Connect with us

  LATEST NEWS

  ಮನೆ ಬಾಲ್ಕನಿಯನ್ನೇ ಬಾಡಿಗೆ ನೀಡಿದ ವ್ಯಕ್ತಿ..! ಬಾಡಿಗೆ ಎಷ್ಟು ಗೊತ್ತಾ? ಕೇಳಿದ್ರೆ ಶಾಕ್ ಆಗ್ತೀರಾ

  Published

  on

  ಸಿಡ್ನಿ/ಮಂಗಳೂರು: ಇಲ್ಲೊಬ್ಬ ವ್ಯಕ್ತಿ ಮನೆ ಬಾಡಿಗೆ ನೀಡಲು ಕಷ್ಟವಾಗುವುದಕ್ಕೆ ತನ್ನ ಮನೆಯ ಒಂದು ಭಾಗವನ್ನು ಬಾಡಿಗೆಗೆ ನೀಡುವುದರ ಮೂಲಕ ಸುದ್ದಿಯಲ್ಲಿದ್ದಾನೆ. ಅಲ್ಲದೇ ಆತ ಕೇಳಿದ ಮನೆ ಬಾಡಿಗೆ ಕೇಳಿದರೆ ಶಾಕ್ ಆಗ್ತೀರಾ.. ಹೌದು, ಅಷ್ಟಕ್ಕೂ ಆತ ಬಾಡಿಗೆಗೆ ನೀಡಿದ್ದು, ಮನೆಯ ಕೋಣೆಯಲ್ಲ ಹೊರತಾಗಿ ಮನೆ ಮೇಲೆ ಇರುವ ಬಾಲ್ಕನಿಯನ್ನು ಬಾಡಿಗೆ ನೀಡುವುದಾಗಿ ಜಾಹಿರಾತು ನೀಡಿದ ಘಟನೆ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಈ ಘಟನೆ ನಡೆದಿದೆ.

  ಬಾಡಿಗೆ ಕೊಡಲು ಕಷ್ಟವಾಗುವುದಕ್ಕೆ ವ್ಯಕ್ತಿಯೊಬ್ಬ ತನ್ನ 2BHK ಮನೆಯ ಬಾಲ್ಕನಿಯಲ್ಲಿ ಹಾಸಿಗೆಯನ್ನು ಇರಿಸಿ ಬಾಡಿಗೆಗೆ ನೀಡುವುದಾಗಿ ಜಾಹೀರಾತು ನೀಡಿದ್ದಾನೆ. ಸದ್ಯ ಈ ಜಾಹೀರಾತು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​​ ಆಗುತ್ತಿದೆ. ಇದಲ್ಲದೇ ಇದರ ಬಾಡಿಗೆ ಕೇಳಿ ನೆಟ್ಟಿಗರು ಶಾಕ್​​ ಆಗಿದ್ದಾರೆ.

  ಈ ಬಾಲ್ಕನಿಯನ್ನು ಫೇಸ್‌ಬುಕ್ ಮಾರ್ಕೆಟ್‌ಪ್ಲೇಸ್ ಪಟ್ಟಿಯಲ್ಲಿ ಬಾಡಿಗೆಗೆ ನೀಡುವುದಾಗಿ ಬರೆಯಲಾಗಿದೆ.  ಅಲ್ಲದೇ ಈ ಬಾಲ್ಕನಿಯನ್ನು ಸೂರ್ಯನ ಬೆಳಕಿನ ಕೋಣೆ ಎಂದು ವಿವರಿಸಲಾಗಿದೆ. ವಾಸ್ತವವಾಗಿ, ಬಾಲ್ಕನಿಯಲ್ಲಿ ಒಂದೇ ಒಂದು ಹಾಸಿಗೆಯನ್ನು ಹಾಕಿದ್ದು, ಇದರ ಬೆಲೆಯನ್ನು ಹಾಕಲಾಗಿದೆ. ಈ ಪುಟ್ಟ ಬಾಲ್ಕನಿಯ ತಿಂಗಳ ಬಾಡಿಗೆ ಬರೋಬ್ಬರಿ 969 ಡಾಲರ್​ ಅಂದರೆ ತಿಂಗಳಿಗೆ ಸುಮಾರು 80,889 ರೂ. ಈ ಕೊಠಡಿಯು ಒಬ್ಬ ವ್ಯಕ್ತಿ ವಾಸಿಸುವಷ್ಟು ದೊಡ್ಡದಾಗಿದೆ ಎಂದು ಜಾಹೀರಾತಿನಲ್ಲಿ ಹೇಳಲಾಗಿದೆ.

  ಕುಡಿದ ಅಮಲಿನಲ್ಲಿ ತೇಲಾಡಿದ ಉರ್ಫಿ ಜಾವೇದ್..!

  ಮುಚ್ಚಿದ ಕೋಣೆಯಂತೆ ಕಾಣುವ ಬಾಲ್ಕನಿಯಲ್ಲಿ ಕನ್ನಡಿ ಮತ್ತು ಪರದೆಯನ್ನು ಸಹ ಅಳವಡಿಸಿದ್ದಾರೆ. ಅಷ್ಟೇ ಅಲ್ಲ ಬಾಲ್ಕನಿಯಲ್ಲಿ ವಾಸ ಮಾಡುವವರ ಸಂಚಾರಕ್ಕೆ ಸ್ಲೈಡಿಂಗ್ ಗ್ಲಾಸ್ ಡೋರ್ ಅಳವಡಿಸಲಾಗಿದ್ದು, ಮಳೆ ಬಂದರೂ ನೀರು ಒಳಗೆ ಬರದಂತೆ ಬಾಲ್ಕನಿ ಸುತ್ತಲೂ ಗಾಜಿನ ಗೋಡೆ ಹಾಕಲಾಗಿದೆ.

  2 Comments

  2 Comments

  1. Amaresha

   08/07/2024 at 7:18 PM

   ಲೋಫರ್ 969 doller ಏನ್ ದೊಡ್ಡದಲ್ಲ ತಿಂಗಳಿಗೆ. ನಾನು ಒಂದು ದಿನಕ್ಕೆ 210 ಡಾಲರ್ ಕೊಟ್ಟು ಇದ್ಯೆ ಅಲ್ಲಿ

  2. Shivalinga Murthy

   09/07/2024 at 4:32 PM

   ಬಾತ್ರೂಮ್

  Leave a Reply

  Your email address will not be published. Required fields are marked *

  LATEST NEWS

  ವಿದ್ಯುತ್ ತಂತಿಯಲ್ಲಿ ಜೀ*ವ ಕಳೆದುಕೊಂಡ ಹೆಬ್ಬಾವು..!

  Published

  on

  ಮಂಗಳೂರು ( ಉಳ್ಳಾಲ ) : ವಿದ್ಯುತ್ ಕಂಬ ಏರಿದ ಹೆಬ್ಬಾವೊಂದು ವಿದ್ಯುತ್ ಪ್ರವಹಿಸಿ ಸಾ*ವನ್ನಪ್ಪಿದ ಘಟನೆ ಉಳ್ಳಾಲದಲ್ಲಿ ನಡೆದಿದೆ. ಉಳ್ಳಾಲದ ಮುಕ್ಕಚ್ಚೇರಿಯಲ್ಲಿ ಈ ಘಟನೆ ನಡೆದಿದ್ದು, ಮುಂಜಾನೆ ವಿದ್ಯುತ್ ಶಾರ್ಟ್ ಆದ ಸದ್ದು ಕೇಳಿ ಹೊರ ಬಂದ ಮನೆಯವರಿಗೆ ಈ ದೃಶ್ಯ ಕಂಡು ಬಂದಿದೆ.

   

  ಬೃಹತ್ ಗಾತ್ರದ ಈ ಹೆಬ್ಬಾವು ವಿದ್ಯುತ್ ಕಂಬ ಏರಿದ್ದು ಯಾರೂ ಗಮನಿಸಿರಲಿಲ್ಲ. ಮಳೆಯ ಕಾರಣದಿಂದ ಮನೆಯೊಳಗೆ ಇದ್ದ ಜನರಿಗೆ ಶಾರ್ಟ್ ಸರ್ಕ್ಯೂಟ್ ಸದ್ದಿನಿಂದ ವಿಚಾರ ಗೊತ್ತಾಗಿದೆ. ಮಾಹಿತಿ ಪಡೆದು ಆಗಮಿಸಿದ ವಿದ್ಯುತ್ ಇಲಾಖೆಯ ಸಿಬ್ಬಂದಿ ಹೆಬ್ಬಾವಿನ ಕಳೇಬರವನ್ನು ಕಂಬದಿಂದ ತೆರವು ಮಾಡಿದ್ದಾರೆ.

  Continue Reading

  DAKSHINA KANNADA

  ಕಳ್ಳರನ್ನು ಹಿಡಿದ 60 ರ ವೃದ್ಧೆ..!

  Published

  on

  ಮಂಗಳೂರು :ವೃದ್ಧೆ ಮಹಿಳೆಯ ಕತ್ತಿನಿಂದ ಚಿನ್ನದ ಸರ ಎಗರಿಸಲು ಯತ್ನಿಸಿದ್ದ ಕಳ್ಳರಿಬ್ಬರಿನ್ನು ಮಹಿಳೆಯೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಗುಂಡ್ಯಾ ಸಮೀಪದ ಅಡ್ಡಹೊಳೆ ಎಂಬಲ್ಲಿ ನಡೆದಿದೆ.

  ಅಂಗಡಿಯಲ್ಲಿ ವೃದ್ಧ ಮಹಿಳೆ ಒಬ್ಬರೇ ಇದ್ದ ವೇಳೆ ಸ್ಕೂಟಿಯಲ್ಲಿ ಬಂದಿದ್ದ ಇಬ್ಬರು ವೃದ್ಧೆಯ ಕತ್ತಿನ ಸರ ಕಸಿಯಲು ಯತ್ನಿಸಿದ್ದಾರೆ. ಈ ವೇಳೆ ಜಾಗೃತಗೊಂಡ ಮಹಿಳೆ ತಕ್ಷಣ ಇಬ್ಬರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

  ತ್ರೇಸಿಯಾಮ್ಮ ಅವರಿಗೆ 60 ವರ್ಷ ವಯಸ್ಸಾಗಿದ್ದು, ಅಡ್ಡಹೊಳೆ ಹೆದ್ದಾರಿಯಲ್ಲಿ ಅಂಗಡಿ ನಡೆಸುತ್ತಿದ್ದಾರೆ. ಬೆಂಗಳೂರಿನಿಂದ ಕಳ್ಳತನ ನಡೆಸಲೆಂದೇ ಬಂದಿದ್ದ ಬೆಂಗಳೂರು ಯಶವಂತಪುರ ಮೂಲದ ರೋಹಿತ್ (25) ಮತ್ತು ಅಶೋಕ್ (25), ಎಂಬವರು ಮಂಗಳೂರಿನಲ್ಲಿ ವಾಹನ ಮಾರಾಟಗಾರಿಂದ ಟೆಸ್ಟ್ ಡ್ರೈವ್ ಮಾಡುತ್ತೇವೆ ಎಂದು ಸ್ಕೂಟಿ ಕಳ್ಳತನ ಮಾಡಿದ್ದಾರೆ. ಅದೇ ಸ್ಕೂಟಿಯಲ್ಲಿ ಬೆಂಗಳೂರಿಗೆ ಹೋಗುವ ದಾರಿಯಲ್ಲಿ ಚಿನ್ನದ ಸರ ಎಳೆಯಲು ಹೋಗಿ‌ ಸಿಕ್ಕಿಬಿದ್ದಿದ್ದಾರೆ.

  ಕಳ್ಳರಿಬ್ಬರನ್ನೂ ಉಪ್ಪಿನಂಗಡಿ ಪೊಲೀಸರ ವಶಕ್ಕೆ ಒಪ್ಪಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

  Continue Reading

  DAKSHINA KANNADA

  ಜುಲೈ 16. ದ.ಕ, ಉಡುಪಿ ಶಾಲಾ ಕಾಲೇಜಿಗೆ ರಜೆ..!

  Published

  on

  ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತು ಉಡುಪಿ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು,ಸೋಮವಾರ ಜುಲೈ 15 ರಂದು ರಜೆ ನೀಡಲಾಗಿತ್ತು. ನಾಳೆ (ಜುಲೈ 16 )ಕೂಡಾ ರೆಡ್‌ ಅಲರ್ಟ್ ಘೋಷಣೆ ಮಾಡಲಾಗಿದೆ. ಕರಾವಳಿ ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಬಹುತೇಕ ಹಳ್ಳ ನದಿಗಳು ಉಕ್ಕಿ ಹರಿಯುತ್ತಿದೆ. ಜುಲೈ 15 ರ ಮಳೆಯಿಂದ ಸಾಕಷ್ಟು ಕಡೆಗಳಲ್ಲಿ ಜನರು ತೊಂದರೆ ಅನುಭವಿಸಿದ್ದಾರೆ.

  ತಗ್ಗು ಪ್ರದೇಶಗಳಲ್ಲಿ ಕೆಲವೆಡೆ ಮನೆಗಳಿಗೆ ನೀರು ನುಗ್ಗಿದ ಘಟನೆ ಕೂಡಾ ನಡೆದಿದೆ. ಕೆಲೆವಡೆ ಶಾಲೆಯ ಗೋಡೆ ಕುಸಿತವಾಗಿದ್ದು, ಕೆಲವೆಡೆ ಗಾಳಿಗೆ ಶಾಲೆಯ ಹೆಂಚು ಹಾರಿ ಹೋಗಿದೆ. ನದಿಯ ನೀರು ಉಕ್ಕಿ ಹರಿಯುತ್ತಿದ್ದು, ಅಪಾಯದ ಅಂಚಿನಲ್ಲಿದೆ.

  ಹವಾಮಾನ ಇಲಾಖೆಯ ಸೂಚನೆಯಂತೆ ಜುಲೈ 16 ರಂದು ಕೂಡಾ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಜಿಲ್ಲೆಯಲ್ಲಿ ಎಲ್ಲಾ ಸರ್ಕಾರಿ, ಖಾಸಗಿ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
  ಭಾನುವಾರದಿಂದ ಶಾಲೆಗೆ ನಿರಂತರ ರಜೆ ಅನುಭವಿಸಿದ ಮಕ್ಕಳಿಗೆ ಬುಧವಾರ ಮೊಹರಂ ಪ್ರಯುಕ್ತ ಸರ್ಕಾರಿ ರಜೆ ಕೂಡ ಸಿಗಲಿದೆ. ಗುರುವಾರದಿಂದ ಮಳೆ ಕಡಿಮೆ ಆಗುವ ಸೂಚನೆ ಇದೆ.

  Continue Reading

  LATEST NEWS

  Trending