Connect with us

  LATEST NEWS

  ಏನಿದು ‘ವಿಮಲ್ ಪಾನ್ ಮಸಾಲಾ ಐಸ್‌ ಕ್ರೀಮ್’..! ಜನರು ಉಗಳಬೇಕೋ, ನುಂಗಬೇಕಾ ಎಂದು ಪ್ರಶ್ನೆ ಮಾಡಿದ್ಯಾಕೆ?

  Published

  on

  ಇತ್ತೀಚಿನ ದಿನಗಳಲ್ಲಿ ಫುಡ್‌ಗಳಲ್ಲಿ ಎಕ್ಸ್ಪ ರಿಮೆಂಟ್ ಮಾಡೋದು ಜಾಸ್ತಿ ಆಗಿದೆ. ಹಿಂದೆಲ್ಲ ಫುಡ್ ಅಂದ್ರೆ ಅದು ರುಚಿಕರವಾಗಿ ಸ್ವಾದಭರಿತವಾಗಿ ಇರುತ್ತಿತ್ತು.  ಜೊತೆಗೆ ಆರೋಗ್ಯಕರವಾಗಿಯೂ ಇರುತ್ತಿತ್ತು. ಆದರೆ ಈಗೀಗ ಫುಡ್‌ಗಳ ಎಕ್ಸ್ಪ ರಿಮೆಂಟ್‌ಗಳಿಂದಾಗಿ ಮನಷ್ಯನ ಆರೋಗ್ಯವೂ ಕೈ ತಪ್ಪಿ ಹೋಗುತ್ತಿದೆ. ಲೈಕ್ಸ್, ಕಮೆಂಟ್‌ಗಳ ಮೋಜಿಗೆ ಬಿದ್ದ ಜನರು ಸಿಕ್ಕ ಸಿಕ್ಕ ಒಂದಕ್ಕೊಂದು ಹೊಂದಾಣಿಕೆಯೇ ಇಲ್ಲದ ಐಟಂ ಗಳಿಂದ ಆಹಾರ ತಯಾರಿಸುತ್ತಿದ್ದಾರೆ.

  ಇದೀಗ ವಿಮ್ ಪಾನ್ ಮಸಾಲಾ ಮಿಶ್ರಿತ ಐಸ್‌ಕ್ರೀಂ ಒಂದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಪಾನ್ ಮಸಾಲಾ ಸಹಿತವಾದ ಐಸ್‌ಕ್ರೀಮ ತಯಾರಿಸಿದ ರೀತಿ ಹಾಗೂ ಅದನ್ನು ಡೆಕೋರೇಟ್ ಮಾಡಿದ ರೀತಿಗೆ ಜನ ಫಿದಾ ಆಗಿದ್ದಾರೆ.

  ಮುಂದೆ ಓದಿ..; ದೇವಸ್ಥಾನದಲ್ಲಿ ಚಪ್ಪಲಿ ಕಳೆದುಹೋದರೆ ಒಳ್ಳೆಯದಾ..? ಕೆಟ್ಟದ್ದಾ..?

  ಬಾಲಿವುಡ್ ಸ್ಟಾರ್ ಅಜಯ್ ದೇವಗನ್, ಶಾರುಖ್‌ ಖಾನ್‌ ಹಾಗೂ ಅಕ್ಷಯ್ ಕುಮಾರ್ ಅವರು ಪ್ರಚಾರ ಮಾಡ್ತಾ ಇರೋ ವಿಮಲ್ ಎಲೈಚಿ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುತ್ತದೆ. ಬೋಲೋ ಜುಬಾನ್ ಕೇಸರ್ ಕಿ ಅಂತ ಹೇಳೋ ಈ ಜಾಹಿರಾತು ಸಾಕಷ್ಟು ಫೇಮಸ್ ಆಗಿದೆ.  ಆದ್ರೆ ಇದೀಗ ಇದೇ ವಿಮಲ್ ಪಾನ್ ಮಸಾಲಾ ಐಸ್‌ ಕ್ರೀಮ್ ಜೊತೆಗೆ ಹೊಸ ರೂಪ ಪಡೆದುಕೊಂಡಿದೆ. ಈ ರೀತಿ ವಿಮಲ್ ಪಾನ್ ಮಸಾಲಾ ಜೊತೆಗೆ ಐಸ್‌ಕ್ರೀಂ ಮಾಡಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹವಾ ಎಬ್ಬಿಸಿದ್ದು, ಜನರು ಈ ವೀಡಿಯೋಗೆ ಕಮೆಂಟ್ ಮಾಡುತ್ತಿದ್ದಾರೆ.

  ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಮಿಮಲ್ ಪಾನ್ ಮಸಾಲಾ ಬಳಸಿ ವಿಶೇಷ ಐಸ್ ಕ್ರೀಂ ತಯಾರಿಸಲಾಗಿದೆ. ಮೊದಲಿಗೆ ಐಸ್‌ಕ್ರೀಮ್ ಪ್ಲೇಟ್ ಮೇಲೆ ವಿಮಲ್ ಪಾನ್ ಮಸಾಲಾ ಹಾಕಿ ನಂತರ ಅದರ ಮೇಲೆ ಐಸ್‌ಕ್ರೀಂ ಹಾಕುತ್ತಾರೆ. ಬಳಿಕ ಅವೆರಡರ ಮಿಶ್ರಣ ಮಾಡಿ  ರೋಲ್ ಮಾಡಿ ಡೆಕೋರೇಟ್ ಮಾಡ್ತಾರೆ. ಇದಕ್ಕೆ ಕೆಲವೊಂದು ಸಾಸ್‌ಗಳನ್ನೂ ಕೂಡಾ ಬಳಸಿ ಚಾಕೋಲೇಟ್ ಚಿಪ್ಸ್‌ ಮುಂತಾದವುಗಳನ್ನು ಸೇರಿಸಿಕೊಂಡಿದ್ದಾರೆ. ಒಟ್ಟಾರೆ ಹೇಳ್ಬೇಕಂದ್ರೆ ಕಲರ್ ಫುಲ್ ಆಗಿ ರೆಡಿಯಾದ ಪಾನ್ ಐಸ್ ಕ್ರೀಂ ನೋಡಿ ಜನ ಅಂತು ಫಿದಾ ಆಗಿದ್ದಾರೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬರೋಬ್ಬರಿ 23ಮಿಲಿ ಜನರು ವೀಕ್ಷಕಣೆ ಮಾಡಿದ್ದು, ಪರ ವಿರೋಧ ಚರ್ಚೆಗಳಾಗುತ್ತಿದೆ. ಕೆಲವರು ಈ ಐಸ್‌ಕ್ರೀಂ ಅನ್ನು ಅಜಯ್ ದೇವಗನ್‌ಗೆ ನೀಡಿ ಎಂದರೆ ಇನ್ನು ಕೆಲವರು ಈ ಐಸ್‌ಕ್ರೀಂ ತಿಂದು ಉಗುಳಬೇಕಾ.. ನುಂಗಬೇಕಾ ಎಂದು ಪ್ರಶ್ನೆ ಮಾಡ್ತಾ ಇದ್ದಾರೆ. ಈ ಹಿಂದೆ ಮ್ಯಾಗಿ ಹಾಗೂ ಐಸ್‌ಕ್ರೀಂ ಮಿಕ್ಸ್‌ ಮಾಡಿ ರೋಲ್ ಮಾಡಿದ್ದು ಅದನ್ನು ಚಪ್ಪರಿಸಿಕೊಂಡು ತಿಂದ ವೀಡಿಯೊ ವೈರಲ್ ಆಗಿತ್ತು.

  ಅದೇನೆ ಆಗಲಿ ಆಹಾರ ಯಾವತ್ತು ನಮ್ಮ ದೇಹಕ್ಕೆ ಆರೋಗ್ಯಕರವಾಗಿರಬೇಕೆ ಹೊರತು ಅನಾರೋಗ್ಯಕ್ಕೆ ತುತ್ತಾಗುವಂತೆ ಇರಬಾರದು.

   

  DAKSHINA KANNADA

  ಹರೇಕಳ ಹಾಜಬ್ಬ ಶಾಲೆಯ ಕಂಪೌಂಡ್ ಕುಸಿತ..! ವಿದ್ಯಾರ್ಥಿನಿ ಸಾ*ವು..!

  Published

  on

  ಮಂಗಳೂರು : ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರ ನ್ಯೂಪಡ್ಪು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಂಪೌಂಡ್‌ ವಾಲ್ ಕುಸಿತಗೊಂಡಿದೆ. ಕುಸಿತಗೊಂಡ ವಾಲ್‌ ಅಡಿಗೆ ಸಿಲುಕಿದ 3 ನೇ ತರಗತಿ ವಿದ್ಯಾರ್ಥಿನಿ ಅಸುನೀಗಿದ್ದಾಳೆ. ಹರೇಕಳ ಗ್ರಾ.ಪಂ ವ್ಯಾಪ್ತಿಯ ನ್ಯೂಪಡ್ಪುವಿನಲ್ಲಿ ಮೇ 20ರ ಸಂಜೆ ವೇಳೆ ಈ ದುರ್ಘಟನೆ ಸಂಭವಿಸಿದೆ. ಸಂಜೆ ವೇಳೆ ಸುರಿದ ಧಾರಕಾರ ಮಳೆಯಿಂದಾಗಿ ದುರ್ಘಟನೆ ಸಂಭವಿಸಿದೆ.


  ನ್ಯೂಪಡ್ಪು ನಿವಾಸಿ ಸಿದ್ದೀಖ್ – ಜಮೀಲಾ ದಂಪತಿ ಪುತ್ರಿ ಶಾಝಿಯಾ ಬಾನು (7) ಮೃತ ಬಾಲಕಿ. ಹರೇಕಳ ಹಾಜಬ್ಬರ ಶಾಲೆಯಲ್ಲಿ ಕಳೆದ ಎರಡು ದಿನಗಳಿಂದ ಮುಡಿಪು ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳ ಶಿಬಿರ ನಡೆಯುತ್ತಿದೆ. ಶಾಲೆಯ ವಿದ್ಯಾರ್ಥಿಗಳಿಗೆ ವಿವಿಧ ಚಟುವಟಿಕೆಗಳು ಇದ್ದ ಹಿನ್ನೆಲೆಯಲ್ಲಿ ಶಾಲೆಯ ಸಮೀಪದಲ್ಲೇ ಇರುವ ವಿದ್ಯಾರ್ಥಿನಿ ಶಾಝಿಯಾ ಭಾನು ಭಾಗವಹಿಸಿದ್ದಳು.

  ಸಂಜೆ ವೇಳೆ ಮನೆಗೆ ಹಿಂತಿರುಗುವ ಸಂದರ್ಭ ಶಾಲಾ ಕಂಪೌಂಡ್ ಗೇಟಿನಲ್ಲಿ ಆಟವಾಡುವ ಸಂದರ್ಭ ಕಂಪೌಂಡ್ ಬಾಲಕಿ ಶಾಝಿಯಾ ಮೇಲೆ ಕುಸಿದುಬಿದ್ದಿದೆ. ತಕ್ಷಣ ಸ್ಥಳೀಯರು ರಕ್ಷಣೆಗೆ ಧಾವಿಸಿದರೂ, ಬಾಲಕಿ ಪ್ರಾಣಪಕ್ಷಿ ಹಾರಿಹೋಗಿತ್ತು. ಬೆಳಿಗ್ಗೆಯಿಂದ ಉಳ್ಳಾಲ ತಾಲೂಕು ವ್ಯಾಪ್ತಿಯಲ್ಲಿ ಆಗಾಗ್ಗ ಮಳೆಯಾಗುತ್ತಿದ್ದು, ಇದರಿಂದಾಗಿ ಕಂಪೌಂಡ್ ಶಿಥಿಲಗೊಂಡು ಬಿದ್ದಿದೆ. ಘಟನಾ ಸ್ಥಳಕ್ಕೆ ಹರೇಕಳ ಗ್ರಾ.ಪಂ ಅಧಿಕಾರಿಗಳು, ಕೊಣಾಜೆ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  Continue Reading

  LATEST NEWS

  ಗುಜರಾತ್‌ ಎಟಿಎಸ್‌ನಿಂದ ನಾಲ್ವರು ಐಸಿಸ್ ಉಗ್ರರ ಸೆರೆ..!

  Published

  on

  ಮಂಗಳೂರು ( ಗುಜರಾತ್) :   ಗುಜಾರಾತ್‌ನಲ್ಲಿ ನಾಲ್ವರು ಐಸಿಸ್ ಉಗ್ರರನ್ನು ಗುಜರಾತ್ ಎಟಿಸಿ ಅಧಿಕಾರಿಗಳು ಬಂಧಿಸಿದ್ದಾರೆ.  ಅಹಮ್ಮದಾ ಬಾದ್ ವಿಮಾನ ನಿಲ್ದಾಣದಲ್ಲಿ ಈ ನಾಲ್ವರು ಉಗ್ರರನ್ನು ಎಟಿಎಸ್‌ ಅಧಿಕಾರಿಗಳು ಬಂಧಿಸಿದ್ದಾರೆ. ಚೆನೈ ಮೂಲಕ ಅಹಮ್ಮದಾಬಾದ್ ತಲುಪಿದ್ದ ಈ ನಾಲ್ವರೂ ಮೂಲತಃ ಶ್ರೀಲಂಕದವರು ಎಂದು ಮಾಹಿತಿ ಲಭ್ಯವಾಗಿದೆ.

  ಎರಡು ವಾರಗಳ ಹಿಂದೆ ಅಹ್ಮದಾಬಾದ್ ವಿಮಾನ ನಿಲ್ದಾಣಕ್ಕೆ ಬಾಂಬ್‌ ಸ್ಫೋಟದ ಈ ಮೇಲ್‌ ಸಂದೇಶ ಬಂದಿತ್ತು. ಈ ವಿಚಾರವಾಗಿ ಎಟಿಎಸ್ ಅದಿಕಾರಿಗಳು ಹಲವು ಆಯಾಮಗಳಲ್ಲಿ ತನಿಕೆಯನ್ನು ನಡೆಸಿದ್ದರು. ಈ ತನಿಕೆಯ ಮುಂದುವರೆದ ಭಾಗವಾಗಿ ಈ ನಾಲ್ವರು ಐಸಿಸ್ ಉಗ್ರರರನ್ನು ಬಂಧಿಸಲಾಗಿದೆ. ಬಂದಿತರು ದೇಶದಲ್ಲಿ ವಿದ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದರು ಎಂಬ ಮಾಹಿತಿ ಎಟಿಎಸ್‌ಗೆ ಲಭ್ಯವಾಗಿದೆ. ಅಲ್ಲದೆ ಇವರಿಗೆ ಪಾಕಿಸ್ತಾನದ ಉಗ್ರ ಸಂಘಟನೆಗಳ ಜೊತೆ ನಂಟು ಇದೆ ಅನ್ನೋ ಅಂಶ ಕೂಡಾ ಬೆಳಕಿಗೆ ಬಂದಿದೆ. ಆರೋಪಿಗಳ ಮೊಬೈಲ್‌ ಪರಿಶೀಲನೆ ನಡೆಸಿದ ವೇಳೆ ಈ ವಿಚಾರ ಗೊತ್ತಾಗಿದೆ ಎಂದು ಎಟಿಎಸ್ ಮೂಲಗಳು ಬಹಿರಂಗಪಡಿಸಿದೆ.

  Continue Reading

  FILM

  ಐಶ್ವರ್ಯಾ ರೈ ಜೊತೆಗೂಡಿ ಬಿಗ್‌ ಬಿ ಫ್ಯಾಮಿಲಿ ಮತದಾನ…!

  Published

  on

  ಮಂಗಳೂರು ( ಮಹಾರಾಷ್ಟ್ರ ) : ಚುನಾವಣೆಯಲ್ಲಿ ಮತ ಚಲಾಯಿಸಿರುವ ಐಶ್ವರ್ಯಾ ರೈ ಬಚ್ಚನ್ ಕುಟುಂಬದ ಜೊತೆ ಮತಕೇಂದ್ರಕ್ಕೆ ಆಗಮಿಸಿದ್ದಾರೆ. ಅಮಿತಾಬಚ್ಚನ್‌, ಜಯಾಬಚ್ಚನ್ ಜೊತೆಯಲ್ಲಿ ಒಂದೇ ಕಾರಿನಲ್ಲಿ ಮತಗಟ್ಟೆಗೆ ಆಗಮಿಸಿದ್ದಾರೆ. ಈ ಮೂಲಕ ಹಲವು ಸಮಯದಿಂದ ಐಶ್ವರ್ಯಾ ರೈ ಬಚ್ಚನ್ ಹಾಗೂ ಅಭಿಶೇಕ್‌ ಬಚ್ಚನ್‌ ದಾಂಪತ್ಯ ವಿಚಾರವಾಗಿ ಇದ್ದ ಗಾಸಿಪ್‌ಗೆ ತೆರೆ ಎಳೆದಿದ್ದಾರೆ.


  ಐದನೇ ಹಂತದ ಮತದಾನದಲ್ಲಿ ಅನೇಖ ಸೆಲಬ್ರಿಟಿಗಳು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ವಿಶೇಷವಾಗಿ ಮಹಾರಾಷ್ಟ್ರದಲ್ಲಿ ಮತದಾನವಾಗಿದ್ದು, ಬಾಲಿವುಡ್ ನಟ ನಟಿಯರು ಮತದನಾ ಕೇಂದ್ರಕ್ಕೆ ಆಗಮಿಸಿ ಮತ ಚಲಾಯಿಸಿದ್ದಾರೆ. ನಟ ಅಕ್ಷಯ್ ಕುಮಾರ್ ಬೆಳಗ್ಗೆ 7 ಗಂಟೆಗೆ ಮತದಾನ ಕೇಂದ್ರಕ್ಕೆ ಹಾಜರಾಗಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ. ಭಾರತೀಯ ಪೌರತ್ವ ಪಡೆದ ನಂತರ ಅಕ್ಷಯ್ ಕುಮಾರ್ ಮೊದಲ ಬಾರಿಗೆ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ.

  ಪಿಂಕ್ ಡ್ರೆಸ್ನಲ್ಲಿ ಆಗಮಿಸಿದ ಜಾನ್ವಿ ಸರತಿ ಸಾಲಿನಲ್ಲಿ ನಿಲ್ಲದೆ ನೇರವಾಗಿ ತೆರಳಿ ಮತಯಾಚನೆ ಮಾಡಿದರು. ಮತದಾನ ಕೇಂದ್ರದಲ್ಲಿ ಜಾನ್ವಿ ಕಪೂರ್ ಅವರನ್ನು ನೋಡಲು ಅಭಿಮಾನಿಗಳು ಜಮಾಯಿಸಿದ್ದರು. ವಿಶೇಷ ಮಹಿಳಾ ಪೊಲೀಸರು ನಟಿ ಜಾನ್ವಿಗೆ ಭದ್ರತೆ ಒದಗಿಸಿದರು.

  ಅದೇ ರೀತಿ ಶಾರುಖ್ ಖಾನ್ ಅವರು ತಮ್ಮ ಕುಟುಂಬದೊಂದಿಗೆ ಮತದಾನ ಮಾಡುತ್ತಿರುವುದು ಕಂಡುಬಂದಿದೆ. ಹೀಗೆ ಹೃತಿಕ್ ರೋಷನ್, ರಾಕೇಶ್ ರೋಷನ್, ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಮತದಾನ ಮಾಡಿದರು. ಇನ್ನು ವರುಣ್ ಧವನ್ ಜೊತೆಗೆ ತಂದೆ ಡೇವಿಡ್ ಧವನ್, ಧರ್ಮೇಂದ್ರ, ಆಶಾ ಭೋಂಸ್ಲೆ ಮತ್ತು ಇತರರು ಬೂತ್‌ನಲ್ಲಿ ಮತದಾನ ಮಾಡಿದರು.

  Continue Reading

  LATEST NEWS

  Trending