Connect with us

    LATEST NEWS

    ಟಾಟಾ ಸಮೂಹದ ಮುಂದಿನ ಉತ್ತರಾಧಿಕಾರಿ ಯಾರು?

    Published

    on

    ಮಂಗಳೂರು/ ಮುಂಬೈ : ‘ರತನ್ ಟಾಟಾ’ ಈ ಹೆಸರು ಉದ್ಯಮ ಕ್ಷೇತ್ರದಲ್ಲಿ ಜನಜನಿತ. ಅವರ ಸರಳತೆ, ಸಾಧನೆ ಎಲ್ಲವೂ ಸ್ಫೂರ್ತಿದಾಯಕ. ಆದರೆ, ನಿನ್ನೆ(ಅ.9) ಅವರು ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನಕ್ಕೆ ಭಾರತ ಮಾತ್ರವಲ್ಲದೇ ವಿದೇಶದ ಗಣ್ಯರು ಕಂಬನಿ ಮಿಡಿದಿದ್ದಾರೆ. ರಾಜಕಾರಣಿಗಳು, ಚಿತ್ರರಂಗದ ಗಣ್ಯರು, ಉದ್ಯಮಿಗಳು ಸಂತಾಪ ಸೂಚಿಸಿದ್ದಾರೆ.

    ಸಾಕಿ, ಸಲಹಿದ ಅಜ್ಜಿ :

    1937ರ ಡಿಸೆಂಬರ್ 28ರಂದು ರತನ್ ಟಾಟಾ ಆಗಿನ ಬ್ರಿಟಿಷ್ ಇಂಡಿಯಾದಲ್ಲಿ ಬಾಂಬೆಯಲ್ಲಿ (ಈಗಿನ ಮುಂಬೈ) ಜನಿಸಿದರು. ತಂದೆ, ನಾವಲ್ ಟಾಟಾ ಹಾಗೂ ತಾಯಿ ಸೂನಿ ಟಾಟಾ. ರತನ್ ಟಾಟಾ ಅವರು 10 ವರ್ಷ ವಯಸ್ಸಿನವರಾಗಿದ್ದಾಗ ಅವರ ತಂದೆ – ತಾಯಿ ವಿಚ್ಛೇದನ ಪಡೆದುಕೊಂಡರು. ಆಗ, ಮಗುವನ್ನು ಯಾರು ನೋಡಿಕೊಳ್ಳಬೇಕು ಎಂಬ ಪ್ರಶ್ನೆ ಎದ್ದಾಗ ಅವರನ್ನು ಟಾಟಾ ಫ್ಯಾಮಿಲಿಯದ್ದೇ ಆದ ಜೆಎನ್ ಪೆಟಿಟ್ ಪಾರ್ಸಿ ಅನಾಥಾಲಯಕ್ಕೆ ಕರೆದೊಯ್ದು ಬಿಟ್ಟಿದ್ದರು ತಂದೆ – ತಾಯಿ.

    ಈ ವಿಚಾರ ತಿಳಿದ ರತನ್ ಟಾಟಾ ಅಜ್ಜಿ, ನವಾಜ್ ಬಾಯಿ ಟಾಟಾ ಅವರು ರತನ್ ಟಾಟಾ ಅವರು ಕಾನೂನಾತ್ಮಕವಾಗಿ ದತ್ತು ಪಡೆದರು. ಅಷ್ಟರಲ್ಲಾಗಲೇ ರತನ್ ಟಾಟಾ ಅವರ ತಂದೆ ನಾವಲ್ ಟಾಟಾ ಬೇರೊಂದು ಮದುವೆಯಾಗಿದ್ದರಲ್ಲದೆ, ಅವರಿಗೆ ನೊಯೆಲ್ ಟಾಟಾ ಎಂಬ ಮತ್ತೊಬ್ಬ ಮಗ ಜನಿಸಿದ್ದ. ಹಾಗಾಗಿ, ಅನಾಥಾಲಯದಿಂದ ತನ್ನ ತಂದೆ, ತಾತ ಇದ್ದ ಮನೆಗೆ ಹಿಂದಿರುಗಿದ ರತನ್ ಟಾಟಾ, ಅಲ್ಲಿ ತಮ್ಮ ಮಲಸಹೋದರ ನೋಯೆಲ್ ಟಾಟಾ (ರತನ್ ಟಾಟಾರ ಮಲತಾಯಿ ಮಗ) ಅವರೊಂದಿಗೆ ಬೆಳೆದರು.

    ಮುಂಬೈನ ಚಾಂಪಿಯನ್ ಸ್ಕೂಲ್, ಕ್ಯಾಥೆಡ್ರಲ್ ಆ್ಯಂಡ್ ಜಾನ್ ಕೊನೂನ್ ಸ್ಕೂಲ್, ಶಿಮ್ಲಾದಲ್ಲಿರುವ ಬಿಷಬ್ ಕಾಟನ್ ಸ್ಕೂಲ್, ನ್ಯೂಯಾರ್ಕ್ ನಗರದಲ್ಲಿರುವ ರಿವರ್ಡಬಲ್ ಕಂಟ್ರಿ ಸ್ಕೂಲ್ ನಲ್ಲಿ ಶಿಕ್ಷಣ ಪಡೆದರು. ಆನಂತರ, ಹಾರ್ಡರ್ಡ್ ಬ್ಯುಸಿನೆಸ್ ಸ್ಕೂಲ್ ಹಾಗೂ ಕಾರ್ನೆಲ್ ಯೂನಿವರ್ಸಿಟಿಯಲ್ಲಿ ವಿದ್ಯಾಭ್ಯಾಸ ಮಾಡಿದರು.

    ಸಮೂಹ ಸಂಸ್ಥೆಗಳ ಚುಕ್ಕಾಣಿ ಹಿಡಿದ ಟಾಟಾ :

    1991ರಲ್ಲಿ ರತನ್ ಟಾಟಾ ಅವರು ಟಾಟಾ ಸಮೂಹ ಸಂಸ್ಥೆಗಳ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದರು. 1963ರಲ್ಲೇ ಅವರು ಟಾಟಾ ಸಮೂಹ ಸಂಸ್ಥೆಗಳ ನಾನಾ ಕಂಪನಿಗಳ ಆಡಳಿತ ಮಂಡಳಿಗಳ ಮುಖ್ಯಸ್ಥರಾಗಿ ಆ ಸಂಸ್ಥೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಅದೇ ಅನುಭವದ ಮೇರೆಗೆ ಸಮೂಹ ಸಂಸ್ಥೆಗಳ ಚುಕ್ಕಾಣಿ ಹಿಡಿದರು.

    ಉತ್ತರಾಧಿಕಾರಿ ಯಾರು?

    2017ರಲ್ಲಿ ರತನ್ ಟಾಟಾ, ಎನ್. ಚಂದ್ರಶೇಖರ್‌ ಅವರಿಗೆ ಜವಾಬ್ದಾರಿಯನ್ನು ವಹಿಸಿ ನಿವೃತ್ತರಾದರು. ಟಾಟಾ ಸಮೂಹ ಸಂಸ್ಥೆಯನ್ನು ಒಂದು ದೊಡ್ಡ ಮೈಲಿಗಲ್ಲಾಗಿ ಸ್ಥಾಪಿಸಿದ್ದ ಟಾಟಾ ಇನ್ನಿಲ್ಲ ಎಂಬುದೇ ಅರಗಿಸಿಕೊಳ್ಳಲಾಗದ ಸತ್ತ. ಆದರೆ, ಇದರೊಂದಿಗೆ ಮತ್ತೊಂದು ದೊಡ್ಡ ಪ್ರಶ್ನೆ ಹುಟ್ಟಿದೆ. ರತನ್ ಟಾಟಾ ಉತ್ತರಾಧಿಕಾರಿ ಯಾರು? ಎಂಬುದು.

    ರತನ್ ಟಾಟಾ ಅವಿವಾಹಿತರಾಗಿದ್ದರು. ಹಾಗಾಗಿಯೇ ಈ ಪ್ರಶ್ನೆಗೆ ಉತ್ತರಕ್ಕಾಗಿ ತಡಕಾಟ ಸಾಮಾನ್ಯ ಸಂಗತಿ. ಈ ಪ್ರಶ್ನೆಗೆ ಉತ್ತರವಾಗಿ ಮೊದಲು ಕೇಳಿ ಬರುವ ಹೆಸರು ನೋಯಲ್ ಟಾಟಾ. ನೋಯಲ್ ಟಾಟಾ ಬೇರ್ಯಾರು ಅಲ್ಲ. ರತನ್ ಟಾಟಾ ತಂದೆಯ ಎರಡನೇ ಪತ್ನಿ ಸಿಮೋನ್ ಅವರ ಪುತ್ರ.

    ಟಾಟಾ ಕುಟುಂಬದ ಉದ್ಯಮ ಮುನ್ನಡೆಸುವಲ್ಲಿ ಕೌಟುಂಬಿಕವಾಗಿ ನೋಯಲ್ ಟಾಟಾ ಹೆಸರು ಮುಂಚೂಣಿಯಲ್ಲಿದೆ. ನೋಯಲ್ ಟಾಟಾ ಹಿರಿಯ ಪುತ್ರಿ ಲಿಯಾ ಟಾಟಾ ಹೆಸರು ಸಹ ಈ ಸಾಲಿನಲ್ಲಿದೆ. ಸ್ಪೇನ್‌ನಲ್ಲಿ ಮಾರ್ಕೆಟಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಲಿಯಾ ಸದ್ಯ ಟಾಟಾ ಸಮೂಹದ ತಾಜ್ ಹೋಟೆಲ್, ರೆಸಾರ್ಟ್‌ಗಳನ್ನು ನೋಡಿಕೊಳ್ಳುತ್ತಿದ್ದಾರೆ.

    ಮಾಯಾ ಟಾಟಾ ಸಾರಥ್ಯ: 


    ಈ ಉತ್ತರಾಧಿಕಾರತ್ವದ ವಿಚಾರದಲ್ಲಿ ಬಲವಾಗಿ ಕೇಳಿ ಬರುತ್ತಿರುವ ಹೆಸರು ನೋಯಲ್ ಟಾಟಾ ಕಿರಿಯ ಪುತ್ರಿ ಮಾಯಾ ಟಾಟಾ ಅವರದು. ಬೇಯಸ್ ಬಿಸಿನೆಸ್ ಸ್ಕೂಲ್ ಮತ್ತು ವಾರ್ವಿಕ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ್ದಾರೆ. 34 ವರ್ಷದ ಟಾಟಾ ಆಪರ್ಚುನಿಟೀಸ್ ಫಂಡ್ ಮತ್ತು ಟಾಟಾ ಡಿಜಿಟಲ್‌ನಲ್ಲಿ ಪ್ರಮುಖ ಹುದ್ದೆಯಲ್ಲಿದ್ದಾರೆ.

    ಇದನ್ನೂ ಓದಿ : ರತನ್ ಟಾಟಾ ಮದುವೆ ಆಗದೇ ಇರೋದಕ್ಕೆ ಕಾರಣ ಏನು ಗೊತ್ತಾ?

    ಟಾಟಾ ನ್ಯೂ ಅಪ್ಲಿಕೇಶನ್‌ನಲ್ಲಿಯೂ ಮಾಯಾ ಟಾಟಾ ಕಾರ್ಯ ನಿರ್ವಹಣೆ ಮಾಡಿದ್ದಾರೆ. ಇನ್ನು ನೋಯಲ್ ಪುತ್ರ ನೆವಿಲ್ಲೆ ಟಾಟಾ, ಟಾಟಾ ಕುಟುಂಬ ಒಡೆತನದ ಹಲವು ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದಾರೆ. ಟಾಟಾ ಟ್ರೆಂಡ್ ಅಡಿಯಲ್ಲಿರುವ ಸ್ಟಾರ್ ಬಜಾರ್ ಅನ್ನು ನಿರ್ವಹಣೆ ಮಾಡುತ್ತಿದ್ದಾರೆ.

    Click to comment

    Leave a Reply

    Your email address will not be published. Required fields are marked *

    FILM

    ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ಕ್ರಿಕೆಟಿಗ ಕೆ.ಎಲ್.ರಾಹುಲ್

    Published

    on

    ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಹಾಗೂ ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕೆಎಲ್ ರಾಹುಲ್ ಅಭಿಮಾನಿಗಳೊಂದಿಗೆ ಸಂತಸವನ್ನು ಹಂಚಿಕೊಂಡಿದ್ದಾರೆ.

    ದಂಪತಿ Instagram ನಲ್ಲಿ ಜಂಟಿಯಾಗಿ ಪೋಸ್ಟ್ ಮಾಡಿದ್ದಾರೆ. ‘ದೇವರ ಸುಂದರ ಆಶೀರ್ವಾದ 2025ರಲ್ಲಿ ಬರಲಿದೆ’ ಎಂದು ಅಥಿಯಾ ದಂಪತಿ ಪೋಷಕರಾಗುತ್ತಿರುವ ಖುಷಿಯ ಸುದ್ದಿಯನ್ನು ತಿಳಿಸಿದ್ದಾರೆ. ಸೆಲೆಬ್ರಿಟಿಗಳು, ಅಭಿಮಾನಿಗಳು ದಂಪತಿಗೆ ಶುಭ ಹಾರೈಸುತ್ತಿದ್ದಾರೆ.

    ಕಳೆದ ವರ್ಷ ಜನವರಿ 23ರಂದು ಕ್ರಿಕೆಟಿಗ ಕೆ.ಎಲ್ ರಾಹುಲ್ ಜೊತೆ ಅಥಿಯಾ ಹಲವು ವರ್ಷಗಳ ಪ್ರೀತಿಗೆ ವಿವಾಹದ ಬೆಸುಗೆ ಬೆಸೆದಿದ್ದರು.

    ಇದನ್ನು ಓದಿ:ಇನ್ಮುಂದೆ ಮಹಿಳೆಯರ ಬಟ್ಟೆ ಅಳತೆ ಪುರುಷ ಟೈಲರ್ ತೆಗೆಯೋ ಹಾಗಿಲ್ಲ..!

    Continue Reading

    DAKSHINA KANNADA

    ನೆಲ್ಯಾಡಿ : ಜಾಗದ ವಿಷಯಕ್ಕೆ ಜಗಳ; ಕತ್ತಿಯಿಂದ ವ್ಯಕ್ತಿಯ ಕಡಿದು ಗಲಾಟೆ ಅಂತ್ಯ

    Published

    on

    ನೆಲ್ಯಾಡಿ : ಜಾಗದ ವಿಷಯಕ್ಕೆ ಉಂಟಾದ ಗಲಾಟೆ ವಿಕೋಪಕ್ಕೆ ತಿರುಗಿ ಕೃಷಿಕರೋರ್ವನ ಕೊಲೆಯಲ್ಲಿ ಅಂತ್ಯ ಕಂಡ ಘಟನೆ ದ.ಕ.ಜಿಲ್ಲೆ ನೆಲ್ಯಾಡಿ ಸಮೀಪ ಗೋಳಿತೊಟ್ಟುವಿನ ಆಲಂತಾಯ ಗ್ರಾಮದ ಪೆರ್ಲ ಎಂಬಲ್ಲಿ ನಡೆದಿದೆ.

    ಪ್ರಗತಿಪರ ಕೃಷಿಕ ರಮೇಶ ಗೌಡ (51) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.

    ರಮೇಶ್ ನ ಹತ್ತಿರದದ ಸಂಬಂಧಿ ಹರೀಶ್ ಆರೋಪಿಯಾಗಿದ್ದು, ಇಂದು (ನ.8) ಮುಸ್ಸಂಜೆ ಸರಿಸುಮಾರು 7 ಗಂಟೆ ವೇಳೆ ಕೃತ್ಯ ಎಸಗಿದ್ದಾನೆ.

    ನೆಲ್ಯಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ತನಿಖೆ ನಡೆಸುತ್ತಿದ್ದಾರೆ.

    Continue Reading

    LATEST NEWS

    ಎತ್ತಿನಹೊಳೆ ಕಾಮಗಾರಿ ನಾಲೆಯ ಗುಂಡಿಗೆ ಬಿದ್ದು ಇಬ್ಬರು ಬಾಲಕರು ಸಾ*ವು

    Published

    on

    ಮಂಗಳೂರು/ತಿಪಟೂರು : ಎತ್ತಿನಹೊಳೆ ನಾಲೆಯ ಕಾಮಗಾರಿ ಬಳಿ ತೆಗೆದಿದ್ದ ಗುಂ*ಡಿಗೆ ಬಿ*ದ್ದು ಇಬ್ಬರು ಬಾಲಕರು ಮೃತಪಟ್ಟಿರುವ ಘಟನೆ ತಿಪಟೂರಿನಲ್ಲಿ ನಡೆದಿದೆ. ಹುಚ್ಚನಹಟ್ಟಿ ಗ್ರಾಮದ ಯದುವೀರ್ (8) ಹಾಗೂ ಮನೋಹರ್ (10) ಮೃ*ತ ಬಾಲಕರು.

    ಸಾಂದರ್ಭಿಕ ಚಿತ್ರ

    ಹುಚ್ಚನಹಟ್ಟಿ ಗ್ರಾಮದ ಬಳಿ ಎತ್ತಿನಹೊಳೆ ನೀರಾವರಿ ಯೋಜನೆ ಕಾಮಗಾರಿ ನಡೆಯುತ್ತಿದ್ದು, ಸ್ಥಳದಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ. ಸ್ಥಳಕ್ಕೆ ಹೋಗಿದ್ದ ಮಕ್ಕಳು ಆಕಸ್ಮಿಕವಾಗಿ ಬಿ*ದ್ದು ಸಾ*ವನ್ನಪ್ಪಿದ್ದಾರೆ ಎಂಬ ಹೇಳಲಾಗಿದೆ.

    ಇದನ್ನೂ ಓದಿ : BBK11: ಬಿಗ್​ಬಾಸ್‌ ಮನೆಯಲ್ಲಿ ಸಿಡಿದೆದ್ದ ಮಹಿಳಾ ಸ್ಪರ್ಧಿಗಳು.. ಗೋಲ್ಡ್​ ಸುರೇಶ್ ಗೆ ಈ ವಾರದ ಕಳಪೆ

    ಗುರುವಾರ(ನ.7) ಸಂಜೆ ಶಾಲೆ ಮುಗಿಸಿಕೊಂಡು ಮನೆಗೆ ಬಂದಿದ್ದ ಮಕ್ಕಳು, ನಂತರ ಹೊರ ಹೋಗಿದ್ದರು. ಸಂಜೆಯಾದರೂ ಮನೆಗೆ ಬಂದಿರಲಿಲ್ಲ. ಹೀಗಾಗಿ ಆತಂಕಗೊಂಡ ಪೋಷಕರು ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಶುಕ್ರವಾರ(ನ.8) ಬೆಳಿಗ್ಗೆ ಬಾಲಕರ ಶ*ವ ಪತ್ತೆಯಾಗಿದೆ.

    Continue Reading

    LATEST NEWS

    Trending