Connect with us

LATEST NEWS

  ‘ಕೌನ್‌ ಬನೇಗಾ ಕರೋಡ್‌ಪತಿ’  ಉಡುಪಿಯ ಅನಮಯಗೆ ₹50 ಲಕ್ಷ ಬಹುಮಾನ..!

Published

on

  ‘ಕೌನ್‌ ಬನೇಗಾ ಕರೋಡ್‌ಪತಿ’  ಉಡುಪಿಯ ಅನಮಯಗೆ ₹50 ಲಕ್ಷ ಬಹುಮಾನ

ಉಡುಪಿ: ಬಾಲಿವುಡ್‌ ನಟ ಅಮಿತಾಬ್ ಬಚ್ಚನ್‌ ನಿರೂಪಣೆಯಲ್ಲಿ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಕೌನ್‌ ಬನೇಗಾ ಕರೋಡ್‌ಪತಿ’ ಕಾರ್ಯಕ್ರಮದಲ್ಲಿ ಉಡುಪಿಯ ಬಾಲಕ ಅನಮಯ ₹ 50 ಲಕ್ಷ ಬಹುಮಾನ ಗೆದ್ದಿದ್ದಾನೆ

ಡಿ.14ರಿಂದ 17ರವರೆಗೆ ಪ್ರಸಾರವಾಗುವ ಕೆಬಿಸಿ ಸ್ಟೂಡೆಂಟ್ಸ್  ವೀಕ್‌ ಸರಣಿಯಲ್ಲಿ ಭಾಗವಹಿಸಿದ್ದ ಅನಾಮಯ, ಅಮಿತಾಬ್ ಕೇಳಿದ 14 ಪ್ರಶ್ನೆಗಳಿಗೆ ಉತ್ತರ ನೀಡಿ ₹ 50 ಲಕ್ಷ ಗೆದ್ದುಕೊಂಡ. ₹ 1 ಕೋಟಿ ಬಹುಮಾನದ 15ನೇ ಪ್ರಶ್ನೆಗೆ ಉತ್ತರಿಸದೆ ಸ್ಪರ್ಧೆಯಿಂದ ಹೊರಬಂದ.

ಹಾಟ್‌ಸೀಟ್‌ನಲ್ಲಿ ಅಮಿತಾಬ್‌ ಬಚ್ಚನ್‌ ಕೇಳುವ 15 ಪ್ರಶ್ನೆಗಳ ಈ ಸ್ಪರ್ಧೆಯಲ್ಲಿ ಅನಮಯ 14 ಪ್ರಶ್ನೆಗೆ ಸರಿಯಾದ ಉತ್ತರ ನೀಡಿದ್ದು 50 ಲಕ್ಷ ರೂ. ಗೆದ್ದಿದ್ದರು. 1 ಕೋಟಿ ರೂ. ಗೆಲ್ಲುವ ಅಂತಿಮ ಪ್ರಶ್ನೆ ಕೇಳಿದಾಗ ಅವರ ಹತ್ತಿರ ಒಂದು ಲೈಫ್ಲೈನ್‌ ಇತ್ತು. ಆದರೆ ಈ ಪ್ರಶ್ನೆಗೆ ಖಚಿತ ಉತ್ತರ ಗೊತ್ತಿಲ್ಲದ ಕಾರಣ ಯಾವುದೇ ಅಪಾಯ ತೆಗೆದು ಕೊಳ್ಳದೇ ಅಲ್ಲಿಗೆ ಆಟ ಮುಗಿಸಲು ನಿರ್ಧರಿಸಿದ್ದರು. ಸ್ಪರ್ಧೆಯ ನಿಯಮಾವಳಿಯ ಪ್ರಕಾರ 6 ವರ್ಷದ ಬಳಿಕ ಅನಮಯಗೆ ₹ 50 ಲಕ್ಷ ಬಹುಮಾನದ ಮೊತ್ತ ಹಾಗೂ ಬಡ್ಡಿಯ ಹಣ ಒಟ್ಟಾಗಿ ಕೈಸೇರಲಿದೆ. ಜತೆಗೆ, ₹ 5 ಲಕ್ಷದ ಸ್ಕಾಲರ್ ಶಿಪ್‌ ಕೂಡ ಅನಮಯ ಪಾಲಾಯಿತು.

ಅನಮಯ ಕಾರುಗಳ ಬಗ್ಗೆ ಹೆಚ್ಚಿನ ಜ್ಞಾನ ಹೊಂದಿದ್ದು, ಕಾರ್ಯಕ್ರಮದಲ್ಲಿ ಅಮಿತಾಬ್‌ ಕಾರಿನ ಕುರಿತಾಗಿ ಕೇಳಿದ ಪ್ರಶ್ನೆಗಳಿಗೆಲ್ಲ ಪಟಪಟನೆ ಉತ್ತರಿಸುವ ಮೂಲಕ ಎಲ್ಲರನ್ನು ದಂಗು ಬಡಿಸಿದ. ಜಗತ್ತಿನ ದುಬಾರಿ ಕಾರುಗಳ ಹೆಸರು, ವಿಶೇಷತೆಯ ಕುರಿತು ವಿವರ ನೀಡಿದ ಅನಮಯ, ಮುಂದೆ ಕಾರು ತಯಾರಿಕಾ ಕಂಪನಿ ಆರಂಭಿಸುವ ಇರಾದೆಯನ್ನು ವ್ಯಕ್ತಪಡಿಸಿದ.

LATEST NEWS

ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ಬಾಲಿವುಡ್‌ನಿಂದ ಹೊರಬರುತ್ತೇನೆ: ಕಂಗನಾ ರಣಾವತ್

Published

on

ಮಂಗಳೂರು/ಮುಂಬೈ: ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಮಂಡಿ ಕ್ಷೇತ್ರದಲ್ಲಿ ಬಾಲಿವುಡ್‌ ನಟಿ ಕಂಗನಾ ರಣಾವತ್  ಸ್ಪರ್ಧೆ ಮಾಡಿದ್ದಾರೆ.   ಈ ಬಾರಿ ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ಬಾಲಿವುಡ್‌ ನಿಂದ ಹೊರಬರುವುದಾಗಿ ಕಂಗನಾ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

kangana ranaut

ಕಳೆದ ಮಂಗಳವಾರ ಕಂಗನಾ ಚುನಾವಣೆಗೆ ಮಂಡಿಯಿಂದ ನಾಮಪತ್ರ ಸಲ್ಲಿಸಿದ್ದಾರೆ. ಕಂಗನಾ ಸದ್ಯ ಸಿನೆಮಾದಿಂದ ದೂರ ಉಳಿದಿದ್ದು  ತಮ್ಮ ಸಂಪೂರ್ಣ ಸಮಯವನ್ನು ಪ್ರಚಾರಕ್ಕಾಗಿ ಮೀಸಲಿಟ್ಟಿದ್ದಾರೆ. ಕಂಗನಾ ಮಂಡಿಯನ್ನು ಗೆದ್ದರೆ ಮುಂದಿನ ಯೋಜನೆಗಳೇನು ಎಂದು ಸಂದರ್ಶನವೊಂದರಲ್ಲಿ ಕೇಳಿದಾಗ, ನನಗೆ ಚಲನಚಿತ್ರ ನಿರ್ಮಾಪಕರು ಸಾಕಷ್ಟು ಮಂದಿ ಹೇಳಿದ್ದಾರೆ ನೀನು ಉತ್ತಮ ನಟಿ, ರಾಜಕೀಯಕ್ಕೆ ಹೋಗಬೇಡಿ ಇಲ್ಲೇ ಇರು ಎಂದು ಆದರೆ ನಾನು ಚುನಾವಣೆಯಲ್ಲಿ ಗೆದ್ದರೆ ಚಿತ್ರರಂಗದಿಂದ ಹೊರಬರುತ್ತೇನೆ ಎಂದು ಹೇಳಿದರು.

ಬೆಳ್ತಂಗಡಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷನ ಬಂಧನ..! ಶಾಸಕ ಪೂಂಜಾ ಪ್ರತಿಭಟನೆ

ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಕಂಗನಾ, ಸಿನೆಮಾದಿಂದಲೂ ಹೊರಬರಲು ಸಿದ್ಧರಾಗಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಮತದಾನದ ಮೊದಲು, ನಟಿ ತನ್ನ 91 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಬಹಿರಂಗಪಡಿಸಿದರು. ಇದರಲ್ಲಿ ಆಭರಣಗಳು, ಕಾರುಗಳು ಮತ್ತು ಸ್ಥಿರ ಆಸ್ತಿಗಳು ಸೇರಿವೆ. ಆಕೆಯ ಸಾಲವೂ 17 ಕೋಟಿ ರೂ. ಇದೆ.

ಹಿಮಾಚಲಪ್ರದೇಶದಲ್ಲಿ ಜೂನ್​ 1ರಂದು ಮತದಾನ ನಡೆಯಲಿದೆ.  ಕಂಗನಾ ಕೇವಲ 12ನೇ ತರಗತಿ ಪಾಸಾಗಿದ್ದರು, ಚಿತ್ರರಂಗದಲ್ಲಿ ಅದ್ಭುತ ನಟಿಯಾಗಿ ಬಿಂಬಿಸಿಕೊಂಡಿದ್ದಾರೆ. ಗ್ಯಾಂಗ್​ಸ್ಟರ್ ಚಿತ್ರದ ಮೂಲಕ ಕಂಗನಾ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು ಪದ್ಮಶ್ರೀ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.

‘ಆರ್‌ಸಿಬಿ’ ಸೂಪರ್‌ ಕಮ್‌ಬ್ಯಾಕ್..! ಕ್ರೀಡಾಂಗಣದಲ್ಲಿ ಸ್ಟಾರ್ಸ್‌ ಕಲರವ

Continue Reading

DAKSHINA KANNADA

ಈ ಕನಸುಗಳು ಕೇವಲ ಅದೃಷ್ಟವಂತರಿಗೆ ಮಾತ್ರ ಬೀಳುತ್ತೆ.!

Published

on

ಮಂಗಳೂರು: ಕನಸನ್ನು ಕಾಣುವುದು ಎಂದರೆ ಅದೊಂದು ಸಾಮಾನ್ಯ ವಿಷಯ. ಪ್ರತಿಯೊಬ್ಬ ವ್ಯಕ್ತಿಯು ಮಲಗುವ ಸಮಯದಲ್ಲಿ ಕನಸನ್ನು ಕಾಣುತ್ತಾನೆ. ಅದೆಷ್ಟೋ ಬಾರಿ ನಾವು ಎದ್ದಾಕ್ಷಣ ರಾತ್ರಿ ಕನಸಿನಲ್ಲಿ ಕಂಡ ವಿಷಯಗಳನ್ನು ಮರೆತುಬಿಡುತ್ತೇವೆ. ಇನ್ನು ಕೆಲವೊಮ್ಮೆ ಅದು ಅಚ್ಚಳಿಯದಂತೆ ನಮ್ಮ ಮನಸ್ಸಿನಲ್ಲಿ ಉಳಿದುಕೊಳ್ಳುತ್ತದೆ. ಕೆಲವು ಕನಸುಗಳು ನಮಗೆ ಸಾಕಷ್ಟು ಸಂತೋಷವನ್ನು, ನೆಮ್ಮದಿಯನ್ನು ನೀಡಿದರೆ, ಕೆಲವು ಕನಸುಗಳು ನಮ್ಮ ತಲೆಯನ್ನು ಕೆಡಿಸುತ್ತದೆ.

ಕನಸುಗಳನ್ನು ನಾವು ಶುಭ ಕನಸುಗಳು ಮತ್ತು ಅಶುಭ ಕನಸುಗಳೆಂದು ವಿಭಜಿಸುತ್ತೇವೆ. ಆದರೆ, ಒಂದಿಷ್ಟು ಕನಸುಗಳಿವೆ ಅವುಗಳು ಕೇವಲ ಅದೃಷ್ಟವಂತರಿಗೆ ಮಾತ್ರ ಬೀಳುತ್ತದೆ. ನೀವು ಅದೃಷ್ಟವಂತರಾದರೆ ಈ ಕನಸುಗಳು ನಿಮಗೂ ಬಿದ್ದಿರುತ್ತೆ.

1. ಬಿಳಿ ಆನೆಯ ಕನಸು:

ನಾವು ಕನಸಿನಲ್ಲಿ ಬಿಳಿ ಬಣ್ಣದ ಆನೆಯನ್ನು ನೋಡಿದರೆ ಅದನ್ನು ಅತ್ಯಂತ ಮಂಗಳಕರವಾದ ಕನಸೆಂದು ಪರಿಗಣಿಸಲಾಗುತ್ತದೆ. ಬಿಳಿ ಬಣ್ಣದ ಆನೆ ಕಾಣಿಸಿಕೊಳ್ಳುವುದು ಎಂದರೆ ನೀವು ಇಂದ್ರ ದೇವನ ಆಶೀರ್ವಾದವನ್ನು ಪಡೆದುಕೊಂಡಿದ್ದೀರಿ ಎಂಬುದಾಗಿದೆ. ಯಾಕೆಂದರೆ ಬಿಳಿ ಬಣ್ಣದ ಆನೆಯು ದೇವರಾಜ ಇಂದ್ರ ದೇವನ ವಾಹನವಾಗಿದೆ. ಮತ್ತು ಯಾವ ವ್ಯಕ್ತಿ ತನ್ನ ಕನಸಿನಲ್ಲಿ ಬಿಳಿ ಬಣ್ಣದ ಆನೆಯನ್ನು ನೋಡುತ್ತಾನೋ ಅವನಿಗೆ ಸದ್ಯದಲ್ಲೇ ರಾಜಯೋಗವು ಪ್ರಾರಂಭವಾಗಲಿದೆ ಎಂಬುದಾಗಿದೆ.

2. ಬಿಳಿ ಬಣ್ಣದ ನವಿಲು:

ಯಾವುದೇ ಓರ್ವ ವ್ಯಕ್ತಿಯು ತನ್ನ ಕನಸಿನಲ್ಲಿ ಬಿಳಿ ಬಣ್ಣದ ನವಿಲನ್ನು ನೋಡಿದರೆ ಅದನ್ನು ಶುಭ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇಂತಹ ಕನಸುಗಳು ಅದೃಷ್ಟದ ಸಂಕೇತವಾಗಿರುತ್ತದೆ. ಇಂತಹ ಕನಸುಗಳು ಬಿದ್ದರೆ ನಿಮ್ಮ ಜೀವನದಲ್ಲಿ ಉತ್ತಮವಾದ ದೊಡ್ಡ ಬದಲಾವಣೆಯೊಂದು ನಡೆಯಲಿದೆ. ಮತ್ತು ನೀವು ಏನಾದರೂ ದೊಡ್ಡ ಸಾಧನೆಯನ್ನು ಮಾಡುತ್ತೀರಿ ಎಂಬುದಾಗಿದೆ. ನಿಮ್ಮ ಕನಸಿನಲ್ಲಿ ಬಿಳಿ ನವಿಲು ಕಾಣುವುದು ಎಂದರೆ ನಿಮ್ಮ ಕಠಿಣ ಪರಿಶ್ರಮದ ಫಲವನ್ನು ನೀವು ಶೀಘ್ರದಲ್ಲೇ ಪಡೆಯುತ್ತೀರಿ.

3. ಬಿಳಿ ಸಿಂಹದ ಕನಸು:

ಈಗಾಗಲೇ ಹಳದಿ ಬಣ್ಣದ ಸಿಂಹವನ್ನು ನೋಡಿರಬಹುದು. ಆದರೆ, ಬಿಳಿ ಬಣ್ಣದ ಸಿಂಹವೂ ಇದೆ ಎಂದು ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ಇದನ್ನು ಎಲ್ಲರೂ ನೋಡಿರಲು ಸಾಧ್ಯವಿಲ್ಲ. ಕೆಲವೊಮ್ಮೆ ಇವುಗಳು ನಮ್ಮ ಕನಸಿನಲ್ಲಿ ಕಾಣಿಸಿಕೊಳ್ಳುವ ಮೂಲಕ ಅವುಗಳ ಅಸ್ತಿತ್ವವು ಇದೆ ಎಂಬುದನ್ನು ನಮಗೆ ನೆನಪಿಸುತ್ತದೆ. ಬಿಳಿ ಬಣ್ಣದ ಸಿಂಹವನ್ನು ನಾವು ನಮ್ಮ ಕನಸಿನಲ್ಲಿ ನೋಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಬಿಳಿ ಸಿಂಹದ ಕನಸು ಬಿದ್ದರೆ ನೀವು ನಿಮ್ಮ ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿಯನ್ನು ಹೊಂದಲಿದ್ದೀರಿ ಎಂದರ್ಥ.

4. ಬಿಳಿ ಹಾವಿನ ಕನಸು:

ನೀವು ನಿಮ್ಮ ಕನಸಿನಲ್ಲಿ ಬಿಳಿ ಬಣ್ಣದ ಹಾವುಗಳನ್ನು ನೋಡಿದರೆ ಅದನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇಂತಹ ಕನಸುಗಳು ಬಿದ್ದರೆ ನಿಮ್ಮ ಅದೃಷ್ಟ ಶೀಘ್ರದಲ್ಲೇ ಬದಲಾಗಲಿದೆ ಎಂಬುದನ್ನು ಸಂಕೇತಿಸುತ್ತದೆ. ಶಿವನ ವಿಶೇಷ ಆಶೀರ್ವಾದವನ್ನು ಹೊಂದಿರುವವರು ಮಾತ್ರ ತಮ್ಮ ಕನಸಿನಲ್ಲಿ ಬಿಳಿ ಬಣ್ಣದ ಹಾವುಗಳನ್ನು ನೋಡುತ್ತಾರೆ

ಹಾಗಾಗಿ, ನೀವು ನಿಮ್ಮ ಕನಸಿನಲ್ಲಿ ಈ ಮೇಲಿನ ನಾಲ್ಕು ಬಿಳಿ ಜೀವಿಗಳನ್ನು ನೀಡಿದರೆ ನೀವು ಅದೃಷ್ಟವಂತರು ಎಂದರ್ಥ. ಈ ಕನಸುಗಳು ಬಿದ್ದಾಗ ನೀವು ಚಿಂತಿತರಾಗುವ ಬದಲು ಸಂತೋಷವನ್ನು ಅನುಭವಿಸಿ.

Continue Reading

DAKSHINA KANNADA

ಅತಿಯಾದ ಇಂಟರ್ನೆಟ್ ಬಳಕೆಯಿಂದ ಮಕ್ಕಳ ಮೇಲೆ ಆಗುವ ಪರಿಣಾಮಗಳು

Published

on

ಮಂಗಳೂರು: ಇಂದು ಮೊಬೈಲ್ ಇಲ್ಲದೇ ದಿನವಿಲ್ಲ. ಮೊಬೈಲ್ ಇದ್ದರೂ ಅದರಲ್ಲಿ ಇಂಟರ್ನೆಟ್ ಇಲ್ಲದೇ ಇದ್ದರೆ ಚಡಪಡಿಕೆ. ಅದರಲ್ಲೂ ಮಕ್ಕಳು ಅತಿಯಾದ ಇಂಟರ್ನೆಟ್ ಬಳಕೆಯ ಪರಿಣಾಮಗಳ ಬಗ್ಗೆ ಎಲ್ಲೆಡೆಯೂ ಮಾತುಗಳಾಗುತ್ತಿದೆ. ಕೊರೋನಾ ನಂತರ ಮೊಬೈಲ್ ಬಳಕೆ ಅನಿವಾರ್ಯವಾಯಿತು. ಈಗ ಸಾಮಾನ್ಯ ಜನರೂ ಸ್ಮಾರ್ಟ್‌ ಫೋನ್ ಬೇಕು ಎನ್ನುವಷ್ಟರ ಮಟ್ಟಿಗೆ ಪರಿಸ್ಥಿತಿ ತಲುಪಿಸಿತು.

ಮೊಬೈಲ್ ಸಿಕ್ಕ ತಕ್ಷಣ ಇಂಟರ್ನೆಟ್ ಅಥವಾ ಡಾಟಾಗಳೂ ಅಗತ್ಯವಾಗಿದೆ. ಈಗ ಆ ಡಾಟಾ ಬಳಕೆಯೇ ಮಕ್ಕಳ ಮೇಲೆ ಅಪಾಯಕಾರಿ ಪರಿಣಾಮ ಬೀರುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ. ಮೊಬೈಲ್ ಇದ್ದರೆ ಮಕ್ಕಳು ಎಲ್ಲವನ್ನೂ ವೀಕ್ಷಣೆ ಮಾಡುತ್ತಾರೆ. ಇದರ ಪರಿಣಾಮ ಮಕ್ಕಳು ತಮ್ಮ ಪ್ರಾಯಕ್ಕಿಂತ ಹೆಚ್ಚಿನ ತಿಳುವಳಿಕೆಯನ್ನು ಪಡೆಯುತ್ತಾರೆ. ಇದು ಶಿಕ್ಷಣದ ಮೇಲಿನ ನಿರಾಸಕ್ತಿಗೆ ಕಾರಣವಾಗಬಹುದು.

 

ಮಿತಿಮೀರಿದ ಇಂಟರ್ನೆಟ್ ಬಳಕೆಯ ಪರಿಣಾಮ:

ಮಾನಸಿಕ ಆತಂಕ ಹೆಚ್ಚಾಗುತ್ತಿದೆ:

ಈಗಿನ ಬಹುತೇಕ ಮಕ್ಕಳು ಸಾಮಾಜಿಕ ಜಾಲತಾಣದಲ್ಲಿ ತಮ್ಮದೇ ಆದ ಸ್ನೇಹಿತರ ಗುಂಪನ್ನು ಕಟ್ಟಿಕೊಂಡು ಅದರಲ್ಲಿ ಬ್ಯುಸಿಯಾಗಿರುತ್ತಾರೆ. ತಾವು ಪೋಸ್ಟ್ ಮಾಡುವಾಗ ಅತ್ಯುತ್ತಮ ಗುಣಮಟ್ಟದ ಪಿಚ್ಚರ್ ಅಪ್ಲೋಡ್ ಮಾಡಬೇಕಾಗುತ್ತದೆ. ಈ ಸಂದರ್ಭದಲ್ಲಿ ಹಲವರು ಒಳ್ಳೆಯ ಕಾಮೆಂಟ್ ಗಳನ್ನು ಹಾಕಿದರೆ ಇನ್ನು ಕೆಲವರು ಕಾಲೆಳೆಯುವ ಮೆಸೇಜ್ ಕಳುಹಿಸುತ್ತಾರೆ. ಈ ಸಮಯದಲ್ಲಿ ಸಹಜವಾಗಿ ಮಾನಸಿಕ ಖಿನ್ನತೆ ಎದುರಾಗುವುದು ಖಂಡಿತ.

ನಿದ್ರಾಹೀನತೆ ಸಮಸ್ಯೆ:

ಇಂದು ಸಾಮಾಜಿಕ ಜಾಲತಾಣಗಳು ಯುವಕರ-ಯುವತಿಯರ ಮೇಲೆ ಪ್ರಭಾವ ಬೀರಿವೆ. ಅರ್ಧ ರಾತ್ರಿಯಲ್ಲಿ ನಿದ್ರೆಯಿಂದ ಎದ್ದು ಫೋನ್ ನೋಡುತ್ತಾರೆ. ತಾವು ಹಾಕಿದ ಪೋಸ್ಟ್‌ನ ಕಾಮೆಂಟ್ಸ್, ಲೈಕ್ಸ್ ಗಳನ್ನು ನೋಡಿ ಅವುಗಳಿಗೆ ಪ್ರತಿಕ್ರಿಯೆ ನೀಡುತ್ತಾರೆ. ಇದರಿಂದ ಅವರ ರಾತ್ರಿಯ ನಿದ್ರೆ ಹಾಳಾಗುತ್ತದೆ. ಹೀಗೆ ನಿದ್ರೆಯ ಗುಣಮಟ್ಟ ಕಡಿಮೆ ಆಗುವುದರ ಜೊತೆಗೆ ಮಾನಸಿಕವಾಗಿ ಸಾಕಷ್ಟು ಬದಲಾವಣೆಗಳು ಉಂಟಾಗುತ್ತದೆ.

ಸಂವಹನ ಸಂಪೂರ್ಣ ಕಡಿಮೆಯಾಗುತ್ತದೆ:

ಸ್ಮಾರ್ಟ್ ಫೋನ್ ಯುಗ ಆರಂಭವಾದ ನಂತರ ಮಕ್ಕಳು ಒಬ್ಬರನ್ನೊಬ್ಬರು ನೇರವಾಗಿ ನೋಡದೆ ಇದ್ದರೂ ಕೇವಲ ಫೋನ್ ಸಂಭಾಷಣೆಯ ಮೂಲಕ ಗಂಟೆಗಟ್ಟಲೆ ಕಾಲ ಕಳೆಯುತ್ತಾರೆ. ಇದರಿಂದ ತಮ್ಮ ಮನೆಯಲ್ಲಿರುವ ಪೋಷಕರ ಜೊತೆ, ಅಕ್ಕ – ಪಕ್ಕದಲ್ಲಿರುವ ಗೆಳೆಯರ ಜೊತೆ, ಮನೆಗೆ ಬಂದು ಹೋಗುವ ಬಂಧು ಮಿತ್ರರ ಜೊತೆ ಹೆಚ್ಚು ಬೆರೆಯಲು ಕಷ್ಟ ಆಗುತ್ತದೆ. ಹೀಗಾಗಿ ನಿಜ ಜೀವನವನ್ನು ಇಂದಿನ ಯುವ ಜನತೆ ಸಂಪೂರ್ಣವಾಗಿ ಬೆರೆತುಕೊಳ್ಳುವುದನ್ನು ಮರೆಯುತ್ತಿದ್ದಾರೆ.

ಆರೋಗ್ಯ ಸಮಸ್ಯೆಗಳು:

ಹೆಚ್ಚಿನ ಸ್ಮಾರ್ಟ್‌ಫೋನ್‌ ಬಳಕೆಯು ವಿದ್ಯಾರ್ಥಿಗಳಲ್ಲಿ ಕಣ್ಣಿನ ಆಯಾಸ, ಕುತ್ತಿಗೆ ಮತ್ತು ಬೆನ್ನು ನೋವುಗಳನ್ನು ನಿರ್ಮಾಣ ಮಾಡುತ್ತದೆ. ಇಷ್ಟು ಮಾತ್ರವಲ್ಲದೆ ಇದರೊಂದಿಗೆ ವಿವಿಧ ಆರೋಗ್ಯ ಸಮಸ್ಯೆ ಸಹ ಕಾಣಿಸಿಕೊಳ್ಳುತ್ತವೆ. ಅದೆಲ್ಲಕ್ಕೂ ಪ್ರಮುಖವಾಗಿ ಜಡ ಜೀವನಶೈಲಿಗೆ ಇದು ಕಾರಣವಾಗಬಹುದು. ದೈಹಿಕ ಚಟುವಟಿಕೆಯ ಮಟ್ಟವನ್ನು ಕಡಿಮೆ ಮಾಡುತ್ತದೆ.

ಹಾಗಾಗಿ ಶಿಕ್ಷಣತಜ್ಞರು ಮತ್ತು ಪೋಷಕರು ವಿದ್ಯಾರ್ಥಿಗಳಿಗೆ ಮೊಬೈಲ್ ಫೋನ್‌ಗಳನ್ನು ಜವಾಬ್ದಾರಿಯುತವಾಗಿ ಬಳಸಲು ಮಾರ್ಗದರ್ಶನ ನೀಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸಬೇಕಿದೆ. ಶೈಕ್ಷಣಿಕ ಉದ್ದೇಶಗಳಿಗಾಗಿ ತಂತ್ರಜ್ಞಾನವನ್ನು ಬಳಸಿಕೊಳ್ಳುವಂತೆ ಪ್ರೋತ್ಸಾಹಿಸುವುದರ ಜೊತೆಗೆ ಆಫ್‌ಲೈನ್ ಚಟುವಟಿಕೆಗಳು ಮತ್ತು ಮುಖಾಮುಖಿ ಸಂವಹನಗಳನ್ನು ನಡೆಸುವುದು ಅತ್ಯಗತ್ಯವಾದ ಕೆಲಸವಾಗಿದೆ.

Continue Reading

LATEST NEWS

Trending