Thursday, August 11, 2022

ಬಸ್ಸಿನಲ್ಲಿ ಮಧ್ಯವಯಸ್ಕನ  ಕಿರುಕುಳದಿಂದ ಮನನೊಂದ ಯುವತಿಯ ಇನ್ಸ್ಟಾಗ್ರಾಂ ಪೋಸ್ಟ್ ವೈರಲ್ ..!

ಬಸ್ಸಿನಲ್ಲಿ ಮಧ್ಯವಯಸ್ಕನ  ಕಿರುಕುಳದಿಂದ ಮನನೊಂದ ಯುವತಿಯ ಇನ್ಸ್ಟಾಗ್ರಾಂ ಪೋಸ್ಟ್ ವೈರಲ್ ..!

ಮಂಗಳೂರು: ಮಂಗಳೂರಿನ ಸಿಟಿ ಬಸ್ಸೊಂದರಲ್ಲಿ ವ್ಯಕ್ತಿಯೋರ್ವ 24ರ  ಹರೆಯದ ಯುವತಿಗೆ ಲೈಂಗಿಕ ಕಿರುಕುಳ ನೀಡಿ ಅಸಭ್ಯವಾಗಿ ವರ್ತಿಸಿದ್ದಾನೆ.  ಈ ಕುರಿತು  ಯುವತಿ ಸಾಮಾಜಿಕ ಜಾಲ ತಾಣ ಇನ್ ಸ್ಟಾ ಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.ಪೋಸ್ಟ್ ಮಾಡಿದ ಕೆಲವೇ ಸಮಯಗಳಲ್ಲಿ ಪೋಟೋ ವೈರಲ್ ಆಗಿದ್ದು ಪ್ರಕರಣದ ಕುರಿತಂತೆ ಮಹಿಳಾ ಆಯೋಗಕ್ಕೆ ಯುವತಿ ದೂರು ನೀಡಿದ್ದಾಳೆ.

ಜನವರಿ 14ರಂದು ಯುವತಿಯು ಕೊಣಾಜೆಯ ಮಂಗಳೂರಿನ ಪಂಪ್ ವೆಲ್ ಗೆ ಖಾಸಗಿ ಬಸ್ ಮುಖಾಂತರ ಪ್ರಯಾಣಿಸ್ತಿದ್ದ ವೇಳೆ ವ್ಯಕ್ತಿಯೋರ್ವ ಬಸ್ ಹತ್ತಿದ್ದು, ಸೀಟುಗಳು ಖಾಲಿಯಿದ್ರೂ ಆತ ಯುವತಿಯ ಬಳಿ ಬಂದು ಕುಳಿತಿದ್ದ.

ಯುವತಿಯ ಹೇಳಿಕೆ ಪ್ರಕಾರ” ಕೆ.ಎಸ್ ಹೆಗ್ಡೆ ಆಸ್ಪತ್ರೆಯ ಸಮೀಪ ಬಸ್ ನಿಲ್ಲಿಸಿದಾಗ ಆತ ತನ್ನೊಂದಿಗೆ ಅನುಚಿತವಾಗಿ ವರ್ತಿಸಲು ಪ್ರಾರಂಭಿಸಿದ್ದ.

ಈ ವೇಳೆ ನಾನು ಗದರಿದ ಕಾರಣ ಆತ ಬೇರೆ ಸೀಟಿನಲ್ಲಿ ಕುಳಿತು ಮುಂದಿನ ನಿಲ್ದಾಣದಲ್ಲಿ ಇಳಿದಿದ್ದ. ಮೂರು ನಿಲ್ದಾಣ ಕಳೆದ ಬಳಿಕ ಆತ ಮತ್ತೊಂದು ಬಸ್ ನಿಂದ ಇಳಿದು ಮತ್ತೊಮ್ಮೆ ಅದೇ ಬಸ್ ಹತ್ತಿ ನನ್ನ ಪಕ್ಕ ಕುಳಿತ.ಮೊದಲಿನಂತೆಯೇ ಅನುಚಿತವಾಗಿ ವರ್ತಿಸಲು ಆರಂಭಿಸಿದ. ಈ ವೇಳೆ ಕೋಪಗೊಂಡ ನಾನು ಬೇರೆ  ಸೀಟಿನಲ್ಲಿ ಕುಳಿತುಕೊಳ್ಳುವಂತೆ ಹೇಳಿದೆ. ನಾನು ಜೋರಾಗಿ ಗದರಿದ್ರೂ ಕೂಡಾ ಬಸ್ ನಲ್ಲಿರುವ ಚಾಲಕನಾಗಲಿ, ನಿರ್ವಾಹಕನಾಗಲಿ, ಯಾವುದೇ ಕ್ರಮ ಕೈಗೊಂಡಿಲ್ಲ.

ಇದೇ ವೇಳೆ ನಾನು ಆತನ ಫೋಟೋ ತೆಗ್ದು ಸಮಾಜಿಕ ಜಾಲತಾಣದಲ್ಲಿ ಪೊಸ್ಟ್ ಮಾಡ್ತೇನೆ ಅಂದಾಗ ಆತ ಮಾಸ್ಕ್ ತೆಗದು ಫೊಟೋಗೆ ಫೋಸ್ ಕೊಟ್ಟಿದ್ದಾನೆ.

ತನಗಾದ ನೋವು ಇನ್ನಾರಿಗೂ ಆಗದಿರಲಿ ಎನ್ನುವ ಹಿನ್ನೆಲೆಯಿಂದ ಈ ಪೋಸ್ಟ್ ಇನ್ಸ್ಟಾಗ್ರಾಂಲ್ಲಿ ಹಾಕುತ್ತಿರುವುದಾಗಿ ಯುವತಿ ಹೇಳಿಕೊಂಡಿದ್ದಾಳೆ.

LEAVE A REPLY

Please enter your comment!
Please enter your name here

Hot Topics

‘ಪ್ರವೀಣ್‌’ ಬೇಟೆಗೆ 6 ವೆಹಿಕಲ್‌ 10 ಹತ್ಯೆಕೋರರು..!: ಪಿನ್‌ ಟು ಪಿನ್‌ ಡಿಟೇಲ್ಸ್‌

ಮಂಗಳೂರು: ಸುಳ್ಯ ತಾಲೂಕಿನ ಬೆಳ್ಳಾರೆಯ ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ ನಡೆದ 16 ದಿನಗಳ ಬಳಿಕ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಪ್ರಮುಖ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಇದೀಗ ಪ್ರಕರಣ ಸಂಬಂಧ ಒಟ್ಟು...

“ಬೆಳ್ತಂಗಡಿಯಲ್ಲಿ ಪೂಂಜಾ ಬಂದ್ಮೇಲೆ ಮರ ಕಡಿಯಲು, ಮರಳು ತೆಗೆಯಲು ಲೈಸನ್ಸ್‌ ಬೇಡ್ವೇ ಬೇಡ”

ಬೆಳ್ತಂಗಡಿ: 'ನಮ್ಮ ತಾಲೂಕಿನಲ್ಲಿ ಹರೀಶ್ ಪೂಂಜಾನ 40 ಪರ್ಸೆಂಟ್ ವ್ಯವಹಾರ ನಡೆಯುತ್ತಿದೆ. ಬೆಳ್ತಂಗಡಿಯಲ್ಲಿ ಪೂಂಜಾ ಬಂದ ಮೇಲೆ ಮರ ಕಡಿಯಲು, ಮರಳು ತೆಗೆಯಲು ಲೈಸನ್ಸ್‌ ಬೇಡ್ವೇ ಬೇಡ. ದ.ಕ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ವೇಳೆ...

ಕೊಡಿಯಾಲ್‌ಬೈಲಿನ ಶಾರದಾ ವಿದ್ಯಾಲಯದಲ್ಲಿ ರಕ್ಷಾಬಂಧನ

ಮಂಗಳೂರು: ನಗರದ ಕೊಡಿಯಾಲ್‌ಬೈಲಿನ ಶಾರದಾ ವಿದ್ಯಾಲಯದಲ್ಲಿ ಇಂದು ರಕ್ಷಾಬಂಧನವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಶಾರದಾ ಸಮೂಹ ವಿದ್ಯಾಸಂಸ್ಥೆಗಳ ವಿಶ್ವಸ್ಥರಾದ ಸುಧಾಕರ ರಾವ್ ಪೇಜಾವರರವರು ದೀಪ ಪ್ರಜ್ವಲನೆಗೈದು ಕಾರ್ಯಕ್ರಮವನ್ನು...