Connect with us

    DAKSHINA KANNADA

    ಕುಮಾರಧಾರ ನದಿಯಲ್ಲಿ ಸ್ನಾನಕ್ಕೆ ಇಳಿದ ಮಂಡ್ಯದ ಯುವಕ ನೀರುಪಾಲು..!

    Published

    on

    ಪುತ್ತೂರು : ಇಲ್ಲಿನ ಕುಮಾರಧಾರ ನದಿಯಲ್ಲಿ ಸ್ನಾನ ಮಾಡಲು ಇಳಿದ ಯುವಕನೋರ್ವ ನೀರುಪಾಲಾದ ಘಟನೆ ರವಿವಾರ ಸಂಜೆ ನಡೆದಿದೆ. ಬೆಂಗಳೂರು‌ ಮೂಲದ ಶಿವು ಎಂಬತ ನೀರಿನ ಸೆಳೆತಕ್ಕೆ ಕೊಚ್ಚಿಹೋದ ಯುವಕನಾಗಿದ್ದಾನೆ.

    ಪೋಲೀಸ್‌, ಅಗ್ನಿಶಾಮಕ ದಳ ಸ್ಥಳೀಯರ ನೆರವಿನೊಂದಿಗೆ ಯುವಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

    25 ವರ್ಷದ ಶಿವ ಮೂಲತಃ ಮಂಡ್ಯ ನಿವಾಸಿ. ಸ್ನೇಹಿತರ ಜೊತೆ ಕುಕ್ಕೆ ಸುಬ್ರಹ್ಮಣ್ಯ ಯಾತ್ರೆಗೆ ಬಂದಿದ್ದ. ನೀರಿಗೆ ಇಳಿಯದಂತೆ ಸ್ನಾನಘಟ್ಟದಲ್ಲಿ ಹಗ್ಗ ಕಟ್ಟಿದ್ದರೂ ನೀರಿಗೆ ಇಳಿದಿದ್ದ ಎಂದು ಸ್ಥಳೀಯರು ಹೇಳಿದ್ದಾರೆ.

    ಶಿವು ನೊಂದಿಗೆ ಬಂದಿದ್ದ ಸ್ನೇಹಿತರು ನೀರಿಗೆ ಇಳಿಯದಂತೆ ಬುದ್ದು ಹೇಳಿದರೂ ಮಾತು ಕೇಳದೇ ಶಿವು ನೀರಿಗೆ ಇಳಿದಿದ್ದಾನೆ. ಮಳೆಗಾಲದ ನೀರಿನಲ್ಲಿ ಸೆಳೆತ ಜೋರಾಗಿದ್ದ ಕಾರಣ ಕೊಚ್ಚಿಕೊಂಡು ಹೋಗಿದ್ದಾನೆ ಎಂದು ಶಂಕಿಶಲಾಗಿದೆ. ಸ್ಥಳೀಯ ಪೊಲೀಸ್  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    DAKSHINA KANNADA

    2025 ಫೆಬ್ರವರಿಯಲ್ಲಿ ಜರ್ಮನಿ ಪಾರ್ಲಿಮೆಂಟ್ ನಿಯೋಗ ಕರ್ನಾಟಕಕ್ಕೆ ಭೇಟಿ: ಯು.ಟಿ.ಖಾದರ್

    Published

    on

    ಜರ್ಮನಿ: ಕರ್ನಾಟಕ ವಿಧಾನಸಭೆಗೆ ಜರ್ಮನಿ ಪಾರ್ಲಿಮೆಂಟ್ ನಿಯೋಗವು 2025 ಫೆಬ್ರವರಿಯಲ್ಲಿ ಭೇಟಿ ನೀಡಲಿದೆ ಎಂದು ಕರ್ನಾಟಕ ಸ್ಪೀಕರ್ ಯು.ಟಿ.ಖಾದರ್ ಬುಧವಾರ ತಿಳಿಸಿದ್ದಾರೆ.

    ಬವೇರಿಯನ್ ಸ್ಟೇಟ್ ಪಾರ್ಲಿಮೆಂಟ್ ಅಧ್ಯಕ್ಷ ಐಲ್ಸ್ ಏಗ್ನರ್ ಅವರು ಜರ್ಮನಿ ಪ್ರವಾಸದಲ್ಲಿರುವ ಕರ್ನಾಟಕ ಸ್ಪೀಕರ್ ಅವರ ನಿಯೋಗದ ಜೊತೆಗೆ ಚರ್ಚಿಸಿ ಭಾರತದ ಪ್ರಜಾಪ್ರಭುತ್ವ, ಭೌಗೋಳಿಕ ಹಾಗೂ ಸಂಸದೀಯ ಇತಿಹಾಸದ ಕುರಿತು ಮಾಹಿತಿ ಪಡೆದರು.

    ಈ ಸಂದರ್ಭ ನಿಯೋಗಕ್ಕೆ ಅವರು ಸೌಹಾರ್ದ ಔತಣಕೂಟ ಏರ್ಪಡಿಸಿದರು. ನಿಯೋಗವು ಜರ್ಮನಿ ಪ್ರತಿನಿಧಿಗಳನ್ನು ರಾಜ್ಯಕ್ಕೆ ಆಹ್ವಾನಿಸಿತು. ಯು.ಟಿ.ಖಾದರ್ ಅವರ ಜೊತೆಗೆ ವಿಧಾನಸಭಾ ಉಪಸಭಾಪತಿ ರುದ್ರಪ್ಪ ಲಮಾಣಿ, ಶಾಸಕರಾದ ಉಮಾನಾಥ ಕೋಟ್ಯಾನ್, ಅಶೋಕ್ ಕುಮಾರ್ ರೈ, ಮಹಾಂತೇಶ ಕೌಜಲಗಿ ಇದ್ದರು.

    Continue Reading

    BELTHANGADY

    ಬೆಳ್ತಂಗಡಿ: ಸಹಾಯದ ಹೆಸರಲ್ಲಿ ಅಪರಿಚಿತರಿಂದ ವಂಚನೆ

    Published

    on

    ಬೆಳ್ತಂಗಡಿ: ಸಹಾಯ ಮಾಡುವ ಹೆಸರು ಹೇಳಿ ಬ್ಯಾಂಕ್ ಖಾತೆಯಿಂದ ಇನ್ಯಾಯತರ್ಪು ಗ್ರಾಮದ ಜಾರಿಗೆಬೈಲು ನಿವಾಸಿ ಅಬೂಬಕ್ಕರ್ (71) ಅವರ ಹಣ ಎಗರಿಸಿದ ಘಟನೆ ಬೆಳ್ತಂಗಡಿ ಗೇರಕಟ್ಟೆ ಕೆನರಾ ಬ್ಯಾಂಕ್‌ನ ಎಟಿಎಂ ಕೇಂದ್ರದಲ್ಲಿ ನಡೆದಿದೆ.


    ಅ.2 ರಂದು ಮಧ್ಯಾಹ್ನ 12 ಗಂಟೆಗೆ ಹಣ ಡ್ರಾ ಮಾಡುತ್ತಿರುವಾಗ ಒಳ ಪ್ರವೇಶಿಸಿದ ಅಪರಿಚಿತರಿಬ್ಬರು ಹಿಂದಿಯಲ್ಲಿ ಮಾತಾಡಿ ಸಹಾಯಕ್ಕೆ ಬಂದಿದ್ದರು. ಅಬಾಬಕ್ಕರ್ ಸಹಾಯದ ಅಗತ್ಯ ಇಲ್ಲ ಎಂದು ಹೇಳಿದರೂ, ಒಳಗಡೆಯೇ ನಿಂತಿದ್ದರು. ಮಧ್ಯಾಹ್ನ 12 ಗಂಟೆಗೆ ಹಣ ತೆಗೆದು ಎಟಿಎಂ ಕೇಂದ್ರದಿಂದ ಕಾರ್ಡ್ ಸಹಿತ ಹೊರಗೆ ಹೋಗಿದ್ದರು. ನಂತರ ಅ.4 ರಂದು ಅಳಿಯ ಹಾಗೂ ಮಗ ಹಾಕಿದ ಹಣವನ್ನು ಡ್ರಾ ಮಾಡಲು ಎಟಿಎಂ ಕೇಂದ್ರಕ್ಕೆ ಹೋದಾಗ ಕಾರ್ಡ್ ರೀಡ್ ಆಗಲಿಲ್ಲ.
    ಅನುಮಾನದಿಂದ ಬ್ಯಾಂಕ್‌ಗೆ ಹೋಗಿ ವಿಚಾರಿಸಿದಾಗ ಎಟಿಎಂ ಕಾರ್ಡ್ ಬದಲಾಗಿದೆ ಎಂದು ತಿಳಿಸಿದ್ದು, ನಂತರ ಬ್ಯಾಲೆನ್ಸ್ ಚೆಕ್ ಮಾಡಿದಾಗ ಖಾತೆಯಲ್ಲಿದ್ದ 49,200 ರೂ. ಅನ್ನು ವಂಚಿಸಿರುವುದು ಗೊತ್ತಾಯಿತು.
    ಅ.2 ರಂದು ಎಟಿಎಂ ಕೇಂದ್ರದಲ್ಲಿದ್ದ ಅಪರಿಚಿತ ಇಬ್ಬರು ವ್ಯಕ್ತಿಗಳು ಬೇರೆ ಬೇರೆ ಎಟಿಎಂ ಕೇಂದ್ರದಲ್ಲಿ ತೆಗೆದು ಕಳವು ಮಾಡಿದ್ದು, ಈ ಬಗ್ಗೆ ವಂಚಿಸಿ ಕಳವು ಮಾಡಿದ ಅಪರಿಚಿತ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
    ಭಾವಚಿತ್ರದಲ್ಲಿರುವ ಅಪರಿಚಿತ ವ್ಯಕ್ತಿಗಳನ್ನು ಪತ್ತೆ ಮಾಡಲು ಸಹಕರಿಸಿ, ಪತ್ತೆಯಾದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಈ ಮೂಲಕ ಕೋರಲಾಗುತ್ತಿದೆ.
    ಸಂಪರ್ಕಿಸಬೇಕಾದ ಸಂಖ್ಯೆ: 08256-232093

    Continue Reading

    DAKSHINA KANNADA

    ಮಂಗಳೂರು; ಉಸಿರಾಟದ ಸಮಸ್ಯೆಯಿಂದ 8 ತಿಂಗಳ ಗರ್ಭಿಣಿ ಸಾ*ವು

    Published

    on

    ಮಂಗಳೂರು; ನಗರ ಹೊರ ವಲಯದ ಅರ್ಕುಳ ಗಣೇಶ್ ತೊಟ ನಿವಾಸಿ ಎಂಟು ತಿಂಗಳ ಗರ್ಭಿಣಿಯೊಬ್ಬರು ಉಸಿರಾಟದ ಸಮಸ್ಯೆಯಿಂದ ಮೃ*ತಪಟ್ಟಿದ್ದಾರೆ.

    ಶರಣ್ಯ (29) ಮೃ*ತ ದುರ್ದೈವಿ.
    ರವಿವಾರ ತಡರಾತ್ರಿ ಸುಮಾರು 1.15 ರ ಸುಮಾರಿಗೆ ಉಸಿರಾಡಲು ಸಮಸ್ಯೆಯಾಗಿ ದಮ್ಮು ಕಟ್ಟುವುದಕ್ಕೆ ಆರಂಭವಾಗಿದೆ.ವೈದ್ಯರು ನಿಡಿದ್ದ ಸಲಹೆಯಂತೆ ವಾಕಿಂಗ್ ಮಾಡಿದರೂ ಕಡಿಮೆಯಾಗದೆ, ಉಸಿರಾಟದ ಸಮಸ್ಯೆ ಹೆಚ್ಚಾಗಿದೆ.
    ಮನೆಯವರು ಆಸ್ಪತ್ರೆಗೆ ಕಳೆದುಕೊಂಡು ಹೋಗಿದ್ದು, ದಾರಿ ಮಧ್ಯವೇ ವಾಂತಿಯಅಗಿದೆ. ಪಡೀಲ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಪರೀಕ್ಷಿಸಿದ ವೈದ್ಯರು ಮೃ*ತಪಟ್ಟಿರುವುದಾಗಿ ತಿಳಿಸಿದ್ದಾರೆ.
    ಶರಣ್ಯ ರವಿವಾರವಷ್ಟೇ 29ನೇ ವರ್ಷದ ಹುಟ್ಟುಹಬ್ಬವನ್ನು ಮನೆಯಲ್ಲೇ ಸಣ್ಣ ಕಾರ್ಯಕ್ರಮ ಮಾಡುವ ಮುಖಾಂತರ ಆಚರಿಸಿದ್ದರು. ಎರಡು ದಿನದ ಹಿಂದೆ ವೈದ್ಯರಲ್ಲಿ ತೆರಳಿ ತಪಾಸಣೆ ಮಾಡಿ ಬಂದಿದ್ದರು.
    ಶರಣ್ಯ ನಿಗೆ ಮದುವೇಯಾಗಿ ಸುಮಾರು 8 ವರ್ಷವಾಗಿತ್ತು. ಮೊದಲಿ ಗಲ್ಫ್ ದೇಶದಲ್ಲಿ ವಾಸವಿದ್ದು ಗರ್ಭಿಣಿಯಾಗಿ ಎರಡು ತಿಂಗಳ ಬಳಿಕ ಊರಿಗೆ ಬಂದಿದ್ದರು.
    ಮೃತರ ಮರ*ಣೋತ್ತರ ಪರೀಕ್ಷೆ ನಡೆಸಲಾಗಿದ್ದು, ನೈಜ್ಯ ಕಾರಣ ಮರಣೋತ್ತರ ಪರೀಕ್ಷೆ ಬಳಿಕ ತಿಳಿದು ಬರಬೇಕಷ್ಟೇ. ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Continue Reading

    LATEST NEWS

    Trending