Connect with us

BANTWAL

ತುಳುನಾಡಿನಲ್ಲಿ ಶುರುವಾಯ್ತು ಕಂಬಳದ ಗದ್ದಲ-ಸದ್ದಿಲ್ಲದೆ ಗಮನಸೆಳೆದ ಬಜಪೆಯ ಕಬೆತ್ತಿಗುತ್ತು ಕಂಬಳ

Published

on

ಮಂಗಳೂರು: ‘ಕಂಬಳ’ ಅಂದರೇನೆ, ತುಳುನಾಡಿನ ಜನರಲ್ಲಿ ಅದೇನೋ ಒಂದು ತೆರನಾದ ನವೋಲ್ಲಾಸ, ಹುರುಪು, ಸಂಭ್ರಮ. ಇಂದು ಕಂಬಳ ಕೇವಲ ಮನೋರಂಜನೆಗಷ್ಟೇ ಸೀಮಿತವಾಗದೆ ಧಾರ್ಮಿಕ ನಂಬಿಕೆಯನ್ನು ಹೊಂದಿದೆ.

ಇದೀಗ ಹೆಚ್ಚಿನ ಕಂಬಳಗಳು ಧಾರ್ಮಿಕ ನಂಬಿಕೆಯಿಂದ ಪ್ರತಿಷ್ಠಿತ ಕಣವಾಗಿ ಪರಿವರ್ತಿತವಾಗಿದೆ ಎಂದರೆ ತಪ್ಪಗಾಲಿಕ್ಕಿಲ್ಲ. ಇವೆಲ್ಲದರ ನಡುವೆ ಬಜಪೆ ಸಮೀಪದ ಪಡುಪೆರಾರ ಕಬೆತ್ತಿಗುತ್ತು ಎಂಬ ಗ್ರಾಮೀಣ ಪ್ರದೇಶವೊಂಧರಲ್ಲಿ ಸದ್ದಿಲ್ಲದೆ ಸಂಪ್ರದಾಯಿಕ ಕಂಬಳವೊಂದು ನಡೆಯುತ್ತಿದೆ.

 


ಕಂಬಳ ಕೇವಲ ಮನರಂಜನೆಗೆ ಸೀಮಿತವಾಗಿಲ್ಲ ಇದು ಧಾರ್ಮಿಕ ನಂಬಿಕೆಯಿಂದ ಕೂಡಿದೆ. ಬಜಪೆ ಸಮೀಪದ ಪೆರಾರ ಮಾಗಣೆಯಲ್ಲಿ ಪೆರಾರ ಶ್ರೀ ಬಲವಾಂಡಿ ಕ್ಷೇತ್ರದ ಕಟ್ಟುಪಾಡು, ನಿಯಮಗಳಿಗೊಳಪಟ್ಟು ಮೂರು ಪೂಕರೆ ಕಂಬಳಗಳು ಹಾಗೂ ಒಂದು ಬಾರಪಾಡು ಕಂಬಳ ಪರಂಪರೆಯಿಂದ ನಡೆದುಕೊಂಡು ಬಂದಿದೆ.

ಕೊಳಕೆಬೈಲು ಪೂಕರೆ ಕಂಬಳ ಮಾಗಣೆಯ ಪ್ರಥಮ ಕಂಬಳವಾಗಿದೆ. ಪರಾರಿ ಪೂಕರೆ ಕಂಬಳ ಮಾಗಣೆಯ ಎರಡನೇ ಕಂಬಳ, ಬಳಿಕ ಕಬೆತ್ತಿಗುತ್ತು ಬಾರಪಾಡು ಕಂಬಳ, ಮುಂಡಬೆಟ್ಟು ಗುತ್ತು ಕಾಣಿಕೆ ಕಂಬಳಗಳು ನಡೆಯುತ್ತದೆ.


ಪೆರಾರ ಬಲವಂಡಿ ಕ್ಷೇತ್ರಕ್ಕೆ ಒಟ್ಟು 16 ಗುತ್ತು ಮನೆತನಗಳಿದ್ದು ಅದರಲ್ಲಿ ಕಬೆತ್ತಿಗುತ್ತು ಕೂಡ ಒಂದು. ಕಬೆತ್ತಿಗುತ್ತಿನಲ್ಲಿ ಕಂಬಳದ ದಿನ ಕಂಬಳದಲ್ಲಿ ಭಾಗವಹಿಸುವ ಕೋಣಗಳನ್ನು ದೈವಸ್ಥಾನದ ಮುಂಭಾಗಕ್ಕೆ ತಂದು ಮೊಣಕಾಲೂರಿ ನಮಸ್ಕರಿಸಿ ನಂತರ ಕಂಬಳದ ಗದ್ದೆ ಬಳಿ ತರಲಾಗುತ್ತದೆ.

ಅಲ್ಲಿ ಕೋಣಗಳನ್ನು ಕಂಬಳಕ್ಕೆ ಸಿದ್ದಪಡಿಸಿ ಮಂಜೊಟ್ಟಿ ಮೂಲಕ ಕಂಬಳ ಗದ್ದೆಗಳಿಗೆ ಇಳಿಸಿ ಮೂರು ಸುತ್ತು ಕೊಣಗಳನ್ನು ಓಡಿಸಲಾಗುತ್ತದೆ.

ನಂತರ ಮಂಜೊಟ್ಟಿಯಲ್ಲಿ ಕಬೆತ್ತಿಗುತ್ತು ಮನೆತನದ ಈಗಿನ ಯಜಮಾನ ಮೋಹನ ಪೂಜಾರಿ ಹಾಗೂ ಆಗಮಿಸಿದ ಪೆರಾರ ಕ್ಷೇತ್ರಕ್ಕೊಳಪಟ್ಟ ಎಲ್ಲ ಗುತ್ತುಗಳ ಪ್ರಮುಖರು, ಸರ್ವರ ಸಮುಖದಲ್ಲಿ ಬಾರೆ ಪಗಪುನು ಸಾಂಪ್ರದಾಯಿಕ ಕಟ್ಟಳೆಯಿದೆ.


ಬಳಿಕ ಬಾಳೆಗಿಡವನ್ನು ಪೂರ್ವನಿಗದಿತ ವ್ಯಕ್ತಿ ಕಂಬಳ ಗದ್ದೆಯ ಮಂಜೊಟ್ಟಿಯ ವಿರುದ್ಧ ದಿಕ್ಕಿನಲ್ಲಿ ನೆಟ್ಟು ಬಳಿಕ ವಿರುದ್ದ ದಿಕ್ಕಿನಲ್ಲಿ ಓಡಿ ಬಂದು ಮಂಜೊಟ್ಟಿ ತಲುಪಿದಲ್ಲಿಗೆ ಕಬೆತ್ತಿಗುತ್ತು ಬಾರೆಪಾಡು ಕಂಬಳ ಸಂಪನ್ನಗೊಳ್ಳುತ್ತದೆ.


ಹಿಂದಿನ ದಿನಗಳಲ್ಲಿ ಹಲವು ಜೊತೆ ಕೋಣಗಳು ಈ ಕಂಬುಲದಲ್ಲಿ ಬಾಗವಹಿಸುತ್ತಿದ್ದು ಇದೀಗ ಕೋಣಗಳ ಸಂಖ್ಯೆ ಕಡಿಮೆಯಾದ ಕಾರಣ ಕಂಬಳದಲ್ಲಿ ಭಾಗವಹಿಸುವ ಕೋಣಗಳ ಸಂಖ್ಯೆಯೂ ಕಡಿಮೆಯಾಗಿದೆ.


ಕಬೆತ್ತಿಗುತ್ತು ಕಂಬಳ ಗದ್ದೆಯಲ್ಲಿ ಸುಗ್ಗಿ ಸಾಗುವಳಿಗೆ ಬಾರೆಪಾಡು ಕಂಬಳವಾದರೆ ಏಣೆಲು ಸಾಗುವಳಿಗೆ ಕಾಪು ಇಡುವ ಕ್ರಮವಿದೆ.

ಕಂಬಳ ಸಣ್ಣಕ್ಕಿಯ ಬೆಳೆ ಬೆಳೆದು ಪೆರಾರ ಕ್ಷೇತ್ರದ ವರ್ಷಾವಧಿ ಉತ್ಸವದ ಸಂದರ್ಭ ಬುಲೆ ಕಾಣಿಕೆ ನೀಡುವ ಸಂಪ್ರದಾಯವನ್ನು ಹಿಂದಿನಿಂದಲೂ ಮೋಹನ್ ಪೂಜಾರಿಯವರ ಕುಟುಂಬ ಬೆಳೆಸಿಕೊಂಡು ಬಂದಿದ್ದಾರೆ.

ಸಂಪ್ರದಾಯಕ್ಕೆ ಚ್ಯುತಿ ಬರದಂತೆ ಸಂಸ್ಕೃತಿಯನ್ನು ಆಚರಿಸುವ ಮೊಹನ್ ಪೂಜಾರಿಯವರ ಕಾರ್ಯ ಅಭಿನಂದನೀಯ.

BANTWAL

Bantwala: ಹೃದಯ ಸಂಬಂಧಿ ಖಾಯಿಲೆಯಿಂದ 4 ವರ್ಷದ ಬಾಲಕಿ ನಿಧನ..!

Published

on

ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ 4 ವರ್ಷದ ಪುಟ್ಟ ಬಾಲಕಿಯೋರ್ವಳು ಮೃತಪಟ್ಟ ಘಟನೆ ಸೆ.24ರಂದು ಬಂಟ್ವಾಳದ ಮಿತ್ತೂರಿನಲ್ಲಿ ನಡೆದಿದೆ.

ಬಂಟ್ವಾಳ: ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ 4 ವರ್ಷದ ಪುಟ್ಟ ಬಾಲಕಿಯೋರ್ವಳು ಮೃತಪಟ್ಟ ಘಟನೆ ಸೆ.24ರಂದು ನಡೆದಿದೆ.

ಮೃತ ಬಾಲಕಿಯನ್ನು ಬಂಟ್ವಾಳ ಮಿತ್ತೂರು ಸಮೀಪದ ಪಾಟ್ರಕೋಡಿ ನಿವಾಸಿ ಇಬ್ರಾಹಿಂ ಬಾತಿಷಾ ರವರ ಪುತ್ರಿ ಜಮೀಲಾ ಸನಿಕ (4) ಎಂದು ತಿಳಿದು ಬಂದಿದೆ.

ಜಮೀಲಾ  ಬಾಲಕಿ ಪುತ್ತೂರಿನ ಮುರದಲ್ಲಿರುವ ಅಲ್ ಬಿರ್ರ್ ಸ್ಕೂಲ್ ನ ಎಲ್.ಕೆ.ಜಿ. ಯಲ್ಲಿ ಕಲಿಯುತ್ತಿದ್ದಳು.

ಈಕೆ ಅನಾರೋಗ್ಯದಿಂದ ಇದ್ದು, ಬೆಂಗಳೂರಿನ ಹೃದಯಾಲಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು.

ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.

Continue Reading

BANTWAL

Bantwala: ಓವರ್ ಟೇಕ್ ಮಾಡಲು ಹೋದ ಟೆಂಪೋ ರಿಕ್ಷಾ – ಕರೆಂಟ್ ಕಂಬಕ್ಕೆ ಗುದ್ದಿದ ಬಸ್..!

Published

on

ಬಂಟ್ವಾಳ: ಸರಕಾರಿ ಬಸ್ ಒಂದು ಓವರ್ ಟೇಕ್ ಮಾಡುತ್ತಿದ್ದ ಟೆಂಪೋ ರಿಕ್ಷಾವನ್ನು ತಪ್ಪಿಸಲು ಹೋಗಿ ಕರೆಂಟ್ ಕಂಬಕ್ಕೆ ಗುದ್ದಿದ ಘಟನೆ ಬಂಟ್ವಾಳದ ಸಜಿಪಮೂಡ ಗ್ರಾಮದ ಕಂದೂರು ಎಂಬಲ್ಲಿ ನಡೆದಿದೆ.

ಮೆಲ್ಕಾರಿನಿಂದ ಬರುತ್ತಿದ್ದ ಇಲ್ಯಾಸ್ ಟೆಂಪೋ ರಿಕ್ಷಾ ಚಾಲಕನು ಕಂದೂರಿನ ಬಜಾರ್ ಅಡಿಟೋರಿಯಮ್ ಬಳಿ ಬರುತ್ತಿದ್ದ ಆಕ್ಟಿವಾ ಗಾಡಿಯೊಂದನ್ನು ಓವರ್ ಟೇಕ್ ಮಾಡುತ್ತಿದ್ದ.

ಈ ವೇಳೆ ಮುಡಿಪು ಮಾರ್ಗವಾಗಿ ಬರುತ್ತಿದ್ದ ಕಾಸರಗೋಡು ಬಿ.ಸಿ.ರೋಡ್ ಬಸ್ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಕರೆಂಟ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.

ಬಸ್ ಗುದ್ದಿದ್ದ ರಭಸಕ್ಕೆ ಕರೆಂಟ್ ಕಂಬ ತುಂಡಾಗಿದೆ.

ಬಸ್ಸಿನಲ್ಲಿದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸ್ಥಳಕ್ಕೆ ಬಂಟ್ವಾಳ ಸಂಚಾರಿ ಠಾಣಾ ಪೋಲಿಸರು ಆಗಮಿಸಿ, ಪರಿಶೀಲನೆ ನಡೆಸಿದರು.

Continue Reading

BANTWAL

Bantwala: ಕಾರುಗಳ ನಡುವೆ ಸರಣಿ ಅಪಘಾತ..!

Published

on

ಪಾಣೆಮಂಗಳೂರು ಸೇತುವೆಯಲ್ಲಿ 2 ಕಾರುಗಳ ನಡುವೆ ಮುಖಾಮುಖಿ ಢಿಕ್ಕಿಯಾಗಿ ಸುಮಾರು ಒಂದು ತಾಸಿಗಿಂತಲೂ ಅಧಿಕವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರಕ್ಕೆ ತೊಂದರೆಯಾದ ಘಟನೆ ನಡೆದಿದೆ.

ಬಂಟ್ವಾಳ: ಪಾಣೆಮಂಗಳೂರು ಸೇತುವೆಯಲ್ಲಿ 2 ಕಾರುಗಳ ನಡುವೆ ಮುಖಾಮುಖಿ ಢಿಕ್ಕಿಯಾಗಿ ಸುಮಾರು ಒಂದು ತಾಸಿಗಿಂತಲೂ ಅಧಿಕವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರಕ್ಕೆ ತೊಂದರೆಯಾದ ಘಟನೆ ನಡೆದಿದೆ.

ಪಾಣೆಮಂಗಳೂರು ಸೇತುವೆಯಲ್ಲಿ ಎರಡು ಕಾರುಗಳು ಡಿಕ್ಕಿಯಾಗಿದ್ದು, ಇದರ ಹಿಂಬದಿಯಿಂದ ಬಂದ ಮತ್ತೆ ಎರಡು ವಾಹನಗಳು ಢಿಕ್ಕಿ ಯಾಗಿದೆ.

ಡಿಕ್ಕಿಯ ರಭಸಕ್ಕೆ ಎರಡು ಕಾರುಗಳು ಜಖಂಗೊಂಡಿದೆ.

ಆದರೆ ಅದೃಷ್ಟವಶಾತ್ ಕಾರಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಗಾಯವಾಗದೆ ಪಾರಾಗಿದ್ದಾರೆ.

ಇದರ ಜೊತೆಗೆ ಸೇತುವೆ ಸಮೀಪ ನೆಹರು ನಗರ ಎಂಬಲ್ಲಿ ಲಾರಿಯೊಂದರ ಟಯರ್ ಕೆಟ್ಟು ಹೋಗಿ ನಿಂತಿತ್ತು.

ಹೀಗಾಗಿ ತಾಸುಗಟ್ಟಲೆ ವಾಹನಗಳು ಸಾಲಾಗಿ ನಿಂತಿದ್ದವು.

ಸೇತುವೆಯಲ್ಲಿ ಅಪಘಾತ ಸಂಭವಿಸಿದ ಪರಿಣಾಮ ವಾಹನಗಳ ಸಂಚಾರಕ್ಕೆ ಅಡ್ಡಿಯಾಯಿತು.

ವಾಹನಗಳನ್ನು ಕ್ಲಿಯರ್ ಮಾಡಲು ಟ್ರಾಫಿಕ್ ಪೋಲೀಸರು ಹರಸಹಾಸ ಪಟ್ಟರು.

ಅಪಘಾತ ನಡೆದು ಕೆಲವೇ ಹೊತ್ತಿನಲ್ಲಿ ವಾಹನಗಳ ಸಾಲು ಸುಮಾರು ಉದ್ದಕ್ಕೆ ತಲುಪಿತ್ತು.

ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾದ ಹಿನ್ನೆಲೆಯಲ್ಲಿ ವಾಹನ ಸವಾರರು ಪಾಣೆಮಂಗಳೂರು ‌ಪೇಟೆ ಮೂಲಕ ಹಳೆ ಸೇತುವೆ ಮೂಲಕ ಸಂಚಾರಕ್ಕೆ ಪ್ರಯತ್ನ ಮಾಡಿದರಾದರೂ ಅಲ್ಲಿಯೂ ಟ್ರಾಫಿಕ್ ಸಮಸ್ಯೆ ಉಂಟಾಯಿತು.

ಪಾಣೆಮಂಗಳೂರು ಹಳೆಯ ಸೇತುವೆ ಮೇಲೆ ವಾಹನಗಳು ಹೋಗಿ ಸಾಲು ಸಾಲಾಗಿ ನಿಂತಿರುವ ಪೋಟೋ ವೈರಲ್ ಆಗಿದೆ.

ರಾತ್ರಿ ಹೊತ್ತು ವಾಹನಗಳ ಲೈಟ್ ಮತ್ತು ನೇತ್ರಾವತಿ ನದಿಯ ನೀರು ಕಂಗೊಳಿಸುವ ಚಿತ್ರವನ್ನು ಪಾಣೆಮಂಗಳೂರು ಮಂಗಳೂರು ಹೊಸ ಸೇತುವೆಯಿಂದ ಕ್ಲಿಕ್ ಮಾಡಿದ್ದಾರೆ.

ಪೊಲೀಸ್ ಸಿಬ್ಬಂದಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನ ಮಾಡಿದರು.

Continue Reading

LATEST NEWS

Trending