಕೊಳ್ಳುತ್ತೆ. ಬಳಿಕ ಬಟ್ಟೆಯನ್ನ ಸುಮಾರು ಐದು ನಿಮಿಷಗಳ ಕಾಲ ಹಿಂಡಿ ಅದನ್ನ ಒಣಗಳು ಹರಡಿದರೆ ಆದಷ್ಟು ಬೇಗ ನಮ್ಮ ಬಟ್ಟೆಗಳು ಒಣಗಲಿವೆ.
3) ಹ್ಯಾಂಗರ್ ಬಳಸುವುದು
ನಮ್ಮ ಬಟ್ಟೆಯನ್ನು ಒಣಗಿಸಲು ಇರುವ ಅತ್ಯಂತ ಸುಲಭವಾದ ಮಾರ್ಗ ಅಂದ್ರೆ ಹ್ಯಾಂಗರ್ ಗಳ ಬಳಕೆ. ಏರ್ಲರ್ನಲ್ಲಿ ಬಟ್ಟೆಗಳನ್ನ ನೇತು ಹಾಕುವಾಗ ಮೊದಲು ಕೆಳಭಾಗದಲ್ಲಿ ಸಣ್ಣ ಬಟ್ಟೆಗಳನ್ನು ಹಾಕಬೇಕು, ಮೇಲ್ಭಾಗದಲ್ಲಿ ದೊಡ್ಡ ಬಟ್ಟೆಗಳನ್ನು ಹಾಕಿದ್ರೆ ಗಾಳಿ ಹರಿವು ಹೆಚ್ಚಾಗಿ ಬಟ್ಟೆ ಬೇಗ ಒಣಗಲಿದೆ. ಇನ್ನು ಏರ್ನಲ್ಲಿ ಪೆಗ್ ಅಥವಾ ರಾಕ್ಗಳ ಬದಲಿಗೆ ಹ್ಯಾಂಗರ್ಗಳನ್ನು ಬಳಸುವುದರಿಂದ ಬಟ್ಟೆ ಒಣಗಿಸುವ ಪ್ರಕ್ರಿಯೆಯನ್ನು ವೇಗಗೊಳಿಸಬಹುದು.
4) ಬಟ್ಟೆ ಐರನ್ ಮಾಡುವುದು
ಬಟ್ಟೆಯನ್ನ ಸಾಮಾನ್ಯವಾಗಿ ನಾವು ಒಣಗಿದ ಮೇಲೆ ಐರನ್ ಮಾಡುತ್ತೇವೆ. ಆದ್ರೆ ಮಳೆಗಾಲದಲ್ಲಿ ಬಿಸಿಲಿಗೆ ಬಟ್ಟೆ ಒಣಗುವ ಯಾವುದೇ ಅವಕಾಶ ಇರುವುದಿಲ್ಲ. ಹಾಗಾಗಿ ನಮಗೆ ಬೇಗ ಬಟ್ಟೆ ಒಣಗಬೇಕು ಎಂದರೆ, ಬಟ್ಟೆ ಹಸಿಯಾಗಿದ್ದಾಗ ಐರನ್ ಮಾಡಿದ್ರೆ ಬಟ್ಟೆ ಬೇಗ ಒಣಗುತ್ತೆ.. ಜೊತೆಗೆ ಹಸಿವಾಸನೆ ಕೂಡ ಕಡಿಮೆಯಾಗಲಿದೆ.
- FILM4 days ago
‘ಪೆಂಡ್ರೈವ್’ನಲ್ಲಿ ಬಿಗ್ಬಾಸ್ ತನಿಷಾ ಕುಪ್ಪಂಡ..!
- DAKSHINA KANNADA5 days ago
ಉಳ್ಳಾಲ : ಟಿಪ್ಪರ್ – ಸ್ಕೂಟರ್ ಅಪಘಾ*ತ; ಚಿಕಿತ್ಸೆ ಫಲಕಾರಿಯಾಗದೆ ಸವಾರ ಸಾ*ವು
- DAKSHINA KANNADA6 days ago
ಮನೆಯೊಳಗೆ ಈ ಪ್ರಾಣಿ ಪಕ್ಷಿಗಳು ಬರಬಾರದಂತೆ, ಯಾವುದು? ಯಾಕೆ ಗೊತ್ತಾ?
- LATEST NEWS2 days ago
ಉಡುಪಿ : ಪ್ರೇಯಸಿಯೊಂದಿಗೆ ಜಗಳ; ಅರ್ಧ ದಾರಿಯಲ್ಲೇ ಬಸ್ ನಿಲ್ಲಿಸಿ ಹೋದ ಡ್ರೈವರ್!