Connect with us

    DAKSHINA KANNADA

    ಉಳ್ಳಾಲದಲ್ಲಿ ಯುವಕನಿಗೆ ಚೂರಿ ಇರಿದು ಹತ್ಯೆ..!

    Published

    on

    ಮಂಗಳೂರು: ಮಂಗಳೂರು ನಗರ ಹೊರವಲಯದ ಉಳ್ಳಾಲ ಸೋಮೇಶ್ವರ ಪುರಸಭೆ ವ್ಯಾಪ್ತಿಯ ಸಾರಸ್ವತ ಕಾಲನಿ ಎಂಬಲ್ಲಿ  ಯುವಕನೋರ್ವನಿಗೆ ಚೂರಿಯಿಂದ ಇರಿದು ಹತ್ಯೆ ಮಾಡಿದ ಘಟನೆ  ಡಿ.13ರ ತಡರಾತ್ರಿ ವೇಳೆ ನಡೆದಿದೆ.

    ಸಾರಸ್ವತ ಕಾಲನಿ ನಿವಾಸಿ ವರುಣ್ (28) ಹತ್ಯೆಗೊಳಗಾದ ಯುವಕ. ಕೊಲ್ಯ ಜಾಯ್ಲಾಂಡ್ ಶಾಲೆ ಸಮೀಪ ತಡರಾತ್ರಿ ವೇಳೆ ಸೂರಜ್ ಹಾಗೂ ಇನ್ನಿಬ್ಬರು ಮದ್ಯಪಾನ ನಡೆಸುತ್ತಿರುವುದನ್ನು ವರುಣ್ ಪ್ರಶ್ನಿಸಿದ್ದರು. ಇದರಿಂದ ಐದು ಮಂದಿಯ ನಡುವೆ ವಾಗ್ವಾದ ನಡೆದು ಸೂರಜ್, ವರುಣ್ ಹೃದಯಭಾಗಕ್ಕೆ ಚೂರಿಯಿಂದ ತಿವಿದು ಹತ್ಯೆ ನಡೆಸಿದ್ದಾನೆ. ಹಳೇ ವೈಷಮ್ಯದಿಂದ ಕೃತ್ಯ ನಡೆದಿರುವ ಸಾಧ್ಯತೆಗಳಿದ್ದು, ಸೋಮೇಶ್ವರ ಪುರಸಭೆಗೆ ಡಿಸೆಂಬರ್ 27ಕ್ಕೆ ಚುನಾವಣೆಯೂ ನಡೆಯಲಿದ್ದು, ನಾಮಪತ್ರ ಸಲ್ಲಿಸಲು ಕೆಲವೇ ದಿನಗಳು ಬಾಕಿಯಿದೆ. ಈ ಸಂಬಂಧವೂ ಗಲಾಟೆ ನಡೆದಿರುವ ಸಾಧ್ಯತೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.  ಚೂರಿ ಇರಿದ ಸ್ಥಳೀಯ ನಿವಾಸಿ ಸೂರಜ್ ಪರಾರಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಘಟನೆಯಲ್ಲಿ ಸೋಮೇಶ್ವರ ಗ್ರಾಮ ಪಂಚಾಯತ್ ಮಾಜಿ ಸದಸ್ಯ ರವಿರಾಜ್ ಎಂಬವರಿಗೂ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ತನಿಖೆ ಮುಂದುವರಿದಿದೆ.

    Click to comment

    Leave a Reply

    Your email address will not be published. Required fields are marked *

    DAKSHINA KANNADA

    ಕಂಬಳ ಕ್ಷೇತ್ರದಲ್ಲಿ ಹಲವು ಮೆಡಲ್‌ಗಳನ್ನು ಗಳಿಸಿದ “ಲಕ್ಕಿ” ಇನ್ನಿಲ್ಲ..

    Published

    on

    ಕಿನ್ನಿಗೋಳಿ: ಕಂಬಳ ಕ್ಷೇತ್ರದ ಸಾಧಕ, ಹಲವಾರು ಮೆಡಲ್ ಗಳನ್ನು ತನ್ನದಾಗಿಸಿದ ಕೋಣ  ಲಕ್ಕಿ ಸಾವನ್ನಪ್ಪಿದೆ. ಐಕಳ ದಿವಾಕರ ಚೌಟ ಮಾಲಕತ್ವದ ಕೋಣ ಲಕ್ಕಿ ಕಳೆದ ಏಳೆಂಟು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಮಂಗಳವಾರ(ಜು.16) ಕಾರ್ಕಳದಲ್ಲಿ ಲಕ್ಕಿಗೆ ಅಪರೇಷನ್ ಕೂಡ ನಡೆದಿತ್ತು.

    ಮಳೆ ಸೃಷ್ಟಿಸಿದ ಅವಾಂತರ.. ಲಾರಿ ಏರಿ ಜಿಲ್ಲಾಧಿಕಾರಿ ಪ್ರಯಾಣ..!!

    ಖ್ಯಾತ ವೈದ್ಯ ವಾಸುದೇವ ಪೈ ಅಪರೇಷನ್ ನಡೆಸಿದ್ದು, ಮತ್ತೆ ಇಂದು ಚಿಕಿತ್ಸೆಗಾಗಿ ವೈದ್ಯರ ಬಳಿ ಕರೆದುಕೊಂಡು ಹೋಗಿದ್ದಾರೆ. ವೈದ್ಯರನ್ನು ನೋಡಿದ ಲಕ್ಕಿ ಹೆದರಿ ಅತ್ತಿಂದಿತ್ತ ಓಡತೊಡಗಿತ್ತು. ಲಕ್ಕಿಯ ಮಾಲಕರು ಮತ್ತು ಒಡನಾಡಿಗಳಿಗೂ ನಿಯಂತ್ರಣಕ್ಕೆ ಸಿಗದಾಯಿತು. ಕೊನೆಗೆ ಮರಕ್ಕೆ ಕಟ್ಟಿ ಹಾಕಿದ್ದು ಸ್ವಲ್ಪ ಹೊತ್ತಿನಲ್ಲೇ ಅಸು ನೀಗಿದೆ. ಲಕ್ಕಿ ಒಬ್ಬಂಟಿ ಕೋಣವಾಗಿದ್ದು ಕಂಬಳ ಸಂದರ್ಭ ಅದಕ್ಕೆ ಸರಿಯಾದ ಜೊತೆ ಹುಡುಕಿ ಕಂಬಳದಲ್ಲಿ ಓಡಿಸಲಾಗುತ್ತಿತ್ತು. ಈ ಬಾರಿ 5 ಮತ್ತು ಕಳೆದ ವರ್ಷ 5 ಮೆಡಲ್ ಗಳನ್ನು ತನ್ನದಾಗಿಸಿದ್ದ ಲಕ್ಕಿ ಹಲವಾರು ಮೆಡಲ್ ಗಳನ್ನು ಪಡೆದುಕೊಂಡಿತ್ತು.

    Continue Reading

    DAKSHINA KANNADA

    ಹಳೆಯ ಸಿದ್ದರಾಮಯ್ಯ ಕಳೆದು ಹೋಗಿದ್ದಾರೆ: ವಿ.ಸೋಮಣ್ಣ

    Published

    on

    ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಳೆದು ಹೋಗಿದ್ದಾರೆ. ಹಳೆ ಸಿದ್ದರಾಮಯ್ಯನವರು ಇಲ್ಲ ಎಂದು ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆಗಳ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.

    ಬುಧವಾರ ಮಂಗಳೂರಿನಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ, ಮುಡಾ ಹಗರಣ ವಿಚಾರದ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಸೋಮಣ್ಣ ಅವರು ಈ ಉತ್ತರ ನೀಡಿದರು.

    ನಾನು‌ ಅವರ ಜೊತೆ ಮಂತ್ರಿಯಾಗಿ, ಶಾಸಕನಾಗಿ ಕೆಲಸ ಮಾಡಿದ್ದೇನೆ. ಆ ಸಿದ್ದರಾಮಯ್ಯನವರು ಇವತ್ತು ಇಲ್ಲ. ಇವತ್ತು ಇರುವ ಸಿದ್ದರಾಮಯ್ಯನವರ ಕುರಿತು ನನಗೂ ಒಂದು ರೀತಿ ಅನುಮಾನ ಆಗಿದೆ ಎಂದರು. ‘ವಾಸ್ತವವನ್ನು ಯಾರೂ ಮುಚ್ಚಿಡಲು ಆಗಲ್ಲ. ಬೆಕ್ಕು ಕಣ್ಮುಚ್ಚಿಕೊಂಡು ಹಾಲು ಕುಡಿದರೆ ಯಾರಿಗೂ ಗೊತ್ತಾಗಲ್ಲ ಎಂದು ಯಾರೂ ತಿಳಿದುಕೊಳ್ಳಬಾರದು’

    ಸಿದ್ದರಾಮಯ್ಯನವರು ಅದನ್ನು ತಿದ್ದಿಕೊಂಡು ಜನರಿಗೆ ವಾಸ್ತವಾಂಶ ಏನೆಂದು ತಿಳಿಸಲಿ. ಆಗ ಅವರು ಹಳೆ ಸಿದ್ದರಾಮಯ್ಯ ಆಗುತ್ತಾರೆ ಎಂದು ಸಚಿವ ಸೋಮಣ್ಣ ಅವರು ಹೇಳಿದರು.

    Continue Reading

    DAKSHINA KANNADA

    ರೈಲ್ವೇ ರಾಜ್ಯ ಸಚಿವ ವಿ.ಸೋಮಣ್ಣ ಮಂಗಳೂರಿಗೆ ಭೇಟಿ

    Published

    on

    ಮಂಗಳೂರು: ರೈಲ್ವೆ ಅಭಿವೃದ್ಧಿ ಕುರಿತು ಪ್ರಗತಿ ಪರಿಶೀಲನೆಗಾಗಿ ಮಂಗಳವಾರ ರಾತ್ರಿ ಆಗಮಿಸಿದ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರನ್ನು ಸಂಸದ ಬ್ರಿಜೇಶ್ ಚೌಟ ಅವರು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.

    ಮೇಯರ್ ಸುಧೀರ್ ಶೆಟ್ಟಿ, ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ಬಿಜೆಪಿ ಜಿಲ್ಲಾ ಅಧ್ಯಕ್ಷ ಸತೀಶ್ ಕುಂಪಲ ಉಪಸ್ಥಿತರಿದ್ದರು.

    ಸಚಿವ ಸೋಮಣ್ಣ ಅವರು ಜುಲೈ 17 ರಂದು ಬೆಳಗ್ಗೆ ಒಂಭತ್ತು ಗಂಟೆಗೆ ಮಂಗಳೂರು ಸೆಂಟ್ರಲ್ ನಿಲ್ದಾಣ, ಬಳಿಕ ಮಂಗಳೂರು ಜಂಕ್ಷನ್ ನಿಲ್ದಾಣಕ್ಕೆ ಭೇಟಿ ನೀಡಿದರು. ಬಳಿಕ ಕೊಟ್ಟಾರದಲ್ಲಿರುವ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ರೈಲ್ವೆ ಸಂಬಂಧಿಸಿ ಸಭೆಯ ನೇತೃತ್ವ ವಹಿಸಲಿದ್ದಾರೆ.

    Continue Reading

    LATEST NEWS

    Trending