Connect with us

    DAKSHINA KANNADA

    ಉಡುಪಿ ವಿಶ್ವ ಬಂಟರ ಸಮ್ಮಿಲನದ ಪೂರ್ವಭಾವಿ ಹೊರಕಾಣಿಕೆ ಮೆರವಣಿಗೆ

    Published

    on

    ಉಡುಪಿ: ಅ.28, 29 ರಂದು ಉಡುಪಿಯಲ್ಲಿ ನಡೆಯಲಿರುವ ವಿಶ್ವ ಬಂಟರ ಸಮ್ಮೀಲನದ ಪೂರ್ವಭಾವಿಯಾಗಿ ಹೊರಕಾಣಿಕೆ ಮೆರವಣಿಗೆ ಉಡುಪಿ ತಾಲೂಕು ಕಚೇರಿ ಬಳಿಯಿಂದ ಅಮ್ಮಣಿ ರಾಮಣ್ಣ ಶೆಟ್ಟಿ ಸಭಾಭವನದವರೆಗೆ ನಡೆಯಿತು.

    ಮೆರವಣಿಗೆಗೆ ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ತೆಂಗಿನಕಾಯಿ ಒಡೆದು ಚಾಲನೆ ನೀಡಿದರು.

    ಮೆರವಣಿಗೆಯಲ್ಲಿ ಸುರತ್ಕಲ್, ಮೂಲ್ಕಿ, ಬಂಟ್ವಾಳ, ಬ್ರಹ್ಮಾವರ, ಕರ್ಜೆ, ಉಡುಪಿ, ಕುಕ್ಕುಂದೂರು ಮತ್ತಿತರ ಹಲವು ಕಡೆಗಳ ಬಂಟರ ಸಂಘದ ವತಿಯಿಂದ ಹೊರೆ ಕಾಣಿಕೆ ಸಮರ್ಪಿಸಲಾಯಿತು.

    ಮೆರವಣಿಗೆಗೆ ವಿವಿಧ ಸ್ತಭ್ದಚಿತ್ರಗಳು ಸಾಥ್ ನೀಡಿದವು, ಈ ಸಂದರ್ಭ ಸಂಸ್ಥೆಯ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಕೋಶಾಧಿಕಾರಿ ಊಳ್ತೂರು ಮೋಹನದಾಸ್ ಶೆಟ್ಟಿ, ಜೊತೆ ಕಾರ್ಯದರ್ಶಿ ಚಂದ್ರಹಾಸ ಡಿ ಶೆಟ್ಟಿ, ವಿವಿಧ ಬಂಟರ ಸಂಘಗಳ ಅಧ್ಯಕ್ಷರು, ನಿರ್ದೇಶಕರು, ಸದಸ್ಯರು ಉಪಸ್ಥಿತರಿದ್ದರು.

    Click to comment

    Leave a Reply

    Your email address will not be published. Required fields are marked *

    Ancient Mangaluru

    ಮಂಗಳೂರಿನ ನರ್ಸಿಂಗ್ ಕಾಲೇಜಿನ ಮೂವರು ವಿದ್ಯಾರ್ಥಿಗಳು ನೀ*ರುಪಾಲು

    Published

    on

    ಮಂಗಳೂರು : ವೆಣೂರಿನ ಬರ್ಕಜೆ ಸಮೀಪದಲ್ಲಿರುವ ಸ್ನೇಹಿತನ ಮನೆಗೆ ತೆರಳಿದ್ದ ಮೂವರು ನರ್ಸಿಂಗ್ ವಿದ್ಯಾರ್ಥಿಗಳು ನೀರು ಪಾಲಾಗಿದ್ದಾರೆ. ಮದ್ಯಾಹ್ನದ ಊಟ ಮುಗಿಸಿ ಸಮೀಪದ ನದಿಗೆ ಈಜಲು ತೆರಳಿದ್ದ ಮೂವರು ನೀರಿನ ಸೆಳೆತಕ್ಕೆ ಸಿಲುಕಿ ಪ್ರಾ*ಣ ಕಳೆದುಕೊಂಡಿದ್ದಾರೆ.


    ಬೆಳ್ತಂಗಡಿ ತಾಲೂಕಿನ ವೇಣೂರಿನ ಮೂಡಕೋಡಿ ಗ್ರಾಮದ ವಾಲ್ಟರ್ ಎಂಬವರ ಮನೆಗೆ ಮೂಡಬಿದ್ರೆಯ ಲಾರೆನ್ಸ್ 20 ವರ್ಷ, ಬೆಳ್ತಂಗಡಿ ತಾಲೂಕಿನ ಪಾರೆಂಕಿ ಗ್ರಾಮದ ಸೂರಜ್ 19 ವರ್ಷ, ಹಾಗೂ ಬಂಟ್ವಾಳದ ವಗ್ಗ ಗ್ರಾಮದ ಜೈಸನ್ 19 ವರ್ಷ ಈ ಮೂವರು ಹೋಗಿದ್ದಾರೆ. ಮದ್ಯಾಹ್ನದ ಊಟವನ್ನು ಮುಗಿಸಿದ ಇವರು ಜೊತೆಯಾಗಿ ಬರ್ಕಜೆ ಸಮೀಪದ ಡ್ಯಾಂ ಬಳಿ ನದಿಯಲ್ಲಿ ಈಜಲು ಹೋಗಿದ್ದಾರೆ. ನದಿಯಲ್ಲಿ ಈಜಾಡುತ್ತಿದ್ದ ವೇಳೆ ನೀರಿನ ಸೆಳೆತಕ್ಕೆ ಮೂವರೂ ನೀರುಪಾಲಾಗಿದ್ದು, ವಿಷಯ ತಿಳಿಯುತ್ತಿದ್ದಂತೆ ಸ್ಥಳಿಯರು ರಕ್ಷಣೆಗೆ ನದಿಗೆ ದುಮಿಕಿದ್ದಾರೆ. ಆದ್ರೆ ಮೂವರನ್ನು ನದಿಯಿಂದ ಮೇಲೆತ್ತುವ ಮೊದಲೇ ಇ*ಹಲೋಕ ತ್ಯಜಿಸಿದ್ದಾರೆ. ಮೂವರೂ ಮಂಗಳೂರಿನ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳಾಗಿದ್ದಾರೆ.

    Continue Reading

    BANTWAL

    ಬಂಟ್ವಾಳ: ಅಟೋ ಮತ್ತು ಬೈಕ್ ನಡುವೆ ಅ*ಪಘಾತ; ಮೂವರು ಗಂ*ಭೀರ

    Published

    on

    ಬಂಟ್ವಾಳ : ಬಂಟ್ವಾಳ ತಾಲೂಕಿನ ಸಾಲೆತ್ತೂರು ಸಮೀಪದ ಕಾಡುಮಠದ ಬಳಿ ಅಟೋ ಹಾಗೂ ಬೈಕ್ ಒಂದರ ನಡುವೆ ಅ*ಪಘಾತ ಸಂಭವಿಸಿ ಮೂವರು ಗಾ*ಯಗೊಂಡಿದ್ದಾರೆ.

    ಸಾಲೆತ್ತೂರಿನ ಅಟೋ ಚಾಲಕ ರಫೀಕ್, ಬೈಕ್ ಸವಾರರಾದ ಕಡಂಬು ನಿವಾಸಿ ಉಮ್ಮರ್ ಮತ್ತು ರಾದುಕಟ್ಟೆ ನಿವಾಸಿ ಅಬೂಬಕ್ಕರ್ ಅವರು ಗಾ*ಯಗೊಂಡಿದ್ದಾರೆ. ಅ*ಪಘಾತದ ತೀವ್ರತೆಗೆ ಮೂವರಿಗೂ ಗಂಭೀರ ಗಾ*ಯಗಳಾಗಿದ್ದು, ರಸ್ತೆಯಲ್ಲಿ ಸಂಚಾರ ಸ್ಥಗಿತವಾಗಿತ್ತು. ಇದೇ ವೇಳೆ ಸ್ಥಳದಲ್ಲಿದ್ದ ಕೆ.ಎಸ್. ಹೆಗ್ಡೆ ವೈದ್ಯಕೀಯ ಕಾಲೇಜಿನ ಬಸ್‌ನಲ್ಲಿದ್ದ ವಿದ್ಯಾರ್ಥಿಗಳು ಗಾ*ಯಾಳುಗಳ ನೆರವಿಗೆ ಧಾವಿಸಿ ಬಂದಿದ್ದಾರೆ.

    ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ರವಾನಿಸುವ ಕೆಲಸ ಮಾಡಿದ್ದಾರೆ. ಮೂವರು ಗಾ*ಯಾಳುಗಳು ಕೂಡಾ ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಾಗಿದ್ದು, ಓರ್ವನ ಸ್ಥಿತಿ ಗಂ*ಭೀರವಾಗಿದೆ ಎಂದು ಮಾಹಿತಿ ಲಭಿಸಿದೆ. ಈ ಅ*ಪಘಾತದ ಕುರಿತಾಗಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Continue Reading

    DAKSHINA KANNADA

    ಅಸುವು ರಾಷ್ಟ್ರ ಸಮರ್ಪಿತ ಕಾರ್ಯಕ್ರಮ; ದಾಳಿಯಲ್ಲಿ ಮ*ಡಿದ ಯೋಧರಿಗೆ ಗೌರವಾರ್ಪಣೆ

    Published

    on

    ಮಂಗಳೂರು: ಮುಂಬೈ ನಗರದ ಮೇಲೆ ಭಯೋತ್ಪಾದಕರು ನಡೆಸಿದ ದಾ*ಳಿಯ ಸಂದರ್ಭದಲ್ಲಿ ಉಗ್ರರ ವಿರುದ್ಧ ಹೋರಾಡಿ ಪ್ರಾ*ಣವನ್ನು ಬ*ಲಿದಾನ ಮಾಡಿದ ಹುತಾತ್ಮರನ್ನು ಸ್ಮರಿಸುವ ರಾಷ್ಟ್ರಜಾಗೃತಿಯ ಅಸುವು ರಾಷ್ಟ್ರ ಸಮರ್ಪಿತ ಕಾರ್ಯಕ್ರಮವು ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆ ವತಿಯಿಂದ ಜರುಗಿತು.

    ಕದ್ರಿ ಯುದ್ಧ ಸ್ಮಾರಕದ ಬಳಿ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಸಂತ ಅಲೋಶಿಯಸ್ ಕಾಲೇಜಿನ ಉಪಕುಲಪತಿ ವಂದನೀಯ ಡಾ ಪ್ರವೀಣ ಮಾರ್ಟಿಸ್‌ ವಹಿಸಿದ್ದರು. ಡಾ ವಾದಿರಾಜ ಗೋಪಾಡಿ ದಿಕ್ಸೂಚಿ ಭಾಷಣ ಮಾಡಿದರು.

    ಈ ಸಂದರ್ಭದಲ್ಲಿ ಎನ್‌ಎಂ ಪಿಎ ಸಿಐಎಸ್ಎಫ್‌ನ ಡೆಪ್ಯುಟಿ ಕಮಾಂಡೆಂಟ್‌  ರಾಜೇಂದ್ರ ಪ್ರಸಾದ್ ಪಾಠಕ್, ಕಾರ್ಯಕ್ರಮ ಸಂಘಟಕ ಡಾ ಶೇಷಪ್ಪ, ಡಾ ನಿಶ್ಚಿತ್‌ ಡಿ ಸೋಜಾ,  ಹಿರಿಯ ಪೊಲೀಸ್ ಅಧಿಕಾರಿ ಅಜ್ಜತ್ ಆಲಿ, ಸಾರ್ಜೆಂಟ್ ಶ್ರೀಕಾಂತ್ ಶೆಟ್ಟಿ ಬಾಳ, ನ್ಯಾಯವಾದಿ ಬಿ. ನಯನ ಪೈ. ವಿದುಷಿ ಗುರು ಶ್ರೀಮತಿ ಸೌಮ್ಯ ಸುಧೀಂದ್ರ ರಾವ್, ಕಾರ್ಪೋರೇಟರ್‌ ಶಕೀಲಾ ಕಾವ ಮೊದಲಾದವರಿದ್ದರು. ನೃತ್ಯಸುಧಾ ಮಂಗಳೂರು ಇಲ್ಲಿನ ವಿದ್ಯಾರ್ಥಿನಿಯರಿಂದ ಹುತಾತ್ಮ ಸೈನಿಕರಿಗೆ ನೃತ್ಯನಮನ ನಡೆಯಿತು.

    Continue Reading

    LATEST NEWS

    Trending