Connect with us

    DAKSHINA KANNADA

    ನಾಳೆ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆ ಪಟ್ಟಾಭಿಷೇಕ ವರ್ಧಂತ್ಯುತ್ಸವ

    Published

    on

    ಧರ್ಮಸ್ಥಳ: ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 54ನೇ ವರ್ಧಂತಿ ಅಕ್ಟೋಬರ್ 24ರಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಕೋವಿಡ್ ನಿಯಮಗಳೊಂದಿಗೆ ಸರಳವಾಗಿ ನಡೆಯಲಿದೆ.

    ಅಕ್ಟೋಬರ್ 24ರಂದು ಬೆಳಿಗ್ಗೆ ಭಗವಾನ್‌ ಚಂದ್ರನಾಥ ಸ್ವಾಮಿ ಬಸದಿ ಹಾಗೂ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ವಿಶೇಷ ಪೂಜೆ ನಡೆಯಲಿದೆ.

    ಪಟ್ಟಾಭಿಷೇಕದ ದಿನದಂದೇ ನಾಡಿನಾದ್ಯಂತ ಧಾರ್ಮಿಕ ಕ್ಷೇತ್ರಗಳ ಮುಖಂಡರು, ಜನಪ್ರತಿನಿಧಿಗಳು, ಗಣ್ಯರು, ಗ್ರಾಮಸ್ಥರು ಕ್ಷೇತ್ರಕ್ಕೆ ಆಗಮಿಸಿ ಡಾ ಹೆಗ್ಗಡೆಯವರಿಗೆ ಅಭಿನಂದನೆ ಸಲ್ಲಿಸಲಿದ್ದಾರೆ.

    ಡಾ ಡಿ ವೀರೇಂದ್ರ ಹೆಗ್ಗಡೆಯವರು 1968ರ ಅಕ್ಟೋಬರ್ 24ರಂದು ಧರ್ಮಸ್ಥಳದ 21ನೇ ಧರ್ಮಾಧಿಕಾರಿಯಾಗಿ ನೆಲ್ಯಾಡಿ ಬೀಡಿನಲ್ಲಿ ಪಟ್ಟಾಭಿಷಿಕ್ತರಾದರು. ಆಗ ಅವರು 29 ವರ್ಷದ ಯುವಕರಾಗಿದ್ದರು.

    2012ರ ಅಕ್ಟೋಬರ್‌ 24ರಂದು 50 ವರ್ಷಗಳ ಸೇವೆ ಪೂರೈಸಿದ್ದು, 2018ರ ಅಕ್ಟೋಬರ್‌ 24ರವರೆಗೆ ವೈವಿಧ್ಯಮ ಕಾರ್ಯಕ್ರಮಗಳೊಂದಿಗೆ ಸುವರ್ಣ ಮಹೋತ್ಸವ ಆಚರಿಸಲಾಯಿತು.

    ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಭಗವಾನ್‌ ಬಾಹುಬಲಿ ಮೂರ್ತಿ ಪ್ರತಿಷ್ಠಾಪನೆ, ಪ್ರತಿ 12 ವರ್ಷಗಳಿಗೊಮ್ಮೆ ಮಹಾಮಸ್ತಕಾಭಿಷೇಕ, ಮಹಾನಡಾವಳಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸಮುದಾಯ ಅಭಿವೃದ್ಧಿ ಕಾರ್ಯಕ್ರಮ, ಜ್ಞಾನ ವಿಕಾಸ ಮಹಿಳಾ ಕಾರ್ಯಕ್ರಮ, ಸಿರಿ ಗ್ರಾಮೋದ್ಯೋಗ, ನೈರ್ಮಲ್ಯ ಯೋಜನೆಗಳು ಸೇರಿದಂತೆ ಹತ್ತುಹಲವು ಜನಪರ ಕಾರ್ಯಕ್ರಮಗಳ ನಿರ್ಮಾತೃರಾಗಿದ್ದಾರೆ ಹೆಗ್ಗಡೆ.

    Click to comment

    Leave a Reply

    Your email address will not be published. Required fields are marked *

    DAKSHINA KANNADA

    ಬಂಟ್ವಾಳ : ಬಿಹಾರ ಮೂಲದ ಕಾರ್ಮಿಕ ಆತ್ಮಹತ್ಯೆ

    Published

    on

    ಬಂಟ್ವಾಳ:  ವೈಯಕ್ತಿಕ ಕಾರಣದಿಂದ ‌ಮನನೊಂದು ಬಿಹಾರ ಮೂಲದ ವ್ಯಕ್ತಿಯೋರ್ವ ಬಂಟ್ವಾಳದ ಟಯರ್ ಅಂಗಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

    ಬಿಹಾರ ರಾಜ್ಯದ ಮೋತಿಹಾರಿ ನಿವಾಸಿ ಸಂದೀಪ್ ಕುಮಾರ್ ( 20 ) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಆತ ಮೂರ ವರ್ಷಗಳಿಂದ ತನ್ನ ಮಾವ ಕೆಲಸ ಮಾಡುತ್ತಿದ್ದ ಟಯರ್ ರಿಸೋಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನು.

     

    ಇದನ್ನೂ ಓದಿ:  ಪ್ರೀತಿಸಿದ ಯುವಕನ ಜೊತೆಗೆ ಮದುವೆಗೆ ನಿರಾಕರಣೆ.. ಕುಟುಂಬದ 13 ಜನರನ್ನು ವಿಷ ಹಾಕಿ ಕೊಂ*ದ ಯುವತಿ

    ಅಂಗಡಿಯ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಘಟನೆ ಕುರಿತು ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Continue Reading

    DAKSHINA KANNADA

    ಗುರುಪುರ ನದಿಗೆ ಹಾರಿದ್ದ ವ್ಯಕ್ತಿ; ಶವವಾಗಿ ಪತ್ತೆ

    Published

    on

    ಮಂಗಳೂರು:  ಬಡಗ ಎಡಪದವು ಚಟ್ಟೆ ಪಾದೆ ನಿವಾಸಿ ರಮೇಶ್ ಕುಲಾಲ್ (48) ಶನಿವಾರ (ಅ.5) ಗುರುಪುರದ ಫಲ್ಗುಣಿ ನದಿಗೆ ಹಾರಿದ್ದು, ನಿನ್ನೆ (ಅ.7) ಶವ ಪತ್ತೆಯಾಗಿದೆ.


    ಶನಿವಾರ ಸಂಜೆ ರಮೇಶ್ ಮನೆಯಿಂದ ನಾಪತ್ತೆಯಾಗಿದ್ದು, ಸಹೋದರ ಬಜಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ರವಿವಾರ ಅವರ ಮೊಬೈಲ್ ಹಾಗೂ ಪಾದರಕ್ಷೆ ಗುರುಪುರ ಸೇತುವೆ ಮೇಲೆ ಪತ್ತೆಯಾಗಿದ್ದ ಕಾರಣ ನದಿಗೆ ಹಾರಿ ಆತ್ಮಹತ್ಯೆ ಮಾಡಿರುವುದಾಗಿ ಶಂಕಿಸಲಾಗಿತ್ತು.
    ಎಸ್‌ಡಿಆರ್‌ಡಫ್ ಮತ್ತು ಬಜಪೆ ಪೊಲೀಸರು ನದಿಯ ನೀರಿನಲ್ಲಿ ಶೋಧ ನಡೆಸುತ್ತಿದ್ದರು. ಮಂಗಳೂರಿನ ಇನ್‌ಲ್ಯಾಂಡ್ ಕಂಪನಿಯಲ್ಲಿ ಜೆಸಿಬಿ ಆಪರೇಟರ್ ಆಗಿದ್ದ ರಮೇಶ್ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
    ಬಡಮಿಜಾರಿನಲ್ಲಿ ರಾಷ್ಟ್ರೀಯ ಹೆದ್ದಾರಿ 169ರ ವಿಸ್ತರಣೆ ಕಾಮಗಾರಿಗಾಗಿ ಭೂ ಸ್ವಾಧೀನ ಪ್ರಕ್ರಿಯೆಯ ಅನ್ವಯ ಲಭಿಸಿದ ಪರಿಹಾರ ಹನದ ವಿಷಯದಲ್ಲಿ ತಾಯಿ ಮತ್ತು ಸಹೋದರರೊಳಗೆ ಉಂಟಾದ ವಿಆದದಿಂದಾಗಿ ಖಿನ್ನತೆಗೊಳಗಾಗಿದ್ದರು ಎನ್ನಲಾಗಿದೆ.

    Continue Reading

    DAKSHINA KANNADA

    ಅಕ್ರಮ ಹಾಲುಮಡ್ಡಿ ಸಾಗಾಟ: ನಾಲ್ವರು ಆರೋಪಿಗಳ ಬಂಧನ

    Published

    on

    ಪುತ್ತೂರು : ರಕ್ಷಿತಾರಣ್ಯದಿಂದ ಹಾಲುಮಡ್ಡಿ ಸಂಗ್ರಹಿಸಿ ಸಾಗಿಸುತ್ತಿದ್ದ ಪ್ರಕರಣವನ್ನು ಪುತ್ತೂರು ಅರಣ್ಯ ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಿ ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರಿಂದ 11 ಕೆ.ಜಿ. ಹಾಲುಮಡ್ಡಿ, ಮೇಣ ತೆಗೆಯಲು ಬಳಸಿದ ಸಲಕರಣೆ ಹಾಗೂ ಆಟೋ ರಿಕ್ಷಾವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ವಿಟ್ಲ ಸಮೀಪದ ಕೆದಿಲ ನಿವಾಸಿಗಳಾದ ಅಲಿ ಹೈದರ್‌, ಉಮ್ಮರ್‌ ಫಾರೂಕ್‌, ಮಹಮ್ಮದ್‌ ಹಸೈನಾರ್‌ ಮತ್ತು ಉಮ್ಮರ್‌ ಫಾರೂಕ್‌ ಬಂಧಿತ ಆರೋಪಿಗಳು.

    ಇದನ್ನೂ ಓದಿ : ಶ್ರೀ ದುರ್ಗಾಪರಮೇಶ್ವರಿ ದೇವಿಯ ದರ್ಶನ ಪಡೆದ ಶ್ರೀಮುರಳಿ

    ವಿಟ್ಲ ಬಳಿಯ ಕಳೆಂಜಿಮಲೆ ರಕ್ಷಿತಾರಣ್ಯದಲ್ಲಿ ಆರೋಪಿಗಳು ಹಾಲು ಮಡ್ಡಿ ಸಂಗ್ರಹಿಸಿ ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಅರಣ್ಯ ಇಲಾಖೆಯ ಅಧಿಕಾರಿಗಳು ಈ ದಾಳಿ ಕಾರ್ಯಾಚರಣೆ ನಡೆಸಿದರು. ವಲಯ ಅರಣ್ಯಾಧಿಕಾರಿ ಕಿರಣ್‌ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಪ ವಲಯಾರಣ್ಯಾಧಿಕಾರಿ ವೀರಣ್ಣ, ಪ್ರಕಾಶ್‌ ಬಿ.ಟಿ., ಗಿರೀಶ್‌ ಎಚ್‌.ಪಿ., ಗಸ್ತು ಅರಣ್ಯಪಾಲಕ ಸತೀಶ್‌ ಡಿ’ಸೋಜಾ, ಚಾಲಕರಾದ ರಾಜೇಶ್‌, ತೇಜ ಪ್ರಕಾಶ್‌ ಮತ್ತು ಸಿಬಂದಿ ಭಾಗವಹಿಸಿದ್ದರು.

     

    Continue Reading

    LATEST NEWS

    Trending