ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಳ್ಳತನ ,ದರೋಡೆ ಮತ್ತಿತರ ಕಾರಣಗಳಿಂದ ಸುತ್ತುಗಳನ್ನು ಕಳೆದುಕೊಂಡವರಿಗೆ ಅವರ ಚಿನ್ನಾಭರಣ ಸೊತ್ತು ಮತ್ತು ನಗದನ್ನು ಹಸ್ತಾಂತರಿಸಲಾಯಿತು.
ಉಡುಪಿ : ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಳ್ಳತನ ,ದರೋಡೆ ಮತ್ತಿತರ ಕಾರಣಗಳಿಂದ ಸುತ್ತುಗಳನ್ನು ಕಳೆದುಕೊಂಡವರಿಗೆ ಅವರ ಚಿನ್ನಾಭರಣ ಸೊತ್ತು ಮತ್ತು ನಗದನ್ನು ಹಸ್ತಾಂತರಿಸಲಾಯಿತು.
ಪೊಲೀಸ್ ಕವಾಯತು ಮೈದಾನದಲ್ಲಿ ನ್ಯಾಯಾಲಯದಿಂದ ಅನುಮತಿ ಪಡೆದು ಹಿಂತಿರುಗಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಕಳ ಗ್ರಾಮಾಂತರ ಠಾಣೆಯ 1 ಪ್ರಕರಣ, ಹಿರಿಯಡ್ಕ |, ಬೈಂದೂರು 1, ಕೊಲ್ಲೂರು 1, ಕಾಪು 1, ಕೋಟ 2, ಮಲ್ಪೆ 2, ಉಡುಪಿ ನಗರ 3, ಕುಂದಾಪುರ 5, ಪಡುಬಿದ್ರಿ 4. ಕುಂದಾಪುರ ಗ್ರಾಮಾಂತರ 4, ಬ್ರಹ್ಮಾವರ 5, ಹಾಗೂ ಮಣಿಪಾಲ ಠಾಣೆಯ 10 ಪ್ರಕರಣ ಸೇರಿ ಒಟ್ಟು 40 ಪ್ರಕರಣಗಳಲ್ಲಿ ವಶಪಡಿಸಿಕೊಂಡ ಸೊತ್ತುಗಳನ್ನು ವಾರೀಸುದಾರರಿಗೆ ಹಸ್ತಾಂತರಿಸಲಾಯಿತು.
ಈ ಪ್ರಕರಣಗಳಲ್ಲಿ 7 ಮೋಟಾರು ವಾಹನ ಅಂದಾಜು ಬೆಲೆ ರೂ. 2,94.000, ಚಿನ್ನ ಒಟ್ಟು 1 ಕೆಜಿ 195 ಗ್ರಾಂ ಅಂದಾಜು ಬೆಲೆ ರೂ. 68,23,810 ,ಬೆಳ್ಳಿ ಒಟ್ಟು 1 ಕೆಜಿ 192 ಗ್ರಾಂ ಅಂದಾಜು ಬೆಲೆ ರೂ. 88,510, ಮೊಬೈಲ್ ಫೋನ್ 10 ಅಂದಾಜು ಬೆಲೆ ರೂಪಾಯಿ 75,700 ಮತ್ತು ನಗದು ರೂಪಾಯಿ 1,70,150 ಒಳಗೊಂಡಿದ್ದು, ಒಟ್ಟಾರೆ ರೂ. 74,52,17 ಮೌಲ್ಯದ ಸೊತ್ತುಗಳನ್ನು ಹಸ್ತಂತರಿಸಲಾಯಿತು.
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ. ಹೆಚ್ ಸೊತ್ತುಗಳನ್ನು ಹಸ್ತಾಂತರಿಸಿದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಸ್.ಟಿ. ಸಿದ್ದಲಿಂಗಪ್ಪ, ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಹಾಗೂ ಸೊತ್ತು ಪಡಕೊಂಡ ನಾಗರೀಕರು ಈ ಪೆರೇಡ್ ನಲ್ಲಿ ಭಾಗವಹಿಸಿದ್ದರು.