BIG BOSS
ಸುದೀಪ್ ಬಿಗ್ ಬಾಸ್ ತೊರೆಯಲು ಇದೆ ಹಲವು ಕಾರಣ; ರೂಪೇಶ್ ರಾಜಣ್ಣ
ಕನ್ನಡ ಪರ ಹೋರಾಟಗಾರ, ಮಾಜಿ ಬಿಗ್ ಬಾಸ್ ಸ್ಪರ್ಧಿ ರೂಪೇಶ್ ರಾಜಣ್ಣ ಅವರು ‘ಬಿಗ್ ಬಾಸ್’ ಆಯೋಜಕರ ವಿರುದ್ಧ ಹರಿಹಾಯ್ದಿದ್ದರು. ಸುದೀಪ್ ಅವರಿಗೆ ಅವಮಾನ ಆಗಿದೆ ಎಂದು ಅವರು ಹೇಳಿದ್ದರು. ಆದರೆ, ಅದಕ್ಕೆ ನಿಜವಾದ ಕಾರಣಗಳು ಏನು ಎಂಬುದು ರಿವೀಲ್ ಆಗಿರಲಿಲ್ಲ. ಈಗ ಈ ವಿಚಾರವನ್ನು ರೂಪೇಶ್ ರಾಜಣ್ಣ ಅವರು ವಿವರಿಸಿದ್ದಾರೆ. ಸುದೀಪ್ ಬಿಗ್ ಬಾಸ್ ತೊರೆಯಲು ಕಾರಣ ಏನು ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದಾರೆ.
ಈ ಮೊದಲು ‘ಬಿಗ್ ಬಾಸ್’ನಲ್ಲಿ ಯಾರಾದರೂ ಇಂಗ್ಲಿಷ್ ಮಾತನಾಡಿದರೆ ಅದನ್ನು ಬಿಗ್ ಬಾಸ್ ಸಹಿಸುತ್ತಿರಲಿಲ್ಲ. ಆಗ ‘ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು’ ಹಾಡನ್ನು ಹಾಕುತ್ತಿದ್ದರು. ಆದರೆ, ಈಗ ಈ ಪದ್ಧತಿ ಅಳಿದು ಹೋಗಿದೆ. ಇದಕ್ಕೆ ಬಿಗ್ ಬಾಸ್ ಆಯೋಜಕರೇ ಕಾರಣ ಎಂದು ಹೇಳಲಾಗುತ್ತಿದೆ. ಇದನ್ನು ಸುದೀಪ್ ಖಂಡಿಸಿದ್ದಾರೆ. ‘ಹೆಚ್ಚು ಇಂಗ್ಲಿಷ್ ಬಳಕೆ ಮಾಡಿದಾಗ ಅದನ್ನು ಪ್ರಶ್ನೆ ಮಾಡಿ’ ಎಂದು ಸುದೀಪ್ ಕೋರಿದ್ದರು. ಆದರೆ, ಇದಕ್ಕೆ ಆಯೋಜಕರು ಒಪ್ಪಿಲ್ಲ.
ಈ ಮೊದಲು ಸ್ವರ್ಗ ಹಾಗೂ ನರಕದ ಕಾನ್ಸೆಪ್ಟ್ ಇತ್ತು. ಸ್ವರ್ಗದ ಮಂದಿ ಹಾಯಾಗಿ ಕುಳಿತಿದ್ದರೆ ನರಕದವರು ನಿಂತೇ ಇದ್ದರು. ಹೀಗಾಗಿ, ಅವರಿಗೆ ಕೂರೂಕೆ ಅವಕಾಶ ಕೊಡಿ ಎಂದು ಸುದೀಪ್ ಕೋರಿದ್ದರು. ಆದರೆ, ಇದಕ್ಕೆ ಆಯೋಜಕರು ಸೊಪ್ಪು ಹಾಕಿಲ್ಲ ಎನ್ನಲಾಗಿದೆ. ಇದು ಸುದೀಪ್ ಕೋಪಕ್ಕೆ ಕಾರಣ ಆಗಿದೆ. ಅಲ್ಲದೆ, ನರಕವಾಸಿಗಳಿಗೆ ಟಾಯ್ಲೆಟ್ ಬಳಕೆಗೆ ಯಾವುದೇ ಷರತ್ತುಗಳನ್ನು ಹಾಕದಂತೆಯೂ ಕೋರಿದ್ದರು.
‘ಎ23 ರಮ್ಮಿ’ ಆ್ಯಪ್ ಕೂಡ ‘ಬಿಗ್ ಬಾಸ್’ನ ಸ್ಪಾನ್ಸರ್ಗಳಲ್ಲಿ ಒಂದಾಗಿದೆ. ಈ ಹೆಸರನ್ನು ತೆಗೆದುಕೊಳ್ಳೋಕೆ ಇರಿಸುಮುರುಸಾಗುತ್ತಿದೆ ಎಂದು ಸುದೀಪ್ ಹೇಳಿದ್ದರು. ಇದನ್ನು ಸ್ವಲ್ಪ ಅವಾಯ್ಡ್ ಮಾಡಿ ಎಂದು ಸುದೀಪ್ ಕೋರಿದ್ದರು. ಆದರೆ, ಆಯೋಜಕರು ಒಪ್ಪಿಲ್ಲ. ಈಗ ಸುದೀಪ್ ಅವರು ಬಿಗ್ ಬಾಸ್ ತೊರೆಯಲು ನಿರ್ಧರಿಸಿರುವುದರಿಂದ ಬದಲಾವಣೆಗಳನ್ನು ಮಾಡಲು ಆಯೋಜಕರು ಒಪ್ಪಿದ್ದಾರೆ ಎನ್ನಲಾಗಿದೆ.
BIG BOSS
BBK11: ಬಿಗ್‌ಬಾಸ್ ಮನೆಯಲ್ಲಿ ಸಿಡಿದೆದ್ದ ಮಹಿಳಾ ಸ್ಪರ್ಧಿಗಳು.. ಗೋಲ್ಡ್ ಸುರೇಶ್ ಗೆ ಈ ವಾರದ ಕಳಪೆ
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 11ರ ಈ ವಾರದ ಕಳಪೆ ಪಟ್ಟವನ್ನು ಮನೆಮಂದಿ ಈ ಸ್ಪರ್ಧಿಗೆ ಕೊಟ್ಟಿದ್ದಾರೆ. ಮನೆಯ ಮಂದಿಯ ನಿರ್ಧಾರಕ್ಕೆ ಕೆಂಡ ಕಾರಿದ್ದಾರೆ ಈ ಸ್ಪರ್ಧಿ. ಹೌದು, ಈ ವಾರದ ಕಳಪೆ ಪಟ್ಟವನ್ನು ಸ್ಪರ್ಧಿಗಳು ಗೋಲ್ಡ್ ಸುರೇಶ್ಗೆ ಕೊಟ್ಟಿದ್ದಾರೆ. ಅಲ್ಲದೇ ಅವರ ಆಟ ಹೇಗಿತ್ತು? ಏನ್ ಮಾಡಬಾರದಾಗಿತ್ತು ಅಂತ ಹೇಳಿದ್ದಾರೆ.
ಕನ್ನಡದ ಬಿಗ್‌ಬಾಸ್ ಮನೆಯಲ್ಲಿ 13 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಈ 13ರಲ್ಲಿ ಓರ್ವ ಸ್ಪರ್ಧಿಗೆ ಬಿಗ್‌ಬಾಸ್ ಮನೆಯ ಈ ವಾರದ ಕಳಪೆ ಪಟ್ಟವನ್ನು ಕೊಟ್ಟಿದ್ದಾರೆ. ಗೋಲ್ಡ್ ಸುರೇಶ್ಗೆ ಈ ವಾರದ ಕಳಪೆ ಪಟ್ಟವನ್ನು ಕೊಟ್ಟಿದ್ದಾರೆ. ಅದರಲ್ಲೂ ಮಹಿಳಾ ಸ್ಪರ್ಧಿಗಳೇ ಗೋಲ್ಡ್ ಸುರೇಶ್ಗೆ ಏಕೆ ಕಳಪೆ ಪಟ್ಟ ಕೊಟ್ಟಿದ್ದೇವೆ ಅಂತ ವಿವರವಾಗಿ ಮಾಹಿತಿ ನೀಡಿದ್ದಾರೆ.
ಇನ್ನೂ, ಮನೆಯ ಎಲ್ಲ ಸ್ಪರ್ಧಿಗಳು ಅವರ ಹೆಸರನ್ನು ಎತ್ತಿದ ಕೂಡಲೇ ಗೋಲ್ಡ್ ಸುರೇಶ್ ಕೆಂಡಾಮಂಡಲ ಆಗಿದ್ದಾರೆ. ನನ್ನ ಕೈಗೆ ನೋವಾಗಿದ್ದರು, ನೀವು ಎಲ್ಲರೂ ನನ್ನನ್ನೂ ಎಳೆದಿದ್ದೀರಾ ಅಂತ ಸಿಟ್ಟಾಗಿದ್ದಾರೆ. ಆದರೂ ಕೂಡ ಈ ವಾರ ಬಿಗ್ಬಾಸ್ನ ಕಳಪೆ ಪಟ್ಟ ಗಿಟ್ಟಿಸಿಕೊಂಡು ಜೈಲಿಗೆ ಹೋಗಿದ್ದಾರೆ.
BIG BOSS
ಚೈತ್ರಾ ಕುಂದಾಪುರ ವಿಚಿತ್ರ ಪೂಜೆಗೆ ಬಿಗ್‌ಬಾಸ್ ಮನೆಯ ಎಲ್ರೂ ಶಾಕ್; ವಿಡಿಯೋ!
ಬಿಗ್ ಬಾಸ್ ಸೀಸನ್ 11ರ ಆಟದ ಶೈಲಿ ಬದಲಾಗಿದೆ. ವಾರಗಳು ಕಳೆದಂತೆ ಒಬ್ಬೊಬ್ಬರು ತಮ್ಮದೇ ಗೇಮ್ ಪ್ಲಾನ್ ಮಾಡುತ್ತಾ, ಮನೆಯ ಸದಸ್ಯರಿಗೆ ಟಫ್ ಫೈಟ್ ನೀಡುತ್ತಿದ್ದಾರೆ. ಬಿಗ್‌ಬಾಸ್ ಟಾಸ್ಕ್ ಮತ್ತು ಪೈಪೋಟಿಯ ಮಧ್ಯೆ ಪ್ರತಿಯೊಬ್ಬ ಸ್ಪರ್ಧಿಗಳ ಅಸಲಿ ಮುಖವಾಡ ಬಯಲಾಗುತ್ತಿದೆ.
5ನೇ ವಾರದಲ್ಲಿ ಬಿಗ್‌ಬಾಸ್ ಮನೆಯಲ್ಲಿರುವ ಸ್ಪರ್ಧಿಗಳು ಜಿದ್ದಾಜಿದ್ದಿಗೆ ಇಳಿದಿದ್ದಾರೆ. ಕಳೆದ 4 ವಾರದಲ್ಲಿ ಆದ ತಪ್ಪುಗಳನ್ನು ಸರಿ ಪಡಿಸಿಕೊಂಡಿರುವ ಸ್ಪರ್ಧಿಗಳು ಆಟ ಆಡುವುದನ್ನ ಕಲಿತಿದ್ದಾರೆ. ಸೀಸನ್ 11ರ ಸ್ಪರ್ಧಿಗಳು ತಮ್ಮ ಎದುರಾಳಿಗಳಿಗೆ ಟಕ್ಕರ್ ಕೊಡೋಕೆ ಶುರು ಮಾಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿರುವ ಫೈರ್ ಬ್ರಾಂಡ್ ಚೈತ್ರಾ ಕುಂದಾಪುರ ಅವರು ಈಗ ತಮ್ಮ ವರಸೆ ಬದಲಾಯಿಸಿದ್ದಾರೆ. ಪಟ, ಪಟ ಅಂತ ಮಾತನಾಡುತ್ತಿದ್ದ ಚೈತ್ರಾ ಅವರು ಆಟದಲ್ಲಿ ಈಗ ಚಿತ್ರ, ವಿಚಿತ್ರ ಪಟ್ಟು ಹಾಕಿದ್ದಾರೆ. ಚೈತ್ರಾ ಕುಂದಾಪುರ ಅವರ ಆಟದ ಶೈಲಿ ಬದಲಾಗಿರೋದಕ್ಕೆ ಈ ಪೂಜಾ ಶೈಲಿಯೇ ಸಾಕ್ಷಿಯಾಗಿದೆ.
ಚೈತ್ರಾ ಕುಂದಾಪುರ ಅವರು ಬಿಗ್ ಬಾಸ್ ಮನೆಯಲ್ಲಿ ತನಗೆ ತಾನೇ ಪೂಜೆ ಮಾಡಿಕೊಂಡಿದ್ದು ವಿಶೇಷವಾಗಿದೆ. ದೇವರ ಪಕ್ಕದಲ್ಲಿ ನಿಂತು ಐ ಆ್ಯಮ್ ಗಾಡ್, ಗಾಡ್ ಈಸ್ ಗ್ರೇಟ್ ಅನ್ನೋ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡಿ ಮುಂದೆ ತನಗೆ ತಾನೇ ಪೂಜೆ ಮಾಡಿಸಿಕೊಂಡಿರುವ ಚೈತ್ರಾ ಕುಂದಾಪುರ ಅವರನ್ನು ಶಿಶಿರ್ ನೋಡಿ ಫುಲ್ ಶಾಕ್ ಆಗಿದ್ದಾರೆ. ಚೈತ್ರಾ ಅವರ ವಿಚಿತ್ರ ಪೂಜೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಬಿಗ್ ಬಾಸ್ ವೀಕ್ಷಕರು ಮೆಚ್ಚಿಕೊಂಡಿದ್ದಾರೆ.
BIG BOSS
ಬಿಗ್ ಬಾಸ್ ಸ್ಪರ್ಧಿ ‘ಗೋಲ್ಡ್ ಸುರೇಶ್’ ಕಾಲಿಗೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು.!
ಬೆಂಗಳೂರು : ಬಿಗ್ ಬಾಸ್ ಮನೆಯಲ್ಲಿ ಆಟ ಆಡುವಾಗ ಸ್ಪರ್ಧಿ ‘ಗೋಲ್ಡ್ ಸುರೇಶ್’ ಕಾಲಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಆಡುವ ಸಂದರ್ಭದಲ್ಲಿ ಗೋಲ್ಡ್ ಸುರೇಶ್ ಪೆಟ್ಟು ಮಾಡಿಕೊಂಡು ಆಸ್ಪತ್ರೆ ಸೇರಿದ್ದಾರೆ.
ಆಟದ ವೇಳೆ ಗೋಲ್ಡ್ ಸುರೇಶ್ ಮೇಲೆ ಆಕಸ್ಮಿಕವಾಗಿ ನೀರು ತುಂಬಿದ ಡ್ರಮ್ ಬಿದ್ದು ಅವಘಡ ನಡೆದಿದೆ. ನನ್ನ ಕಾಲು ಹೋಯಿತು ಎಂದು ಸುರೇಶ್ ಕೂಗಿಕೊಂಡಿದ್ದಾರೆ. ಸುರೇಶ್ ಗೆ ಏನೋ ಆಯಿತು ಎಂದು ಉಳಿದವರು ಕೂಗಿಕೊಂಡಿದ್ದಾರೆ. ಸದ್ಯ ಸುರೇಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
- DAKSHINA KANNADA7 days ago
ಮಂಗಳೂರು: ನೇತ್ರಾವತಿ ಸೇತುವೆ ಬಳಿ ಭೀಕರ ಅ*ಪಘಾತ; ಓರ್ವ ಮೃ*ತ್ಯು, ಮತ್ತೋರ್ವ ಗಂಭೀರ
- LATEST NEWS4 days ago
ರೈಲ್ವೆ ನಿಲ್ದಾಣದಲ್ಲಿ ಸೂಟ್ಕೇಸ್ನಲ್ಲಿ ಮಹಿಳೆಯ ಶ*ವ ಪತ್ತೆ; ತನಿಖೆ ವೇಳೆ ಬಯಲಾಯ್ತು ಸತ್ಯ!
- FILM3 days ago
ಕೋರ್ಟ್ ಮೆಟ್ಟಿಲೇರಿದ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್
- LATEST NEWS5 days ago
ಮಹಿಳೆಯರಿಗೆ ಗುಡ್ ನ್ಯೂಸ್: ಇನ್ಮುಂದೆ ಸಿಗಲಿದೆ 450 ರೂ.ಗೆ ಗ್ಯಾಸ್ ಸಿಲಿಂಡರ್