Connect with us

    LATEST NEWS

    ಉಡುಪಿ : ಹೊಟ್ಟೆ ನೋವಿಗೆ ಆಸ್ಪತ್ರೆ ಸೇರಿದ್ದ ವಿದ್ಯಾರ್ಥಿನಿ ಮನೆಗೆ ಬಂದಳು ಹೆಣವಾಗಿ..! ನ್ಯಾಯದ ನಿರೀಕ್ಷೆಯಲ್ಲಿ ನಿಕಿತಾ ಪೋಷಕರು

    Published

    on

    ಉಡುಪಿಯ ಸಿಟಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯಕ್ಕೆ ಪ್ರತಿಭಾವಂತ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ ಎನ್ನುವ ಆರೋಪ ವ್ಯಕ್ತವಾಗಿದೆ.

    ಉಡುಪಿ : ಉಡುಪಿಯ ಸಿಟಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯಕ್ಕೆ ಪ್ರತಿಭಾವಂತ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ ಎನ್ನುವ ಆರೋಪ ವ್ಯಕ್ತವಾಗಿದೆ.

    ಕಾಪು ತಾಲೂಕಿನ ಪಡುಬಿದ್ರಿ ಸಮೀಪದ ಕೆಮ್ಮುಂಡೇಲು ನಿವಾಸಿ ಡಿಪ್ಲೊಮಾ ಇಂಜಿನೀಯರಿಂಗ್ ವಿದ್ಯಾರ್ಥಿನಿ 20 ವರ್ಷದ ನಿಕಿತಾ ವೈದ್ಯರ ಬೇಜವಾಬ್ದಾರಿಯಿಂದಾಗಿ ಸಾವು ಸಂಭವಿಸಿದೆ ಎಂದು ಮನೆ ಮಂದಿ ಆರೋಪಿಸಿದ್ದಾರೆ.

    ಈಕೆ  ಮಂಗಳೂರಿನ ಕೆಪಿಟಿಯಲ್ಲಿ ಡಿಪ್ಲೋಮೋ ವ್ಯಾಸಂಗ ಮಾಡುತ್ತಿದ್ದಳು. ಜನಾರ್ದನ ಶೋಭಾ ದಂಪತಿಗಳ ಏಕೈಕ ಮಗಳು ನಿಕಿತ ಭಾನುವಾರ ಬೆಳಿಗ್ಗೆ ಸಿಟಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ.

    ಹೊಟ್ಟೆ ನೋವು ಎಂಬ ಕಾರಣಕ್ಕೆ ಕಳೆದ ಬುಧವಾರ ನಿಕಿತಾಳನ್ನು ಸಿಟಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ಸ್ಕ್ಯಾನಿಂಗ್, ಎಂಡೋಸ್ಕೋಪಿ, ಸಿಟಿ ಸ್ಕ್ಯಾನ್ ಎಲ್ಲವನ್ನೂ ಮಾಡಲಾಗಿತ್ತು. ಬಳಿಕ ಸರಿಯಾದ ಮಾಹಿತಿ ನೀಡದೆ ಆಪರೇಷನ್ ನಡೆಸಿ ಮಗಳನ್ನು ಕೊಂದಿದ್ದಾರೆ ಎಂದೂ ಮನೆ ಮಂದಿ ಆರೋಪಿಸಿದ್ದಾರೆ.

    ಆಕೆಗೆ ಅಪೆಂಡಿಕ್ಸ್ ಆಗಿದೆ ಎಂದು ಆಪರೇಷನ್ ಮಾಡಿದ್ದ ವೈದ್ಯರು ಹೇಳಿದ್ದರು.

    ಆಕೆಯ ಶಸ್ತ್ರಚಿಕಿತ್ಸೆ ನಡೆದ ಬಳಿಕ ನಿಖಿತಾ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದೆ.

    ಲಂಗ್ಸ್ ನಲ್ಲಿ ನೀರು ತುಂಬಿದ ಪರಿಣಾಮ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ.

    ಇದರಿಂದ ಕಂಗಾಲಾದ ಪೋಷಕರು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ವರ್ಗಾಯಿಸುವಂತೆ ಒತ್ತಾಯಿಸಿದ್ದಾರೆ.

    ಆದರೆ ಸಿಟಿ ಆಸ್ಪತ್ರೆ ವೈದ್ಯರು ಯಾವುದೇ ಗಂಭೀರ ಸಮಸ್ಯೆ ಇಲ್ಲ ನಾವೇ ಚಿಕಿತ್ಸೆ ನೀಡುತ್ತೇವೆ ಎಂದಿದ್ದಾರೆ.

    ಬಳಿಕ ನಿಖಿತಾ ಆರೋಗ್ಯದಲ್ಲಿ ಏರುಪೇರು ಕಂಡು ಬಂದು ಈಕೆ ಭಾನುವಾರ ಮುಂಜಾನೆ ಸಾವನ್ನಪ್ಪಿದ್ದಾಳೆ.

    ಈ ನಡುವೆ ಆಸ್ಪತ್ರೆಯ ವೈದ್ಯರು ಆಕೆ ಸಾವಿಗೆ ಹೃದಯಘಾತ ಕಾರಣ ಎಂದು ಹೇಳಿ ಜಾರಿಕೊಳ್ಳುತ್ತಿದ್ದಾರೆ, ಮಣಿಪಾಲ ಆಸ್ಪತ್ರೆಗೆ ಶಿಫ್ಟ್ ಮಾಡಲು ಒಪ್ಪದ ಕಾರಣ ಆಕೆ ಸಾವು ಸಂಭವಿಸಿದೆ ಎಂದು ಪೋಷಕರು ಆರೋಪಿಸಿದ್ದಾರೆ.

    ನಿಕಿತಾ

    ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ನಿಕಿತಾಗೆ ನ್ಯಾಯ ಒದಗಿಸಿಕೊಡುವಂತೆ ಒತ್ತಾಯ ಕೇಳಿ ಬಂದಿದೆ.

    ಪೊಲೀಸ್ ದೂರು ನೀಡಲು ಕುಟುಂಬದವರು ಕೂಡಾ ಹಿಂದೇಟು ಹಾಕಿದ್ದಾರೆ. ಆಕೆಗೆ ನ್ಯಾಯ ಕೊಡಿಸಲು ಆಗ್ರಹಿಸಿ ಇಂದು ಬೆಳಿಗ್ಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಉಡುಪಿ ಸಿಟಿ ಆಸ್ಪತ್ರೆ ಮುಂಭಾಗ ಪ್ರತಿಭಟನೆ ನಡೆಸಿದರು.

    ಎಬಿವಿಪಿ ಕಾರ್ಯಕರ್ತರು ಸಂತ್ರಸ್ತೆ ಕುಟುಂಬಿಕರಿಗೆ ಪರಿಹಾರವನ್ನು ಕೂಡಲೇ ನೀಡಿ ಎಂದು ಆಗ್ರಹಿಸಿದರು.

    ಪ್ರತಿಭಟನೆ ತೀವ್ರಗೊಳ್ಳುತ್ತಿರುವಂತೆಯೇ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಆಸ್ಪತ್ರೆ ವೈದ್ಯಾಧಿಕಾರಿಗಳು ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಲು ಮುಂದಾಗಿದ್ದಾರೆ. ಆದರೆ ವೈದ್ಯರ ಮಾತನ್ನು ಕೇಳಲು ಪ್ರತಿಭಟನಾಕಾರರು ಸಿದ್ಧರಿರಲಿಲ್ಲ.

    ವೈದ್ಯರ ಬೇಜವಾಬ್ದಾರಿಯಿಂದಲೇ ತಮ್ಮ ಮಗಳು ಸಾವನ್ನಪ್ಪಿದ್ದಾಳೆ ಎಂದು ನಿಕಿತಾ ತಾಯಿ ಶೋಭಾ ದೂರಿದರು. ವೈದ್ಯರ ನಿರ್ಲಕ್ಷ್ಯದಿಂದಾಗಿ ತಮ್ಮ ಏಕೈಕ ಪುತ್ರಿಯನ್ನು ತಾವು ಕಳೆದುಕೊಂಡಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಅಲ್ಲದೆ ವೈದ್ಯರ, ಸಿಬ್ಬಂದಿಗಳ ಬೇಜವಾಬ್ದಾರಿಯಿಂದಲೇ ಈ ಸಾವು ಆಗಿದೆ ಎಂದು ನಿಕಿತಾ ಮನೆ ಮಂಧಿ ಆಕ್ರೋಶ ವ್ಯಕ್ತಪಡಿಸಿದರು.

    ಇಂತಹ ಘಟನೆ ಇನ್ನುಮುಂದೆ ಸಿಟಿ ಆಸ್ಪತ್ರೆಯಲ್ಲಿ ಮರುಕಳಿಸಬಾರದು ಎಂದು ಒತ್ತಾಯಿಸಿದರು.

    ಘಟನಾ ಸ್ಥಳಕ್ಕೆ ಆಗಮಿಸಿದ ಆಸ್ಪತ್ರೆ ವೈದ್ಯರು ತಮ್ಮ ಆಸ್ಪತ್ರೆ, ಸಿಬ್ಬಂದಿ ಕಡೆಯಿಂದ ಯಾವುದೇ ಲೋಪಗಳಾಗಿಲ್ಲ. ಸ್ಕ್ಯಾನಿಂಗ್, ಎಂಡೋಸ್ಕೋಪಿ, ಸಿಟಿ ಸ್ಕ್ಯಾನ್ ಎಲ್ಲವನ್ನೂ ಮಾಡಲಾಗಿತ್ತು.

    ಎಲ್ಲಾ ಮಾಹಿತಿಗಳನ್ನು ಮನೆಮಂದಿಗೆ ನೀಡಿ ನಿಕಿತಾಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ ಎಂದು ಸ್ಪಷ್ಟನೆ ನೀಡಿದರು. ಆದರೆ ವೈದ್ಯರ ಯಾವುದೇ ಮಾತನ್ನು ಕೇಳಲೂ ಪ್ರತಿಭಟನಾಕಾರರು ಸಿದ್ಧರಿರಲಿಲ್ಲ.
    ಬಳಿಕ ಎಬಿವಿಪಿ ನಾಯಕರು ಕೂಡಾ ವೈದ್ಯರನ್ನು ತರಾಟೆಗೆ ತೆಗೆದುಕೊಂಡರು. ಈ ಘಟನೆ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು.

    ಒಂದು ವಾರದೊಳಗೆ ಇದು ಪೂರ್ಣಗೊಳ್ಳಬೇಕು, ನಿಖಿತಾ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್‌ ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳನ್ನು ಒತ್ತಾಯಿಸಿದರು.

    ಒಂದು ವಾರದ ಒಳಗೆ ಪರಿಹಾರ ನೀಡದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಬಳಿಕ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದುಕೊಳ್ಳಲಾಯಿತು.

     

    DAKSHINA KANNADA

    ದತ್ತಿ ಇಲಾಖೆ ದೇವಸ್ಥಾನದಲ್ಲಿ ನಂದಿನಿ ತುಪ್ಪ ಬಳಕೆಗೆ ಸೂಚನೆ..!

    Published

    on

    ಮಂಗಳೂರು : ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಬಳಕೆಯ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಕರ್ನಾಟಕದ ದತ್ತಿ ಇಲಾಖೆ ಫುಲ್ ಅರ್ಲರ್ಟ್‌ ಆಗಿದೆ. ಕರ್ನಾಟಕ ದತ್ತಿ ಇಲಾಖೆಯ ದೇವಸ್ಥಾನಗಳಲ್ಲಿ ಕಡ್ಡಾಯವಾಗಿ ನಂದಿನಿ ತುಪ್ಪವನ್ನೇ ಬಳಕೆ ಮಾಡಬೇಕು ಎಂದು ಆದೇಶ ಹೊರಡಿಸಲಾಗಿದೆ.

    ಮುಜರಾಯಿ ಇಲಾಖೆಯ ಸಚಿವ ರಾಮಲಿಂಗಾರೆಡ್ಡಿ ಅವರು ಈ ಬಗ್ಗೆ ಇಲಾಖೆಗೆ ಸೂಚನೆ ನೀಡಿದ್ದಾರೆ. ಈ ಕುರಿತು ಸುತ್ತೋಲೆ ಹೊರಡಿಸಿರುವ ದತ್ತಿ ಇಲಾಖೆ ದೇವಸ್ಥಾನದ ಸೇವೆಗಳಿಗೆ , ದೀಪಗಳಿಗೆ, ಪ್ರಸಾದ ತಯಾರಿಗೆ ಮತ್ತು ಅನ್ನಛತ್ರದಲ್ಲಿ ಕಡ್ಡಾಯವಾಗಿ ನಂದಿನಿ ತುಪ್ಪ ಬಳಸುವಂತೆ ಸೂಚಿಸಿದೆ.

    ತಿರುಪತಿ ದೇವಾಲಯದ ಲಡ್ಡು ತಯಾರಿಗೆ ಕರ್ನಾಟಕದ ನಂದಿನಿ ತುಪ್ಪವೇ ರವಾನೆ ಆಗುತ್ತಿದೆ. ಆದ್ರೆ ಜಗನ್‌ ರೆಡ್ಡಿಯ ಸರ್ಕಾರದ ನಾಲ್ಕು ವರ್ಷ ನಂದಿನಿ ತುಪ್ಪ ತಿರುಪತಿಗೆ ಪೂರೈಕೆ ಮಾಡಿರಲಿಲ್ಲ. ಹೀಗಾಗಿ ತಿರುಪತಿ ಲಡ್ಡುವಿಗೆ ಬಳಕೆ ಮಾಡಿದ ತುಪ್ಪಕ್ಕೂ ನಂದಿನಿ ತುಪ್ಪಕ್ಕೂ ಯಾವುದೇ ಸಂಭಂಧ ಇಲ್ಲ ಎಂದು ಕೆಎಂಎಫ್‌ ಅಧ್ಯಕ್ಷ ಭೀಮಾನಾಯ್ಕ್‌ ಹೇಳಿದ್ದಾರೆ.

    Continue Reading

    LATEST NEWS

    ನಾಲ್ಕನೇ ಮಗುವೂ ಹೆಣ್ಣಾಯಿತೆಂದು ಹಸುಗೂಸನ್ನು ನೆಲಕ್ಕೆ ಬಡಿದು ಕೊಂ*ದ ತಂದೆ

    Published

    on

    ಮಂಗಳೂರು/ ಇಟ್ವಾ: ಹೆಣ್ಣು ಮಕ್ಕಳು ಹುಟ್ಟಿದರೆ ಮನೆಗೆ ಲಕ್ಷ್ಮಿ ಬಂದಳು ಎಂಬ ಸಂಭ್ರಮ ಹೆಚ್ಚಿನ  ಮನೆಗಳಲ್ಲಿ ಇರುತ್ತದೆ. ಭೇಟಿ ಬಚಾವೋ, ಭೇಟಿ ಪಡಾವೋ ಎಂಬುದಾಗಿ ಸರ್ಕಾರ ಹೆಣ್ಣು ಮಕ್ಕಳ ಬಗ್ಗೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಆದರೆ, ಹೆಣ್ಣು ಮಕ್ಕಳ ಬಗೆಗಿನ ತಾತ್ಸಾರ ಕಡಿಮೆ ಆಗಿಲ್ಲ ಎಂಬುದಕ್ಕೆ ಉತ್ತರಪ್ರದೇಶದಲ್ಲಿ ನಡೆದ ಈ ಘಟನೆ ಸಾಕ್ಷಿ.

    ನಾಲ್ಕನೇ ಮಗುವೂ ಹೆಣ್ಣಾಯಿತು ಎಂಬ ಕಾರಣಕ್ಕೆ ತಂದೆಯೇ ಹಸುಗೂಸನ್ನು ನೆಲಕ್ಕೆ ಬಡಿದು ಕೊಂ*ದಿರುವ ಕ್ರೂ*ರ ಘಟನೆ ನಡೆದಿದೆ. ಇಟ್ವಾ ಎಂಬಲ್ಲಿ ಈ ಕ್ರೌ*ರ್ಯ ನಡೆದಿದೆ.

    ನೆಲಕ್ಕೆ ಬಡಿದು ಕೊಂದ ಪಾಪಿ!

    30 ವರ್ಷದ ಬಬ್ಲು ದಿವಾಕರ್​ ಈ ಕೃ*ತ್ಯ ಎಸಗಿದ ತಂದೆ.  ಸದ್ಯ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಮೂರು ಹೆಣ್ಣು ಮಕ್ಕಳ ಬಳಿಕ ದಿವಾಕರ್​ ಗಂಡು ಮಗುವಿನ ನಿರೀಕ್ಷೆಯಲ್ಲಿದ್ದ. ಆದರೆ, ನಾಲ್ಕನೇ ಮಗುವೂ ಹೆಣ್ಣಾಯಿತು. ಇದರಿಂದ ಕೋಪಗೊಂಡ ಆತ ಭಾನುವಾರ(ಸೆ.15) ತಿಂಗಳ ಶಿಶುವನ್ನು ನೆಲಕ್ಕೆ ಎಸೆದಿದ್ದಾನೆ.

    ಮೊದಲ ಹೆಂಡತಿಯಿಂದ ಈಗಾಗಲೇ ಎರಡು ಹೆಣ್ಣು ಮಕ್ಕಳ ತಂದೆಯಾಗಿರುವ ದಿವಾಕರ್​ ಇದೇ ಕಾರಣದಿಂದ ಎರಡನೇ ಮದುವೆಯಾಗಿದ್ದ. ಎರಡನೇ ಹೆಂಡತಿಗೂ ಮೊದಲ ಮಗು ಹೆಣ್ಣಾಗಿತ್ತು. ಇದೀಗ ಎರಡನೇ ಮಗುವೂ ಹೆಣ್ಣಾಗಿದೆ. ಒಂದು ತಿಂಗಳ ಹಿಂದೆ ಮಗು ಜನಿಸಿದ್ದು, ಭಾನುವಾರ ಮಗು ತಾಯಿಯ ಮಡಿಲಲ್ಲಿ ಮಲಗಿತ್ತು. ಈ ವೇಳೆ ಡ ದಿವಾಕರ್​ ತಾಯಿಯಿಂದ ಮಗುವನ್ನು ಕಸಿದು, ನೆಲಕ್ಕೆ ಬಡಿದಿದ್ದಾನೆ. ತಕ್ಷಣಕ್ಕೆ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಮಗು ಅದಾಗಲೇ ಗಂಭೀ*ರ ಗಾ*ಯದಿಂದ ಮೃ*ತಪಟ್ಟಿತ್ತು.

    ಇದನ್ನೂ ಓದಿ : ಹನಿಟ್ರ್ಯಾಪ್ : ಸುಂದರಿ ಮನೆಗೆ ಕರೆದಳೆಂದು ಹೋಗಿ 40 ಲಕ್ಷ ಕಳೆದುಕೊಂಡ ಉದ್ಯಮಿ

    ಇದೀಗ ಹೆಂಡತಿ ನೀಡಿರುವ ದೂರಿನ ಆಧಾರದ ಮೇಲೆ. ಬಿಎನ್​ಎಸ್​ ಸೆಕ್ಷನ್​ 105ರ ಅಡಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

    Continue Reading

    LATEST NEWS

    ಮಂಗಳೂರು: ಮೂರು ದಿನದ ಬಿಎನ್‌ಐ ಬಿಗ್ ಬ್ರ್ಯಾಂಡ್ ಎಕ್ಸ್‌ಪೋ-2024ಗೆ ಚಾಲನೆ

    Published

    on

    ಮಂಗಳೂರು: ಉದ್ಯಮಿಗಳ ಮತ್ತು ವೃತ್ತಿಪರರ ಸಂಘಟನೆ ಬಿಸ್‌ನೆಸ್‌ ನೆಟ್‌ವರ್ಕ್ ಇಂಟರ್ ನ್ಯಾಶನಲ್‌ – ಬಿಎನ್ಐ ಮಂಗಳೂರು ಮತ್ತು ಉಡುಪಿ ವತಿಯಿಂದ ಬಿಗ್ ಬ್ರಾಂಡ್ಸ್ ಎಕ್ಸ್‌ಪೊ – 2024 ಪ್ರದರ್ಶನ ಇಂದು ಮಂಗಳೂರಿನ ಡಾ. ಟಿ.ಎಂ.ಎ. ಪೈ ಇಂಟರ್ ನ್ಯಾಶನಲ್‌ ಕನ್ವೆನ್ಶನ್‌ ಸೆಂಟರ್‌ ನಲ್ಲಿ ಆರಂಭಗೊಂಡಿತು. ಮೂರು ದಿನಗಳ ಕಾಲ ನಡೆಯುವ ಎಕ್ಸ್‌ಪೋವನ್ನು ರಿಬ್ಬನ್ ಕತ್ತರಿಸುವ ಮೂಲಕ ಸ್ಪೀಕರ್ ಯು ಟಿ ಖಾದರ್ ಚಾಲನೆ ನೀಡಿದರು.

    ಬಳಿಕ ಮಾತನಾಡಿದ ಖಾದರ್‌, ಇಂತಹ ಎಕ್ಸ್‌ಪೋಗಳು ನಮ್ಮ ರಾಜ್ಯ, ದೇಶಕ್ಕೆ ದೊಡ್ಡ ಮಟ್ಟದ ಕೊಡುಗೆಯನ್ನು ನೀಡಲು ಸಾಧ್ಯವಾಗುತ್ತದೆ. ಆರ್ಥಿಕವಾದ ಚಲನವಲನಗಳು ಎಲ್ಲಿ ಹೆಚ್ಚಾಗಿ ಆಗುತ್ತದೆಯೋ ಅಲ್ಲಿ ಉದ್ಯೋಗಾವಕಾಶ, ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಎಕ್ಸ್‌ಪೋ ಅತ್ಯಂತ ಯಶಸ್ವಿಯಾಗಲಿ ಎಂದು ಶುಭ ನುಡಿದರು.

    ಬಿಎನ್‌ಐ ಎಕ್ಸ್‌ಪೋದಲ್ಲಿ ವಿಶೇಷ ಪುರವಣಿಯನ್ನು ಕೂಡಾ ಬಿಡುಗಡೆಗೊಳಿಸಲಾಯಿತು. ಶಾಸಕ ವೇದವ್ಯಾಸ ಕಾಮತ್ ಇದನ್ನು ಬಿಡುಗಡೆಗೊಳಿಸಿದರು. ಈ ಬಗ್ಗೆ ಮಾತನಾಡಿದ ಅವರು, 125ಕ್ಕೂ ಹೆಚ್ಚಿನ ಮಳಿಗೆಗಳು ಈ ಎಕ್ಸ್‌ಪೋ ಯಶಸ್ವಿಯಾಲೆಂದು ಹಾರೈಸಿದರು. ಇಂತಹ ಎಕ್ಸ್‌ಪೋಗಳ ಪ್ರದರ್ಶನಗಳಿಗೆ ಸರಕಾರ ಪ್ರೋತ್ಸಾಹ ನೀಡಬೇಕು. ಆರ್ಥಿಕತೆಯ ವಿಚಾರದಲ್ಲಿ ಮುಂಚೂಣಿ ನಗರವಾಗಿರುವ ಮಂಗಳೂರಿನಲ್ಲಿ ಇಂತಹ ಎಕ್ಸ್‌ಪೋ ಮಾಡಲು ಪ್ರತ್ಯೇಕ ವ್ಯವಸ್ಥೆ ಆಗಬೇಕು ಎಂದರು.

    ಬಿಎನ್‌ಐ ಕಾರ್ಯ ನಿರ್ವಾಹಕ ನಿರ್ದೇಶಕ ಗಣೇಶ್ ಶರ್ಮಾ ಎಲ್ಲರನ್ನೂ ಸ್ವಾಗತಿಸಿ, ಕಾರ್ಯಕ್ರಮದಲ್ಲಿ ಕಟ್ಟಡ ನಿರ್ಮಾಣ ಸಾಮಗ್ರಿಗಳು, ಆಟೋಮೊಬೈಲ್‌. ಆಭರಣಗಳು, ವಿಮೆ, ಗಾರ್ಮೆಂಟ್ಸ್‌, ಐಟಿ ಉತ್ಪನ್ನಗಳು, ಸಾಫ್ಟ್‌ವೇರ್‌, ಕಚೇರಿ ಮತ್ತು ಗೃಹ ಪೀಠೋಪಕರಣಗಳು, ಆಹಾರ ಉತ್ಪನ್ನಗಳು ಸೇರಿದಂತೆ 120 ಕ್ಕೂ ಆಧಿಕ ಉದ್ಯಮಗಳ ವ್ಯಾಪಕ ಶ್ರೇಣಿಯ ಉತ್ಪನ್ನಗಳ ಪ್ರದರ್ಶನ ಇರುತ್ತದೆ ಎಂದರು.

    ಬಿಎನ್‌ಐ ಸದಸ್ಯರಾಗಿರುವ ಹಾಗೂ ಎಕ್ಸ್‌ಪೋದಲ್ಲಿ ಪಾಲ್ಗೊಂಡ ಉದ್ಯಮಿಗಳನ್ನು ಇದೇ ವೇಳೆ ಗೌರವಿಸಲಾಯಿತು. ವಿವಿಧ ಕಂಪೆನಿಗಳಿಂದ ನೀಡಲಾಗುತ್ತಿರುವ ಆಫರ್‌ಗಳನ್ನು ಪ್ರಕಟಿಸಲಾಯಿತು. ಮಂಗಳೂರು- ಉಡುಪಿ ಜಗತ್ತಿನ ಉದ್ಯಮಿಗಳ ಸಂಘಟನೆ ಬಿಸ್‌ನೆಸ್‌ ನೆಟ್‌ವರ್ಕ್ ಇಂಟರ್ ನ್ಯಾಶನಲ್‌ ನ ಭಾಗವಾಗಿದ್ದು, ನೂರಕ್ಕೂ ಅಧಿಕ ವಿವಿಧ ವ್ಯಾಪಾರ- ಉದ್ಯಮ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ 310 ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ. ಈ ವರ್ಷದ ಎಕ್ಸ್‌ಪೊ ಈ ಸರಣಿಯ 3 ನೇ ಆವೃತ್ತಿಯಾಗಿದೆ. ಕಾರ್ಯಕ್ರಮದಲ್ಲಿ ಎಕ್ಸ್ಪೋ ಅಧ್ಯಕ್ಷ ಮೋಹನ್ ರಾಜ್‌, ಬಿಎನ್ ಐ ಸದಸ್ಯ ಮಹೇಶ್ ಶೆಟ್ಟಿ, ನಿರ್ದೇಶಕ ಸುನಿಲ್ ದತ್ ಪೈ, ಪ್ರಜ್ವಲ್ ಶೆಟ್ಟಿ, ಡಾ. ಸಚಿನ್ ನಡ್ಕ , ಪ್ರೀತಿ ಶರ್ಮಾ ಮೊದಲಾದವರು ಉಪಸ್ಥಿತರಿದ್ದರು. ಪ್ರದರ್ಶನಕ್ಕೆ ಪ್ರವೇಶ ಉಚಿತವಾಗಿದ್ದು, ಬೆಳಗ್ಗೆ 10 ರಿಂದ ರಾತ್ರಿ 8 ಗಂಟೆ ತನಕ ತೆರೆದಿರುತ್ತದೆ.

    Continue Reading

    LATEST NEWS

    Trending