Connect with us

    LATEST NEWS

    ಈಜಲು ತೆರಳಿದ ಇಬ್ಬರು ವಿದ್ಯಾರ್ಥಿಗಳು ನೀರಲ್ಲಿ ಮುಳುಗಿ ಸಾ*ವು

    Published

    on

    ಉಡುಪಿ: ಈಜಲು ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ಸೆ.24ರಂದು ನಡೆದಿದೆ.

    ಬೈಂದೂರು ಯೋಜನಾನಗರದ ನಾಗೇಂದ್ರ ಮತ್ತು ರೈಲ್ವೆ ನಿಲ್ದಾಣದ ಬಳಿಯ ನಿವಾಸಿ ಶಾನ್ ಮುಹಮ್ಮದ್ ಶಫಾನ್  ಮೃತ ವಿದ್ಯಾರ್ಥಿಗಳು. ಇಬ್ಬರೂ 13 ವರ್ಷ ಪ್ರಾಯದವರು.  ಇಬ್ಬರೂ ಬೈಂದೂರು ಸರಕಾರಿ ಪ್ರೌಢ ಶಾಲೆಯ 9ನೇ ತರಗತಿಯ ವಿದ್ಯಾರ್ಥಿಗಳಾಗಿದ್ದು, ಜೊತೆಗೆ ಕಲಿಯುತ್ತಿದ್ದರು. ಪರೀಕ್ಷೆ ಮುಗಿಸಿ ಮನೆಯಲ್ಲಿ ಊಟ ಮಾಡಿದ ಬಳಿಕ ಇಬ್ಬರು ಬೈಂದೂರು ನಗರ ಸಮೀಪದ ಕೆರೆಕಟ್ಟೆಯ ಕೆರೆಗೆ ಈಜಲು ತೆರಳಿದ್ದಾರೆ. ಇಬ್ಬರಿಗೂ ಅಷ್ಟೇನು ಈಜಲು ಬಾರದ ಕಾರಣ ಮುಳುಗಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.

    ಮಂಗಳವಾರ ವಿಪರೀತ ಮಳೆ ಇರುವ ಕಾರಣ ಕರೆಯ ಸಮೀಪ ಜನ ಇದ್ದಿರಲಿಲ್ಲ.ಸಂಜೆ ವರೆಗೂ ಮನೆಗೆ ಬಾರದಿರುವ ಕಾರಣ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಬಳಿಕ ಹುಡುಕಾಡಿದಾಗ ಬೈಂದೂರು ಸೇನೇಶ್ವರ ದೇವಸ್ಥಾನದ ಹಿಂಬದಿಯ ಕೆರೆಕಟ್ಟೆಯ ಕೆರೆಯ ಬಳಿ ಒಂದು ಸೈಕಲ್, ಬಟ್ಟೆ ಹಾಗೂ ಎರಡು ಜೊತೆ ಚಪ್ಪಲಿ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕೆರೆಯಲ್ಲಿ ಹುಡುಕಾಡಿದಾಗ ಇಬ್ಬರ ಮೃತದೇಹಗಳು ಪತ್ತೆಯಾಗಿವೆ. ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ದೇಹ ದೊರೆತ ಕೆರೆಕಟ್ಟೆಯ ಕೆರೆಯು ಮಧ್ಯದಲ್ಲಿ 40 ಅಡಿ ಹಾಗೂ ಸುತ್ತಲೂ 10 ರಿಂದ20 ಅಡಿ ಆಳವಿದೆ. ಈ ಕೆರೆಯಲ್ಲಿ ಪ್ರತಿ ದಿನ ಊರಿನವರು ಈಜಲು ಬರುತ್ತಿರುತ್ತಾರೆ. ಆದರೆ ನಿನ್ನೆ ಮಳೆ ಇದ್ದುದರಿಂದ ಯಾರೂ ಈಜಲು ಬಂದಿರಲಿಲ್ಲ. ಹಾಗಾಗಿ ಸಂಜೆ ತನಕವೂ ವಿಷಯ ಬೆಳಕಿಗೆ ಬಂದಿರಲಿಲ್ಲ.

    LATEST NEWS

    ಗುಜರಾತ್: ದೇವಸ್ಥಾನದಿಂದ ಹಿಂದಿರುಗುವಾಗ ಟ್ರಕ್​ಗೆ ಕಾರು ಡಿಕ್ಕಿ, 7 ಮಂದಿ ಸಾ*ವು

    Published

    on

    ಸಬರಕಾಂತ: ದೇವಸ್ಥಾನದಿಂದ ಹಿಂದಿರುಗುವಾಗ ಟ್ರಕ್​ಗೆ ಕಾರು ಡಿಕ್ಕಿಯಾಗಿ, 7 ಮಂದಿ ಸಾ*ವನ್ನಪ್ಪಿರುವ ಘಟನೆ ಗುಜರಾತ್‌ನ ಸಬರಕಾಂತ ಜಿಲ್ಲೆಯಲ್ಲಿ ನಡೆದಿದೆ.

    ಕಾರಿನಲ್ಲಿ ಎಂಟು ಜನರು ಕುಳಿತಿದ್ದರು, ಅವರೆಲ್ಲರೂ ಅರಾವಳಿ ಜಿಲ್ಲೆಯಲ್ಲಿರುವ ಶಾಮಲಾಜಿ ದೇವಸ್ಥಾನಕ್ಕೆ ಭೇಟಿ ನೀಡಿ ಅಹಮದಾಬಾದ್‌ಗೆ ಹಿಂತಿರುಗುತ್ತಿದ್ದರು. ಕಾರು ಹಿಮ್ಮತ್‌ನಗರ ಪ್ರದೇಶದ ಸಹಕಾರಿ ಗಿರಣಿ ಬಳಿ ಬಂದ ತಕ್ಷಣ ಟ್ರಕ್‌ಗೆ ಡಿಕ್ಕಿ ಹೊಡೆದಿದೆ ಎಂದು ಹೇಳಲಾಗಿದೆ.

    ಅಗ್ನಿಶಾಮಕ ದಳದ ಸಿಬ್ಬಂದಿಯೊಂದಿಗೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು. ಅಗ್ನಿಶಾಮಕ ದಳದವರು ಕಾರಿನಿಂದ ಶ*ವಗಳನ್ನು ತೆಗೆಯಲು ಕಟ್ಟರ್ ಬಳಸಬೇಕಾಯಿತು. ಈ ಅಪಘಾತದಲ್ಲಿ ಪ್ರಾ*ಣ ಕಳೆದುಕೊಂಡವರೆಲ್ಲರೂ ಅಹಮದಾಬಾದ್ ನಿವಾಸಿಗಳು ಎಂದು ತಿಳಿದು ಬಂದಿದೆ.

    Continue Reading

    bangalore

    ಸೇಮ್ ಸೇಮ್ ಬಟ್ ಡಿಫರೆಂಟ್ , ಮೀ ಆ್ಯಂಡ್ ಮಿನಿ ಮೀ : ರಾಧಿಕ ಪಂಡಿತ್ ವೈರಲ್ ಫೋಟೋ

    Published

    on

    ಸ್ಯಾಂಡಲ್‌ವುಡ್‌ನ ಪ್ರಿಯತಮೆಯರಾದ ಯಶ್ ಮತ್ತು ರಾಧಿಕಾ ಪಂಡಿತ್, ಅಭಿಮಾನಿಗಳಿಂದ ‘ರಾಕಿಂಗ್ ಕಪಲ್’ ಎಂದು ಕರೆಯಲ್ಪಡುತ್ತಾರೆ. ಅವರಿಬ್ಬರು ತಮ್ಮ ಕುಟುಂಬ ಮತ್ತು ಮಕ್ಕಳ ಸಣ್ಣ ಟೀಸರ್‌ಗಳನ್ನು ತೋರಿಸುವ ಚಿತ್ರಗಳು ಮತ್ತು ವೀಡಿಯೊಗಳನ್ನು ನಿರಂತರವಾಗಿ ಪೋಸ್ಟ್ ಹಾಕುತ್ತಿದ್ದು, ಅಭಿಮಾನಿಗಳು ಯಾವಾಗಲೂ ಈ ಪೋಸ್ಟ್‌ಗಳನ್ನು ಬಹಳ ಉತ್ಸಾಹ ಮತ್ತು ಪ್ರೀತಿಯಿಂದ ಲ್ಯಾಪ್ ಅಪ್ ಮಾಡುತ್ತಿದ್ದಾರೆ.


    ರಾಧಿಕಾ ಪಂಡಿತ್ ಹಾಗೂ ಯಶ್ ದಂಪತಿಯ ಮುದ್ದಿನ ಮಗಳ ಫೋಟೋಗಳನ್ನು ಆಗಾಗ ಹಂಚಿಕೊಳ್ಳುತ್ತಾ ಇರುತ್ತಾರೆ. ಈಗ ರಾಧಿಕಾ ಪಂಡಿತ್ ಅವರು ಒಂದು ಅಪರೂಪದ ಫೋಟೋ ಹಂಚಿಕೊಂಡಿದ್ದಾರೆ. ಅಪ್ಪನ ತೋಳಲ್ಲಿ ತಾವಿರುವ ಬಾಲ್ಯದ ಫೋಟೋ ಹಾಗೂ ಐರಾಳ ಫೋಟೋ ಜೊತೆಯಾಗಿ ಹಾಕಿದ್ದು, ಈ ಫೋಟೋಗೆ ಭರ್ಜರಿ ಲೈಕ್ಸ್ ಸಿಕ್ಕಿದೆ.
    ರಾಧಿಕಾ ಪಂಡಿತ್ ಮಗಳನ್ನು ತುಂಬಾನೇ ಹಚ್ಚಿಕೊಂಡಿದ್ದಾರೆ. ಮಗಳ ಮೇಲಿನ ಪ್ರೀತಿ ಅವರಿಗೆ ಯಾವಾಗಲೂ ಕಡಿಮೆ ಆಗುವಂಥದ್ದಲ್ಲ. ಈಗ ಅವರು ಹಂಚಿಕೊಂಡಿರುವ ಫೋಟೋ ಸಖತ್ ಗಮನ ಸೆಳೆದಿದೆ. ಚಂದನ್ ಶೆಟ್ಟಿ ಸೇರಿದಂತೆ ಅನೇಕರು ಈ ಫೋಟೋಗೆ ಕಮೆಂಟ್ ಮಾಡಿದ್ದಾರೆ.
    ರಾಧಿಕಾ ಪಂಡಿತ್ ತಂದೆ ಕೃಷ್ಣಪ್ರಸಾದ್ ಅವರ ತೋಳಲ್ಲಿ ಕುಳಿತು ನಗುತ್ತಿದ್ದಾರೆ. ಅದೇ ರೀತಿ ಐರಾ ಕೂಡ ಕೃಷ್ಣಪ್ರಸಾದ್ ತೋಳಲ್ಲಿ ಕುಳಿತು ಸ್ಮೈಲ್ ಮಾಡಿದ್ದಾರೆ. ಅವರಿಬ್ಬರ ಮಧ್ಯೆ ತುಂಬಾ ಹೋಲಿಕೆ ಇದ್ದು, ನಗು, ಮುಖದ ಆಕಾರ ಒಂದೇ ರೀತಿ ಇದೆ. ಅನೇಕರು ಫೋಟೋಗೆ ‘ಜೂನಿಯರ್ ರಾಧಿಕಾ ಪಂಡಿತ್’ ಎಂದು ಕಮೆಂಟ್ ಮಾಡಿದ್ದಾರೆ.
    ‘ನಾನು ಹಾಗೂ ನನ್ನ ಮಿನಿಗೆ ಒಬ್ಬರೇ ಫೇವರಿಟ್​ ವ್ಯಕ್ತಿ’ ಎಂದು ರಾಧಿಕಾ ಪಂಡಿತ್ ಕ್ಯಾಪ್ಶನ್ ನೀಡಿದ್ದಾರೆ. ‘ಆಹಾ ಎಂಥ ಅದ್ಭುತ. ಸೇಮ್ ಸೇಮ್.. ಬಟ್ ಡಿಫರೆಂಟ್’ ಎನ್ನುವ ಕಮೆಂಟ್​ಗಳು ಕೂಡ ಈ ಫೋಟೋಗೆ ಬಂದಿದ್ದು ಸಧ್ಯ ಫುಲ್ ವೈರಲ್ ಆಗುತ್ತಿದೆ.

    Continue Reading

    LATEST NEWS

    VIDEO: ನಾಗರ ಹಾವಿನಿಂದ ಮಗುವನ್ನು ರಕ್ಷಿಸಿದ ಪಿಟ್‌ ಬುಲ್‌ ನಾಯಿ..!

    Published

    on

    ಉತ್ತರಪ್ರದೇಶ/ಮಂಗಳೂರು: ಪಿಟ್‌ ಬುಲ್ ನಾಯಿಯೊಂದು ನಾಗರ ಹಾವಿನ ಮೇಲೆ ದಾಳಿ ಮಾಡಿ ಕೊಂದು ಹಾಕುವ ಮೂಲಕ ಮಗುವಿನ ಪ್ರಾಣ ರಕ್ಷಿಸಿದೆ. ಈ ಘಟನೆ ಉತ್ತರ ಪ್ರದೇಶದ ಝಾನ್ಸಿಯ ಶಿವಗಣೇಶ್ ಕಾಲೋನಿಯಲ್ಲಿ ನಡೆದಿದೆ. ಮನೆಯ ಕೆಲಸದಾಕೆಯ ಮಕ್ಕಳು ಹೂದೋಟದಲ್ಲಿ ಆಟವಾಡುತ್ತಿದ್ದಾಗ ನಾಗರ ಹಾವು ಕಾಣಿಸಿಕೊಂಡಿದೆ. ಈ ವೇಳೆ ಸಹಾಯಕ್ಕಾಗಿ ಮಕ್ಕಳು ಜೋರಾಗಿ ಕಿರುಚಾಡುವ ಸದ್ದು ಕೇಳಿ ಇನ್ನೊಂದು ಬದಿಯಲ್ಲಿ ಕಟ್ಟಿ ಹಾಕಲಾಗಿದ್ದ ಪಿಟ್‌ಬುಲ್ ಮಕ್ಕಳ ರಕ್ಷಣೆಗೆ ಧಾವಿಸಿದೆ. ಹಾವಿನ ದೃಷ್ಟಿಯನ್ನು ತನ್ನತ್ತ ಸೆಳೆದು ಹಾವನ್ನು ಕಚ್ಚಿ ಕೊಂದು ಹಾಕಿದೆ.

    ಪಿಟ್ ಬುಲ್ ‘ಜೆನ್ನಿ’ ಇದುವರೆಗೆ 8-10 ಹಾವುಗಳನ್ನು ಕೊಂದಿದೆ
    ಈ ಸಾಕು ನಾಯಿ ಪಿಟ್‌ಬುಲ್ ಹೆಸರು ಜೆನ್ನಿ ಎಂದಾಗಿದ್ದು ಇದರ ಮಾಲೀಕ ಪಂಜಾಬ್‌ ಸಿಂಗ್‌ ಪಿಟ್‌ಬುಲ್‌ ಸಾಹಸದ ಮಾಹಿತಿ ಹಂಚಿಕೊಂಡಿದ್ದಾರೆ. ಈ ಜೆನ್ನಿ ಈಗಾಗಲೇ ಇದಕ್ಕೂ ಮೊದಲು ಕೂಡಾ ಜೀವ ರಕ್ಷಣೆ ಮಾಡಿದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಸುಮಾರು ಎಂಟರಿಂದ ಹತ್ತು ಹಾವುಗಳನ್ನು ಜೆನ್ನಿ ಕೊಂದು ಹಾಕಿದೆ ಎಂದಿದ್ದಾರೆ. ನಮ್ಮ ಮನೆ ಹೊಲದ ಪಕ್ಕದಲ್ಲಿ ಇರುವ ಕಾರಣ ಮಳೆಗಾಲದಲ್ಲಿ ಅನೇಕ ಹಾವುಗಳು ಬರುತ್ತದೆ. ಅದು ನಮ್ಮ ಗಮನಕ್ಕೆ ಬಾರದೇ ಇದ್ರೂ ಜೆನ್ನಿಯ ಗಮನಕ್ಕೆ ಬಂದಿದ್ದು ಕೊಂದು ಹಾಕಿ ನಮಗೆ ರಕ್ಷಣೆ ನೀಡಿದೆ ಎಂದು ಹೇಳಿದ್ದಾರೆ.

    ಕಿವಿಯಲ್ಲಿದ್ದಾಗಲೇ ಇಯರ್​ ಬಡ್ಸ್ ಸ್ಫೋಟ.. ಶ್ರವಣ ನಷ್ಟ ಅನುಭವಿಸುತ್ತಿರೋ ಯುವತಿ

    ಸೆಪ್ಟಂಬರ್ 23 ರಂದು ಮನೆಯ ಬಳಿ ಕಪ್ಪು ನಾಗರ ಹಾವು ಕಾಣಿಸಿಕೊಂಡಾಗ ಮನೆಯ ಸಹಾಯಕಿಯ ಮಕ್ಕಳು ಆಟವಾಡುತ್ತಿದ್ದರು. ಮಕ್ಕಳು ಕಿರುಚಿದಾಗ ಹಾವು ಓಡಿಹೋಗಲು ತಿರುಗಿತು. ಆಗ ನಮ್ಮ ಪಿಟ್ ಬುಲ್ ಅದನ್ನು ಗಮನಿಸಿ, ಅದರ ಮೇಲೆ ದಾಳಿ ಮಾಡಿ ಅದನ್ನು ಕೊಂದು ಹಾಕಿದೆ ಎಂದು ನಾಯಿಯ ಮಾಲೀಕ ಹೇಳಿದ್ದಾರೆ.

    Continue Reading

    LATEST NEWS

    Trending