Connect with us

LATEST NEWS

ಪುಟ್ಟ ಪೋರನ ಯಕ್ಷ ನಾಟ್ಯಕ್ಕೆ ಫಿದಾ ಆದ ಯಕ್ಷಗಾನ ಪ್ರಿಯರು..!

Published

on

ಪುಟ್ಟ ಪೋರನ ಯಕ್ಷ ನಾಟ್ಯಕ್ಕೆ ಫಿದಾ ಆದ ಯಕ್ಷಗಾನ ಪ್ರಿಯರು..!

ಉಡುಪಿ: ಯಕ್ಷಗಾನ ಅಂದಾಕ್ಷಣ ಕಣ್ಣೆದುರು ಬರುವುದು  ಅದ್ಭುತವಾದ ರಂಗಸ್ಥಳ, ಯಕ್ಷಗಾನ ವೇಷಧಾರಿಗಳು ಅದರ ಮುಮ್ಮೇಳ ಹಾಗು ಹಿಮ್ಮೇಳಗಳು.ರಾಗ ತಾಳ ಮೇಳ ,ಸಂಭಾಷಣೆ ಮೇಳ್ಳಸಿರುವ ಯಕ್ಷಗಾನಕ್ಕೆ ಎಂಥಹವರನ್ನಾದರೂ ಸೆಳೆಯುವ ಶಕ್ತಿ ಇದೆ.ಸದ್ಯ ಉಡುಪಿಯ ಕುಂದಾಪುರದ ಕೆದೂರು ಗ್ರಾಮದಲ್ಲಿ ನಡೆದ ಶ್ರೀ ಕ್ಷೇತ್ರ ಮಾರಣ ಕಟ್ಟೆ ಮೇಳದಲ್ಲಿ 5 ವರ್ಷದ ಪುಟ್ಟ ಪೋರನೊಬ್ಬ ಯಕ್ಷಗಾನ ಕಲಾವಿದರ ಜೊತೆ ಹೆಜ್ಜೆ ಹಾಕಿದ್ದಾನೆ.

ಇದೀಗ ಆ ಯಕ್ಷಗಾನ  ನಾಟ್ಯದ ವಿಡಿಯೋ ಎಲ್ಲೆಡೆ ವೈರಲ್ ಆಗ್ತಾ ಇದೆ.ಅನುಭವಿ ಕಲಾವಿದರಂತೆ ತನ್ಮಯತೆಯಿಂದ ನಾಟ್ಯ ಮಾಡುತ್ತಿರುವ ಈ ಪುಟ್ಟ ಬಾಲಕನ ಯಕ್ಷಗಾನ ಪ್ರೀತಿಗೆ ಯಕ್ಷಗಾನ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಪುಟ್ಟ ಪೋರನ ಹೆಸರು ದರ್ಶಿತ್ ಶೆಟ್ಟಿ  ಕುಂದಾಪುರದ ಕೆದರೂ ಬಡಾಬೆಟ್ಟು ನಿವಾಸಿಗಳಾದ  ಗಣೇಶ್ ಶೆಟ್ಟಿ ಹಾಗು ಶಮ್ಮಿ ಶೆಟ್ಟಿ ಯವರ ಮಗನಾಗಿರುವ ಈ ಪೋರನಿಗೆ ಯಕ್ಷಗಾನದ ನಾಟ್ಯದಲ್ಲಿ ಎಲ್ಲಿಲ್ಲದ ಮೋಹ.  ಯಕ್ಷಗಾನದಲ್ಲಿ ಮುಂದೆ ಈತನಿಗೆ ಉತ್ತಮ ಭವಿಷ್ಯವಿದೆ ಎಂದು ಯಕ್ಷಗಾನಭಿಮಾನಿಗಳು ಆಶೀರ್ವದಿಸಿದ್ದಾರೆ.

FILM

ನಟಿ ಪವಿತ್ರಾ ಜಯರಾಂ ಸಾ*ವಿನ ಬೆನ್ನಲ್ಲೇ ಆತ್ಮಹ*ತ್ಯೆಗೆ ಶರಣಾದ ಸಹನಟ ಚಂದು!

Published

on

ಕಿರುತೆರೆಯ ಖ್ಯಾತ ನಟಿ ಪವಿತ್ರಾ ಜಯರಾಮ್ ಇತ್ತೀಚೆಗೆ ಹೈದರಾಬಾದ್ ಸಮೀಪ ಕಾರು ಅಪಘಾತದಲ್ಲಿ ಇಹಲೋಕ ತ್ಯಜಿಸಿದ್ದರು. ಈ ವೇಳೆ ಅವರ ಗೆಳೆಯ ಹಾಗೂ ತೆಲುಗು ನಟ ಚಂದು ಅವರಿಗೂ ಪೆಟ್ಟಾಗಿದೆ. ಗೆಳತಿಯನ್ನು ಕಳೆದುಕೊಂಡ ನೋವಿನಲ್ಲಿದ್ದ ಚಂದು ಆತ್ಮಹ*ತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ.
ಚಂದು ಹಾಗೂ ಪವಿತ್ರಾ ಜಯರಾಂ ತೆಲುಗಿನ ‘ತ್ರಿನಯನಿ’ ಧಾರಾವಾಹಿಯಲ್ಲಿ ನಟಿಸುತ್ತಿದ್ದರು.

ಪವಿತ್ರಾ ಹಾಗೂ ಚಂದು ಇಬ್ಬರೂ ಸೋಶಿಯಲ್ ಮೀಡಿಯಾಗಳಲ್ಲಿ ಆ್ಯಕ್ಟಿವ್ ಆಗಿದ್ದರು. ಇಬ್ಬರು ಜೊತೆಯಾಗಿ ಹಾಡುಗಳಿಗೆ ಹೆಜ್ಜೆ ಹಾಕುತ್ತಿದ್ದರು. ಯಾವಾಗಲೂ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು. ದರ್ಶನ್ ಸಿನಿಮಾಗೆ ಪವಿತ್ರಾ ಅವರಿಗೆ ಆಫರ್ ಬಂದಿತ್ತು. ಹೀಗಾಗಿ ಇವರಿಬ್ಬರು ಜೊತೆಯಾಗಿ ಬೆಂಗಳೂರಿಗೆ ಬಂದಿದ್ದರು. ಹಿಂತಿರುಗುವಾಗ ಪ್ರಯಾಣಿಸುತ್ತಿರುವ ಕಾರು ಅಪಘಾತವಾಗಿತ್ತು. ಈ ವೇಳೆ ನಟಿ ಪವಿತ್ರಾ ಜಯರಾಂ ಸಾ*ವನ್ನಪ್ಪಿದ್ದರು. ಚಂದು ಗಾಯಗೊಂಡಿದ್ದರು.

ಇದನ್ನೂ ಓದಿ : ಬ್ಯಾಂಡೇಜ್ ಸುತ್ತಿಕೊಂಡೇ ಕೇನ್ಸ್ ರೆಡ್ ಕಾರ್ಪೆಟ್ ಮೇಲೆ ಕಾಣಿಸಿಕೊಂಡ ಐಶ್ವರ್ಯ ರೈ

ಪವಿತ್ರಾ ಸಾವಿಗೆ ತೀವ್ರ ನೊಂದಿದ್ದ ಚಂದು ಸೋಶಿಯಲ್ ಮೀಡಿಯಾದಲ್ಲಿ ಮಿಸ್ ಯೂ ಎಂದು ಪವಿತ್ರಾ ಜೊತೆಗಿನ ವೀಡಿಯೋ, ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದರು. ಇದೀಗ ಅವರು ಇಹಲೋಕ ತ್ಯಜಿಸಿದ್ದಾರೆ ಎಂದು ವರದಿಯಾಗಿದೆ.

 

Continue Reading

DAKSHINA KANNADA

ಮಂಗಳೂರು : ಮೇ 25 ರಂದು ಉಚಿತ ವೈದ್ಯಕೀಯ ಮತ್ತು ರಕ್ತದಾನ ಶಿಬಿರ

Published

on

ಮಂಗಳೂರು : ಅಖಿಲ ಭಾರತ ಬಿಲ್ಲವರ ಯೂನಿಯನ್ (ರಿ.), ಮಂಗಳೂರು ಮತ್ತು ನಾರಾಯಣ ಗುರು ಕಾಲೇಜು ಇದರ ಆಶ್ರಯದಲ್ಲಿ ಕೆ.ಎಮ್.ಸಿ. ಆಸ್ಪತ್ರೆ ಅತ್ತಾವರ ಮಂಗಳೂರು ಇದರ ಸಹಕಾರದಿಂದ ಹಿಂದುಳಿದ ಸಮಾಜದ ಸಾಮಾಜಿಕ ಕ್ರಾಂತಿಯ ಹರಿಕಾರ ದಿ.ದಾಮೋದರ ಆರ್.ಸುವರ್ಣ ಜನ್ಮಶತಾಬ್ದಿ ಪ್ರಯುಕ್ತ ಮೇ 25 ರಂದು ಕುದ್ರೋಳಿ ನಾರಾಯಣ ಗುರು ಕಾಲೇಜಿನ ದಾಮೋದರ ಆರ್.ಸಭಾಂಗಣದಲ್ಲಿ ಉಚಿತ ವೈದ್ಯಕೀಯ ಮತ್ತು ರಕ್ತದಾನ ಶಿಬಿರ ನಡೆಯಲಿದೆ. ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಘಂಟೆ ತನಕ ಈ ಕಾರ್ಯಕ್ರಮ ನಡೆಯಲಿದೆ.


ವೈದ್ಯಕೀಯ ಶಿಬಿರದಲ್ಲಿ ಕಣ್ಣು, ಕಿವಿ, ಮೂಗು, ಗಂಟಲು, ಎಲುಬು, ಕೀಲು ಮತ್ತು ಸಾಮಾನ್ಯ ರೋಗ ತಪಾಸಣೆ, ಮಧುಮೇಹ, ರಕ್ತದೊತ್ತಡ ಪರೀಕ್ಷೆ, ರೀಡಿಂಗ್ ಕನ್ನಡಕ ಅಗತ್ಯ ಇದ್ದವರಿಗೆ ಉಚಿತವಾಗಿ ನೀಡಲಾಗುವುದು. ಶಿಬಿರದಲ್ಲಿ ಭಾಗವಹಿಸುವವರಿಗೆ ಕೆ.ಎಮ್.ಸಿ.ಯ ಹಸಿರು ಕಾರ್ಡ್ ನೀಡಲಾಗುವುದು.

ಇದನ್ನೂ ಓದಿ : ಟಿ 20 ವಿಶ್ವಕಪ್ ಗೆ ಲಗ್ಗೆಯಿಟ್ಟ ‘ನಂದಿನಿ’; ಕ್ರಿಕೆಟಿಗರ ಜೆರ್ಸಿಯಲ್ಲಿ ಕರ್ನಾಟಕದ ಹೆಮ್ಮೆಯ ಬ್ರ್ಯಾಂಡ್‌

ಸಾರ್ವಜನಿಕರು ಶಿಬಿರದ ಸದುಪಯೋಗ ಪಡೆಯಬೇಕು. ಅದೇ ರೀತಿ ರಕ್ತದಾನದಲ್ಲೂ ಸ್ವಯಂ ಸ್ಪೂರ್ತಿಯಿಂದ ಭಾಗವಹಿಸಬೇಕೆಂದು ಅಖಿಲ ಭಾರತ ಬಿಲ್ಲವರ ಯೂನಿಯನ್ ನ ಅಧ್ಯಕ್ಷ ನವೀನ್ ಚಂದ್ರ ಸುವರ್ಣ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

Continue Reading

LATEST NEWS

ಒಂದೇ ಒಂದು ಸೊಳ್ಳೆಗಳಿಲ್ಲದ ವಿಚಿತ್ರ ದೇಶವಿದು..!

Published

on

ಐಸ್‌ಲ್ಯಾಂಡ್: ಬಿಸಿಲು, ಮಳೆ ಎರಡೂ ಕಾಣಿಸಿಕೊಂಡಾಗ ಸೊಳ್ಳೆಗಳ ಕಾಟವೂ ಹೆಚ್ಚಾಗುತ್ತದೆ. ಸೊಳ್ಳೆ ಕಚ್ಚುವುದರಿಂದ ಮಲೇರಿಯಾ, ಡೆಂಗ್ಯೂನಂತಹ ಮಾರಣಾಂತಿಕ ಕಾಯಿಲೆಗಳು ಬರಬಹುದು. ಸೊಳ್ಳೆಗಳಿಂದ ಹರಡುವ ರೋಗದಿಂದ ಪ್ರತಿವರ್ಷ ಲಕ್ಷಾಂತರ ಮಂದಿ ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ಪ್ರಪಂಚದಾದ್ಯಂತ ಒಟ್ಟು 3 ಸಾವಿರ ಜಾತಿಯ ಸೊಳ್ಳೆಗಳಿವೆ. ಆದರೆ ಒಂದೇ ಒಂದು ಸೊಳ್ಳೆಗಳೂ ಇಲ್ಲದ ವಿಶಿಷ್ಟ ದೇಶವೊಂದಿದೆ. ಹೌದು ಅದುವೇ ಉತ್ತರ ಅಟ್ಲಾಂಟಿಕ್ ಸಾಗರದಲ್ಲಿರುವ ಐಸ್‌ಲ್ಯಾಂಡ್ ದೇಶ. ಇದು ಹಾವು ಮುಕ್ತ ಮಾತ್ರವಲ್ಲ, ಸೊಳ್ಳೆ ಮುಕ್ತ ದೇಶವೂ ಆಗಿದೆ.

ಐಸ್‌ಲ್ಯಾಂಡ್ ವಿಪರೀತ ಚಳಿ ಇರುವ ಪ್ರದೇಶವಾಗಿದೆ. ಅಲ್ಲಿನ ಶೀತ ವಾತಾವರಣದಲ್ಲಿ ಸೊಳ್ಳೆಗಳು ಬದುಕಲು ಸಾಧ್ಯವಿಲ್ಲ. ಐಸ್‌ಲ್ಯಾಂಡ್ ಹವಾಮಾನವು ಬಹಳ ವೇಗವಾಗಿ ಬದಲಾಗುತ್ತದೆ. ಹವಾಮಾನದಲ್ಲಿನ ತ್ವರಿತ ಬದಲಾವಣೆಯ ಕಾರಣ ಸೊಳ್ಳೆಗಳು ತಮ್ಮ ಜೀವನಚಕ್ರ ಸಾಗಿಸಲು ಸಾಧ್ಯವಿಲ್ಲ.

ಐಸ್‌ಲ್ಯಾಂಡ್ ತಾಪಮಾನ ಇಳಿಕೆ ಆರಂಭವಾದಾಗ ನೀರು ಮಂಜುಗಡ್ಡೆ ರೂಪ ತಾಳುತ್ತದೆ. ನೀರು ಸಂಪೂರ್ಣವಾಗಿ ಹೆಪ್ಪುಗಟ್ಟುವ ಕಾರಣ ಪ್ಯೂಪಾ ಸಂಪೂರ್ಣವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಐಸ್‌ಲ್ಯಾಂಡ್‌ನಲ್ಲಿ ತಾಪಮಾನವು ಮೈನಸ್ 38 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುತ್ತದೆ. ಅಂತಹ ಕಡಿಮೆ ತಾಪಮಾನದಲ್ಲಿ ಸೊಳ್ಳೆಗಳು ಸಂತಾನೋತ್ಪತ್ತಿ ಮಾಡುವುದು ಅಸಾಧ್ಯ.

ಐಸ್‌ಲ್ಯಾಂಡ್‌ನಲ್ಲಿ ಸೊಳ್ಳೆಗಳಿಗೆ ಸಂಬಂಧಿಸಿದ ಒಂದು ಸಿದ್ಧಾಂತವೆಂದರೆ ಈ ದೇಶದ ನೀರು, ಮಣ್ಣು ಮತ್ತು ಸಾಮಾನ್ಯ ಪರಿಸರ ವ್ಯವಸ್ಥೆಯು ರಾಸಾಯನಿಕ ಸಂಯೋಜನೆಯ ಸೊಳ್ಳೆ ಜೀವನವನ್ನು ಬೆಂಬಲಿಸುವುದಿಲ್ಲ. ಆದರೆ ಐಸ್‌ಲ್ಯಾಂಡ್‌ನ ನೆರೆಯ ದೇಶಗಳಾದ ನಾರ್ವೆ, ಡೆನ್ಮಾರ್ಕ್‌, ಸ್ಕಾಟ್ಲೆಂಡ್ ದೇಶಗಳಲ್ಲಿ ಸೊಳ್ಳೆಗಳಿವೆ.

Continue Reading

LATEST NEWS

Trending