Saturday, November 27, 2021

ಮುಂಬೈ ರಸ್ತೆಗೆ ಬಿಲ್ಲವ ನೇತಾರ ಜಯ ಸಿ ಸುವರ್ಣ ಹೆಸರಿಟ್ಟು ಗೌರವ

ಮಂಗಳೂರು: ನಾರಾಯಣ ಗುರುಗಳ ಆದರ್ಶ, ಸಮಾಜೋದ್ಧಾರಕ್ಕಾಗಿ ತನ್ನ ಜೀವನದ ಸರ್ವಸ್ವವನ್ನೂ ಮುಡುಪಾಗಿಟ್ಟ ಮಹಾನ್‌ ಚೇತನ ದೇಶವಿದೇಶದ ಬಿಲ್ಲವ ಜನಾಂಗಗಳನ್ನು ಒಗ್ಗೂಡಿಸಿ ಸಮಾಜ ಕಟ್ಟಿಮ ಮಹಾ ಯಶಸ್ವೀ ನಾಯಕ, ಭಾರತ್‌ ಕೋ ಆಪರೇಟಿವ್‌ ಬ್ಯಾಂಕಿನ ಸಂಸ್ಥಾಪಕ ದಿ.ಜಯ ಸಿ ಸುವರ್ಣ ಅವರ ಹೆಸರನ್ನು ಮುಂಬೈ ಮಹಾನಗರಿಯ ರಸ್ತೆಯೊಂದಕ್ಕೆ ಇರಿಸುವ ಮೂಲಕ ಚಿರಸ್ಮಾಯಿನ್ನಾಗಿಸಲಾಗಿದೆ.


ಎಲ್ಲರ ಪ್ರೀತಿಯ ಜಯಣ್ಣ ಎಂದೇ ಕರೆಸಲ್ಪಡುವವರು ದಿ. ಜಯ ಸಿ ಸುವರ್ಣ. ನಾರಾಯಣ ಗುರುಗಳ ಆದರ್ಶ, ಸಮಾಜೋದ್ಧಾರಕ್ಕಾಗಿ ತನ್ನ ಜೀವನವನ್ನೇ ಮುಡಿಪಾಗಿಸಿಟ್ಟ ಕರ್ಮಯೋಗಿ, ಮಹಾನಗರದಲ್ಲಿ ಜನಾನುರಾಗಿಯಾಗಿ ಬೆಳೆದ ದಿ. ಜಯ ಸಿ ಸುವರ್ಣ ಮಾಡಿದ ಸಾಧನೆಗಳು ಒಂದೆರಡಲ್ಲ.

ಭಾರತ್‌ ಕೋ ಆಪರೇಟಿವ್‌ ಬ್ಯಾಂಕಿನ ಸಂಸ್ಥಾಪಕರಾಗಿ ಒಂದಿಷ್ಟೂ ಕಪ್ಪು ಚುಕ್ಕೆ ಇಲ್ಲದೇ ಬೆಳೆದು ಬಂದ ಇದರ ಜಯ ಸುವರ್ಣರ ಹೆಸರು ಇಂದು ಮಹಾರಾಷ್ಟ್ರ ನೆಲದಲ್ಲಿ ಅಚ್ಚಳಿಯದೇ ನಿಂತಿದೆ.

ಮುಂಬಯಿಯ ಗೋರೆಗಾಂವ್‌ ಪಿ ದಕ್ಷಿಣ ವಾರ್ಡ್‌ ಶ್ರೀ ದತ್ತ ಮಂದಿರ ಚೌಕ್‌, ಗೋರೆಗಾಂವ್‌ ರೈಲ್ವೇ ನಿಲ್ದಾಣ ಮಾರ್ಗಕ್ಕೆ ಜಯ ಸುವರ್ಣ ರಸ್ತೆ ಎನ್ನುವ ಹೆಸರನ್ನಿರಿಸಲಾಗಿದ್ದು, ಇದರ ಉದ್ಘಾಟನಾ ಸಮಾರಂಭ ಅದ್ದೂರಿಯಾಗಿ ನಡೆಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಗಣ್ಯಾತಿಗಣ್ಯರು ಪಾಲ್ಗೊಂಡರು.

ದಿವಂಗತ ಜಯ ಸಿ ಸುವರ್ಣ ಅವರು ಪ್ರತಿಯೊಂದು ಕ್ಷೇತ್ರದಲ್ಲಿ ಸಾಧನೆ ಮಾಡಿದವರು. ಅವರಂತಹ ಕೆಲಸವನ್ನು ಯಾರಿಂದಲೂ ಮಾಡಲು ಸಾಧ್ಯವಿಲ್ಲ. ಅವರೊಬ್ಬರಿಂದಲೇ ಈ ಸಾಧನೆ ಮಾಡಲು ಸಾಧ್ಯ.

ಪ್ರಾಮಾಣಿಕತೆ, ಪರಿಶ್ರಮ, ಕೌಶಲ್ಯ, ಬುದ್ಧಿಮತ್ತೆ ಹೀಗೆ ಪ್ರತಿಯೊಂದರಲ್ಲೂ ಅವರು ಅಷ್ಟೇ ಕಾಳಜಿ ವಹಿಸಿಕೊಂಡು ಕೆಲಸ ಮಾಡುತ್ತಿದ್ದರು.

ಬ್ಯಾಂಕಿಂಗ್‌ ವಿಚಾರದಲ್ಲಿ ಹಲವು ಗೋಲ್‌ ಮಾಲ್ ಆಗುತ್ತಿದೆ. ಆದರೆ ಇಂದಿಗೂ ಕೂಡಾ ಭಾರತ್‌ ಬ್ಯಾಂಕ್‌ ಇಂದು ತನ್ನ ಹೆಸರನ್ನು ಅಷ್ಟೇ ಪರಿಶುದ್ಧವಾಗಿ ಉಳಿಸಿಕೊಂಡು ಬಂದಿದೆ. ದುಡ್ಡು ಮನುಷ್ಯನ್ನು ಸಿರಿವಂತನನ್ನಾಗಿ ಮಾಡುತ್ತದೆ.

ಆದರೆ ಸಿರಿವಂತನಾದರೂ ಒಂದಿಷ್ಟೂ ಅಹಂ ತೋರಿಸದೇ ಕಪ್ಪು ಚುಕ್ಕೆ ಇಲ್ಲದೇ ಕೆಲಸ ಮಾಡಿದವರು ಜಯ ಸಿ ಸುವರ್ಣ ಎಂದು ಸಚಿವರು ಶ್ಲಾಘಿಸಿದರು.

ನಾನು ಭಾರತ್‌ ಕೋ ಆಪರೇಟಿವ್‌ ಬ್ಯಾಂಕ್‌ನಿಂದಲೇ ಎಲ್ಲಾ ಕೆಲಸ ಕಾರ್ಯಗಳನ್ನು ಆರಂಭಿಸಿದೆ. ಭಾರತ್‌ ಬ್ಯಾಂಕ್‌ ಬಿಟ್ಟು ಇನ್ಯಾವುದರಲ್ಲೂ ನಾವು ನಂಬಿಕೆ ಇಡುವಂತೆ ಕಾಣ್ತಿಲ್ಲ ಎಂದು ನನ್ನ ಸ್ನೇಹಿತರಲ್ಲಿ ಹೇಳಿದ್ದೆ. ಇದು ಅವರ ಮೇಲೆ ನಾವು ಬಹಳಷ್ಟು ಇಟ್ಟಿರುವ ಪ್ರೀತಿಗೆ ಕಾರಣವಾಗಿದೆ ಎಂದರು.

ಸ್ವಪ್ನೇಲಿಂ ತೆಂಡೂಲ್ಕರ್ ಕಾರ್ಪೋರೇಟರ್‌, ಶ್ರೀಮತಿ ಸಾಧನಾ ತಾಯಿ ಮಾಣೈ, ಬಿಲ್ಲವರ ಅಸೋಸಿಯೇಶನ್‌ ಅಧ್ಯಕ್ಷ ಹರೀಶ್ ಅಮೀನ್‌, ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಕೆ ಶೆಟ್ಟಿ, ಬಿಲ್ಲವರ ಮಹಾಮಂಡಳದ ಅಧ್ಯಕ್ಷ ರಾಜಶೇಖರ ಕೋಟ್ಯಾನ್‌, ಭಂಡಾರಿ ಸಮುದಾಯದ ನೇತಾರ ಆರ್‌ ಎಂ ಭಂಡಾರಿ,

ಕರ್ನಾಟಕದ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್‌, ಬೆಂಗಳೂರು ಬಿಲ್ಲವರ ಸಂಘದ ಅಧ್ಯಕ್ಷ ವೇದಕುಮಾರ್‌ ಹಲವು ಮಂದಿ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಜಯ ಸಿ ಸುವರ್ಣ ಅವರ ಜೀವನದ ಕುರಿತಾದ ಸಾಧನೆಗಳ ಕುರಿತಂತೆ ನಿತ್ಯಾನಂದ ಕೋಟ್ಯಾನ್ ಅವರು ಬರೆದ ಪುಸ್ತಕವನ್ನು ಸಚಿವರು ಈ ಸಂದರ್ಭ ಬಿಡುಗಡೆ ಮಾಡಿದರು. ದಿ. ಜಯ ಸಿ ಸುವರ್ಣ ಅವರ ಪುತ್ರ ಸೂರ್ಯಕಾಂತ ಸುವರ್ಣ ಎಲ್ಲರನ್ನೂ ಸ್ವಾಗತಿಸಿದರು.

ಮುಂಬೈಯ ಉಪನಗರವಾಗಿರುವ ಗೋರೆಗಾಂವ್ ಪೂರ್ವದಲ್ಲಿ ಸಣ್ಣ ಉದ್ಯಮವನ್ನು ಪ್ರಾರಂಭಿಸಿ ಸಾಧನೆಯ ಮೆಟ್ಟಿಲನ್ನು ಏರುತ್ತಾ ಏರುತ್ತಾ ಮಹಾನಗರದಲ್ಲಿ ಜನನಾಯಕರಾಗಿ ಬೆಳೆದು ನಿಂತವರು.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಅಪೂರ್ವ ಸಮಾಜಸೇವಕ ಜಯ ಸಿ ಸುವರ್ಣರು ಇಹಲೋಕ ತ್ಯಜಿಸಿ ಅಕ್ಟೋಬರ್ 21ಕ್ಕೆ ಒಂದು ವರ್ಷ ಪೂರ್ತಿಯಾಗುತ್ತಿದ್ದು, ಇಂತಹ ಸಂದರ್ಭದಲ್ಲಿ ಗೋರೆಗಾಂವ್ ರಸ್ತೆಗೆ ಅವರ ಹೆಸರು ಚಿರಸ್ಥಾಯಿಯಾಗಿ ಇರುವಂತೆ ಮಾಡಿರುವುದು ನಮಗೂ ಹೆಮ್ಮೆಯ ವಿಚಾರ.

 

Hot Topics

ಸಾಲದ ಹೊರೆ ತಾಳಲಾರದೆ ವೀಡಿಯೋ ಮೂಲಕ ಗುಡ್​ಬೈ ಹೇಳಿ ಶಿಕ್ಷಕ ದಂಪತಿ ಆತ್ಮಹತ್ಯೆ

ವಿಜಯವಾಡ: ಶಾಲೆ ನಡೆಸುತ್ತಿದ್ದ ಶಿಕ್ಷಕ ದಂಪತಿ ಸಾಲದ ಹೊರೆ ತಡೆಯಲಾರದೇ ವಿಷಸೇವಿಸಿ ಆತ್ಮಹತ್ಯೆ ಹಾದಿ ಹಿಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ. ಸಾವಿಗೂ ಮುನ್ನ ಶಿಕ್ಷಕ ದಂಪತಿ ತಮ್ಮ...

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...