Connect with us

    LATEST NEWS

    ಪತಿ ರಾಮಕೃಷ್ಣನ ಅಕ್ರಮ ಸಂಬಂಧಕ್ಕೆ ಬಲಿಯಾದಳು ಅಮಾಯಕ ವಿಶಾಲ ಗಾಣಿಗ. ..!

    Published

    on

    ಉಡುಪಿ : ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ‌ ನಡೆದ ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ‌ ನಡೆದ ವಿಶಾಲ ಗಾಣಿಗ ಕೊಲೆ ಪ್ರಕರಣದಲ್ಲಿ ಒಂದೊಂದೇ ರಹಸ್ಯ ಬಯಲಾಗುತ್ತಿದೆ. ಆರೋಪಿ ವಿಶಾಲ ಗಾಣಿಗರ ಪತಿ ರಾಮಕೃಷ್ಣ ತನ್ನ ಕರ್ಮಕಾಂಡದ ರಹಸ್ಯಗಳನ್ನು ಎಳೆಎಳೆಯಾಗಿ ಪೊಲೀಸರಲ್ಲಿ ಬಿಚ್ಚಿಟ್ಟಿದ್ದಾನೆ ಎಂಬ ಮಾಹಿತಿಗಳು ಲಭ್ಯವಾಗಿವೆ. ಕೊಲೆ ಪ್ರಕರಣದಲ್ಲಿ ಒಂದೊಂದೇ ರಹಸ್ಯ ಬಯಲಾಗುತ್ತಿದೆ. ಆರೋಪಿ ವಿಶಾಲ ಗಾಣಿಗರ ಪತಿ ರಾಮಕೃಷ್ಣ ತನ್ನ ಕರ್ಮಕಾಂಡದ ರಹಸ್ಯಗಳನ್ನು ಎಳೆಎಳೆಯಾಗಿ ಪೊಲೀಸರಲ್ಲಿ ಬಿಚ್ಚಿಟ್ಟಿದ್ದಾನೆ ಎಂಬ ಮಾಹಿತಿಗಳು ಲಭ್ಯವಾಗಿವೆ.

    ತನ್ನ ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಪತ್ನಿಯನ್ನು ಮುಗಿಸಿದ್ದಾಗಿ ಪೊಲೀಸ್‌ ತನಿಖೆಯಿಂದ ಬಯಲಾಗಿದೆ. ಆರಂಭದಲ್ಲಿ ಯಾವುದೇ ಸುಳಿವು ಇಲ್ಲದ ಈ ಕೊಲೆ ಚಿನ್ನಾಭರಣಕ್ಕಾಗಿ‌ ಮಾಡಲಾಗಿದೆ ಎಂದು ಸಂಶಯ ಪೊಲೀಸರು ವ್ಯಕ್ತಪಡಿಸಿದ್ದರು.

    ವಿಶಾಲಳ ಕೊಲೆಯ ಹಿಂದೆ ಏನೋ ದೊಡ್ಡ ಮಾಸ್ಟರ್ ಪಲ್ಆನ್ ಇದೆ ಅಂತ ಅರಿತ ಉಡುಪಿನ ಎಸ್‌ ಪಿ ವಿಷ್ಣುವರ್ಧನ ಅವರ ಮಾರ್ಗದರ್ಶನದಂತೆ ಸಿಕ್ಕಿದ್ದ ಸಣ್ಣ ಕ್ಲೂ ವನ್ನು ಬೆಂಬತ್ತಿ ಹೋದ ಮಣಿಪಾಲದ ಪಿಐ ಮಂಜುನಾಥ್, ಮಲ್ಪೆ ಸಿಪಿಐ ಶರಣ ಗೌಡ,ಮಣಿಪಾಲ ಪಿಎಸ್ಐ ರಾಜಶೇಖರ ವಂದಲಿ ಹಾಗೂ ಕಾರ್ಕಳ ಪಿಎಸ್ಐ ಮಧು ಅವರ ತಂಡ ಉತ್ತರ ಪ್ರದೇಶಕ್ಕೆ ತೆರಳಿ, ಅಲ್ಲಿ ದೊರೆತ ಮಾಹಿತಿಯಂತೆ ಆರೋಪಿ ಸ್ವಾಮಿನಾಥ್ ಗೋರಖಪುರದಲ್ಲಿ ಇರುವುದನ್ನು ಪತ್ತೆಹಚ್ಚಿದ್ದರು.

    ಬಳಿಕ ಅಲ್ಲಿಂದ ತಪ್ಪಿಸಿದ್ದ ಸ್ವಾಮೀನಾಥನನ್ನು ನೇಪಾಳ ಗಡಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಅವನನ್ನು ತೀವ್ರ ವಿಚಾರಣೆ ನಡೆಸಿದಾಗ ರಹಸ್ಯ ಬಯಲಾಗಿ ಪ್ರಮುಖ ಸೂತ್ರಧಾರ ಮತ್ತು ಆರೋಪಿ ಪತಿ ರಾಮಕೃಷ್ಣನನ್ನು ಬಂಧಿಸಿಸಲು ಪೊಲೀಸರಿಗೆ ಸಾಧ್ಯವಾಯಿತು. ಬಳಿಕ ಆರೋಪಿ ರಾಮಕೃಷ್ಣನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ಕೊಲೆಯ ಹಿಂದಿನ ರಹಸ್ಯ ಬಯಲಾಗಿದೆ.

    ಡಾರ್ಲಿಂಗ್‌ ಡಾರ್ಲಿಂಗ್‌ ಅಂತಿದ್ದ :
    ಆರೋಪಿ ರಾಮಕೃಷ್ಣ ಗಾಣಿಗ ಹಾಗೂ ಪತ್ನಿ ವಿಶಾಲಾ ಗಾಣಿಗ ದುಬೈನಲ್ಲಿ ನೆಲೆಸಿದ್ದರು. ಆದರೆ ರಾಮಕೃಷ್ಣ ಗಾಣಿಗ ಉಡುಪಿ ಜಿಲ್ಲೆಯ ಬೈಂದೂರು ಸಮೀಪದ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಇದೇ ವಿಚಾರವಾಗಿ ಪತ್ನಿ ವಿಶಾಲಾ ಗಾಣಿಗ ಬಳಿಯಲ್ಲಿ ವಿಚ್ಚೇಧನ ನೀಡೋದಕ್ಕೂ ಪದೇ ಪದೇ ಒತ್ತಾಯ ಮಾಡುತ್ತಿದ್ದ.

    ಆದರೆ ವಿಶಾಲಾ ಗಾಣಿಗ ತನ್ನ ಪತಿಯಿಂದ ದೂರವಾಗೋದಕ್ಕೆ ಸಿದ್ದರಿರಲಿಲ್ಲ.ಇದಕ್ಕಾಗಿ ವಿಶಾಲ ಗಾಣಿಗಳನ್ನು ಕೂಲಾಗಿ ಮರ್ಡರ್ ಮಾಡಲು ಒಳಗಿಂದೊಳಗೆ ಪ್ಲಾನ್ ರೂಪಿಸಿದ್ದ. ವಿಶಾಲಾಳ ಹತ್ಯೆಗೆ ರಾಮಕೃಷ್ಣ ಸುಮಾರು ಆರು ತಿಂಗಳ ಹಿಂದೆಯೇ ಪ್ಲ್ಯಾನ್‌ ಮಾಡಿದ್ದ. ಅಂದಿನಿಂದಲೇ ಪತ್ನಿಯ ಮೇಲೆ ಅಪಾರವಾದ ಪ್ರೀತಿಯನ್ನು ತೋರಿಸುತ್ತಿದ್ದ.

    ಪದೇ ಪದೇ “ಡಾರ್ಲಿಂಗ್‌,,,ಡಾರ್ಲಿಂಗ್‌” ಅಂತಾನೇ ಕರೆಯುತ್ತಿದ್ದ.ಪತ್ನಿಯ ಕಡೆಯವರಿಗೆ ತನ್ನ ಮೇಲೆ ಯಾವುದೇ ರೀತಿಯಲ್ಲಿಯೂ ಅನುಮಾನ ಬರಬಾರದು ಅನ್ನೋ ಕಾರಣಕ್ಕೆ ಪತ್ನಿ ವಿಶಾಲಾ ಗಾಣಿಗ ಹೆಸರಲ್ಲಿ ಒಂದಿಷ್ಟು ಆಸ್ತಿ ಮಾಡಿಟ್ಟಿದ್ದ. ಕಳೆದ ಆರು ತಿಂಗಳಿನಿಂದಲೂ ಹೆಚ್ಚು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದು, ಊರಿಗೆ ಬಂದಾಗಲಂತೂ ಇಬ್ಬರೂ ಅನ್ಯೋನ್ಯವಾಗಿದ್ದಾರೆಂಬಂತೆ ನಾಟಕವಾಡುತ್ತಿದ್ದ. ಅಲ್ಲದೇ ಕೊಲೆ ಮಾಡಿದ ನಂತರ ದಲ್ಲಿಯೂ ಪತ್ನಿಗೆ “ಡಾರ್ಲಿಂಗ್‌” ಅಂತಾನೇ ಮಸೇಜ್‌ ಮಾಡಿದ್ದಾನೆ ಅಂತಾ ವಿಶಾಲಾಳ ಆಪ್ತರು ಹೇಳಿದ್ದಾರೆ. ಆದರೆ ವಿಶಾಲಳನ್ನು ದುಬೈಯಲ್ಲಿ ಏನೂ ಮಾಡಲು ಸಾಧ್ಯವಿಲ್ಲ ಎಂದು ಅರಿತು ಪ್ಲಾನ್ ಮಾಡಿ ವಿಶಾಳಲನ್ನು ಸ್ವಂತ ಊರು ಬ್ರಹ್ಮಾವರಕ್ಕೆ ಕಳುಹಿಸಿ ಕೊಟ್ಟಿದ್ದ. ಬಳಿಕ ತನಗೆ ಬಹಳವಾಗಿ ಬೇಕಾದ ಇಬ್ಬರು ಮಿತ್ರರು ನಿನ್ನನ್ನು ಫ್ಲಾಟಿನಲ್ಲಿ ಭೇಟಿ ಮಾಡಲಿದ್ದಾರೆ ಅವರನ್ನು ಕೂರಿಸಿ ಕಾಫಿ ಕೊಟ್ಟು ಸತ್ಕರಿಸಿ ಕಳುಹಿಸು ಎಂದು ಆರೋಪಿ ರಾಮಕೃಷ್ಣ ಪತ್ನಿ ವಿಶಾಲ ಗಾಣಿಗಳನ್ನು ಮನವೊಲಿಸಿ ಫ್ಲ್ಯಾಟಿಗೆ ಬರುವಂತೆ ಮಾಡಿ ಬಳಿಕ ಅಲ್ಲೇ ಸುಪಾರಿ ಕಿಲ್ಲರ್ಸ್‌ ಗಳಿಂದ ಕೊಲೆ ಮಾಡಿಸಲು ಯಶಸ್ವಿಯಾಗಿದ್ದ, ಆದರೆ ಪೊಲೀಸರು ಕೊಲೆಯ ಬಳಿಕ ಫ್ಲಾಟಿನಲ್ಲಿ ಸಿಕ್ಕ ಆ 2 ಕಾಫಿ ಕಪ್ ಗಳ ಜಾಡು ಹಿಡಿದು ಬೆಂಬತ್ತಿ ರಾಮಕೃಷ್ಣನನ್ನು ಬಂಧಿಸಲು ಕೊನೆಗೂ ಯಶಸ್ವಿಯಾಗಿದ್ದಾರೆ.

    ಇದೀಗ ಪೊಲೀಸ್ ಕಸ್ಟಡಿಯ 4 ದಿನಗಳು ಪೂರ್ಣಗೊಳಿಸಿದ ಬೆನ್ನಲ್ಲೇ ಮತ್ತೆ ಆರೋಪಿ ರಾಮಕೃಷ್ಣನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗ ಮಾನ್ಯ ನ್ಯಾಯಾಲಯ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.

    ಉಡುಪಿ ಉದ್ಯಮಿ ಭಾಸ್ಕರ್ ಕೊಲೆ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿ ಕೊಲೆಗಡುಕರಿಗೆ ಜೀವಾವಧಿ ಶಿಕ್ಷೆ ವಿಧಿಸಲು ಯಶಸ್ವಿಯಾಗಿದ್ದ ಉಡುಪಿ ಪೊಲೀಸರು ಇದೀಗಾ ಸ್ವಂತ ಗಂಡನಿಂದ ಕೊಲೆಯಾದ ಅಮಾಯಕ ವಿಶಾಲ ಗಾಣಿಗ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವ ಮಹತ್ವದ ಜವಾಬ್ದಾರಿ ಉಡುಪಿ ಪೊಲೀಸರ ಮೇಲಿದೆ.

    LATEST NEWS

    ಡಿಜಿಟಲ್ ಅರೆಸ್ಟ್‌ಗೆ ಶಿಕ್ಷಕಿಗೆ ಹೃದಯಾಘಾತ : ಫೇಕ್ ಕಾಲ್‌ ಬಗ್ಗೆ ಇರಲಿ ಎಚ್ಚರ..!

    Published

    on

    ಮಂಗಳೂರು ( ಆಗ್ರಾ ) : “ನಿಮ್ಮ ಮಗಳು ಸೆಕ್ಸ್‌ ಜಾಲದಲ್ಲಿ ಭಾಗಿಯಾಗಿ ಸಿಕ್ಕಿಬಿದ್ದಿದ್ದಾಳೆ. ಆಕೆಯನ್ನು ಉಳಿಸಲು ರೂ.1 ಲಕ್ಷ ನೀಡಿ” ಇಂತಹ ಕರೆಯೊಂದನ್ನು ಸ್ವೀಕರಿಸಿದ ಮಹಿಳೆ ಹೃದಯಾಘಾತದಿಂದ ಮೃತ ಪಟ್ಟಿದ್ದಾರೆ. ಸರ್ಕಾರಿ ಬಾಲಕಿಯ ಜ್ಯೂನಿಯರ್ ಹೈಸ್ಕೂಲ್‌ನಲ್ಲಿ ಶಿಕ್ಷಕಿಯೂ ಆಗಿದ್ದ ಮಹಿಳೆ ಮಗಳ ಕುರಿತಾದ ಈ ಕರೆಯಿಂದ ಇಹಲೋಕ ತ್ಯಜಿಸಿದ್ದಾರೆ.

    ಸೆಪ್ಟಂಬರ್ 30 ರಂದು ಈ ಘಟನೆ ಆಗ್ರಾದಲ್ಲಿ ನಡೆದಿದ್ದು, 58 ವರ್ಷದ ಮಾಲ್ತಿ ವರ್ಮಾ ಎಂಬವರು ನಕಲಿ ಕರೆಯನ್ನೇ ಸತ್ಯವೆಂದು ನಂಬಿ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಮಾಲ್ತಿ ವರ್ಮಾ ಅವರನ್ನು ಡಿಜಿಟಲ್ ಅರೆಸ್ಟ್ ಮಾಡಿದ್ದ ನಕಲಿ ಪೊಲೀಸ್ ಅಧಿಕಾರಿ, ಆಕೆಗೆ ನಿರಂತರ ಕರೆ ಮಾಡಿದ್ದಾನೆ. ಮಗಳ ಕುರಿತಾಗಿ ಆತ ಹೇಳಿದ ವಿಚಾರವನ್ನು ಸತ್ಯ ಎಂದು ನಂಬಿದ ಆಕೆ ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ.

    ಮಗನಿಗೆ ಕರೆ ಮಾಡಿ ಮಗಳು ಈ ರೀತಿಯಾಗಿ ಸಿಕ್ಕಿಬಿದ್ದಿದ್ದು, ಆಕೆಯ ಬಿಡುಗಡೆಗೆ ಹಣ ಬೇಕು ತಕ್ಷಣ ಹಣ ಹಾಕು ಅಂದಿದ್ದಾರೆ. ಆದ್ರೆ ಕಾಲ್ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಮಗ ಇದೊಂದು ನಕಲಿ ಕಾಲ್ ಎಂಬುದಾಗಿ ತಾಯಿಗೆ ಮನವರಿಕೆ ಮಾಡಿದ್ದಾನೆ. ಆದ್ರೆ ವ್ಯಾಟ್ಸಾಪ್‌ ಡಿಪಿಯಲ್ಲಿ ಪೊಲೀಸ್ ಅಧಿಕಾರಿ ಫೋಟೋ ಹಾಕಿದ್ದ ವ್ಯಕ್ತಿ ಶಿಕ್ಷಕಿ ಮಾಲ್ತಿ ವರ್ಮಾ ಅವರಿಗೆ ಸತತ ನಾಲ್ಕು ಘಂಟೆಗಳ ಕಾಲ ಟಾರ್ಚರ್ ನೀಡಿದ್ದಾನೆ.

     

    ಮಾಲ್ತಿ ವರ್ಮಾ ಅವರಿಗೆ ಕರೆ ಮಾಡಿದ್ದ ನಂಬರ್ ಪಾಕಿಸ್ತಾನದ ಕೋಡ್ ಹೊಂದಿದ್ದು ಈ ಕರೆ ನಕಲಿ ಎಂದು ಮಾಲ್ತಿ ವರ್ಮಾ ಅವರಿಗೆ ಮನವರಿಕೆ ಮಾಡಲಾಗಿತ್ತು. ಆದ್ರೆ ಮಗಳ ಬಗ್ಗೆ ಬಂದ ಕೆಟ್ಟ ವಾರ್ತೆ ಕೇಳಿದ್ದ ತಾಯಿ ಮಾಲ್ತಿ ವರ್ಮಾ ಅವರಿಗೆ ಆಘಾತ ಆಗಿತ್ತು. ಜೊತೆಗೆ ಆರೋಪಿ ನಿರಂತರ ನಾಲ್ಕು ಘಂಟೆಗಳ ಕಾಲ ಕರೆ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದು ಕೂಡಾ ಇವರಿಗೆ ಘಾಸಿಯಾಗಿದೆ. ಈ ಡಿಜಿಟಲ್‌ ಅರೆಸ್ಟ್‌ನಿಂದ ಭಯ ಹಾಗೂ ಮಾನಸಿಕ ಒತ್ತಡಕ್ಕೆ ಒಳಗಾದ ಮಾಲ್ತಿ ವರ್ಮಾ ಅವರಿಗೆ ಮನೆಗೆ ಬಂದ ಬಳಿಕ ಹೃದಯಾಘಾತವಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ರೂ ಚಿಕಿತ್ಸೆ ಫಲಕಾರಿ ಆಗದೆ ಇಹಲೋಕ ತ್ಯಜಿಸಿದ್ದಾರೆ. ಈ ಕುರಿತು ಸಮಗ್ರ ತನಿಖೆ ನಡೆಸಲಾಗುವುದು ಎಂದು ಆಗ್ರಾದ ಎಸಿಪಿ ಮಯಾಂಕ್ ತಿವಾರಿ ತಿಳಿಸಿದ್ದಾರೆ..

    Continue Reading

    LATEST NEWS

    3 ಸಾವಿರ ಹಣಕ್ಕೆ ಬಿತ್ತು 2 ಹೆ*ಣ; ಗೆಳೆಯರನ್ನೇ ಕೊಡಲಿಯಿಂದ ಕೊಚ್ಚಿ ಕೊಂ*ದ ಪಾಪಿ!

    Published

    on

    ಮಂಗಳೂರು/ಕೊಡಗು : ಕುಶಾಲನಗರ ತಾಲೂಕಿನ ಕೂಡು ಮಂಗಳೂರು ಗ್ರಾಮದ ಬಸವೇಶ್ವರ ಬಡಾವಣೆ ಕಳೆದ ರಾತ್ರಿ ರ*ಕ್ತಸಿಕ್ತವಾಗಿದೆ. ಕೊಡಲಿಯಿಂದ ಕೊಚ್ಚಿ ಇಬ್ಬರನ್ನು ಕೊ*ಲೆ ಮಾಡಲಾಗಿದೆ. ಓರ್ವ ಸ್ಥಳದಲ್ಲೇ ಮೃ*ತಪಟ್ಟಿದ್ದು, ಮತ್ತೋರ್ವನ ತಲೆಯ ಮೇಲೆ ಕೊಡಲಿ ತೂರಿತ್ತು. ಕೊಡಲಿ ಸಮೇತ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ತಲೆಯಿಂದ ಕೊಡಲಿ ತೆಗೆಯುತ್ತಿದ್ದಂತೆ ಆತ ಇಹಲೋಕ ತ್ಯಜಿಸಿದ್ದಾನೆ.

    ಗೆಳೆತನಕ್ಕೆ ಬೆಂಕಿ ಇಟ್ಟ ಹಣಕಾಸು ವ್ಯವಹಾರ:

    ಬಸವೇಶ್ವರ ಬಡವಾಣೆಯ ಜೋಸೆಫ್, ಅವನ ಪಕ್ಕದ ಮನೆಯ ಗಿರೀಶ್​ ಮತ್ತು ಸುಂದರ ನಗರದ ವಸಂತ್ ಮೂವರು ಸ್ನೇಹಿತರು. ಇವರ ಸ್ನೇಹ ನೆನ್ನೆ ಮೊನ್ನೆಯದಲ್ಲ. ಕಳೆದ 15-20 ವರ್ಷಗಳಿಂದ ಎಲ್ಲರೂ ಒಟ್ಟಿಗೇ ಕೆಲಸ ಮಾಡ್ತಾ ಇದ್ದವರು. ಮನೆ ಮನೆಗೆ ತೆರಳಿ ವೆಲ್ಡಿಂಗ್ ಮಾಡಿಕೊಡುವುದು, ಬಂದ ಹಣವನ್ನು ಹಂಚಿಕೊಳ್ಳುವುದು ಮಾಡುತ್ತಿದ್ದರು.

    ಕೆಲಸಕ್ಕೆ ಓಡಾಡಲೆಂದೇ ಜೋಸೆಫ್ ಆಟೋ ತೆಗೆದುಕೊಂಡಿದ್ದ. ಅದೇ ಆಟೋದಲ್ಲಿ ಎಲ್ಲರೂ ಒಟ್ಟಿಗೆ ಕೆಲಸಕ್ಕೆ ಹೋಗ್ತಾ ಇದ್ರು. ಆದ್ರೆ ಇತ್ತೀಚೆಗೆ ಕೆಲ ತಿಂಗಳಿನಿಂದ ಜೋಸೆಫ್ ಮತ್ತು ಗಿರೀಶನ ಮಧ್ಯೆ ಹಣಕಾಸು ವ್ಯವಹಾರಕ್ಕೆ ಸಂಬಂಧಪಟ್ಟಂತೆ ಭಿನ್ನಾಭಿಪ್ರಾಯ ತಲೆದೋರಿತ್ತು.

    ಗಿರೀಶ್​, ಜೋಸೆಫ್​ಗೆ 3 ಸಾವಿರ ರೂ ಕೊಡಬೇಕಿತ್ತು. ಹಲವು ಬಾರಿ ಹಣ ಕೇಳಿದ್ರೂ ಕೊಟ್ಟಿರಲಿಲ್ಲ. ಇದೇ ವಿಚಾರದಲ್ಲಿ ಜಗಳವಾಗಿ 15 ದಿನಗಳಿಂದ ಗಿರೀಶ, ಜೋಸೆಫ್​ ನ ಜೊತೆ ಕೆಲಸಕ್ಕೆ ಹೋಗುವುದನ್ನ ನಿಲ್ಲಿಸಿದ್ದ ಎನ್ನಲಾಗಿದೆ.

    ರಣಭೀ*ಕರ ಘಟನೆ :

    ನಿನ್ನೆ(ಅ.3) ಮಧ್ಯಾಹ್ನ ಕೂಡ ಜೋಸೆಫ್, ಗಿರೀಶನ ಬಳಿ ಹಣ ಕೊಡವಂತೆ ಕೇಳಿದ್ದ. ಕೊಡ್ತೀನಿ ಅಂತ ಸಮಾಧಾನದಿಂದಲೇ ಹೇಳಿದ್ದ. ಆದ್ರೆ ನಿನ್ನೆ ಸಂಜೆ 7.30ರ ಸುಮಾರಿಗೆ ಜೋಸೆಫ್​, ವಸಂತ್ ಮತ್ತು ಸಂಜು ಕೆಲಸ ಮುಗಿಸಿ ಆಟೋದಲ್ಲಿ ಮನೆಯ ಬಳಿ ಬಂದಿದ್ದಾರೆ. ಈ ಸಂದರ್ಭ ಅಲ್ಲೇ ಅಂಗಡಿ ಸಮೀಪ ನಿಂತಿದ್ದ ಮೋಹನ್ ಎಂಬಾತನ ಜೊತೆ ಮಾತನಾಡುವ ಸಲುವಾಗಿ ಜೋಸೆಫ್ ಆಟೋ ನಿಲ್ಲಿಸಿದ್ದಾನೆ.

    ಇದೇ ವೇಳೆ ಅಲ್ಲೇ ಇದ್ದ ಗಿರೀಶ್, ಪ್ಯಾಂಟ್ ಬಿಚ್ಚಿ ಜೋಸೆಫ್​ನತ್ತ ಅಸಹ್ಯವಾಗಿ ಸನ್ನೆ ಮಾಡಿದ್ದನಂತೆ. ಇದರಿಂದ ಕೋಪಗೊಂಡ ಜೋಸೆಫ್​ ಹೋಗಿ ಗಿರೀಶನಿಗೆ ಒದ್ದಿದ್ದಾನೆ. ಒದೆ ತಿಂದ ಗಿರೀಶ್ ಸೈಲೆಂಟಾಗಿ ಸೈಡ್​ಗೆ ಹೋಗಿದ್ದಾನೆ. ಅದಾದ ಬಳಿಕ ಜೋಸೆಫ್​, ವಸಂತ, ಸಂಜು ಆಟೋದಲ್ಲಿ ಅಲ್ಲಿಂದ 50 ಮೀಟರ್ ದೂರದಲ್ಲಿದ್ದ ತನ್ನ ಮನೆಯ ಬಳಿ ಬಂದು ಗಾಡಿ ನಿಲ್ಲಿಸಿದ್ದಾನೆ. ಇದೇ ಸಂದರ್ಭ ಕೊಡಲಿ ಹಿಡಿದು ಗಿರೀಶ್ ಆಟೋ ರಿಕ್ಷಾ ಹಿಂದೆ ಬಂದಿದ್ದು ಇವರಿಗೆ ಗೊತ್ತೇ ಆಗಲಿಲ್ಲ. ಜೋಸೆಫ್ ಆಟೋದಿಂದ ಇಳಿದು ಶರ್ಟ್​ ಬಿಚ್ಚಿ ಆಟೋ ಒಳಗೆ ಹಾಕುತ್ತಿದ್ದಂತೆ ಹಿಂಬದಿಯಿಂದ ಗಿರೀಶ್ ಕೊಡಲಿ ಬೀಸಿಯೇ ಬಿಟ್ಟಿದ್ದಾನೆ.

    ಇದನ್ನೂ ಓದಿ : BBK11: ಬಿಗ್​ಬಾಸ್​ ಮನೆಯಲ್ಲಿರೋ ಮಹಿಳಾ ಸ್ಪರ್ಧಿಗಳ ಖಾಸಗಿತನಕ್ಕೆ ಧಕ್ಕೆ; ಶೋ ವಿರುದ್ಧ ದೂರು ದಾಖಲು

    ಕುತ್ತಿಗೆ ಹಿಂಬದಿಗೆ ಬಲವಾದ ಪೆಟ್ಟುಬಿದ್ದು ಜೋಸೆಫ್ ಕುಸಿದಿದ್ದಾನೆ. ಅಲ್ಲೂ ಬಿಡದೆ ಬಿದ್ದಲ್ಲೆಗೆ ಮತ್ತೆ ಮೂರು ಬಾರಿ ಕೊ*ಚ್ಚಿದ್ದಾನೆ. ಇದೇ ಸಂದರ್ಭ ಆಟೋದಲ್ಲಿದ್ದ ವಸಂತ ಅಲಿಯಾಸ್ ಪುಟ್ಟ ಗಿರೀಶನನ್ನು ತಡೆಯಲು ಹೋಗಿದ್ದಾನೆ. ಆದ್ರೆ ಹುಚ್ಚನಂತಾಗಿದ್ದ ಗಿರೀಶ್​, ವಸಂತನ ತಲೆಗೆ ಒಂದೇ ಏಟಿಗೆ ಕೊಡಲಿ ಬೀಸಿದ್ದಾನೆ. ಕೊಡಲಿ ನೇರವಾಗಿ ವಸಂತನ ತಲೆಯೊಳಗೆ ಹೂತು ಹೋಗಿದೆ. ಅಷ್ಟರಲ್ಲಿ ಎಲ್ಲರೂ ಬಂದು ಗಿರೀಶನನ್ನ ಎಳೆದು ಹಾಕಿದ್ದಾರೆ.

    ಎಲ್ಲರೂ ಸೇರಿ ವಸಂತನನ್ನ ಮಡಿಕೇರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ಕೊಡಲಿ ತೆಗೆಯುತ್ತಿದ್ದಂತೆ ವಸಂತ ಕೂಡ ಉಸಿರು ಚೆಲ್ಲಿದ್ದಾನೆ. ಘಟನೆ ಬಳಿಕ ಗಿರೀಶನನ್ನ ಕುಶಾಲನಗರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಹಂತಕ ಗಿರೀಶನ ಗಾಂ*ಜಾ ವ್ಯಸನಿ. ಈಗಾಗಲೇ ಆತನ ವಿರುದ್ಧ ಹಲವು ಕೇಸ್​ ಕೂಡ ದಾಖಲಾಗಿದೆಯಂತೆ. ಸದ್ಯ ಕುಶಾಲನಗರ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಈ ಭೀಭತ್ಸ ಕೃ*ತ್ಯಕ್ಕೆ ಕುಶಾಲನಗರ ಬೆಚ್ಚಿ ಬಿದ್ದಿದೆ.

    Continue Reading

    DAKSHINA KANNADA

    ಜಾತ್ರಾ ವ್ಯಾಪಾರಿಯ ಪ್ರಾಮಾಣಿಕತೆ..! ಬೆಲೆಬಾಳುವ ಬ್ಯಾಗ್ ಮಾಲೀಕರಿಗೆ ವಾಪಾಸ್‌..!

    Published

    on

    ಕಾಪು : ಉಚ್ಚಿಲ ದಸರಾದಲ್ಲಿ ನಮ್ಮ ಸನಾತನ ಹಿಂದೂ ಜಾತ್ರಾ ವ್ಯಾಪಾರಸ್ಥರ ಸಂಘದ ಪ್ರಧಾನ ಕಾರ್ಯದರ್ಶಿ ರಘು ಧರ್ಮಸ್ಥಳ ಇವರಿಗೆ ದೇವಸ್ಥಾನದ ವಠಾರದಲ್ಲಿ 20,000.ಸಾವಿರ ನಗದು ಮತ್ತು ಕೆಲವೊಂದು ದಾಖಲೆ ಪತ್ರಗಳು, ಬ್ಯಾಗ್ ಸಮೇತ ಸಿಕ್ಕಿತ್ತು.


    ತಕ್ಷಣ ಅವರು ವಾರೀಸುದಾರರಾದ ಧರಣೇಂದ್ರ ಬಳ್ಳಾಂಜ ಅವರ ಫೋನ್ ನಂಬರನ್ನು ಸಂಪರ್ಕಿಸಿ ಸೊತ್ತುಗಳನ್ನು ತಲುಪಿಸಿ ಮಾನವೀಯತೆ ಮೆರೆದಿದ್ದಾರೆ. ಇವರ ಈ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

    Continue Reading

    LATEST NEWS

    Trending