Connect with us

    FILM

    ದಕ್ಷಿಣ ಭಾರತದ ಖ್ಯಾತ ವಿಲನ್ ವಿಧಿವಶ; “ಕೀರಿಕ್ಕಡನ್ ಜೋಸ್” ಇನ್ನಿಲ್ಲ

    Published

    on

    ಮಂಗಳೂರು/ತಿರುವನಂತಪುರಂ: ಮಲಯಾಳಂ ಚಿತ್ರರಂದ ಖ್ಯಾತ ನಟ, ವಿಲನ್ ಆಗಿ ಜನಪ್ರಿಯತೆ ಪಡೆದಿರುವ ಮೋಹನ್ ರಾಜ್ (70) ನಿನ್ನೆ (ಅ.1)ವಿಧಿವಶರಾಗಿದ್ದಾರೆ ಎಂದು ವರದಿಯಾಗಿದೆ.


    ‘ಕಿರೀಟಂ’ ಸಿನಿಮಾದ ‘ಕೀರಿಕ್ಕಡನ್ ಜೋಸ್’ ಎಂಬ ಪಾತ್ರದಲ್ಲಿ ಮಿಂಚಿದ್ದು, ಬಳಿಕ ಅದೇ ಹೆಸರಿನಿಂದ ಪ್ರಖ್ಯಾತಿಯಾಗಿದ್ದರು. ಮೋಹನ್ ಲಾಲ್ ಹಿರೋ ಆಗಿ ನಟಿಸಿದ್ದ ಈ ಸಿನಿಮಾ, ಮಲಯಾಳಂ ಚಿತ್ರರಂಗದಲ್ಲಿ ಬಿಗ್ ಹಿಟ್ ಸಿನಿಮಾದಲ್ಲಿ ಒಂದಾಗಿದೆ.
    ಚಿತ್ರರಂಗಕ್ಕೆ ಕಾಲಿಡುವ ಮುನ್ನ ಕೇಂದ್ರ ಸರ್ಕಾರದ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ಮೊದಲ ಸಿನಿಮಾ ಹಿಟ್ ಆದ ನಂತರ ಸಾಲು ಸಾಲು ಚಿತ್ರಗಳಲ್ಲಿ ನಟಿಸುವ ಅವಕಾಶ ಪಡೆದಿದ್ದರು. ಸುಮಾರು 300 ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ.


    ಮಲಯಾಳಂ, ತೆಲುಗು ಸಿನಿಮಾದಲ್ಲಿ ನಟಿಸುವ ಮೂಲಕ ದಕ್ಷಿಣ ಭಾರತದ ಖ್ಯಾತ ವಿಲನ್ ಆಗಿ ಗುರುತಿಸಿಕೊಂಡಿದ್ದರು. ಕೆಲವು ವರ್ಷಗಳ ಹಿಂದೆ ತೆಲುಗು ಸಿನಿಮಾದ ‘ಸ್ಪಂಟ್’ ದೃಶ್ಯವೊಂದರ ಚಿತ್ರೀಕರಣ ವೇಳೆ ಕಾಲಿಗೆ ಗಾಯವಾಗಿದ್ದು, ಚೇತರಿಸಿಕೊಳ್ಳಲು ಆಗಿರಲಿಲ್ಲ.
    ಇಂದು (ಅ.4) ತಿರುವನಂತಪುರಂನಲ್ಲಿ ಪ್ರಾರ್ಥೀವ ಶರೀರದ ಅಂತಿಮ ದರ್ಶನದ ಬಳಿಕ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲದವರು ತಿಳಿಸಿದ್ದಾರೆ.

    BIG BOSS

    BBK11: ಬಿಗ್​ಬಾಸ್​ ಮನೆಯಲ್ಲಿ ಅನುಷಾ ಹಾಗೂ ಚೈತ್ರಾ ಕುಂದಾಪುರ ಮಧ್ಯೆ ಶುರುವಾಯ್ತು ಯುದ್ಧ; ಅಸಲಿಗೆ ಆಗಿದ್ದೇನು?

    Published

    on

    ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 11 ಐದನೇ ವಾರಕ್ಕೆ ಕಾಲಿಟ್ಟಿದೆ. ನಿನ್ನೆ ಬಿಗ್​ಬಾಸ್​ ಮನೆಯಿಂದ ಮಾನಸ ಆಚೆ ಬಂದಿದ್ದರು. ಈಗ ಬಿಗ್​ಬಾಸ್​ ಮನೆಯಲ್ಲಿ 13 ಜನ ಉಳಿದುಕೊಂಡಿದ್ದಾರೆ. ಭವ್ಯಾ ಗೌಡ, ತ್ರಿವಿಕ್ರಮ್, ಚೈತ್ರಾ ಕುಂದಾಪುರ, ಗೌತಮಿ, ಮೋಕ್ಷಿತಾ, ಮಂಜು, ಧರ್ಮ ಕೀರ್ತಿ ರಾಜ್​, ಅನುಷಾ ರೈ, ಗೋಲ್ಡ್​ ಸುರೇಶ್, ಹನುಮಂತ, ಧನರಾಜ್ ಹಾಗೂ ಐಶ್ವರ್ಯ.

    ಬಿಗ್​ಬಾಸ್​ ಮನೆಯಲ್ಲಿ ಏನೇ ನಡೆದರೂ ಈ 13 ಸ್ಪರ್ಧಿಗಳ ಮಧ್ಯೆಯೇ ನಡೆಯಬೇಕು.​ ಈಗ ಹೊಸ ಪ್ರೋಮೋವೊಂದು ರಿಲೀಸ್​ ಆಗಿದೆ. ಆ ಪ್ರೋಮೋದಲ್ಲಿ ಬಿಗ್​ಬಾಸ್​ ಮನೆ ಮಂದಿಗೆ ಟಾಸ್ಕ್​ವೊಂದನ್ನು ಕೊಟ್ಟಿದ್ದಾರೆ. ಇದೇ ಪಗಡೆ ಆಟದಲ್ಲಿ ಚೈತ್ರಾ ಅವರು ಗೌತಮಿಯನ್ನು ಸೇಪ್​ ಮಾಡಿದ್ದಾರೆ. ಈ ಟಾಸ್ಕ್ ಮುಗಿದ ಬಳಿಕ ಅನುಷಾ ನಾವು ಅಲ್ಲೇ ಇದ್ವಿ ನಿನ್ನ ಕಣ್ಣಿಗೆ ಕಾಣಿಸಲಿಲ್ಲಾ? ಅಂತ ಕೇಳಿದ್ದಾರೆ. ಅದಕ್ಕೆ ಚೈತ್ರಾ, ನನ್ನ ಕಣ್ಣಿಗೆ ಕಾಣಿಸಿದ್ರೂ ನಾನು ಹಾಗೇಯೇ ಇರುತ್ತೇನೆ ಅಂತ ಹೇಳಿ ಅನುಷಾ ಅವರ ತಲೆಗೆ ಹೊಡೆದಿದ್ದಾರೆ. ಅದಕ್ಕೆ ಕೋಪಗೊಂಡ ಅನುಷಾ ಚೈತ್ರಾ ಅವರ ಮೇಲೆ ರೈಗಾಡಿದ್ದಾರೆ.

    ಆಗ ಚೈತ್ರಾ ನೀನು ಆಡಿದ ಮಾತನ್ನು ನೆನಪಿನಲ್ಲಿ ಇಟ್ಟುಕೊಳ್ಳುತ್ತೇನೆ ಅಂತ ವಾರ್ನ್ ಮಾಡಿದ್ದಾರೆ. ಇಂದು ರಾತ್ರಿ 9.30ಕ್ಕೆ ಈ ಎಪಿಸೋಡ್​ ಪ್ರಸಾರವಾಗಲಿದೆ. ಅಲ್ಲಿ ಯಾವ ವಿಚಾರಕ್ಕೆ ಈ ಗಲಾಟೆ ನಡೆಯುತ್ತು. ಆಮೇಲೆ ಏನೆಲ್ಲಾ ಆಯ್ತು ಎಂದು ಗೊತ್ತಾಗಲಿದೆ. ಒಟ್ಟಿನಲ್ಲಿ ಇಷ್ಟು ದಿನ ಒಳ್ಳೆಯ ಗೆಳತಿಯರಾಗಿದ್ದ ಚೈತ್ರಾ ಹಾಗೂ ಅನುಷಾ ಮಧ್ಯೆ ಸಣ್ಣ ಬಿರುಕು ಮೂಡಿದೆ.

    Continue Reading

    BIG BOSS

    ಮಾನಸಾ ಆಟಕ್ಕೆ ಬ್ರೇಕ್ ಹಾಕಿದ ಬಿಗ್ ಬಾಸ್

    Published

    on

    ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 11 4ನೇ ವಾರಕ್ಕೆ ಮಾನಸ ಅವರು ಆಚೆ ಬಂದಿದ್ದಾರೆ. ಈ ಬಾರಿಯ ಬಿಗ್​ಬಾಸ್​ ತುಂಬಾ ವಿಭಿನ್ನವಾಗಿ ಮೂಡಿ ಬರುತ್ತಿದೆ. ನಾಲ್ಕನೇ ವಾರಕ್ಕೆ ಬಿಗ್​ಬಾಸ್ ಆಟ ಮುಗಿಸಿ ಆಚೆ ಬಂದಿದ್ದಾರೆ.

    ಈ ವಾರ ಬಿಗ್​ಬಾಸ್​ ಮನೆಯಿಂದ ಆಚೆ ಹೋಗಲು ಒಟ್ಟು 12 ಮಂದಿ ನಾಮಿನೇಟ್​ ಆಗಿದ್ದರು. ಒಟ್ಟು 14 ಸ್ಪರ್ಧಿಗಳಲ್ಲಿ ಗೌತಮಿ ಮತ್ತು ತ್ರಿವಿಕ್ರಮ್‌ ಬಿಟ್ಟು ಉಳಿದ ಎಲ್ಲರೂ ನಾಮಿನೇಟ್ ಆಗಿದ್ದರು. ಅದರಲ್ಲೂ ಕ್ಯಾಪ್ಟನ್‌ ಹನುಮಂತ ಆಯ್ಕೆಯ ಅನುಸಾರ ಗೋಲ್ಡ್ ಸುರೇಶ್ ಅವರು ನೇರ ನಾಮಿನೇಟ್ ಆಗಿದ್ದರು.

    ಅಲ್ಲದೇ ಕಳೆದ ವಾರ ಬಿಗ್​ಬಾಸ್​ ಮನೆಯಿಂದ ಹಂಸಾ ಅವರು ಆಚೆ ಹೋಗುವಾಗ ವಿಶೇಷ ಅಧಿಕಾರವನ್ನ ಬಳಸಿ ಹನುಮಂತ ಅವರನ್ನು ನೇರವಾಗಿ ನಾಮಿನೇಟ್‌ ಮಾಡಿದ್ದರು. ಉಳಿದಂತೆ ಭವ್ಯಾ ಗೌಡ, ಚೈತ್ರಾ ಕುಂದಾಪುರ, ಮೋಕ್ಷಿತಾ ಪೈ, ತುಕಾಲಿ ಮಾನಸ , ಉಗ್ರಂ ಮಂಜು, ಅನುಷಾ ರೈ , ಧರ್ಮ ಕೀರ್ತಿರಾಜ್, ಐಶ್ವರ್ಯ, ಧನರಾಜ್​,‌ ಶಿಶರ್ ಶಾಸ್ತ್ರಿ ನಾಮಿನೇಟ್‌ ಆಗಿದ್ದರು.

    ಆದರೆ ಕೊನೆಯ ಕ್ಷಣದಲ್ಲಿ ಬಿಗ್​ಬಾಸ್​ ಮನೆಯಿಂದ ಮಾನಸ ತುಕಾಲಿ ಅವರು ಬಿಗ್​ಬಾಸ್​ ಮನೆಯಿಂದ ಆಚೆ ಬಂದಿದ್ದಾರೆ. ಇನ್ನೂ ಬಿಗ್​ಬಾಸ್​ ಮನೆಯಿಂದ ಮಾನಸ ಆಚೆ ಬರುತ್ತಿದ್ದಂತೆ ಮನೆಯ ಎಲ್ಲ ಸ್ಪರ್ಧಿಗಳು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಸದ್ಯ ಈಗ ಬಿಗ್​ಬಾಸ್​ ಮನೆಯಲ್ಲಿ 13 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ.

    Continue Reading

    FILM

    ಗುರುಪ್ರಸಾದ್ ಸಾವಿನಲ್ಲಿ ವಿಕೃತಿ ಕಾಣುವ ವ್ಯಕ್ತಿ ಜಗ್ಗೇಶ್: ಜಗದೀಶ್ ಆಕ್ರೋಶ

    Published

    on

    ನಿರ್ದೇಶಕ ಗುರುಪ್ರಸಾದ್ ಅವರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ ಆಯಿತು. ಕೂಡಲೇ ಜಗ್ಗೇಶ್ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದರು. ಆದರೆ ಅವರು ಗುರುಪ್ರಸಾದ್ ನಿಧನದ ಬಳಿಕ ಕೆಳಮಟ್ಟದಲ್ಲಿ ಟೀಕೆ ಮಾಡಿದ್ದು ಸರಿಯಲ್ಲ ಎಂದು ಬಿಗ್ ಬಾಸ್ ಖ್ಯಾತಿಯ ಲಾಯರ್ ಜಗದೀಶ್ ಅವರು ಹೇಳಿದ್ದಾರೆ. ಈ ಮನಸ್ಥಿತಿಯನ್ನು ವಿಕೃತಿ ಎಂದು ಜಗದೀಶ್ ಹೇಳಿದ್ದಾರೆ.

    ಗುರುಪ್ರಸಾದ್ ಸಾವಿನ ನಂತರ ಜಗ್ಗೇಶ್ ಹೇಳಿದ ಮಾತುಗಳನ್ನು ಜಗದೀಶ್ ಅವರು ತೀವ್ರವಾಗಿ ಖಂಡಿಸಿದ್ದಾರೆ.

    ವಾವ್​ ಜಗ್ಗೇಶ್.. ಸತ್ತ ವ್ಯಕ್ತಿ ಬಗ್ಗೆ ಎಂತಹಾ ವಿಶ್ಲೇಷಕ ಕೃತಿಯನ್ನು ಕೊಟ್ಟೆ. ಸಾವಿನಲ್ಲೂ ವಿಕೃತಿ ಕಾಣಬಹುದಾಗಿದೆ ಎಂಬುದನ್ನು ನಿನ್ನಿಂದ ಕಲಿಯಬೇಕಾಗಿದೆ. ಸಂಸ್ಕೃತಿಯೇ ಅದೇ ರೀತಿ ಇದೆಯೋ ಅಥವಾ ನಿನ್ನ ಮನಸ್ಥಿತಿಯೇ ಅಷ್ಟು ವಿಕೃತವಾಗಿದೆಯೋ ನನಗೆ ಗೊತ್ತಿಲ್ಲ. ಗುರುಪ್ರಸಾದ್​ಗೆ ಕೆರೆತ ಇತ್ತಾ? ಕೀವು, ರಕ್ತ ಬರುತ್ತಿತ್ತಾ? ಎಂಥ ಮನುಷ್ಯ ನೀನು? ಯಾವ ರೀತಿಯಲ್ಲಿ ಮನುಷ್ಯ ಎನ್ನಬೇಕೋ ತಿಳಿಯುತ್ತಿಲ್ಲ’ ಎಂದು ಜಗದೀಶ್ ಹೇಳಿದ್ದಾರೆ.

    ನಿನ್ನನ್ನು ನೀನು ರಾಘವೇಂದ್ರರ ಭಕ್ತ ಅಂತ ಹೇಳ್ತೀಯ. ರಾಘವೇಂದ್ರನ ಭಕ್ತನಾಗಿ, ನಿನಗೆ ಲೈಫ್ ಕೊಟ್ಟ ಡೈರೆಕ್ಟರ್ ಬಗ್ಗೆ ಈ ರೀತಿ ಮಾತಾಡ್ತೀಯ. ‘ಮಠ’ ಸಿನಿಮಾದಲ್ಲಿ ಗುರುಪ್ರಸಾದ್ ನಿನಗೆ ಲೈಫ್ ಕೊಟ್ಟ. ಜಗ್ಗೇಶ್ ಯಾರು ಅಂತ ಇಡೀ ಕರ್ನಾಟಕ ಮರೆತುಹೋಗಿತ್ತು. ಸಾವಿನಲ್ಲೂ ವಿಕೃತಿ ಕಾಣುವಂತಹ ವ್ಯಕ್ತಿ ನೀನು ಎಂಬುದು ನನಗೆ ಗೊತ್ತಿರಲಿಲ್ಲ’ ಎಂದು ಜಗ್ಗೇಶ್​ಗೆ ಜಗದೀಶ್ ಚಾಟಿ ಬೀಸಿದ್ದಾರೆ.

    Continue Reading

    LATEST NEWS

    Trending