bangalore
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧದ ಪೋಕ್ಸೋ ಪ್ರಕರಣ; ಸಿಐಡಿಗೆ ವರ್ಗಾವಣೆ
ಬೆಂಗಳೂರು : ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ದಾಖಲಾಗಿರುವ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾಯಿಸಿ ಆದೇಶಿಸಲಾಗಿದೆ. ಕರ್ನಾಟಕದ ಪೊಲೀಸ್ ಮಹಾನಿರ್ದೇಶಕರ ಕಚೇರಿಯು ಈ ಪ್ರಕರಣವನ್ನು ಅಪರಾಧ ತನಿಖಾ ಇಲಾಖೆಗೆ ವರ್ಗಾಯಿಸಲು ಆದೇಶ ಹೊರಡಿಸಿದೆ. ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಲಾಗಿದೆ.
ಕಳೆದ ಫೆಬ್ರವರಿ 2 ರಂದು ಯಡಿಯೂರಪ್ಪ ಬಳಿ ಸಹಾಯ ಕೇಳಲು ಹೋಗಿದ್ದಾಗ ತನ್ನ ಮಗಳು ಅಪ್ರಾಪ್ತ ಬಾಲಕಿಯಾಗಿದ್ದು, ಆಕೆಗೆ ಮೇಲೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ಬಾಲಕಿಯ ತಾಯಿ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಸಂಬಂಧ ಯಡಿಯೂರಪ್ಪ ವಿರುದ್ಧ ಪೋಕ್ಸೊ ಕಾಯ್ದೆ ಮತ್ತು 354 (ಎ) ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಬೇಸರ ವ್ಯಕ್ತಪಡಿಸಿದ್ದ ಬಿಎಸ್ ವೈ:
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಯಡಿಯೂರಪ್ಪ ಮನೆಗೆ ಸಹಾಯ ಕೇಳಿಕೊಂಡು ಬಂದವರಿಗೆ ಸಹಾಯ ಮಾಡಿದ್ದೇ ತಪ್ಪಾಯ್ತು ಅಂತ ಪ್ರಶ್ನೆ ಮಾಡಿದ್ದಾರೆ. ಕೆಲ ದಿನಗಳಿಂದ ಮನೆಯ ಬಳಿ ಬರುತ್ತಿದ್ದ ಮಹಿಳೆ ಹಾಗೂ ಆಕೆಯ ಮಗಳನ್ನು ಸರಿಯಾಗಿ ಗಮನಿಸಿಲ್ಲ. ಆದ್ರೆ ಆಮೇಲೆ ಏನೋ ಕಷ್ಟ ಇರಬೇಕು ಎಂದು ಮನೆಯೊಳಗೆ ಕರೆದು ವಿಚಾರಿಸಿದೆ. ಆದ್ರೆ ಆಕೆಯ ಸಮಸ್ಯೆ ಏನು ಅನ್ನೋದು ಸರಿಯಾಗಿ ಅರ್ಥ ಆಗದ ಕಾರಣ ನಗರ ಪೊಲೀಸ್ ಆಯುಕ್ತರ ಬಳಿ ಆಕೆಯನ್ನು ಕಳುಹಿಸಿಕೊಟ್ಟಿದೆ. ಹಾಗೇ ಹೋಗುವಾಗ ಸ್ವಲ್ಪ ಹಣದ ಸಹಾಯ ಕೂಡಾ ಮಾಡಿದ್ದೆ ಎಂದು ಹೇಳಿದ್ದಾರೆ.
ಆದ್ರೆ, ಈಗ ಈ ರೀತಿಯ ಕೇಸ್ ದಾಖಲಿಸಿದ್ದು ಆಶ್ಚರ್ಯ ತಂದಿದ್ದು, ಯಾರಿಗೂ ಸಹಾಯ ಮಾಡಬಾರದು ಎಂದು ಎನಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಕಾನೂನು ಪ್ರಕಾರ ಯಾವ ಹೋರಾಟ ಮಾಡಬೇಕೋ ಅದನ್ನು ಮಾಡುವುದಾಗಿಯೂ ಈ ಸಮಯದಲ್ಲಿ ಅವರು ಹೇಳಿಕೆ ನೀಡಿದ್ದಾರೆ.
ಪರಿಶೀಲನೆ ಮಾಡಿ ಕೇಸ್ ಎಂದಿದ್ದ ಪರಮೇಶ್ವರ್
ಇನ್ನು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮಾತನಾಡಿ, ನಿನ್ನೆ ರಾತ್ರಿ ಮಹಿಳೆ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರ ಮೇಲೆ ದೂರು ಕೊಟ್ಟಿದ್ದಾರೆ. ಪರಿಶೀಲನೆ ಮಾಡಿ ಕೇಸ್ ದಾಖಲಾಗಿದೆ. ತನಿಖೆಯನ್ನು ಪ್ರಾರಂಭ ಮಾಡ್ತಾರೆ. ಕೊಟ್ಟಿರುವ ವಿಚಾರದಲ್ಲಿ ಯಾವುದನ್ನೂ ಹೇಳಲು ಬರುವುದಿಲ್ಲ. ಮಾನಸಿಕ ಅಸ್ವಸ್ಥತೆಯಿಂದ ಮಹಿಳೆಯು ಬಳಲುತ್ತಿದ್ದಾರೆ. ಟೈಪ್ ಮಾಡಿ ದೂರು ಕೊಟ್ಟಿದ್ದಾರೆ. ಬರೆದು ಕೊಟ್ಟಿಲ್ಲ. ಹಾಗಾಗಿ ದೂರು ದಾಖಲಿಸಿದ ಮೇಲೆ ತನಿಖೆ ಮಾಡುವ ವರೆಗೆ ಯಾವುದೇ ವಿಚಾರ ಹೇಳಲು ಆಗದು ಎಂದು ಹೇಳಿದ್ದರು.
bangalore
ರಾಜ್ಯದ ಎಂಟು ಜಿಲ್ಲೆಗಳಲ್ಲಿ ಮಳೆಯಾಗಲಿದೆ: ಹವಾಮಾನ ಇಲಾಖೆ ಮುನ್ಸೂಚನೆ
ಬೆಂಗಳೂರು : ಬಿಸಿಲಿನ ಉರಿಗೆ ಜನರು ಬೆಂದು ಹೋಗಿದ್ದಾರೆ. ವರುಣ ಕೃಪೆ ತೋರಯ್ಯ ಎಂದು ಬೇಡಿಕೊಳ್ಳುತ್ತಿದ್ದಾರೆ. ಈ ನಡುವೆ ಅಲ್ಲಲ್ಲಿ ಮಳೆಯಾಗಿದ್ರೂ ಸೂರ್ಯ ತಾಪವೇನೂ ಕಮ್ಮಿಯಾಗಿಲ್ಲ. ಇದೀಗ 8 ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಎಲ್ಲೆಲ್ಲಿ ಮಳೆ ?
ರಾಜ್ಯದ ಜನತೆ ಮಳೆರಾಯನಿಗಾಗಿ ಕಾಯುತ್ತಿದ್ದಾರೆ. ಹವಾಮಾನ ಇಲಾಖೆ ಕೆಲವು ಜಿಲ್ಲೆಗಳಿಗೆ ಶುಭ ಸುದ್ದಿ ನೀಡಿದೆ. ಏಪ್ರಿಲ್ 24ರಂದು ಬಾಗಲಕೋಟೆ, ಬೆಳಗಾವಿ, ಬೀದರ್, ಮೈಸೂರು, ಕೊಡಗು, ಹಾಸನ ಸೇರಿ 8 ಜಿಲ್ಲೆಗಳಲ್ಲಿ ಕೆಲವೆಡೆ ಮಳೆ ಬೀಳಬಹುದು ಎಂದು ಹೇಳಿದೆ.
ತಾಪಮಾನ ಹೆಚ್ಚಳ :
ಭಾರತೀಯ ಹವಾಮಾನ ಇಲಾಖೆ ದೇಶದ ಹಲವು ಭಾಗಗಳಲ್ಲಿ ಬಿಸಿಲಿನ ತಾಪ ತೀವ್ರವಾಗಲಿದೆ ಎಂದು ಕೂಡ ಮಾಹಿತಿ ನಡಿದೆ. ಅದರಲ್ಲೂ ಪೂರ್ವ ಮತ್ತು ದಕ್ಷಿಣ ಭಾರತದ ಹೆಚ್ಚಿನ ಭಾಗಗಳಲ್ಲಿ ಶಾಖದ ಅಲೆಗಳು ಹೆಚ್ಚಲಿವೆ ಎಂದಿದೆ. ಏಪ್ರಿಲ್ 25 ರ ವರೆಗೂ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣಹವೆ ಮುಂದುವರೆಯಲಿದೆ. ಏಪ್ರಿಲ್ 27 ರ ವರೆಗೆ ಈ ಪ್ರದೇಶಗಳಲ್ಲಿ ಉಷ್ಣಾಂಶ 2 ರಿಂದ 2 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗುವ ಸಾಧ್ಯತೆ ಇದೆ.
ಇದನ್ನೂ ಓದಿ : ಖತರ್ನಾಕ್ ಕಳ್ಳನನ್ನು ಬಂಧಿಸಿದ ಕೋಟ ಪೊಲೀಸರು; ‘ನನ್ನ ಬಗ್ಗೆ ಮಾಹಿತಿ ಬೇಕಾದ್ರೆ ಯೂಟ್ಯೂಬ್ ನೋಡಿ’ ಎಂದ ಖದೀಮ!
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಏಪ್ರಿಲ್ 6 ರಂದು ರಾಜಧಾನಿಯಲ್ಲಿ ಗರಿಷ್ಠ 37.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದು ಎಂಟು ವರ್ಷಗಳಲ್ಲಿ ಅತಿ ಹೆಚ್ಚು ಎಂದು ವರದಿಯಾಗಿದೆ.
ಮುಂದಿನವಾರ ನಗರದಲ್ಲಿ ತಾಪಮಾನ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
bangalore
ಮಹಿಳೆಯ ಅತಿಯಾದ ಕಾಮದಾಹ…! ದಾಹಕ್ಕೆ ಅಂತ್ಯ ಹಾಡಿದ ಯುವಕ..!
ಬೆಂಗಳೂರು : ಆಕೆ 48 ವರ್ಷ ಪ್ರಾಯದ ಮಹಿಳೆಯಾಗಿದ್ದು, ತನ್ನಿಬ್ಬರು ಹೆಣ್ಣು ಮಕ್ಕಳಿಗೆ ಮದುವೆ ಮಾಡಿಸಿ ಗಂಡನ ಮನೆಗೆ ಕಳುಹಿಸಿ ಕೊಟ್ಟಿದ್ದಾಳೆ. ಬೆಂಗಳೂರಿನ ಕೊಡಿಗೆ ಹಳ್ಳಿಯಲ್ಲಿ ಮನೆ ಮಾಡಿಕೊಂಡು ಒಂಟಿಯಾಗಿದ್ದ ಆಕೆಯ ದೇಹ ನಗ್ನವಾಗಿ ಬೆಡ್ರೂಮಿನಲ್ಲಿ ಪತ್ತೆಯಾಗಿತ್ತು. ಎಪ್ರಿಲ್ 19 ರಂದು ನಡೆದಿದ್ದ ಈ ಘಟನೆಯನ್ನು ಭೇದಿಸಿದ ಪೊಲೀಸರಿಗೆ ಶಾಕ್ ಆಗುವಂತ ವಿಚಾರಗಳು ಗೊತ್ತಾಗಿದೆ.
ಕೊಡಿಗೆ ಹಳ್ಳಿಯ ಭದ್ರಪ್ಪ ಲೇಔಟ್ನಲ್ಲಿ ನಡೆದಿದ್ದ ಶೋಭಾ ಎಂಬ ಮಹಿಳೆಯ ಕೊ*ಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಈ ಪ್ರಕರಣದಲ್ಲಿ ಕೊಲೆ ಆರೋಪಿಯಾಗಿರುವ ನವೀನ್ ಎಂಬ ಯುವಕನನ್ನು ಕೊಡಿಗೆ ಹಳ್ಳಿಯ ಪೊಲೀಸರು ಬಂದಿಸಿದ್ದಾರೆ. ವಿಚಾರಣೆ ವೇಳೆ ಬಾಯ್ಬಿಟ್ಟ ವಿಚಾರ ಕೇಳಿ ಪೊಲೀಸರೇ ಸುಸ್ತಾಗಿದ್ದಾರೆ. ಬಳಿಕ ಹೆಚ್ಚಿನ ತನಿಖೆ ನಡೆಸಿದ ಪೊಲೀಸರಿಗೆ ಶೋಭಾಳ ಕಾಮದಾಹ ಬೆಳಕಿಗೆ ಬಂದಿದೆ.
ಇದನ್ನೂ ಓದಿ ಗಂಡ-ಹೆಂಡತಿ ಬೇರೆ ಬೇರೆ ಮಲಗಿದ್ರೆ ಏನೆಲ್ಲಾ ಪ್ರಯೋಜನ ಇದೆ ಗೊತ್ತಾ?
ಶೋಭಾಳಿಗೆ ಇನ್ಸ್ಟಾಗ್ರಾಂ ಮೂಲಕ ಪರಿಚಿತನಾಗಿದ್ದ ನವೀನ್ ಬಳಿಕ ಸ್ನೇಹಿತನಾಗಿ, ಅದು ಪ್ರೀತಿಗೆ ತಿರುಗಿ ಬಳಿಕ ಇಬ್ಬರ ನಡುವೆ ಅನೈತಿಕ ಸಂಬಂಧದವರೆಗೂ ಬಂದು ನಿಂತಿತ್ತು. ಮಗನ ವಯಸ್ಸಿನ ಹುಡುಗನ ಜೊತೆಯಲ್ಲಿ ನಿರಂತರ ಸೆಕ್ಸ್ ಮಾಡುತ್ತಿದ್ದ ಶೋಭಾಳ ಅತಿಯಾದ ಕಾಮಧಾಹದಿಂದ ಬೇಸತ್ತು ಆಕೆಯನ್ನು ಕೊಲೆ ಮಾಡಿದ್ದಾಗಿ ಹೇರೋಹಳ್ಳಿ ಮೂಲದ ಆರೋಪಿ ನವೀನ್ ಹೇಳಿಕೆ ನೀಡಿದ್ದಾನೆ.
ಕೊಲೆ ನಡೆದ ದಿನವೂ ಶೋಭಾ ಮನೆಗೆ ನವೀನ್ ಬಂದಿದ್ದ. ಏ.19ರಂದು ಇಬ್ಬರು ದೈಹಿಕ ಸಂರ್ಪಕವನ್ನು ಬೆಳೆಸಿದ್ದರು. ಆ ನಂತರ ಶೋಭಾ ಮತ್ತೆ ನವೀನ್ಗೆ ಸೆಕ್ಸ್ಗೆ ಒತ್ತಾಯಿಸಿದ್ದು ನಿರಾಕರಿಸಿದಾಗ ಬ್ಲ್ಯಾಕ್ಮೇಲ್ ಮಾಡಿದ್ದಾಳೆ. ಈಕೆ ಅತಿಯಾಗಿ ಸೆಕ್ಸ್ಗೆ ಒತ್ತಾಯಿಸಿದ್ದಕ್ಕೆ ಬೇಸರಗೊಂಡ ನವೀನ್ ಬೆಡ್ ರೂಮಿನಲ್ಲೇ ಆಕೆಯ ಕಥೆ ಮುಗಿಸಿದ್ದ.
48ರ ಮಹಿಳೆಗೆ ಯುವಕರ ಮೇಲೆ ಹುಚ್ಚು
48ರ ಶೋಭಾ ಕೇವಲ ನವೀನ್ ಮಾತ್ರವಲ್ಲದೇ ಅನೇಕ ಯುವಕರ ಸಹವಾಸ ಬೆಳೆಸಿದ್ದಳು. ಒಬ್ಬೊಬ್ಬ ಹುಡುಗರಿಗೂ ಒಂದೊಂದು ಹಣ್ಣಿನ ಹೆಸರಿಟ್ಟಿದ್ದು, ನವೀನ್ಗೆ ಆ್ಯಪಲ್ ಎಂದು ಹೆಸರಿಟ್ಟಿದ್ದಳಂತೆ. ಆ್ಯಪಲ್, ಆರೆಂಜ್, ಬನಾನ ಹೆಸರಿನಲ್ಲಿ ಹುಡುಗರ ಹೆಸರು ಸೇವ್ ಮಾಡಿಕೊಳ್ಳುತ್ತಿದ್ದಳು. ಆ್ಯಪ್ಗಳಲ್ಲಿಯೂ ಆ್ಯಕ್ಟಿವ್ ಆಗಿದ್ದ ಶೋಭಾ ಸುಮಾರು 20 ಕ್ಕೂ ಹೆಚ್ಚು ಹುಡುಗರನ್ನು ಖೆಡ್ಡಾಗೆ ಬೀಳಿಸಿಕೊಂಡಿದ್ದಳು. ಈಕೆ ಕರೆದಾಗ ಯುವಕರು ಏನಾದರೂ ಬಾರದೆ ಇದ್ದರೆ ಅವರ ಮನೆ ಬಳಿಯೇ ಹೋಗುತ್ತಿದ್ದಳು. ನಂತರ ಕಾರಿನ ಹಾರ್ನ್ ಜೋರಾಗಿ ಹಾಕುತ್ತಿದ್ದಳು. ಇಷ್ಟಕ್ಕೂ ಜಗ್ಗದೆ ಹೋದರೆ ಮನೆಯವರಿಗೆ ಖಾಸಗಿ ಫೋಟೊವನ್ನು ತೋರಿಸುವುದಾಗಿ ಬೆದರಿಕೆ ಹಾಕುತ್ತಿದ್ದಳು. ಅಷ್ಟೇ ಅಲ್ಲದೆ ಆ ಯುವಕರ ಮದುವೆಗೂ ಅಡ್ಡಿ ಪಡಿಸಿ ಮದುವೆ ನಿಲ್ಲಿಸಿದ್ದಳು.
ಇದನ್ನೂ ಓದಿ ರಿಯಾಲಿಟಿ ಶೋಗಳಲ್ಲೂ ಕಾಸ್ಟಿಂಗ್ ಕೌಚ್! ಡ್ಯಾನ್ಸಿಂಗ್ ಕ್ವೀನ್ ಬಿಚ್ಚಿಟ್ಟ ಸತ್ಯವೇನು?
ಕೊಲೆಯಾದ ದಿನವೂ ನವೀನ್ಗೆ ಬ್ಲಾಕ್ ಮೇಲ್ ಮಾಡಿ ಕರೆಸಿಕೊಂಡಿದ್ದಳು. ನವೀನ್ ಎಡಗೈಗೆ ಗಾಯವಾಗಿತ್ತು, ಗಾಯದ ಮೇಲೆ ಕೂತು ನೀನು ಮದುವೆ ಆಗಬಾರದು, ಹೀಗೆ ನನ್ನ ಜತೆ ಇರಬೇಕು. ಮದುವೆ ಆದರೆ ಅಲ್ಲೆ ಬಂದು ಗಲಾಟೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಳು. ಇದರಿಂದ ಬೇಸತ್ತ ನವೀನ್, ಶೋಭಾಳ ಕತ್ತು ಹಿಸುಕಿ ಕೊ*ಲೆ ಮಾಡಿದ್ದಾಗಿ ವಿಚಾರಣೆ ವೇಳೆ ಹೇಳಿದ್ದಾನೆ.
bangalore
ಆರು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ಕೆಎಸ್ ಈಶ್ವರಪ್ಪ ಬಿಜೆಪಿ ಪಕ್ಷದಿಂದ ಉಚ್ಛಾಟನೆ..!
ಬೆಂಗಳೂರು: ಬಿಜೆಪಿ ಹಿರಿಯ ಮುಖಂಡ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಆರು ವರ್ಷಗಳ ಕಾಲ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿ ಆದೇಶಿಸಿ ಬಿಜೆಪಿ ಶಿಸ್ತು ಸಮಿತಿ ಈ ನಿರ್ಧಾರ ಕೈಗೊಂಡಿದೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಕೆಎಸ್ ಈಶ್ವರಪ್ಪ, ತಮ್ಮ ನಾಮಪತ್ರವನ್ನು ಹಿಂಪಡೆಯಲು ನಿನ್ನೆ(ಎ.22) ಕೊನೆಯ ದಿನವಾಗಿತ್ತು. ಆದರೆ, ಈಶ್ವರಪ್ಪ ನಾಮಪತ್ರವನ್ನು ಹಿಂಪಡೆಯಲು ನಿರಾಕರಿಸಿದ ಕಾರಣ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿ ಆದೇಶ ಹೊರಡಿಸಲಾಗಿದೆ. ಆರು ವರ್ಷಗಳ ಕಾಲ ಅವರು ಬಿಜೆಪಿ ಪಕ್ಷದಡಿ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ.
ಮುಂದೆ ಓದಿ..; ಚೌಟ ಪರ ಪ್ರಚಾರಕ್ಕೆ ಪುತ್ತೂರಿಗೆ ಬರಲಿದ್ದಾರೆ ಅಣ್ಣಾಮಲೈ
ಬಿಜೆಪಿ ಪಕ್ಷದಲ್ಲೇ ಇದ್ದುಕೊಂಡ ಕೆ ಎಸ್ ಈಶ್ವರಪ್ಪ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡು ನಿಂದಿಸುತ್ತಿದ್ದರು. ಬಿ ಎಸ್ ಯಡಿಯೂರಪ್ಪ ಮತ್ತು ಅವರ ಕುಟುಂಬ ರಾಜಕಾರಣವನ್ನು ಕೆ ಎಸ್ ಈಶ್ವರಪ್ಪ ತೀವ್ರವಾಗಿ ಟೀಕಿಸುತ್ತಿದ್ದರು. ತನ್ನ ಬೆಂಬಲ ಮೋದಿ ಪ್ರಧಾನಿಗೆ ಇದೆ ಎಂದು ಹೇಳಿಕೊಂಡಿದ್ದ ಈಶ್ವರಪ್ಪ ತಾನು ಗೆದ್ದ ಬಳಿಕ ಮೋದಿಗೆ ಬೆಂಬಲ ನೀಡುವುದಾಗಿ ಹೇಳಿಕೆ ನೀಡುತ್ತಿದ್ದರು. ಆದರೆ ಇದೀಗ ಪಕ್ಷದಿಂದಲೇ ಇವರನ್ನು ಉಚ್ಛಾಟಿಸಲಾಗಿದೆ.
- DAKSHINA KANNADA3 days ago
ಸುಬ್ರಹ್ಮಣ್ಯ: ಕೆಎಸ್ಸಾರ್ಟಿಸಿ ಬಸ್ಗಳ ಹಗಲು ದರೋಡೆ..! ಏನಿದು ಘಟನೆ?
- FILM5 days ago
ಬಿಗ್ ಬಾಸ್ ಬಗ್ಗೆ ಅಚ್ಚರಿ ಹೇಳಿಕೆ ಕೊಟ್ಟ ನಮ್ರತಾ ಗೌಡ!
- dehali4 days ago
ನಾಯಿಗಳಿಗೂ ಬಂತು ಆಧಾರ್ ಕಾರ್ಡ್.!! ಇನ್ಮುಂದೆ ನಾಯಿಗೂ ಸ್ಕ್ಯಾನ್ ಕಾರ್ಡ್..! ಏನಿದು?
- BELTHANGADY4 days ago
ವೇಷ ಕಳಚುವ ಮುನ್ನ ಇಹಲೋಕ ತ್ಯಜಿಸಿದ ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು