Connect with us

LATEST NEWS

ಭಟ್ಕಳ: 24 ಗಂಟೆ ಬಂಡೆಗಳ ಮಧ್ಯೆ ಸಿಲುಕಿಕೊಂಡಿದ್ದ ಯುವಕನ ರಕ್ಷಣೆ..!

Published

on

ಬಂಡೆಗಳ ಮಧ್ಯೆ ಸಿಲುಕಿಕೊಂಡಿದ್ದ ಯುವಕನನ್ನು ಅಗ್ನಿಶಾಮಕ ಸಿಬ್ಬಂದಿಗಳು ರಕ್ಷಣೆ ಮಾಡಿರುವಂತಹ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಹಡೀನ್‌ನಲ್ಲಿರುವ ಹುಯ್ಲಮಿಡಿ ಇಕೋ ಪಾರ್ಕ್‌ನಲ್ಲಿ ನಡೆದಿದೆ.

ಭಟ್ಕಳ : ಬಂಡೆಗಳ ಮಧ್ಯೆ ಸಿಲುಕಿಕೊಂಡಿದ್ದ ಯುವಕನನ್ನು ಅಗ್ನಿಶಾಮಕ ಸಿಬ್ಬಂದಿಗಳು ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಹಡೀನ್‌ನಲ್ಲಿರುವ ಹುಯ್ಲಮಿಡಿ ಇಕೋ ಪಾರ್ಕ್‌ನಲ್ಲಿ ನಡೆದಿದೆ.

ಸಮೀರ್​​ ಸುಲೇಮಾನ್ ಬಂಡೆಗಳ ನಡುವೆ ಸಿಲುಕಿಕೊಂಡಿದ್ದ ಯುವಕ.

ಭಟ್ಕಳದ ಹಳೆ ಬಸ್‌ನಿಲ್ದಾಣ ಬಳಿಯ ನಿವಾಸಿ. ನಿನ್ನೆ ಸಂಜೆ ಸ್ನೇಹಿತನೊಂದಿಗೆ ಇಕೋ ಪಾರ್ಕ್‌ಗೆ ತೆರಳಿದ್ದಾರೆ.

ಸಂಜೆ ಹೋದವನು ವಾಪಸ್ಸಾಗದ ಹಿನ್ನೆಲೆ ಸ್ನೇಹಿತ ಆತಂಕಗೊಂಡಿದ್ದಾನೆ. ಮಗನಿಗಾಗಿ ಪಾಲಕರು ರಾತ್ರಿ ಹುಡುಕಾಟ ನಡೆಸಿದ್ದಾರೆ. ಇಕೋ ಪಾರ್ಕ್ ತೆರಳಿದ್ದ ವಿಷಯ ತಿಳಿದು ಪಾಲಕರು ಇಂದು ಹುಡುಕಾಟ ನಡೆಸಿದ್ದಾರೆ.

ಕಡಲತೀರದ ಬಳಿ ಬಂಡೆಗಲ್ಲುಗಳ ನಡುವೆ ಸಿಲುಕಿದ್ದನ್ನ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿಯಿಂದ ಯುವಕನ ರಕ್ಷಣೆ ಮಾಡಿದ್ದು, ಪಾಲಕರು ಮತ್ತು ಯುವಕ ನಿಟ್ಟುಸಿರುಬಿಟ್ಟಿದ್ದಾರೆ. ಭಟ್ಕಳ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Click to comment

Leave a Reply

Your email address will not be published. Required fields are marked *

LATEST NEWS

ಜಾಮೂನು ದೋಸಾ ಸವಿದಿದ್ದೀರಾ? ವೈರಲ್ ಆಯ್ತು ಹೊಸ ಬಗೆಯ ಖಾದ್ಯ!

Published

on

ಮಂಗಳೂರು/ ಚಂಡೀಗಢ : ಇತ್ತೀಚೆಗೆ ವೆರೈಟಿ ವೆರೈಟಿ ತಿಂಡಿ – ತಿನಿಸುಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿರುತ್ತವೆ. ಕ್ಯಾಂಟಿನ್ ಗಳಲ್ಲಿ ಹೋಟೆಲ್, ಡಾಬಾಗಳಲ್ಲಿ ನಾನಾ ತರದ ವಿಶೇಷ ಖಾದ್ಯ ಸಿದ್ಧಗೊಳ್ಳುತ್ತವೆ. ಕೆಲವೊಂದು ಆಹಾರಗಳು ವೈರಲ್ ಆಗುತ್ತವೆ. ಕೆಲವೊಂದು ಚಿತ್ರ, ವಿಚಿತ್ರವಾಗಿರುತ್ತವೆ.

ಇದೀಗ ‘ಗುಲಾಬ್ ಜಾಮೂನ್ ದೋಸಾ’ ಸರದಿ. ಈ ಡಿಫರೆಂಟ್ ದೋಸೆಯ ವೀಡಿಯೋ ವೈರಲ್ ಆಗುತ್ತಿದೆ.

ಜಾಮೂನ್ ದೋಸಾ ತಯಾರಿಸಿದ್ದು ಹೇಗೆ?

ಈ ದೋಸೆ ತಯಾರಿಯ ವೀಡಿಯೋವೊಂದನ್ನು ಬ್ಲಾಗರ್ ಒಬ್ಬರು ಹಂಚಿಕೊಂಡಿದ್ದಾರೆ. ಚಂಡೀಗಢದಲ್ಲಿ ದೋಸೆ ಮಾರುವ ಬೀದಿ ಬದಿ ಮಳಿಗೆಗೆ ವಿಡಿಯೋ ಬ್ಲಾಗರ್ ತೆರಳಿ ಗುಲಾಬ್ ಜಾಮೂನ್ ದೋಸೆ ಸವಿದಿದ್ದಾರೆ.


ಅವರು ಮಾಡಿರುವ ವಿಡಿಯೋದಲ್ಲಿ ದೋಸೆ ತಯಾರಿಸುವುರಿಂದ ಸವಿಯುವ ವರೆಗೆ ಇದೆ. ಸಾಮಾನ್ಯವಾಗಿ ದೋಸೆ ಮೇಲೆ ಅಲೂಗೆಡ್ಡೆ, ಕ್ಯಾರೇಟ್, ಟೊಮೆಟೋ ಚಟ್ನಿ, ಖಾರ ಪುಡಿ ಇನ್ನಿತರ ಪದಾರ್ಥಗಳನ್ನು ಬಳಸಲಾಗುತ್ತೆ. ಆದ್ರೆ, ಇಲ್ಲಿ ವ್ಯಾಪಾರಿಯು ಜಾಮೂನು ಸೇರಿಸಿದ್ದಾರೆ.


ಕಾದ ಹೆಂಚಿನ ಮೇಲೆ ದೋಸೆ ಹಿಟ್ಟನ್ನು ಹರಡುತ್ತಾರೆ. ನಂತರ ಮೂರು ಜಾಮೂನ್ ಉಂಡೆಗಳನ್ನು ಸಿದ್ಧವಾಗುತ್ತಿರುವ ದೋಸೆ ಮೇಲೆ ಹಾಕಿ ಚಮಚದಿಂದ ಸಣ್ಣಗೆ ಪೀಸ್ ಮಾಡಿ ದೋಸೆಯ ಮೇಲೆಲ್ಲಾ ಹರಡುತ್ತಾನೆ. ದೋಸೆ ಬೆಂದು ಸಿದ್ಧವಾದ ಮೇಲೆ ಅದಕ್ಕೆ ತೆಂಗಿನ ಕಾಯಿ ಪುಡಿ, ಕ್ರೀಮ್ ಜೊತೆಗೆ ಜಾಮೂನಿನ ಸಿಹಿ ಪಾಕ ಸಹ ಹಾಕಿ ಬ್ಲಾಗರ್‌ಗಳಿಗೆ ಸವಿಯಲು ಕೊಡುತ್ತಾನೆ.

ಇದನ್ನೂ ಓದಿ : ಏನಿದು ವಿಮಲ್ ಪಾನ್ ಮಸಾಲಾ ಐಸ್‌ ಕ್ರೀಮ್..! ಜನರು ಉಗಳಬೇಕೋ, ನುಂಗಬೇಕಾ ಎಂದು ಪ್ರಶ್ನೆ ಮಾಡಿದ್ಯಾಕೆ?

ದೋಸೆ ಸಿದ್ಧವಾಗುವವರೆಗೂ ಅಪರೂಪದ ಮತ್ತು ಅಸಾಂಪ್ರದಾಯಿಕ ಪದ್ಧತಿಯಿಂದ ಮಾಡಿದ ಈ ದೋಸೆ ತಿನ್ನಬಹುದೇ ಎಂದು ಬ್ಲಾಗರ್ ತಮಾಷೆಯಾಗಿ ಕೇಳುತ್ತಾರೆ. ಇದಕ್ಕೆ ವ್ಯಾಪಾರಿ ಗ್ರಾಹಕರ ಬೇಡಿಕೆಗೆ ಇಷ್ಟವಾದ ಪದಾರ್ಥ ಪೂರೈಸುತ್ತಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾನೆ.

ನಂತರ ಬಿಸಿ ಬಿಸಿ ದೋಸೆಯನ್ನು ಬ್ಲಾಗರ್ ಸವಿದಿದ್ದಾರೆ. ವಾವ್ ಟೇಸ್ಟಿ ಎಂದು ಉದ್ಗರಿಸಿದ್ದಾರೆ. ಇನ್ನು ವೀಡಿಯೋ ನೋಡಿ ಹಲವರು ಜಾಮೂನು ದೋಸೆ ಸವಿಯುವ ಉತ್ಸಾಹ ತೋರಿದ್ದಾರೆ.

Continue Reading

LATEST NEWS

ಜಾನ್ವಿ ಕಪೂರ್ ಧರಿಸಿರುವ ಈ ಮಿನಿ ಡ್ರೆಸ್ ಬೆಲೆ 1.86 ಲಕ್ಷ

Published

on

ದಿಲ್ಲಿ: ಬಾಲಿವುಡ್‌ ನಟಿ ಜಾನ್ವಿ ಕಪೂರ್‌ ದುಬಾರಿ ಮಿನಿ ಉಡುಗೆ ಧರಿಸಿ ಫೋಟೋಶೂಟ್‌ ಮಾಡಿಕೊಂಡಿದ್ದಾರೆ. ಸ್ಟೈಲಿಶ್ ಚೆಕ್ ಮಿನಿ ಡ್ರೆಸ್‌ನಲ್ಲಿ ಅದ್ಭುತವಾಗಿ ಕಾಣಿಸುತ್ತಿದ್ದಾರೆ. ಈಕೆ ಯಾವುದೇ ಬಗೆಯ ಉಡುಗೆ ತೊಟ್ಟರೂ ಅದ್ಭುತವಾಗಿ ಕಾಣಿಸುತ್ತಾರೆ.

ಜಾನ್ವಿ ಕಪೂರ್‌ ಈ ಫೋಟೋಗಳನ್ನು ಸೋಷಿಯಲ್ ಮಿಡೀಯಾದಲ್ಲಿ ಹಂಚಿಕೊಂಡಿದ್ದಾರೆ. ಕಪ್ಪು ಮತ್ತು ಬಿಳಿ ಚೆಕ್‌ ಡ್ರೆಸ್‌ನಲ್ಲಿ ಗೊಂಬೆಯಂತೆ ಕಾಣಿಸಿದ್ದಾರೆ. ಈ ಮಿನಿ ಉಡುಗೆಯ ನೆಕ್‌ಲೈನ್‌, ಉಬ್ಬಿದ ತೋಳುಗಳು, ಬಾಡಿಕನ್‌ ಫಿಟ್‌ ವಿನ್ಯಾಸವು ಎಲ್ಲರ ಗಮನ ಸೆಳೆದಿದೆ. ಈ ಪುಟ್ಟ ಉಡುಗೆಯಲ್ಲಿ ವಿಶೇಷ ನೋಟ ಬೀರಿದ್ದಾರೆ.

ನೀವು ಜಾನ್ವಿಯ ಈ ಉಡುಪನ್ನು ಇಷ್ಟಪಟ್ಟಿರಬಹುದು. ಆದರೆ ಇದರ ಬೆಲೆ ಕೇಳಿ ಅಚ್ಚರಿ ಪಡಬೇಡಿ. ಡಿಸೈನರ್ ಬ್ರಾಂಡ್ ಅಲೆಸ್ಸಾಂಡ್ರಾ ರಿಚ್ನ ಈ ಉಡುಗೆಯ ಬೆಲೆ 2,232 ಡಾಲರ್. ಅಂದರೆ ಸುಮಾರು 1.86 ಲಕ್ಷ ರೂಪಾಯಿ.

ಸೆಲೆಬ್ರಿಟಿ ಫ್ಯಾಷನ್ ಸ್ಟೈಲಿಸ್ಟ್ ಮನಿಷಾ ಮೆಲ್ವಾನಿ ನೆರವಿನನಿಂದ ಒಂದು ಜೋಡಿ ಮುತ್ತು ಸ್ಟಡ್ ಕಿವಿಯೋಲೆ, ಡೈಮಂಡ್ ಸ್ಟೇಟ್ಮೆಂಟ್ ಚೈನ್ ನೆಕ್ಲೆಸ್‌, ಬಿಳಿ ಪಂಪ್‌ ಹೀಲ್ಸ್‌ ಧರಿಸಿದ್ದಾರೆ. ಈ ನೆಕ್ಲೆಸ್‌ ಅನ್ನು ಈಕೆಯ ಬಾಯ್‌ಫ್ರೆಂಡ್‌ ಶಿಖು ನೀಡಿದ್ದಾರೆ ಎಂಬ ವದಂತಿಗಳಿವೆ.

ಮೇಕಪ್ ಕಲಾವಿದೆ ತನ್ವಿ ಚೆಂಬೂರ್ಕರ್ ಅವರ ನೆರವಿನಿಂದ ಜಾನ್ವಿ ಮೇಕಪ್‌ ಮಾಡಿಕೊಂಡಿದ್ದಾರೆ. ಕಪ್ಪು ಹುಬ್ಬುಗಳು, ಕೆಂಪಾದ ಕೆನ್ನೆಗಳು, ಹೊಳೆಯುವ ಹೈಲೈಟರ್, ನೇಕ್ಡ್‌ ಲಿಪ್‌ಸ್ಟಿಕ್‌ನಿಂದ ಮುದ್ದಾಗಿ ಕಾಣಿಸುತ್ತಾರೆ.

ಹೇರ್ ಸ್ಟೈಲಿಸ್ಟ್ ಮಾರ್ಸೆ ಪೆಡ್ರೊಜೊ ಅವರ ನೆರವಿನಿಂದ ಜಾನ್ವಿ ಕಪೂರ್‌ ಗುಂಗುರು ಕೂದಲಿನ ವಿನ್ಯಾಸ ಮಾಡಿಕೊಂಡಿದ್ದಾರೆ. ಕೂದಲಿನ ಒಂದು ಭಾಗವನ್ನು ಹಿಂದಕ್ಕೆ ಪಿನ್‌ ಮಾಡಿಕೊಂಡು ಉಳಿದ ಕೂದಲುಗಳನ್ನು ಭುಜಗಳ ಕೆಳಗೆ ಸುಂದರವಾಗಿ ಹರಡಿದ್ದಾರೆ.

Continue Reading

LATEST NEWS

ಭಾರತದ ರೆಡ್ ಲೈಟ್ ಏರಿಯಾ.. ಒಂದು ಗಂಟೆಗೆ ಎಷ್ಟು ಹಣ ಗೊತ್ತೇ..?

Published

on

ರೆಡ್ ಲೈಟ್ ಏರಿಯಾ ಇದರ ಹೆಸರು ಕೇಳಿದರೆ ಸಾಕು ಎಲ್ಲರಲ್ಲಿ ಒಂದು ರೀತಿಯ ಭಾವ ಬರುತ್ತದೆ. ಆದರೆ ನಮ್ಮ ಭಾರತದಲ್ಲಿ ಇರುವ ಅತೀ ದೊಡ್ಡ ರೆಡ್ ಲೈಟ್ ಏರಿಯಾ ಬಗ್ಗೆ ಹೆಚ್ಚಿನವರಿಗೆ ತಿಳಿಯಲಿಕ್ಕಿಲ್ಲ. ಇಡೀ ಭಾರತದಲ್ಲಿ 1100 ರಿಜಿಸ್ಟರ್ ರೆಡ್ ಲೈಟ್ ಏರಿಯಾಗಳು ಇದೆ. ಹಾಗೆಯೇ ನಮ್ಮ ಭಾರತದಲ್ಲಿ 30 ಲಕ್ಷಕ್ಕೂ ಹೆಚ್ಚಿನ ಮಹಿಳೆಯರು ಈ ದಂಧೆಯಲ್ಲಿ ಭಾಗಿಯಾಗಿದ್ದಾರೆ.

ಇನ್ನು ಈ ದಂಧೆಗೆ ಹೆಣ್ಣು ಮಕ್ಕಳನ್ನು ಹೇಗೆ ಇಳಿಸುತ್ತಾರೆ ಎಂದರೆ ಕೆಳವರ್ಗದಿಂದ ಇಲ್ಲವಾದರೆ ಬಡ ಕುಟುಂಬದಿಂದ ಹೆಣ್ಣು ಮಕ್ಕಳನ್ನ ಕಿಡ್ನಪ್ ಮಾಡಿ ಅಥವಾ ಹಣದಾಸೆ ತೋರಿಸಿ ಹೆತ್ತವರಿಂದ ಹೆಣ್ಣು ಮಕ್ಕಳನ್ನು ತೆಗೆದುಕೊಂಡು ಅವರಿಗೆ ಚಿತ್ರಹಿಂಸೆ ಮಾಡಿ ಅವರಿಗೇ ಗೊತ್ತಿಲ್ಲದ ಹಾಗೆ ಅವರು ಹುಟ್ಟಿದ್ದೇ ವೇಶ್ಯವಾಟಿಕೆ ಮಾಡುವುದಕ್ಕೆ, ಅಲ್ಲದೇ ವೇಶ್ಯವಾಟಿಕೆ ಮಾಡುವುದು ದೇವರ ಕೆಲಸ ಅನ್ನುವ ಹಾಗೆ ಅವರ ಬ್ರೈನ್ ವಾಶ್ ಮಾಡುತ್ತಾರೆ. ಹಾಗೆಯೇ ಅವರಿಗೆ ಡ್ರಗ್ಸ್, ಸಿಗರೇಟ್, ಮಧ್ಯದಂತಹ ಚಟಗಳನ್ನು ಕಲಿಸಿ ಈ ರಂಗಕ್ಕೆ ಇಳಿಸಿ ಬಿಡುತ್ತಾರೆ. ಅವರೊಂದು ಬೋಲ್ಡ್ ಅಗಿ ಬಿಹೇವ್ ಮಾಡುವ ತರ ಆಗಿ ಹೋಗುತ್ತಾರೆ.

ಇವರು ಮಾಡುವ ಕೆಲಸದಿಂದ ಬರುವ ಹಣದಿಂದ 50% ಮಾತ್ರ ಇವರಿಗೆ ಕೊಡುತ್ತಾರೆ. ಹಾಗೆಯೇ ಗಂಟೆಗೆ ಇಷ್ಟು ಎಂದು ಮಾತನಾಡಿ ಇವರನ್ನು ಚೆನ್ನಾಗಿ ಬಳಸಿಕೊಳ್ಳುತ್ತಾರೆ. ಇನ್ನು ಉಳಿದ 50% ಅನ್ನು ಇವರು ಈ ರಂಗಕ್ಕೆ ಇಳಿಯಲು ಕಾರಣೀಕರ್ತರಾದ ಕಾಣದ ಕೈಗಳಿಗೆ ಹೋಗುತ್ತದೆ. ಆ ಕಾಣದ ಕೈಗಳು ದೊಡ್ಡ ಕೈಗಳೇ ಆಗಿರಬಹುದು. ಎಷ್ಟೋ ಜನ ಮಹಿಳೆಯರು ತಮಗೆ ಇಷ್ಟವಿಲ್ಲದಿದ್ದರೂ ಇದೇ ದಂಧೆಯಲ್ಲಿ ಕಷ್ಟಪಡುತ್ತಿದ್ದಾರೆ. ಆ ಕಡೆಯಿಂದ ಹೊರಗೂ ಬಾರದೇ ಈ ಕಡೆಯಿಂದ ಅನುಭವಿಸಲೂ ಆಗದೇ ಕಷ್ಟಪಡುತ್ತಿದ್ದಾರೆ. ಇದೇ ತರಹ ಭಾರತದಲ್ಲೂ ಕೆಲವು ಭಯಾನಕ ರೆಡ್ ಲೈಟ್ ಏರಿಯಾಗಳು ಇವೆ. ಇವುಗಳ ಬಗ್ಗೆ ತಿಳಿಯೋಣ.

1. ಸೋನಗಚಿ, ಕೋಲ್ಕತ್ತಾ

ಕೋಲ್ಕತ್ತಾದಲ್ಲಿರುವ ಸೋನಗಚಿ ಭಾರತದ ಅತಿ ದೊಡ್ಡ ರೆಡ್ ಲೈಟ್ ಏರಿಯಾಗಳಲ್ಲಿ ಒಂದು. ಹೌದು ಇಲ್ಲಿ ಒಂದು ದೊಡ್ಡ ಏರಿಯಾನೇ ಇದೆ. ದೊಡ್ಡ ದೊಡ್ಡ ಮನೆಗಳು, ಅಂಕು ಡೊಂಕಾದ ದಾರಿಗಳು, ಎಲ್ಲಿ ನೋಡಿದರೂ ಸಣ್ಣ ಸಣ್ಣ ಮನೆಗಳು, ಸೆಕ್ಸ್ ವರ್ಕರ್‌ಗಳು ಕಾಣ ಸಿಗುತ್ತಾರೆ. ಒಂದು ರೀತಿಯಲ್ಲಿ ಹೆಣ್ಣು ಮಕ್ಕಳ ಸಂತೇ ಏನೋ ಅನ್ನುವವರೆಗೆ ಇಲ್ಲಿ ರಶ್ ಆಗಿ ಇರುತ್ತದೆ ಅಂತೆ. ಈ ಏರಿಯಾದಲ್ಲಿ ಪ್ರತಿ ಗಂಟೆಗೆ 6-7 ಹೆಣ್ಣು ಮಕ್ಕಳು ಈ ರೀತಿಯ ಲೈಂಗಿಕ ಕಾರ್ಯಕ್ಕೆ ಇಳಿಯುತ್ತಿದ್ದಾರೆ. ಈ ಏರಿಯಾದಲ್ಲಿ ಸುಮಾರು 16 ಸಾವಿರ ಸೆಕ್ಸ್ ವರ್ಕರ್ಸ್ ಇದ್ದಾರೆ ಅಂತೆ.

2. ಕಾಮಟಿಪುರ, ಮುಂಬೈ

ಮುಂಬೈನಲ್ಲಿರುವ ಕಾಮಟಿಪುರ ಏಷ್ಯಾದ ಅತ್ಯಂತ ಹಳೆಯ ರೆಡ್ ಲೈಟ್ ಏರಿಯಾಗಳಲ್ಲಿ ಒಂದಾಗಿದೆ. ಸಂಜೆ ಕಳೆದು ರಾತ್ರಿಯಾಗುತ್ತಿರುವಂತೆ ಸ್ಟ್ರೀಟ್‌ಲೈಟ್ ನ ಬೆಳಕಲ್ಲಿ ದೀಪದ ಹುಳುಗಳಂತೆ ಹಲವಾರು ಹೆಣ್ಣುಗಳು ಬಂದು ನಿಲ್ಲುತ್ತಾರೆ. ಗಿರಾಕಿಯನ್ನು ಸೆಳೆಯಲು ಏನ್ನಿಲ್ಲದ ಪ್ರಯತ್ನ ಮಾಡುತ್ತಿರುತ್ತಾರೆ. ಬಡತನದ ಕಾರಣಕ್ಕೆ ಈ ವೃತ್ತಿಗಿಳಿದವರು, ಅಕ್ರಮವಾಗಿ ಯಾರಿಂದಲೋ ಇಲ್ಲಿಗೆ ಸಾಗಿಸಲ್ಪಟ್ಟವರು ಹೀಗೆ ಇಲ್ಲಿರುವ ಒಬ್ಬೊಬ್ಬ ಹೆಣ್ಣುಮಗಳದ್ದು ಒಂದೊಂದು ಕಥೆ. ಸುಮಾರು 50 ಸಾವಿರಕ್ಕೂ ಅಧಿಕ ವೇಶ್ಯೆಯರು ಇಲ್ಲಿದ್ದಾರಂತೆ.

3. ಜಿಬಿ ರಸ್ತೆ, ದೆಹಲಿ

ದೆಹಲಿಯ ಗಾರ್ಸ್ಟಿನ್ ಬಾಸ್ಟನ್ ರಸ್ತೆ, ಜಿಬಿ ರಸ್ತೆ ಎಂದು ಜನಪ್ರಿಯವಾಗಿದೆ. ಇದು ರಾಜಧಾನಿಯ ಅತಿದೊಡ್ಡ ಕೆಂಪು-ದೀಪ ಪ್ರದೇಶಗಳಲ್ಲಿ ಒಂದಾಗಿದೆ. ಇಲ್ಲಿ ಸಣ್ಣದಿಂದ ಹಿಡಿದು ದೊಡ್ಡ ವ್ಯಾಪಾರಿಗಳು, ಅಂಗಡಿಯವರು, ಕಾರ್ಮಿಕರು, ಭಿಕ್ಷುಕರು ಮತ್ತು ಜೇಬುಗಳ್ಳರು ಎಲ್ಲಾ ತರಹದ ಜನಗಳು ಈ ಜಾಗದಲ್ಲಿ ಇದ್ದಾರೆ. ಇಲ್ಲಿನ ಪ್ರತಿಯೊಂದು ಕಟ್ಟಡಗಳಿಗೆ ಮೆಟ್ಟಿಲುಗಳಿದ್ದು ಈ ಮೆಟ್ಟಿಲುಗಳ ಮುಖೇನ ಹತ್ತುವಾಗ ಹೆಂಗಸರು ಬಾಗಿಲಲ್ಲಿ ನಿಂತು ತಮ್ಮೊಂದಿಗೆ ಸಂಭೋಗಿಸಲು ಪುರುಷರನ್ನು ಪ್ರೋತ್ಸಾಹಿಸುತ್ತಿರುತ್ತಾರೆ.
ಹೀಗೆ ಭಾರತದ ಪುಣೆಯ ಬುಧ್ವರ್ ಪೇಠ್, ಅಲಹಾಬಾದ್‌ನ ಮೀರ್‌ಗಂಜ್ ಪ್ರದೇಶಗಳಲ್ಲೂ ಇಂತಹ ರೆಡ್ ಲೈಟ್ ಏರಿಯಾಗಳು ಇದೆ.

Continue Reading

LATEST NEWS

Trending