Friday, July 1, 2022

ಬೆಳ್ತಂಗಡಿ: ಮೆದುಳು ನಿಷ್ಕ್ರಿಯಗೊಂಡ RSS ಕಾರ್ಯಕರ್ತನ ಅಂಗಾಂಗ ದಾನ

ಬೆಳ್ತಂಗಡಿ : ಮೆದುಳಿನಲ್ಲಿ ರಕ್ತಸ್ರಾವ ಆಗಿ ಮೆದುಳು ನಿಷ್ಕ್ರಿಯಗೊಂಡ ಕಾರಣ ಸಾವನ್ನಪ್ಪಿದ ವ್ಯಕ್ತಿಯ ಅಂಗಾಂಗ ದಾನ ಮಾಡಲಾದ ಘಟನೆ ಬೆಳ್ತಂಗಡಿ ತಾಲೂಕಿನ ಶಿಶಿಲದಲ್ಲಿ ನಡೆದಿದೆ.


ಮೃತರನ್ನು ಆರ್ ಎಸ್ ಎಸ್. ಕಾರ್ಯಕರ್ತ ಸೂರ್ಯನಾರಾಯಣ ರಾವ್ (44) ಎಂದು ಗುರುತಿಸಲಾಗಿದೆ.

ಎ. 30ರಂದು ಸೂರ್ಯನಾರಾಯಣ್‌ ರಾವ್‌ ಅವರನ್ನು ಮಂಗಳೂರಿನ ಡಾ ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿರುವ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಮೆದುಳು ನಿಷ್ಕ್ರಿಯಗೊಂಡಿತ್ತು.

ಕುಟುಂಬದವರ ಒಪ್ಪಿಗೆಯಂತೆ ನಿನ್ನ ಅಂಗಾಂಗ ದಾನ ಪ್ರಕ್ರಿಯೆ ನಡೆಯಿತು. ಈ ಮೂಲಕ ಅವರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

ಅವರ ಪಿತ್ತಕೋಶವನ್ನು ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ, ಒಂದು ಕಿಡ್ನಿ ಮತ್ತು ಚರ್ಮವನ್ನು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ, ಒಂದು ಕಿಡ್ನಿಯನ್ನು ಎ.ಜೆ. ಆಸ್ಪತ್ರೆಗೆ, ಒಂದು ಕಣ್ಣನ್ನು ಅತ್ತಾವರದ ಕೆಎಂಸಿಗೂ ಮತ್ತೊಂದನ್ನು ಕೆ.ಎಸ್. ಹೆಗ್ಡೆ ಆಸ್ಪತ್ರೆಗೂ ರವಾನಿಸಲಾಯಿತು.

ಅಂಗಾಂಗವನ್ನು ಝೀರೋ ಟ್ರಾಫಿಕ್ ಮುಖೇನ ಆಸ್ಪತ್ರೆಗಳಿಗೆ ರವಾನಿಸಲಾಗಿತ್ತು. ಕೆಎಂಸಿ ಆಸ್ಪತ್ರೆಯಿಂದ ಒಂದು ಲಿವರ್ ಅನ್ನು ಮಂಗಳೂರು ವಿಮಾನ ನಿಲ್ದಾಣದಿಂದ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ರವಾನಿಸಲಾಯಿತು.

ಕೆಎಂಸಿ ಆಸ್ಪತ್ರೆಯಿಂದ ಮಂಗಳೂರಿನಿಂದ ಪೊಲೀಸರ ಸಹಕಾರದಿಂದ ಕೇವಲ 11 ನಿಮಿಷದಲ್ಲಿ ಅಂಬುಲೆನ್ಸ್ ಮುಖೇನ ವಿಮಾನ ನಿಲ್ದಾಣಕ್ಕೆ ಲಿವರ್ ಅನ್ನು ರವಾನಿಸಲಾಗಿತ್ತು.

ಅಂಗಾಂಗ ದಾನ ಪ್ರಕ್ರಿಯೆಗೆ ಮಣಿಪಾಲ ಸಮೂಹ ಸಂಸ್ಥೆಯ ಕೆಎಂಸಿ ಮಂಗಳೂರು, ಮಣಿಪಾಲ ಹಾಗೂ ಬೆಂಗಳೂರು ಆಸ್ಪತ್ರೆಯ ನುರಿತ ತಜ್ಞರು ಹಾಗೂ ಎ.ಜೆ. ಆಸ್ಪತ್ರೆಯ ವೈದ್ಯರ ತಂಡ ಸಹಕರಿಸಿತ್ತು.

LEAVE A REPLY

Please enter your comment!
Please enter your name here

Hot Topics

ಅಕ್ರಮ ಜಾನುವಾರು ಮಾಂಸ ಸಾಗಾಟ: ತಲಪಾಡಿಯಲ್ಲಿ ಇಬ್ಬರು ವಶಕ್ಕೆ

ಮಂಗಳೂರು: ಕೇರಳ ಕಡೆಯಿಂದ ಮಂಗಳೂರು ಕಡೆಗೆ ಅಕ್ರಮವಾಗಿ ಕಾರಿನಲ್ಲಿ ಜಾನುವಾರು ಮಾಂಸ ಸಾಗಾಟ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಉಳ್ಳಾಲ ಠಾಣಾಧಿಕಾರಿ ತಂಡದ ಪೊಲೀಸರು ತಲಪಾಡಿಯಲ್ಲಿ ಬಂಧಿಸಿ, ಅವರಿಂದ ಸಾಗಾಟಕ್ಕೆ ಬಳಸಿದ ಓಮ್ನಿ ಕಾರು...

ಮಂಗಳೂರು ನಗರ ಡಿಸಿಪಿಯಾಗಿ ಆಂಶು ಕುಮಾರ್ ನೇಮಕ

ಬೆಂಗಳೂರು: ಮಂಗಳೂರು ನಗರ ಪೊಲೀಸ್‌ ಕಮೀಷನರೇಟ್‌ ವ್ಯಾಪ್ತಿಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿಯಾಗಿ ಆಂಶು ಕುಮಾರ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.2018ರ ಐಪಿಎಸ್‌ ಬ್ಯಾಚ್‌ನ ಅಧಿಕಾರಿಯಾದ ಇವರು ಕರಾವಳಿ ಭದ್ರತಾ...

ನನಗೆ ಸುಚೇಂದ್ರ ಪ್ರಸಾದ್‌ ಜೊತೆ ಮದುವೆಯೇ ಆಗಿಲ್ಲ: ನಟಿ ಪವಿತ್ರ ಲೋಕೇಶ್‌

ಬೆಂಗಳೂರು: ನನಗೆ ಸುಚೇಂದ್ರ ಪ್ರಸಾದ್‌ ಜೊತೆ ಮದುವೆಯೇ ಆಗಿಲ್ಲ. ಮದುವೆಯೇ ಆಗದಿದ್ದರೆ ನಾನು ಯಾಕೆ ಡಿವೋರ್ಸ್‌ ಕೊಡಬೇಕು ಎಂದು ಕನ್ನಡ ಚಿತ್ರನಟಿ ಪವಿತ್ರ ಲೋಕೇಶ್‌ ಹೇಳಿಕೆ ನೀಡಿದ್ದಾರೆ.ಕೆಲದಿನಗಳಿಂದ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ...