Connect with us

    FILM

    ದೈವ, ದೈವ ನರ್ತಕರಿಗೆ ರಾಷ್ಟ್ರಪ್ರಶಸ್ತಿ ಅರ್ಪಣೆ: ರಿಷಬ್ ಶೆಟ್ಟಿ

    Published

    on

    ಮಂಗಳೂರು: ‘ಕಾಂತಾರ’ ಚಿತ್ರದಲ್ಲಿನ ಅಭಿನಯಕ್ಕಾಗಿ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ ಪಡೆದಿರುವ ರಿಷಬ್ ಶೆಟ್ಟಿ ಅವರು ಈ ಸಿನಿಮಾ ಪ್ರಶಸ್ತಿಯನ್ನು ದೈವಕ್ಕೆ, ದೈವ ನರ್ತಕರಿಗೆ ಹಾಗೂ ಪ್ರೋತ್ಸಾಹಿಸಿದ ಜನರಿಗೆ ಅರ್ಪಿಸುತ್ತೇನೆ ಎಂದು ತಿಳಿಸಿದ್ದಾರೆ. ಹೊಸದಿಲ್ಲಿಯಲ್ಲಿ ನಡೆದ 70ನೇ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಶಸ್ತಿ ಸ್ವೀಕರಿಸಿ ಮಂಗಳೂರಿಗೆ ಮರಳಿದ ಅವರಿಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆತ್ಮೀಯವಾಗಿ ಸ್ವಾಗತಿಸಲಾಯಿತು.

    ಈ ಸಂದರ್ಭದಲ್ಲಿ ವಿಮಾನ ನಿಲ್ದಾಣದಲ್ಲಿ ಹಾಜರಿದ್ದ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿ ‘ಕಾಂತಾರ’ ಈ ಭಾಗದಲ್ಲಿ ಮಾಡಿದ ಸಿನಿಮಾ. ದೈವದ ಬಗ್ಗೆ ಹಾಗೂ ದೈವ ನರ್ತಕರ ಬಗ್ಗೆ ಹೇಳುವ ಸಿನಿಮಾ ಆಗಿರುವುದರಿಂದ ಆ ಸಮುದಾಯಕ್ಕೆ ಸಿಗ ಬೇಕಾಗಿರುವ ಪ್ರಶಸ್ತಿ. ದೈವದ ಆಶೀರ್ವಾದ ಇಲ್ಲದಿದ್ದರೆ ಇಲ್ಲಿಯವರೆಗೆ ಬರುವುದು ಸಾಧ್ಯವಾಗುತ್ತಿರಲಿಲ್ಲ ಎಂದರು. ರಾಷ್ಟ್ರೀಯ ಪ್ರಶಸ್ತಿ ಬರುವುದಾಗಿ ಅಂದುಕೊಂಡಿರಲಿಲ್ಲ. ಸಿನಿಮಾ ಜನರಿಗೆ ಇಷ್ಟವಾಗಲಿ ಎಂದು ಇಡೀ ತಂಡವಾಗಿ ಕೆಲಸ ಮಾಡಿದ್ದೇವೆ. ಜನರಿಗೆ ಇಷ್ಟವಾಗಿದ್ದೇ ನಮಗೆ ದೊಡ್ಡ ಪ್ರಶಸ್ತಿ. ಅದು ಜ್ಯೂರಿಗಳಿಗೂ ಇಷ್ಟವಾಗಿ, ಚಿತ್ರ ಪ್ರಶಸ್ತಿ ಹಂತಕ್ಕೆ ತಲುಪಿದ್ದು, ತಂಡವಾಗಿ ಕೆಲಸ ಮಾಡಿ ಇನ್ನಷ್ಟು ಉತ್ತಮ ಸಿನಿಮಾ ಮಾಡುವುದಕ್ಕೆ ಪ್ರೇರಣೆಯಾಗಲಿದೆ ಎಂದರು.

    ಇನ್ನು ದೈವಾರಾಧನೆಯ ಚಿತ್ರದ ವಸ್ತುವಾಗಿ ಬಳಸಿರುವುದಕ್ಕೆ ಎದುರಾದ ಟೀಕೆಗಳ ಬಗ್ಗೆ ಪ್ರತಿಕ್ರಿಯಿಸಿದ ರಿಷಬ್‌ ಶೆಟ್ಟಿ, ಹಿಂದೆಯೂ ದೈವಾರಾಧನೆ ವಸ್ತುವಾಗಿರುವ ಚಿತ್ರಗಳು ಬಂದಿವೆ. ತುಳು ಸಿನಿಮಾಗಳಿಗೆ ಪ್ರಶಸ್ತಿ ಕೂಡ ಸಿಕ್ಕಿದೆ. ‘ಕಾಂತಾರ’ ಜನಪ್ರಿಯತೆ ಪಡೆದಾಗ ದೈವಾರಾದನೆ ಅಪಹಾಸ್ಯ ಮಾಡುವ ರೀತಿಯ ಪ್ರಸಂಗಗಳು ವೇದಿಕೆಗಳಲ್ಲಿ ನಡೆದಾಗ ನನಗೂ ಬೇಸರವಾಗಿದೆ, ನಾನೂ ದೈವಾರಾಧನೆ ಮಾಡುವವನಾಗಿ ಶ್ರದ್ಧೆಯಿಂದ ಚಿತ್ರ ನಿರ್ಮಿಸಿದ್ದೇನೆ. ಅದನ್ನು ಚಿತ್ರದ ರೀತಿಯಲ್ಲಿ ನೋಡಿಲ್ಲ ಎಂದು ಸ್ಪಷ್ಟಪಡಿಸಿದರು. ಕಾಂತಾರ-2 ಚಿತ್ರ ಶೂಟಿಂಗ್ ನಡೆಯುತ್ತಿದ್ದು, ಅತಿ ಶೀಘ್ರದಲ್ಲೇ ನಿರ್ಮಾಪಕರು ಸಿನಿಮಾ ಬಿಡುಗಡೆಯ ದಿನಾಂಕ ಪ್ರಕಟಿಸಲಿದ್ದಾರೆ ಎಂದರು.

    Click to comment

    Leave a Reply

    Your email address will not be published. Required fields are marked *

    FILM

    ಪಂಚಭೂತಗಳಲ್ಲಿ ಲೀನರಾದ ಗುರುಪ್ರಸಾದ್; ಬ್ರಾಹ್ಮಣ ವಿಧಿಯಂತೆ ಅಂತ್ಯಸಂಸ್ಕಾರ.!

    Published

    on

    ಮಂಗಳೂರು/ ಬೆಂಗಳೂರು: ಖ್ಯಾತ ನಟ, ನಿರ್ದೇಶಕ ಗುರುಪ್ರಸಾದ್‌ ಶವ ಮಾಡನಾಯಕನ ಹಳ್ಳಿ ದಾಸನಪುರ ರಸ್ತೆಯಲ್ಲಿರ ನೇಣು ಬಿಗಿದ ಸ್ಥಿತಿಯಲ್ಲಿ ಇಂದು (ನ.2) ಪತ್ತೆಯಾಗಿತ್ತು.

    ಗುರುಪ್ರಸಾದ್‌ ಅವರ ಮೃತದೇಹವನ್ನು ಮೊದಲಿಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಬಳಿಕ ಕುಟುಂಬದವರಿಗೆ ಹಸ್ತಾಂತರಿಸಲಾಗಿತ್ತು.

    ವಿಲ್ಸನ್‌ ಗಾರ್ಡನ್‌ ಚಿತಾಗಾರದಲ್ಲಿ ಬ್ರಾಹ್ಮಣ ವಿಧಿಯಂತೆ ಅಂತಿಮ ವಿಧಿಗಳನ್ನು ನೆರವೇರಿಸಿದ್ದು, ಈ ವೇಳೆ ಗುರುಪ್ರಸಾದ್ ಅವರ ಸಹೋದರ ಹರಿಪ್ರಸಾದ್, ಎರಡನೇ ಪತ್ನಿ ಸುಮಿತ್ರಾ , ಮೊದಲ ಪತ್ನಿ ಆರತಿ ಮತ್ತು ಕುಟುಂಬಸ್ಥರು ಭಾಗಿಯಾಗಿದ್ದರು.

    ಇದನ್ನು ಓದಿ:ಸಾಲಗಾರರ ಕಿರುಕುಳಕ್ಕೆ ಬೇಸತ್ತು ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆಗೆ ಶರಣು

    ಖ್ಯಾತ ಚಿತ್ರ ನಿರ್ದೇಶಕ ಯೋಗರಾಜ್ ಭಟ್, ನಟರಾದ ದುನಿಯಾ ವಿಜಯ್, ಡಾಲಿ ಧನಂಜಯ್ , ತಬಲಾ ನಾಣಿ, ಸತೀಶ್ ನೀನಾಸಂ ಮೊದಲಾದವರು ಅಂತಿಮ ವಿಧಿ ವೇಳೆ ಹಾಜರಿದ್ದರು.

    ‘ಸಾಲ ಭಾದೆಯಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ಜಿಗುಪ್ಪೆಯಿಂದ 3-4 ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿರಬಹುದು’ ಎಂದು ಪತ್ನಿ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

    Continue Reading

    FILM

    ಹುಡುಗಿಯರಿಗಿಂತ ನಾಚಿಕೆ ಜಾಸ್ತಿ; ಸಂದರ್ಶನದಲ್ಲಿ ಸೋನಾಲ್ ಅಭಿಪ್ರಾಯ ಹೀಗಿತ್ತು….

    Published

    on

    ಮಂಗಳೂರು/ ಬೆಂಗಳೂರು: ಕಳೆದ ಆಗಸ್ಟ್ ತಿಂಗಳಲ್ಲಿ ಸ್ಯಾಂಡಲ್‌ವುಡ್‌ ಸ್ಟಾರ್​ ಡೈರೆಕ್ಟರ್ ತರುಣ್ ಸುಧೀರ್ ಹಾಗೂ ಸೋನಲ್‌ ಮೊಂಥೆರೋ ವೈವಾಹಿಕ ಜೀವನಕ್ಕೆ ಕಾಲಿಟ್ಟು, ಹನಿಮೂನ್‌ಗೆ ಮಾಲ್ಡೀವ್ಸ್‌ಗೆ ಸಹ ಹೋಗಿ ಬಂದಿದ್ದರು. ಇತ್ತೀಚೆಗೆ ದೀಪಾವಳಿ ಹಬ್ಬವನ್ನು ಅದ್ದೂರಿಯಾಗಿ ಸೆಲೆಬ್ರೇಟ್ ಮಾಡಿದ್ದರು ಮಾತ್ರವಲ್ಲದೇ, ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸೋನಾಲ್‌ ಹಾಗೂ ತರುಣ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಕೆಲವು  ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

    ರ್ಯಾಪಿಡ್ ಫೈರ್‌ನಲ್ಲಿ ತರುಣ್ ಹಾಗೂ ಸೋನಾಲ್‌ಗೆ ಸಂದರ್ಶಕಿ ಎರಡು ಸ್ಲೇಟ್ ಕೊಟ್ಟು ಪ್ರಶ್ನೆಗಳನ್ನು ಕೇಳುತ್ತಾರೆ. ಅದಕ್ಕೆ ಉತ್ತರವನ್ನು ಅವರಿಬ್ಬರು ಸ್ಲೇಟ್ ಮೇಲೆ ಬರೆದು ತೋರಿಸಿ ತಮ್ಮ ಅಭಿಪ್ರಾಯಗಳನ್ನು ತಿಳಿಸಬೇಕು. ಮೊದಲ ಬಾರಿಗೆ ತರುಣ್ ಅವರ ಮನೆಗೆ ಬಂದಾಗ ಸೋನಾಲ್ ಮಾಡಿಕೊಟ್ಟ ಅಡುಗೆ ಏನು? ಎಂದಾಗ ತರುಣ್ ಸುಧೀರ್ ಕಬಾಬ್, ಸೋನಲ್‌ ಮೊಂಥೆರೋ ಡಯಟ್ ಫುಡ್ ಬಾಯ್ಲ್ಡ್ ರೈಸ್ ಎಂದು ಬರೆಯುತ್ತಾರೆ. ಆಗ ತರುಣ್ ಬಾಯ್ಲ್ಡ್ ರೈಸ್ ಅಲ್ಲ ಕಬಾಬ್ ಮಾಡಿಕೊಟ್ಟಿದ್ರಿ ಅಂದ್ರು. ವಿಶೇಷವಾಗಿ ಸೋನಾಲ್ ಮನೆಗೆ ಮೊದಲ ಬಾರಿಗೆ ಭೇಟಿ ನೀಡಿದಾಗಲೂ ಕಬಾಬ್ ಹಾಗೂ ದಾಲ್ ರೈಸ್ ಅನ್ನೇ ಸೋನಾಲ್ ಮಾಡಿಕೊಟ್ಟಿದ್ರು ಎಂದರು.

    ತರುಣ್ ಹಾಗೂ ಸೋನಾಲ್‌ ಇವರಿಬ್ಬರಲ್ಲಿ ಯಾರಿಗೆ ಬೇಗ ಸಿಟ್ಟು ಬರುತ್ತೆ? ಎಂದಾಗ ಸೋನಾಲ್ ಅವರು ಸ್ಲೇಟ್ ಮೇಲೆ ಬಾಣದ ಗುರುತು ಬರೆದು ತರುಣ್‌ಗೆ ಎಂದು ತೋರಿಸುತ್ತಾರೆ. ಹೌದು ನನಗೆ ಬೇಗ ಸಿಟ್ಟು ಬರುತ್ತೆ ಎಂದು ತರುಣ್ ಮುಗುಳ್ನಗುತ್ತಾ ಹೇಳುತ್ತಾರೆ. ತರುಣ್‌ಗೆ ಸಿಟ್… ಸಿಟ್ಟು ಬರಲ್ಲ ಒಟ್ಟಿನಲ್ಲಿ ಸಿಟ್ಟು ಮಾತ್ರ ಬರುತ್ತೆ ಎಂದು ಸೋನಾಲ್ ನಗುತ್ತಾ ಹೇಳುತ್ತಾರೆ. ನಿಮ್ಮಿಬ್ಬರಲ್ಲಿ ಯಾರಿಗೆ ಒಸಿಡಿ ಪ್ರಾಬ್ಲಮ್ ಇದೆ. ಅಂದ್ರೆ ತುಂಬಾ ನೀಟ್‌ನೆಸ್ ಇರಬೇಕು, ಕ್ಲೀನ್ ಇರಬೇಕು? ಎಂಬ ಪ್ರಶ್ನೆಗೆ ಸೋನಾಲ್ ಮತ್ತೆ ಸ್ಲೇಟ್ ಮೇಲೆ ಬಾಣದ ಗುರುತು ಬರೆದು ತರುಣ್‌ ಎಂದು ತೋರಿಸುತ್ತಾರೆ. ಆಗ ತರುಣ್ ನನಗೆ ಕ್ಲೀನ್ ಇರಬೇಕು ಎನ್ನುತ್ತಾರೆ.

    ಸೋನಾಲ್ ನಟಿಸಿರುವ ಯಾವ ಚಿತ್ರ, ಯಾವ ಪಾತ್ರ ತರುಣ್‌ಗೆ ಇಷ್ಟ? ಎಂದಾಗ ತರುಣ್ ಬನಾರಸ್ ಸಿನಿಮಾ ಎಂದು, ಸೋನಾಲ್ ರಾಬರ್ಟ್ ಚಿತ್ರ ಎಂದು ಬರೆದು ತೋರಿಸುತ್ತಾರೆ. ನಿಮ್ಮಿಬ್ಬರಲ್ಲಿ ಯಾರಿಗೆ ನಾಚಿಕೆ ಸ್ವಭಾವ ಜಾಸ್ತಿ? ಎಂಬ ಪ್ರಶ್ನೆಗೆ ಸೋನಾಲ್ ನಗುತ್ತಾ 100 ಪರ್ಸೆಂಟ್ ತರುಣ್ ಎಂದು ನಗುತ್ತಾ ಹೇಳುತ್ತಾರೆ. ಆಗ ತರುಣ್ ಸಹ ನಗುತ್ತಾ ನಾನೇ ಅನ್ನುತ್ತಾರೆ. ಜೊತೆಗೆ ನಾನು ಎಲ್ಲೆ ಇದ್ದರೂ ನಾಚಿಕೆ ಸ್ವಭಾವ ಇರುತ್ತದೆ. ಆದರೆ ಕೆಲಸದ ವಿಚಾರದಲ್ಲಿ ಇದು ಅನ್ವಯವಾಗುವುದಿಲ್ಲ ಎಂದು ಹೇಳುತ್ತಾರೆ. ಸೋನಾಲ್ ಸಹ ಮೊದಲ ಬಾರಿಗೆ ನಾವು ಭೇಟಿಯಾದಾಗ ಇವರು ಜಾಸ್ತಿ ಮಾತಾಡೇ ಇಲ್ಲ ಅಂದ್ರು.

    ಸೋನಾಲ್‌ ಹಾಗೂ ತರುಣ್ ಇವರಿಬ್ಬರಲ್ಲಿ ಖರ್ಚು ಜಾಸ್ತಿ ಮಾಡೋದು ಯಾರು? ಎಂದು ಕೇಳಿದಾಗ ತರುಣ್ ನಾನೇ ಅನ್ನುತ್ತಾರೆ. ಸೋನಾಲ್ ಸಹ ತರುಣ್ ಜಾಸ್ತಿ ಖರ್ಚು ಮಾಡುತ್ತಾರೆ. ಯಾಕಂದ್ರೆ ಎಲ್ಲ ಹುಡುಗೀರೂ ಜಾಸ್ತಿ ಶಾಪಿಂಗ್ ಅಂತ ಖರ್ಚು ಮಾಡುತ್ತಾರೆ. ಆದರೆ ಅದು ನಮ್ಮಲ್ಲಿ ಉಲ್ಟಾ. ಹಾಗೇ ನಾನು ನಾನೇ ಶಾಪಿಂಗ್ ಹೋಗ್ತೀನಿ. ತರುಣ್‌ಗೆ ಶಾಪಿಂಗ್ ಅಂದ್ರೆ ಇಷ್ಟ. ಡ್ರೆಸ್ ಮಾಡ್ಕೊಳ್ಳಕ್ಕೆ ಹುಡುಗೀರು ಜಾಸ್ತಿ ಟೈಮ್ ತಗೋತಾರೆ. ಆದರೆ ನಮ್ಮನೇಲಿ ತರುಣ್ ಜಾಸ್ತಿ ಟೈಮ್ ತಗೋತಾರೆ. ಆದರೆ ನಾನು ಮಾತ್ರ ಬೇಗ ರೆಡಿ ಆಗ್ತೀನಿ. ಆಕಸ್ಮಾತ್ ಮೇಕಪ್, ಹೇರ್‌ಸ್ಟೈಲ್ ಇದ್ದರೆ ನಾನು ಸ್ವಲ್ಪ ಲೇಟ್ ಆಗಿ ರೆಡಿ ಆಗ್ತೀನಿ ಎಂದು ನಗುತ್ತಾ ಸೋನಾಲ್ ಹೇಳಿದ್ದಾರೆ.

    ಇವರ ಸಂದರ್ಶನದ ವಿಡಿಯೋ ಬಹಳ ವೈರಲ್ ಆಗಿದ್ದು, ನೆಟ್ಟಿಗರು ಅಚ್ಚರಿ ಪಡುವುದರೊಡನೆ ಶಭಾಶಯ ವ್ಯಕ್ತ ಪಡಿಸಿದ್ದಾರೆ.

    Continue Reading

    FILM

    ಸಾಲಗಾರರ ಕಿರುಕುಳಕ್ಕೆ ಬೇಸತ್ತು ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆಗೆ ಶರಣು

    Published

    on

    ಬೆಂಗಳೂರು: ಸ್ಯಾಂಡಲ್ ವುಡ್ ನಟ, ನಿರ್ದೇಶಕ ಗುರುಪ್ರಸಾದ್ ಸಾಲಗಾರರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬುದಾಗಿ ಸ್ಫೋಟಕ ಮಾಹಿತಿ ಹೊರಬಿದ್ದಿದೆ.

    ಇತ್ತೀಚೆಗೆ ಎರಡನೇ ಮದುವೆ ಆಗಿದ್ದಂತ ನಟ, ನಿರ್ದೇಶಕರ ಗುರುಪ್ರಸಾದ್ ಅವರು ಸಾಲ ಮಾಡಿದ್ದರು. ಸಾಲ ತೀರಿಸಲು ಆಗದೇ ತೊಳಲಾಡುತ್ತಿದ್ದರು. ಇದೇ ಕಾರಣದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿರುವುದಾಗಿ ತಿಳಿದು ಬಂದಿದೆ.

    ಪದೇ ಪದೇ ಸಾಲಗಾರರು ಮನೆಗೆ ಬರ್ತಾರೆ ಅಂತ ಮನೆ ಕೂಡ ಮೂರು ಬಾರಿ ಬೆಂಗಳೂರಲ್ಲಿ ಬದಲಾವಣೆ ಮಾಡಿದ್ದರಂತೆ. ಜಯನಗರ, ಕನಕಪುರ, ಅಶೋಕ ನಗರದಲ್ಲಿ ಮನೆ ಮಾಡಿದ್ದರು. ಕೊನೆ ಕೊನೆಗೆ ಒಂಟಿಯಾಗಿ ಕೂಡ ವಾಸವಾಗಿದ್ದರು.

    ಇನ್ನೂ ಗುರುಪ್ರಸಾದ್ ಈ ಬಗ್ಗೆ ನಟ ಜಗ್ಗೇಶ್ ಅವರ ಜೊತೆಗೆ ಹಂಚಿಕೊಂಡಿದ್ದರು. ಸಮಾಧಾನಿಸಿ ಕಳುಹಿಸಿದ್ದಾಗಿ ಹೇಳಿದ್ದಾರೆ.

    Continue Reading

    LATEST NEWS

    Trending