Connect with us

LATEST NEWS

Udupi: ಉದ್ಯಾವರ ಸಂಪಿಗೆ ನಗರದಲ್ಲಿ ಮನೆಗಳಿಗೆ ನುಗ್ಗಿದ ನೀರು-ಸ್ಥಳೀಯರ ಆಕ್ರೋಶ

Published

on

ಉಡುಪಿ ಜಿಲ್ಲೆಯ ಉದ್ಯಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂಪಿಗೆ ನಗರದಲ್ಲಿ ಕೆಲವು ಮನೆಗಳಿಗೆ ನೆರೆ ನೀರು ಮತ್ತು ಕೊಳಚೆ ನೀರು ನುಗ್ಗಿದೆ.

ಉಡುಪಿ: ಕರಾವಳಿ ಭಾಗದಲ್ಲಿ ಕಳೆದ ಎರಡು ದಿನದಿಂದ ಧಾರಕಾರ ಮಳೆ ಸುರಿಯುತ್ತಿದ್ದು, ಅದರ ಪರಿಣಾಮವಾಗಿ ಇಂದು ಉಡುಪಿ ಜಿಲ್ಲೆಯ ಉದ್ಯಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂಪಿಗೆ ನಗರದಲ್ಲಿ ಕೆಲವು ಮನೆಗಳಿಗೆ ನೆರೆ ನೀರು ಮತ್ತು ಕೊಳಚೆ ನೀರು ನುಗ್ಗಿದೆ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಮತ್ತು ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷರನ್ನು ಸ್ಥಳೀಯ ನಿವಾಸಿಗಳು ತರಾಟೆ ತೆಗೆದುಕೊಂಡರು.

ಈ ಸಂದರ್ಭದಲ್ಲಿ ಅಧ್ಯಕ್ಷರು ಮತ್ತು ಸ್ಥಳೀಯರ ನಡುವೆ ಮಾತಿನ ಚಕಮಕಿ ನಡೆದು ಹೊಯಿ ಕೈ ತನಕ ತಲುಪಿತ್ತು.

ಇಲ್ಲಿ ಮನೆಗಳಿಗೆ ನೀರು ನುಗ್ಗಿ ಸಮಸ್ಯೆ ಸೃಷ್ಟಿಯಾಗಲು ಅವೈಜ್ಞಾನಿಕ ಲೇ ಔಟ್ ನಿರ್ಮಾಣ ಕಾಮಗಾರಿಯೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಖಾಸಗಿ ಲೇ ಔಟ್ ನಿರ್ಮಾಣ ಸಂದರ್ಭದಲ್ಲಿ ಚರಂಡಿ ಮಾಯವಾಗಿದೆ.

ನೀರು ಹರಿಯಲು ವ್ಯವಸ್ಥೆ ಇಲ್ಲ. ಮುಂದೆ ಸಮಸ್ಯೆ ಆಗ ಬಹುದೆಂದು ಮಳೆ ಆರಂಭವಾಗುವ ಮೊದಲೇ ಸಂಬಂಧಪಟ್ಟ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮತ್ತು ಗ್ರಾಮ ಪಂಚಾಯತ್ ಸದಸ್ಯರ ಗಮನಕ್ಕೆ ತಂದರೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುವುದು ಸ್ಥಳೀಯ ಜನರ ಆರೋಪ.

 

Click to comment

Leave a Reply

Your email address will not be published. Required fields are marked *

LATEST NEWS

ನಡುರಸ್ತೆಯಲ್ಲೇ ಬ್ಲಾಸ್ಟ್ ಆದ ರಾಯಲ್ ಎನ್‌ಫೀಲ್ಡ್‌.! ಪೊಲೀಸ್ ಸೇರಿ 10 ಮಂದಿ ಗಂಭೀರ

Published

on

ಹೈದರಾಬಾದ್/ಮಂಗಳೂರು: ರಾಯಲ್ ಎನ್‌ಫೀಲ್ಡ್ ಬೈಕ್‌ ರಸ್ತೆಯಲ್ಲೇ ಹೊತ್ತಿ ಉರಿದು ಬ್ಲಾಸ್ಟ್‌ ಆಗಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಬೈಕ್‌ಗೆ ಬೆಂಕಿ ತಗುಲಿದ್ದು ಅದನ್ನು ಆರಿಸಲು ಜನರು ಮುಂದಾದ ಜನರು ಗಂಭೀರ ಗಾಯಗೊಂಡಿದ್ದಾರೆ.

royal enfield

ಬೈಕ್‌ಗೆ ತಗುಲಿದ್ದ ಬೆಂಕಿಯನ್ನು ಅಲ್ಲಿ ನೆರೆದಿದ್ದ ಜನರು ಆರಿಸುವಲ್ಲಿ ತೊಡಗಿದ್ದರು. ನೀರು, ಮರಳು ಹಾಕಿ ಬೆಂಕಿ ಆರಿಸಲು ಕಸರತ್ತು ಮಾಡಿದ್ದಾರೆ. ಅಷ್ಟರಲ್ಲಾಗಲೇ ಬೆಂಕಿಯ ತೀವ್ರತೆ ಹೆಚ್ಚಾಗಿ ಬ್ಲಾಸ್ಟ್ ಆಗಿದೆ. ಇದರಿಂದ ಪಕ್ಕದಲ್ಲಿದ್ದ ಬೇರೆ ಗಾಡಿಗಳಿಗೂ ಬೆಂಕಿ ತಗುಲಿ ಭಾರೀ ಅನಾಹುತ ಸಂಭವಿಸಿದೆ. ಘಟನೆಯಿಂದ ಅಲ್ಲಿದ್ದ ಪೊಲೀಸ್ ಕಾನ್ಸ್ಟೇಬಲ್ ಸೇರಿದಂತೆ ಹತ್ತು ಜನರು ಗಂಭೀರ ಗಾಯಗೊಂಡಿದ್ದಾರೆ. ಇವರನ್ನು ಸ್ಥಳೀಯ ಆಸ್ಒತ್ರೆಗೆ ದಾಖಲಿಸಲಾಗಿದೆ.

 

Continue Reading

DAKSHINA KANNADA

ಇಂತಹ ವಿಷಕಾರಿ ಗಿಡಗಳನ್ನು ಯಾವತ್ತೂ ನೀವು ಮನೆಯಲ್ಲಿ ಇಡಬೇಡಿ!!

Published

on

ಮಂಗಳೂರು: ನಮ್ಮ ತೋಟಗಳು ಮತ್ತು ಬಾಲ್ಕನಿಗಳಲ್ಲಿ ಅರಳುವ ಹೂವುಗಳು ಮತ್ತು ನಮ್ಮ ಮುಖದಲ್ಲಿ ನಗು ತರುವ ಸಾಕು ಪ್ರಾಣಿಗಳನ್ನು ನಾವು ಪ್ರೀತಿಸುತ್ತೇವೆ. ಆದ್ಧರಿಂದ ಅವರಿಬ್ಬರನ್ನೂ ಉಳಿಸಲು ಮತ್ತು ಸಂತೋಷದ ಶಕ್ತಿಯನ್ನು ಕಾಪಾಡಿಕೊಳ್ಳಲು ಇಲ್ಲಿ ನಾವು ನಿಮ್ಮ ಸಾಕು ಪ್ರಾಣಿಗಳಿಗೆ ಹಾನಿಕಾರಕವಾದ ಕೆಲವು ಸಸ್ಯಗಳ ಬಗ್ಗೆ ಮಾಹಿತಿ ಕೊಡುತ್ತೇವೆ. ಈ ಸಸ್ಯಗಳು ನಿಮ್ಮ ಮನೆಯಲ್ಲಿ ಇದ್ದರೆ ಅದು ವಿಷಕಾರಿ ಗಿಡ. ಅಂತಹ ಸಸ್ಯಗಳನ್ನು ಯಾವತ್ತೂ ನಿಮ್ಮ ಮನೆಯಲ್ಲಿ ಇಡಬೇಡಿ.

ಲೋಳೆ ಸರ

ಅಲೋವೆರಾ ಅದರ ಔಷಧೀಯ ಗುಣಗಳಿಗೆ ಹೆಸರುವಾಸಿಯಾಗಿದೆ. ಆದರೆ ಅದು ಮನುಷ್ಯರಿಗೆ ಮಾತ್ರ ಸೀಮಿತವಾಗಿದೆ. ಸಸ್ಯವನ್ನು ಸೇವಿಸಿದರೆ ಸಾಕುಪ್ರಾಣಿಗಳಿಗೆ ತುಂಬಾ ವಿಷಕಾರಿಯಾಗಬಹುದು ಮತ್ತು ವಾಂತಿ, ಅತಿಸಾರ ಮತ್ತು ನಡುಕವನ್ನು ಉಂಟುಮಾಡಬಹುದು.

ಪೊಥೋಸ್

ಪೋಥೋಸ್ ಜನಪ್ರಿಯ ಒಳಾಂಗಣ ಸಸ್ಯವಾಗಿದ್ದು ಅದು ಗಾಳಿಯನ್ನು ಶುದ್ದೀಕರಿಸುವ ಗುಣಗಳಿಗೆ ಹೆಸರುವಾಸಿಯಾಗಿದೆ. ಆದರೆ ಅವುಗಳನ್ನು ಇಟ್ಟುಕೊಳ್ಳುವುದರ ಸಮಸ್ಯೆಯೆಂದರೆ ಎಲೆಗಳು ಕ್ಯಾಲ್ಸಿಯಂ ಆಕ್ಸಲೇಟ್ ಹರಳುಗಳನ್ನು ಹೊಂದಿರುತ್ತವೆ. ಇದು ಸಾಕು ಪ್ರಾಣಿಗಳ ಬಾಯಿ ಮತ್ತು ಜೀರ್ಣಾಂಗವನ್ನು ಕೆರಳಿಸಬಹುದು.

ಹಾವಿನ ಗಿಡ

ನಮ್ಮ ಸುತ್ತಲಿನ ಗಾಳಿಯನ್ನು ಶುದ್ದೀಕರಿಸಲು ಸಹಾಯ ಮಾಡುವ ಮತ್ತು ಬೆಳೆಯಲು ತುಂಬಾ ಸುಲಭವಾದ ಮತ್ತೊಂದು ಉತ್ತಮ ಸಸ್ಯವೆಂದರೆ ಸ್ನೇಕ್ ಸಸ್ಯ. ಆದರೆ ಮನೆಯಲ್ಲಿ ಸಾಕುಪ್ರಾಣಿ ಇದ್ದರೆ ಜಾಗರೂಕರಾಗಿರಿ. ಹಾವಿನ ಸಸ್ಯಗಳು ಸಪೋನಿನ್‌ಗಳನ್ನು ಹೊಂದಿರುತ್ತವೆ. ಇದು ಸಾಕುಪ್ರಾಣಿಗಳಲ್ಲಿ ವಾಂತಿ ಮತ್ತು ಭೇದಿಗೆ ಕಾರಣವಾಗಬಹುದು.

ZZ ಸಸ್ಯ

ZZ ಸಸ್ಯಗಳು ತುಂಬಾ ಕಡಿಮೆ ನಿರ್ವಹಣೆಯನ್ನು ಹೊಂದಿವೆ ಮತ್ತು ಯಾರು ಬೇಕಾದರೂ ಬೆಳೆಸಬಹುದು. ಆದರೆ, ZZ ಸಸ್ಯದ ರಸವು ವಿಷಕಾರಿ ಪದಾರ್ಥಗಳು ಮತ್ತು ಉದ್ರೇಕಕಾರಿಗಳನ್ನು ಹೊಂದಿರುತ್ತದೆ. ಅದು ಮನುಷ್ಯರು ಅಥವಾ ಪ್ರಾಣಿಗಳು ಸೇವಿಸಿದರೆ, ಸುಟ್ಟಗಾಯಗಳು ಮತ್ತು ಇತರ ಸಮಸ್ಯೆಗಳನ್ನು ಉಂಟುಮಾಡಬಹುದು.

ಮೂಕ ಕಬ್ಬಿನ ಗಿಡ

ಡೈಫೆನ್‌ ಬಾಚಿಯಾ ಅಥವಾ ಮೂಕ ಕಬ್ಬನ್ನು ಉಲ್ಲೇಖಿಸಿದಂತೆ, ವಿಶೇಷವಾಗಿ ಸಾಕುಪ್ರಾಣಿಗಳಿಗೆ ಹೆಚ್ಚು ವಿಷಕಾರಿ ಸಸ್ಯವಾಗಿದೆ. ಮೂಕ ಕಬ್ಬಿನ ಎಲೆಗಳನ್ನು ಅಗಿಯುವುದು ಅಥವಾ ರುಚಿ ನೋಡುವುದು ಕಿರಿಕಿರಿ, ವಾಂತಿ ಮತ್ತು ನುಂಗಲು ತೊಂದರೆ ಉಂಟುಮಾಡಬಹುದು. ಇದನ್ನು ಪಶುವೈದ್ಯರು ಮಾತ್ರ ಚಿಕಿತ್ಸೆ ಮಾಡಬಹುದು.

ರಬ್ಬರ್ ಸಸ್ಯ

ರಬ್ಬರ್ ಸಸ್ಯಗಳು ಒಳಾಂಗಣದಲ್ಲಿ ಇರಿಸಿಕೊಳ್ಳಲು ಉತ್ತಮವಾದ ಮತ್ತೊಂದು ಸೆಟ್, ಆದರೆ ದುರದೃಷ್ಟವಶಾತ್ ನೀವು ಸಾಕುಪ್ರಾಣಿಗಳನ್ನು ಹೊಂದಿದ್ದರೆ ಹಾಗಲ್ಲ. ರಬ್ಬರ್ ಸಸ್ಯವು ಫಿಸಿನ್ ಮತ್ತು ರಬ್ಬರ್ ಟ್ರೀ ಲ್ಯಾಟೆಕ್ಸ್ ಎಂದು ಕರೆಯಲ್ಪಡುವ ವಿಷವನ್ನು ಹೊಂದಿರುತ್ತದೆ. ಇದು ಎಲೆಗಳನ್ನು ಅಗಿಯಲು ಅಥವಾ ನುಂಗಲು ಸಾಕುಪ್ರಾಣಿಗಳಿಗೆ ಹಾನಿಕಾರಕವಾಗಿದೆ.

ಲಿಲ್ಲಿಗಳು

ಲಿಲ್ಲಿಗಳು ಸುಂದರವಾಗಿದ್ದರೂ, ಬೆಕ್ಕುಗಳಿಗೆ ಹೆಚ್ಚು ವಿಷಕಾರಿ ಮತ್ತು ಸಣ್ಣ ಪ್ರಮಾಣದಲ್ಲಿ ಮೂತ್ರಪಿಂಡ ವೈಫಲ್ಯವನ್ನು ಉಂಟುಮಾಡಬಹುದು. ಸಸ್ಯದ ಎಲ್ಲಾ ಭಾಗಗಳು, ಪರಾಗ ಮತ್ತು ಹೂದಾನಿಗಳಿಂದ ನೀರು ಸೇರಿದಂತೆ, ತಿಂದರೆ ಅಥವಾ ಕುಡಿದರೆ ಹಾನಿಕಾರಕವಾಗಬಹುದು.

Continue Reading

LATEST NEWS

ಒಡೆಯನನ್ನು ಹಾವಿನಿಂದ ಬಚಾವ್‌ ಮಾಡಿದ ಸಾಕು ನಾಯಿ.!

Published

on

ಮಂಗಳೂರು: ನಾಯಿಗೆ ಇರುವಷ್ಟು ನಿಯತ್ತು ಬಹುಶಃ ಯಾವುದೇ ಪ್ರಾಣಿಗಳಲ್ಲೂ ಇಲ್ಲ ಅನ್ನೋ ಮಾತು ಸಾಕಷ್ಟು ಬಾರಿ ರುಜುವಾತಾಗಿದೆ. ಇದೀಗ ಚಿತ್ರದುರ್ಗದ ಗ್ರಾಮವೊಂದರಲ್ಲಿ ಯಜಮಾನನ ಪ್ರಾಣ ಕಾಪಾಡುವ ಮೂಲಕ ಇದು ಮತ್ತೊಮ್ಮೆ ಸಾಬೀತಾಗಿದೆ. ಚಿತ್ರದುರ್ಗದ ಚಳ್ಳಕೆರೆ ತಾಲೂಕಿನ ದೇವರಮರಿಕುಂಟೆ ಎಂಬಲ್ಲಿ ಈ ಘಟನೆ ನಡೆದಿದ್ದು ಜನರು ನಾಯಿಯ ನಿಯತ್ತಿಗೆ ಶರುಣು ಎಂದಿದ್ದಾರೆ. ಪ್ರಗತಿಪರ ರೈತ ಡಾ. ಆರ್.ಎ.ದಯಾನಂದ ಮೂರ್ತಿ ಎಂಬವರನ್ನು ಅವರ ಸಾಕು ನಾಯಿ ನಾಗರ ಹಾವಿನಿಂದ ರಕ್ಷಣೆ ಮಾಡಿದೆ.

snake attack

ಈ ನಾಲ್ಕು ತಿಂಗಳ ಮಗುವಿನ ಸಾಧನೆ ಕೇಳಿದ್ರೆ ಶಾಕ್ ಆಗ್ತೀರಾ..!

ತೋಟದಲ್ಲಿ ಕೆಲಸ ಮಾಡಿಕೊಂಡಿದ್ದ ದಯಾನಂದ ಮೂರ್ತಿ ಅವರು ವಿಶ್ರಾಂತಿಗೆ ಅಂತ ಮಾವಿನ ಮರಕ್ಕೆ ಒರಗಿಕೊಂಡು ಮಲಗಿದ್ದಾರೆ. ಈ ವೇಳೆ ಮರದ ಇನ್ನೊಂದು ಪಕ್ಕದಲ್ಲಿದ್ದ ನಾಗರಹಾವು ಇವರನ್ನು ಗಮನಿಸಿ ಹೆಡೆಯೆತ್ತಿ ನಿಂತಿದೆ. ಆದ್ರೆ ನಾಗರ ಹಾವು ತನ್ನ ಹಿಂದೆ ಇದೆ ಅನ್ನೋ ವಿಚಾರ ದಯಾನಂದ ಮೂರ್ತಿ ಅವರ ಗಮನಕ್ಕೆ ಬಂದಿರಲಿಲ್ಲ. ಇದೇ ವೇಳೆ ಮಾಲೀಕನನ್ನು ಹಿಂಬಾಲಿಸಿಕೊಂಡು ಬಂದಿದ್ದ ನಾಯಿ ಹಾವನ್ನು ಗಮನಿಸಿದೆ. ತಕ್ಷಣ ಬೊಗಳುತ್ತಾ ಇನ್ನೊಂದು ಬದಿಗೆ ಹಾವಿನ ಗಮನವನ್ನು ಸೆಳೆದಿದೆ. ನಾಯಿ ಯಾಕೆ ಹೀಗೆ ತನ್ನ ಹಿಂದಿನಿಂದ ಬೊಗಳುತ್ತಿದೆ ಅಂತ ಗಮನಿಸಿದ ರೈತನಿಗೆ ತನ್ನ ಹಿಂದೆ ಇದ್ದ ದೊಡ್ಡ ನಾಗರ ಹಾವು ಕಾಣಿಸಿದೆ. ತಕ್ಷಣ ಅಲ್ಲಿಂದ ಎದ್ದು ದೂರು ಹೋದ ರೈತ ದಯಾನಂದ ಮೂರ್ತಿ ಬಳಿಕ ಹಾವನ್ನು ತೋಟದಿಂದ ದೂರ ಓಡಿಸಿದ್ದಾರೆ. ಸಾಕು ನಾಯಿ ತೋರಿದ ನಿಯತ್ತಿನಿಂದಾಗಿ ನಾಗರ ಹಾವು ಕಚ್ಚುವುದರಿಂದ ದಯಾನಂದ ಮೂರ್ತಿ ಅವರು ಬಚಾವ್ ಆಗಿದ್ದಾರೆ. ಇದೀಗ ಈ ವಿಚಾರ ಸಾಕಷ್ಟು ಸುದ್ದಿಯಾಗಿದ್ದು, ನಾಯಿಯ ನಿಯತ್ತನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ.

Continue Reading

LATEST NEWS

Trending