ಮಂಗಳೂರು: ಎರಡು ಮೂರು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯ ಕಾರಣ ಮಂಗಳೂರು ಕುಲಶೇಖರ ಕಲ್ಪನೆ ಬಳಿ ಬೃಹತ್ ಮರವೊಂದು ಧರಾಶಾಹಿಯಾಗಿದೆ.
ರಸ್ತೆ ಬದಿಯಲ್ಲಿದ್ದ ಮರವು ಬುಡಸಮೇತ ಕಿತ್ತು ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಅದೃಷ್ಟವಶಾತ್ ಈ ವೇಳೆ ರಸ್ತೆಯಲ್ಲಿ ಯಾವುದೇ ಅವಘಡ ಸಂಭವಿಸಿಲ್ಲ.
ಮೂಡುಬಿದಿರೆ ಹಾಗೂ ಮಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಪ್ರತಿನಿತ್ಯ ವಾಹನಗಳಿಂದ ತುಂಬಿ ಹೋಗಿರುತ್ತಿತ್ತು.
ಮರ ಬೀಳುವ ವೇಳೆಗೆ ಯಾವುದೇ ವಾಹನಗಳಿಲ್ಲದೆ ಹಲವರ ಪ್ರಾಣ ಉಳಿದಿದೆ. ರಸ್ತೆಗೆ ಮರ ಉರುಳಿಬಿದ್ದ ಪರಿಣಾಮ ಕೆಲಕಾಲ ಟ್ರಾಫಿಕ್ ಜಾಂ ಆಗಿದೆ.