Connect with us

    BIG BOSS

    ಸುದೀಪ್ ಬಿಗ್ ಬಾಸ್ ತೊರೆಯಲು ಇದೆ ಹಲವು ಕಾರಣ; ರೂಪೇಶ್ ರಾಜಣ್ಣ

    Published

    on

    ಕನ್ನಡ ಪರ ಹೋರಾಟಗಾರ, ಮಾಜಿ ಬಿಗ್ ಬಾಸ್ ಸ್ಪರ್ಧಿ ರೂಪೇಶ್ ರಾಜಣ್ಣ ಅವರು ‘ಬಿಗ್ ಬಾಸ್’ ಆಯೋಜಕರ ವಿರುದ್ಧ ಹರಿಹಾಯ್ದಿದ್ದರು. ಸುದೀಪ್ ಅವರಿಗೆ ಅವಮಾನ ಆಗಿದೆ ಎಂದು ಅವರು ಹೇಳಿದ್ದರು. ಆದರೆ, ಅದಕ್ಕೆ ನಿಜವಾದ ಕಾರಣಗಳು ಏನು ಎಂಬುದು ರಿವೀಲ್ ಆಗಿರಲಿಲ್ಲ. ಈಗ ಈ ವಿಚಾರವನ್ನು ರೂಪೇಶ್ ರಾಜಣ್ಣ ಅವರು ವಿವರಿಸಿದ್ದಾರೆ. ಸುದೀಪ್ ಬಿಗ್ ಬಾಸ್ ತೊರೆಯಲು ಕಾರಣ ಏನು ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದಾರೆ.

    ಈ ಮೊದಲು ‘ಬಿಗ್ ಬಾಸ್​’ನಲ್ಲಿ ಯಾರಾದರೂ ಇಂಗ್ಲಿಷ್ ಮಾತನಾಡಿದರೆ ಅದನ್ನು ಬಿಗ್ ಬಾಸ್ ಸಹಿಸುತ್ತಿರಲಿಲ್ಲ. ಆಗ ‘ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು’ ಹಾಡನ್ನು ಹಾಕುತ್ತಿದ್ದರು. ಆದರೆ, ಈಗ ಈ ಪದ್ಧತಿ ಅಳಿದು ಹೋಗಿದೆ. ಇದಕ್ಕೆ ಬಿಗ್ ಬಾಸ್ ಆಯೋಜಕರೇ ಕಾರಣ ಎಂದು ಹೇಳಲಾಗುತ್ತಿದೆ. ಇದನ್ನು ಸುದೀಪ್ ಖಂಡಿಸಿದ್ದಾರೆ. ‘ಹೆಚ್ಚು ಇಂಗ್ಲಿಷ್ ಬಳಕೆ ಮಾಡಿದಾಗ ಅದನ್ನು ಪ್ರಶ್ನೆ ಮಾಡಿ’ ಎಂದು ಸುದೀಪ್ ಕೋರಿದ್ದರು. ಆದರೆ, ಇದಕ್ಕೆ ಆಯೋಜಕರು ಒಪ್ಪಿಲ್ಲ.

    ಈ ಮೊದಲು ಸ್ವರ್ಗ ಹಾಗೂ ನರಕದ ಕಾನ್ಸೆಪ್ಟ್ ಇತ್ತು. ಸ್ವರ್ಗದ ಮಂದಿ ಹಾಯಾಗಿ ಕುಳಿತಿದ್ದರೆ ನರಕದವರು ನಿಂತೇ ಇದ್ದರು. ಹೀಗಾಗಿ, ಅವರಿಗೆ ಕೂರೂಕೆ ಅವಕಾಶ ಕೊಡಿ ಎಂದು ಸುದೀಪ್ ಕೋರಿದ್ದರು. ಆದರೆ, ಇದಕ್ಕೆ ಆಯೋಜಕರು ಸೊಪ್ಪು ಹಾಕಿಲ್ಲ ಎನ್ನಲಾಗಿದೆ. ಇದು ಸುದೀಪ್ ಕೋಪಕ್ಕೆ ಕಾರಣ ಆಗಿದೆ. ಅಲ್ಲದೆ, ನರಕವಾಸಿಗಳಿಗೆ ಟಾಯ್ಲೆಟ್ ಬಳಕೆಗೆ ಯಾವುದೇ ಷರತ್ತುಗಳನ್ನು ಹಾಕದಂತೆಯೂ ಕೋರಿದ್ದರು.

    ‘ಎ23 ರಮ್ಮಿ’ ಆ್ಯಪ್​ ಕೂಡ ‘ಬಿಗ್ ಬಾಸ್​’ನ ಸ್ಪಾನ್ಸರ್​ಗಳಲ್ಲಿ ಒಂದಾಗಿದೆ. ಈ ಹೆಸರನ್ನು ತೆಗೆದುಕೊಳ್ಳೋಕೆ ಇರಿಸುಮುರುಸಾಗುತ್ತಿದೆ ಎಂದು ಸುದೀಪ್ ಹೇಳಿದ್ದರು. ಇದನ್ನು ಸ್ವಲ್ಪ ಅವಾಯ್ಡ್ ಮಾಡಿ ಎಂದು ಸುದೀಪ್ ಕೋರಿದ್ದರು. ಆದರೆ, ಆಯೋಜಕರು ಒಪ್ಪಿಲ್ಲ. ಈಗ ಸುದೀಪ್ ಅವರು ಬಿಗ್ ಬಾಸ್ ತೊರೆಯಲು ನಿರ್ಧರಿಸಿರುವುದರಿಂದ ಬದಲಾವಣೆಗಳನ್ನು ಮಾಡಲು ಆಯೋಜಕರು ಒಪ್ಪಿದ್ದಾರೆ ಎನ್ನಲಾಗಿದೆ.

    BIG BOSS

    ನಾಯಕ ನಟನಾಗಿ ಸಿನಿ ಜಗತ್ತಿಗೆ ಕಾಲಿಟ್ಟ ಡ್ರೋನ್ ಪ್ರತಾಪ್.. ಹನುಮಾನ್ ದೇವಾಲಯದಲ್ಲಿ ಪೂಜೆ

    Published

    on

    ಬಿಗ್​ಬಾಸ್ ರಿಯಾಲಿಟಿ ಶೋ​ ಸ್ಪರ್ಧಿಗಳ ಬದುಕಿಗೆ ಹೊಸ ಸ್ಪರ್ಶ ಹಾಗೂ ಭರವಸೆಗಳನ್ನು ನೀಡುತ್ತದೆ. ಬರೀ ನೆಗೆಟಿವ್ ಇಟ್ಟುಕೊಂಡೇ ಬಿಗ್​​ಬಾಸ್​​ ಸೀಸನ್​ 10ಕ್ಕೆ ಹೋಗಿದ್ದ ಡ್ರೋನ್​ ಪ್ರತಾಪ್​, ವ್ಯಕ್ತಿತ್ವದ ಮೂಲಕ ಕನ್ನಡಿಗರ ಮನ ಗೆದ್ದಿದ್ದರು. ರಿಯಾಲಿಟಿ ಶೋ​ನಿಂದ ಬಂದ ಮೇಲೆ ಅವರ ಜೀವನದಲ್ಲಿ ಒಂದೊಂದೇ ಬೆಳವಣಿಗೆ ಆಗುತ್ತಿವೆ. ಇದೀಗ ಡ್ರೋನ್ ಪ್ರತಾಪ್ ಹೀರೋ ಆಗಿ ಸಿನಿಮಾವೊಂದರಲ್ಲಿ ಅಭಿನಯ ಮಾಡುತ್ತಿದ್ದಾರೆ.

    ಡ್ರೋನ್ ಪ್ರತಾಪ್ ಅವರು ನಾಯಕ ನಟನಾಗಿ ಇನ್ನು ಹೆಸರು ಇಡದ ಕನ್ನಡದ ಸಿನಿಮಾವೊಂದರಲ್ಲಿ ಅಭಿನಯ ಮಾಡುತ್ತಿದ್ದಾರೆ. ಸ್ವತಹ ಪ್ರತಾಪ್ ಈ ಬಗ್ಗೆ ತಮ್ಮ ಇನ್​ಸ್ಟಾ ಅಕೌಂಟ್​ನಲ್ಲಿ ವಿಡಿಯೋವೊಂದನ್ನ ಶೇರ್ ಮಾಡಿ ಮಾಹಿತಿ ತಿಳಿಸಿದ್ದಾರೆ. ಪ್ರತಾಪ್ ಹೊಸದೊಂದು ಪ್ರಾಜೆಕ್ಟ್​ನಲ್ಲಿ ಬ್ಯುಸಿ ಆಗುತ್ತಿದ್ದಾರೆ. ಇದರಿಂದ ಅವರ ಬದುಕಿನಲ್ಲಿ ಮತ್ತಷ್ಟು ಅವಕಾಶಗಳು ಹುಡುಕಿಕೊಂಡು ಬರುವ ಸಾಧ್ಯತೆ ಇದೆ.

    ಸದ್ಯ ಡ್ರೋನ್ ಪ್ರತಾಪ್ ಶೇರ್ ಮಾಡಿರುವ ವಿಡಿಯೋದಲ್ಲಿ ಕಾರಿನಿಂದ ಇಳಿಯುತ್ತಿದ್ದಂತೆ ನೇರ ಮಂಡ್ಯದ ಕೆ.ಆರ್ ಪೇಟೆಯ ಹುನುಮಾನ್ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.​ ಅಲ್ಲಿ ದೇವರ ದರ್ಶನ ಪಡೆದು ಒಳ್ಳೆಯದಾಗಲಿ ಎಂದು ದೇವರ ಬಳಿ ಕೇಳಿಕೊಂಡಿದ್ದಾರೆ. ಇದೇ ವೇಳೆ ನಾನು ಹೊಸ ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯಿಸುತ್ತಿದ್ದೇನೆ. ನನ್ನ ಬ್ಯುಸಿನೆಸ್ ಜೊತೆಗೆ ಸಿನಿಮಾ ರಂಗಕ್ಕೂ ಕಾಲಿಡುತ್ತಿದ್ದೇನೆ. ಇದಕ್ಕೆ ನಿಮ್ಮೆಲ್ಲ ಆಶೀರ್ವಾದ ಬೇಕು ಎಂದು ವೇದಿಕೆ ಮೇಲೆ ಹೇಳಿದ್ದಾರೆ.

    Continue Reading

    BIG BOSS

    ಗುಂಪು ಕಟ್ಟಿಕೊಂಡು ಬರಲ್ಲ, ಸಿಂಗಲ್ ಸಿಂಹ ರೀತಿ ಬರ್ತೀನಿ; ಚೈತ್ರಾ ಕುಂದಾಪುರ

    Published

    on

    ಮನರಂಜನೆಯ ಹಬ್ ಬಿಗ್​​ಬಾಸ್​ ಮನೆಯಲ್ಲಿ ಸ್ಪರ್ಧಿಗಳ ನಡುವೆ ಪಾಯಿಂಟ್ಸ್​​ಗಾಗಿ ಕಿತ್ತಾಟ ಶುರುವಾಗಿದೆ. ಭವ್ಯಗೌಡ ಹಾಗೂ ಶೋಭಾ ಶೆಟ್ಟಿ ನಾಯಕತ್ವದಲ್ಲಿ ಎರಡು ತಂಡಗಳನ್ನು ಬಿಗ್​ಬಾಸ್ ಮಾಡಿದ್ದಾರೆ.

    ಎರಡು ತಂಡಗಳಿಗೆ ಪಾಯಿಂಟ್ಸ್​ ಗಳಿಸಲು ಬಿಗ್​ಬಾಸ್​ ಟಾಸ್ಕ್​​ಗಳನ್ನು ನೀಡುತ್ತಿದ್ದಾರೆ. ನಿನ್ನೆ ನಡೆದ ಟಾಸ್ಕ್​​ನಲ್ಲಿ ಭವ್ಯಗೌಡ ನೇತೃತ್ವದ ತಂಡ ಹಣ ಗಳಿಸಿದೆ. ಇದೀಗ ಎದುರಾಳಿ ಸ್ಪರ್ಧಿಗಳ ಹಣವನ್ನು ಕಿತ್ತುಕೊಳ್ಳುವುದು ಚಾಲ್ತಿಯಲ್ಲಿದೆ. ಇದೇ ವಿಚಾರಕ್ಕೆ ಐಶ್ವರ್ಯ ಹಾಗೂ ಚೈತ್ರಾ ನಡುವೆ ಗಲಾಟೆಯಾಗಿದೆ.

    ಕಲರ್ಸ್ ಕನ್ನಡ ಶೇರ್ ಮಾಡಿರುವ ವಿಡಿಯೋದಲ್ಲಿ ಚೈತ್ರಾ ಅತ್ಯಂತ ಕೀಳುಮಟ್ಟಕ್ಕೆ ಇಳಿದಿದ್ದಾರೆ ಎಂದಿದ್ದಾರೆ. ಅದಕ್ಕೆ ಕೋಪಿಸಿಕೊಂಡ ಐಶ್ವರ್ಯ ನೀವು ಲೋ ಲೇವಲ್​ಗೆ ಇಳಿದಿದ್ದಾರೆ ಎಂದೆಲ್ಲ ಮಾತನಾಡಬೇಡಿ ಎನ್ನುತ್ತಾರೆ. ಅದಕ್ಕೆ ಚೈತ್ರಾ ನಾನು ಗುಂಪುಗಾರಿಕೆ ಮಾಡಿಕೊಂಡು ಕುತಂತ್ರವನ್ನು ನಾನು ಮಾಡಲ್ಲ. ಇಬ್ಬರ ಮಧ್ಯೆ ವಾಗ್ಯುದ್ಧ ನಡೆದಿದೆ. ಈ ವೇಳೆ ಚೈತ್ರಾ ಈಗ ಗೊತ್ತಾಯ್ತಲ್ವಾ ಡ್ರಾಮಾ ಕ್ವೀನ್ ಯಾರು ಎನ್ನುತ್ತಾರೆ.

    ಅದಕ್ಕೆ ಕೋಪಿಸಿಕೊಂಡ ಐಶ್ವರ್ಯ ಹೌದು, ನಾನು ಡ್ರಾಮಾ ಕ್ವೀನ್ ಎಂದು ಜೋರಾಗಿ ಕಿರುಚುತ್ತಾರೆ. ಅದಕ್ಕೆ ಚೈತ್ರಾ, ನಾನು ಇನ್ಮೇಲೆ ಆಟ ಶುರು ಮಾಡ್ತೀನಿ. ಗುಂಪು ಕಟ್ಟಿಕೊಂಡು ಪ್ಲಾನ್ ಮಾಡಿಕೊಂಡು ಬರಲ್ಲ. ಸಿಂಗಲ್ ಸಿಂಹ ರೀತಿ ಹೊಡೆಯುತ್ತೇನೆ ಎಂದು ಡೈಲಾಗ್ ಹೊಡೆದಿದ್ದಾರೆ. ಶೋಭಾ ಶೆಟ್ಟಿ ನಾಯಕತ್ವದ ಕೆಂಪು ಟೀಮ್‌ನಲ್ಲಿ ಹನುಮಂತ, ಧನರಾಜ್ ಆಚಾರ್, ಗೌತಮಿ ಜಾಧವ್, ಉಗ್ರಂ ಮಂಜು, ಚೈತ್ರಾ ಕುಂದಾಪುರ, ರಜತ್ ಕಿಶನ್ ಇದ್ದರೆ ಭವ್ಯಾ ಗೌಡ ಅವರ ನೀಲಿ ಟೀಮ್‌ನಲ್ಲಿ ಗೋಲ್ಡ್ ಸುರೇಶ್, ಧರ್ಮ ಕೀರ್ತಿರಾಜ್‌, ಶಿಶಿರ್ ಶಾಸ್ತ್ರಿ, ತ್ರಿವಿಕ್ರಮ್, ಮೋಕ್ಷಿತಾ ಪೈ ಮತ್ತು ಐಶ್ವರ್ಯಾ ಇದ್ದಾರೆ. ಈ ಎರಡು ತಂಡಗಳ ಸದಸ್ಯರ ಬಳಿ ಪಾಯಿಂಟ್ಸ್ ಇದ್ದು, ಅದನ್ನು ಕಿತ್ತುಕೊಳ್ಳುವ ಆಟ ಈಗ ಚಾಲ್ತಿಯಲ್ಲಿದೆ.

    Continue Reading

    BIG BOSS

    ಬಿಗ್​ಬಾಸ್​ನಲ್ಲಿ ಅನೀರಿಕ್ಷಿತ ಬೆಳವಣಿಗೆ; ಮನೆಯಿಂದ ಹೊರ ಬರಲು ಡೋರ್ ತಟ್ಟಿದ ಗೋಲ್ಡ್ ಸುರೇಶ್

    Published

    on

    ಬಿಗ್​ಬಾಸ್​ ಮನೆಯಲ್ಲಿನ ಸ್ಪರ್ಧಿಗಳ ನಡುವಿನ ಫೈಟ್ ಇನ್ನೊಂದು ಹಂತಕ್ಕೆ ತಲುಪಿದೆ. ವೈಲ್ಡ್​ಕಾರ್ಡ್ ಮೂಲಕ ಎಂಟ್ರಿ ನೀಡಿರುವ ರಜತ್ ಮೇಲೆ ಬೇಸರಗೊಂಡಿರುವ ಗೋಲ್ಡ್​ ಸುರೇಶ್, ತಾವು ಆಟ ಆಡಲ್ಲ. ಬಾಗಿಲು ತೆಗಿಯಿರಿ ಎಂದು ಬಿಗ್​ಬಾಸ್ ಬಳಿ ಮನವಿ ಮಾಡಿಕೊಂಡಿದ್ದಾರೆ.

    ಆಗಿದ್ದೇನು..?

    ಇಂದು ರಾತ್ರಿ 9.30ಕ್ಕೆ ಪ್ರಸಾರವಾಗುವ ಎಪಿಸೋಡ್​​ಗೆ ಸಂಬಂಧಿಸಿದ ಪ್ರೊಮೋವನ್ನು ಕಲರ್ಸ್ ಕನ್ನಡ ಶೇರ್ ಮಾಡಿಕೊಂಡಿದೆ. ಅದರಲ್ಲಿ ಬಿಗ್​ಬಾಸ್ ಟಾಸ್ಕ್​ ಒಂದನ್ನು ನೀಡಿದ್ದಾರೆ. ಕೊಳವೆ ಮೂಲಕ ಬರುವ ಚೆಂಡನ್ನು ಎತ್ತಿಕೊಂಡು ತಮ್ಮ ತಂಡಕ್ಕೆ ಇರುವ ಮೀಸಲಿರುವ ಚೌಕಟ್ಟಿನಲ್ಲಿ ಇಡಬೇಕು ಎಂದು ಬಿಗ್​ಬಾಸ್ ಆಟದ ನಿಯಮದಲ್ಲಿತ್ತು.

    ಅಂತೆಯೇ ಆಟ ಆರಂಭವಾಗಿದೆ. ಈ ವೇಳೆ ಗೋಲ್ಡ್ ಸುರೇಶ್ ಜೊತೆ ಉಗ್ರಂ ಮಂಜು ಮಾತುಕತೆ ನಡೆಸುತ್ತಿರುತ್ತಾರೆ. ಇಬ್ಬರ ನಡುವಿನ ವಾಗ್ಯುದ್ಧಕ್ಕೆ ರಜತ್ ಎಂಟ್ರಿಯಾಗಿ ಕೆಲವು ಪದಗಳನ್ನು ಗೋಲ್ಡ್​ ಸುರೇಶ್​ಗೆ ಬಳಸಿದ್ದಾರೆ. ತಮ್ಮ ಮೇಲೆ ಬಳಕೆ ಆಗಿರುವ ಪದಗಳು ಆಕ್ಷೇಪಾರ್ಹವಾಗಿವೆ. ನನಗೆ ಬೇಸರ ಆಗಿದೆ. ಬಿಗ್​ಬಾಸ್​ ಅವರು ನನಗೆ ‘ಮಗನೆ, ಗಿಗನೆ’ ಎಂದೆಲ್ಲ ಹೇಳ್ತಾರೆ. ಇವನು ನನ್ನ ಅಪ್ಪ ಅಲ್ಲ. ಬಿಗ್​ಬಾಸ್ ನಾನು ಆಡಲ್ಲ. ಬಿಗ್​​ಬಾಸ್​ ಬಾಗಿಲು ಓಪನ್ ಮಾಡಿ ಎಂದು ಡೋರ್ ತಟ್ಟಿದ್ದಾರೆ. ಪ್ರೊಮೋ ಬಿಡುಗಡೆ ಬೆನ್ನಲ್ಲೇ ವೀಕ್ಷಕರು ಎಕ್ಸೈಟ್ ಆಗಿದ್ದು, ಇವತ್ತಿನ ಎಪಿಸೋಡ್​ಗಾಗಿ ಕಾಯುತ್ತಿದ್ದಾರೆ.

    Continue Reading

    LATEST NEWS

    Trending