DAKSHINA KANNADA
ಎಚ್ಚರಿಕೆ ನೀಡದೆ ನಡೆಯುತ್ತಿದೆ ಟೋಯಿಂಗ್ ಕಾರ್ಯ; ಟ್ರಾಫಿಕ್ ಸಮಸ್ಯೆಯಿಂದ ಕಂಗೆಟ್ಟ ಜನತೆ..
Published
4 years agoon
By
Adminಮಂಗಳೂರು:ಮಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಕುರಿತಂತೆ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಜೊತೆ ನಗರ ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಮಂಗಳವಾರ ಸಭೆ ನಡೆಸಿದ್ದಾರೆ. ವಾಹನ ಸವಾರರಿಗೆ ವಾಹನ ನಿಲುಗಡೆಯ ಬಗ್ಗೆ ಧ್ವನಿವರ್ಧಕದ ಮೂಲಕ ಎಚ್ಚರಿಕೆ ನೀಡದೆ ಟೋಯಿಂಗ್ ನಡೆಸುತ್ತಿರುವ ಕುರಿತು ಮಂಗಳೂರು ನಗರ ಪೊಲೀಸ್ ಆಯುಕ್ತರ ಜೊತೆ ಮಾತುಕತೆ ನಡೆಸಿರುವುದಾಗಿ ಶಾಸಕ ವೇದವ್ಯಾಸ ಕಾಮತ್ ಹೇಳಿದ್ದಾರೆ.
ನಿರ್ಬಂಧಿತ ಪ್ರದೇಶದಲ್ಲಿ ನಿಲ್ಲಿಸುವ ವಾಹನಗಳನ್ನು ಟೋಯಿಂಗ್ ಮಾಡೋ ಸಂದರ್ಭ ಧ್ವನಿ ವರ್ಧಕದ ಮೂಲಕ ಎಚ್ಚರಿಕೆ ನೀಡಿ ಬಳಿಕ ಟೋಯಿಂಗ್ ಮಾಡಬೇಕು
ವಾಹನ ಸವಾರರ ಗಮನಕ್ಕೆ ತಾರದೆ ನೇರವಾಗಿ ಟೋಯಿಂಗ್ ಮಾಡುವುದು ಸರಿಯಲ್ಲ, ಕೆಲವೊಮ್ಮೆ ತುರ್ತು ಪರಿಸ್ಥಿತಿಯಲ್ಲಿ ವಾಹನ ನಿಲ್ಲಿಸಿ ತೆರಳುವ ಸಂದರ್ಭ ಸೂಚನೆ ನೀಡದೆ ಟೋಯಿಂಗ್ ನಡೆಸುವ ಕುರಿತು ದೂರುಗಳು ಬಂದಿವೆ.
ಅಂಗಡಿಗೆ ತೆರಳಿದ ಗ್ರಾಹಕರು ಹೊರಬರುವಾಗ ವಾಹನವಿಲ್ಲದೆ ಕಂಗಾಲಾಗಿ ಪೊಲೀಸ್ ಠಾಣೆಗಳಿಗೆ ಅಲೆದಾಡಿದ ನಿದರ್ಶನಗಳಿವೆ.
ಇದೆಲ್ಲವನ್ನೂ ಸರಿಪಡಿಸಿ, ಸಾರ್ವಜನಿಕರಿಗೆ ತೊಂದರೆಯಾಗದಂತೆ ಇಲಾಖೆಯು ಸಹಕರಿಸುವಂತೆ ಶಾಸಕ ಕಾಮತ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯ ಮೀನುಗಾರಿಕಾ ನಿಗಮದ ಅದ್ಯಕ್ಷರಾದ ನಿತಿನ್ ಕುಮಾರ್, ಮಂಗಳೂರು ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿಯ ಅದ್ಯಕ್ಷರಾದ ಲೀಲಾವತಿ ಪ್ರಕಾಶ್, ಮಾಜಿ ಮೇಯರ್ ದಿವಾಕರ್ ಪಾಂಡೇಶ್ವರ, ಪಾಲಿಕೆ ಸದಸ್ಯರಾದ ಸುಧೀರ್ ಶೆಟ್ಟಿ ಕಣ್ಣೂರು, ಪೂರ್ಣಿಮಾ, ಬಿಜೆಪಿ ಮಂಗಳೂರು ದಕ್ಷಿಣ ಮಂಡಲ ಅದ್ಯಕ್ಷರಾದ ವಿಜಯ್ ಕುಮಾರ್ ಶೆಟ್ಟಿ, ಮಂಡಲ ಪ್ರಧಾನ ಕಾರ್ಯದರ್ಶಿ ರೂಪಾ. ಡಿ ಬಂಗೇರ ಉಪಸ್ಥಿತರಿದ್ದರು.
ಬಂಟ್ವಾಳ : ಬಂಟ್ವಾಳ ತಾಲೂಕಿನ ಸಾಲೆತ್ತೂರು ಸಮೀಪದ ಕಾಡುಮಠದ ಬಳಿ ಅಟೋ ಹಾಗೂ ಬೈಕ್ ಒಂದರ ನಡುವೆ ಅ*ಪಘಾತ ಸಂಭವಿಸಿ ಮೂವರು ಗಾ*ಯಗೊಂಡಿದ್ದಾರೆ.
ಸಾಲೆತ್ತೂರಿನ ಅಟೋ ಚಾಲಕ ರಫೀಕ್, ಬೈಕ್ ಸವಾರರಾದ ಕಡಂಬು ನಿವಾಸಿ ಉಮ್ಮರ್ ಮತ್ತು ರಾದುಕಟ್ಟೆ ನಿವಾಸಿ ಅಬೂಬಕ್ಕರ್ ಅವರು ಗಾ*ಯಗೊಂಡಿದ್ದಾರೆ. ಅ*ಪಘಾತದ ತೀವ್ರತೆಗೆ ಮೂವರಿಗೂ ಗಂಭೀರ ಗಾ*ಯಗಳಾಗಿದ್ದು, ರಸ್ತೆಯಲ್ಲಿ ಸಂಚಾರ ಸ್ಥಗಿತವಾಗಿತ್ತು. ಇದೇ ವೇಳೆ ಸ್ಥಳದಲ್ಲಿದ್ದ ಕೆ.ಎಸ್. ಹೆಗ್ಡೆ ವೈದ್ಯಕೀಯ ಕಾಲೇಜಿನ ಬಸ್‌ನಲ್ಲಿದ್ದ ವಿದ್ಯಾರ್ಥಿಗಳು ಗಾ*ಯಾಳುಗಳ ನೆರವಿಗೆ ಧಾವಿಸಿ ಬಂದಿದ್ದಾರೆ.
ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ರವಾನಿಸುವ ಕೆಲಸ ಮಾಡಿದ್ದಾರೆ. ಮೂವರು ಗಾ*ಯಾಳುಗಳು ಕೂಡಾ ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಾಗಿದ್ದು, ಓರ್ವನ ಸ್ಥಿತಿ ಗಂ*ಭೀರವಾಗಿದೆ ಎಂದು ಮಾಹಿತಿ ಲಭಿಸಿದೆ. ಈ ಅ*ಪಘಾತದ ಕುರಿತಾಗಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
DAKSHINA KANNADA
ಅಸುವು ರಾಷ್ಟ್ರ ಸಮರ್ಪಿತ ಕಾರ್ಯಕ್ರಮ; ದಾಳಿಯಲ್ಲಿ ಮ*ಡಿದ ಯೋಧರಿಗೆ ಗೌರವಾರ್ಪಣೆ
Published
2 hours agoon
27/11/2024ಮಂಗಳೂರು: ಮುಂಬೈ ನಗರದ ಮೇಲೆ ಭಯೋತ್ಪಾದಕರು ನಡೆಸಿದ ದಾ*ಳಿಯ ಸಂದರ್ಭದಲ್ಲಿ ಉಗ್ರರ ವಿರುದ್ಧ ಹೋರಾಡಿ ಪ್ರಾ*ಣವನ್ನು ಬ*ಲಿದಾನ ಮಾಡಿದ ಹುತಾತ್ಮರನ್ನು ಸ್ಮರಿಸುವ ರಾಷ್ಟ್ರಜಾಗೃತಿಯ ಅಸುವು ರಾಷ್ಟ್ರ ಸಮರ್ಪಿತ ಕಾರ್ಯಕ್ರಮವು ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆ ವತಿಯಿಂದ ಜರುಗಿತು.
ಕದ್ರಿ ಯುದ್ಧ ಸ್ಮಾರಕದ ಬಳಿ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಸಂತ ಅಲೋಶಿಯಸ್ ಕಾಲೇಜಿನ ಉಪಕುಲಪತಿ ವಂದನೀಯ ಡಾ ಪ್ರವೀಣ ಮಾರ್ಟಿಸ್ ವಹಿಸಿದ್ದರು. ಡಾ ವಾದಿರಾಜ ಗೋಪಾಡಿ ದಿಕ್ಸೂಚಿ ಭಾಷಣ ಮಾಡಿದರು.
ಈ ಸಂದರ್ಭದಲ್ಲಿ ಎನ್‌ಎಂ ಪಿಎ ಸಿಐಎಸ್ಎಫ್‌ನ ಡೆಪ್ಯುಟಿ ಕಮಾಂಡೆಂಟ್ ರಾಜೇಂದ್ರ ಪ್ರಸಾದ್ ಪಾಠಕ್, ಕಾರ್ಯಕ್ರಮ ಸಂಘಟಕ ಡಾ ಶೇಷಪ್ಪ, ಡಾ ನಿಶ್ಚಿತ್ ಡಿ ಸೋಜಾ, ಹಿರಿಯ ಪೊಲೀಸ್ ಅಧಿಕಾರಿ ಅಜ್ಜತ್ ಆಲಿ, ಸಾರ್ಜೆಂಟ್ ಶ್ರೀಕಾಂತ್ ಶೆಟ್ಟಿ ಬಾಳ, ನ್ಯಾಯವಾದಿ ಬಿ. ನಯನ ಪೈ. ವಿದುಷಿ ಗುರು ಶ್ರೀಮತಿ ಸೌಮ್ಯ ಸುಧೀಂದ್ರ ರಾವ್, ಕಾರ್ಪೋರೇಟರ್ ಶಕೀಲಾ ಕಾವ ಮೊದಲಾದವರಿದ್ದರು. ನೃತ್ಯಸುಧಾ ಮಂಗಳೂರು ಇಲ್ಲಿನ ವಿದ್ಯಾರ್ಥಿನಿಯರಿಂದ ಹುತಾತ್ಮ ಸೈನಿಕರಿಗೆ ನೃತ್ಯನಮನ ನಡೆಯಿತು.
DAKSHINA KANNADA
ನಂಬಿದವರ ಕೈ ಬಿಡದ ಪದಾಳ ಸುಬ್ರಹ್ಮಣ್ಯ ಸ್ವಾಮಿ ಸನ್ನಿಧಾನದಲ್ಲಿ ಬ್ರಹ್ಮಕಲಶೋತ್ಸವ ಸಂಭ್ರಮ
Published
3 hours agoon
27/11/2024By
NEWS DESK4ಉಪ್ಪಿನಂಗಡಿ : ದಕ್ಷಿಣ ಕಾಶಿ, ಗಯಾಪದ ಕ್ಷೇತ್ರವೆಂದು ಪ್ರಸಿದ್ಧವಾಗಿರುವ ಉಪ್ಪಿನಂಗಡಿ ಪಟ್ಟಣದ ಪೂರ್ವಕ್ಕೆ ನೇತ್ರಾವತಿ ನದಿ ತಟಕ್ಕೆ ಹತ್ತಿರದಲ್ಲಿ ನಿತ್ಯಹರಿದ್ವರ್ಣದ ಸಸ್ಯ ರಾಶಿಯ ನಡುವೆ ಕಂಗೊಳಿಸುವ ಕ್ಷೇತ್ರ ಪದಾಳ ಶ್ರೀ ಮಯೂರ ವಾಹನ ಸುಬ್ರಹ್ಮಣ್ಯ ಸ್ವಾಮಿಯ ದೇವಸ್ಥಾನ. ಸಹಸ್ರಾರು ವರ್ಷಗಳ ಹಿಂದೆ ಲೋಕ ಸಂಚಾರಿಗಳಾಗಿದ್ದ ಶ್ರೇಷ್ಠ ಋಷಿ ಮುನಿಗಳು ನೇತ್ರಾವತಿ ನದೀ ತೀರದಲ್ಲಿ ಸಂಚರಿಸುತ್ತಿದ್ದ ಸಂದರ್ಭದಲ್ಲಿ ಅಲೌಕಿಕ ಶಕ್ತಿ ಹಾಗೂ ಶ್ರೀಸುಬ್ರಹ್ಮಣ್ಯನ ಸಾನ್ನಿಧ್ಯವಿರುವುದನ್ನು ಗುರುತಿಸಿದ, ಮಹಾತ್ಮರು ಶ್ರೀ ಸ್ವಾಮಿಯನ್ನು ಇಂದಿನ ಪದಾಳದಲ್ಲಿ ಸ್ಥಾಪಿಸಿದರೆಂಬುದು ಐತಿಹ್ಯ.
ದೇವಾಲಯ ಕಟ್ಟಿಸಿದ ಕದಿಕ್ಕಾರು ರಾಣಿ :
ಕಾಲಾಂತರದಲ್ಲಿ ಸ್ಥಳೀಯ ಕದಿಕ್ಕಾರು ಬೀಡಿನ ರಾಣಿಯೊಬ್ಬಳು ಪುತ್ರ ಸಂತಾನದ ಅಪೇಕ್ಷೆಯುಳ್ಳವಳಾಗಿ ಶ್ರೀ ದೇವರಿಗೆ ದೇವಸ್ಥಾನ ಕಟ್ಟಿಸುವ ಹರಕೆಯನ್ನು ಹೊತ್ತು, ಸಂಕಲ್ಪವನ್ನು ಪೂರೈಸಿದ ಮೇಲೆ ವೇದ ವಿದ್ವಾಂಸರಾದ ಬ್ರಾಹ್ಮಣ ಅರ್ಚಕರೊಬ್ಬರನ್ನು ದೇವಸ್ಥಾನದ ಉಸ್ತುವಾರಿ ಹಾಗೂ ದೇವರ ನಿತ್ಯಪೂಜೆಗಾಗಿ ನೇಮಿಸಿದಳಂತೆ. ಶ್ರೀ ದೇವರ ಅರ್ಚಕನಾದ ಆ ಬ್ರಾಹ್ಮಣನು ದೇವಸ್ಥಾನದ ನಿತ್ಯ ನೈಮಿತ್ತಿಕಗಳೊಂದಿಗೆ ಅಲ್ಲೇ ಸಮೀಪದಲ್ಲಿ ‘ಮಠ’ವೊಂದನ್ನು ಸ್ಥಾಪಿಸಿ, ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದುದರಿಂದ ಆ ಪ್ರದೇಶವು ‘ಮಠ’ವೆಂದೇ ಖ್ಯಾತವಾಯಿತು.
ಬ್ರಾಹ್ಮಣ ಬ್ರಹ್ಮರಾಕ್ಷಸನಾಗಿ ಉಪಟಳ :
ದೇವಸ್ಥಾನ ಹಾಗೂ ಮಠದ ಖರ್ಚು ವೆಚ್ಚಗಳು ಅಧಿಕವಾದಾಗ ತನ್ನನ್ನು ನೇಮಿಸಿದ ರಾಣಿಯಲ್ಲಿ ನೆರವನ್ನು ಯಾಚಿಸಿದಾಗ ಬ್ರಾಹ್ಮಣನಿಗೆ ಅವಮಾನ ಮಾಡಿದ್ದರಿಂದ ಮನನೊಂದು ಅಪಮೃತ್ಯುವಿಗೆ ಈಡಾಗಿ ಮೋಕ್ಷ ಸಿಗದೆ ಬ್ರಹ್ಮರಾಕ್ಷಸನಾಗಿ, ಪರಿಸರದಲ್ಲಿ ಉಪಟಳ ನೀಡುತ್ತಿರುವ ವಿಚಾರವು ಇತ್ತೀಚೆಗೆ ಪ್ರಶ್ನಾ ಚಿಂತನೆಯಲ್ಲಿ ಕಂಡುಬಂದ ವಿಷಯವಾಗಿದೆ.
ಕದಿಕ್ಕಾರು ಬೀಡಿನ ಅರಸೊತ್ತಿಗೆಯು ಸಮಾಪ್ತಿಯಾದ ಮೇಲೆ ದೇವಾಲಯವು ಶ್ರೀ ಕ್ಷೇತ್ರ ಧರ್ಮಸ್ಥಳದ ಅಧೀನಕ್ಕೆ ಬಂದು ನಿತ್ಯ ಪೂಜಾದಿ ಕಾರ್ಯಗಳು ನಡೆಯುತ್ತಿದ್ದವು. ಕ್ರಿ ಶ. 1923ರಲ್ಲಿ ಈ ದೇವಾಲಯವು ಅಗ್ನಿಗೆ ಆಹುತಿಯಾಗಿ ದೇವಾಲಯವು ನಾಶವಾಗುವುದರೊಂದಿಗೆ ಪೂಜಾದಿ ಕಾರ್ಯಗಳು ನಿಂತುಹೋದವು. ಸುತ್ತಮುತ್ತಲಿನ ಜಮೀನುಗಳ ಒಡೆತನವು ಯಾರ್ಯಾರಿಗೋ ಸೇರಿ ದೇವಸ್ಥಾನವು ಕಾಡು ಪಾಲಾಯಿತು.
ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದ ಸತ್ಯ!
ಮುಂದೆ ಈ ದೇವಸ್ಥಾನದ ಸುತ್ತಮುತ್ತಲಿನ ಕೃಷಿ ಭೂಮಿಯನ್ನು ನಡುಸಾರು ಕುಟುಂಬದವರು ಖರೀದಿಸಿದಾಗ, ದೇವಸ್ಥಾನದ ಪಳೆಯುಳಿಕೆಗಳ ಮಾಹಿತಿ ಪಡೆದು ಊರ ಹತ್ತು ಸಮಸ್ತರ ಸಹಕಾರದಿಂದ ಕ್ರಿ. ಶ. 1993ರಲ್ಲಿ ಅಷ್ಟಮಂಗಲ ಪ್ರಶ್ನೆಯನ್ನಿರಿಸಿದಾಗ, ಶ್ರೀ ಕ್ಷೇತ್ರ ಧರ್ಮಸ್ಥಳದೊಂದಿಗೆ ‘ಪದಾಳ’ಕ್ಕಿರುವ ಸಂಬಂಧವು ತಿಳಿದುಬಂದಂತೆ ಧರ್ಮಾಧಿಕಾರಿಗಳ ಸಲಹೆ ಸೂಚನೆ ಪಡೆದು ಜೀರ್ಣೋದ್ಧಾರಕ್ಕೆ ಪ್ರಾರಂಭಿಸಲಾಯಿತು.
ದೇವಸ್ಥಾನದ ‘ಪರಂಬೋಕು’ ಎಂದು ದಾಖಲಿಸಲ್ಪಟ್ಟ 0.96 ಎಕ್ರೆ ಜಮೀನಿನಲ್ಲಿ ಊರ ಪರವೂರ ದಾನಿಗಳ ಸಹಕಾರದಿಂದ ಮತ್ತೆ ದೇವಸ್ಥಾನವು ಮನನಿರ್ಮಾಣಗೊಂಡು ಕ್ರಿ. ಶ. 2009ರಲ್ಲಿ ಶ್ರೀ ದೇವರ ಪುನರ್‌ಪ್ರತಿಷ್ಠೆ, ಅಷ್ಠಬಂಧ ಬ್ರಹ್ಮಕಲಶೋತ್ಸವವು ಅತ್ಯಂತ ವಿಜೃಂಭಣೆಯಿಂದ ನೆರವೇರಿತು.
ನಂಬಿದವರ ಕೈ ಬಿಡದ ಸುಬ್ರಹ್ಮಣ್ಯ ಸ್ವಾಮಿ :
ಶ್ರೀ ದೇವರಿಗೆ ಬ್ರಹ್ಮಕಲಶ ನಡೆದು ಈಗಾಗಲೇ ಹದಿನೈದು ವರ್ಷಗಳಾಗಿದ್ದು, ಸಾನ್ನಿಧ್ಯ ವೃದ್ಧಿಗಾಗಿ ಅಷ್ಠಬಂಧ ಬ್ರಹ್ಮಕಲಶ ನಡೆಸುವ ಉದ್ದೇಶದಿಂದ ಪ್ರಶ್ನಾಚಿಂತನೆ ನಡೆಸಿದಾಗ ಸನ್ನಿಧಾನದ ಅಭಿವೃದ್ಧಿಗೆ ತೊಡಕಾಗಿರುವ ಬ್ರಹ್ಮರಾಕ್ಷಸನಿಗೆ ಮೋಕ್ಷವಾಗುವ ತನಕ ಆತನಿಂದ ಊರಿನಲ್ಲಿ ವಿಘ್ನಗಳು ಕಾಣಿಸಿಕೊಳ್ಳಬಹುದಾದ ಕಾರಣಕ್ಕಾಗಿ ಆತನನ್ನು ಪ್ರತಿಷ್ಠಾಪಿಸಿ, ನೈವೇದ್ಯಗಳನ್ನು ಕೊಡುವಂತೆ ಚಿಂತನೆಯಲ್ಲಿ ಕಂಡು ಬಂದುದರಿಂದ ಈಗಾಗಲೇ ಕಾರ್ಯವನ್ನು ಮುಗಿಸಿ ಬ್ರಹ್ಮರಾಕ್ಷಸನ ಪ್ರತಿಷ್ಠಾಪನೆಯಾಗಿರುತ್ತದೆ. ಕ್ಷೇತ್ರಕ್ಕೆ ಸಂಬಂಧಿಸಿದ ದೈವಗಳಿಗೆ ಗುಡಿ ಕಟ್ಟಿ ಕಾಲ ಕಾಲಕ್ಕೆ ನೇಮಗಳನ್ನು ಕೊಡಲಾಗುತ್ತಿದ್ದು, ಸದ್ಯವೇ ಶ್ರೀ ದೇವರ ಬಿಂಬಕ್ಕೆ ಬೆಳ್ಳಿಯ ಕವಚವನ್ನು ಮತ್ತು ದೈವಗಳ ಭಂಡಾರಕ್ಕೆ ಪಲ್ಲಕ್ಕಿಯನ್ನು ಸಮರ್ಪಿಸಲಾಗುತ್ತದೆ. ಸುಂದರ ಆಲಯದೊಳಗೆ ಮಯೂರವಾಹನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ನೆಲೆಸಿದ್ದಾನೆಂಬ ನಂಬಿಕೆಯಿಂದ ಭಕ್ತರು ನಡೆದುಕೊಳ್ಳುತ್ತಿದ್ದಾರೆ. ನಂಬಿದ ಭಕ್ತರ ಕೈಬಿಡದ ದೇವರೆಂಬ ಖ್ಯಾತಿಯಿದೆ.
ಮತ್ತೆ ನಡೆಯಲಿದೆ ವಿಜೃಂಭಣೆಯ ಬ್ರಹ್ಮಕಲಶೋತ್ಸವ :
ಪುತ್ತೂರಿನ ಉಪ್ಪಿನಂಗಡಿ ಪದಾಳ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಡಿ.18ರಿಂದ ಡಿ.23ರವರೆಗೆ ಅಷ್ಟಬಂಧ ಬ್ರಹ್ಮಕಲಶೋತ್ಸವವು ನಡೆಯಲಿದ್ದು, ಇದಕ್ಕೆ ಪೂರ್ವಭಾವಿಯಾಗಿ ದೇವಾಲಯದಲ್ಲಿ ಚಪ್ಪರ ಮುಹೂರ್ತ ನೆರವೇರಿಸಲಾಯಿತು. ದೇವಾಲಯದ ಪ್ರಧಾನ ಅರ್ಚಕ ಕೇಶವರಾಜ ಭಟ್ ಧಾರ್ಮಿಕ ವಿಧಿ-ವಿಧಾನ ನೆರವೇರಿಸಿದರು.
ಇದನ್ನೂ ಓದಿ :ಶಬರಿಮಲೆಯ 18 ಮೆಟ್ಟಿಲುಗಳ ಮೇಲೆ ನಿಂತು ಫೋಟೋಶೂಟ್ ಮಾಡಿಸಿದ ಪೊಲೀಸರಿಗೆ ಬಿಗ್‌ಶಾಕ್
ದೇವಾಲಯದ ಆಡಳಿತ ಸಮಿತಿಯ ಅಧ್ಯಕ್ಷ ನಡುಸಾರು ಉದಯಶಂಕರ ಭಟ್ಟ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಜಗದೀಶ ರಾವ್ ಮಣಿಕ್ಕಳ ಚಪ್ಪರ ಮುಹೂರ್ತ ನೆರವೇರಿಸಿದರು. ಈ ಸಂದರ್ಭ ದೇವಾಲಯದ ಆಡಳಿತ ಸಮಿತಿಯ ಉಪಾಧ್ಯಕ್ಷ ಸುರೇಶ್ ಅತ್ರಮಜಲು, ಕಾರ್ಯದರ್ಶಿ ಕೇಶವ ಗೌಡ ರಂಗಾಜೆ, ಕೋಶಾಧಿಕಾರಿ ರಾಮಚಂದ್ರ ಮಣಿಯಾಣಿ ನೆಡ್ಚಿಲು, ಸದಸ್ಯರಾದ ಶಾಂಭವಿ ರೈ ಪುಳಿತ್ತಡಿ, ಹರೀಶ್ವರ ಮೊಗ್ರಾಲ್, ಶಂಕರನಾರಾಯಣ ಭಟ್ ಬೊಳ್ಳಾವು, ಸದಾನಂದ ಶೆಟ್ಟಿಕಿಂಡೋವು, ಜತ್ತಪ್ಪನಾಯ್ಕ ಬೊಳ್ಳಾವು, ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಎನ್. ಜಯಗೋವಿಂದ ಶರ್ಮಾ ಪದಾಳ, ಜೊತೆ ಕಾರ್ಯದರ್ಶಿ ಸುರೇಶ್ ಗೌಂಡತ್ತಿಗೆ, ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಗಿರೀಶ್ ಆರ್ತಿಲ, ಸುನೀಲ್ ಕುಮಾರ್ ದಡ್ಡು, ವಸಂತ ನಾಯ್ಕ ಬೊಳ್ಳಾವು, ಧರ್ನಪ್ಪ ನಾಯ್ಕ ಬೊಳ್ಳಾವು, ಪ್ರಶಾಂತ್ ಪೆರಿಯಡ್ಕ, ಕಂಗ್ವೆ ವಿಶ್ವನಾಥ ಶೆಟ್ಟಿ, ವಸಂತ ಕುಕ್ಕುಜೆ, ವೀರಪ್ಪಗೌಡಪುಳಿತ್ತಡಿ, ರಾಧಾಕೃಷ್ಣ ಭಟ್ ಬೊಳ್ಳಾವು, ಮಹಾಲಿಂಗೇಶ್ವರ ಭಟ್ ಮಧುವನ, ರಘು ಪೂಜಾರಿ, ಜಯಂತ ಪೊರೋಳಿ, ರಾಮಚಂದ್ರ ಭಟ್ ಕಲ್ಲಾಜೆ, ವೆಂಕಟ್ರಮಣ ಭಟ್ ಮುಂಚಿಕ್ಕಾನ ಮತ್ತಿತರರು ಉಪಸ್ಥಿತರಿದ್ದರು.
LATEST NEWS
ನಂಬಿದವರ ಕೈ ಬಿಡದ ಪದಾಳ ಸುಬ್ರಹ್ಮಣ್ಯ ಸ್ವಾಮಿ ಸನ್ನಿಧಾನದಲ್ಲಿ ಬ್ರಹ್ಮಕಲಶೋತ್ಸವ ಸಂಭ್ರಮ
ನಿಮ್ಮ ನಾಯಿಗಳನ್ನು ಪಾರ್ಕ್ಗೆ ಕೊಂಡೊಯ್ಯುತ್ತೀರಾ? ಹೈಕೋರ್ಟ್ ಹೊಸಮಾರ್ಗಸೂಚಿ ಗಮನಿಸಿ!
ಐಪಿಎಲ್ ಹರಾಜು ಪ್ರಕ್ರಿಯೆ ನಡೆಸಿ ಕೊಟ್ಟ ಈ ಮಹಿಳೆ ಯಾರು ?
ಎಟಿಎಂ ಹೊತ್ತೊಯ್ದರೂ ಸಿಗದ ಹಣ; ನೀಲಗಿರಿ ತೋಪಿನಲ್ಲಿ ಯಂತ್ರ ಬಿಟ್ಟು ಪರಾರಿಯಾದ ಖದೀಮರು
ಬೆಚ್ಚಿ ಬೀಳಿಸಿದ ಯುವತಿ ಕೊ*ಲೆ ಪ್ರಕರಣ; ಪ್ರೇಯಸಿಯ ಶ*ವದೊಂದಿಗೆ ಒಂದು ದಿನ ಕಳೆದಿದ್ದ ಯುವಕ!
ಟ್ರಕ್ಗೆ ಸ್ಕಾರ್ಪಿಯೊ ಡಿ*ಕ್ಕಿ – ಭೀಕರ ಅಪಘಾ*ತಕ್ಕೆ ಐವರು ವೈದ್ಯರ ದುರ್ಮ*ರಣ
Trending
- Baindooru5 days ago
ಯಾವುದೇ ಕಾರಣಕ್ಕೂ ಕೂಡ ಇಂತಹ ಹಣ್ಣುಗಳನ್ನು ಫ್ರಿಡ್ಜ್ ನಲ್ಲಿ ಮಾತ್ರ ಇಡಬೇಡಿ!
- LIFE STYLE AND FASHION6 days ago
ಚಿಕನ್ ಪ್ರಿಯರೇ ಗಮನಿಸಿ; ಕೋಳಿ ಮಾಂಸದ ಈ ಭಾಗವನ್ನು ತಿನ್ನಲೇಬೇಡಿ
- BIG BOSS4 days ago
BBK11: ಕಿಚ್ಚನ ಪಂಚಾಯ್ತಿಯಲ್ಲಿ ರಜತ್ಗೆ ಫುಲ್ ಕ್ಲಾಸ್; ಹೊರ ಹೋಗೋಕೆ ಬಾಗಿಲು ಓಪನ್ ಇದೆ ಎಂದ ಬಾದ್ ಷಾ!
- Baindooru4 days ago
3ಕ್ಕೆ 3 ಸೋಲು.. ಮನೆಯಲ್ಲಿನ TV ಒಡೆದು ಹಾಕಿದ ಬಿಜೆಪಿ ನಿಷ್ಠಾವಂತ ಕಾರ್ಯಕರ್ತ