Connect with us

LATEST NEWS

Western Institute of Martial Arts Mangalore – ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪುತ್ತೂರಿನ ಸಹೋದರರಿಬ್ಬರಿಗೆ ಪ್ರಥಮ ಸ್ಥಾನ

Published

on

ಪುತ್ತೂರು:  ಮಂಗಳೂರಿನಲ್ಲಿ ವೆಸ್ಟರ್ನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮಾರ್ಶಲ್‌ ಆರ್ಟ್ಸ್‌ ಇದರ ವತಿಯಿಂದ ಜನವರಿ 7ರಂದು ನಡೆದ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಸೆನ್ಸಾಯಿ ಮಾಧವ ಅಳಿಕೆ ಮತ್ತು ರೋಹಿತ್ ಎಸ್ ಎನ್ ಅವರ ಶಿಷ್ಯಾಂದಿರಾದ ರಿಶೋನ್ ಲಸ್ರಾದೋ ಮತ್ತು ರಿಯೋನ್ ಲಸ್ರಾದೋ ತಲಾ 3 ಪದಕಗಳೊಂದಿಗೆ ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ.

13ರ ವಯೋಮಾನದಲ್ಲಿ ರಿಶೋನ್ ಲಸ್ರಾದೋ ಅವರು ಕಟಾದಲ್ಲಿ ಪ್ರಥಮ, ಕುಮಿಟೆಯಲ್ಲಿ ದ್ವಿತೀಯ ಹಾಗೂ ಗ್ರೂಪ್ ಕಟಾದಲ್ಲಿ ಪ್ರಥಮ ಹೀಗೆ ಮೂರು ಪದಕಗಳನ್ನು ಪಡೆದಿದ್ದಾರೆ. 11ರ ವಯೋಮಾನದಲ್ಲಿ ರಿಯೋನ್ ಲಸ್ರಾದೋ ರವರು ಕಟಾದಲ್ಲಿ ಪ್ರಥಮ, ಕುಮಿಟೆಯಲ್ಲಿ ಪ್ರಥಮ ಹಾಗೂ ಗ್ರೂಪ್ ಕಟಾದಲ್ಲಿ ಪ್ರಥಮ ಹೀಗೆ ಮೂರು ಪದಕಗಳನ್ನು ಗಳಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಈ ಸಹೋದರರಿಬ್ಬರು ಪುತ್ತೂರು ಬೆಥನಿ ಆಂಗ್ಲ ಮಾದ್ಯಮ ಶಾಲೆಯ ವಿದ್ಯಾರ್ಥಿ ಗಳಾಗಿದ್ದು, ಸೋನಿ ವಿಷನ್ ಕೇಬಲ್ ಟಿವಿ ಅಂಡ್ ಬ್ರಾಡ್ ಬ್ಯಾಂಡ್ ಸರ್ವಿಸಸ್ ನ ಮಾಲಕ ರೋಶನ್ ಮತ್ತು ಸುಶಾಂತಿ ಲಾಸ್ರದೋ ಅವರ ಪುತ್ರರಾಗಿದ್ದಾರೆ.

ಇವರಿಗೆ ಸೆನ್ಸಾಯಿ ಮಾಧವ ಅಳಿಕೆ, ರೋಹಿತ್ ಎಸ್ ಎನ್‌ ಮತ್ತು ನಿಖಿಲ್ ಕೆ ಟಿ ವಿಶೇಷ ತರಬೇತಿಯನ್ನು ನೀಡಿದ್ದರು.

Click to comment

Leave a Reply

Your email address will not be published. Required fields are marked *

LATEST NEWS

ಇಲ್ಲಿ ಹೆಂಡತಿ ಬಾಡಿಗೆಗೆ ಸಿಗ್ತಾಳೆ..! ಹೀಗೊಂದು ಪದ್ಧತಿ ಇರೋದು ಎಲ್ಲಿ ಗೊತ್ತಾ?

Published

on

ಮಧ್ಯ ಪ್ರದೇಶ/ ಮಂಗಳೂರು: ಹೆಂಡತಿಯನ್ನು ಬಾಡಿಗೆಗೆ ಕೊಡುವಂತ  ಪದ್ಧತಿಯೊಂದು ಭಾರತದಲ್ಲಿ ಇದೆ ಅಂದ್ರೆ ನೀವು ನಂಬುತ್ತೀರಾ? ನಂಬಲೇಬೇಕು… ನಮ್ಮ ಸಂಸ್ಕೃತಿಯಲ್ಲಿ ಹೆಣ್ಣನ್ನು ಮಾತೆಗೆ ಹೋಲಿಕೆ ಮಾಡ್ತಾರೆ. ಆದರೆ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಮಾತ್ರ ಇನ್ನೂ ಹೆಚ್ಚಾಗುತ್ತಲೇ ಇದೆ. ಅಲ್ಲೊಂದು ಪ್ರದೇಶದಲ್ಲಿ ಹೆಣ್ಣು ಮಕ್ಕಳನ್ನು ಬಾಡಿಗೆಗೆ ಪಡೆದು ತಮ್ಮ ತೃಷೆ ತೀರಿಸಿಕೊಳ್ತಾರೆ. ಮಧ್ಯಪ್ರದೇಶದ ಶಿವಪುರಿ ಎಂಬಲ್ಲಿ ಅಂತಹದೊಂದು ಪದ್ಧತಿ ಈಗಲೂ ರೂಢಿಯಲ್ಲಿದೆ. ಇಲ್ಲಿ ತುಸು ಶ್ರೀಮಂತರ, ಸ್ವಲ್ಪ ಬಡವರ ಮನೆಯ ಹೆಣ್ಣುಮಕ್ಕಳನ್ನು ಬಾಡಿಗೆಗೆ ಪಡೆಯುತ್ತಾರೆ. ತಂದೆ ತನ್ನ ಹೆಣ್ಣುಮಕ್ಕಳನ್ನು, ಗಂಡ ತನ್ನ ಹೆಂಡತಿಯನ್ನು ಬಾಡಿಗೆಗೆ ಕೊಡುತ್ತಾರೆ.

rent

ನಾವು ವಸ್ತುಗಳನ್ನು, ಮನೆಯನ್ನೆಲ್ಲಾ ಬಾಡಿಗೆ ಕೊಡೋದನ್ನ ಕೇಳಿದ್ದೇವೆ. ಇಲ್ಲಿ ಹೆತ್ತ ಮಗಳು,  ಕಟ್ಕೊಂಡ ಹೆಂಡತಿಯನ್ನು ಇನ್ನೊಬ್ಬರಿಗೆ ಬಾಡಿಗೆ ಕೊಡುವವರು ಇದ್ದಾರೆ ಅಂದ್ರೆ ನಂಬೋಕೆ ಸಾಧ್ಯ ಇಲ್ಲಾ ಅಲ್ವಾ? ಇಂತಹದೊಂದು ಕೀಳು ಪದ್ಧತಿ ಈಗಲೂ ಮಧ್ಯ ಪ್ರದೇಶದಲ್ಲಿ ನಡೆಯುತ್ತಿದೆ.

ಇದೊಂದು ಒಪ್ಪಂದವಂತೆ. ಇದೊಂದು ಪದ್ಧತಿಯಾಗಿದ್ದು ಇದನ್ನು ‘ದಧೀಚ’ ಎಂದು ಕರೆಯುತ್ತಾರೆ. ‘ದಧೀಚ’ ಅಂದ ಕೂಡಲೇ ಪುರಾಣದಲ್ಲಿ ಬರುವ ಮುನಿಯಲ್ಲ. ಇವರಿಗೂ ಈ ಪದ್ಧತಿಗೂ ಯಾವುದೇ ಸಂಬಂಧವಿಲ್ಲ. ಇದು ನೂರು ವರ್ಷದಿಂದ ಆಚರಣೆಗೆ ಬಂದ ಪದ್ಧತಿಯಂತೆ. ಶ್ರೀಮಂತರು ಬಡವರ ಹೆಣ್ಣು ಮಕ್ಕಳನ್ನು ಬಾಡಿಗೆಗೆ ತೆಗೆದುಕೊಳ್ತಾರೆ. ಇನ್ನು ಹುಡುಗಿ ಬಾಡಿಗೆಗೆ ಪಡೆದವನ ಇಚ್ಛೆಗೆ ತಕ್ಕ ಹಾಗೆ ನಡೆದುಕೊಳ್ಳಬೇಕು. ಹೆಚ್ಚಾಗಿ ದೈಹಿಕ ಸುಖಕ್ಕಾಗಿಯೆ ಇದು ನಡೆಯುತ್ತದೆ. ರಾತ್ರಿ ವೇಳೆ ಅವನಿಗೆ ಸುಖ ನೀಡುವಲ್ಲಿ ಸಹಕರಿಸಬೇಕು. ಇನ್ನು ಹಗಲಿನಲ್ಲಿ ಉಳಿದ ಮನೆ ಕೆಲಸ, ಗದ್ದೆ ಕೆಲಸಗಳನ್ನು ಮಾಡಿಕೊಂಡು ಅವನ ಆಳಾಗಿರಬೇಕು. ಇನ್ನು ಒಂದು ವರ್ಷದ ಬಳಿಕ ಮತ್ತೆ ಅವಳೇ ಬೇಕು ಎಂದಾದಲ್ಲಿ ಅಗ್ರಿಮೆಂಟ್ ರಿನಿವಲ್ ಮಾಡಬೇಕು.

ಇಲ್ಲಿ ಸಂಬಂಧಗಳಿಗೆ ಬೆಲೆನೇ ಇಲ್ಲ..!

ತಂದೆ ತನ್ನ ಮಗಳನ್ನು ಎಂಟು ಒಂಭತ್ತು ವರ್ಷಗಳಲ್ಲಿ ಹಣಕ್ಕಾಗಿ ಬಾಡಿಗೆಗೆ ಕೊಡಲು ಆರಂಭಿಸುತ್ತಾನೆ. ಅವಳು ಋತುಮತಿಯಾಗಬೇಕೆಂದಿಲ್ಲ. ಇನ್ನು ಮದುವೆಯಾದ ಗಂಡ ಮೊದಲ ರಾತ್ರಿಯನ್ನು ಅವಳ ಜೊತೆ ಕಳೆದು, ಎರಡನೇ ದಿನ ಸಿರಿವಂತನಿಗೆ ಹಣಕ್ಕಾಗಿ ಬಾಡಿಗೆಗೆ ಕೊಡುತ್ತಾನೆ. ಇದು ಒಂದು ರೀತಿಯ ಸೆ*ಕ್ಸ್ ದಂಧೆಯೇ ಆಗಿದೆ.  ಇನ್ನು ಬಾಡಿಗೆಗೆ ತೆಗೆದುಕೊಳ್ಳುವವನು ಮುಖ್ಯವಾಗಿ ತನ್ನ ಚಪಲ ತೀರಿಸಿಕೊಳ್ಳುವ ಉದ್ದೇಶ. ಜೊತೆಗೆ ಅವಳ ಬಳಿ ಮನೆ ಕೆಲಸ, ಇತರ ಕೆಲಸಗಳಿಗೆ ಬಳಸಿಕೊಳ್ಳುತ್ತಾನೆ. ಅಲ್ಲದೇ ಗಂಡನ ಅಣ್ಣ, ಮಾವ, ತಮ್ಮ ಹೀಗೆ ಯಾರೂ ಬೇಕಾದರು ಅವಳನ್ನು ಹಣ ಕೊಟ್ಟು ಕೊಂಡುಕೊಳ್ಳಬಹುದು.ಇಲ್ಲಿ ಸಂಬಂಧಗಳಿಗೆ ಬೆಲೆ ಇಲ್ಲ.

ಇದು ಹೆಣ್ಣಿನ ಕರಾಳ ಬದುಕಿನ ಕಥೆ..! ಬಲಿಯಾಗಿದ್ದಾರೆ 30 ಲಕ್ಷ ಮಹಿಳೆಯರು..!

ಇನ್ನು ಇಲ್ಲಿ ಹುಡುಗಿಯರನ್ನು ಹೇಗೆ ಆರಿಸ್ತಾರೆ ಅಂದ್ರೆ ಅವರ ಅಂದ ಚಂದವನ್ನು ನೋಡಿ. ಹಡುಗಿಯ ಮೈಮಾಟ, ವಯಸ್ಸು, ಬಣ್ಣ ಇದೆಲ್ಲವನ್ನು ಒಳಗಂಡ ಕನ್ಯೆಗೆ ಭಾರೀ ಮೊತ್ತ ಕೊಟ್ಟು ಬಾಡಿಗೆ ಪಡೆಯುತ್ತಾರಂತೆ. ಈ ಹೆಣ್ಣಿಗೆ ಲಕ್ಷಗಟ್ಟಲೆ ಹಣ ಕೊಟ್ಟು ಖರೀದಿ ಮಾಡ್ತಾರೆ. ಕನ್ಯೆಯರಲ್ಲದ ಹುಡುಗಿಯರಿಗೆ 10,000 ದಿಂದ 15000 ಸಾವಿರದವೆರೆಗೆ ಕೊಟ್ಟು ಪಡೆದುಕೊಳ್ಳುತ್ತಾರೆ. ಹುಡುಗಿಯ ಚರ್ಮದ ಟೋನ್, ಒಪ್ಪಂದದ ಮದುವೆಗಳ ಅಂಶಗಳನ್ನೆಲ್ಲಾ ಗಣನೆಗೆ ತೆಗೆದುಕೊಳ್ಳುತ್ತಾರೆ.

ಪೊಲೀಸರು ಏನು ಮಾಡ್ತಿದ್ದಾರೆ..?

ಅಯ್ಯೋ!! ಹಾಗಿದ್ರೆ ಪೊಲೀಸರಿಗೆ ಇದು ಗೊತ್ತಿಲ್ವಾ? ಬೇಲಿನೇ ಎದ್ದು ಹೊಲ ಮೇದಂತಾಗಿದೆ  ಇಲ್ಲಿನ ಪರಿಸ್ಥಿತಿ. ಪೊಲೀಸರು ಕೂಡಾ ಇದರಲ್ಲಿ ಪಾಲುದಾರರು. ದುರಾದೃಷ್ಟ ಅಂದ್ರೆ ಇಲ್ಲಿನ ಹೆಣ್ಮಕ್ಕಳಿಗೆ ಅವರ ಮೇಲೆ ಆಗ್ತಾ ಇರೋದು ಅತ್ಯಾಚಾರ ಅನ್ನೋದೆ ತಿಳಿದಿಲ್ಲ. ಈ ಹಳ್ಳಿಗೆ ಕೆಲವು ಎನ್‌ಜಿಒ ಗಳು ಭೇಟಿ ನೀಡಿ ಇವರಿಗೆ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದಾರೆ.

ಪದ್ಧತಿ ಶುರು ಆಗಲು ಕಾರಣ:

ಅಷ್ಟಕ್ಕೂ ಈ ಪದ್ದತಿ ಶುರುವಾಗಲು ಕಾರಣವಾದ್ರೂ ಏನು? ಈ ಹಿಂದೆ ಊರಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಬಹಳ ವಿರಳವಾಗಿತ್ತು. ಹಾಗಾಗಿ ಇಲ್ಲಿ ಹೆಣ್ಣು ಮಕ್ಕಳನ್ನು ಹಂಚಿಕೊಳ್ಳಲು ಆರಂಭ ಮಾಡ್ತಾರೆ. ಇನ್ನೂ ಕೆಲವು ಶ್ರೀಮಂತರು ವಧುದಕ್ಷಿಣೆ ಕೊಟ್ಟು ಕನ್ಯೆಯರನ್ನು ಕೊಂಡುಕೊಳ್ಳುತ್ತಿದ್ದರು. ಆದರೆ ಬಡವರು ಅಷ್ಟೆಲ್ಲಾ ಹಣ ಕೊಟ್ಟು ಕೊಂಡುಕೊಳ್ಳಲು ಸಾಧ್ಯವಿಲ್ಲದಿದ್ದಾಗ ಹುಡುಗಿಯನ್ನು ಬಾಡಿಗೆಗೆ ಪಡೆದುಕೊಳ್ಳುತ್ತಿದ್ದರು. ಅಂದು ಈ ನೀಚ ಬಾಡಿಗೆ ಪದ್ಧತಿ ಹುಟ್ಟಿಕೊಂಡಿತು. ಪುರುಷ ಪ್ರಧಾನ ಸಮಾಜ ಸ್ತ್ರೀಯನ್ನು ಈ ರೀತಿಯಲ್ಲಿ ಶೋಷಣೆ ಒಳಪಡಿಸಲು ಆರಂಭಗೊಂಡಿತು.

 

 

 

 

Continue Reading

LATEST NEWS

ಘಟಾನುಘಟಿ ಅಭ್ಯರ್ಥಿಗಳು ಇವರು..! ಮತ ಹಾಕಿದ್ದು ಬೇರೆಯವರಿಗೆ…!

Published

on

ನವದೆಹಲಿ : ಸಾಮಾನ್ಯವಾಗಿ ಮತದಾರರು ತಮ್ಮ ನೆಚ್ಚಿನ ನಾಯಕರಿಗೆ ಮತಚಲಾಯಿಸುತ್ತಾರೆ. ಹಾಗಂತ ಸ್ಪರ್ಧಿಸುವ ನಾಯಕರು ತಮಗೇ ಮತ ಹಾಕಿಕೊಳ್ಳುತ್ತಾರೆ ಅಲ್ಲವೇ, ಆದ್ರೆ, ಈ ಬಾರಿ ಚುನಾವಣೆಯಲ್ಲಿ ಹಾಗಾಗಿಲ್ಲ. ಘಟಾನುಘಟಿ ಅಭ್ಯರ್ಥಿಗಳು ತಮಗೆ ತಾವು ಮತ ಹಾಕಿಕೊಳ್ಳದೇ ಬೇರೆ ಅಭ್ಯರ್ಥಿಗೆ ಮತ ಹಾಕಿದ್ದಾರೆ.

ಹೌದು, ಪ್ರಧಾನಿ ನರೇಂದ್ರ ಮೋದಿ, ರಾಹುಲ್ ಗಾಂಧಿ, ಅಖಿಲೇಶ್ ಯಾದವ್ ಸೇರಿದಂತೆ ಹಲವು ನಾಯಕರು ತಮ್ಮ ಮತವನ್ನು ತಮಗೆ ಚಲಾಯಿಸಲು ಸಾಧ್ಯವಾಗಿಲ್ಲ. ಈ ನಾಯಕರು ಚುನಾವಣೆಗೆ ಸ್ಪರ್ಧಿಸುವ ಸ್ಥಳಗಳ ಮತದಾರರ ಪಟ್ಟಿಯಲ್ಲಿ ಅವರ ಹೆಸರನ್ನು ಸೇರಿಸಲಾಗಿಲ್ಲ ಅನ್ನೋದೇ ಇದಕ್ಕೆ ಕಾರಣ.


ಮೇ 7 ರಂದು ನಡೆದ ಮೂರನೇ ಹಂತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಹಮದಾಬಾದ್‌ನಲ್ಲಿ ಮತ್ತು ಅಖಿಲೇಶ್ ಯಾದವ್ ಸೈಫೈನಲ್ಲಿ ಮತ ಚಲಾಯಿಸಿದ್ದಾರೆ. ಚುನಾವಣೆಯಲ್ಲಿ ಪ್ರತಿ ಮತವೂ ಅಮೂಲ್ಯವಾಗಿದ್ದು ಕರ್ನಾಟಕದ ಎ.ಆರ್.ಕೃಷ್ಣಮೂರ್ತಿ ಮತ್ತು ರಾಜಸ್ಥಾನದ ಸಿ.ಪಿ.ಜೋಶಿ ಅವರ ಸೋಲು ಇದಕ್ಕೊಂದು ದೊಡ್ಡ ಉದಾಹರಣೆ. ಇವರು ಕೇವಲ ಒಂದು ಓಟಿನಿಂದ ಸೋತಿದ್ದರು ಅನ್ನೋದು ಗಮನಾರ್ಹ.

ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಮೂರನೇ ಬಾರಿಗೆ ಸ್ಪರ್ಧಿಸುತ್ತಿದ್ದಾರೆ. ಆದರೆ, ಅಹಮದಾಬಾದ್‌ನ ಮತದಾರರ ಪಟ್ಟಿಯಲ್ಲಿ ಪ್ರಧಾನಿ ಮೋದಿ ಹೆಸರು ನೋಂದಾಯಿಸಿದ ಕಾರಣ, ಅವರು ಮೇ 7 ರಂದು ಅಹಮದಾಬಾದ್‌ನ ನಿಶಾನ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮತದಾನ ಮಾಡಿದರು.

ರಾಹುಲ್ ಗಾಂಧಿ

ಕೇರಳದ ವಯನಾಡ್ ಹಾಗೂ ಉತ್ತರ ಪ್ರದೇಶದ ರಾಯ್ ಬರೇಲಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ರಾಹುಲ್ ಗಾಂಧಿ ದೆಹಲಿಯ ಮತದಾರ. 40-ನವದೆಹಲಿ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ರಾಹುಲ್ ಗಾಂಧಿ ಅವರ ಹೆಸರನ್ನು ದಾಖಲಿಸಲಾಗಿದೆ.

ಅಖಿಲೇಶ್ ಯಾದವ್

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು 12 ವರ್ಷಗಳ ನಂತರ ಕನೌಜ್ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಅವರು ಕನೌಜ್‌ನಲ್ಲಿ ತಮ್ಮ ಮತವನ್ನು ಚಲಾಯಿಸಲು ಸಾಧ್ಯವಾಗಿಲ್ಲ. ಅವರು ಮೇ 7 ರಂದು ತಮ್ಮ ಗ್ರಾಮ ಸೈಫೈನಲ್ಲಿ ಮತ ಚಲಾಯಿಸಿದರು. ಸೈಫೈ ಮೈನ್‌ಪುರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ. ಅವರ ಪತ್ನಿ ಡಿಂಪಲ್ ಯಾದವ್ ಇಲ್ಲಿಂದ ಸ್ಪರ್ಧಿಸುತ್ತಿದ್ದಾರೆ.

ಮೇನಕಾ ಗಾಂಧಿ

ಎಂಟು ಬಾರಿಯ ಬಿಜೆಪಿ ಸಂಸದೆ ಮೇನಕಾ ಗಾಂಧಿ ಕೂಡ ಮತದಾನ ಮಾಡಲು ಸಾಧ್ಯವಾಗುವುದಿಲ್ಲ. ಈ ಬಾರಿ ಅವರು ಸುಲ್ತಾನ್‌ಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ನವದೆಹಲಿ ವಿಧಾನಸಭೆಯ ಮತದಾರರ ಪಟ್ಟಿಯಲ್ಲಿ ಮೇನಕಾ ಗಾಂಧಿ ಅವರ ಹೆಸರನ್ನು ನೋಂದಾಯಿಸಲಾಗಿದೆ.

ಇದನ್ನೂ ಓದಿ : ಪ್ರೇಯಸಿಯ ಜೊತೆ ಗೋವಾ ಟೂರ್..! ಕ್ಷೌರಿಕನಿಗೆ ದುಬಾರಿಯಾದ ಟೂರ್..!

ಯೂಸುಫ್ ಪಠಾಣ್

ಕ್ರಿಕೆಟಿಗ ಯೂಸುಫ್ ಪಠಾಣ್ ಅವರನ್ನು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಶ್ಚಿಮ ಬಂಗಾಳದ ಬಹರಂಪುರ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಿದೆ. ಯೂಸುಫ್ ಪಠಾಣ್ ಅವರು ಗುಜರಾತ್‌ನ ಅಕೋಟಾ ವಿಧಾನಸಭಾ ಕ್ಷೇತ್ರದ ಮತದಾರ.

ಕನ್ಹಯ್ಯಾ ಕುಮಾರ್

ಈಶಾನ್ಯ ದೆಹಲಿಯ ಕಾಂಗ್ರೆಸ್ ಅಭ್ಯರ್ಥಿ ಕನ್ಹಯ್ಯಾ ಕುಮಾರ್ ಕೂಡ ಮತ ಚಲಾಯಿಸಲು ಸಾಧ್ಯವಾಗುವುದಿಲ್ಲ. ಯಾಕಂದ್ರೆ ಅವರು ಬೇಗುಸರಾಯ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ತೆಘ್ರಾ ವಿಧಾನಸಭಾ ಕ್ಷೇತ್ರದ ಮತದಾರ.

ಕೀರ್ತಿ ಆಜಾದ್

ಬರ್ಧಮಾನ್-ದುರ್ಗಾಪುರ ಲೋಕಸಭಾ ಕ್ಷೇತ್ರದ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಕೀರ್ತಿ ಆಜಾದ್ ಕೂಡ ಮತದಾನ ಮಾಡಲು ಸಾಧ್ಯವಿಲ್ಲ. ದೆಹಲಿಯ ಅಂಬೇಡ್ಕರ್ ನಗರದ ಮತದಾರರ ಪಟ್ಟಿಯಲ್ಲಿ ಆಜಾದ್ ಅವರ ಹೆಸರು ಇದೆ.

ಶತ್ರುಘ್ನ ಸಿನ್ಹಾ

ಶತ್ರುಘ್ನ ಸಿನ್ಹಾ ಅವರು ಪಶ್ಚಿಮ ಬಂಗಾಳದ ಅಸನ್ಸೋಲ್ ಲೋಕಸಭಾ ಕ್ಷೇತ್ರದಿಂದ ಎರಡನೇ ಬಾರಿಗೆ ಸ್ಪರ್ಧಿಸಿದ್ದಾರೆ. ಸಿನ್ಹಾ ಬಿಹಾರದ ಬಂಕಿಪುರ ವಿಧಾನಸಭಾ ಕ್ಷೇತ್ರದ ಮತದಾರ.

ಸಾಧ್ವಿ ನಿರಂಜನ್ ಜ್ಯೋತಿ

ಉತ್ತರ ಪ್ರದೇಶದ ಫತೇಪುರ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಕೇಂದ್ರ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ ಅವರಿಗೂ ಮತ ಹಾಕಲು ಸಾಧ್ಯವಾಗುವುದಿಲ್ಲ. ಅವರು ಹಮೀರ್‌ಪುರ ವಿಧಾನಸಭೆಯ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ.

ಕಿಶೋರಿ ಲಾಲ್ ಶರ್ಮಾ

ಈ ಬಾರಿ ಅಮೇಥಿ ಲೋಕಸಭಾ ಕ್ಷೇತ್ರದಿಂದ ಕಿಶೋರಿ ಲಾಲ್ ಶರ್ಮಾ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಮಾಡಿದೆ. ಅವರ ಮುಂದೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಇದ್ದಾರೆ. ವಿಶೇಷವೆಂದರೆ ಕಿಶೋರಿ ಲಾಲ್ ಶರ್ಮಾ ಅವರು ಅಮೇಥಿಯಲ್ಲಿ ಮತ ಚಲಾಯಿಸಲು ಸಾಧ್ಯವಾಗುವುದಿಲ್ಲ. ಕಿಶೋರಿ ಲಾಲ್ ಶರ್ಮಾ ಲುಧಿಯಾನ ಸೆಂಟ್ರಲ್ ಅಸೆಂಬ್ಲಿಯಲ್ಲಿ ತಮ್ಮ ಹೆಸರು ನೋಂದಾಯಿಸಿದ್ದಾರೆ.

ಒಂದು ಮತದಿಂದ ಸೋಲು ಕಂಡಿದ್ದ ಅಭ್ಯರ್ಥಿಗಳು

2004 ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಜನತಾ ದಳ (ಜಾತ್ಯತೀತ) ಅಭ್ಯರ್ಥಿ ಎ.ಆರ್.ಕೃಷ್ಣಮೂರ್ತಿ ಒಂದು ಮತದಿಂದ ಸೋಲನ್ನು ಎದುರಿಸಬೇಕಾಯಿತು. ಸಂತೇಮರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಎ.ಆರ್.ಕೃಷ್ಣಮೂರ್ತಿ 40,751 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಆರ್.ಧ್ರುವನಾರಾಯಣ 40,752 ಮತಗಳನ್ನು ಪಡೆದಿದ್ದರು.

2008 ರಲ್ಲಿ, ಕಾಂಗ್ರೆಸ್ ಅಭ್ಯರ್ಥಿ ಸಿಪಿ ಜೋಶಿ ಅವರು ರಾಜಸ್ಥಾನದ ನಾಥದ್ವಾರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಕಲ್ಯಾಣ್ ಸಿಂಗ್ ಚೌಹಾಣ್ ವಿರುದ್ಧ ಒಂದು ಮತದಿಂದ ಸೋತರು. ಸಿ.ಪಿ.ಜೋಶಿ 62,215 ಮತ್ತು ಕಲ್ಯಾಣ್ ಸಿಂಗ್ ಚೌಹಾಣ್ 62,216 ಮತಗಳನ್ನು ಪಡೆದರು.

Continue Reading

LATEST NEWS

ಜಾಮೂನು ದೋಸಾ ಸವಿದಿದ್ದೀರಾ? ವೈರಲ್ ಆಯ್ತು ಹೊಸ ಬಗೆಯ ಖಾದ್ಯ!

Published

on

ಮಂಗಳೂರು/ ಚಂಡೀಗಢ : ಇತ್ತೀಚೆಗೆ ವೆರೈಟಿ ವೆರೈಟಿ ತಿಂಡಿ – ತಿನಿಸುಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿರುತ್ತವೆ. ಕ್ಯಾಂಟಿನ್ ಗಳಲ್ಲಿ ಹೋಟೆಲ್, ಡಾಬಾಗಳಲ್ಲಿ ನಾನಾ ತರದ ವಿಶೇಷ ಖಾದ್ಯ ಸಿದ್ಧಗೊಳ್ಳುತ್ತವೆ. ಕೆಲವೊಂದು ಆಹಾರಗಳು ವೈರಲ್ ಆಗುತ್ತವೆ. ಕೆಲವೊಂದು ಚಿತ್ರ, ವಿಚಿತ್ರವಾಗಿರುತ್ತವೆ.

ಇದೀಗ ‘ಗುಲಾಬ್ ಜಾಮೂನ್ ದೋಸಾ’ ಸರದಿ. ಈ ಡಿಫರೆಂಟ್ ದೋಸೆಯ ವೀಡಿಯೋ ವೈರಲ್ ಆಗುತ್ತಿದೆ.

ಜಾಮೂನ್ ದೋಸಾ ತಯಾರಿಸಿದ್ದು ಹೇಗೆ?

ಈ ದೋಸೆ ತಯಾರಿಯ ವೀಡಿಯೋವೊಂದನ್ನು ಬ್ಲಾಗರ್ ಒಬ್ಬರು ಹಂಚಿಕೊಂಡಿದ್ದಾರೆ. ಚಂಡೀಗಢದಲ್ಲಿ ದೋಸೆ ಮಾರುವ ಬೀದಿ ಬದಿ ಮಳಿಗೆಗೆ ವಿಡಿಯೋ ಬ್ಲಾಗರ್ ತೆರಳಿ ಗುಲಾಬ್ ಜಾಮೂನ್ ದೋಸೆ ಸವಿದಿದ್ದಾರೆ.


ಅವರು ಮಾಡಿರುವ ವಿಡಿಯೋದಲ್ಲಿ ದೋಸೆ ತಯಾರಿಸುವುರಿಂದ ಸವಿಯುವ ವರೆಗೆ ಇದೆ. ಸಾಮಾನ್ಯವಾಗಿ ದೋಸೆ ಮೇಲೆ ಅಲೂಗೆಡ್ಡೆ, ಕ್ಯಾರೇಟ್, ಟೊಮೆಟೋ ಚಟ್ನಿ, ಖಾರ ಪುಡಿ ಇನ್ನಿತರ ಪದಾರ್ಥಗಳನ್ನು ಬಳಸಲಾಗುತ್ತೆ. ಆದ್ರೆ, ಇಲ್ಲಿ ವ್ಯಾಪಾರಿಯು ಜಾಮೂನು ಸೇರಿಸಿದ್ದಾರೆ.


ಕಾದ ಹೆಂಚಿನ ಮೇಲೆ ದೋಸೆ ಹಿಟ್ಟನ್ನು ಹರಡುತ್ತಾರೆ. ನಂತರ ಮೂರು ಜಾಮೂನ್ ಉಂಡೆಗಳನ್ನು ಸಿದ್ಧವಾಗುತ್ತಿರುವ ದೋಸೆ ಮೇಲೆ ಹಾಕಿ ಚಮಚದಿಂದ ಸಣ್ಣಗೆ ಪೀಸ್ ಮಾಡಿ ದೋಸೆಯ ಮೇಲೆಲ್ಲಾ ಹರಡುತ್ತಾನೆ. ದೋಸೆ ಬೆಂದು ಸಿದ್ಧವಾದ ಮೇಲೆ ಅದಕ್ಕೆ ತೆಂಗಿನ ಕಾಯಿ ಪುಡಿ, ಕ್ರೀಮ್ ಜೊತೆಗೆ ಜಾಮೂನಿನ ಸಿಹಿ ಪಾಕ ಸಹ ಹಾಕಿ ಬ್ಲಾಗರ್‌ಗಳಿಗೆ ಸವಿಯಲು ಕೊಡುತ್ತಾನೆ.

ಇದನ್ನೂ ಓದಿ : ಏನಿದು ವಿಮಲ್ ಪಾನ್ ಮಸಾಲಾ ಐಸ್‌ ಕ್ರೀಮ್..! ಜನರು ಉಗಳಬೇಕೋ, ನುಂಗಬೇಕಾ ಎಂದು ಪ್ರಶ್ನೆ ಮಾಡಿದ್ಯಾಕೆ?

ದೋಸೆ ಸಿದ್ಧವಾಗುವವರೆಗೂ ಅಪರೂಪದ ಮತ್ತು ಅಸಾಂಪ್ರದಾಯಿಕ ಪದ್ಧತಿಯಿಂದ ಮಾಡಿದ ಈ ದೋಸೆ ತಿನ್ನಬಹುದೇ ಎಂದು ಬ್ಲಾಗರ್ ತಮಾಷೆಯಾಗಿ ಕೇಳುತ್ತಾರೆ. ಇದಕ್ಕೆ ವ್ಯಾಪಾರಿ ಗ್ರಾಹಕರ ಬೇಡಿಕೆಗೆ ಇಷ್ಟವಾದ ಪದಾರ್ಥ ಪೂರೈಸುತ್ತಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾನೆ.

ನಂತರ ಬಿಸಿ ಬಿಸಿ ದೋಸೆಯನ್ನು ಬ್ಲಾಗರ್ ಸವಿದಿದ್ದಾರೆ. ವಾವ್ ಟೇಸ್ಟಿ ಎಂದು ಉದ್ಗರಿಸಿದ್ದಾರೆ. ಇನ್ನು ವೀಡಿಯೋ ನೋಡಿ ಹಲವರು ಜಾಮೂನು ದೋಸೆ ಸವಿಯುವ ಉತ್ಸಾಹ ತೋರಿದ್ದಾರೆ.

Continue Reading

LATEST NEWS

Trending