Connect with us

bengaluru

ರೀಲ್ಸ್ ಜೋಡಿ ಬ್ರೇಕಪ್ ! ವರ್ಷ-ವರುಣ್ ಮಧ್ಯೆ ಬಂದ ‘ಅವಳು’ ಇವಳೇನಾ?

Published

on

ಕೆಲ ವರ್ಷಗಳಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದ ಸೋಷಿಯಲ್ ಮೀಡಿಯಾ ಸೆನ್ಸೇಷನಲ್ ಕಪಲ್ ವರುಣ್‌ ಆರಾಧ್ಯ ಮತ್ತು ವರ್ಷಾ ಕಾವೇರಿ ನಡುವೆ ಬ್ರೇಕ್‌ಅಪ್‌ ಬಿರುಗಾಳಿ ಎದ್ದಿದೆ.

ಬೆಂಗಳೂರು: ಸೋಷಿಯಲ್‌ ಮೀಡಿಯಾದಲ್ಲಿ ಈ ಜೋಡಿ ಮಾಡಿದ ಮೋಡಿ ಅಂತಿದ್ದಲ್ಲ. ಸ್ಯಾಂಡಲ್ ವುಡ್ ನ ಮೋಸ್ಟ್ ಬ್ಯೂಟಿಫುಲ್ ಕಪಲ್ ಎಂದೇ ಕರೆಸಿಕೊಳ್ಳುತ್ತಿದ್ದ ಯಶ್ ರಾಧಿಕ ಜೋಡಿಗೆ ಇವರಿಬ್ಬರನ್ನ ಹೋಲಿಸಲಾಗುತ್ತಿತ್ತು.

ಅದೇ ಜೋಡಿ ಈಗ ಸೋಷಿಯಲ್ ಮೀಡಿಯಾದಲ್ಲೇ ಬ್ರೇಕಪ್ ಕುರಿತು ಕ್ಲ್ಯಾರಿಟಿ ಕೊಟ್ಟಿದ್ದಾರೆ. ಎಸ್. ಕೆಲ ವರ್ಷಗಳಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದ ಸೋಷಿಯಲ್ ಮೀಡಿಯಾ ಸೆನ್ಸೇಷನಲ್ ಕಪಲ್ ವರುಣ್‌ ಆರಾಧ್ಯ ಮತ್ತು ವರ್ಷಾ ಕಾವೇರಿ ನಡುವೆ ಬ್ರೇಕ್‌ಅಪ್‌ ಬಿರುಗಾಳಿ ಎದ್ದಿದೆ.

ಇಷ್ಟೊಂದು ಗಾಢವಾಗಿ ಪ್ರೀತಿಸುತ್ತಿದ್ದ ಜೋಡಿ ದಿಢೀರನೆ ಬ್ರೇಕ್ ಅಪ್ ಸುದ್ದಿ ಹರಿ ಬಿಟ್ಟಿದ್ದು ಸಾಕಷ್ಟು ಟ್ರೋಲ್ ಮತ್ತು ಮೀಮ್ಸ್ ಗಳಿಗೂ ಕಾರಣವಾಗಿದೆ.

ಇನ್‌ಸ್ಟಾಗ್ರಾಂನಲ್ಲಿ ವರ್ಷಾ ಪೋಸ್ಟ್ ಹಾಕುತ್ತಿದ್ದಂತೆ ಗೂಗಲ್ ನಲ್ಲಿ ವರುಣ್ ವರ್ಷಾ ಎಂದು ಸರ್ಚ್ ಮಾಡಲು ಶುರು ಮಾಡಿದ್ದಾರೆ.

ಕಳೆದ ಕೆಲವು ದಿನಗಳಿಂದ ಇಬ್ಬರೂ ಜೊತೆಯಲ್ಲಿ ವಿಡೀಯೋ ಮಾಡುವುದನ್ನು ನಿಲ್ಲಿಸಿದ ಕಾರಣಗಳಿಂದ ಸಾಕಷ್ಟು ಅನುಮಾನಗಳು ಕೂಡ ಉಂಟಾಗಿತ್ತು.

ಆದ್ರೆ ಇದೀಗ ಇಬ್ಬರೂ ಬ್ರೇಕ್ ಅಪ್ ಕುರಿತು ಸೋಷಿಯಲ್ ಮೀಡಿಯಾದಲ್ಲೇ ಕ್ಲ್ಯಾರಿಟಿ ಕೊಟ್ಟಿದ್ದು ವರುಷಗಳ ಪ್ರೀತಿಗೆ ಎಳ್ಳು ನೀರು ಬಿಟ್ಟಿದ್ದಾರೆ.

ನನ್ನ ಮತ್ತು ವರುಣ್ ನಡುವೆ ಮತ್ತೊಬ್ಬಳು ಹುಡುಗಿ ಬಂದಿದ್ದಾಳೆ. ಈ ವಿಚಾರವಾಗಿ ನಮ್ಮಿಬ್ಬರ ನಡುವೆ ಸಾಕಷ್ಟು ವಾಗ್ವಾದಗಳಾಗಿವೆ.

ವರುಣ್‌ಗೆ ನಾನು ಬೇಡವಂತೆ, ಆಕೆಯೇ ಬೇಕಂತೆ ಎಂದು ತಮ್ಮ ನೋವನ್ನು ಬರಹದ ಮೂಲಕ ವರ್ಷ ಹೊರ ಹಾಕಿದ್ದಾಳೆ.

ವೈಯಕ್ತಿಕ ಕಾರಣಗಳಿಂದ ನಾನು ಹಾಗೂ ವರ್ಷ ಇಬ್ಬರೂ ದೂರ ಆಗುತ್ತಿದ್ದೇವೆ ಎಂದು ಇತ್ತ ವರುಣ್ ಸ್ಪಷ್ಟನೆಯನ್ನು ನೀಡಿದ್ದಾನೆ.

ಇವರಿಬ್ಬರ ಪ್ರೀತಿಯ ಸಂಕೇತವಾಗಿ ಇಬ್ಬರೂ ಒಬ್ಬರಿಗೊಬ್ಬರು ದುಬಾರಿ ಗಿಫ್ಟ್ ಗಳನ್ನು ಉಡುಗೊರೆಯಾಗಿ ನೀಡಿದ್ದು ಕೂಡ ಟ್ರೆಂಡಿಂಗ್ ಆಗಿತ್ತು.

ಈಗ ಸೋಷಿಯಲ್ ಮೀಡಿಯಾದಲ್ಲಿ ವರುಣ್ ವಿರುದ್ಧ ಆಕ್ರೋಶ ಹೆಚ್ಚಾಗಿದ್ದು ಬೆಳೆಯೋಕು ಮುನ್ನ ಒಬ್ಳು, ಬೆಳೆದ್ಮೇಲೆ ಒಬ್ಳು ಅಂತ ಕಿಡಿಕಾರುತ್ತಿದ್ದಾರೆ.

ಈಗ ವರುಣ್ ಬದುಕಲ್ಲಿ ಎಂಟ್ರಿ ಕೊಟ್ಟಿರೋ ಮತ್ತೊಬ್ಬಳು ಹುಡುಗಿ ಯಾರು ಅನ್ನೋದೆ ದೊಡ್ಡ ಚರ್ಚೆಯಾಗುತ್ತಿದೆ.

Click to comment

Leave a Reply

Your email address will not be published. Required fields are marked *

bengaluru

ಬೆಂಗಳೂರಿನ ಗೋವರ್ಧನಗಿರಿ ಕ್ಷೇತ್ರದಲ್ಲಿ ಪುತ್ತಿಗೆ ಶ್ರೀಗಳ 50 ನೇ ಚಾತುರ್ಮಾಸ್ಯ ಸಂಭ್ರಮ

Published

on

ಬೆಂಗಳೂರು: ಬೆಂಗಳೂರಿನ ಗೋವರ್ಧನಗಿರಿ ಕ್ಷೇತ್ರದಲ್ಲಿ 78 ದಿನಗಳ ಉಡುಪಿ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥರ 50ನೇ ಚಾತುರ್ಮಾಸ್ಯ ವೈಭವದಿಂದ ಸಮಾಪನಗೊಂಡಿತು.

ಪೂಜ್ಯ ಶ್ರೀಗಳ ಚಾತುರ್ಮಾಸ್ಯ ಕಾರ್ಯದ ನಡುವೆಯೂ ಕೋಟಿ ಕೋಟಿ ಗೀತಾ ಲೇಖನ ಯಜ್ಞದ ಕುರಿತಾಗಿ ವಿಶೇಷ ಕಾರ್ಯಕ್ರಮಗಳು ಬೆಂಗಳೂರಿನ ವಿವಿಧ ಕಡೆಗಳಲ್ಲಿ ಯಶಸ್ವಿಯಾಗಿ ನಡೆಯುತ್ತಿದ್ದು, ಪೂಜ್ಯ ಶ್ರೀಗಳ ದಿವ್ಯ ಉಪಸ್ಥಿತಿಯಲ್ಲಿ ಈ ಚಾತುರ್ಮಾಸ್ಯದ ಸಮಾರೋಪ, ಸನ್ಯಾಸ ಸ್ವೀಕಾರ ಮಾಡಿದ 50 ವರ್ಷದ ಸುವರ್ಣ ಮಹೋತ್ಸವ ಸಂಭ್ರಮದಿಂದ ಜರುಗಿತು.

ವೇದಮಂತ್ರಗಳ ಘೋಷಗಳೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಭಾವೀ ಪರ್ಯಾಯ ಮಠದ ಪುತ್ತಿಗೆ ಮಠದ ಸುಗುಣೇಂದ್ರ ಶ್ರೀಗಳು ಆಶೀರ್ವಚನವನ್ನು ನೀಡಿದರು. ವಿದ್ವಾನ್ ಮಾಲಗಿ ರಾಮಾಚಾರ್ಯರು, ವಿದ್ವಾನ್‌ ಕೇಶವ ಬಾಯಿರಿ ಅವರು ಶ್ರೀಗಳನ್ನು ಮಾಲಾರ್ಪಣೆ ಮಾಡಿದರು.

ರಾಜ್ಯದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌ ಸರಕಾರದ ಪರವಾಗಿ ಶುಭ ಹಾರೈಸಿದರು.

ಅಂತಾರಾಷ್ಟ್ರೀಯ ಮಟ್ಟದಲ್ಲೂ ಸುಗುಣೇಂದ್ರ ಶ್ರೀಗಳು ಅವರು ಪ್ರಸಿದ್ಧಿಯನ್ನು ಮಾಡಿದ್ದಾರೆ. ಧರ್ಮದ ಕೈಂಕರ್ಯವನ್ನು ಮಾಡಿದ್ದಾರೆ. ಇಷ್ಟೊಂದು ದೊಡ್ಡ ಮಟ್ಟದಲ್ಲಿ ಅವರು ಕಾರ್ಯಕ್ರಮ ಮಾಡಿದ್ದಾರೆ ಎಂದು ಅಭಿನಂದಿಸಿದರು.

ನಿಮಿಷದ ಬಳಿಕ  ಖ್ಯಾತ ಚಲನಚಚಿತ್ರ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು ಮಾತನಾಡಿ, ಇದೊಂದು ಎಲ್ಲರೂ ಸಂಭ್ರಮ ಪಡಬೇಕಾದ ವಿಚಾರವಾಗಿದೆ. ನಮ್ಮ ತಾಯಿ ಉಡುಪಿಯವಾಗಿದ್ದು, ಕೃಷ್ಣ ಮಠ ತುಂಬಾ ಹತ್ತಿರ. ಕೃಷ್ಣನ ಪರವಾಗಿ ಒಂದು ಚಿತ್ರ ಮಾಡಬೇಕೆಂಬ ಆಸೆಯನ್ನು ಶ್ರೀಗಳಲ್ಲಿ ಅರಿಕೆ ಮಾಡಿದ್ದೇನೆ ಎಂದರು.

ಇದೇ ಸಂದರ್ಭ ಶ್ರೀಗಳು ಭಕ್ತರಿಂದ ವಿಶೇಷ ಪೂಜೆಯನ್ನು ನೆರವೇರಿಸಿಕೊಂಡರು.

ಎಲ್ಲಾ ಭಕ್ತರೂ ಸೇರಿ ನನ್ನನ್ನು ಹರಸಿದ್ದೀರಿ. ಶ್ರೀ ಕೃಷ್ಣನ ಪೂಜಾ ಕಾರ್ಯ ಮಾಡಲು ಸಿಕ್ಕಿರುವುದು ಪುಣ್ಯಫಲ. ಭಕ್ತರು ನನಗೆ ಅರ್ಪಣೆ ಮಾಡಿದ ಎಲ್ಲವನ್ನೂ ನಾವು ಶ್ರೀಕೃಷ್ಣನಿಗೆ ಸಮರ್ಪಣೆ ಮಾಡಿದ್ದೇವೆ.

ನೀವು ಕೊಟ್ಟ ಸುವರ್ಣ ಅಭಿಷೇಕ ಸಂಕಲ್ಪ ಮಾಡಿದ ಸುವರ್ಣ ರಥಕ್ಕೆ ಅರ್ಪಣೆ ಮಾಡುತ್ತೇವೆ ಎಂದರು. ಎಲ್ಲಾ ಸಮಿತಿಯ ಭಕ್ತರಿಗೂ ಕೃಷ್ಣ ಭಗವದ್ಗನುಗ್ರಹ ಮಾಡಲಿ ಎಂದು ಹರಸಿದರು.

ಬಳಿಕ ಶ್ರೀಗಳು ಎಲ್ಲರಿಗೂ ಫಲಮಂತ್ರಾಕ್ಷತೆ ನೀಡಿದರು. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಉಪಕುಲಪತಿ ಡಾ ಎಸ್ ಅಹಲ್ಯ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರದ ಭಕ್ತರಾದ ಮಂಜುನಾಥ ಹೆಗಡೆ, ಹಯಗ್ರೀವ ಆಚಾರ್ಯರು, ಸಮಿತಿ ಸದಸ್ಯ ಯು ಬಿ ವೆಂಕಟೇಶ್‌, ನಮ್ಮ ಕುಡ್ಲ ವಾಹಿನಿ ನಿರ್ದೇಶಕ ಲೀಲಾಕ್ಷ ಕರ್ಕೇರ, ಸಿಒಒ ಕದ್ರಿ ನವನೀತ್‌ ಶೆಟ್ಟಿ ಸಹಿತ ಗಣ್ಯಾತಿಗಣ್ಯರು ಈ ಸಂದರ್ಭ ಉಪಸ್ಥಿತರಿದ್ದರು.

ಜನವರಿ 18ರಿಂದ ಶ್ರೀಗಳ ಪರ್ಯಾಯ ಮಹೋತ್ಸವ ಆರಂಭವಾಗಲಿದೆ.

Continue Reading

bengaluru

ಉಡುಪಿಯ ಬೆಡಗಿ ಶರೀನಾಗೆ ‘ಕರ್ನಾಟಕ ನೆಕ್ಸ್ಟ್ ಟಾಪ್ ಮಾಡೆಲ್’ ಟೈಟಲ್ ಪ್ರಶಸ್ತಿ

Published

on

ಉಡುಪಿ: ಪ್ರತಿಷ್ಠಿತ ಎಂಬಿ ಗ್ರೂಪ್ ಇವರು ಬೆಂಗಳೂರಿನ ಹೋಟೆಲ್ ಫೊಕ್ಸ್ ಗ್ಲೋವ್ ಇಂಟರ್ನ್ಯಾಷನಲ್ ವೈಟ್ ಫೀಲ್ಡ್ ನಲ್ಲಿ ಸೆ.24 ರಂದು ಆಯೋಜಿಸಿದ್ದ ‘ಮಿಸ್ಟರ್ & ಮಿಸ್ ಟೀನ್ ಕರ್ನಾಟಕ’ ಇದರ ಸೀಸನ್ 4 ಸೌಂದರ್ಯ ಸ್ಪರ್ಧೆಯಲ್ಲಿ ಉಡುಪಿಯ ಪೆರಂಪಳ್ಳಿಯ ಶರೀನಾ ಮತಾಯಸ್ ರವರಿಗೆ ‘ಕರ್ನಾಟಕ ನೆಕ್ಸ್ಟ್ ಟಾಪ್ ಮಾಡೆಲ್’ ಟೈಟಲ್ ಪ್ರಶಸ್ತಿ ದೊರಕಿದೆ.

ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ 14 ಸ್ಪರ್ಧಿಗಳಲ್ಲಿ, ಪೆರಂಪಳ್ಳಿಯ ಶರೀನಾರವರಿಗೆ ಪ್ರತಿಷ್ಠಿತ ಟೈಟಲ್ ಪ್ರಶಸ್ತಿ ದೊರಕಿದ್ದು, ಫ್ಯಾಶನ್ ಮಾಡೆಲಿಂಗ್ ನ ಪ್ರಥಮ ಹೆಜ್ಜೆಯಲ್ಲಿಯೇ ಯಶಸ್ವಿಯ ಮೈಲುಗಲ್ಲು ಇಟ್ಟಿದ್ದಾರೆ.

ಪೆರಂಪಳ್ಳಿಯ ಸುನಿಲ್ ಮತ್ತು ಅನಿತಾ ಮತಾಯಸ್ ದಂಪತಿಗಳ ಮಗಳಾಗಿರುವ ಶರೀನಾ ಮತಾಯಸ್ ಪ್ರತಿಭಾವಂತೆಯಾಗಿದ್ದು, ಪ್ರಸ್ತುತ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಬಿಬಿಎ ವ್ಯಾಸಂಗ ಮಾಡುತ್ತಿದ್ದಾರೆ.

ಪೆರಂಪಳ್ಳಿಯ ಫಾತಿಮಾ ಮಾತೆ ದೇವಾಲಯದ ಐಸಿವೈಎಂ ಯುವ ಸಂಘಟನೆಯ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

Continue Reading

bengaluru

ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ನಟ ವಿಜಯ ರಾಘವೇಂದ್ರ ಭೇಟಿ..!

Published

on

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಕನ್ನಡ ಖ್ಯಾತ ನಟ ವಿಜಯ ರಾಘವೇಂದ್ರ ಸೆ.24ರಂದು ಭೇಟಿ ನೀಡಿದರು.

ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಸ್ಯಾಂಡಲ್ ವುಡ್ ನ ಖ್ಯಾತ ನಟ ವಿಜಯ ರಾಘವೇಂದ್ರ ಅವರು ಭೇಟಿ ನೀಡಿದರು.


ಬಳಿಕ ತಾಯಿ ದುರ್ಗಾಪರಮೇಶ್ವರಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ ಪ್ರಾರ್ಥಿಸಿದರು.

ಈ ಸಂದರ್ಭ ದೇವಳದ ವತಿಯಿಂದ ವಿಜಯ ರಾಘವೇಂದ್ರ ಅವರನ್ನು ಗೌರವಿಸಲಾಯಿತು.


ಈ ಹಿಂದೆ ಯಾವತ್ತೂ ನಟ ರಾಘು ಕಟೀಲು ಕ್ಷೇತ್ರಕ್ಕೆ ಪತ್ನಿ ಸ್ಪಂದನ ಜೊತೆ ಭೇಟಿ ನೀಡುತ್ತಿದ್ದರು.

ಆದರೆ ಈ ಬಾರಿ ಪತ್ನಿಯ ಅಗಲಿಕೆಯ ಬಳಿಕ ಇದೇ ಮೊದಲ ಬಾರಿಗೆ ಕ್ಷೇತ್ರಕ್ಕೆ ನಟ ಭೇಟಿ ನೀಡಿದ್ದು, ಮುಖದಲ್ಲಿ ಪತ್ನಿಯ ಅಗಲಿಕೆಯ ನೋವು ಕಂಡು ಬರ್ತಾ ಇತ್ತು.

Continue Reading

LATEST NEWS

Trending