LATEST NEWS
‘ಅಮ್ಮಾ ಬಾಯಾರಿಕೆ ಆಗುತ್ತಿದೆ’.. ಎಂದು ಆ್ಯಸಿಡ್ ಕುಡಿದ ಮಗು ಸಾ*ವು..!
ಇಂದೋರ್: ನೀರು ಎಂದು ಭಾವಿಸಿ ಆ್ಯಸಿಡ್ ಕುಡಿದು ಆರು ವರ್ಷದ ಮಗು ಸಾವನ್ನಪ್ಪಿದ ದಾರುಣ ಘಟನೆ ಇಂದೋರ್‌ನಲ್ಲಿ ಬೆಳಕಿಗೆ ಬಂದಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಮಗು ಚಿಕಿತ್ಸೆ ಫಲಕಾರಿಯಾಗದೆ ಸಾ*ವನ್ನಪ್ಪಿದೆ.
ಮನೆಯನ್ನು ಸ್ವಚ್ಛವಾಗಿಡಲು ಮಗುವುನಿ ತಂದೆ ಆ್ಯಸಿಡ್ ತಂದಿಟ್ಟಿದ್ದರು ಎನ್ನಲಾಗಿದೆ. ಬಂಗಾಂಗದಲ್ಲಿ ವಾಸವಾಗಿರುವ ಕೈಲಾಶ್ ಅಹಿರ್ವಾರ್ ಅವರ ಮಗು ನೀರು ಎಂದು ಆಕಸ್ಮಿಕವಾಗಿ ಆ್ಯಸಿಡ್ ಸೇವಿಸಿದೆ. ಪರಿಣಾಮ 6 ವರ್ಷದ ಮಖಾನ್ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಕೂಡಲೇ ಆಸ್ಪತ್ರೆಗೆ ಮಗುವನ್ನು ದಾಖಲಿಸಿದ್ದಾರೆ. ಆದರೆ ಒಂದು ವಾರಕ್ಕೂ ಹೆಚ್ಚು ದಿನಗಳ ಕಾಲ ಆಸ್ಪತ್ರೆಯಲ್ಲಿದ್ದ ಮಗು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದೆ.
ವೀಡಿಯೋ ಕಾಲ್ ತಂದ ಆಪತ್ತು; ಪತ್ನಿಗೆ ಹೆದರಿಸಲು ಹೋಗಿ ಇಹಲೋಕ ತ್ಯಜಿಸಿದ ಜಿಮ್ ಟ್ರೈನರ್
ಅಮ್ಮಾ ಬಾಯಾರಿಕೆ ಎಂದು ಆ್ಯಸಿಡ್ ಕುಡಿದ ಪುತ್ರ:
ಮೇ5.ರಂದು ರಾತ್ರಿ 12 ಗಂಟೆಗೆ ಸುಮಾರಿಗೆ ಮಖಾನ್ ತನ್ನ ತಂದೆ ಬಳಿ ಮಲಗಿದ್ದನು. ಮಧ್ಯರಾತ್ರಿ ಬಾಯಾರಿಕೆಯಾಗಿದ್ದಾಗ ತಂದೆ ಕೈಲಾಶ್ ಆತನಿಗೆ ನೀರು ಕೊಟ್ಟಿದ್ದಾರೆ. ಬಳಿಕ ಆತ ತಾಯಿ ಬಳಿ ಮಲಗಿದ್ದಾನೆ. ಸುಮಾರು 1.30 ಹೊತ್ತಿಗೆ ಮತ್ತೆ ನೀರು ಕೇಳಿದ್ದಾನೆ. ಆವಾಗ ತಾಯಿ ನೀರು ಕೊಟ್ಟು ಮಲಗಿಸಿದ್ದಾರೆ. ನಂತರ 3 ಗಂಟೆಗೆ ಮತ್ತೆ ಎದ್ದಿದ್ದಾನೆ. ಈ ವೇಳೆ ಕೂಲರ್ ಬಳಿ ಇಟ್ಟಿದ್ದ ಆ್ಯಸಿಡ್ ಬಾಟಲಿಯನ್ನು ನೀರು ಎಂದು ಭಾವಿಸಿ ಕುಡಿದಿದ್ದಾನೆ.
ಮಖಾನ್ ಮಲಗಿದ ಬಳಿಕ ಗಂಟಳಲ್ಲಿ ಉರಿ ಕಾಣಿಸಿಕೊಂಡಿದೆ. ಕೂಡಲೇ ತಾಯಿಯನ್ನು ಎಬ್ಬಿಸಿದ್ದಾನೆ. ವಾಂತಿ ಮಾಡಿದ್ದಾನೆ. ವಾಂತಿ ಮಾಡುವ ವೇಳೆ ಡೀಸೆಲ್ ವಾಸನೆ ಬಂದಿರುವುದನ್ನು ಕಂಡು ತಾಯಿ ಭಯ ಭೀತರಾಗಿದ್ದಾರೆ. ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಒಂದು ವಾರ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಪುತ್ರ ಚಿಕಿತ್ಸೆಗೆ ಸ್ಪಂಧಿಸದೆ ಇಹಲೋಕ ತ್ಯಜಿಸಿದ್ದಾನೆ. ಇದ್ದ ಒಬ್ಬ ಪುತ್ರನನ್ನು ಪೋಷಕರು ಕಳೆದುಕೊಂಡಿದ್ದಾರೆ.
LATEST NEWS
ನವೆಂಬರ್ 25ರಿಂದ ಆರಂಭವಾಗಲಿರುವ ಚಳಿಗಾಲದ ಅಧಿವೇಶನ
ಮಂಗಳೂರು/ನವದೆಹಲಿ: ಚಳಿಗಾಲದ ಅಧಿವೇಶನದ ವೇಳಾಪಟ್ಟಿಯನ್ನು ಪ್ರಕಟಿಸಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ನವೆಂಬರ್ 26ರಂದು ಸಂವಿಧಾನ ಸದನದ ಸೆಂಟ್ರಲ್ ಹಾಲ್‌ನಲ್ಲಿ ‘ಸಂವಿಧಾನ ದಿನ’ ವನ್ನು ಆಚರಿಸಲಾಗುವುದು ಎಂದು ಹೇಳಿದ್ದಾರೆ.
“ಸಂಸತ್ತಿನ ಚಳಿಗಾಲದ ಅಧಿವೇಶನ ನವೆಂಬರ್ 25ರಂದು ಪ್ರಾರಂಭವಾಗಲಿದ್ದು, ಡಿಸೆಂಬರ್ 20ರಂದು ಮುಕ್ತಾಯವಾಗಲಿದೆ” ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಇಂದು ಪ್ರಕಟಿಸಿದ್ದಾರೆ.
ಮಹಾರಾಷ್ಟ್ರ ಮತ್ತು ಜಾರ್ಖಂಡ್ ಚುನಾವಣೆಗಳ ನಂತರ ಪ್ರಾರಂಭವಾಗುವ ಅಧಿವೇಶನದಲ್ಲಿ ಸರ್ಕಾರವು ವಕ್ಫ್ ಮಸೂದೆಯನ್ನು ಮಂಡಿಸುವ ಸಾಧ್ಯತೆಯಿದೆ. ವಿವಾದಾತ್ಮಕ ವಕ್ಫ್ (ತಿದ್ದುಪಡಿ) ಮಸೂದೆಯನ್ನು ಉಭಯ ಸದನಗಳು ಅಂಗೀಕರಿಸುವುದನ್ನು ಖಚಿತಪಡಿಸಿಕೊಳ್ಳಲು ನರೇಂದ್ರ ಮೋದಿ ಸರ್ಕಾರವು ಎಲ್ಲ ಪ್ರಯತ್ನಗಳನ್ನು ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.
ಈ ಬಾರಿಯ ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ಒಂದು ರಾಷ್ಟ್ರ ಒಂದು ಚುನಾವಣಾ ಮಸೂದೆಯನ್ನು ಪರಿಚಯಿಸುವ ಸಾಧ್ಯತೆಯಿದೆ. ಇತ್ತೀಚೆಗೆ, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸರ್ಕಾರವು ಒಂದು ರಾಷ್ಟ್ರ ಒಂದು ಚುನಾವಣೆಯನ್ನು ಸಾಧಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ಹೈಲೈಟ್ ಮಾಡಿದ್ದು, ಇದರಿಂದ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆಗಳು ನಡೆಯಲಿದೆ.
LATEST NEWS
ರೈಲ್ವೆ ನಿಲ್ದಾಣದಲ್ಲಿ ಸೂಟ್‌ಕೇಸ್‌ನಲ್ಲಿ ಮಹಿಳೆಯ ಶ*ವ ಪತ್ತೆ; ತನಿಖೆ ವೇಳೆ ಬಯಲಾಯ್ತು ಸತ್ಯ!
ಮಂಗಳೂರು/ತಮಿಳುನಾಡು : ತಮಿಳುನಾಡಿನ ರೈಲ್ವೆ ನಿಲ್ದಾಣದೊಳಗೆ ಸೂಟ್ಕೇಸ್ವೊಂದರಲ್ಲಿ ಮಹಿಳೆಯ ಶ*ವ ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ತಮಿಳುನಾಡಿನ ಚೆನ್ನೈನ ಹೊರವಲಯದಲ್ಲಿರುವ ಮಿಂಜೂರ್ ರೈಲ್ವೇ ನಿಲ್ದಾಣದಲ್ಲಿ ಸೂಟ್‌ಕೇಸ್‌ನಲ್ಲಿ ಶ*ವ ಪತ್ತೆಯಾಗಿದೆ.
ತಂದೆ – ಮಗಳು ಅರೆಸ್ಟ್ :
ನವೆಂಬರ್ 4 ರ ಸೋಮವಾರ ತಡರಾತ್ರಿ 43 ವರ್ಷದ ಬಾಲಸುಬ್ರಮಣ್ಯಂ ಮತ್ತು ಅವರ 17 ವರ್ಷದ ಮಗಳು ದೊಡ್ಡ ಸೂಟ್‌ಕೇಸ್‌ನೊಂದಿಗೆ ನಿಲ್ದಾಣಕ್ಕೆ ಬಂದಿದ್ದರು. ಬಾಲಸುಬ್ರಹ್ಮಣ್ಯಂ ಆ ಸೂಟ್ಕೇಸ್ನ್ನು ಅಲ್ಲಿಯೇ ಬಿಟ್ಟು ರೈಲ್ವೆ ನಿಲ್ದಾಣದಿಂದ ಹೊರಹೋಗಲು ಯತ್ನಿಸುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿರುವ ಬಗ್ಗೆ ವರದಿಯಾಗಿದೆ.
ಸಾಮಾನು ಸರಂಜಾಮು ಬಿಟ್ಟು ಹೋಗಿರುವ ಬಗ್ಗೆ ಆತಂಕಗೊಂಡ ಪ್ರಯಾಣಿಕರು ಕೂಡಲೇ ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸೂಟ್‌ಕೇಸ್ ತುಂಬಾ ದೊಡ್ಡದಾಗಿದ್ದ ಕಾರಣ, ಅಲ್ಲಿಂದ ಸ್ಥಳಾಂತರಿಸಲು ಸಾಧ್ಯವಾಗದ ಕಾರಣ ಆರ್‌ಪಿಎಫ್ ಅಧಿಕಾರಿಗಳು ಅನುಮಾನಗೊಂಡು ಕೊರುಕ್ಕುಪೇಟೆ ಪೊಲೀಸರನ್ನು ಸಂಪರ್ಕಿಸಿದ್ದಾರೆ.
ಅನುಮಾನಗೊಂಡ ಅಧಿಕಾರಿಗಳು ಸೂಟ್‌ಕೇಸ್‌ನ ವಿಷಯಗಳ ಬಗ್ಗೆ ವಿಚಾರಿಸಲು ಬಾಲಸುಬ್ರಮಣ್ಯಂನ್ನು ವಶಕ್ಕೆ ಪಡೆದು ವಿಚಾರಿಸಿದ್ದಾರೆ. ಅವರು ಕೊಟ್ಟ ವಿವರಣೆ ಅಸ್ಪಷ್ಟವಾಗಿತ್ತು. ಇದು ಮತ್ತಷ್ಟು ಅನುಮಾನವನ್ನು ಹುಟ್ಟುಹಾಕಿತ್ತು. ಹೀಗಾಗಿ ಸೂಟ್ ಕೇಸ್ ತೆರೆಯಲಾಗಿದೆ. ಈ ವೇಳೆ ಅದರಲ್ಲಿ ಮಹಿಳೆಯ ಶ*ವ ಕಂಡು ಬಂದಿದೆ.
ಇದನ್ನೂ ಓದಿ : ಆತ್ಮಹ*ತ್ಯೆಗೂ ಮುನ್ನ ಹಗ್ಗ, ಕರ್ಟನ್ ಖರೀದಿಸಿದ್ದ ಗುರುಪ್ರಸಾದ್
ಪ್ಲಾಸ್ಟಿಕ್ ಕವರ್ನಲ್ಲಿ ಸುತ್ತಲಾಗಿದ್ದ ಶ*ವದ ತಲೆಯಲ್ಲಿ ಗಾ*ಯಗಳಿದ್ದವು. ತಕ್ಷಣವೇ ಪೊಲೀಸರು ಬಾಲಸುಬ್ರಮಣ್ಯಂ ಮತ್ತು ಅವರ ಪುತ್ರಿ ಇಬ್ಬರನ್ನೂ ಬಂಧಿಸಿ, ವಿಚಾರಣೆ ನಡೆಸಿದ್ದಾರೆ.
ಕೊ*ಲೆ ಮಾಡಿದ್ಯಾಕೆ?
ತಂದೆ ಮತ್ತು ಮಗಳು ತಾವೇ ಕೊ*ಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಮಹಿಳೆ ಮಗಳನ್ನು ವೇ*ಶ್ಯಾವಾಟಿಕೆಗೆ ಬಲವಂತಪಡಿಸಲು ಯತ್ನಿಸಿದಾಗ ಕೋಪದಿಂದ ಕೊಂ*ದಿರುವುದಾಗಿ ಹೇಳಿದ್ದಾರೆ. ಮೃ*ತಳನ್ನು ಮಾನ್ಯಂ ರಮಣಿ ಎಂದು ಪೊಲೀಸರು ಗುರುತಿಸಿದ್ದು, ಆಕೆ ಚೆನ್ನೈನಲ್ಲಿರುವ ಆರೋಪಿಗಳ ಮನೆಯ ಬಳಿ ವಾಸಿಸುತ್ತಿದ್ದಳು. ಮಹಿಳೆಯ ಕೊರಳಲ್ಲಿ 50 ಗ್ರಾಂ ಚಿನ್ನಾಭರಣವಿದ್ದು, ಆರೋಪಿಗಳು ಅದನ್ನು ಕದ್ದು ಬಾರ್‌ಗಳನ್ನಾಗಿಸಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.
LATEST NEWS
ಮಂಗಳೂರು: ರಾತ್ರಿ ಪ್ರಿಪೇಯ್ಡ್ ಆಟೋ ಇಲ್ಲದೆ ಪ್ರಯಾಣಿಕರ ಪರದಾಟ
ಮಹಾನಗರ: ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ರಾತ್ರಿ ವೇಳೆ ಪ್ರಿಪೇಯ್ಡ್ ಆಟೋ ವ್ಯವಸ್ಥೆ ಇಲ್ಲದೆ ಪ್ರಯಾಣಿಕರಿಗೆ ಸಮಸ್ಯೆಯಾಗಿದೆ. ಆಟೋ ಚಾಲಕರು ಮನಬಂದಂತೆ ಬಾಡಿಗೆ ವಸೂಲಿ ಮಾಡುತ್ತಿದ್ದಾರೆ ಎಂದು ಕೆಲವು ಪ್ರಯಾಣಿಕರು ದೂರಿದ್ದಾರೆ.
ರೈಲು ನಿಲ್ದಾಣದಲ್ಲಿ ಬೆಳಗ್ಗೆ 6ರಿಂದ ರಾತ್ರಿ 9 ಗಂಟೆಯವರೆಗೆ ಮಾತ್ರವೇ ಪ್ರಿ ಪೇಯ್ಡ್ ಆಟೋ ವ್ಯವಸ್ಥೆ ಇದೆ. ಅನಂತರ ವಂದೇಭಾರತ್ ರೈಲುಗಳು ಸಹಿತ ಹಲವಾರು ರೈಲುಗಳು ನಿಲ್ದಾಣಕ್ಕೆ ಬರುತ್ತವೆ. ಅದರಲ್ಲಿ ಬರುವ ಪ್ರಯಾಣಿಕರಿಗೆ ಪ್ರೀ ಪೇಯ್ಡ್ ಆಟೋ ಸಿಗುತ್ತಿಲ್ಲ. ಈ ಪ್ರಯಾಣಿಕರಿಂದ ಕೆಲವು ಆಟೋರಿಕ್ಷಾ ಚಾಲಕರು ತೀರಾ ಹೆಚ್ಚಿನ ಬಾಡಿಗೆಯನ್ನು ವಸೂಲಿ ಮಾಡುತ್ತಾರೆ. ಆಟೋರಿಕ್ಷಾ ನಿಲ್ದಾಣದಲ್ಲಿ ಬಾಡಿಗೆದರದ ವಿಷಯವಾಗಿ ಚರ್ಚೆ, ಗಲಾಟೆಗಳು ನಡೆಯುತ್ತವೆ. ಪೊಲೀಸರು ಕೂಡ ಇರುವುದಿಲ್ಲ. ಹಾಗಾಗಿ ಪ್ರಯಾಣಿಕರು ಬೇರೆ ಉಪಾಯವಿಲ್ಲದೆ ಹೆಚ್ಚಿನ ಬಾಡಿಗೆಗೆ ಒಪ್ಪಿಕೊಂಡು ಮನೆ ಸೇರುವಂತಾಗಿದೆ ಎಂದು ಪ್ರಯಾಣಿಕರು ದೂರಿದ್ದಾರೆ.
ಯಾಕೆ ಇಲ್ಲ?
ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಬೆಳಗ್ಗೆ 6ರಿಂದ ರಾತ್ರಿ 9.30ರ ವರೆಗೂ ಪ್ರಿ ಪೇಯ್ಡ ಆಟೋರಿಕ್ಷಾ ಕೌಂಟರ್ ತೆರೆದಿರುತ್ತದೆ.
ಮನಬಂದಂತೆ ಬಾಡಿಗೆ ದರ
ನಾನು ರಾತ್ರಿ 11.30ಕ್ಕೆ ವಂದೇಭಾರತ್ ರೈಲಿನಲ್ಲಿ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ಬಂದಾಗ ಅಲ್ಲಿ ಪ್ರಿಪೇಯ್ಡ್ ಆಟೋರಿಕ್ಷಾ ಕೌಂಟರ್ ಇರಲಿಲ್ಲ. ಇದರಿಂದ ನನಗೆ ತುಂಬಾ ತೊಂದರೆಯಾಗಿದೆ. ರಾತ್ರಿ ವೇಳೆಯೂ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ಹೆಚ್ಚಿನ ಸಂಖ್ಯೆಯ ರೈಲುಗಳು ಬರುತ್ತವೆ. ಸಾವಿರಾರು ಮಂದಿ ಪ್ರಯಾಣಿಕರು ಆಗಮಿಸುತ್ತಾರೆ. ಹಾಗಾಗಿ ಕೂಡಲೇ ರಾತ್ರಿಯೂ ಪ್ರಿಪೇಯ್ಡ್ ಆಟೋ ಕೌಂಟರ್ ಆರಂಭಿಸಬೇಕು.
- LATEST NEWS6 days ago
ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ : ಇನ್ಮುಂದೆ ಅಕ್ಕಿಯ ಜೊತೆಗೆ ಉಚಿತವಾಗಿ ಸಿಗಲಿವೆ ಈ 9 ವಸ್ತುಗಳು.!
- DAKSHINA KANNADA3 days ago
ಮಂಗಳೂರು: ನೇತ್ರಾವತಿ ಸೇತುವೆ ಬಳಿ ಭೀಕರ ಅ*ಪಘಾತ; ಓರ್ವ ಮೃ*ತ್ಯು, ಮತ್ತೋರ್ವ ಗಂಭೀರ
- kerala6 days ago
ಕಾಸರಗೋಡು : ‘ಮಗು’ ವನ್ನು ರಕ್ಷಿಸಿದ ‘ದೈವ’ನರ್ತಕ ; ವಿರೋಚಿತ ಕಥೆ !!
- FILM6 days ago
ಮದುವೆ ಬಗ್ಗೆ ಕೊನೆಗೂ ಮೌನ ಮುರಿದ ಕರಾವಳಿ ಬೆಡಗಿ ಆ್ಯಂಕರ್ ಅನುಶ್ರೀ