Connect with us

DAKSHINA KANNADA

ಕೋಮುವಾದದ ಕೊಲೆಯನ್ನು ತ್ವರಿತ ನ್ಯಾಯಾಲಯ ಸ್ಥಾಪಿಸಿ 6 ತಿಂಗಳೊಳಗೆ ಪ್ರಕರಣ ಇತ್ಯರ್ಥಗೊಳಿಸಿ: ಪದ್ಮರಾಜ್‌ ಆಗ್ರಹ

Published

on

ಮಂಗಳೂರು: ಸರ್ಕಾರಕ್ಕೆ ಇಚ್ಛಾಶಕ್ತಿ ಇದ್ದರೆ ಪ್ರವೀಣ್ ಕೊಲೆ ಪ್ರಕರಣ ಸೇರಿ ಕೋಮುವಾದದಂತಹ ಎಲ್ಲ ಪ್ರಕರಣಗಳನ್ನು ತ್ವರಿತ ನ್ಯಾಯಾಲಯ ಸ್ಥಾಪಿಸಿ ಆರು ತಿಂಗಳೊಳಗೆ ಇತ್ಯರ್ಥಗೊಳಿಸಿ ನೈಜ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಕ್ರಮ‌ ಕೈಗೊಳ್ಳಲಿ ಎಂದು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ, ಬಿಲ್ಲವ ಮುಖಂಡ, ವಕೀಲ ಪದ್ಮರಾಜ್ ಆರ್. ಆಗ್ರಹಿಸಿದ್ದಾರೆ.


ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣದಲ್ಲಿ ಸರ್ಕಾರದ ಭದ್ರತಾ ವೈಫಲ್ಯತೆ ಎದ್ದು ಕಾಣುತ್ತಿದೆ. ಕೆಲವು ದಿನಗಳ ಹಿಂದೆ, ಮಾಧ್ಯಮಗಳು ಪ್ರತೀಕಾರದ ಕೊಲೆ ನಡೆಯಬಹುದು ಎಂದು ಸಂಶಯ ವ್ಯಕ್ತಪಡಿಸಿ,

ಸರ್ಕಾರವನ್ನು ಎಚ್ಚರಿಸಿದರೂ ಏನೂ ಕ್ರಮ ಕೈಗೊಳ್ಳದ ಗುಪ್ತಚರ ಇಲಾಖೆಯ ವಿಫಲತೆಗೆ ಸಾಕ್ಷಿಯಾಗಿದೆ ಎಂದು ಆರೋಪಿಸಿದ್ದಾರೆ.

ಯಾರದ್ದೋ ಸ್ವಾರ್ಥಕ್ಕಾಗಿ ಬಲಿಯಾಗುವವರು ಯಾವ ರಾಜಕಾರಣಿಯ ಮಗನೂ ಅಲ್ಲ. ಬಡಕುಟುಂಬದ ಯುವಕ. ರಾಜ್ಯದಲ್ಲಿ ಯುವಕರ ಕೊಲೆಗಳ ಸರಣಿಯೇ ಮುಂದುವರಿದಿದ್ದು, ಇದೀಗ ಇನ್ನೊಂದು ಜೀವ ಹೋಗಿದೆ.

ಈ ಹತ್ಯಾಕಾಂಡಕ್ಕೆ ಯಾರು ಜವಾಬ್ದಾರಿ? ಹೃದ್ರೋಗಪೀಡಿತ ಅಪ್ಪ, ವಯಸ್ಸಾದ ತಾಯಿ, ಮೂರು ವರ್ಷಗಳ ಹಿಂದೆ ಮದುವೆಯಾದ ಹೆಂಡತಿಗೆ ಆಧಾರಸ್ತಂಭವಾಗಿದ್ದ ಅವರ ನಿಧನದಿಂದ ಆ ಕುಟುಂಬ ಮತ್ತಷ್ಟು ಕಷ್ಟದ ಕೂಪಕ್ಕೆ ಹೋಗಿದೆ. ತಮ್ಮ ಸ್ವಾರ್ಥಕ್ಕಾಗಿ ದುಡಿಸಿಕೊಳ್ಳುವ ರಾಜಕಾರಣಿಗಳು ಪರಿಹಾರ ಘೋಷಣೆ ಮಾಡಬಹುದು.

ಆದರೆ ಹೋದ ಪ್ರಾಣವನ್ನು ಮರಳಿ ಪಡೆಯಲು ಸಾಧ್ಯವೇ? ಒಂದು ಕೊಲೆಯಾದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎನ್ನುವ ರಾಗವೊಂದು ಬಿಟ್ಟರೆ, ಇಲ್ಲಿಯವರೆಗೆ ಏನು ಕ್ರಮ ಕೈಗೊಂಡಿದ್ದಾರೆ?

ರಾಜಕೀಯ ಪಕ್ಷಗಳ ಇಚ್ಛಾಶಕ್ತಿಯ ಕೊರತೆಯಿಂದ ಇಂತಹ ಘಟನೆಗಳು ಮರುಕಳಿಸುತ್ತಿದ್ದು, ಶ್ರಮಜೀವಿಗಳ ಕುಟುಂಬದ ಮಕ್ಕಳೇ ಬಲಿಯಾಗುತ್ತಿದ್ದಾರೆ.

ಒಂದು ವೇಳೆ ಕಠಿಣ ನಿರ್ಧಾರ ತೆಗೆದುಕೊಳ್ಳುತ್ತಿದ್ದರೆ ಪ್ರವೀಣನಂತಹ ಸಹೃದಯಿಯನ್ನು ಕಳೆದುಕೊಳ್ಳುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.

ಪ್ರವೀಣ್ ನಮ್ಮ ಕುಟುಂಬದ ಸದಸ್ಯ ಮನೆಯವರ ದು‌ಃಖದ ಸಮಯದಲ್ಲಿ ಬಿಲ್ಲವ ಸಮಾಜ ಸದಾ ಇರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

1 Comment

1 Comment

  1. Ravi Poojary

    29/07/2022 at 9:50 AM

    What you said is correct govt must take serious action against the culprits.He may be hindu muslim or any other caste government must take seriously.They should not differentiate

Leave a Reply

Your email address will not be published. Required fields are marked *

DAKSHINA KANNADA

ಪ್ರಜ್ವಲ್‌ ಅಶ್ಲೀಲ್ ವಿಡಿಯೋ ಡಿಲೀಟ್ ಮಾಡಿ..! ಎಸ್‌ಐಟಿ ವಾರ್ನಿಂಗ್..!

Published

on

ಮಂಗಳೂರು : ಸದ್ಯ ಸಂಸದ ಪ್ರಜ್ವಲ್ ರೇವಣ್ಣ ವೀಡಿಯೋ ಪ್ರಕರಣ ಭಾರೀ ಸದ್ದು ಮಾಡುತ್ತಿದೆ. ಪ್ರಕರಣ ಬೆಂಬತ್ತಿರುವ ಎಸ್ ಐ ಟಿ ಖಡಕ್ ವಾರ್ನ್ ಮಾಡಿದೆ. ಅಶ್ಲೀಲ ವಿಡಿಯೋಗಳನ್ನು ಶೇರ್ ಮಾಡದಂತೆ ಹೇಳಿದೆ. ಅಷ್ಟೇ ಅಲ್ಲದೆ, ಅಶ್ಲೀಲ ವಿಡಿಯೋ ಮೊಬೈಲ್ ನಲ್ಲಿ ಸ್ಟೋರ್ ಮಾಡಿಕೊಂಡಿದ್ದರೆ, ಒಂದು ವೇಳೆ ಡಿಲೀಟ್‌ ಮಾಡದೇ ಇದ್ದರೆ ಕಾನೂನು ಕ್ರಮಗಳನ್ನು ಎದುರಿಸಬೇಕಾದೀತು ಎಂದು ಎಸ್ಐಟಿ ಮುಖ್ಯಸ್ಥ ಬಿ.ಕೆ. ಸಿಂಗ್ ಮಾಧ್ಯಮ ಪ್ರಕಟಣೆ ಮೂಲಕ ಎಚ್ಚರಿಕೆ ನೀಡಿದ್ದಾರೆ.

ಅಲ್ಲದೇ, ಯಾವುದೇ ಅಶ್ಲೀಲ ವೀಡಿಯೋ ಹಾಗೂ ಧ್ವನಿ ಮುದ್ರಣವನ್ನು ಇಟ್ಟುಕೊಂಡಿದ್ದರೆ ಅದು ಅಪರಾಧವಾಗುವುದರಿಂದ ಜನರು ತಮ್ಮ ಮೊಬೈಲ್‌ ಅಥವಾ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಇಟ್ಟುಕೊಳ್ಳಬಾರದು. ಒಂದು ವೇಳೆ ಇಟ್ಟುಕೊಂಡಿದ್ದರೆ ಕೂಡಲೇ ಡಿಲೀಟ್‌ ಮಾಡಿಬಿಡಿ. ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋ ಇದ್ದರೆ ಅದರ ರಚನಕಾರರು ನೀವು ಎಂದು ಪರಿಗಣಿಸಿ ಕ್ರಿಮಿನಲ್ ಕೇಸ್ ಬೀಳುತ್ತದೆ. ಆದ್ದರಿಂದ, ಡಿಲೀಟ್ ಮಾಡುವುದರಿಂದ ಕಾನೂನು ಕ್ರಮಗಳಿಂದ ಪಾರಾಗುವ ಸಾಧ್ಯತೆ ಇರುತ್ತದೆ ಎಂದು ಬಿ.ಕೆ. ಸಿಂಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Continue Reading

BANTWAL

ಸಾಲದ ಶೂಲಕ್ಕೆ ಜೀವಾಂತ್ಯಗೊಳಿಸಿದ ಯುವಕ…!

Published

on

ಮಂಗಳೂರು : ತಾನು ತಂಗಿದ್ದ ಲಾಡ್ಜ್ ನಲ್ಲಿಯೇ ಅವಿವಾಹಿತ ಯುವಕನೋರ್ವ ನೇಣು ಬಿಗಿದು ಆತ್ಮಹ*ತ್ಯೆ ಮಾಡಿಕೊಂಡ ‌ಘಟನೆ ಬಿಸಿರೋಡಿನಲ್ಲಿ ನಡೆದಿದೆ.

ಮಂಗಳೂರು ಅತ್ತಾವರ ನಿವಾಸಿ ಪ್ರಜ್ವಲ್ ( 30) ನೇಣು ಬಿಗಿದು ಆತ್ಮಹ*ತ್ಯೆ ಮಾಡಿಕೊಂಡ ಯುವಕ. ಮೇ. 5 ರಂದು ಬಿಸಿರೋಡಿನ ಖಾಸಗಿ ಬಸ್ ನಿಲ್ದಾಣದ ಹತ್ತಿರವಿರುವ ಹೋಟೆಲೊಂದರಲ್ಲಿ ರೂಂ ಮಾಡಿದ್ದ. ಈತ ಮೇ.6 ರಂದು ರಾತ್ರಿ ಊಟ ಮುಗಿಸಿ, ಬಾಗಿಲು ಹಾಕಿಕೊಂಡಿದ್ದ. ಮಂಗಖವಾರ ಬೆಳಿಗ್ಗೆ ರೂಂನ ಬಾಗಿಲು ತೆರೆಯದ ಇದ್ದ ಕಾರಣ ಹೋಟೆಲ್ ಸಿಬ್ಬಂದಿ ಕರೆದರೂ ಸ್ಪಂದಿಸಿರಲಿಲ್ಲ. ಹೀಗಾಗಿ ಪೊಲೀಸರಿಗೆ ಮಾಹಿತಿ ನೀಡಿ ಬಾಗಿಲು ತೆರೆದಾಗ ನೇಣು ಬಿಗಿದ ಸ್ಥಿತಿಯಲ್ಲಿ ಪ್ರಜ್ವಲ್ ಮೃ*ತದೇಹದ ಪತ್ತೆಯಾಗಿದೆ.


ಓನ್ ಲೈನ್ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿದ್ದ ಪ್ರಜ್ವಲ್ ಇತ್ತೀಚಿನ ದಿನಗಳಲ್ಲಿ ಮಾನಸಿಕವಾಗಿ ತೀವ್ರವಾಗಿ ನೊಂದಿದ್ದ ಎನ್ನಲಾಗಿದೆ. ತಾನು ಕೆಲಸ ಮಾಡಿಕೊಂಡಿದ್ದ ಕಂಪೆನಿಯ ಮಾಲಕರಿಂದ 60 ಸಾವಿರ ಸಾಲ ಪಡೆದು ಬಳಿಕ ಹಣ ಹೊಂದಿಸಲಾಗದೆ, ಸರಿಯಾದ ಸಮಯಕ್ಕೆ ಹಿಂದುರುಗಿಸಲಾಗಿಲ್ಲ ಎಂಬ ಕಾರಣಕ್ಕೆ ಕೊರುಗುತ್ತಿದ್ದ ಎಂದು ಹೇಳಲಾಗಿದೆ. ಸಾಲದ ವಿಚಾರವಲ್ಲದೆ ಪ್ರೀತಿಸಿದ ಯುವತಿ ಕೈಕೊಟ್ಟಿದ್ದು, ಪ್ರೇಮ ವೈಫಲ್ಯದ ನೋವಿನಲ್ಲೂ ಇದ್ದ ಎಂದು ವರದಿಯಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

DAKSHINA KANNADA

ಕಾಮಿಡಿ ಕಿಲಾಡಿಗಳು ಸೀಸಲ್-7ರಲ್ಲಿ ಮಿಂಚಲಿದ್ದಾರೆ ಪುತ್ತೂರಿನ ಪ್ರತಿಭೆಗಳು .!!

Published

on

ಮಂಗಳೂರು:  ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು  ಪ್ರೀಮಿಯರ್ ಲೀಗ್ ಮೆಗಾ ಆಕ್ಷನ್‌ ಆರಂಭಗೊಂಡಿದ್ದು ಈ ಬಾರಿ ವಿಭಿನ್ನ ರೀತಿಯಲ್ಲಿ ಮೂಡಿ ಬರುತ್ತಿದೆ. ಈ ಶೋನಲ್ಲಿ ನಟ ಜಗ್ಗೇಶ್ ಮಹಾ ತೀರ್ಪುಗಾರರಾಗಿದ್ದರೆ, ಐದು ಸ್ಟಾರ್  ನಿರೂಪಕರುಗಳಾದ ಅನುಶ್ರೀ, ಮಾಸ್ಟರ್‌ ಆನಂದ್‌, ಅಕುಲ್‌ ಬಾಲಾಜಿ, ಶ್ವೇತಾ ಚಂಗಪ್ಪ ಹಾಗೂ ಕುರಿ ಪ್ರತಾಪ್‌ ರವರು ಜಡ್ಜಸ್‌ಗಳಾಗಿದ್ದಾರೆ. ರಾಜ್ಯದ 20 ಪ್ರತಿಭೆಗಳಿಂದ ಪ್ರೇಕ್ಷಕರಿಗೆ ಕಾಮಿಡಿಯ ರಸದೌಣ ನೀಡಲು ತಯಾರುಗುತ್ತಿದೆ.  ಇನ್ನು ಕಿಲಾಡಿ ಪ್ಲೇಯರ್‌ಗಳಲ್ಲಿ ಪುತ್ತೂರಿನ ಪ್ರತಿಭೆ ಪವಿತ್ರಾ ಹೆಗ್ಡೆ ಹಾಗೂ ಗಣರಾಜ್ ಭಂಡಾರಿ ಆಯ್ಕೆಯಾಗಿದ್ದಾರೆ.

comedy kiladi

ಮಂಗಳೂರಿನ 150 ಸ್ಪರ್ಧಿಗಳ ಪೈಕಿ ಪವಿತ್ರಾ ಹೆಗ್ಡೆ ಹಾಗೂ ಗಣರಾಜ್ ಭಂಡಾರಿಯವರು ಆಯ್ಕೆಯಾಗಿದ್ದಾರೆ. ಕರ್ನಾಟಕದ 2,500ಕ್ಕು ಮಿಕ್ಕಿ ಸ್ಪರ್ಧಿಗಳ ಮೂರು ಹಂತದ ಆಯ್ಕೆ ಪ್ರಕ್ರಿಯೆಯಲ್ಲಿ ಆಯ್ಕೆಯಾದ 10 ನಟರಲ್ಲಿ ಇವರಿಬ್ಬರು ಆಯ್ಕೆಯಾಗಿದ್ದಾರೆ.

ಮುಂದೆ ಓದಿ..; ಹೊಸ ಅವತಾರದಲ್ಲಿ ZEE ಕನ್ನಡ ‘ಕಾಮಿಡಿ ಕಿಲಾಡಿಗಳು’… ಸ್ಟಾರ್ ನಿರೂಪಕರು ಈಗ ಜಡ್ಜಸ್? ಏನಿದು ಟ್ವಿಸ್ಟ್?

ಪುತ್ತೂರಿನ ಪವಿತ್ರ ಹೆಗ್ಡೆ  ಆಯ್ಕೆ:

ಪವಿತ್ರ ಹೆಗ್ಡೆ ಕಳೆದ 10 ವರ್ಷಗಳಿಂದ ಮಂಗಳೂರಿನಲ್ಲಿ ಕಿಶೋರ್ ಡಿ ಶೆಟ್ಟಿ ನಿರ್ದೇಶನದ ಲಕುಮಿ ತಂಡದ ಕುಸಾಲ್ದ ಕಲಾವಿದರು ಮಂಗಳೂರು ತಂಡದಲ್ಲಿ ಹಾಸ್ಯ ಕಲಾವಿದೆಯಾಗಿ ಅಭಿನಯಿಸುತ್ತಿದ್ದಾರೆ. ಹಲವಾರು ನಾಟಕ, ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ನಟನೆ ಮಾಡಿದ್ದಾರೆ. ಬಾಲ್ಯದಲ್ಲೇ ಕಲಾ ಕ್ಷೇತ್ರಕ್ಕೆ ಧುಮುಕಿದ ಇವರು 6ನೇ ತರಗತಿಯಿಂದ ನಾಟಕ ಅಭಿನಯ, 2012ರಿಂದ ಮಂಗಳೂರಿನ ತಂಡವಾದ ಮಾನಸ ಕಲಾವಿದರು ತಂಡದಲ್ಲಿ 3 ವರ್ಷ ಅಭಿನಯ, ಹೀಗೆ ಹಲವಾರು ತಂಡಳದಲ್ಲಿ ತಮ್ಮ ಅಭಿನಯ ಪಾತ್ರ ಮಾಡಿದ್ದಾರೆ. ತುಳು ಸಿನೆಮಾ ಮತ್ತು ತುಳು ಮತ್ತು ಕನ್ನಡ ಧಾರಾವಾಹಿಯಲ್ಲಿಯೂ ಅಭಿನಯಿಸಿದ್ದಾರೆ. ನಮ್ಮ ಟಿವಿಯಲ್ಲಿ ಪ್ರಸಾರವಾಗುತ್ತಿರುವ ‘ಬಲೆತಲಿಪಾಲೆ’ ಸೀಸನ್ 7ರಲ್ಲಿ ರನ್ನರ್ ಅಪ್ ಆಗಿದ್ದಾರೆ. ವಿ4 ನ್ಯೂಸ್‌ನಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಪ್ರೀಮಿಯರ್ ಲೀಗ್ ಸೀಸನ್ 2ನಲ್ಲಿ ಮತ್ತು ಸೀಸನ್ 3ಯಲ್ಲಿ ಅಭಿನಯಿಸಿ ಬೆಸ್ಟ್ ಫರ್ಫಾಮೆನ್ಸ್ ಅವಾರ್ಡ್ ಪಡೆದಿದ್ದಾರೆ. ವಿದೇಶದಲ್ಲೂ ನಾಟಕ ಪ್ರದರ್ಶನ ನೀಡಿದ್ದಾರೆ. ಕನ್ನಡ ಕಸ್ತೂರಿ ಚಾನಲ್‌ನಲ್ಲಿ ಪ್ರಸಾರವಾಗುತ್ತಿದ್ದ ಕಂಜೂಸ್ ಕಮಂಗಿರಾಯ, ಪುತ್ತೂರು ಚಾನೆಲ್ ದ ಚಾನಲ್ 9ನಲ್ಲಿ ಪುಸಾರವಾಗುತ್ತಿದ್ದ ಕುಡ ತೆಲಿಪುಗ, ಡಾಯಿಜಿ ವರ್ಲ್ಡ್‌ನಲ್ಲಿ ಪ್ರಸಾರವಾಗುತ್ತಿದ್ದ ಬಾಬಣ್ಣ ಬೂಬಣ್ಣ, ಕಿರುಚಿತ್ರವಾದ ಕಲ್ಕುಡ ಕಲ್ಲುರ್ಟಿ, ವಾತ್ಸಲ್ಯ, ನೋ ಬಾಲ್, ಕೊಕೊನಾಟ್ ಸಹಿತ ಹಲವು ಚಲನಚಿತ್ರದಲ್ಲಿ ಪಾತ್ರ ನಿರ್ವಹಿಸಿದ್ದರು. ಇವರಿಗೆ ಹಲವಾರು ಸನ್ಮಾನ ಪತ್ರಗಳು ಲಭಿಸಿದೆ. ಇವರು ಪುತ್ತೂರು ಚಂದ್ರಶೇಖ‌ರ್ ಹೆಗ್ಡೆ ಮತ್ತು ಮಯಾದೇವಿ ಅವರ ಪುತ್ರಿಯಾಗಿದ್ದು ಪುಜ್ವಲ್ ಹೆಗ್ಡೆಯವರ ಪತ್ನಿಯಾಗಿದ್ದಾರೆ.

ವೈರಲ್ ಸ್ಟಾರ್ ಗಣರಾಜ್ ಭಂಡಾರಿ:

ಪುತ್ತೂರಿನ ಸಂಸಾರ ಕಲಾವಿದೆರ್ ತಂಡದ ವೈರಲ್ ಸ್ಮಾರ್ ಖ್ಯಾತಿಯ ಗಣರಾಜ್ ಭಂಡಾರಿ ಕಾಮಿಡಿ ಕಿಲಾಡಿಗಳು ಶೋಗೆ ಆಯ್ಕೆಯಾಗಿದ್ದಾರೆ. ನಾಗೇಶ್ ಬಲ್ನಾಡು ನಿರ್ದೇಶನದ ಸೂಪರ್ ಹಿಟ್ ನಾಟಕ “ಮಲ್ಲಕ್ಕನ ಇಲ್ಲೊಕ್ಕೆಲ್” ಮೂಲಕ ರಂಗಪ್ರವೇಶ ಮಾಡಿದ ಇವರು ಬದ್‌ರೆ ಕಲ್ಪಿ, ಊರುಗೊರಿ ವಿಶ್ವನಾಥ, ಮಗೆ ಮಲ್ಲಯೆ, ಒವುಲಾ ಒರಿಯುಜಿ, ಸತ್ಯನಾ ಭಕ್ತಿ, ತಪ್ಪು ಎನ್ನೊಡ್ಡಿ, ಭಾಗ್ಯ ಬೋಡು ಅಲ್ಲದೆ ಈ ವರ್ಷದ ಸೂಪರ್ ಹಿಟ್ ಯಶಸ್ವಿ ನಾಟಕ ನಂಬಿಕೆದಾಯೆ ನಾಟಕಗಳಲ್ಲಿ ಪ್ರಮುಖ ಹಾಸ್ಯ ಪಾತ್ರಗಳನ್ನು ನಿರ್ವಹಿಸಿದ್ದಾರೆ.  ಪುತ್ತೂರಿನ ಕೋರ್ಟ್ ರಸ್ತೆಯ ಶ್ರೀನಿಧಿ ಸೆಲೂನ್’ನಲ್ಲಿ ಕ್ಷೌರಿಕ ವೃತ್ತಿ ನಡೆಸುತ್ತಿದ್ದಾರೆ. ಇವರು ತನ್ನ ಸ್ವಂತ ರೀಲ್ಸ್ ಪೇಜ್’ನಲ್ಲಿ 25 ಸಾವಿರ ಕ್ಕು ಅಧಿಕ ಫಾಲೋವರ್ಸ್ ಹೊಂದಿದ್ದಾರೆ.

 

Continue Reading

LATEST NEWS

Trending