Friday, July 1, 2022

ಇಂದು ಮಂಗಳೂರಿನವರನ್ನು ಕಂಡರೆ ಛೀ ಥೂ ಅಂತಾರೆ: ಪತ್ರಕರ್ತ ದಿನೇಶ್‌ ಅಮೀನ್‌ ಮಟ್ಟು

ಮಂಗಳೂರು: ಇಂದು ಮಂಗಳೂರಿನವರಾ, ಉಡುಪಿಯವರು ಅಂದಾಕ್ಷಣ ನಿಮ್ಮ ಊರಲ್ಲಿ ಲವ್‌ ಜಿಹಾದ್‌, ಹಿಜಾಬ್, ಹಲಾಲ್, ಜಡ್ಕಾ, ಛೀ …ಥೂ ಹೇಳ್ತಾರೆ. ನಮಗೆ ನೋವಾಗುತ್ತದೆ ಎಂದು ಹಿರಿಯ ಪತ್ರಕರ್ತ, ಅಂಕಣಕಾರ ದಿನೇಶ್‌ ಅಮೀನ್‌ ಮಟ್ಟು ಖೇದ ವ್ಯಕ್ತಪಡಿಸಿದರು.


ಪತ್ರಕರ್ತ ದಿನೇಶ್ ಅಮೀನ್‌ ಮಟ್ಟು ಅವರ ಸಂಪಾದನೆಯ ಮುಂಗಾರು ಪತ್ರಿಕೆಯ ಸಂಪಾದಕ ವಡ್ಡರ್ಸೆ ರಘುರಾಮ ಶೆಟ್ಟರ ಬರೆಹಗಳ ಸಂಕಲನ ‘ಬೇರೆಯೇ ಮಾತು’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.


ಇಂದು ಬೆಳಗ್ಗೆ ಪತ್ರಿಕೆಯಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಓದುತ್ತಿದ್ದಾಗ ಅನಿಸಿದ್ದು ಹೊಸ ದಕ್ಷಿಣ ಮತ್ತು ಹೊಸ ಉಡುಪಿ ಜಿಲ್ಲೆಯನ್ನು ನೋಡುತ್ತಿದ್ದೇವೆ ಎಂದು,

ಐದು ಬ್ಯಾಂಕ್‌ ಸ್ಥಾಪಿಸಿದ, ಸಾವಿರಾರು ಹೊಟೇಲ್ ಕಟ್ಟಿಸಿದ ಜಿಲ್ಲೆ, ಅತ್ಯಂತ ಸಾಕ್ಷರತೆ ಹೊಂದಿರುವ, ಅಂಡರ್‌ ವಲ್ಡ್‌ನಿಂದ ಮಿಸ್‌ ವಲ್ಡ್‌, ಸ್ಯಾಂಡಲ್‌ವುಡ್‌ನಿಂದ ಬಾಲಿವುಡ್‌ವರೆಗೆ ಎಲ್ಲೆಂದರಲ್ಲಿ ಖ್ಯಾತಿ ಪಡೆದ ಜಿಲ್ಲೆ.

ಮುಂಗಾರಿನ ಗೈರು ಹಾಜರಿಯಲ್ಲಿ ಬೆಳೆದ ಜಿಲ್ಲೆ. 1990ರ ಹೊತ್ತಿಗೆ ಮುಂಗಾರಿನ ಅಂತ್ಯ ಕಂಡಿತು. ಇದೇ ವೇಳೆ ಎರಡು ದೊಡ್ಡ ದೆವ್ವಗಳು ಬಾಬ್ರಿ ಮಸೀದಿ ಧ್ವಂಸ ಹಾಗೂ ಹೊಸ ಆರ್ಥಿಕ ನೀತಿ ಬಂದಿತು.

ಇವತ್ತು ಹೊರಗೆ ಹೋದಾಗ ನೀವು ಮಂಗಳೂರಿಗರಾ ಎಂದಾಗ ನೀವು ಹೊಟೇಲ್‌ ಕಟ್ಟಿದವರಾ, ನೀವು ಬ್ಯಾಂಕ್‌ ಪ್ರಾರಂಭ ಮಾಡಿದವರಾ, ಭೂಸುಧಾರಣೆಯಲ್ಲಿ ಭೂಮಿ ಹಂಚಿದವರಾ, ನೀವು ಸಾಕ್ಷರತಾ, ಎಂದು ಕೇಳುವ ಬದಲು ಲವ್‌ ಜಿಹಾದ್‌, ಹಿಜಾಬ್, ಹಲಾಲ್, ಜಡ್ಕಾ, ಛೀ …ಥೂ ಹೇಳ್ತಾರೆ. ನಮಗೆ ನೋವಾಗುತ್ತದೆ.

ಹುಟ್ಟಿದ ಊರು-ಬೆಳೆದ ಊರು ತಂದೆ-ತಾಯಿ ಇದ್ದಂತೆ. ಅದಕ್ಕೆ ಬೈದರೆ ನಮಗೆ ಹರ್ಟ್‌ ಆಗುತ್ತದೆ. ಈಗ ನಾವು ನಾಚಿಕೆ, ಮಾನ ಮರ್ಯಾದೆ ಬಿಟ್ಟು ಬೆತ್ತಲೆಯಾಗಿದ್ದೇವೆ. ಹೌದು ಎಂದು ಒಪ್ಪಿಕೊಂಡು ಏನೂ ಮಾಡಲಾಗದ ಸ್ಥಿತಿಯಲ್ಲಿದ್ದೇವೆ.

ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ಸಿನ ಹಿರಿಯ ನಾಯಕ ಬಿ ಕೆ ಹರಿಪ್ರಸಾದ್ ಪುಸ್ತಕ ಬಿಡುಗಡೆ ಮಾಡಿ, ಹುಟ್ಟಿದ ಬಳಿಕ ಸಮಾಜಕ್ಕೆ ನಾವೇನು ಮಾಡಿದೆವು ಎನ್ನುವುದು ಮುಖ್ಯವಾಗಬೇಕು. ದೀನದಲಿತರ ನೋವನ್ನು ಮರೆಸುವ ಕೆಲಸ ಮಾಡಬೇಕು.

ಅಂಬೇಡ್ಕರ್‌, ಬ್ರಹ್ಮಶ್ರೀ ನಾರಾಯಣ ಗುರು ಮೊದಲಾದವರು 500 ವರ್ಷ ಕಳೆದರೂ ನಮ್ಮ ನಡುವೆ ಚಿರಸ್ಥಾಯಿಯಾಗಿ ಉಳಿಯಲು ಕಾರಣ ಅವರ ಯೋಚನೆ, ಕೆಲಸ ಕಾರ್ಯಗಳು ಎಂದರು.
ಅಧ್ಯಕ್ಷತೆಯನ್ನು ವಾರ್ತಾಭಾರತಿ ಪತ್ರಿಕೆಯ ಸಂಪಾದಕ ಅಬ್ದುಸ್ಸಲಾಮ್‌ ಪುತ್ತಿಗೆ ವಹಿಸಿದ್ದರು.

ವೇದಿಕೆಯಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್‌ ಇಂದಾಜೆ, ರಂಗಚಾವಡಿ ಸಂಚಾಲಕ ಜಗನ್ನಾಥ ಶೆಟ್ಟಿ ಬಾಳ, ಪ್ರಕಾಶಕಿ ಅಕ್ಷತಾ ಮೊದಲಾದವರಿದ್ದರು.

LEAVE A REPLY

Please enter your comment!
Please enter your name here

Hot Topics

ಅಘಾಡಿ ಸರ್ಕಾರ ಪತನಗೊಂಡ ಮರುದಿನವೇ ‘ನನಗೆ EDಯಿಂದ ಲವ್‌ ಲೆಟರ್‌ ಬಂದಿದೆ’ ಎಂದ ಶರದ್‌ ಪವಾರ್‌

ಹೊಸದಿಲ್ಲಿ: ಮಹಾರಾಷ್ಟ್ರದಲ್ಲಿ ಅಘಾಡಿ ಸರ್ಕಾರ ಪತನಗೊಂಡ ಮರುದಿನವೇ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿದೆ. 2004, 2009, 2014 ಮತ್ತು 2020ರ ಚುನಾವಣೆಗಳಲ್ಲಿ ಅವರು ಸಲ್ಲಿಸಿದ್ದ...

ಮಂಗಳೂರು: ಪತ್ರಿಕಾ ದಿನಾಚರಣೆ ಹಾಗೂ ಹರ್ಮನ್ ಮೊಗ್ಲಿಂಗ್ ಸ್ಮರಣೆ

ಮಂಗಳೂರು: ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ದ.ಕ.ಜಿಲ್ಲಾ ಸಮಿತಿಯ ವತಿಯಿಂದ ಪತ್ರಿಕಾ ದಿನಾಚರಣೆ ಹಾಗೂ ರೆವರೆಂಡ್ ಹರ್ಮನ್ ಮೊಗ್ಲಿಂಗ್ ಸ್ಮರಣೆ ಕಾರ್ಯಕ್ರಮ ಇಂದು ಮಂಗಳೂರು ಬಲ್ಮಠದ ಕರ್ನಾಟಕ ಥಿಯೋಲಾಜಿಕಲ್ ಕಾಲೇಜಿನಲ್ಲಿ ನಡೆಯಿತು.ಕನ್ನಡದ ಪ್ರಥಮ ಪತ್ರಿಕೆ...

ವಿಟ್ಲದಲ್ಲಿ ಧಾರಾಕಾರ ಮಳೆ: ಜಲಾವೃತಗೊಂಡ ರಸ್ತೆ-ವಾಹನಗಳ ಬದಲಿ ಸಂಚಾರ

ವಿಟ್ಲ: ನಿನ್ನೆಯಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ರಸ್ತೆ ಜಲಾವೃತಗೊಂಡು ನೀರಿನ ಮಟ್ಟ ಮಧ್ಯಾಹ್ನದವರೆಗೆ ಇಳಿಕೆಯಾಗದ ಹಿನ್ನೆಲೆಯಲ್ಲಿ ಘನವಾಹನಗಳನ್ನು ಹೊರತುಪಡಿಸಿ ಕೆಲವೊಂದು ವಾಹನಗಳು ಸುತ್ತು ಬಳಸಿ ಬದಲಿ ಸಂಚಾರ ನಡೆಸಿದ ಘಟನೆ ವಿಟ್ಲದ ಕೊಳ್ನಾಡು...