Connect with us

    LATEST NEWS

    ಬೇರೆಯವರ ಮಾತಿಗೆ ಕಿವಿ ಕೊಡದೆ ಇರುವುದು ಹೇಗೆ ? ಸಿಂಪಲ್ ಟಿಪ್ಸ್ ಇಲ್ಲಿದೆ ನೋಡಿ.. !

    Published

    on

    ಮಂಗಳೂರು: ಅಂದುಕೊಂಡಂತೆ ಬದುಕಬೇಕು ಎಂದು ಜೀವನದಲ್ಲಿ ಪ್ರತಿಯೊಬ್ಬರು ಅಂದುಕೊಳ್ಳುತ್ತಾರೆ. ಆದರೆ ಎಷ್ಟೋ ಸಲ ನಮ್ಮ ಸುತ್ತಮುತ್ತಲಿನ ಜನರೇ ನಾವು ಮಾಡುವ ಕೆಲಸದ ಬಗ್ಗೆ ಕೊಂಕು ಮಾತನಾಡುತ್ತಾರೆ. ಇಲ್ಲದಿದ್ದರೆ ಅವರ ಮೂಗಿನ ನೇರಕ್ಕೆ ಮಾತನಾಡುತ್ತಾರೆ. ಇಂತಹ ಜನರ ಮಾತಿನ ಬಗ್ಗೆ ಗಮನ ಕೊಡದೇ ನಮ್ಮ ಪಾಡಿಗೆ ನಾವು ಇರುವುದಕ್ಕೆ ಯತ್ನಿಸಬೇಕು.

    ಅವರು ಏನಂತಾರೋ, ಇವರೇನು ಅಂತಾರೋ ಎಂದು ಯಾವ ಕೆಲಸಕ್ಕೆ ಕೈಹಾಕಿದರೂ ಕೂಡ ಯೊಚಿಸ್ತಾ ಕಾಲ ಕಳೆತಾ, ನಾನೇನಾದ್ರೂ ತಪ್ಪು ಮಾಡ್ತಾ ಇದ್ದೇನಾ ಹೀಗೆ ನಾನಾ ರೀತಿಯ ಯೋಚನೆಗಳು ತಲೆಯಲ್ಲಿ ಓಡಾಡುತ್ತದೆ. ಇದರಿಂದ ಅಂದುಕೊಂಡ ಕೆಲಸವು ಅಪೂರ್ಣವಾಗುತ್ತದೆ. ಅದಲ್ಲದೇ ಮಾನಸಿಕ ನೆಮ್ಮದಿಯೂ ಹಾಳಾಗುತ್ತದೆ. ಹೀಗಾಗಿ ಸಾಧ್ಯವಾದಷ್ಟು ಬೇರೆಯವರು ಏನಂದುಕೊಳ್ಳುತ್ತಾರೋ ಎನ್ನುವ ಬಗ್ಗೆ ಯೋಚಿಸದೇ ಇರುವುದು ಒಳ್ಳೆಯದು.
    ಜೀವನಕ್ಕೆ ಏನು ಬೇಕು ಏನು ಬೇಡ ಎನ್ನುವ ಬಗ್ಗೆ ನಿಮ್ಮಷ್ಟು ಅರಿತುಕೊಂಡವರು ಯಾರು ಇಲ್ಲ. ಎಲ್ಲರಿಗೂ ಕೂಡ ವಿಭಿನ್ನ ಆದ್ಯತೆಗಳಿರುತ್ತದೆ. ಹೀಗಾಗಿ ನೀವು ಏನು ಮಾಡುತ್ತಿದ್ದೀರಿ ಮತ್ತು ಏಕೆ ಮಾಡುತ್ತಿದ್ದೀರಿ ಎಂಬ ಬಗ್ಗೆ ತಿಳಿದಿರಲಿ. ಬೇಡದವರ ಮಾತಿಗೆ ತಲೆ ಕೆಡಿಸಿಕೊಳ್ಳುವುದನ್ನು ಬಿಟ್ಟು, ಸ್ವಂತ ಆಲೋಚನೆಯಲ್ಲಿಯೇ ಮುಂದುವರೆಯಿರಿ. ಬೇರೆಯವರ ಮಾತನ್ನು ಅಭಿಪ್ರಾಯವನ್ನು ಹೆಚ್ಚು ಗಂಭೀರವಾಗಿ ಪರಿಗಣಿಸುವುದು ಸರಿಯಲ್ಲ.
    ಕೆಲವೊಮ್ಮೆ ಕೈಗೊಂಡಿರುವ ನಿರ್ಧಾರದ ಬಗ್ಗೆ ಬೇರೆಯವರ ಬಳಿ ಅಭಿಪ್ರಾಯ ಅಥವಾ ಸಲಹೆಯನ್ನು ಕೇಳುತ್ತೇವೆ. ಆದರೆ ಸುತ್ತಮುತ್ತಲಿನ ವ್ಯಕ್ತಿಗಳು ಯೋಚಿಸುವ ರೀತಿಯು ಭಿನ್ನವಾಗಿರುವುದರಿಂದ ಅವರು ನೀಡುವ ಸಲಹೆ ಸೂಚನೆಗಳು ಸರಿಯೆನಿಸದೇ ಇರಬಹುದು. ಹೀಗಾಗಿ ನಾವೇನು ಮಾಡಬೇಕು ಎನ್ನುವ ಬಗ್ಗೆ ಸ್ಪಷ್ಟ ಚಿತ್ರಣವಿರಲಿ.
    ನಮ್ಮ ಸುತ್ತ ಮುತ್ತಲಿನ ವ್ಯಕ್ತಿಗಳು ಏನೇ ಮಾತನಾಡಿದರೂ ಕೂಡ ಅವರಿಗೆ ತೋಚಿದ್ದನ್ನೇ ಮಾತನಾಡುತ್ತಾರೆ. ಹೀಗಾಗಿ ಜನರ ಯೋಚನೆಯನ್ನು ಬದಲಾಯಿಸಲು ಸಾಧ್ಯವಿಲ್ಲ ಹಾಗೂ ನಿಯಂತ್ರಿಸಲು ಆಗುವುದಿಲ್ಲ ಎನ್ನುವ ವಾಸ್ತವವನ್ನು ಅರಿತುಕೊಳ್ಳಬೇಕು. ನಾವು ಸದಾ ಚಟುವಟಿಕೆಯಿಂದ ಇದ್ದು, ಅವರಿರವರ ಅಭಿಪ್ರಾಯಕ್ಕೆ ಗಮನ ಕೊಡದೆ ನಮ್ಮ ದಾರಿಯಲ್ಲಿ ಮುಂದುವರೆಯುತ್ತಿರಬೇಕು.
    ಎಲ್ಲರೂ ಪರಿಪೂರ್ಣರಾಗಿರಲು ಸಾಧ್ಯವಿಲ್ಲ: ಈ ಲೋಕದಲ್ಲಿ ಪರಿಪೂರ್ಣವಾದ ವ್ಯಕ್ತಿ ಯಾರು ಇಲ್ಲ. ನಾವು ಮಾಡುವ ಪ್ರತಿಯೊಂದು ಕೆಲಸವನ್ನು ಶ್ರಮವಹಿಸಿ ಮಾಡಬೇಕು, ಎಲ್ಲ ಕೆಲಸದಲ್ಲಿ ಪರಿಪೂರ್ಣತೆಯನ್ನು ಬಯಸಬಾರದು. ಕೆಲಸದಲ್ಲಿ ತಪ್ಪಾದಾಗ ಸರಿ ಪಡಿಸಿಕೊಂಡು ಮುಂದೆ ಸಾಗುವುದು ಮುಖ್ಯ. ಅವರಿವರ ಕೊಂಕು ಮಾತನ್ನು ಪರಿಗಣಿಸಬಾರದು.
    ಹೆಚ್ಚಿನವರು ಬೇರೆಯವರ ಅಭಿಪ್ರಾಯಗಳಿಗೆ ಬೆಲೆ ಕೊಟ್ಟು, ಅದರಂತೆ ನಡೆದುಕೊಳ್ಳುತ್ತಾರೆ. ಆದರೆ ನಮ್ಮ ಜೀವನ ಗೊತ್ತುಗುರಿಗಳ ಬಗ್ಗೆ ನಮಗೆ ತಿಳಿದಿರುವಷ್ಟು ಬೇರೆ ಯಾರು ತಿಳಿದವರಿಲ್ಲ. ಹೀಗಾಗಿ ನಮ್ಮ ಅಭಿಪ್ರಾಯಗಳು, ನಿರ್ಧಾರಗಳು ಸರಿಯಾಗಿರಬಹುದು. ಬೇರೆಯವರು ಯೋಚಿಸುವ ವಿಧಾನಗಳು ತಪ್ಪಾಗಿದೆ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು ನಮ್ಮ ಮೇಲೆ ನಮಗೆ ನಂಬಿಕೆಯಿರಬೇಕು.
    ಬೇರೆಯವರನ್ನು ಮೆಚ್ಚಿಸುವ ಸಲುವಾಗಿ ಯಾವುದೇ ಕೆಲಸವನ್ನು ಮಾಡಬಾರದು. ಗುರಿ ತಲುಪಲು ಸುಲಭವಾಗುವ ರೀತಿಯಲ್ಲಿ ನಿರ್ಧಾರವನ್ನು ಕೈಗೊಳ್ಳಬೇಕು. ನಾವು ತೆಗೆದುಕೊಳ್ಳುವ ನಿರ್ಧಾರದ ಬಗ್ಗೆ ಅವರಿವರ ಜೊತೆಗೆ ಚರ್ಚಿಸುವುದು ಬೇಡ. ಏಕೆಂದರೆ ಅವರ ಮೂಗಿನ ನೇರಕ್ಕೆ ಅವರು ಮಾತನಾಡುವ ಸಾಧ್ಯತೆಯೇ ಹೆಚ್ಚು.

     

    Click to comment

    Leave a Reply

    Your email address will not be published. Required fields are marked *

    FILM

    ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ಕ್ರಿಕೆಟಿಗ ಕೆ.ಎಲ್.ರಾಹುಲ್

    Published

    on

    ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಹಾಗೂ ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕೆಎಲ್ ರಾಹುಲ್ ಅಭಿಮಾನಿಗಳೊಂದಿಗೆ ಸಂತಸವನ್ನು ಹಂಚಿಕೊಂಡಿದ್ದಾರೆ.

    ದಂಪತಿ Instagram ನಲ್ಲಿ ಜಂಟಿಯಾಗಿ ಪೋಸ್ಟ್ ಮಾಡಿದ್ದಾರೆ. ‘ದೇವರ ಸುಂದರ ಆಶೀರ್ವಾದ 2025ರಲ್ಲಿ ಬರಲಿದೆ’ ಎಂದು ಅಥಿಯಾ ದಂಪತಿ ಪೋಷಕರಾಗುತ್ತಿರುವ ಖುಷಿಯ ಸುದ್ದಿಯನ್ನು ತಿಳಿಸಿದ್ದಾರೆ. ಸೆಲೆಬ್ರಿಟಿಗಳು, ಅಭಿಮಾನಿಗಳು ದಂಪತಿಗೆ ಶುಭ ಹಾರೈಸುತ್ತಿದ್ದಾರೆ.

    ಕಳೆದ ವರ್ಷ ಜನವರಿ 23ರಂದು ಕ್ರಿಕೆಟಿಗ ಕೆ.ಎಲ್ ರಾಹುಲ್ ಜೊತೆ ಅಥಿಯಾ ಹಲವು ವರ್ಷಗಳ ಪ್ರೀತಿಗೆ ವಿವಾಹದ ಬೆಸುಗೆ ಬೆಸೆದಿದ್ದರು.

    ಇದನ್ನು ಓದಿ:ಇನ್ಮುಂದೆ ಮಹಿಳೆಯರ ಬಟ್ಟೆ ಅಳತೆ ಪುರುಷ ಟೈಲರ್ ತೆಗೆಯೋ ಹಾಗಿಲ್ಲ..!

    Continue Reading

    DAKSHINA KANNADA

    ನೆಲ್ಯಾಡಿ : ಜಾಗದ ವಿಷಯಕ್ಕೆ ಜಗಳ; ಕತ್ತಿಯಿಂದ ವ್ಯಕ್ತಿಯ ಕಡಿದು ಗಲಾಟೆ ಅಂತ್ಯ

    Published

    on

    ನೆಲ್ಯಾಡಿ : ಜಾಗದ ವಿಷಯಕ್ಕೆ ಉಂಟಾದ ಗಲಾಟೆ ವಿಕೋಪಕ್ಕೆ ತಿರುಗಿ ಕೃಷಿಕರೋರ್ವನ ಕೊಲೆಯಲ್ಲಿ ಅಂತ್ಯ ಕಂಡ ಘಟನೆ ದ.ಕ.ಜಿಲ್ಲೆ ನೆಲ್ಯಾಡಿ ಸಮೀಪ ಗೋಳಿತೊಟ್ಟುವಿನ ಆಲಂತಾಯ ಗ್ರಾಮದ ಪೆರ್ಲ ಎಂಬಲ್ಲಿ ನಡೆದಿದೆ.

    ಪ್ರಗತಿಪರ ಕೃಷಿಕ ರಮೇಶ ಗೌಡ (51) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.

    ರಮೇಶ್ ನ ಹತ್ತಿರದದ ಸಂಬಂಧಿ ಹರೀಶ್ ಆರೋಪಿಯಾಗಿದ್ದು, ಇಂದು (ನ.8) ಮುಸ್ಸಂಜೆ ಸರಿಸುಮಾರು 7 ಗಂಟೆ ವೇಳೆ ಕೃತ್ಯ ಎಸಗಿದ್ದಾನೆ.

    ನೆಲ್ಯಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ತನಿಖೆ ನಡೆಸುತ್ತಿದ್ದಾರೆ.

    Continue Reading

    LATEST NEWS

    ಎತ್ತಿನಹೊಳೆ ಕಾಮಗಾರಿ ನಾಲೆಯ ಗುಂಡಿಗೆ ಬಿದ್ದು ಇಬ್ಬರು ಬಾಲಕರು ಸಾ*ವು

    Published

    on

    ಮಂಗಳೂರು/ತಿಪಟೂರು : ಎತ್ತಿನಹೊಳೆ ನಾಲೆಯ ಕಾಮಗಾರಿ ಬಳಿ ತೆಗೆದಿದ್ದ ಗುಂ*ಡಿಗೆ ಬಿ*ದ್ದು ಇಬ್ಬರು ಬಾಲಕರು ಮೃತಪಟ್ಟಿರುವ ಘಟನೆ ತಿಪಟೂರಿನಲ್ಲಿ ನಡೆದಿದೆ. ಹುಚ್ಚನಹಟ್ಟಿ ಗ್ರಾಮದ ಯದುವೀರ್ (8) ಹಾಗೂ ಮನೋಹರ್ (10) ಮೃ*ತ ಬಾಲಕರು.

    ಸಾಂದರ್ಭಿಕ ಚಿತ್ರ

    ಹುಚ್ಚನಹಟ್ಟಿ ಗ್ರಾಮದ ಬಳಿ ಎತ್ತಿನಹೊಳೆ ನೀರಾವರಿ ಯೋಜನೆ ಕಾಮಗಾರಿ ನಡೆಯುತ್ತಿದ್ದು, ಸ್ಥಳದಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ. ಸ್ಥಳಕ್ಕೆ ಹೋಗಿದ್ದ ಮಕ್ಕಳು ಆಕಸ್ಮಿಕವಾಗಿ ಬಿ*ದ್ದು ಸಾ*ವನ್ನಪ್ಪಿದ್ದಾರೆ ಎಂಬ ಹೇಳಲಾಗಿದೆ.

    ಇದನ್ನೂ ಓದಿ : BBK11: ಬಿಗ್​ಬಾಸ್‌ ಮನೆಯಲ್ಲಿ ಸಿಡಿದೆದ್ದ ಮಹಿಳಾ ಸ್ಪರ್ಧಿಗಳು.. ಗೋಲ್ಡ್​ ಸುರೇಶ್ ಗೆ ಈ ವಾರದ ಕಳಪೆ

    ಗುರುವಾರ(ನ.7) ಸಂಜೆ ಶಾಲೆ ಮುಗಿಸಿಕೊಂಡು ಮನೆಗೆ ಬಂದಿದ್ದ ಮಕ್ಕಳು, ನಂತರ ಹೊರ ಹೋಗಿದ್ದರು. ಸಂಜೆಯಾದರೂ ಮನೆಗೆ ಬಂದಿರಲಿಲ್ಲ. ಹೀಗಾಗಿ ಆತಂಕಗೊಂಡ ಪೋಷಕರು ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಶುಕ್ರವಾರ(ನ.8) ಬೆಳಿಗ್ಗೆ ಬಾಲಕರ ಶ*ವ ಪತ್ತೆಯಾಗಿದೆ.

    Continue Reading

    LATEST NEWS

    Trending