Connect with us

    DAKSHINA KANNADA

    ನಂಬಿದವರ ಕೈ ಬಿಡದ ಪದಾಳ ಸುಬ್ರಹ್ಮಣ್ಯ ಸ್ವಾಮಿ ಸನ್ನಿಧಾನದಲ್ಲಿ ಬ್ರಹ್ಮಕಲಶೋತ್ಸವ ಸಂಭ್ರಮ

    Published

    on

    ಉಪ್ಪಿನಂಗಡಿ  : ದಕ್ಷಿಣ ಕಾಶಿ, ಗಯಾಪದ ಕ್ಷೇತ್ರವೆಂದು ಪ್ರಸಿದ್ಧವಾಗಿರುವ ಉಪ್ಪಿನಂಗಡಿ ಪಟ್ಟಣದ ಪೂರ್ವಕ್ಕೆ ನೇತ್ರಾವತಿ ನದಿ ತಟಕ್ಕೆ ಹತ್ತಿರದಲ್ಲಿ ನಿತ್ಯಹರಿದ್ವರ್ಣದ ಸಸ್ಯ ರಾಶಿಯ ನಡುವೆ ಕಂಗೊಳಿಸುವ ಕ್ಷೇತ್ರ ಪದಾಳ ಶ್ರೀ ಮಯೂರ ವಾಹನ ಸುಬ್ರಹ್ಮಣ್ಯ ಸ್ವಾಮಿಯ ದೇವಸ್ಥಾನ. ಸಹಸ್ರಾರು ವರ್ಷಗಳ ಹಿಂದೆ ಲೋಕ ಸಂಚಾರಿಗಳಾಗಿದ್ದ ಶ್ರೇಷ್ಠ ಋಷಿ ಮುನಿಗಳು ನೇತ್ರಾವತಿ ನದೀ ತೀರದಲ್ಲಿ ಸಂಚರಿಸುತ್ತಿದ್ದ ಸಂದರ್ಭದಲ್ಲಿ ಅಲೌಕಿಕ ಶಕ್ತಿ ಹಾಗೂ ಶ್ರೀಸುಬ್ರಹ್ಮಣ್ಯನ ಸಾನ್ನಿಧ್ಯವಿರುವುದನ್ನು ಗುರುತಿಸಿದ, ಮಹಾತ್ಮರು ಶ್ರೀ ಸ್ವಾಮಿಯನ್ನು ಇಂದಿನ ಪದಾಳದಲ್ಲಿ ಸ್ಥಾಪಿಸಿದರೆಂಬುದು ಐತಿಹ್ಯ.

    ದೇವಾಲಯ ಕಟ್ಟಿಸಿದ ಕದಿಕ್ಕಾರು ರಾಣಿ : 

    ಕಾಲಾಂತರದಲ್ಲಿ ಸ್ಥಳೀಯ ಕದಿಕ್ಕಾರು ಬೀಡಿನ ರಾಣಿಯೊಬ್ಬಳು ಪುತ್ರ ಸಂತಾನದ ಅಪೇಕ್ಷೆಯುಳ್ಳವಳಾಗಿ ಶ್ರೀ ದೇವರಿಗೆ ದೇವಸ್ಥಾನ ಕಟ್ಟಿಸುವ ಹರಕೆಯನ್ನು ಹೊತ್ತು, ಸಂಕಲ್ಪವನ್ನು ಪೂರೈಸಿದ ಮೇಲೆ ವೇದ ವಿದ್ವಾಂಸರಾದ ಬ್ರಾಹ್ಮಣ ಅರ್ಚಕರೊಬ್ಬರನ್ನು ದೇವಸ್ಥಾನದ ಉಸ್ತುವಾರಿ ಹಾಗೂ ದೇವರ ನಿತ್ಯಪೂಜೆಗಾಗಿ ನೇಮಿಸಿದಳಂತೆ. ಶ್ರೀ ದೇವರ ಅರ್ಚಕನಾದ ಆ ಬ್ರಾಹ್ಮಣನು ದೇವಸ್ಥಾನದ ನಿತ್ಯ ನೈಮಿತ್ತಿಕಗಳೊಂದಿಗೆ ಅಲ್ಲೇ ಸಮೀಪದಲ್ಲಿ ‘ಮಠ’ವೊಂದನ್ನು ಸ್ಥಾಪಿಸಿ, ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದುದರಿಂದ ಆ ಪ್ರದೇಶವು ‘ಮಠ’ವೆಂದೇ ಖ್ಯಾತವಾಯಿತು.

    ಬ್ರಾಹ್ಮಣ ಬ್ರಹ್ಮರಾಕ್ಷಸನಾಗಿ ಉಪಟಳ :

    ದೇವಸ್ಥಾನ ಹಾಗೂ ಮಠದ ಖರ್ಚು ವೆಚ್ಚಗಳು ಅಧಿಕವಾದಾಗ ತನ್ನನ್ನು ನೇಮಿಸಿದ ರಾಣಿಯಲ್ಲಿ ನೆರವನ್ನು ಯಾಚಿಸಿದಾಗ ಬ್ರಾಹ್ಮಣನಿಗೆ ಅವಮಾನ ಮಾಡಿದ್ದರಿಂದ ಮನನೊಂದು ಅಪಮೃತ್ಯುವಿಗೆ ಈಡಾಗಿ ಮೋಕ್ಷ ಸಿಗದೆ ಬ್ರಹ್ಮರಾಕ್ಷಸನಾಗಿ, ಪರಿಸರದಲ್ಲಿ ಉಪಟಳ ನೀಡುತ್ತಿರುವ ವಿಚಾರವು ಇತ್ತೀಚೆಗೆ ಪ್ರಶ್ನಾ ಚಿಂತನೆಯಲ್ಲಿ ಕಂಡುಬಂದ ವಿಷಯವಾಗಿದೆ.

    ಕದಿಕ್ಕಾರು ಬೀಡಿನ ಅರಸೊತ್ತಿಗೆಯು ಸಮಾಪ್ತಿಯಾದ ಮೇಲೆ ದೇವಾಲಯವು ಶ್ರೀ ಕ್ಷೇತ್ರ ಧರ್ಮಸ್ಥಳದ ಅಧೀನಕ್ಕೆ ಬಂದು ನಿತ್ಯ ಪೂಜಾದಿ ಕಾರ್ಯಗಳು ನಡೆಯುತ್ತಿದ್ದವು. ಕ್ರಿ ಶ. 1923ರಲ್ಲಿ ಈ ದೇವಾಲಯವು ಅಗ್ನಿಗೆ ಆಹುತಿಯಾಗಿ ದೇವಾಲಯವು ನಾಶವಾಗುವುದರೊಂದಿಗೆ ಪೂಜಾದಿ ಕಾರ್ಯಗಳು ನಿಂತುಹೋದವು. ಸುತ್ತಮುತ್ತಲಿನ ಜಮೀನುಗಳ ಒಡೆತನವು ಯಾರ್ಯಾರಿಗೋ ಸೇರಿ ದೇವಸ್ಥಾನವು ಕಾಡು ಪಾಲಾಯಿತು.

    ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದ ಸತ್ಯ!

    ಮುಂದೆ ಈ ದೇವಸ್ಥಾನದ ಸುತ್ತಮುತ್ತಲಿನ ಕೃಷಿ ಭೂಮಿಯನ್ನು ನಡುಸಾರು ಕುಟುಂಬದವರು ಖರೀದಿಸಿದಾಗ, ದೇವಸ್ಥಾನದ ಪಳೆಯುಳಿಕೆಗಳ ಮಾಹಿತಿ ಪಡೆದು ಊರ ಹತ್ತು ಸಮಸ್ತರ ಸಹಕಾರದಿಂದ ಕ್ರಿ. ಶ. 1993ರಲ್ಲಿ ಅಷ್ಟಮಂಗಲ ಪ್ರಶ್ನೆಯನ್ನಿರಿಸಿದಾಗ, ಶ್ರೀ ಕ್ಷೇತ್ರ ಧರ್ಮಸ್ಥಳದೊಂದಿಗೆ ‘ಪದಾಳ’ಕ್ಕಿರುವ ಸಂಬಂಧವು ತಿಳಿದುಬಂದಂತೆ ಧರ್ಮಾಧಿಕಾರಿಗಳ ಸಲಹೆ ಸೂಚನೆ ಪಡೆದು ಜೀರ್ಣೋದ್ಧಾರಕ್ಕೆ ಪ್ರಾರಂಭಿಸಲಾಯಿತು.

    ದೇವಸ್ಥಾನದ ‘ಪರಂಬೋಕು’ ಎಂದು ದಾಖಲಿಸಲ್ಪಟ್ಟ 0.96 ಎಕ್ರೆ ಜಮೀನಿನಲ್ಲಿ ಊರ ಪರವೂರ ದಾನಿಗಳ ಸಹಕಾರದಿಂದ ಮತ್ತೆ ದೇವಸ್ಥಾನವು ಮನನಿರ್ಮಾಣಗೊಂಡು ಕ್ರಿ. ಶ. 2009ರಲ್ಲಿ ಶ್ರೀ ದೇವರ ಪುನರ್‌ಪ್ರತಿಷ್ಠೆ, ಅಷ್ಠಬಂಧ ಬ್ರಹ್ಮಕಲಶೋತ್ಸವವು ಅತ್ಯಂತ ವಿಜೃಂಭಣೆಯಿಂದ ನೆರವೇರಿತು.

    ನಂಬಿದವರ ಕೈ ಬಿಡದ ಸುಬ್ರಹ್ಮಣ್ಯ ಸ್ವಾಮಿ :

    ಶ್ರೀ ದೇವರಿಗೆ ಬ್ರಹ್ಮಕಲಶ ನಡೆದು ಈಗಾಗಲೇ ಹದಿನೈದು ವರ್ಷಗಳಾಗಿದ್ದು, ಸಾನ್ನಿಧ್ಯ ವೃದ್ಧಿಗಾಗಿ ಅಷ್ಠಬಂಧ ಬ್ರಹ್ಮಕಲಶ ನಡೆಸುವ ಉದ್ದೇಶದಿಂದ ಪ್ರಶ್ನಾಚಿಂತನೆ ನಡೆಸಿದಾಗ ಸನ್ನಿಧಾನದ ಅಭಿವೃದ್ಧಿಗೆ ತೊಡಕಾಗಿರುವ ಬ್ರಹ್ಮರಾಕ್ಷಸನಿಗೆ ಮೋಕ್ಷವಾಗುವ ತನಕ ಆತನಿಂದ ಊರಿನಲ್ಲಿ ವಿಘ್ನಗಳು ಕಾಣಿಸಿಕೊಳ್ಳಬಹುದಾದ ಕಾರಣಕ್ಕಾಗಿ ಆತನನ್ನು ಪ್ರತಿಷ್ಠಾಪಿಸಿ, ನೈವೇದ್ಯಗಳನ್ನು ಕೊಡುವಂತೆ ಚಿಂತನೆಯಲ್ಲಿ ಕಂಡು ಬಂದುದರಿಂದ ಈಗಾಗಲೇ ಕಾರ್ಯವನ್ನು ಮುಗಿಸಿ ಬ್ರಹ್ಮರಾಕ್ಷಸನ ಪ್ರತಿಷ್ಠಾಪನೆಯಾಗಿರುತ್ತದೆ. ಕ್ಷೇತ್ರಕ್ಕೆ ಸಂಬಂಧಿಸಿದ ದೈವಗಳಿಗೆ ಗುಡಿ ಕಟ್ಟಿ ಕಾಲ ಕಾಲಕ್ಕೆ ನೇಮಗಳನ್ನು ಕೊಡಲಾಗುತ್ತಿದ್ದು, ಸದ್ಯವೇ ಶ್ರೀ ದೇವರ ಬಿಂಬಕ್ಕೆ ಬೆಳ್ಳಿಯ ಕವಚವನ್ನು ಮತ್ತು ದೈವಗಳ ಭಂಡಾರಕ್ಕೆ ಪಲ್ಲಕ್ಕಿಯನ್ನು ಸಮರ್ಪಿಸಲಾಗುತ್ತದೆ. ಸುಂದರ ಆಲಯದೊಳಗೆ ಮಯೂರವಾಹನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ನೆಲೆಸಿದ್ದಾನೆಂಬ ನಂಬಿಕೆಯಿಂದ ಭಕ್ತರು ನಡೆದುಕೊಳ್ಳುತ್ತಿದ್ದಾರೆ. ನಂಬಿದ ಭಕ್ತರ ಕೈಬಿಡದ ದೇವರೆಂಬ ಖ್ಯಾತಿಯಿದೆ.

    ಮತ್ತೆ ನಡೆಯಲಿದೆ ವಿಜೃಂಭಣೆಯ ಬ್ರಹ್ಮಕಲಶೋತ್ಸವ :

    ಪುತ್ತೂರಿನ ಉಪ್ಪಿನಂಗಡಿ ಪದಾಳ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಡಿ.18ರಿಂದ ಡಿ.23ರವರೆಗೆ ಅಷ್ಟಬಂಧ ಬ್ರಹ್ಮಕಲಶೋತ್ಸವವು ನಡೆಯಲಿದ್ದು, ಇದಕ್ಕೆ ಪೂರ್ವಭಾವಿಯಾಗಿ ದೇವಾಲಯದಲ್ಲಿ ಚಪ್ಪರ ಮುಹೂರ್ತ ನೆರವೇರಿಸಲಾಯಿತು. ದೇವಾಲಯದ ಪ್ರಧಾನ ಅರ್ಚಕ ಕೇಶವರಾಜ ಭಟ್ ಧಾರ್ಮಿಕ ವಿಧಿ-ವಿಧಾನ ನೆರವೇರಿಸಿದರು.


    ಇದನ್ನೂ ಓದಿ :ಶಬರಿಮಲೆಯ 18 ಮೆಟ್ಟಿಲುಗಳ ಮೇಲೆ ನಿಂತು ಫೋಟೋಶೂಟ್ ಮಾಡಿಸಿದ ಪೊಲೀಸರಿಗೆ ಬಿಗ್‌ಶಾಕ್

    ದೇವಾಲಯದ ಆಡಳಿತ ಸಮಿತಿಯ ಅಧ್ಯಕ್ಷ ನಡುಸಾರು ಉದಯಶಂಕರ ಭಟ್ಟ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಜಗದೀಶ ರಾವ್ ಮಣಿಕ್ಕಳ ಚಪ್ಪರ ಮುಹೂರ್ತ ನೆರವೇರಿಸಿದರು. ಈ ಸಂದರ್ಭ ದೇವಾಲಯದ ಆಡಳಿತ ಸಮಿತಿಯ ಉಪಾಧ್ಯಕ್ಷ ಸುರೇಶ್ ಅತ್ರಮಜಲು, ಕಾರ್ಯದರ್ಶಿ ಕೇಶವ ಗೌಡ ರಂಗಾಜೆ, ಕೋಶಾಧಿಕಾರಿ ರಾಮಚಂದ್ರ ಮಣಿಯಾಣಿ ನೆಡ್ಚಿಲು, ಸದಸ್ಯರಾದ ಶಾಂಭವಿ ರೈ ಪುಳಿತ್ತಡಿ, ಹರೀಶ್ವರ ಮೊಗ್ರಾಲ್, ಶಂಕರನಾರಾಯಣ ಭಟ್ ಬೊಳ್ಳಾವು, ಸದಾನಂದ ಶೆಟ್ಟಿಕಿಂಡೋವು, ಜತ್ತಪ್ಪನಾಯ್ಕ ಬೊಳ್ಳಾವು, ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಎನ್. ಜಯಗೋವಿಂದ ಶರ್ಮಾ ಪದಾಳ, ಜೊತೆ ಕಾರ್ಯದರ್ಶಿ ಸುರೇಶ್ ಗೌಂಡತ್ತಿಗೆ, ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಗಿರೀಶ್ ಆರ್ತಿಲ, ಸುನೀಲ್ ಕುಮಾರ್ ದಡ್ಡು, ವಸಂತ ನಾಯ್ಕ ಬೊಳ್ಳಾವು, ಧರ್ನಪ್ಪ ನಾಯ್ಕ ಬೊಳ್ಳಾವು, ಪ್ರಶಾಂತ್ ಪೆರಿಯಡ್ಕ, ಕಂಗ್ವೆ ವಿಶ್ವನಾಥ ಶೆಟ್ಟಿ, ವಸಂತ ಕುಕ್ಕುಜೆ, ವೀರಪ್ಪಗೌಡಪುಳಿತ್ತಡಿ, ರಾಧಾಕೃಷ್ಣ ಭಟ್ ಬೊಳ್ಳಾವು, ಮಹಾಲಿಂಗೇಶ್ವರ ಭಟ್ ಮಧುವನ, ರಘು ಪೂಜಾರಿ, ಜಯಂತ ಪೊರೋಳಿ, ರಾಮಚಂದ್ರ ಭಟ್ ಕಲ್ಲಾಜೆ, ವೆಂಕಟ್ರಮಣ ಭಟ್ ಮುಂಚಿಕ್ಕಾನ ಮತ್ತಿತರರು ಉಪಸ್ಥಿತರಿದ್ದರು.

    DAKSHINA KANNADA

    ನಿವೃತ್ತರಾದ ಪುತ್ತೂರು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಅಡುಗೆ ಸಿಬ್ಬಂದಿಗೆ ಸನ್ಮಾನ

    Published

    on

    ಪುತ್ತೂರು : ಪುತ್ತೂರಿನ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ 28 ವರ್ಷಗಳಿಂದ ಅಡುಗೆ ಸಹಾಯರಾಗಿ ಕೆಲಸ ನಿರ್ವಹಿಸುತ್ತಿದ್ದ ಹೊನ್ನಪ್ಪ ಸಿ.ಎಚ್. ಅವರು ನ.30ರಂದು ನಿವೃತ್ತರಾದರು.

    ವೈದ್ಯಾಧಿಕಾರಿಗಳು ಮತ್ತು ಎಲ್ಲಾ ಸಿಬ್ಬಂದಿ ವರ್ಗದವರೊಂದಿಗೆ ಉತ್ತಮ ರೀತಿಯಲ್ಲಿ ಒಡನಾಟ ಇಟ್ಟುಕೊಂಡಿದ್ದ ಅವರು, ಸರ್ಕಾರಿ ನೌಕರರಾಗಿ ನಿಷ್ಠೆ, ಜವಾಬ್ದಾರಿಯುತವಾಗಿ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ. ಸಾರ್ವಜನಿಕ ಜೀವನದಲ್ಲೂ ಎಲ್ಲರ ಪ್ರೀತಿ ಪಾತ್ರರಾಗಿದ್ದರು. ಹೊನ್ನಪ್ಪ ಸಿ.ಎಚ್  ಚಿಕ್ಕಪುತ್ತೂರಿನ ಸಿ.ಬಾಬು ಹಾಗೂ ಚಿನ್ನು ದಂಪತಿಯ ಮೂರನೇ ಪುತ್ರ.

    ಇದನ್ನೂ ಓದಿ : ದೇಶದ ಅತಿ ಕಿರಿಯ, ಕರ್ನಾಟಕ ಮೂಲದ ಈ ಪೈಲಟ್ ಯಾರು ಗೊತ್ತಾ ??

    ನಿವೃತ್ತರಾದ  ಅವರನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಯ ಆಡಳಿತ ವರ್ಗ ಪ್ರೀತಿಯಿಂದ ಬೀಳ್ಕೊಟ್ಟಿದ್ದಾರೆ.  ವೇಳೆ ಆಡಳಿತ ವೈದ್ಯಾಧಿಕಾರಿ ಡಾ. ಆಶಾಜ್ಯೋತಿ ಕೆ., ಸಹಾಯಕ ಆಡಳಿತಾಧಿಕಾರಿ ಯೋಗಾನಂದ, ಡಾ. ಪ್ರಶಾಂತ್, ಡಾ.ಜಯ ಕುಮಾರಿ, ಡಾ.ಯದುರಾಜ್, ಡಾ.ಝೈನಾಬ ಮತ್ತಿತರರು ಉಪಸ್ಥಿತರಿದ್ದರು.

    Continue Reading

    DAKSHINA KANNADA

    ಚುನಾವಣಾ ಬಾಂಡ್‌ ಅಕ್ರಮ : ನಿರ್ಮಲಾ ಸೀತಾರಾಮನ್‌, ನಳೀನ್ ಕುಮಾರ್ ಕಟೀಲ್‌ಗೆ ರಿಲೀಫ್

    Published

    on

    ಮಂಗಳೂರು : ಚುನಾವಣಾ ಬಾಂಡ್ ಹೆಸರಲ್ಲಿ ಸುಲಿಗೆ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಮಾಜಿ ಸಂಸದ ನಳೀನ್ ಕುಮಾರ್ ಕಟೀಲ್‌ಗೆ ರಿಲೀಫ್ ಸಿಕ್ಕಿದೆ. ಅವರ ವಿರುದ್ಧ ದಾಖಲಾಗಿದ್ದ ಎಫ್‌ಐಅರ್ ರದ್ದುಗೊಳಿಸಿ ಹೈಕೋರ್ಟ್ ಆದೇಶಿಸಿದೆ.

    ಚುನಾವಣಾ ಬಾಂಡ್ ಅಕ್ರಮಕ್ಕೆ ಸಂಬಂಧಿಸಿದ ದೂರಿನ ನಂತರ ವಿಶೇಷ ನ್ಯಾಯಾಲಯವೊಂದರ ನಿರ್ದೇಶನದಂತೆ ನಿರ್ಮಲಾ ಸೀತಾರಾಮನ್, ನಳೀನ್ ಕುಮಾರ್ ಕಟೀಲ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 384( ಸುಲಿಗೆಗೆ ಶಿಕ್ಷೆ) 120 ಬಿ (ಕ್ರಿಮಿನಲ್ ಪಿತೂರಿ) 34 (ಸಾಮಾನ್ಯ ಉದ್ದೇಶದೊಂದಿಗೆ ಹಲವಾರು ವ್ಯಕ್ತಿಗಳು ಮಾಡಿದ ಕಾರ್ಯಗಳು) ಅಡಿಯಲ್ಲಿ ಸೀತಾರಾಮನ್, ಇಡಿ ಅಧಿಕಾರಿಗಳು ಮತ್ತು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಬಿಜೆಪಿ ಪದಾಧಿಕಾರಿಗಳ ವಿರುದ್ಧ ಎಫ್ ಐಆರ್ ದಾಖಲಾಗಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೆಸರೂ ಎಫ್ ಐಆರ್ ನಲ್ಲಿ ಕೇಳಿ ಬಂದಿತ್ತು.

    ಇದನ್ನೂ ಓದಿ : ಮಾಜಿ ಪ್ರಿಯಕರನ ಹ*ತ್ಯೆ ಆರೋಪ; ಬಾಲಿವುಡ್‌ನ ಖ್ಯಾತ ನಟಿಯ ತಂಗಿ ಅರೆಸ್ಟ್

    ಚುನಾವಣಾ ಬಾಂಡ್‌ಗಳ ಸೋಗಿನಲ್ಲಿ ಪ್ರತಿಷ್ಟಿತ ಕಂಪೆನಿಗಳಿಂದ ಸುಮಾರು 8  ಸಾವಿರ ಕೋಟಿ  ರೂ.ಗಳನ್ನು  ಸುಲಿಗೆ ಮಾಡಿದ್ದಾರೆ ಎಂದು ಆರೋಪಿಸಿ ಜನಾಧಿಕಾರ ಸಂಘರ್ಷ ಪರಿಷತ್ ಸಂಸ್ಥಾಪಕ ಆದರ್ಶ್ ಆರ್.ಅಯ್ಯರ್ ಎಂಬವರು ದೂರು ದಾಖಲಿಸಿದ್ದರು.

    Continue Reading

    BELTHANGADY

    ಉಜಿರೆ : ನೇತ್ರಾವತಿ ನದಿಯಲ್ಲಿ ಮು*ಳುಗಿದ್ದ ವ್ಯಕ್ತಿ ಶ*ವವಾಗಿ ಪತ್ತೆ

    Published

    on

    ಉಜಿರೆ: ನೇತ್ರಾವತಿ ನದಿಗೆ ಇಳಿದ ವ್ಯಕ್ತಿ ನೀರಿನಲ್ಲಿ ಮು*ಳುಗಿ ನಾ*ಪತ್ತೆಯಾದ ಘಟನೆ ಬೆಳಾಲು ಗ್ರಾಮದ ಕೂಡಿಗೆ ಎಂಬಲ್ಲಿ ಸೋಮವಾರ (ಡಿ.02) ಸಂಜೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ‌ ರಾತ್ರಿ  ಮೃ*ತದೇಹ ಹೊರತೆಗೆಯಲಾಗಿದೆ.

    ಬೆಳಾಲು ಗ್ರಾಮದ ಸುರುಳಿ ಕುಂಡಡ್ಕ ನಿವಾಸಿ ಪ್ರಸಾದ್ (38) ಎಂಬವರು ಯಾವುದೋ ಕಾರಣಕ್ಕೆ ಸಂಜೆ‌ ಸುಮಾರು 5‌‌ರಿಂದ‌ 6 ಗಂಟೆ ಸುಮಾರಿಗೆ ನದಿಗೆ ಇಳಿದಿದ್ದು ಬಳಿಕ ಮುಳುಗಿ ನಾ*ಪತ್ತೆಯಾಗಿದ್ದರು.

    ಸ್ಥಳಕ್ಕೆ ಅ*ಗ್ನಿಶಾಮಕ ದಳ ಹಾಗೂ ಶೌರ್ಯ ವಿಪತ್ತು ನಿರ್ವಹಣೆ ತಂಡದ ಸದಸ್ಯರು ಭೇಟಿ ನೀಡಿದ್ದು, ಮುಳುಗು ತಜ್ಞ ಈಶ್ವರ್ ಮಲ್ಪೆಗೂ ಮಾಹಿತಿ‌‌‌ ನೀಡಲಾಗಿತ್ತು. ಆದರೆ ಮುಳುಗು ತಜ್ಞ ಬೆಳ್ತಂಗಡಿ‌ಯ‌ ಸಂಜಯ ನಗರದ ಇಸ್ಮಾಯಿಲ್‌ ಹಾಗೂ ಅಗ್ನಿಶಾಮಕದಳದವರು ರಾತ್ರಿ‌11‌ರ‌ ಸುಮಾರಿಗೆ ಮೃ*ತದೇಹ ಮೇಲೆತ್ತಿದ್ದಾರೆ. ಮೃ*ತ ವ್ಯಕ್ತಿ ಸಂಘದ ಪ್ರಚಾರಕರಾಗಿ ಐದು ವರ್ಷ ಕಾರ್ಯ ನಿರ್ವಹಿಸಿ ಪ್ರಸ್ತುತ ಪುತ್ತೂರು ಜಿಲ್ಲಾ ಧರ್ಮಜಾಗರಣ ಸಂಯೋಜಕರಾಗಿದ್ದರು.

    ಅಂ*ತಿಮ ದರ್ಶನಕ್ಕೆ ಸ್ವಗ್ರಾಮ ಬೆಳಾಲ್ ನಲ್ಲಿ ಮಂಗಳವಾರ ಬೆಳಗ್ಗೆ 11 ಗಂಟೆಯಿಂದ 1 ಗಂಟೆ ತನಕ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರಸ್ತುತ ಪಾರ್ಥೀವ ಶರೀರ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಶ*ವಾಗಾರದಲ್ಲಿ ಇರಿಸಲಾಗಿದೆ.

    Continue Reading

    LATEST NEWS

    Trending