Connect with us

UDUPI

ಉಡುಪಿ: ಟ್ಯಾಪ್ಮಿ ಪ್ರಾಕ್ತನ ವಿದ್ಯಾರ್ಥಿ ಸಂಘದ ವತಿಯಿಂದ ಶಾಲೆಗೆ ವಿವಿಧ ಕೊಡುಗೆಗಳ ಹಸ್ತಾಂತರ

Published

on

ಉಡುಪಿ: 80 ಬಡಗಬೆಟ್ಟು ಗ್ರಾಮ ಪಂಚಾಯತಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಟ್ಯಾಪ್ಮಿ ಪ್ರಾಕ್ತನ ವಿದ್ಯಾರ್ಥಿ ಸಂಘವು ಸುಮಾರು 1.75 ಲಕ್ಷ ರೂಪಾಯಿ ಮೌಲ್ಯದ ಸೌಂಡ್ ಸಿಸ್ಟಮ್, ಸೇಫ್ಟಿ ರೈಲಿಂಗ್, ಸೂಕ್ಷ್ಮದರ್ಶಕ, 5 ಡೆಸ್ಕ್ ಹಾಗೂ ಬೆಂಚು ಮುಂತಾದ ಅಮೂಲ್ಯವಾದ ಕೊಡುಗೆಗಳನ್ನು ನಿನ್ನೆ ಹಸ್ತಾ೦ತರಿಸಿದರು.


ಟ್ಯಾಪ್ಮಿಯ ನಿರ್ದೇಶಕ ಪ್ರೊ. ಮಧುವೀರ ರಾಘವನ್ ಸೇಫ್ಟಿ ರೈಲಿಂಗನ್ನು ಅನಾವರಣಗೊಳಿಸಿ ಕಾರ್ಯಕ್ರಮವನ್ನು ಉಧ್ಘಾಟಿಸಿದರು.

ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಪ್ರೊ. ಗುರುರಾಜ್ ಹೆಚ್. ಕಿದಿಯೂರ್, ಧ್ವನಿವರ್ಧಕವನ್ನು ಹಸ್ತಾ೦ತರಿಸಿದರು.

ಸಂಸ್ಥೆಯ ಅಧ್ಯಕ್ಷೆ ಪ್ರೊ. ಶ್ರುತಿ ಮಯೂರ್ ಸೂಕ್ಷ್ಮದರ್ಶಕವನ್ನು ನೀಡಿದರು. ಸಂಸ್ಥೆಯ ಉಪಾಧ್ಯಕ್ಷ ರಾಜೇಂದ್ರ ಕಾಮತ್ ಮತ್ತು ಕಾರ್ಯದರ್ಶಿ ಪ್ರೊ.ಶಾಮ್ ರಂಜನ್ ಶೆಟ್ಟಿ ಬೆಂಚು ಮತ್ತು ಡೆಸ್ಕುಗಳನ್ನು ಹಸ್ತಾ೦ತರಿಸಿ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು.

80 ಬಡಗಬೆಟ್ಟು ಗ್ರಾಮಪಂಚಾಯತ್ ನಿಕಟಪೂರ್ವ ಅಧ್ಯಕ್ಷ ಶಾಂತಾರಾಮ ಶೆಟ್ಟಿ, ಮತ್ತು ಸದಸ್ಯ ಕೇಶವ ಕೋಟ್ಯಾನ್, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಉಪಾಧ್ಯಕ್ಷೆ ಸುಮಾಲಿನಿ, ಶ್ರೀ ಮಂಜುನಾಥ ವೇದಿಕೆಯಲ್ಲಿ ಉಪಸ್ಥಿತರಿದ್ದು ಕೊಡುಗೆಗಳನ್ನು ಶಾಲೆಯ ಪರವಾಗಿ ಸ್ವೀಕರಿಸಿದರು.

ಎಸ್‌ಡಿಎಮ್‌ಸಿಯ ಎಲ್ಲಾ ಸದಸ್ಯರು, ಶಿಕ್ಷಕರು. ಶಾಲಾ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Click to comment

Leave a Reply

Your email address will not be published. Required fields are marked *

DAKSHINA KANNADA

ಮೇ 17 ರಂದು ‘ನಮ್ಮ ಕಂಬಳ ಪ್ರಶಸ್ತಿ 2024’ ಪ್ರದಾನ ಸಮಾರಂಭ

Published

on

ಮಂಗಳೂರು : ತುಳುನಾಡಿನ ಜಾನಪದ ಕ್ರೀಡೆಯಾಗಿರುವ ಕಂಬಳದಲ್ಲಿ ಅನೇಕ ಸಾಧಕರು ವಿಶೇಷ ಸಾಧನೆಗಳನ್ನು ಮಾಡಿದ್ದಾರೆ. ಆದ್ರೆ, ವರ್ಷವಿಡಿ ನಡೆಯುವ ಕಂಬಳದಲ್ಲಿ ಈ ಸಾಧನೆಗಳು ಆಗೊಮ್ಮೆ ಈಗೊಮ್ಮೆ ಮಾತ್ರ ಚರ್ಚೆಯಾಗಿ ಮರೆತು ಹೋಗುತ್ತದೆ. ಹೀಗಾಗಿ ಅವಿಭಜಿತ ಜಿಲ್ಲೆಯಲ್ಲಿ ನಡೆಯುವ ಎಲ್ಲಾ ಕಂಬಳಗಳಲ್ಲಿ ಒಟ್ಟು ಸಾಧನೆ ಮಾಡಿದ ಕೋಣಗಳು, ಓಟಗಾರರು, ಕೋಣಗಳ ಯಜಮಾನರು ಹೀಗೆ ಹಲವು ವಿಭಾಗದಲ್ಲಿ ಸಹಕರಿಸಿದ ಎಲ್ಲರನ್ನೂ ಗೌರವಿಸಿ ಪ್ರಶಸ್ತಿ ನೀಡುವ ವಿನೂತನ ಕಾರ್ಯಕ್ರಮ ಮೇ 17 ರಂದು ನಡೆಯಲಿದೆ.

ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ನಮ್ಮ ಕುಡ್ಲ ವಾಹಿನಿಯ ನಮ್ಮ ಕುಡ್ಲ ನಿರ್ದೇಶಕ ಲೀಲಾಕ್ಷ ಕರ್ಕೇರ ಅವರು,  ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ಕಂಬಳದ ನೇರ ಪ್ರಸಾರದ ಮೂಲಕ ನಮ್ಮ ಕುಡ್ಲ ವಾಹಿನಿ  ಜನಮೆಚ್ಚುಗೆ ಪಡೆದುಕೊಂಡಿದೆ. ಈ ಸುಸಂದರ್ಭದಲ್ಲಿ ಕಂಬಳ ಕ್ರೀಡೆಯನ್ನು ಪ್ರೋತ್ಸಾಹಿಸಲು ನಾವೂ ಕೂಡಾ ವಿನೂತನವಾಗಿ ಏನಾದ್ರೂ ಮಾಡಬೇಕು ಎಂದು ಈ ಪ್ರಶಸ್ತಿ ಸಮಾರಂಭ ಆಯೋಜಿಸಿದ್ದೇವೆ. ನಮ್ಮ ಕಂಬಳ ಟೀಮ್ ದುಬೈ ಹಾಗೂ ಸಂತ ಅಲೋಶಿಯಸ್‌ ಕಾಲೇಜಿನ ಸಹಯೋಗದೊಂದಿಗೆ ಈ ಪ್ರಶಸ್ತಿ ಸಮಾರಂಭವನ್ನು ಹಮ್ಮಿಕೊಂಡಿದ್ದೇವೆ.

ಕಾರ್ಯಕ್ರಮ ಸಂತ ಅಲೋಶಿಯಸ್‌ ವಿವಿಯ ಎಲ್‌.ಎಫ್ ರಸ್ಕಿನ್ ಹಾಲ್‌ನಲ್ಲಿ ಈ ಪ್ರಶಸ್ತಿ ಸಮಾರಂಭ ನಡೆಯಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಹರೇಕಳದಲ್ಲಿ ಪದವಿಪೂರ್ವ ಶಿಕ್ಷಣ ಆರಂಭ: ಹಾಜಬ್ಬರ ಕನಸು ನನಸು

ಇದೇ ಸಂದರ್ಭದಲ್ಲಿ ನಮ್ಮ ಕಂಬುಲ ನನ ದುಂಬುಲ ಎನ್ನುವ ಮಾಹಿತಿ ಕೈಪಿಡಿ ಬಿಡುಗಡೆ ಕಾರ್ಯಕ್ರಮ ಕೂಡಾ ನಡೆಯಲಿದೆ ಎಂದು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ನಮ್ಮ ಕುಡ್ಲ ವಾಹಿನಿಯ ನಿರ್ದೇಶಕರುಗಳಾದ ಹರೀಶ್ ಬಿ ಕರ್ಕೇರ, ಸುರೇಶ್ ಬಿ ಕರ್ಕೇರ , ನಮ್ಮಕುಡ್ಲ ವಾಹಿನಿ ಸಿಒಒ ಕದ್ರಿ ನವನೀತ ಶೆಟ್ಟಿ, ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಸುದರ್ಶನ್ ಉಪಸ್ಥಿತರಿದ್ದರು.

 

Continue Reading

LATEST NEWS

ಉಡುಪಿ : ಮೊಬೈಲ್ ಕದಿಯಲು ಬಂದ ಕಳ್ಳಿಗೆ ಸಾರ್ವಜನಿಕರಿಂದ ಧರ್ಮದೇಟು

Published

on

ಉಡುಪಿ : ಸರ ಕಳವು, ಮೊಬೈಲ್ ಕಳವು ಮಾಡುವ ರೀತಿಯಲ್ಲಿ ಜನರನ್ನು ಲೂಟಿ ಮಾಡುವ ದೊಡ್ಡ ತಂಡ ರಾಜ್ಯದಲ್ಲಿ ಕಾರ್ಯಾಚರಣೆ ಮಾಡ್ತಾ ಇದೆ. ಹೀಗಾಗಿ ದಿನಕ್ಕೆ ಇಂತಹ ಹತ್ತಾರು ಪ್ರಕರಣಗಳು ಪೊಲೀಸ್ ಠಾಣೆಯ ಮೆಟ್ಟಿಲೇರುತ್ತಿದೆ. ಇದೀಗ ಉಡುಪಿಯಲ್ಲೂ ಇಂತಹದೇ ಒಂದು ಖತರ್ನಾಕ್ ಕಳ್ಳಿಯರ ತಂಡ ಕಾರ್ಯಾಚರಣೆಗೆ ಇಳಿದಿದೆ. ಆದ್ರೆ ಅದೃಷ್ಟ ಕೈಕೊಟ್ಟ ಕಾರಣ ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದು ಧರ್ಮದೇಟು ತಿಂದು ಪೊಲೀಸರ ಅತಿಥಿಯಾಗಿದ್ದಾಳೆ.

ಉಡುಪಿ ನಗರ ಸಿಟಿ ಬಸ್‌ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಕಳ್ಳಿಯರ ತಂಡವೊಂದು ಮೊಬೈಲ್ ಕಳ್ಳತನಕ್ಕೆ ಯತ್ನಿಸಿತ್ತು. ಇದನ್ನು ಗಮನಿಸಿ ಬಸ್‌ ಸಿಬ್ಬಂದಿ ಕಳ್ಳಿಯರ ತಂಡದ ಓರ್ವಳನ್ನು ರೆಡ್‌ಹ್ಯಾಂಡ್‌ ಆಗಿ ಹಿಡಿದಿದ್ದಾರೆ. ಅಷ್ಟರಲ್ಲಿ ಆಕೆಯ ಜೊತೆಗೆ ಇದ್ದವರು ತಪ್ಪಿಸಿಕೊಂಡಿದ್ರೂ ರೆಡ್ ಹ್ಯಾಂಡ್ ಆಗಿ ಸಿಕ್ಕಿದ ಮಹಿಳೆಯ ಬ್ಯಾಗ್ ತಪಾಸಣೆಗೆ ಮುಂದಾಗಿದ್ದಾರೆ.

ಇದನ್ನೂ ಓದಿ : OYO ರೂಮ್ ಬಂದ್ ಮಾಡಿಸಿದಕ್ಕೆ ಸಿಟ್ಟಿಗೆದ್ದ ಜೋಡಿ.. ಶಾಸಕರ ಕಛೇರಿ ಮುಂದೆಯೇ ಪ್ರೇಮಿಗಳ ರೊಮ್ಯಾನ್ಸ್..!

ಈ ವೇಳೆ ಡ್ರಾಮ ಮಾಡಲು ಇಳಿದ ಮಹಿಳೆಗೆ ಸಾರ್ವಜನಿಕರು ಧರ್ಮದೇಟು ನೀಡಿದ್ದಾರೆ. ಬಳಿಕ ಪೊಲೀಸರನ್ನು ಕರೆಸಿ ಆಕೆಯನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬಸ್‌ ಪ್ರಯಾಣಿಕರನ್ನು ಟಾರ್ಗೆಟ್ ಮಾಡಿ ಇಂತಹ ಕಳ್ಳತನ ನಡೆಯುತ್ತಿದ್ದು, ಪ್ರಯಾಣಿಕರು ಜಾಗೃತೆ ವಹಿಸುವ ಅಗತ್ಯ ಇದೆ.

 

Continue Reading

LATEST NEWS

ಜೈಲಿನಲ್ಲಿದ್ದ ವಿಚಾರಣಾಧೀನ ಖೈದಿ ಹೃದಯಾ*ಘಾತದಿಂದ ಸಾ*ವು.!

Published

on

ಉಡುಪಿ: ಜಿಲ್ಲೆಯ ಹಿರಿಯಡ್ಕ ಸಬ್‌ ಜೈಲಿನಲ್ಲಿ ವಿಚಾರಣಾಧೀನ ಖೈದಿಗೆ ಹೃದಯಾ*ಘಾತ ಉಂಟಾಗಿ ಸಾ*ವನ್ನಪ್ಪಿರುವ ಘಟನೆ ಮೇ.11ರಂದು ಸಂಜೆ ನಡೆದಿದೆ. ಅನುಪ್ ಶೆಟ್ಟಿ(38 ವ) ಹೃದಯಾಘಾತದಿಂದ ಮೃತಪಟ್ಟವರು.

anup shetty

ಕುಂದಾಪುರ ದ ಫೈನಾನ್ಶಿಯರ್ ಅಜೇಂದ್ರ ಶೆಟ್ಟಿ ಕೊಲೆ ಆರೋಪಿಯಾಗಿರುವ  ಅನೂಪ್ ಶೆಟ್ಟಿ ಎರಡೂವರೆ ವರ್ಷ ಗಳಿಂದ ವಿಚಾರಣಾಧೀನ ಖೈದಿಯಾಗಿದ್ದರು.

ಕಡಬ : ಸಿಡಿಲು ಬಡಿದು ಓರ್ವ ಸಾವು; ಇಬ್ಬರಿಗೆ ಗಾಯ

ajendra shetty

ಆರೋಪಿಗೆ ಸಂಜೆ ವೇಳೆ ಎದೆ ನೋವು ಕಾಣಿಸಿಕೊಂಡಿದೆ. ಮಾಹಿತಿ ತಿಳಿದ ತಕ್ಷಣ ಸಿಬಂದಿಗಳು ಕೂಡಲೇ ಆಸ್ಪತ್ರೆಗೆ ರವಾನಿಸಿದ್ದಾರೆ.  ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗ ಮಧ್ಯೆ ಅನೂಪ್ ಸಾವನ್ನಪ್ಪಿದ್ದಾರೆ ಎಂದು ಉಡುಪಿ ಎಸ್ಪಿ ಡಾ. ಅರುಣ್ ಕುಮಾರ್ ಮಾಹಿತಿ ನೀಡಿದ್ದಾರೆ.

Continue Reading

LATEST NEWS

Trending