Connect with us

    LATEST NEWS

    ಉಡುಪಿ: ವೈನ್‌ಶಾಪ್‌ನಲ್ಲಿ ಕಳ್ಳತನ; ಪ್ರಕರಣ ದಾಖಲು

    Published

    on

    ಉಡುಪಿ: ವೈನ್‌ಶಾಪ್‌ಗೆ ನುಗ್ಗಿ ಕಳ್ಳರು ಸಾವಿರಾರು ರೂ. ನಗದು ಹಾಗೂ ಮದ್ಯವನ್ನು ಕಳ್ಳತನ ಮಾಡಿದ ಘಟನೆ ನಡೆದಿದೆ ಉಡುಪಿಯಲ್ಲಿ ನಡೆದಿದೆ.

    ಅಲೆವೂರು ರಸ್ತೆಯಲ್ಲಿರುವ ವೈನ್‌ಶಾಪ್‌ವೊಂದರಲ್ಲಿ ಕ್ಯಾಶಿಯರ್‌ ಆಗಿ ಕೆಲಸ ಮಾಡಿಕೊಂಡಿರುವ ಸತೀಶ್‌ ಅವರು ಅ. 23ರಂದು ರಾತ್ರಿ ವ್ಯವಹಾರದ ಹಣವನ್ನು ಡ್ರಾವರ್‌ನಲ್ಲಿಟ್ಟು ವೈನ್‌ ಶಾಪ್‌ಗೆ ಬೀಗ ಹಾಕಿ ಮನೆಗೆ ತೆರಳಿದ್ದರು.

    ಮರುದಿನ ಬೆಳಗ್ಗೆ ಕಳ್ಳತನ ನಡೆದಿರುವ ಬಗ್ಗೆ ಗಮನಕ್ಕೆ ಬಂದಿದೆ. ಕಳ್ಳರು ವೈನ್‌ಶಾಪ್‌ನ ಶಟರ್‌ ಅನ್ನು ತೆಗೆದು ಡ್ರಾವರ್‌ನಲ್ಲಿಟ್ಟಿದ್ದ 19,200 ರೂ. ನಗದು ಹಾಗೂ ವಿವಿಧ ರೀತಿಯ ಮದ್ಯವನ್ನು ಕಳ್ಳತನ ಮಾಡಿದ್ದಾರೆ. ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Click to comment

    Leave a Reply

    Your email address will not be published. Required fields are marked *

    LATEST NEWS

    1.87 ಲಕ್ಷ ಮೌಲ್ಯದ ಗಾಂಜಾ ಮಾರಾಟ ; ಆರೋಪಿ ವಶಕ್ಕೆ

    Published

    on

    ಉಡುಪಿ: ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ ಘಟನೆ ಮಣಿಪಾಲ ಪೆರಂಪಳ್ಳಿಯ ಸಾಯಿರಾಧಾ ಟೌನ್‌ಶಿಪ್‌ ಬಳಿ ನಡೆದಿದೆ.

    ಉಡುಪಿ ಕೇಳಾರ್ಕಳಬೆಟ್ಟು ನಿವಾಸಿ ಅಬ್ದುಲ್‌ ಜಬ್ಬಾರ್‌ (27) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.

    ಸುಮಾರು 1,87,500 ಮೌಲ್ಯದ 2 ಕೆಜಿ 344 ಗ್ರಾಂ ತೂಕದ ಗಾಂಜಾ, ಒಂದು ಲಕ್ಷ ಮೌಲ್ಯದ APRILIA ಕಂಪೆನಿಯ ಸ್ಕೂಟರ್, 5.810 ನಗದು, 10 ಸಾವಿರ ಮೌಲ್ಯದ ಮೊಬೈಲ್, ಒಂದು ಚೂರಿ ಸಹಿತ ಒಟ್ಟು 3,04,610 ಲಕ್ಷ ಮೌಲ್ಯದ ಸೊತ್ತುಗಳನ್ನು ಸೆನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ಸೆನ್ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್ ರವರ ನೇತೃತ್ವದಲ್ಲಿ ಉಪ ನಿರೀಕ್ಷಕರಾದ ಪವನ್‌ ನಾಯಕ್, ಸಿಬ್ಬಂದಿಯವರಾದ ಪ್ರವೀಣ್ ಕುಮಾರ್‌, ಪ್ರವೀಣ್‌, ವೆಂಕಟೇಶ್‌, ರಾಜೇಶ್‌, ಯತೀನ್‌ ಕುಮಾರ್‌, ಪ್ರಶಾಂತ್ ಮತ್ತು ಚರಣ್‌ರಾಜ್‌ ರವರನ್ನೊಳಗೊಂಡ ತಂಡ ಆರೋಪಿಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ.

    ಇದನ್ನು ಓದಿ:ಅತ್ತಿಗೆ ಮೇಲೆ ಸ್ನೇಹಿತನ ಕಣ್ಣು ; ವಾರ್ನ್ ಮಾಡಿದ್ದಕ್ಕೆ ಬರ್ಬರ ಹ*ತ್ಯೆ

    Continue Reading

    LATEST NEWS

    ಅನಾರೋಗ್ಯದ ಸಂದರ್ಭದಲ್ಲಿ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡ ಸಂಗಾತಿ; ಮುತ್ತಿನಂಥ ಪತ್ನಿಗೆ ಡಿವೋರ್ಸ್‌ ನೀಡಿದ ಪತಿ

    Published

    on

    ಮಂಗಳೂರು: ವ್ಯಕ್ತಿಯೊಬ್ಬ ತನ್ನ ಕಷ್ಟ ಕಾಲದಲ್ಲಿ ಜೊತೆಯಾಗಿ ನಿಂತಿದ್ದ ಹೆಂಡ್ತಿಗೆ ಕೈಕೊಟ್ಟು ಇನ್ನೊಬ್ಬಳನ್ನು ಮದುವೆಯಾಗಿದ್ದಾನೆ. ಹೌದು ಆ ವ್ಯಕ್ತಿ ತಾನು ಪಾರ್ಶ್ವವಾಯುಗೆ ತುತ್ತಾಗಿ 6 ವರ್ಷಗಳ ಕಾಲ ಹಾಸಿಗೆ ಹಿಡಿದಾಗ, ಆತನನ್ನು ಯಾವುದೇ ಕಾರಣಕ್ಕೂ ಬಿಟ್ಟು ಹೋಗದೆ ಕಣ್ಣಲ್ಲಿ ಕಣ್ಣಿಟ್ಟು ಆರೈಕೆ ಮಾಡಿದಂತಹ ಮುತ್ತಿನಂಥ ಪತ್ನಿಗೆ ಡಿವೋರ್ಸ್‌ ಕೊಟ್ಟು ಇನ್ನೊಬ್ಬಳನ್ನು ಮದುವೆಯಾದ ಘಟನೆ ನಡೆದಿದೆ.

    ಪತಿ ಪಾರ್ಶ್ವವಾಯುಗೆ ತುತ್ತಾಗಿ ಹಾಸಿಗೆ ಹಿಡಿದ ಸಂದರ್ಭದಲ್ಲಿ ತನ್ನನ್ನು ಮಗುವಿನಂತೆ ಆರೈಕೆ ಮಾಡಿದ ಪತ್ನಿಗೆ ಡಿವೋರ್ಸ್‌ ನೀಡಿ ಮತ್ತೊಬ್ಬ ಮಹಿಳೆಯನ್ನು ಮದುವೆಯಾಗಿದ್ದಾನೆ.

    ಮಲೇಷ್ಯಾದ ನಿವಾಸಿಯಾಗಿರುವ ಈತ 2016 ರಲ್ಲಿ ನೂರುಲ್‌ ಸಯಾಜ್ ಸೈಜ್ವಾನಿ ಎಂಬ ಮಹಿಳೆಯನ್ನು ಮದುವೆಯಾಗುತ್ತಾನೆ. ಮದುವೆಯಾದ ಎರಡೇ ವರ್ಷಕ್ಕೆ ಆತ ಭೀಕರ ಕಾರು ಅಪಘಾತದಲ್ಲಿ ಪಾರ್ಶ್ವವಾಯುಗೆ ತುತ್ತಾಗಿ ಹಾಸಿಗೆ ಹಿಡಿಯುತ್ತಾನೆ. ಈ ಸಂದರ್ಭದಲ್ಲಿ ಸೈಜ್ವಾನಿ ಆತನನ್ನು ಬಿಟ್ಟು ಹೋಗದೆ ಸತತ ಆರು ವರ್ಷಗಳ ಕಾಲ ಅಂದರೆ ಅತ ಸಂಪೂರ್ಣವಾಗಿ ಗುಣಮುಖವಾಗುವವರೆಗೂ ನಾಸೊಗ್ಯಾಸ್ಟ್ರಿಕ್‌ ಟ್ಯೂಬ್‌ ಮೂಲಕ ಊಟ ಮಾಡಿಸುವುದರಿಂದ ಹಿಡಿದು ಡೈಪರ್‌ ಚೇಂಜ್‌ ಮಾಡುವವರೆಗೂ ಪತಿರಾಯನನ್ನು ಮಗುವಿನಂತೆ ಆರೈಕೆ ಮಾಡಿ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡಿದ್ದಾಳೆ.

    ಹೆಂಡತಿಯ ಆರೈಕೆಯಿಂದ ಸಂಪೂರ್ಣವಾಗಿ ಗುಣಮುಖನಾದ ಕೆಲವೇ ಸಮಯಗಳ ಬಳಿಕ ತನ್ನನ್ನು ಆರೈಕೆ ಮಾಡಿದ ಮುತ್ತಿನಂಥ ಪತ್ನಿಗೆ ಡಿವೋರ್ಸ್‌ ಕೊಟ್ಟು, ವಿಚ್ಛೇದನದ ಒಂದು ವಾರದ ಬಳಿಕ ಇನ್ನೊಬ್ಬ ಮಹಿಳೆಯನ್ನು ಮದುವೆಯಾಗಿದ್ದಾನೆ. ಸೈಜ್ವಾನಿ ಸೋಷಿಯಲ್‌ ಮೀಡಿಯಾದಲ್ಲಿ ಪತಿಯ ಎರಡನೇ ಮದುವೆಗೆ ಶುಭ ಕೋರಿದ್ದು, ಚಿನ್ನದಂತ ಹೆಂಡತಿಯನ್ನು ಬಿಟ್ಟು ಹೋದ ಆತನಿಗೆ ನೆಟ್ಟಿಗರು ಹಿಗ್ಗಾಮುಗ್ಗಾ ಬೈದಿದ್ದಾರೆ.

    Continue Reading

    BELTHANGADY

    ಬೆಳ್ತಂಗಡಿ ಮಲಂತಬೆಟ್ಟುವಿನಲ್ಲಿ ಹೆಜ್ಜೇನು ದಾಳಿ …!!

    Published

    on

    ಬೆಳ್ತಂಗಡಿ : ಸಂತ ತೆರೆಸಾ ಶಾಲೆಯ 8ನೇ ತರಗತಿ ವಿದ್ಯಾರ್ಥಿ ತೀರ್ಥೇಶ್ ಮೇಲಂತಬೆಟ್ಟು ಶಾಲೆಯಿಂದ ಮನೆ ಕಡೆ ಬರುತ್ತಿದ್ದರು. ಇವರ ಮೇಲೆ ತೀವ್ರವಾಗಿ ಹೆಜ್ಜೇನು ದಾಳಿ ನಡೆಸಿತ್ತು. ಮಗು ದಾರಿ ತೋರದೆ ಕೆಲ ಮನೆಗಳಿಗೆ ಓಡಿತ್ತು. ಭಯಭೀತಿಯಿಂದಾಗಿ ಮನೆ ಬಾಗಿಲು ಮುಚ್ಚಿತ್ತು.


    ಮೇಲಂತಬೆಟ್ಟು ಗ್ರಾಮದ ಬಳಿ ಹೆಜ್ಜೇನು ಜನರ ಮೇಲೆ ದಾಳಿ ಮಾಡಿದ್ದು, ಜನ ಭಯದಿಂದ ಓಡಿ ಹೋದರು. ಸುತ್ತಲಿನ ಮನೆಯವರು ಭೀತಿಯಿಂದ ಮನೆಬಾಗಿಲು ಮುಚ್ಚಿದರು.

    ಹೆಜ್ಜೇನು ದಾಳಿಯಿಂದ ನೋವು ಉರಿ ತಾಳಲಾರದೆ, ಅತ್ತು ಕರೆದರೂ ರಕ್ಷಣೆಗೆ ರಕ್ಷಣೆಗೆ ಯಾರೂ ಇಲ್ಲದಾಗ ಕೊನೆಯ ಉಪಾಯ ಇಲ್ಲದೆ ಪಂಚಾಯತ್ ಬಳಿ ಓಡಿದಾಗ ಪಂಚಾಯತ್ ಲೈಬ್ರರಿಯನ್ ಚಂದ್ರಾವತಿ ಯೊಗೀಶ್ ಪೂಜಾರಿ ಗೇರುಕಟ್ಟೆ ಬಂದು ಮುಚ್ಚಿದ ಬಾಗಿಲನ್ನು ತೆರೆದು ಮಗುವನ್ನು ಪಂಚಾಯತ್ ಒಳಗೆ ಕರೆಸಿಕೊಂಡು ಹೊದರು. ಆದರೂ ಬೆನ್ನು ಬಿಡದ ಹೆಜ್ಜೇನು ಆಗಲೂ ದಾಳಿ ನಡೆಸಿತು.

    ಮುಂದಕ್ಕೆ ಅಧ್ಯಕ್ಷರ ಕೊಠಡಿಯ ಒಳಗೆ ಹೋಗಿ ಬಾಗಿಲು ಮುಚ್ಚಿ ನೋಡಿದಾಗ ಅಲ್ಲಿಯೂ ಹೆಜ್ಜೇನು ಬಂದಿತ್ತು. ಆವಾಗ ಚಂದ್ರಮತಿಯು ಪೊರಕೆ ಸಹಾಯದಿಂದ ಬಹಳಷ್ಟು ಸಂಖ್ಯೆಯಲ್ಲಿದ್ದ ಹೆಜ್ಜೇನನ್ನು ಕೊಂದು ಮಗುವಿನ ಬಟ್ಟೆ ಬಿಚ್ಚಿಸಿ ಹೆಜ್ಜೇನು ಮುಳನ್ನು ತುರ್ತಾಗಿ ತೆಗೆದು ಮನೆಯವರಿಗೆ ಸುದ್ದಿ ಮುಟ್ಟಿಸಿದರು.

    ನಂತರ ಮಗುವನ್ನು ಆಸ್ಪತ್ರೆಗೆ ಸೇರಿಸಿ ಸೂಕ್ತ ಚಿಕಿತ್ಸೆ ನೀಡಲಾಯಿತು. ಮಗು ಈಗ ಆರೋಗ್ಯದಿಂದ ಚೇತರಿಸಿಕೊಳ್ಳುತ್ತಿದ್ದಾನೆ. ಪಂಚಾಯತ್ ನೌಕರ ಚಂದ್ರಾವತಿಯವರ ಸಮಯ ಪ್ರಜ್ಞೆ, ತಾಯಿ ಮಮತೆ, ಧೈರ್ಯ ಗ್ರಾಮಸ್ಥರ ಪ್ರಿತಿಗೆ ಪಾತ್ರವಾಯಿತು.

    Continue Reading

    LATEST NEWS

    Trending