Connect with us

    LATEST NEWS

    ಭೂಮಿಗೆ ಕಾದಿದೆ ಅಪಾಯ..! ವಿಜ್ಞಾನಿಗಳಿಂದ ಅಧ್ಯಯನ

    Published

    on

    ಮಂಗಳೂರು : ಸದ್ಯದಲ್ಲೇ ಭೂಮಿಗೆ ಅಪಾಯಕಾರಿಯಾಗಬಲ್ಲ ಕ್ಷುದ್ರಗ್ರಹವೊಂದು ಭೂಮಿಯ ಸಮೀಪ ಬರಲಿದೆ. ಈಜಿಪ್ಟಿನ ವಿನಾಶದ ದೇವರು ಅಪೋಫಿಸ್‌ ಎಂದು ಹೆಸರಿಡಲಾಗಿರುವ ಈ ಕ್ಷುದ್ರಗ್ರಹ 2029 ರಲ್ಲಿ ಭೂಮಿಗೆ ಸಮೀಪ ಬರಲಿದೆ. 305 ಮೀಟರ್ ಅಗಲದ ಈ ಕ್ಷುದ್ರಗ್ರಹದ ಅಧ್ಯಯನ ಮಾಡಲು ಭಾರತೀಯ ಬಾಹ್ಯಾಕಾಶ ಸಂಸ್ಥೆ ಮುಂದಾಗಿದೆ.


    ಬಾಹ್ಯಾಕಾಶದಲ್ಲಿನ ಹಲವು ರಹಸ್ಯಗಳು ಇಂದಿಗೂ ನಿಗೂಢವಾಗಿರುವ ಕಾರಣ ಕ್ಷುದ್ರಗ್ರಹದ ಅಧ್ಯಯನಕ್ಕೆ ಇಸ್ರೋ ಮುಂದಾಗಿದೆ. “ಅಪೋಫಿಸ್ ಬಂದಾಗ ಅದರ ಸಮೀಪ ಹೋಗಲು ಸಾಧ್ಯವಾಗಬೇಕು ಹಾಗೂ ಅದನ್ನು ಅರ್ಥಮಾಡಿಕೊಳ್ಳಬೇಕು” ಎಂದು ಇಸ್ರೋ ಮುಖ್ಯಸ್ಥ ಸೋಮನಾಥ್ ಅವರು ಹೇಳಿದ್ದಾರೆ.
    ಭಾರತ ಈ ಕ್ಷುದ್ರಗ್ರಹ ಅದ್ಯಯನದಲ್ಲಿ ಹೇಗೆ ಭಾಗವಹಿಸಲಿದೆ ಎಂದು ಇನ್ನೂ ಕೂಡಾ ತೀರ್ಮಾನಿಸಲಾಗಿಲ್ಲ. ಟೈಮ್‌ ಕ್ಯಾಪ್ಸುಲ್‌ ಎಂದು ಕರೆಯುವ ಈ ಕ್ಷುದ್ರಗ್ರಹಗಳು ಆರಂಭಿಕ ಪ್ರಪಂಚದ ಅವಶೇಷಗಳಾಗಿದೆ. ಹೀಗಾಗಿ ಇದರ ಅಧ್ಯಯನದಿಂದ ಪ್ರಪಂಚ ಹೇಗೆ ಸೃಷ್ಟಿಯಾಗಿದೆ ಎಂದು ತಿಳಿಯಲು ಸಾಧ್ಯವಾಗಬಹುದು ಎಂದು ಇಸ್ರೋ ಅಂದಾಜಿಸಿದೆ.


    ಈ ಉಲ್ಕೆ ಭೂಮಿಗೆ ಅಪ್ಪಳಿಸಲಿದೆಯಾ ಎಂದು ಪ್ರಶ್ನೆ ಎದುರಾಗಿದ್ದು, ಅದು ಭೂಮಿಯ 48280 ಕಿಲೋ ಮೀಟರ್ ದೂರಕ್ಕೆ ಬರಲಿದೆ. ಬರಿಗಣ್ಣಿನಲ್ಲಿ ಕಾಣಸಿಗುವ ಈ ಕ್ಷುದ್ರಗ್ರಹ ಅಥವಾ ಉಲ್ಕೆ ಭೂಮಿಗೆ ಅಪ್ಪಳಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

    ಇದನ್ನೂ ಓದಿ :ರಾಜ್ಯವೇ ಬೆಚ್ಚಿ ಬೀಳಿಸೋ ಸುದ್ದಿ ಕೊಟ್ಟ ದಿವ್ಯಾ ವಸಂತ 


    ಜಗತ್ತಿನ ಎಲ್ಲಾ ವಿಜ್ಞಾನಿಗಳು ಕೂಡಾ ಈ ಉಲ್ಕೆಯ ಅಧ್ಯಯನಕ್ಕೆ ಮುಂದಾಗಿದ್ದು, ಜಪಾನ್ ಏರೋಸ್ಪೇಸ್ ಎಕ್ಸ್‌ಪ್ಲೋರೇಶನ್ ಏಜೆನ್ಸಿ, ಯುರೋಪಿಯನ್ ಸ್ಪೇಸ್ ಏಜೆನ್ಸಿ ಮತ್ತು ನಾಸಾದ ಜಂಟಿ ಕ್ಷುದ್ರಗ್ರಹ ಅಪೋಫಿಸ್ ಮಿಷನ್‌ನಲ್ಲಿ ಉಪಕರಣವನ್ನು ಸ್ಥಾಪಿಸಬಹುದು ಎಂದು ಇಸ್ರೋ ಮುಖ್ಯಸ್ಥರು ಹೇಳಿದ್ದಾರೆ.
    2022 ರಲ್ಲಿ, NASA DART ಮಿಷನ್ ಮೂಲಕ ಕ್ಷುದ್ರಗ್ರಹದ ದಿಕ್ಕನ್ನು ಬದಲಾಯಿಸಿದ ವಿಚಾರದ ಬಗ್ಗೆ ಗಮನ ಸೆಳೆದು ಈ ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸುವುದನ್ನು ತಪ್ಪಿಸಬಹುದು ಎಂದಿದ್ದಾರೆ.

    LATEST NEWS

    ಕಾಸರಗೋಡು: ಗ್ರೈಂಡರ್ ಗೆ ಶಾಲ್‌ ಸಿಲುಕಿ ಮಹಿಳೆ ಸಾ*ವು

    Published

    on

    ಕಾಸರಗೋಡು: ಗ್ರೈಂಡರ್ ಗೆ ಶಾಲ್ ಸಿಲುಕಿ ಗೃಹಿಣಿ ಮೃ*ತಪಟ್ಟ ದಾರುಣ ಘಟನೆ ಕುಂಬಳೆ ಸಮೀಪದ ಪೆರುವಾಡ್ ನಲ್ಲಿ ನಡೆದಿದೆ.

    ಪೆರುವಾಡ್ ಕೆ .ಕೆ ನಗರದ ಇಸ್ಮಾಯಿಲ್ ರವರ ಪತ್ನಿ ನಫೀಸಾ ( ೫೨) ಮೃ*ತಪಟ್ಟವರು. ಗ್ರೈಂಡರ್ ನಲ್ಲಿ ಅಕ್ಕಿ ಅರೆಯುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಇದನ್ನು ಗಮನಿಸಿದ ಪತಿ ಇಸ್ಮಾಯಿಲ್ ಕೂಡಲೇ ಕುಂಬಳೆ ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ . ಕುಂಬಳೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    Continue Reading

    LATEST NEWS

    ಶಿರೂರು ಗುಡ್ಡ ಕುಸಿ*ತ ಪ್ರಕರಣ : ನೀರುಪಾಲಾಗಿದ್ದ ವೃದ್ಧೆಯ ಶ*ವಕ್ಕೆ ಹೆಗಲು ಕೊಟ್ಟ ಮಂಗಳೂರಿನ ಪತ್ರಕರ್ತರು!

    Published

    on

    ಅಂಕೋಲಾ : ಶಿರೂರು ಗುಡ್ಡ ಕುಸಿತ ದುರಂತದಲ್ಲಿ ನೀರುಪಾಲಾಗಿದ್ದ ಉಳವರೆ ಗ್ರಾಮದ ನಿವಾಸಿ ಸಣ್ಣಿ ಹನುಮಂತ ಗೌಡ ಎಂಬ ವೃದ್ಧೆಯ ಮೃ*ತದೇಹ ಮಂಗಳವಾರ ಬೆಳಗ್ಗೆ ಗಂಗಾವಳಿ ನದಿಯ ತೀರದಲ್ಲಿ ಪತ್ತೆಯಾಗಿದ್ದು, ಪೋಸ್ಟ್ ಮಾರ್ಟಂ ನಡೆಸಿದ ಬಳಿಕ ಕುಟುಂಬಿಕರಿಗೆ ಹಸ್ತಾಂತರ ಮಾಡಲಾಯಿತು.
    ದುರಂತದಲ್ಲಿ ಉಳವರೆ ಗ್ರಾಮದ 6 ಮನೆಗಳು ಸಂಪೂರ್ಣ ನಾಮಾವಶೇಷವಾಗಿದೆ. 18ರಷ್ಟು ಮನೆಗಳು ಭಾಗಶ: ಹಾ*ನಿಗೊಳಗಾಗಿದೆ.

    ಬೇಸರದ ಸಂಗತಿ ಎಂದರೆ, ಮೃ*ತದೇಹವನ್ನು ಕುಟುಂಬಿಕರಿಗೆ ಹಸ್ತಾಂತರ ಮಾಡುವ ಸಂದರ್ಭದಲ್ಲಿ ಜಿಲ್ಲಾಡಳಿತದ ಅಧಿಕಾರಿಗಳು, ಕಂದಾಯ ಇಲಾಖೆ, ಸ್ಥಳೀಯ ಆಡಳಿತ, ಶಾಸಕರು ಹೀಗೆ ಯಾರೆಂದರೆ ಯಾರೂ ಇರಲಿಲ್ಲ. ಗ್ರಾಮದ ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಮಹಿಳೆಯರು ಕಾಳಜಿ ಕೇಂದ್ರದಲ್ಲಿದ್ದಾರೆ.

    ಹೆಗಲಾದ ಪತ್ರಕರ್ತರು :
    ಹೊರುವವರಿಲ್ಲದೆ ರಸ್ತೆಯೂ ಸರಿಯಿಲ್ಲದೇ ವೃದ್ಧೆಯ ಶ*ವ ಆಂಬುಲೆನ್ಸ್ ನಲ್ಲಿ ಉಳಿದಿದ್ದು, ಕೊಳೆತ ವಾಸನೆಯಿಂದಾಗಿ ಯಾರೂ ಹೊರಲು ಸಿದ್ಧರಿರಲಿಲ್ಲ. ಈ ವೇಳೆ ಸ್ಥಳದಲ್ಲಿದ್ದ ಮಂಗಳೂರಿನ ಪತ್ರಕರ್ತರು ಮೃ*ತದೇಹವನ್ನು ತಾವೇ ಹೊತ್ತುಕೊಂಡು ಸಾಗಿ ಮನೆಯವರಿಗೆ ಒಪ್ಪಿಸಿ ಮುಂದಿನ ಅಂತಿಮ ಸಂ*ಸ್ಕಾರ ನಡೆಸಲು ನೆರವಾಗಿ ಮಾನವೀಯತೆ ಮೆರೆದಿದ್ದಾರೆ.

    ನಿರಾಶ್ರಿತರು ಮತ್ತು ಘಟನೆಯಲ್ಲಿ ಸಂತ್ರಸ್ತರಾದವರಿಗೆ ಸಾಂತ್ವನ ನೀಡಲು ಮಂಗಳೂರಿನಿಂದ ತೆರಳಿದ್ದ ಪತ್ರಕರ್ತರ ಚಾರಣ ತಂಡದ ಸದಸ್ಯರಾದ ಮೋಹನ್ ಕುತ್ತಾರ್, ಶಶಿ ಬೆಳ್ಳಾಯರು, ಆರಿಫ್ ಯು.ಆರ್.ಕಲ್ಕಟ್ಟ, ಗಿರೀಶ್ ಮಳಲಿ, ಶಿವಶಂಕರ್ ಅವರು ಶ*ವಸಂಸ್ಕಾರದಲ್ಲಿ ಸಹಕರಿಸಿದರು.

    ಇದನ್ನೂ ಓದಿ : 4 ವರ್ಷದ ಬಾಲಕಿ ಕಿಡ್ನಾ*ಪ್, ಅತ್ಯಾ*ಚಾರ ಮಾಡಿ ಕೊ*ಲೆ.. ಮೃ*ತದೇಹ ಏನು ಮಾಡಿದ್ದ ಗೊತ್ತಾ?
    ಟ್ಯಾಂಕರ್ ಸ್ಫೋಟವೇ ಘಟನೆಗೆ ಕಾರಣ!
    ಶಿರೂರು ಗುಡ್ಡ ಕು*ಸಿತ ಉಂಟಾದಾಗ ಹೆದ್ದಾರಿಯಲ್ಲಿದ್ದ ಗ್ಯಾಸ್ ಟ್ಯಾಂಕರ್ ನೀರಿಗೆ ಬಿದ್ದು ಭಾರಿ ಸದ್ದಿನೊಂದಿಗೆ ಸ್ಫೋ*ಟ ಸಂಭವಿಸಿತ್ತು. ಇದರಿಂದಲೇ ಉಳವರೆ ಗ್ರಾಮ ನಾಶಗೊಂಡು ಹಲವರು ಪ್ರಾ*ಣ ಕಳೆದುಕೊಳ್ಳುವಂತಾಯ್ತು ಎನ್ನುವ ಅಭಿಪ್ರಾಯ ಸ್ಥಳೀಯರಿಂದ ವ್ಯಕ್ತವಾಗಿದೆ.

    ನೀರು‌ ಚಿಮ್ಮುತ್ತಿದ್ದಂತೆ ಬಾಂ*ಬ್‌ನಂತೆ ಸ್ಫೋ*ಟದ ಸದ್ದು ಕೇಳಿದ್ದಾಗಿ ಸ್ಥಳೀಯರು ಮಾಹಿತಿ ನೀಡಿರುವುದರಿಂದ ಈ ಸಂಶಯ ಬಲವಾಗಿದೆ. ಈ ನಡುವೆ ಕೇರಳ ಟ್ಯಾಂಕರ್ ಡ್ರೈವರ್ ಅರ್ಜುನಗಾಗಿ ಶೋಧ ಮುಂದುವರಿದಿದೆ.

    Continue Reading

    DAKSHINA KANNADA

    ಸರ್ಕಾರಿ ಬಸ್ ಮತ್ತು ಟ್ಯಾಂಕರ್ ಮಧ್ಯೆ ಅಪ*ಘಾತ; ಹಲವರಿಗೆ ಗಾ*ಯ

    Published

    on

    ಚಿಕ್ಕಮಗಳೂರು: KSRTC ಹಾಗೂ ಟ್ಯಾಂಕರ್ ಮಧ್ಯೆ ಭಯಾನಕ ಡಿ*ಕ್ಕಿಯಾಗಿದ್ದು, ಅಪಘಾತದ ರಭಸಕ್ಕೆ ಬಸ್ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಅಪಘಾತದಲ್ಲಿ ಹಲವರಿಗೆ ಗಂಭೀರ ಗಾ*ಯಗಳಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಮೂಡಿಗೆರೆ ತಾಲೂಕಿನ ಕಡೂರು – ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರವಳಲು ಬಳಿ ಈ ಅಪ*ಘಾತ ಸಂಭವಿಸಿದೆ. ಅಪ*ಘಾತದಲ್ಲಿ ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಗಂಭೀರ ಗಾ*ಯಗಳಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾ*ನಿ ಸಂಭವಿಸಿಲ್ಲ.

    KSRTC, ಟ್ಯಾಂಕರ್ ಅಪ*ಘಾತದಿಂದ ಕಡೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಬಂದ್ ಆಗಿದೆ. ಆಲ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    Continue Reading

    LATEST NEWS

    Trending