Connect with us

    FILM

    bengaluru : ಹಿರಿಯ ಚಿತ್ರ ನಿರ್ಮಾಪಕ ಕೆಸಿಎನ್ ಮೋಹನ್ ವಿಧಿವಶ..!

    Published

    on

    ಸ್ಯಾಂಡಲ್‌ವುಡ್ ಹಿರಿಯ ನಿರ್ಮಾಪಕ ಕೆಸಿಎನ್ ಮೋಹನ್ ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಮೋಹನ್ ಅವರು ಚಿಕಿತ್ಸೆ ಫಲಿಸದೇ ಭಾನುವಾರ ಬೆಳಿಗ್ಗೆ ವಿಧಿವಶರಾಗಿದ್ದಾರೆ.

    ಬೆಂಗಳೂರು :  ಸ್ಯಾಂಡಲ್‌ವುಡ್ ಹಿರಿಯ ನಿರ್ಮಾಪಕ ಕೆಸಿಎನ್ ಮೋಹನ್ ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಮೋಹನ್ ಅವರು ಚಿಕಿತ್ಸೆ ಫಲಿಸದೇ ಭಾನುವಾರ ಬೆಳಿಗ್ಗೆ ವಿಧಿವಶರಾಗಿದ್ದಾರೆ.

    ಮೋಹನ್ ಒಡೆತನದಲ್ಲಿ ಜಯಸಿಂಹ, ಭಲೇ ಚತುರ, ರಮ್ಯಾ (Ramya) ನಟನೆಯ ಜೂಲಿ (Julie Film), ಹೂಮಳೆ, ಅಳಿಮಯ್ಯ, ಆಚಾರ್ಯ, ಪೊಲೀಸ್ ಪವರ್, ಸಿನಿಮಾ ಸೇರಿದಂತೆ ಹಲವು ಸಿನಿಮಾಗಳಿಗೆ ನಿರ್ಮಾಣ ಮಾಡಿದ್ದ ಕೆಸಿಎನ್ ಮೋಹನ್ ಅವರು ತಮ್ಮ ತಂದೆ ನಿರ್ಮಾಪಕ ಕೆಸಿಎನ್ ಗೌಡ್ರು ಅವರ ನಿಧನ ಬಳಿಕ ಅನುಪಮ್ ಮೂವೀಸ್ ಜವಾಬ್ದಾರಿಯನ್ನ ಹೊತ್ತಿದ್ದರು.

    ಕನ್ನಡದ ಸಾಕಷ್ಟು ಸಿನಿಮಾಗಳಿಗೆ ಬಂಡವಾಳ ಹೂಡುವ ಮೂಲಕ ಕೆಸಿಎನ್ ಮೋಹನ್ ಸಾಥ್ ನೀಡಿದ್ರು.

    ನಿರ್ಮಾಪಕ ಮೋಹನ್, ಬೆಂಗಳೂರಿನ ನವರಂಗ್ ಚಿತ್ರಮಂದಿರದ ಮಾಲಿಕರಾಗಿದ್ದಾರೆ.ಇದೀಗ 62ನೇ ವಯಸ್ಸಿಗೆ ಎಂದೂ ಬಾರದ ಲೋಕಕ್ಕೆ ಕೆಸಿಎನ್ ಮೋಹನ್ ಹೋಗಿದ್ದಾರೆ.

    ಕೆಲ ವರ್ಷಗಳ ಹಿಂದೆ ಮೋಹನ್ ಅವರ ಪತ್ನಿ ನಿಧನರಾಗಿದ್ದರು. ಸಹೋದರ ಚಂದ್ರಶೇಖರ್ ಕೂಡ ನಿಧನರಾಗಿದ್ದಾರೆ.

    ಇದೀಗ ಇಬ್ಬರೂ ಹೆಣ್ಣು ಮಕ್ಕಳನ್ನು ಬಿಟ್ಟು ಮೋಹನ್ ಅಗಲಿದ್ದಾರೆ.

    ಸಾಕಷ್ಟು ಸಮಯದಿಂದ ಮೋಹನ್ ಅನಾರೋಗ್ಯದಿಂದ ಬಳಲುತ್ತಿದ್ದರು. ಹಾಗಾಗಿ ಮಣಿಪಾಲ್ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆಯನ್ನ ಕೂಡ ಪಡೆಯುತ್ತಿದ್ದರು.

    ಜುಲೈ 2ರ ಬೆಳಿಗ್ಗೆ ಕಿಡ್ನಿ ವೈಪಲ್ಯದಿಂದ ಕೆಸಿಎನ್ ಮೋಹನ್ ವಿಧಿವಶರಾಗಿದ್ದಾರೆ.

    ಮೋಹನ್ ನಿಧನಕ್ಕೆ ಚಿತ್ರರಂಗದ ಗಣ್ಯರು, ಆಪ್ತರು ಸಂತಾಪ ಸೂಚಿಸಿದ್ದಾರೆ.

    ಕಸ್ತೂರಿ ನಿವಾಸ, ಭಕ್ತ ಸಿರಿಯಾಳ, ರಂಗನಾಯಕಿ, ಸನಾದಿ ಅಪ್ಪಣ್ಣ, ಸತ್ಯ ಹರಿಶ್ಚಂದ್ರ, ಬಬ್ರುವಾಹನ ಸೇರಿ ಅನೇಕ ಚಿತ್ರಗಳ ನಿರ್ಮಾಣ ಸಂಸ್ಥೆಯ ಕುಡಿ ಕೆಸಿಎನ್ ಮೋಹನ್ ಅವರಾಗಿದ್ದು, ಮೋಹನ್ ನಿಧನದ ಮೂಲಕ 50 ವರ್ಷಗಳ ಇತಿಹಾಸವುಳ್ಳ ಸಂಸ್ಥೆಯೇ ಯುಗಾಂತ್ಯವಾಗಿದೆ.

    ಕನ್ನಡ ಚಿತ್ರೋದ್ಯಮದಲ್ಲಿ ಬಿಗ್ ಬಜೆಟ್ ಚಿತ್ರಗಳನ್ನ ಪರಿಚಯಿಸಿದ್ದ ಸಂಸ್ಥೆ ಡಾ.ರಾಜ್ ಕುಮಾರ್ ಚಿತ್ರಗಳನ್ನ ನಿರ್ಮಿಸುವುದರ ಮೂಲಕ ಸ್ಯಾಂಡಲ್ ವುಡ್ ಶ್ರೀಮಂತ ಚಿತ್ರ ನಿರ್ಮಾಣ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.

    ಕಳೆದ ಕೆಲ ವರ್ಷಗಳ ಹಿಂದೆ ಲೆಜೆಂಡ್ ‘ಕಸ್ತೂರಿ ನಿವಾಸ’ ಚಿತ್ರವನ್ನು ಕಲರ್ ಟಚ್ ಕೊಟ್ಟು ಆಧುನೀಕರಿಸಿ ನಿರ್ಮಾಪಕ ಕೆಸಿಎನ್ ಮೋಹನ್ ರೀ-ರಿಲೀಸ್ ಮಾಡಿದ್ದರು.

    BANTWAL

    ದೊಡ್ಮನೆಗೆ ಎಂಟ್ರಿ ಕೊಟ್ಟ ಕರಾವಳಿಯ ಖ್ಯಾತ ಯೂಟ್ಯೂಬರ್ ಧನರಾಜ್ ಆಚಾರ್ಯ

    Published

    on

    ಬಂಟ್ವಾಳ : ಖ್ಯಾತ ಯುಟ್ಯೂಬರ್ ಧನರಾಜ್ ಆಚಾರ್ಯ ಈ ಬಾರಿ ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟಿದ್ದಾರೆ.
    ಬಂಟ್ವಾಳ ತಾಲೂಕಿನ ಅನಂತಾಡಿ ಗ್ರಾಮದ‌ ಮಾಮೇಶ್ವರ ನಿವಾಸಿಯಾಗಿರುವ ಧನರಾಜ್ ಆಚಾರ್ಯ ತಮ್ಮ ಕಾಮಿಡಿ ಮ್ಯಾನರಿಸಂನಿಂದಲೇ ಫೇಮಸ್. ಹಾಸ್ಯಮಯ ವೀಡಿಯೋಗಳನ್ನು ಮಾಡಿ ಜನಮನಕ್ಕೆ ಹತ್ತಿರವಾಗಿದ್ದಾರೆ. ಜರ್ನಲಿಸಂ ಪದವೀಧರನಾಗಿರುವ ಧನರಾಜ್, ಆರಂಭದಲ್ಲಿ ಸಂಸಾರ ಜೋಡುಮಾರ್ಗ ತಂಡದ ಕಲಾವಿದನಾಗಿದ್ದು ಬಳಿಕ ಮೈಸೂರಿನ ರಂಗಾಯಣದಲ್ಲಿ ರಂಗಭೂಮಿ ಪದವಿಯನ್ನೂ ಪಡೆದಿದ್ದಾರೆ.

    ಟಿಕ್ ಟಾಕ್ ನಲ್ಲಿ ಕಾಮಿಡಿ ವೀಡಿಯೋ ಮಾಡಿ ಪ್ರಸಿದ್ದಿ ಪಡೆದಿದ್ದ ಧನರಾಜ್ ಬಳಿಕ ಯೂಟ್ಯೂಬ್ ಹಾಗೂ ಇನ್ಸ್ಟಾಗ್ರಾಂ ನಲ್ಲಿ ಕಾಮಿಡಿ ವಿಡಿಯೋಗಳನ್ನು ಮಾಡಿ ಖ್ಯಾತಿ ಗಳಿಸಿದ್ದಾರೆ. ಕಲರ್ಸ್ ಕನ್ನಡದಲ್ಲಿ ಬಿತ್ತರವಾಗುವ ಗಿಚ್ಛಿಗಿಲಿಗಿಲಿ ಸೀಸನ್ 2 ರ ಸ್ಪರ್ಧಿಯಾಗಿಯೂ ಗಮನ ಸೆಳೆದಿದ್ದರು.


    ವಿವಾಹದ ಬಳಿಕವೂ ಪತ್ನಿ‌ ಪ್ರಜ್ಞಾ ಆಚಾರ್ಯ ಜೊತೆಗೂಡಿ ವೀಡಿಯೋಗಳನ್ನು ಮಾಡುತ್ತಿರುವ ಧನರಾಜ್ ಆಚಾರ್ಯ ಇತ್ತೀಚೆಗಷ್ಟೇ ಹೆಣ್ಣು ಮಗುವಿಗೆ ತಂದೆಯಾಗಿದ್ದಾರೆ.

    Continue Reading

    BIG BOSS

    ‘ಬಿಗ್ ಬಾಸ್ ಕನ್ನಡ ಸೀಸನ್ 11’ಕ್ಕೆ ಎಂಟ್ರಿ ಪಡೆದ ನಾಲ್ಕು ಸ್ಪರ್ಧಿಗಳು ಯಾರು? ಇಲ್ಲಿದೆ ವಿವರ

    Published

    on

    ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಶುರುವಿಗೆ ಕ್ಷಣಗಣನೆ ಆರಂಭ ಆಗಿದೆ. ಇದಕ್ಕೂ ಮೊದಲು ‘ರಾಜಾ ರಾಣಿ’ ರಿಯಾಲಿಟಿ ಶೋ ಫಿನಾಲೆಯಲ್ಲಿ ಕೆಲವು ಸ್ಪರ್ಧಿಗಳ ಹೆಸರನ್ನು ರಿವೀಲ್ ಮಾಡಲಾಗಿದೆ. ಅವರು ಯಾರು? ಅವರ ಹಿನ್ನೆಲೆ ಏನು ಎಂಬ ಬಗ್ಗೆ ಇಲ್ಲಿದೆ ವಿವರ.

    1. ಗೌತಮಿ ಜಾಧವ್

    ಅಂತೂ ಇಂತೂ ಬಿಗ್‌ ಬಾಸ್‌ ಸ್ಪರ್ಧಿಗಳ ಕುತೂಹಲಕ್ಕೆ ತೆರೆಬಿದ್ದಿದೆ. ದೊಡ್ಮನೆಗೆ ಬರಲಿರುವ ಮೊದಲ ಸ್ಪರ್ಧಿಯ ಬಗ್ಗೆ ಅನಾವರಣ ಆಗಿದೆ. ಕಿರುತೆರೆ ಫೇಮಸ್‌ ನಟಿ ಗೌತಮಿ ಜಾದವ್ ಅವರು ಬಿಗ್‌ ಬಾಸ್‌ ಕನ್ನಡ ಸೀಸನ್‌ 11ಕ್ಕೆ ಮೊದಲ ಸ್ಪರ್ಧಿಯಾಗಿ ಎಂಟ್ರಿ ಕೊಡಲಿದ್ದಾರೆ. ಅವರು ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿದ್ದ ‘ಸತ್ಯ’ ಧಾರಾವಾಹಿಯಲ್ಲಿ ಮಿಂಚಿದ್ದರು. ಅಲ್ಲದೇ ಕಿರುತೆರೆಯಲ್ಲೂ ಹೆಸರು ಮಾಡಿದ್ದಾರೆ. ಧಾರಾವಾಹಿಯಲ್ಲಿ ಅವರದ್ದು ಸಖತ್ ರಗಡ್ ಪಾತ್ರ. ನಿಜ ಜೀವನದಲ್ಲಿ ಅವರು ಯಾವ ರೀತಿ ಇರುತ್ತಾರೆ ಎಂಬುದನ್ನು ತಿಳಿದುಕೊಳ್ಳಲು ‘ಬಿಗ್ ಬಾಸ್’ ಸಹಕಾರಿ ಆಗಲಿದೆ.

    2. ಲಾಯರ್ ಜಗದೀಶ್

    ಎರಡನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟವರು ಲಾಯರ್ ಜಗದೀಶ್. ಇತ್ತೀಚಿನ ದಿನಗಳಲ್ಲಿ ತಮ್ಮ ಸೋಶಿಯಲ್‌ ಮೀಡಿಯಾ ಕಂಟೆಂಟ್‌ಗಳ ಕಾರಣಕ್ಕಾಗಿಯೇ ಸುದ್ದಿಯಲ್ಲಿದ್ದರು. ರಾಜ್ಯದಲ್ಲಿ ಯಾವುದೇ ಹೈವೋಲ್ಟೇಜ್‌ ಪ್ರಕರಣವಾದರೂ ಅದರ ಹಿಂದೆ ನಿಂತು ಮಾತನಾಡುತ್ತಿದ್ದರು. ಇವರ ಹೆಸರು ಸಾಕಷ್ಟು ಚರ್ಚೆಯಲ್ಲಿ ಇತ್ತು. ದರ್ಶನ್ ಅವರನ್ನು ಹೊರಕ್ಕೆ ತರಲು ತಾವು ಪ್ರತಿಭಟನೆ ಮಾಡೋದಾಗಿ ಅವರು ಹೇಳಿಕೊಂಡಿದ್ದರು. ಪ್ರತಿಭಟನೆ ಕೂಡ ನಡೆಸಿದ್ದರು. ಆದರೆ, ದರ್ಶನ್ ಇಲ್ಲದೆ ಪ್ರತಿಭಟನೆ ಫ್ಲಾಪ್ ಆಯಿತು.

    3. ಚೈತ್ರಾ ಕುಂದಾಪುರ

     

    ಚೈತ್ರಾ ಕುಂದಾಪುರ ಕೂಡ ಈ ಬಾರಿಯ ‘ಬಿಗ್ ಬಾಸ್’ಗೆ ಎಂಟ್ರಿ ಕೊಟ್ಟಿದ್ದಾರೆ. ಚೈತ್ರಾ ಕುಂದಾಪುರ ಹಿಂದೂಪರ ಭಾಷಣಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಕೆಲವು ಸಂದರ್ಭದಲ್ಲಿ ದ್ವೇಷ ಭಾಷಣಗಳನ್ನು ಮಾಡಿದ ಆರೋಪವೂ ಚೈತ್ರಾ ಮೇಲಿದೆ. ಬಿಜೆಪಿ ಟಿಕೇಟ್ ಕೊಡಿಸೋದಾಗಿ ಭಾರಿ ಮೊತ್ತದ ಹಣ ಪಡೆದು ವಂಚನೆ ಮಾಡಿದ ಆರೋಪದಲ್ಲಿ ಜೈಲು ಪಾಲಾಗಿದ್ದರು.

    4 ಗೋಲ್ಡ್ ಸುರೇಶ್

    ಬಿಗ್‌ ಬಾಸ್‌ ಮನೆಯ ನಾಲ್ಕಯೇ ಸ್ಪರ್ಧಿಯ ಘೋಷಣೆಯಾಗಿದೆ. ಬೆಳಗಾವಿ ಮೂಲದ ರೈತ ಹಾಗೂ ಉದ್ಯಮಿ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಗೋಲ್ಡ್‌ ಸುರೇಶ್‌ ಬಿಗ್‌ ಬಾಸ್‌ ಮನೆಗೆ ಎಂಟ್ರಿಯಾಗಲಿದ್ದಾರೆ. ತಮ್ಮದೇ ಆದ ಸ್ವಂತ ಉದ್ಯಮ ಹೊಂದಿರುವ ಗೋಲ್ಡಡ್‌ ಸುರೇಶ್‌ ಸೋಶಿಯಲ್‌ ಮೀಡಿಯಾದಲ್ಲಿ ತಮ್ಮ ಮೈಮೇಲಿನ ಆಭರಣದ ಕಾರಣಕ್ಕಾಗಿಯೇ ಸುದ್ದಿಯಾದವರು. ಮೈಮೇಲೆ ಕೆಜಿಗಟ್ಟಲೆ ಚಿನ್ನದ ಆಭರಣಗಳನ್ನು ಹಾಕಿಕೊಂಡೇ ತಿರುಗಾಡುವ ಗೋಲ್ಡ್‌ ಸುರೇಶ್‌, ಬಿಗ್‌ ಬಾಸ್‌ ಮನೆಯಲ್ಲಿ ಯಾವ ರೀತಿಯಲ್ಲಿ ಇರ್ತಾರೆ ಅನ್ನೋದರ ಕುತೂಹಲ ಎಲ್ಲರಲ್ಲಿದೆ. ಕಳೆದ ವರ್ಷ ವರ್ತೂರು ಸಂತೋಷ್ ಚಿನ್ನ ಹೇರಿಕೊಂಡು ಬಂದಿದ್ದರು.

    Continue Reading

    FILM

    ಎರಡು ವರ್ಷಗಳ ಬಳಿಕ ಬೆಳ್ಳಿಪರದೆಗೆ ಮರಳಿದ ಸಾಯಿ ಪಲ್ಲವಿ

    Published

    on

    ನಟನೆ, ಡ್ಯಾನ್ಸಿಂಗ್‌ ಅಪಾರ ಅಭಿಮಾನಿಗಳ ಮನಗೆದ್ದಿರುವ ಸಾಯಿ ಪಲ್ಲವಿ ಇದೀಗ ಎರಡು ವರ್ಷಗಳ ನಂತರ ಬೆಳ್ಳಿಪರದೆಗೆ ಮರಳಿದ್ದಾರೆ. ‘ಅಮರನ್’  ಚಿತ್ರದ ಮೂಲಕ ಮತ್ತೆ ನಟಿ ಸದ್ದು ಮಾಡುತ್ತಿದ್ದಾರೆ. ನಟಿಯ ಕ್ಯಾರೆಕ್ಟರ್ ಟೀಸರ್ ರಿವೀಲ್ ಚಿತ್ರತಂಡ ಸರ್ಪ್ರೈಸ್ ನೀಡಿದೆ.

    ಶಿವಕಾರ್ತಿಕೇಯನ್ ನಟನೆಯ ‘ಅಮರನ್’ ಚಿತ್ರದಲ್ಲಿ ಸಾಯಿ ಪಲ್ಲವಿ ಹೀರೋಯಿನ್ ಆಗಿ ನಟಿಸಿದ್ದಾರೆ. ವೀರಯೋಧ ಮೇಜರ್ ಮುಕುಂದ ವರದರಾಜನ್ ಬಯೋಪಿಕ್ ಆಗಿದೆ. ಇದರಲ್ಲಿ ವೀರಯೋಧನಾಗಿ ಶಿವಕಾರ್ತಿಕೇಯನ್ ನಟಿಸಿದ್ರೆ, ಅವರ ಪತ್ನಿ ರೆಬೆಕಾ ವರ್ಗೀಸ್ ಪಾತ್ರದಲ್ಲಿ ಸಾಯಿ ಪಲ್ಲವಿ ಜೀವ ತುಂಬಿದ್ದಾರೆ.

    ಇನ್ನೂ ಚಿತ್ರದಲ್ಲಿ ನಟಿಯ ಕ್ಯಾರೆಕ್ಟರ್ ಟೀಸರ್ 1.22 ನಿಮಿಷವಿದ್ದು, ಸಾಯಿ ಪಲ್ಲವಿ ಗುಂಗುರು ಕೂದಲು ಬಿಟ್ಟು ನಯಾ ಲುಕ್‌ನಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಇನ್ನೂ ‘ಅಮರನ್’ ಚಿತ್ರವನ್ನು ರಾಜಕುಮಾರ ಪೆರಿಯಸ್ವಾಮಿ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಇದೇ ಅ.11ಕ್ಕೆ ರಿಲೀಸ್ ಆಗಲಿದೆ.

    Continue Reading

    LATEST NEWS

    Trending